ಸಮರ್ಥ ಶ್ರೀ ರಾಮಚಂದ್ರಜಿ ಮಹಾರಾಜ, ಫತೆಹ್ ಗಡ , ಇವರ ಸ್ಮರಣಾರ್ಥ ಶ್ರದ್ಧಾಂಜಲಿ |
ಆಧ್ಯಾತ್ಮ ಲೋಕವನು ಬೆಳಗಿಸಿದ ಬಾನು ! ಪರಮಾತ್ಮನರಿವನ್ನು ಪಡೆದುಕೊಂಡವನು ಜಿಜ್ಞಾಸುಗಳಿಗೆ ನೀ ಮಾರ್ಗದರ್ಶನ ಗೈದೆ ಪಾರಮಾರ್ಥಕೆ ದೇಹ ಪ್ರಾಣ ನೀನು. ನಿನ್ನ ಜೀವಿತದ ಪ್ರತಿಯೊಂದು ರೀತಿಯಲಿ ಪರಮಾರ್ಥ ವೈಭವ ಕಾಣುತಿತ್ತು; ಪ್ರತಿ ಹಾವಭಾವದಲಿ ವ್ಯಕ್ತವಾಗುತಲಿತ್ತು ಲೋಕವನು ಬೆಳಗಿಸುವ ದಿವ್ಯ ತೇಜಸ್ಸು. ಪರಮಾತ್ಮನಲಿ ನೀನು ಐಕ್ಯನಾದರು, ಇನ್ನೂ ಗದ್ದಿಗೆಯ ಮೇಲಿಹುದು ಎಂಥ ಬೆಳಕು ! ಪ್ರತಿಯೊಂದು ಕಣದಲ್ಲು ಎದ್ದು ಕಾಣುತಲಿಹುದು ಪರಮಾರ್ಥ ಜೀವನದ ಸೊಂಪು-ಥಳಕು ! ಸುತ್ತಲೂ ಕವಿದಿದ್ದ ಅಂಧಕಾರವ ನೋಡಿ ಆಧ್ಯಾತ್ಮ ಕ್ಷೇತ್ರದಲಿ ಕ್ರಾಂತಿಗೊಳಿಸಿ; ಸಹಜಮಾರ್ಗವ ರಚಿಸಿ , ಹೊಸ ತಳಹದಿಯಲೊಂದು ಪರಮಾರ್ಥ ಸೌಧವನು ನಿರ್ಮಿಸಿರುವಿ. ನಿನ್ನೊಂದು ಭ್ರೂ ಚಲನದೊಳಗೇನು ಭವ್ಯತೆಯೊ ! ಹೇಳಬಲ್ಲವರಾರು ಗುಟ್ಟನರಿದು ? ಅದರ ತೇಜದಿ ಬೆಳಗಿ ತೊಳಗಿತ್ತು ಸುತ್ತಲಿನ ಪರಮಾರ್ಥದಾಕಾಶ , ತಮವು ಹರಿದು. ನೀನು ಊದಿದ ಪ್ರಾಣಬಲದಿ ಪ್ರವಹಿಸುತಿಹುದು ಇಂದಿಗೂ ಅದರನುಗ್ರಹದ ಧಾರೆ; ಹಸನಾಗಿ ಎಲ್ಲೆಡೆಗು ಅರಳಿನಿಂತಿದೆ ಈಗ ಪರಮಾರ್ಥ-ಹೂದೋಟ ಮುದವ ಬೀರೆ. ನಿನ್ನ ಆ ಒಂದೊಂದು ಮಾತಿನಲ್ಲಿಯು ಪ್ರೇಮ- ಪೀಯುಷ ತುಂಬಿ ಹರಿಯುತಲಿತ್ತು; ನಿನ್ನ ಆ ಒಂದೊಂದು ನೋಟವೂ ಪರಮಾರ್ಥ- ದೊಂದೊಂದು ಕಥೆಯನ್ನು ಸಾರುತಿತ್ತು ಸಹನೆ-ಅವಿಚಲನಿಷ್ಠೆಗಳ ದಿವ್ಯ ಸಂಸಿದ್ದಿ ದರ್ಶನೀಯವು; ನಿನಗಾಗಿ ಪ್ರಾಣಕೊಡಲು ಸಿದ್ಧರಿದ್ದರು ತಮ್ಮ ನೂರು ಪ್ರಾಣಗಳಿಂದ ಆಧ್ಯಾತ್ಮದಅಭಿಲಾಷೆಯುಳ್ಳ ಜನರು. “ತೆರೆಯುವುದು ಸಾಧಕರ ಸುಪ್ತಸೌಭಾಗ್ಯವದು; ಬೆಳಗುವುದು ತಾನೆ ಪರಮಾರ್ಥ ತೇಜಸ್ಸು. ಸೆಳೆಯುವುದು ಭಕ್ತರ , ಪತಂಗವಂ ದೀಪದೊಲು” ಎಂದ ನಿನ್ನಯ ಮಾತು ಸತ್ಯವಾಯ್ತು. ನಿನ್ನ ಕೃಪೆ ನಿನ್ನನುಗ್ರಹದಿಂದ ಇಂದು ಬೀರುತಿದೆ ಆ ಜ್ಯೋತಿ ದಿವ್ಯಪ್ರಭೆಯ. ಪರಮಾತ್ಮ ಪ್ರೇಮಿಗಳು ಪಡೆದುಕೊಳ್ಳುತಲಿಹರು ಪರಮಾರ್ಥದಾಲೋಕ ಮೋದದಿಂದ. ಸತ್ಯ ದೃಷ್ಟಿಯನುಳ್ಳ ‘ಬಿಸ್ಮಿಲ್’* ನೋಡಿಕೋ ಸಂತೋಷದಿ ! ಪಾರಮಾರ್ಥದ ಪುಷ್ಪವನವದು ಹೇಗೆ ವಿಕಸಿತವಗಿದೆ. ಮದನ ಮೋಹನಲಾಲ್ ಶ್ರೀವಾಸ್ತವ ವಕೀಲ್ ಬದಾಯೂನ್ *ಇದು ಕವಿತೆಯ ಅಂಕಿತ |