ಪ್ರಿಯ ಬಂಧುಗಳೇ ,

ನಾನು ನನ್ನ ಜೀವನದ ಬಹುಭಾಗವನ್ನು ನಿರಂತರ ಸ್ಮರಣೆಗೆ ಮೀಸಲಿಟ್ಟಿದ್ದೇನೆ. ನನ್ನ ಗುರುಗಳಾದ ಫತೇಗಡದ ಮಹಾತ್ಮಾ ಶ್ರೀ   ರಾಮಚಂದ್ರಜಿಯವರ ಪಾವನ ಪಾದ ಸನ್ನಿಧಿಯನ್ನು ಪಡೆದಾಗ ನನ್ನ ವಯಸ್ಸು ಇಪ್ಪತ್ತೆರಡು. ಅವರೇ ನನ್ನನ್ನು ತಮ್ಮ ವಾತ್ಸಲ್ಯ ಮತ್ತು ಅನುಗ್ರಹಗಳ ಮಡಿಲ ಲ್ಲಿ ಎತ್ತಿ ಬೆಳೆಸಿದವರು. ನನ್ನ ಜೀವನದ ಏಕೈಕ ಧೈಯ ಮತ್ತು ಪ್ರಮುಖ ಅನ್ವೇಷಣೆಯು, ಭಕ್ತಿಪೂರ್ವಕವಾಗಿ ಅವರನ್ನು ಆರಾಧಿಸುವುದೇ ಆಗಿದೆ. ಹಾಗೂ ಆದಿಯಿಂದ ಅಂತ್ಯದವರೆಗೆ, ಅಂದರೆ ಈಗಿರುವ ನನ್ನ ಸ್ಥಿತಿಯವರೆಗೂ ಅದು ಮುಂದುವರಿದಿದೆ. ಅವರನ್ನು ನನ್ನ ಆರಾಧ್ಯ ವಸ್ತುವಾಗಿ ನನ್ನ ಹೃದಯದಲ್ಲಿರಿಸಿಕೊಂಡೆ. ಅಲ್ಲದೆ, ಬೇರೊಬ್ಬರನ್ನು ಎಂದೂ ನನ್ನ ದೃಷ್ಟಿಯಲ್ಲಿರಿಸಿಕೊಳ್ಳಲಿಲ್ಲ ; ಇಂದಿಗೂ ಕೂಡ. ನನ್ನ ಈ ಭಾವನೆಯನ್ನು ಭಗವಂತನು ಸದಾ ಕಾಲಕ್ಕೂ ಇರುವಂತೆ ಮಾಡಲಿ. ನನ್ನ ಗುರುಗಳ ಹೊರತಾಗಿ ಬೇರೊಬ್ಬರನ್ನು ನಾನು ಸ್ವೀಕರಿಸಲಿಲ್ಲ. ಬೇರೊಬ್ಬರತ್ತ  ದೃಷ್ಟಿ ಹೊರಳಿಸಲಿಲ್ಲ. ಇದು ನಿಜವಾದ ಶಿಷ್ಯನೆನಿಸಿಕೊಂಡವನ ಆದ್ಯ ಕರ್ತವ್ಯವೆಂಬುದು ಸಾಮಾನ್ಯ ನಿಯಮ, ಮತ್ತು ಯಶಸ್ಸಿನ ಏಕೈಕ ಕೀಲಿಕೈ, ಹೃದಯದಲ್ಲಿಯ ಕಲ್ಮಷಗಳನ್ನು ದೂರಗೊಳಿಸುವ ಹಾಗೂ ಮಾರ್ಗ ದಲ್ಲಿ ನ ಅಡೆತಡೆಗಳನ್ನು ದಾಟಲು ನೆರವಾಗುವ ಸಾಧನವೆಂದರೆ ಇದೊಂದೇ. ಗ್ರಂಥಿಗಳು ತೆರೆದುಕೊಳ್ಳುವುದೂ ಇದರ ಪರಿಣಾಮದಿಂದಲೇ. ಎಲ್ಲ ಸಾಧನೆಗಳ ನಿಜವಾದ ಸಾರವೂ ವಾಸ್ತವಿಕವಾಗಿ ಇದೇ ಆಗಿದೆ. ಒಮ್ಮೆ ಇದನ್ನು ಅನುಭವಿಸಿದವನು ಜೀವನದಲ್ಲಿ ಎಂದೆಂದಿಗೂ ಇದರಿಂದ ಬೇರ್ಪಡಲಾರ. ಬೇರೊಂದರೆಡೆಗೆ ಒಲಿಯಲಾರ. ನಮ್ಮ ಪೂಜ್ಯ ಗುರುಗಳೂ ಹಾಗೂ ಎಲ್ಲ ಪ್ರಸಿದ್ದ ಋಷಿಗಳೂ ಅನುಸರಿಸಿದ ಹಾಗೂ ಎಂದಿಗೂ ಚ್ಯುತಿಯಿಲ್ಲದ ಪದ್ಧತಿಯು ಇದೇ ಆಗಿದೆ.

ನನ್ನ ಮಟ್ಟಿಗೆ ಹೇಳುವದಾದರೆ , ನನ್ನ ದೈನಂದಿನ ಕೆಲಸ-ಕಾರ್ಯಗಳ ನಡುವೆಯೇ ಈ ಪ್ರಕ್ರಿಯೆಯು ನನ್ನ ಹೃದಯದಾಳದಲ್ಲಿ ಮುಂದುವರಿದು, ನನ್ನ ಶಾಶ್ವತ ರೂಢಿಯಾಗಿ ಮಾರ್ಪಟ್ಟಿತು. ಸ್ವಲ್ಪದರಲ್ಲಿ ಹೇಳುವುದಾದರೆ, ಅದು ನನ್ನ ಜೀವನದ ತಳಹದಿಯೇ ಆಯಿತು. ಎಲ್ಲ ಹಂತಗಳನ್ನು ದಾಟುತ್ತ, ನನ್ನ ಸದ್ಯದ ಆಧ್ಯಾತ್ಮಿಕ ಉನ್ನತಿಯ ಸ್ತರದವರೆಗೆ ತಲುಪಲು ಸಹಾಯಕಾರಿಯಾಯಿತು. ಆದುದರಿಂದಲೇ, ಗುರುಗಳ ಸಂಪೂರ್ಣ ಸಹಾಯ ಹಾಗೂ ಆಶ್ರಯಗಳ ಭರವಸೆಯನ್ನೀಯುವ ಮತ್ತು ಎಂದಿಗೂ ಚ್ಯುತಿಯಿಲ್ಲದ ಪರಿಣಾಮಗಳನ್ನು ಖಚಿತಪಡಿಸುವ ಏಕೈಕ ಮಾರ್ಗವು ಇದೇ ಆಗಿದೆ ಎಂದು ನಾನು ನನ್ನ ಜೀವನದ ಅನುಭವದ ಮೇಲೆ ದೃಢವಾಗಿ ಘೋಷಿಸುತ್ತೇನೆ. ನೀವೆಲ್ಲರೂ ಅದರ ಆಳವಾದ ಪ್ರಭಾವದ ಪ್ರತ್ಯಕ್ಷಾನುಭವವನ್ನು ಪಡೆಯಲೆಂದು ಆಶಿಸುತ್ತೇನೆ. ಈ ಪದ್ಧತಿಯನ್ನು ಅನುಸರಿಸಬಯಸುವವರು ಅದರ ವಿವರಗಳನ್ನು ವೈಯಕ್ತಿಕವಾಗಿ ಕೇಳಿ ತಿಳಿಯಬಹುದು.

ಅದರಲ್ಲಿ ಅನೇಕ ಹಂತಗಳಿವೆ . ಒಂದು ಹಂತವನ್ನು ದಾಟಿದ ಮೇಲೆ ಅಭ್ಯಾಸಿಯು ಮುಂದಿನದನ್ನು ಕೇಳಿ ತಿಳಿಯಬಹುದು. ಈ ಪಯಣದಲ್ಲಿ ತಾನು ದಾಟಿಹೋಗುತ್ತಿರುವ ಸ್ಥಿತಿಗಳನ್ನು ವರದಿ ಮಾಡುತ್ತ ಹೋಗಬಹುದು. ತಮ್ಮ ಜೀವಿತಕಾಲದಲ್ಲಿ ನನ್ನ ಗುರುವರ್ಯರು ಈ ವಿಧಾನವನ್ನು ಉಪದೇಶಿಸಿದ್ದರು. ಈ ಸಂದರ್ಭದಲ್ಲಿ ಗಮನದಲ್ಲಿಟ್ಟು ಕೊಳ್ಳಬೇಕಾದ ಅತ್ಯಂತ ಮಹತ್ವದ ಅಂಶವೊಂದೆಂದರೆ, ಅಭ್ಯಾಸಿಯು ಯಾರಿಂದ ಈ ವಿಧಾನವನ್ನು ಉಪಕ್ರಮಿಸಲು ತೆಗೆದುಕೊಳ್ಳಬೇಕು – ಎಂಬುದು. ಇದಕ್ಕೆ ನನ್ನ ಗುರುಗಳ ನಿದರ್ಶನವು ಈಗಾಗಲೇ ನಮ್ಮೆದುರಿಗಿದೆ. ಮಿತತ್ವ ಹಾಗೂ ಸಮತೋಲನದ ಪರಾಕಾಷ್ಠೆಯಲ್ಲಿ ಲಯ ಹೊಂದಿರುವವನು ಮಾತ್ರ, ಈ ವಿಧಾನದ ಧೈಯವಸ್ತುವಾಗಿರಲು ಅರ್ಹನು. ಈ ಆಧ್ಯಾತ್ಮಿಕ ಶಾಸ್ತ್ರವನ್ನು ಆಧರಿಸಿದ ಈ ಅದ್ಭುತ ಪದ್ಧತಿಯು ಅಭ್ಯಾಸಿಗೆ ಅತ್ಯಂತ ಮಹತ್ವವುಳ್ಳದ್ದಾಗಿದೆ. ನನ್ನ ವಿಷಯದಲ್ಲಿ ಈ ಪ್ರಕ್ರಿಯೆಯು ತಾನಾಗಿಯೇ ಆರಂಭಗೊಂಡಿತು. ವಾಸ್ತವದಲ್ಲಿ, ಈ ಪದ್ದತಿಯು ಗುರುವಿನ ಸ್ವರೂಪದ ಮೇಲೆ ಧ್ಯಾನ ಮಾಡುವುದನ್ನು ಒಳಗೊಂಡಿದೆ. ಈ ಉದ್ದೇಶಕ್ಕೆ ಆರಿಸಿಕೊಂಡ ಸ್ವರೂಪವು ಉಚ್ಚವಾದ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯ ಸಂಪನ್ನನಾದ, ಶ್ರೇಷ್ಠ ಯೋಗ್ಯತಾವಂತನದಾಗಿರಬೇಕಾದುದು ಅತ್ಯಾವಶ್ಯಕ. ಹಾಗಿದ್ದಾಗ, ಈ ಕ್ರಮವು ಅಭ್ಯಾಸಿಯಲ್ಲಿ, ತತ್ಸಮವಾದ ಗುಣಗಳನ್ನು ಬೆಳೆಸಿಕೊಳ್ಳಲು ಸಹಾಯವಾಗುವುದು. ಈ ಪ್ರಕ್ರಿಯೆಯಲ್ಲಿ ಅಡಗಿದ ವೈಜ್ಞಾನಿಕ ತತ್ವವು ಹೀಗಿದೆ : ಅಭ್ಯಾಸಿಯು ಧ್ಯಾನ ಮಾಡುತ್ತಿರುವಾಗ, ಅವನ ಆಲೋಚನೆಗಳು ಹೃದಯದಲ್ಲಿ ರಿಕ್ತತೆ (ನಿರ್ವಾತ)ಯನ್ನುಂಟುಮಾಡುತ್ತವೆ. ಆಗ ನಿಸರ್ಗದ ನಿಯಮದಂತೆ, ಸಮತೋ ಲ ನವನ್ನು ಕಾಪಾಡಲು ಧೈಯವಸ್ತುವಿನ ಶ ಕ್ತಿಯು ಅವನ ಹೃದ ಯ ದಲ್ಲಿ ತುಂಬತೊಡಗುತ್ತದೆ, ಮತ್ತು ಈ ಸ್ಥಿತಿಯು ಮುಂದುವರಿಯುತ್ತಿರುವಷ್ಟು ಹೊತ್ತೂ, ಶಕ್ತಿಯು ತಂತಾನೇ ಹರಿಯುತ್ತಲೇ ಇರುತ್ತದೆ.

ಈಗ ಒಬ್ಬ ಮನುಷ್ಯನು ತನ್ನ ಉನ್ನತಿ -ಅವನತಿಗಳನ್ನು ಹೇಗೆ ತಾನೇ ಮಾಡಿಕೊಳ್ಳುತ್ತಾನೆಂಬುದನ್ನು ಕ್ಷಣಕಾಲ ಗಮನಿಸೋಣ. ಜಗತ್ತು ಸೂಕ್ಷ್ಮಾತಿಸೂಕ್ಷ್ಮ ಪರಮಾಣುಗಳಿಂದ ರಚಿತವಾಗಿದೆ. ಅವು ದಟ್ಟವಾಗಿ, ಹಾಗೂ ಕಪ್ಪಾಗಿರುವುದಾದರೂ ಅವುಗಳ ನಡುವೆ ಮಂದ ಪ್ರಕಾಶವೂ ಇದೆ. ಪ್ರಕೃತಿ ಪುರುಷರ ಇರವು ಅಕ್ಕಪಕ್ಕದಲ್ಲಿಯೇ ಇದೆಯೆಂಬುದನ್ನು ಇದು ದೃಢೀಕರಿಸುತ್ತದೆ. ಪ್ರಜ್ಞಾವಂತರೂ, ವಿವೇಕಿಗಳೂ ದೈವಿಕತೆಯ ಕಡೆಗೆ ಒಲವು ಉಳ್ಳವರೂ, ಪ್ರಕಾಶಮಯ ಭಾಗವನ್ನು ದೃಷ್ಟಿಯಲ್ಲಿಟ್ಟುಕೊಂಡು, ಅದರಿಂದ ಲಾಭ ಪಡೆಯುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಭೌತಿಕ ವಸ್ತುಗಳ ಮೋಡಿಯಲ್ಲಿ ಸಿಕ್ಕಿಬಿದ್ದವರು ಅಂಧಕಾರಮಯ ಪರಮಾಣುಗಳೊಂದಿಗೆ ಗಂಟು ಹಾಕಿಕೊಂಡು, ಅದರ ಸ್ಥೂಲತರವಾದ ಪರಿಣಾಮಗಳ ಸಂಪರ್ಕದಲ್ಲಿಯೇ ಮುಂದುವರಿಯುತ್ತಾರೆ. ಪುನಃ ಪುನಃ ಅವರು ಮಾಡುವ ವಿಚಾರದ ಫಲವಾಗಿ, ಈ ಸ್ಥೂಲ ಪರಿಣಾಮಗಳು ಘನೀಭೂತವಾಗುತ್ತ ಹೋಗುತ್ತವೆ. ವಿಚಾರ ( ಆ ಲೋಚನೆಗಳು ಸಂಸ್ಕಾರಗಳನ್ನು ಉಂಟು ಮಾಡುತ್ತವೆ. ಈ ಸಂಸ್ಕಾರಗಳು ಬಲ ಪಡೆಯುತ್ತ, ಆವರಣಗಳನ್ನು ರಚಿಸುತ್ತ ಹೋಗುತ್ತವೆ. ಮಾಯೆಯ ಪ್ರಭಾವವು ನೆಲೆಯೂರಲು ಅವು ಫಲವತ್ತಾದ ಕ್ಷೇತ್ರವನ್ನೊದಗಿಸುತ್ತವೆ. ಶರೀರದ ಕಣಗಳ ಮೇಲೆ ಉಂಟಾದ ಈ ಪರಿಣಾಮವು ತನ್ಮೂಲಕ ಮೆದುಳಿ ನ ಪೊರೆಯ ಮೇಲೆ ಕೇಂದ್ರೀಕೃತಗೊಂಡು ಮೆದುಳಿನ ಕೇಂದ್ರದ ಮೇಲೂ ಪ್ರತಿಬಿಂಬಿಸುತ್ತದೆ. ಇದರಿಂದುಂಟಾದ ಸಂಸ್ಕಾರಗಳು ಆಳವಾಗುತ್ತ ಹೋಗಿ ಅವನನ್ನು ಸುಲಭ ವಶನಾಗುವಂತೆ ಮಾಡಿ, ಅವನ ದುಷ್ಪವೃತ್ತಿಗಳನ್ನು ಪೋಷಿಸುವ ಪರಿಸರ ಮತ್ತು ಸಹವಾಸಗಳಿಗೆ ಅವನ ಮನಸ್ಸು ಗಟ್ಟಿಯಾಗಿ ಅಂಟಿಕೊಳ್ಳುವಂತೆ ಮಾಡುತ್ತವೆ . ಹೀಗೆ, ಅವನು ಕೆಡುಕಿನಿಂದ, ಇನ್ನೂ ಕೆಡುಕಿಗೆ ಜಾರುತ್ತ ಹೋಗುತ್ತಾನೆ. ಈ ಹಂ ತ ದಲ್ಲಿ ಅವನ ಅಂಧಕಾರಮಯ ಆಂತರಿಕ ಸ್ಥಿತಿಯ ಪರಿವರ್ತನೆಗೆ ನೆರವಾಗಿ, ಅವನನ್ನು ರಕ್ಷಿಸಬಲ್ಲ ಶಕ್ತಿಯೆಂದರೆ, ಸದ್ಗುರುವಿನದೊಂದೇ ಸರಿ.

ಅಂಥ ಅದ್ಭುತ ಶಕ್ತಿಯನ್ನು ಹೊಂದಿದವನು ಮಾತ್ರವೇ ನಿಜವಾದ ‘ಗುರು’ವೆನಿಸಬಲ್ಲ. ಯಾರು ಸಾಧಕನಲ್ಲಿ ಈ ಮೊದಲು ಅಂಧಕಾರದತ್ತ ಮುಖಮಾಡಿದ್ದ ಪ್ರವೃತ್ತಿಗಳು ಮತ್ತೆ ಪ್ರಕಾಶವನ್ನು ಹೀರಿಕೊಳ್ಳುವಂತಾಗುವ ವರಗೆ ತಿರುಗಿಸಿ, ಅವನಲ್ಲಿ ಪ್ರಕಾಶಮಯ ಸ್ಥಿತಿಯನ್ನು ದೃಷ್ಟಿ ಮಾತ್ರದಿಂದ ಉಂಟುಮಾಡಬಲ್ಲನೋ ಅ ವನೇ ನಿಜವಾದ ಗುರು. ಹೀಗೆ, ಬೆಳಕಿನ ಕಡೆಗೆ ಸಾಧಕನ ನಡೆಯು ಸುಗಮವಾಗುತ್ತದೆ. ಅಲ್ಲದೆ, ಅವನ ಆಂತರಿಕ ಶಕ್ತಿಯೂ ಆ ದಿಶೆಯಲ್ಲಿ ಕ್ರಿಯಾಶೀಲವಾಗುತ್ತದೆ. ಈ ರೀತಿ ಅವನ ಸಮಸ್ಯೆಯು ನಿವಾರಣೆಯಾಗಿ ತನಗೆ ಲಾಭಕರವಾದುದನ್ನು ಮಾತ್ರ ಹೀರಿಕೊಳ್ಳುತ್ತ, ಎಲ್ಲ ಪ್ರತಿಕೂಲ ಪರಿಣಾಮಗಳಿಂದ ರಕ್ಷಿಸಲ್ಪಡುತ್ತಾನೆ. ಯಾವುದನ್ನು ಅನುಸರಿಸಿದರೆ, ಎಲ್ಲ ಹಂತಗಳನ್ನೂ ಇನ್ನುಳಿಯದಂತೆ ಕ್ರಮಿಸಲು ಸಾಧ್ಯವಾಗುವುದೋ ಅಂಥ ಅದ್ಭುತ ಸಂಗತಿಯೊಂದಿದೆ. ಅದೆಂದರೆ, ಗುರುವಿನ ಲಯಾವಸ್ಥೆ’ಯನ್ನು ಅನುಕರಿಸಲು ಪ್ರಯತ್ನಿಸುವುದು. ನಾನು ಅದನ್ನೇ ಮಾಡಿದೆ. ಅದು ನನ್ನ ಸದ್ಯದ ಸ್ಥಿತಿ ಯ ನ್ನು ಮುಟ್ಟಲು ಸಹಾಯ ಮಾಡಿತು. ದೇವರು ನಿಮಗೆಲ್ಲರಿಗೆ ಅದಕ್ಕೆ ಬೇಕಾದ ಸಾಮರ್ಥ್ಯವನ್ನು ಅನುಗ್ರಹಿಸಲಿ.

ನಮ್ಮ ಸತ್ಸಂಗದಲ್ಲಿ ನಾನು ಸೇರಿಸಲು ಬಯಸುವ ಇನ್ನೊಂದು ಸಂಗತಿಯಿದೆ . ಅದೆಂದರೆ, ಪ್ರತಿದಿನ ರಾತ್ರಿ ಸರಿಯಾಗಿ ಒಂಬತ್ತು ಗಂಟೆಗೆ ಅಭ್ಯಾಸಿಯು- ಅ ವನೆಲ್ಲಿಯೇ ಇರಲಿ, ತನ್ನ ಕಾರ್ಯವನ್ನು ನಿಲ್ಲಿಸಿ- ಹದಿನೈದು ನಿಮಿಷಗಳ ಕಾಲ, ಎಲ್ಲ ಸೋದರ ಸೋದರರಲ್ಲಿಯೂ ಪ್ರೇಮ-ಭಕ್ತಿಗಳು ತುಂಬಲ್ಪಡುತ್ತಿವೆಯೆಂದೂ ಅವರಲ್ಲಿ ನಿಜವಾದ ಶ್ರದ್ದೆಯು ಬಲವತ್ತರವಾಗಿ ವರ್ಧಿಸುತ್ತಿದೆಯೆಂದೂ ಭಾವಿಸುತ್ತ ಧ್ಯಾನ ಮಾಡಬೇಕು. ಇದರಿಂದ ಅವರಿಗೆ ಅತ್ಯಮೂಲ್ಯ ಲಾಭವಾಗುವುದು. ಅವರ ಪ್ರತ್ಯಕ್ಷಾನುಭವವೇ ಇದನ್ನು ತೋರಿಸಿಕೊಡುವುದು.

ಗುರು ಮಹಾರಾಜರ ಜೀವನೋದ್ದೇಶದ ಸಾಫಲ್ಯದ ಭರವಸೆಯನ್ನು ನೀಡುವ ಈ ದಿನವನ್ನು ತಂದ ಸಮಯವು ಸಂತೋಷಪೂರ್ಣವಾದುದು . ಪ್ರತಿಯೋರ್ವನೂ ಅದಕ್ಕೋಸ್ಕರ ಕಠಿಣ ಪರಿಶ್ರಮ ಪಡಲಿ . ಆದರೆ ಭಗವಂತನು ಯಾರನ್ನು ನಿಯುಕ್ತಗೊಳಿಸಿದ್ದಾನೋ ಅ ವನು ಮಾತ್ರ ಯಶಸ್ವಿಯಾಗುತ್ತಾನೆ . ಇಷ್ಟಕ್ಕೂ , ಗುರು ಮಹಾರಾಜರ ಜೀವನೋದ್ದೇಶವೇನಿರಬಹುದು ? ಅದರ ಹಿಂ ದಿನ ಹೇತು ಯಾವುದಿದ್ದೀತು ? ಇದರ ಒಂದು ಸರಳ ಉತ್ತರ ಹೀಗಿರಬಹುದು ಶ್ರೇಷ್ಠವಾದ ಗುರುವೊಬ್ಬನು ಊರ್ಧ್ವಲೋಕಕ್ಕೆ ತೆರಳುವಾಗ ತನ್ನ ಸ ಹ ಬಾಂಧವರ ಪುರೋಭಿವೃದ್ಧಿಗೋಸ್ಕರ ತನ್ನಿಂದ ದೀಕ್ಷೆ ಹೊಂದಿದ ಶಿಷ್ಯರಲ್ಲಿ ಓರ್ವನನ್ನು ತನ್ನ ಪ್ರತಿನಿಧಿಯಾಗಿ ಸಾಮಾನ್ಯವಾಗಿ ನಿಯಮಿಸುತ್ತಾನೆ . ಆ ಕಾರ್ಯಕ್ಕೆ ಬೇಕಾದ ಬೆಳಕನ್ನು ಅವನು ನೇರವಾಗಿ ಗುರುವಿನಿಂದಲೇ ಪಡೆಯುತ್ತಿರುತ್ತಾನೆ . ವಾಸ್ತವದಲ್ಲಿ , ಅವನ ಕಾರ್ಯವು ಅತ್ಯಂತ ಕಠಿಣವಾದದ್ದು . ಗುರುವಿನ ಅನುಮತಿಯಿಲ್ಲದೆ ಅವನು ಒಂದಿನಿ ತೂ ಕದಲಲಾರ , ಒಂದು ತೊಟ್ಟು ನೀರನ್ನೂ ಸೇವಿಸಲಾರ . ಒಂದು ರವಷ್ಟು ಪ್ರಮಾದವಾದರೂ , ಗುರುವಿನ ತೀವ್ರ ಅಸಂ ತೋ ಷಕ್ಕೆ ಈಡಾಗುತ್ತಾನೆ .

ಗುರುಮಹಾರಾಜರು ಈ ಪ್ರಕಟಣೆಯನ್ನು ತಮ್ಮ ಜೀ ವಿತ ಕಾಲದ ಲ್ಲಿಯೇ ಏಕೆ ಮಾಡಲಿಲ್ಲವೆಂಬ ವಿವಾದಾತ್ಮಕ ಪ್ರಶ್ನೆಯೇಳುತ್ತದೆ . ಅದರ ಕಾರಣವನ್ನು ಈಗಾಗಲೇ ಟಿಪ್ಪಣಿಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಯಾರು ಬೇಕಾದರೂ ಅದನ್ನು ಪರಿಶೀಲಿಸಬಯಸಿದರೆ ಹಾಗೆ ಮಾಡಬಹುದು. ಇವೂ ಮತ್ತು ಉಳಿದ ವಾಸ್ತವಾಂಶಗಳೂ ಜನರನ್ನು ಸಮಾಧಾನಪಡಿಸಲು ಸಾಕು. ಸಂಭವಿಸುತ್ತಿರುವ ಘಟನೆಗಳೂ ಕೂಡ ಅವುಗಳ ಮೇಲೆ ತಾವೇ ಬೆಳಕು ಚೆಲ್ಲುತ್ತಿವೆ. ಅದಲ್ಲದೆ, ಗುರುವೊಬ್ಬನು ತನ್ನ ಇಹಜೀವಿತದ ಕೊನೆಗಾಲದಲ್ಲಿ ತನ್ನ ಪ್ರತಿನಿಧಿಯನ್ನು ಹೆಸರಿಸಲೇಬೇಕೆಂದೇನೂ ಇಲ್ಲ. ಅಂಥ ಅನೇಕ ಉದಾಹರಣೆಗಳು ಇವೆ. ಇದಕ್ಕಿಂತ ಹೆಚ್ಚಿನ ರುಜುವಾತಿನ ಆವಶ್ಯಕತೆ ಇಲ್ಲದಿರುವುದರಿಂದ, ಮೇಲೆ ಹೇಳಿರುವುದು ಪರ್ಯಾಪ್ತವೆಂದು ನಾನು ಭಾವಿಸುತ್ತೇನೆ. ಯಾರಾದರೂ ಇಚ್ಚಿಸಿದಲ್ಲಿ, ಸಂಗತಿಗಳನ್ನು ಸ್ವತಃ ಪ್ರಯತ್ನಿಸಿ, ಪರೀಕ್ಷಿಸಿ ನಿರ್ಣಯಿಸಬಹುದು. ಇದಲ್ಲದೆ, ನನ್ನ ದೈ ನಂದಿ ನ ದಿನಚರಿಯೂ ಮತ್ತು ಅದರ ಮೇಲೆ ಗುರುಮಹಾರಾಜರು ಮಾಡಿದ ಸಾಂದರ್ಭಿಕ ಟಿಪ್ಪಣಿಗಳೂ ಇದಕ್ಕೆ ಸಾಕಷ್ಟು ಪುರಾವೆಯನ್ನು ಒದಗಿಸಬಹುದು. ಗುರುಮಹಾರಾಜರು ತಮ್ಮ ಸಹವರ್ತಿಗಳೊಂದಿಗೆ ಸಂಭಾಷಿಸುವಾಗ, ಪದೇ ಪದೇ ನನ್ನ ದಿನಚರಿಯಿಂದ ಉದಾಹರಿಸುತ್ತಿದ್ದರು, ಮತ್ತು ಅವು ಈಗಾಗಲೇ ಶ್ರೀ ರಾಮ ಸಂದೇಶ” ಎಂಬ ಗ್ರಂಥದಲ್ಲಿ ಪ್ರಕಟವಾಗಿವೆ. ಈ ಎಲ್ಲ ಅಂಶಗಳೂ, ಅಲ್ಲದೆ ಗುರುಮಹಾರಾಜರು ಅ ನಂತದಲ್ಲಿ ಐಕ್ಯರಾದ ದಿನದ, ಅಂದರೆ ೧೫-೮ – ೧೯೩೧ ರ ನನ್ನ ದಿನಚರಿಯ ಟಿಪ್ಪಣಿಗಳೂ ನನ್ನ ಈಗಿನ ಸ್ಥಿತಿಯ ನಿಚ್ಚಳ ಸೂಚನೆಯನ್ನು ನೀಡುತ್ತವೆ. ಸಾಧ್ಯವಿದ್ದ ಯಾವುದೇ ಸಾಧನದ ಮೂಲಕ ಇದನ್ನು  ಖಚಿತಪಡಿಸಿಕೊಳ್ಳಲು ಬಯಸುವ ಯಾರಿಗಾದರೂ ಸ್ವಾಗತವಿದೆ.

ಆದರೆ ದುರ್ದೈವವಶಾತ್ , ಸ್ವಾರ್ಥದ ಉದ್ದೇಶವುಳ್ಳ ಕೆಲವು ಆಸಕ್ತರು ವಾಸ್ತವಿಕ ಸಂಗತಿಗಳಿಗೆ ಅಪಾರ್ಥವನ್ನೀಯುತ್ತ ಅದಕ್ಕೆ ಮಸಿಬಳಿಯಲು ಯತ್ನಿಸುತ್ತಿದ್ದಾರೆ. ಆದ್ದರಿಂದ ಅದಕ್ಕೆ ಸಂಬಂಧಿಸಿದ ವಿವರಗಳನ್ನು ನಿಮ್ಮ ಮುಂದಿಡುತ್ತೇನೆ. ನನ್ನ ವರ್ತಮಾನ ಸ್ಥಿತಿಯು ೧೯೪೪ ರ ಏಪ್ರಿಲ್ ಕೊನೆ ಯ ವಾರದಲ್ಲಿ ಪ್ರಕಟಗೊಳಿಸಲ್ಪಟ್ಟಿತು. ಮತ್ತು ಗುರುಗಳೊಡನೆ ನೇರ ಸಂಪರ್ಕವು ಸ್ಥಾಪಿತವಾಯಿತು. ಆ ಪ್ರಕಾರ ೧೯೪೪ ಮೇ ೪ ರಂದು, ನಾನು ಅವರ ನೇರ ಆದೇಶಗಳಿಗನುಸಾರವಾಗಿ ಕಾರ್ಯ ಮಾಡಲು ಪ್ರಾರಂಭಿಸಿದೆ. ಇದರ ವಿವರವಾದ ದಾಖಲೆಯು ಲಭ್ಯವಿದೆ. ಆ ದಿನದಿಂದ ನಾನು ಅವರ ಎಲ್ಲಾ ಸಹಬಂಧುಗಳಿಗೆ, ಅವರಲ್ಲಿನ ತಪ್ಪಾಗಿ ನಿರ್ದೇಶಿತವಾದ ಭಾವೋದ್ವೇಗಗಳ ಬೆಳವಣಿಗೆಯನ್ನು ತಡೆಯಲು ಪ್ರಯತ್ನಿಸುತ್ತ ( ಗುರುಗಳ ಈ ಭಾವೋದ್ವೇಗಗಳನ್ನು ಸುಟ್ಟಗುಳ್ಳೆಯ ಚುಚ್ಚುವ ನೋವೆಂದು ಬಣ್ಣಿಸಿದ್ದಾರೆ .) ಪ್ರಾಣಾಹುತಿಯನ್ನು ನೀಡುತ್ತ ಬಂದೆ . ಆ ತಪ್ಪಾಗಿ ನಿರ್ದೇ ಶಿ ತವಾದ ಭಾವೋದ್ವೇಗಗಳನ್ನು ಅವರು “ ಭಾವ ಸಮಾಧಿಯ ಸ್ಥಿತಿಯೆಂದು ಭ್ರಮಿಸಿಕೊಂಡಿದ್ದರು . ಕೆಲಕಾಲ ನಾನದನ್ನು ಮುಂದುವರಿಸಿದೆ . ಇದರಿಂದಾದ ಸತ್ಪರಿಣಾಮಗಳ ಶ್ರೇಯಸ್ಸನ್ನು ಬೇರೆಯವರ ಮೇಲೆ ಹೊರಿಸಲಾಯಿತು , ಆದ್ದರಿಂದ ಕೆಲಕಾಲಾನಂತರ ನಾನಿದನ್ನು ನಿಲ್ಲಿಸುವಂತೆ ಗುರುಗಳಿಂದ ನನಗೆ ಅಪ್ಪಣೆಯಾಯಿತು .

ಪ್ರಿಯ ಸೋದರರೇ , ಇದರಲ್ಲಿ ನನ್ನ ವೈಯಕ್ತಿಕ ಉದ್ದೇಶವೇನೂ ಇಲ್ಲ, ಅಥವಾ, ಯಾವುದೇ ಐಶ್ವರ್ಯ, ಕೀರ್ತಿಗಳ ಆಕಾಂಕ್ಷೆಯೂ ನನಗಿಲ್ಲ. ಆ ಪರಮಗುರುಗಳೊಂದಿಗೆ ಯಾರ ಸಂಬಂಧವು ಸ್ಥಾಪಿತವಾಗಿದೆಯೋ ಅವರೆಲ್ಲರೂ ಪ್ರಯೋಜನ ಹೊಂದಬೇಕು ಮತ್ತು ಗುರುಗಳ ಕಾರ್ಯೋದ್ದೇಶವು ಈಡೇರಬೇಕು ಎಂಬುದು ಮಾತ್ರ ನನ್ನ ಕಳಕಳಿ. ಇದು ನಮಗೆಲ್ಲರಿಗೂ ತೃಪ್ತಿಯನ್ನು ತರುವಂತಹುದು.

ಇನ್ನೊಂದು ವಿಷಯ ನಿಮಗೆ ತಿಳಿದರೆ ಆಶ್ಚರ್ಯವುಂಟಾಗಬಹುದು : ದೈವೀ ನಿರ್ದೇಶನಕ್ಕನುಸಾರವಾಗಿ, ಇದುವರೆಗೆ ಅಸ್ತಿತ್ವದಲ್ಲಿದ್ದ ಸಂಬಂಧದ ಕೊಂಡಿ ಯ ನ್ನು ಕತ್ತರಿಸಿ ಹಾಕಲಾದ್ದರಿಂದ ಅದು ಇನ್ನಿಲ್ಲವಾಗಿದೆ. ಅದರ ಜಾಗದಲ್ಲಿ ಈಗ ಮತ್ತೊಂದು ಸ್ಥಾಪಿತವಾಗಿದೆ. ಪ್ರತಿಯೊಬ್ಬನೂ ಆ ದಾರಿಗೆ ಬರಲೇಬೇಕಾಗಿದೆ.

ಆದುದರಿಂದ ನೀವೆಲ್ಲರೂ ‘ಶುಭಸ್ಯ ಶೀಘ್ರಂ’ ಎಂಬಂತೆ ಈ ಹೊಸ ಸಂಬಂಧದ ಕಡೆಗೆ ತಿರುಗಿ, ಗುರುಗಳೊಂದಿಗಿನ ನಿಮ್ಮ ಸಂಬಂಧದ ಕೊಂಡಿಯನ್ನು ತಿದ್ದಿ ಸರಿಪಡಿಸಲು ನೀವೆಲ್ಲ ನನಗೊಂದು ಅವಕಾಶವೀಯಬೇಕಾದ ಅಗತ್ಯವಿದೆ. ಯಾರೇ ಆಗಲಿ, ಅದಿ ಲ್ಲದೆ ಹೋದರೆ, ಗುರುಮಹಾರಾಜರ ಅಪಾರ ಕೃಪೆಯಿಂದ ವಂಚಿತರಾಗಿಯೇ ಉಳಿಯಬೇಕಾದೀತು .