1. ಗುರುವು ದೇವರು ಮತ್ತು ಮನುಷ್ಯನನ್ನು ಜೋಡಿಸುವ ಕೊಂಡಿ. ಅವನ ಮುಖಾಂತರವೇ ನಾವು ದೇವರನ್ನು ತಲುಪಬಲ್ಲೆವು. ಮಾರ್ಗದಲ್ಲಿಯ ತೊಡಕುಗಳಿಂದ ನಮ್ಮನ್ನು ಹೊರತರುವ ಶಕ್ತಿ ಆತನೊಬ್ಬನೇ.SMP 72
  2. ಗುರುವನ್ನು ತಾಯಿಯೆಂದು ಭಾವಿಸುವುದಂತೂ ಶಿಷ್ಯನಿಗೆ ಅತ್ಯಂತ ಯುಕ್ತವೂ ಲಾಭದಾಯಕವೂ ಆದುದೆಂದು ನನ್ನ ಅಭಿಪ್ರಾಯ.RD 80
  3. ಆದುದರಿಂದ ಗುರುವು ಯಾವುದೇ ವೈಯಕ್ತಿಕ ಉದ್ದೇಶ ಅಥವಾ ಸ್ವಾರ್ಥದಿಂದ ಸಂಪೂರ್ಣ ಅಲಿಪ್ತನಾಗಿರುವುದು ಅಗತ್ಯ. ಅಭಿಮಾನದ ಇಲ್ಲವೆ ಶ್ರೇಷ್ಠತ್ವದ ಎಲ್ಲ ಭಾವನೆಗಳಿಂದ ಆತ ಪೂರ್ಣ ಮುಕ್ತನಾಗಿರಬೇಕು. ಆವನು ಕೇವಲ ನಿ:ಸ್ವಾರ್ತಿಯೂ ಮಾನವತೆಯ ನಿಜವಾದ ಸೇವಕನೂ ಆಗಿದ್ದು ಕೀರ್ತಿ – ಕಾಂಚನಗಳ ಗುಪ್ತ ಆಶೆಯಿಂದ ದೂರನಾಗಿ, ಕೇವಲ ಅವ್ಯಾಜ ಪ್ರೇಮದಿಂದಲೇ ಜನತೆಗೆ ಬೋಧಿಸುವವನಾಗಬೇಕು. ಅತಿ ದೂರತಮ ಎಲ್ಲೆಯವರೆಗೆ ಆತನ ಗತಿಯಿರಬೇಕಲ್ಲದೆ ಆತನಲ್ಲಿ ಯೌಗಿಕ ಪ್ರಾಣಾಹುತಿಯ ಶಕ್ತಿಯಿರಬೇಕು.RD 52
  4. ತನ್ನ ಜೀವಮಾನದಲ್ಲಿ ಒಮ್ಮೆಯಾದರೂ ತಾನು ಗುರುವೆಂಬ ಭಾವನೆಯು ಬಂದುದಾದರೆ ಯಾವಜ್ಜೀವನೂ ಆತನು ಗುರುವಾಗುವ ಯೊಗ್ಯತೆಯನ್ನು ಕಳೆದುಕೊಳ್ಳುವನೆಂದು ನನ್ನ ನಂಬುಗೆ.RD 50
  5. ನಾನು ಒಡೆತನವನ್ನು ತೋರಿಸುತ್ತಿರುವೆನೆಂದು ಯಾರಾದರೂ ಭಾವಿಸಬಹುದೆಂದು ಭಯಪಡುತ್ತೇನೆ. ಆದರೆ ಪ್ರಿಯ ಬಂಧು ನನಗೆ ಯಾವ ಶಿಷ್ಯನೂ ಇಲ್ಲ ಅಥವಾ ದೇವರೂ ಇಲ್ಲದಾಗ ನನ್ನ ಒಡೆತನವನ್ನು ಯಾರಿಗೆ ತೋರಿಸಲಿ ದೇವರ ಕೃಪೆಯಿಂದ ನಾನು ನಿರಂತರವಾಗಿ ಶೂನ್ಯ ಸ್ಥಿತಿಯಲ್ಲಿರುವೆ, ಅಲ್ಲಿ ನಾನು ಇಲ್ಲ ದೇವರೂ ಇಲ್ಲ.  ಜನರು ನನ್ನನ್ನು ನಾಸ್ಥಿಕನೆಂದು ಕರೆಯಬಹುದೆಂದು ಭಯಪಡುತ್ತೇನೆ.VR II 252
  6. ಕೆಲ ಸಂತರು ಇಂತಹ ಪ್ರಾಪಂಚಿಕ ಆಸೆಗಳನ್ನು ಒಡ್ಡುತ್ತ ಕೆಲ ಮಟ್ಟಿಗೆ ಯಶಸ್ವಿಯಾಗುವದನ್ನು  ನಾನು ಬಲ್ಲೆ. ಇದನ್ನು ಮಾಡಲು ಅವರು ಕೆಲ ಮಟ್ಟಿಗೆ ಯಶಸ್ವಿಯಾಗುವುದನ್ನು ನಾನು ಬಲ್ಲೆ. ಇದನ್ನು ಮಾಡಲು ಅವರು ಋಜು ಮಾರ್ಗದಿಂದ ದೂರ ಸರಿಯಬೇಕಾಗಿದ್ದು ಆಧ್ಯಾತ್ಮಿಕವಲ್ಲದ ದಾರಿಗಳನ್ನು ಹಿಡಿಯ ಬೇಕಾಗುವದೆಂಬುದು ನಿಶ್ಚಿತ. ನನಗಾದರೋ ಅದು ನುಂಗಲಾರದ ಅತ್ಯಂತ ಕಹಿಯಾದ ಯಾತ್ರೆ . ನನ್ನ ಗುರುಗಳು ತೋರಿಸಿದ ನಿಯಮಗಳನ್ನು  ನಾನು ಚಾಚೂ ತಪ್ಪದೆ ಪಾಲಿಸುತ್ತೇನೆ. ಹಾಗೂ ಎಂತಹ ಪರಿಸ್ಥಿತಿಯಲ್ಲಿಯೂ ಆಧ್ಯಾತ್ಮಿಕವಲ್ಲದ ಮಾರ್ಗಗಳನ್ನು ಅನುಸರಿಸುವುದಿಲ್ಲVR II 221
  7. ಹಿಂದಿನ ಜ್ಞಾನಿಗಳು ಮತ್ತು ಸಂತರೊಳಗೆ ಅಂಥ ಸಾಮರ್ಥ್ಯವುಳ್ಳ ಒಬ್ಬರನ್ನು ನನ್ನವನನ್ನಾಗಿ ಪಡೆದುದು ಕೇವಲ ಭಾಗ್ಯ ವಿಶೇಷ. ಅದಕ್ಕಾಗಿ ಸ್ವಲ್ಪ ಮಟ್ಟಿಗಿನ ಶ್ರೇಯಸ್ಸು ನನಗೂ ಬರಬೇಕಾದದ್ದೆ.VR I 31
  8. ನನ್ನ ಸಮರ್ಥ ಗುರುಗಳು ತಾವು ಹೊಂದಿದ ಎಲ್ಲವನ್ನೂ ನನಗೆ ಬಳುವಳಿಯಾಗಿ ಕೊಟ್ಟಿದ್ದು ಅದರಲ್ಲಿ ಜ್ಞಾನವೂ ಸೇರಿದೆ. ಈ ಕಾರಣದಿಂದ ನನ್ನ ಅಭಿವ್ಯಕ್ತಿಯಲ್ಲಿ ತಾಂತ್ರಿಕ ಶಬ್ದಗಳ ಕೊರತೆಯಿರಬಹುದಾದರೂ ತೀರ ಸಣ್ಣ ವಿಷಯದಿಂದ ಮೊದಲುಗೊಂಡು ಅತ್ಯುನ್ನತ ವಿಷಯದವರೆಗೂ ಪ್ರತಿಯೊಂದು ವಿಧದ ಜ್ಞಾನವೂ ನನ್ನಲ್ಲಿ ಅಪಾರವಾಗಿದೆಯೆಂಬುದನ್ನು ಅನುಭವಿಸುತ್ತೇನೆ.VR II 91
  9. ಸಾಮಾನ್ಯವಾಗಿ ನಿಸರ್ಗವು ಕಾಲಕ್ಕೆ ತಕ್ಕಂತೆ ಕಾರ್ಯ ಮಾಡಲು ಯಾರಿಗೆ ಶಕ್ತಿಗಳನ್ನು ಕರುಣಿಸಿದೆಯೋ , ಆ ವ್ಯಕ್ತಿಯ ಕಾರ್ಯದಲ್ಲಿ ಅಡ್ಡಿಯಾಗುವುದಿಲ್ಲ.VR I 26
  10. ಜ್ಯೋತಿಯು ಈಗಾಗಲೇ ಬೆಳಗಿದೆ. ಅದನ್ನು ಹೊಂದಿ ಲಾಭ ಪಡೆಯಲು ಕೇವಲ ಭಕ್ತಿಯುತ ಹೃದಯಗಳು ಮಾತ್ರ ಬೇಕಾಗಿವೆ. ಸಮೀಪದ ಭವಿಷ್ಯತ್ತಿನಲ್ಲಿ ಇಂಥ ಪ್ರಸಂಗವು ಮತ್ತೆ ಬರುವುದೆಂದು ಎಣಿಸುವಿರೇನು? ಇದೇ ಉದ್ದೇಶಕ್ಕಾಗಿ ಹಿಂದೆ ಅವತಾರ ಮಾಡಿದ ಯಾವುದೇ ವಿಭೂತಿ ಪುರುಷನೊಂದಿಗೆ ಈತನನ್ನು ಹೋಲಿಸಬಲ್ಲಿರಾ? ಇಂಥ ವ್ಯಕ್ತಿಯು ಅವತಾರ ರೂಪದಲ್ಲಿ ಎಂದಾದರೂ ಅಸ್ತಿತ್ವದಲ್ಲಿದ್ದನೆ? ಖಂಡಿತವಾಗಿಯೂ ಇಲ್ಲ. ಪ್ರತಿಯೊಂದು ಅವತಾರದ ಶಕ್ತಿ-ಸಾಮರ್ಥ್ಯಗಳೂ ಆಯಾ ಕಾಲದ ಪರಿಸ್ಥಿತಿಗಳಿಗನುಸಾರವಾಗಿ ಭಿನ್ನವಾಗಿದ್ದು ಇಂದಿನದು ತೀರ ಕ್ವಚಿತ್ ಪ್ರಸಂಗಗಳಲ್ಲೊಂದು. ದೈವೇಚ್ಛೆ ಹಾಗಿದೆ. ಈಗ ನಿಸರ್ಗದ ಕಾರ್ಯಕ್ಕಾಗಿ ಅವತರಿಸಿದ ವಿಭೂತಿ ಪುರುಷನು ಸಾಮರ್ಥ್ಯದಲ್ಲಿಯೂ, ಆತನಿಗೆ ವಹಿಸಲಾದ ನಿಸರ್ಗದ ಕಾರ್ಯ ವ್ಯಾಪ್ತಿಯಲ್ಲಿಯೂ.ಹಿಂದಿನ ಎಲ್ಲರಿಗಿಂತ ಉತ್ಕೃಷ್ಠನಾಗಿದ್ದಾನೆ.VR I 30
  11. ದೈವಿಪಥವನ್ನನುಸರಿಸುವವನಿಗೆ ಆತ್ಮವಿಲಯವೊಂದೇ ದಾರಿ. ಅದನ್ನು ಪಟ್ಟು ಹಿಡಿದು ಅನುಸರಿಸಬೇಕು. ಪ್ರೇಮ-ಭಕ್ತಿಗಳಂತೂ ಅದರ ಮುಖ್ಯ ವೈಶಿಷ್ಟ್ಯ. ತನ್ನನ್ನು ವಿಲಯನಗೊಳಿಸಿದವನು ಶಾಶ್ವತ ಜೀವನದಲ್ಲಿ ಕಾಲಿಡುವನು. ಅದೇ ಪಡೆಯಲರ್ಹವಾದ ನಿಜ ಜೀವನ, ಜೀವನದ ಗುರಿ. ಇದನ್ನು ಗುರುವಿನ ಜೀವಿತ ಕಾಲದಲ್ಲಿ ಹೆಚ್ಚು ಸುಲಭವಾಗಿ ಪಡೆಯಬಹುದು.ಏಕೆಂದರೆ, ಆತನು ಜೀವಿಸಿರುವಾಗ ಆತನ ಶಕ್ತಿಯು ಯಾವಾಗಲೂ ಪ್ರವಹಿಸುತ್ತಿರುತ್ತದೆ. ತರುವಾಯ, ಪತಂಗಗಳ ಇಡೀ ಸಮುದಾಯದಲ್ಲಿ ನಂದಿದ ಜ್ಯೋತಿಯಲ್ಲಿ ಆತ್ಮಾರ್ಪಣ ಮಾಡಿಕೊಳ್ಳಬಲ್ಲ ಪತಂಗಗಳು ತೀರ ವಿರಳವಾಗಿರಬಹುದು.VR I 35
  12. “ಜನರು  ನನ್ನನ್ನು ಮೃತರಾಗಿ ಹೋಗಿರುವೆನೆಂದು ಭಾವಿಸಿದ್ದಾರೆ. ಹಾಗೆ ಮಾಡಿದಾಗ, ಪ್ರಾಣಾಹುತಿಯ ಧಾರೆಯಲ್ಲಿ ತೊಡಕು ಉಂಟಾಯಿತು. ಅಲ್ಲದೆ ಹೆಚ್ಚು ಪಕ್ಷ ಜನರು ನನ್ನ ಜೊತೆಗೆ ಸಂಬಂಧ ಇಟ್ಟು ಕೊಳ್ಳಲಿಲ್ಲ.”AB II VOL I P 49
  13. ಆದುದರಿಂದಲೇ ನಿನ್ನನ್ನು ಸಮಸ್ತ ವಿಶ್ವದ ಏಕೈಕ ಪ್ರಭುವನ್ನಾಗಿ ಮಾಡಲಾಗಿದೆ. ಯಾವ ಘಟನೆಗಳು ಸಂಭವಿಸಿದರೂ ಅವು ನಿನ್ನ ಮೂಲಕವೇ ಸಂಭವಿಸುವುದು; ಮತ್ತು ಬೆಳಕನ್ನು ಪಡೆಯುವುದರಲ್ಲಿ ನೀನೇ ಮೊದಲಿಗನಾಗಿರುವೆ.ಆದರೆ ಇದು ಕೊನೆಯಲ್ಲ.AB II VOL I P 95
  14. ನಾನು ನಿನಗೆ ತೀರ ವಿಶಿಷ್ಟವಾದ ಅನನ್ಯ  ರೀತಿಯಲ್ಲಿ ಪ್ರಶಿಕ್ಷಣ ಕೊಟ್ಟಿದ್ದೇನೆ. ನಿನ್ನಲ್ಲಿ ಕಾಲರೂಪ ಮತ್ತು ‘ದಯಾಲರೂಪ’ ಎರಡೂ ಇವೆ. ಯಾವುದರಲ್ಲಿಯೂ ತೀಕ್ಷಣತೆಯಿಲ್ಲ. ಇವೆರಡೂ ಭಗವದ್ರೂಪಗಳು ಮತ್ತು ಅವುಗಳಲ್ಲಿ ಅಸುರೀ ಅಂಶವಿಲ್ಲ.AB II VOL I P 97.
  15. ಆಧ್ಯಾತ್ಮಿಕತೆಯು ಮನುಷ್ಯನು  ತೊಡುವ ಬಟ್ಟೆಯ ಬದಲಿಗೆ , ಬಟ್ಟೆ ಉಡುವ ವ್ಯಕ್ತಿಯಲ್ಲಿರುತ್ತದೆ. ಈ ತತ್ವವು ಮರೆತು ಹೋಗಿದೆ. ಕೇವಲ ಬಣ್ಣದ ಬಟ್ಟೆಗಳಿರುವಲ್ಲಿಯೇ ಹುಡುಕಲಾಗುತ್ತದೆ. ಮನುಷ್ಯನನ್ನು ಅವನ ಬಟ್ಟೆಗಳಿಂದ ನಿರ್ಣಯಿಸಲಾಗುತ್ತಿದೆ. ಅನೈತಿಕತೆಯು ಮುಂದೆ ಸಾಗುತ್ತಲಿದೆ. ಯಾತ್ರೆ ನಡೆದಿದೆ. ಹೆಚ್ಚಿನ ಪಾಶ್ಚಾತ್ಯರು ಅದಕ್ಕೆ ಬಲಿಬೀಳುತ್ತಿದ್ದಾರೆ. ಭಾರತೀಯರೂ ಆ ಏನನ್ನು ಅರಿಯದವರನ್ನು ಅದನ್ನು ಅನುಕರಿಸುತ್ತಾರೆ. ಅವರ ತತ್ವಶಾಸ್ತ್ರಗಳಿಂದ ಉದ್ದೃತಗೊಳಿಸಲಾಗುತ್ತದೆ. ರೂಢಿಗಳನ್ನು ಅನುಸರಿಸಲಾಗುತ್ತಿದೆ. ರಿವಾಜುಗಳನ್ನು ನಕಲು ಮಾಡುತ್ತಾರೆ. ಮನುಷ್ಯನ ಬುದ್ಧಿವಂತಿಕೆಯು ಅದನ್ನು ಅರಿಯಲು ಸಾಧ್ಯವಾಗದಷ್ಟು ವೇಗವಾಗಿ ವಿಷಯಗಳು ಬದಲಾಗಲಿವೆ. ನಾವು ಎಣಿಸುವ ಮೊದಲೇ  ಚಾಲ್ತಿಯಲ್ಲಿರುವ ಎಲ್ಲವು ಶೀಘ್ರದಲ್ಲೇ ಕಣ್ಮರೆಯಾಗಲಿದೆ. ಬದಲಾವಣೆ ಮತ್ತು ಕೇವಲ ಬದಲಾವಣೆ ಮಾತ್ರ ಉಳಿಯುವದು. ಅದು ನಿಮ್ಮ ಮೇಲೆ ಮಾತ್ರ ಅವಲಂಬಿತವಾಗಿರುತ್ತದೆ.AB II VOL II P 102-103
  16. ಕೇಂದ್ರ ಬಿಂದುವಿನ ವಲಯದಿಂದ ಶ್ರೀಕೃಷ್ಣನ ಅವತಾರವಾಯಿತು. ಶ್ರೀರಾಮನಾದರೋ, ಮತ್ತೊಂದು ಕೊನೆಯಿಂದ   ಅವತರಿಸಿದನು. ಈ   ಕಾರಣದಿಂದ  ಅವನು  ಹೆಚ್ಚು  ಮಾನವ  ಸಾಮ್ಯತೆ ಹೊಂದಿದ್ದನು. ಮಾನವನಾಗಿ ಪ್ರತಿಯೋರ್ವನೂ ಹೊಂದಲು ಪ್ರಯತ್ನಿಸತಕ್ಕುದಾದ   ಜೀವನಾದರ್ಶವನ್ನು. ಅವನು ಪ್ರತಿನಿಧಿಸುತ್ತಾನೆ‌. ವರ್ತಮಾನದಲ್ಲಿ ಕೆಲಸಮಾಡುತ್ತಿರುವ ವಿಭೂತಿ ಪುರುಷನನ್ನು ಕುರಿತು, ನಾನು ದರ್ಶಿಸಿದಂತೆ  ಹೇಳುವದಾದರೆ, ಆತನು ಕೇಂದ್ರ ಬಿಂದುವಿನಿಂದ ಅವತರಿಸಿದವನೆಂದು ಹೇಳಬಲ್ಲೆ. ಭೂಮಿಯ ಮೇಲೆ ಇದುವರೆಗೆ ಬಂದ ಅವತಾರಿಗಳಲ್ಲಿ ಯಾರಿಗೂ ಮೂಲದ ಶಕ್ತಿಯು ಅನುಗ್ರಹಿಸಲ್ಪಟ್ಟಿರಲಿಲ್ಲ.SMP 27-28
  17. ಯಾವ ರೀತಿಯಲ್ಲಿಯೇ ಆಗಲಿ, ಕರ್ಮಠ ‘ಗುರುತ್ವ’ದ ಕಲ್ಪನೆಯನ್ನು ಪ್ರತಿಪಾದಿಸುವದು ನನ್ನ  ಉದ್ದೇಶವಲ್ಲ. ನಮ್ಮ ಸಂಸ್ಥೆಯಲ್ಲಿ ಪರಸ್ಪರ ಅಗತ್ಯವಿರುವ ಸಹಾಯವನ್ನೊದಗಿಸುತ್ತ  ಸೇವೆ  ಮತ್ತು ತ್ಯಾಗದ ಭಾವದಿಂದ ಸಾಮಾನ್ಯ ಭಾತೃ ಭಾವವನ್ನು ನಾವು ಇಟ್ಟುಕೊಳ್ಳುತ್ತೇವೆ. SMP 9
  18. ತಾಯಿಯ ಹಾಗೂ ನಿಜವಾದ ಗುರುವಿನ  ಕಾರ್ಯಗಳು ತೀರ ಸಮಾನವಾಗಿವೆ. ತಾಯಿಯು  ಮಗುವನ್ನು ತನ್ನ ಗರ್ಭದಲ್ಲಿ ಕೆಲಕಾಲ ಧರಿಸುತ್ತಾಳೆ.ಗುರುವಾದರೂ ಆಧ್ಯಾತ್ಮಿಕ ಶಿಶುವನ್ನು ಕೆಲಕಾಲ ತನ್ನ ಮಾನಸಿಕ ವಲಯದಲ್ಲಿ ಇಟ್ಟುಕೊಳ್ಳುವವನು. ಈ ಕಾಲದಲ್ಲಿ ಶಿಷ್ಯನು, ಗರ್ಭದಲ್ಲಿಯ ಶಿಶುವಿನಂತೆ, ಗುರುವಿನ ವಿಚಾರಗಳ ಆಧ್ಯಾತ್ಮಿಕ ತರಂಗಗಳಿಂದ ಶಕ್ತಿಯನ್ನು ಹೀರಿ ಪುಷ್ಟಿ ಹೊಂದುವನು. ಕಾಲವೊದಗಿ ಬಂದಾಗ ಆತನು ದಿವ್ಯಲೋಕದಲ್ಲಿ ಜನಿಸುವನು. ಅಲ್ಲಿಂದ ಮುಂದೆ ಆತನ ಆಧ್ಯಾತ್ಮಿಕ ಜೀವನವು ಆರಂಭವಾಗುವುದು.R 81
  19. ಯಾರ ಹೃದಯದಲ್ಲಾದರೂ ನನ್ನ ಬಗ್ಗೆ ಪ್ರೇಮವಿದ್ದುದನ್ನು ನಾನು ಕಂಡರೆ, ನನಗೆ ಸಂತೋಷವಾಗಿ ಉತ್ಸಾಹ ಬರುವುದು. ಆದರೆ , ಪ್ರಪಂಚದಲ್ಲಿ ಅಭಿರುಚಿ-ಪ್ರೇಮಗಳನ್ನು ಹುಟ್ಟಿಸುವ ಅನೇಕ ಸಂಗತಿಗಳಿರುವಾಗ ನನ್ನ ಬಗ್ಗೆ ಯಾರಾದರೂ ಏಕೆ ಚಿಂತಿಸಬೇಕು?          ಅ. ಯಾರು ತಮ್ಮನ್ನೇ ಕಳೆದುಕೊಂಡಿರುವರೋ ಅಥವಾ          ಬ. ಎಲ್ಲವನ್ನೂ ಕಳೆದುಕೊಳ್ಳಲಿಚ್ಚಿಸುವರೋ          ಕ. ಅಂಥವರೇ ಬಹುಶ: ನನ್ನ ಕಡೆಗೆ ಅಕೃಷ್ಟರಾಗಿರಬಹುದು.VR I 101
  20. ಆರಂಭದ ಅವಸ್ಥೆಗಳಲ್ಲಿ ದೈವೀಕೃಪೆಯು ಗುರುವಿನ ಮಾಧ್ಯಮದಿಂದ ಮಾತ್ರ ಅಭ್ಯಾಸಿಯಲ್ಲಿ ಹರಿದು ಬರುವುದು. ಆದುದರಿಂದಲೇ ಅದನ್ನು ಅನೇಕ ವೇಳೆ  ಗುರು ಕೃಪೆಯೆಂದು ಕರೆಯುತ್ತಾರೆ. ಅಂತೂ ಗುರುವಿನ ಮಾಧ್ಯಮದಿಂದಲೇ ಬರಲಿ, ನೇರವಾಗಿ ಬರಲಿ, ಎರಡು ಪಕ್ಷಗಳಲ್ಲಿಯೂ ಅದು ದೈವೀಕೃಪೆಯೆ. ಎಲ್ಲಿಯವರೆಗೆ ಅಭ್ಯಾಸಿಯು ಅದನ್ನು ನೇರವಾಗಿ ಪಡೆಯಲು ಶಕ್ತನಿಲ್ಲವೋ ಅಲ್ಲಿಯವರೆಗೆ ಅದನ್ನು ಆತನಿಗೆ ಕರುಣಿಸುವುದು ಗುರುವನ್ನೇ ಕೂಡಿದೆ. ಅದನ್ನು ನೇರವಾಗಿ ಎಳೆಯುವ ಶಕ್ತಿಯನ್ನು ಅಭ್ಯಾಸಿಯು ಬೆಳೆಸಿಕೊಂಡಾಗ ಗುರುವಿನ ಕಾರ್ಯವು ಪ್ರಾಯ: ಮುಗಿದಂತಾದರೂ ಭದ್ರತೆಗಾಗಿ ಆತನ ರಕ್ಷಾದೃಷ್ಟಿಯನ್ನಿಡಬೇಕಾಗುವುದು. ಯೊಗ್ಯ ಗುರುವಿನ ನಿಜವಾದ ಕಾರ್ಯ ಇದೇ.VR I 121
  21. ನಾನು ನನ್ನ ವಿಷಯದಲ್ಲಿ ಏನನ್ನೂ ಹೇಳ ಬಯಸುವುದಿಲ್ಲ. ಏಕೆಂದರೆ, ಹಿಂದಿನ  ಕಾಲದಲ್ಲಿ ಹಾಗೆ ಹೇಳಿದ ಮಾತ್ರಕ್ಕೆ ಮನ್ಸೂರನನ್ನು ಶೂಲಕ್ಕೇರಿಸಲಾಯಿತು. ಈಗ  ಆ ಕಾಲ ಇಲ್ಲವಾದರೂ ಜನರು ನನ್ನ ಯೋಗ್ಯತೆಯನ್ನು ಅಳೆಯಲು ತಕ್ಕ ದೃಷ್ಟಿಯನ್ನು ರೂಪಿಸಿಕೊಳ್ಳದೆ ಇರುವ ಸಂಭವವಿದೆ.VR I 121
  22. ಬಿಡುವಂತೂ ನನಗೆ ಇದ್ದೇ ಇದೆ.ಏಕೆಂದರೆ, ನನ್ನಿಂದ ಕೂಡ ನಾನು ಬಿಡುವು ಹೊಂದಿದ್ದೇನೆ VR I 122
  23. ನಾನು ಅನೇಕ ವೇಳೆ ನನ್ನ ವಿಚಾರದಲ್ಲಿ  ಎಷ್ಟುಮಟ್ಟಿಗೆ ಲೀನನಾಗಿರುತ್ತೇನೆಂದರೆ, ನಾಯಿ ತಿಂದುಳಿದ ಎಂಜಲನ್ನು ಸಹ ತೆಗೆದುಕೊಳ್ಳಲು ಸಂತೋಷವೆನಿಸುತ್ತಿತ್ತು. ಎಂದ ಮೇಲೆ , ಕೀಳು ಜಾತಿಯ ಅಥವಾ ಅಸ್ಪೃಶ್ಯನ ಬಗೆಗೆ ಹೇಳುವುದೇ ಬೇಡ. ಎಷ್ಟಾದರೂ ಆತನೂ ಮನುಷ್ಯನೇ.VR I 57
  24. ನಾವು ಈ ಬಾಹ್ಯ ಜೀವನದ ಹಿಂದೆ ಇರುವ  ಒಂದುದ ಹೊಸ ಬಾಳಿನಲ್ಲಿ ನಾವೀಗ ಕಾಲಿರಿಸಬೇಕಾಗಿದೆ. ಈ ತೋರಿಕೆಯ ಮನುಷ್ಯನ ಹಿಂದೆ ನಿಜವಾದ ಮನುಷ್ಯನಿರುವನೆಂದೂ ನಾವು ಹೇಳಬಹುದು. ನೀವು ನಿಜವಾದ ಜೀವನದಲ್ಲಿ ಪ್ರವೇಶ ಮಾಡಬಯಸುವಿರಾದ ಕಾರಣ ನಿಜವಾದ ಪುರುಷನನ್ನೇ ಅರ್ಥಾತ್ ವ್ಯಕ್ತಿಯ ಹಿಂದೆ ಅಥವಾ ಆಚೆಗಿರುವ ಪುರುಷನನ್ನೇ ಹುಡುಕಬೇಕು. ಇಂಥ ಪುರುಷನು ಒಂದು ವೇಳೆ ಇದ್ದದ್ದೇ ಆದರೆ ಆತನನ್ನು  ಹೃಚಕ್ಷುವಿನಿಂದಲೇ ಶೋಧಿಸಿ ದೇಹದ ಕಣಕಣದಲ್ಲೂ ಅನುಭವಿಸಬಹುದು. ಆತನು ಭೌತಿಕ ಶರೀರವನ್ನು ಹೊಂದಿದ್ದರು ಅದರಲ್ಲಿ ಯಾವ ರೀತಿಯಿಂದಲೂ ಆಸಕ್ತನಾಗಿರುವುದಿಲ್ಲ. ಆತನು ಶೂನ್ಯಕ್ಕೆ ಸಮೀಪವಾಗಿ ಇರುತ್ತಾನೆ ಇಡೀ ವಿಶ್ವವೇ  ಆವರಣವಾಗಿದ್ದು ಅದರಲ್ಲಿ ಅವನು ಕ್ರೀಡಿಸುವನು ಮರುಭೂಮಿಯ ಮರಳಿನಲ್ಲಿಯೂ ಸಾಗರದ ತೆರೆಗಳಲ್ಲಿಯೂ  ನೀವು ಆತನನ್ನು ಕಾಣಬಹುದು ಸೂರ್ಯನ ಬೆಳಕಿನಲ್ಲಿಯೂ , ಚಂದ್ರನಲ್ಲಿಯೂ ನಕ್ಷತ್ರಗಳಲ್ಲಿಯೂ ಆತನ ಸಾನಿಧ್ಯವನ್ನು ಕಾಣುವಿರಿ ಆತನು ಎಲ್ಲಾ ಕಡೆಗೂ ಸ್ವರ್ಗದಲ್ಲಿಯೂ,  ನರಕದಲ್ಲಿಯೂ ಇರುವನು. ಆದರೆ ಆತನನ್ನು ಹೇಗೆ ಕಂಡುಹಿಡಿಯಬೇಕು ಎಂಬುದೇ ನಿಜವಾದ ಸಮಸ್ಯೆಯಾಗಿದೆ. ನನ್ನ ಗುರುಗಳ ಕೃಪೆಯಿಂದ ಅದರ  ಮರ್ಮವು  ನನ್ನೆಡೆಗೆ ಪ್ರವಹಿಸುತ್ತಿದೆ. ಅಭ್ಯಾಸಿಗಳಿಗೆ  ಪ್ರಾಣಾಹುತಿಯ ಮೂಲಕ ಅದನ್ನೇ ಕೊಡುತ್ತಿದ್ದೇನೆ. ನಾನು ಅದನ್ನು ನನ್ನ ಕರ್ತವ್ಯದ ಅಂಗವೆಂದು ಭಾವಿಸಿ ಯಾವ ಪ್ರತಿಫಲದ ಅಪೇಕ್ಷೆಯಿಲ್ಲದೆ ನೆರವೇರಿಸು ಆದರೂ ಅದನ್ನು ಋಣ ರೂಪದಲ್ಲಿ  ಅಭ್ಯಾಸ ತೀರಿಸಬೇಕು.  ಋಣವೆಂದರೆ ಸಾಮಾನ್ಯ ಅರ್ಥದ ಸಾಲವಲ್ಲ ಅಭ್ಯಾಸಿಯು ತಕ್ಕ ಪ್ರತಿಕ್ರಿಯೆಯನ್ನು ತೋರಿಸಬೇಕೆಂಬುದು ನನ್ನ ಅಭಿಪ್ರಾಯ ಪ್ರತಿಕ್ರಿಯೆ ತೋರಿಸಿದ ಹೊರತು ನಿಮ್ಮೊಳಗಿನ ಅವ್ಯವಸ್ಥೆ ಹಾಗೂ ಗೊಂದಲಗಳನ್ನು ಸರಿಪಡಿಸಲು ಸಾಧ್ಯವಿಲ್ಲ.VR I 156
  25. ವಿದ್ವತೆಯು ನಿಜವಾದ ಮಹಾತ್ಮನ ಇಲ್ಲವೆ ಯೋಗಿಯ ಒರೆಗಲ್ಲಾಗಲಾರದು.RD
  26. ನನ್ನ 15ನೇಯ ಅಥವಾ 16ನೇಯ ವಯಸ್ಸಿನಲ್ಲಿ ತತ್ತ್ವಶಾಸ್ತ್ರದ ಪುಸ್ತಕಗಳನ್ನು ಓದಬಯಸಿದೆ. ಮಿಲ್ ಎಂಬಾತನ Utilitarianism(ಪ್ರಯೋಜನವಾದ) ಎಂಬ ಪುಸ್ತಕವನ್ನು ತರಿಸಿಕೊಂಡು ಕೆಲವು ಪುಸ್ತಕಗಳನ್ನೋದಿದೆ. ಇಂಥ ಪುಸ್ತಕಗಳನ್ನೋದಿದರೆ ಅವೇ ವಿಚಾರಗಳನ್ನೇ ನಾನು ಉದಹರಿಸಿ ಸ್ವಂತದ ವಿಚಾರಶಕ್ತಿಯನ್ನು ಕಳೆದುಕೊಳ್ಳುವೆನೆಂದು ನನಗೆನಿಸಿತು. AB I P3
  27. ಧ್ಯಾನಕಾಲದಲ್ಲಿ ನನ್ನ ಆಂತರಿಕ ಭಾವನೆಯಲ್ಲಿ ಉಂಟಾದ ಇನ್ನೊಂದು ಬದಲಾವಣೆಯೆಂದರೆ, ಭಗವಂತನ ವಿಚಾರ ಹೊರಟುಹೋಗಿ ಕೇವಲ ಗುರುಗಳ ವಿಚಾರ ಮಾತ್ರ ಉಳಿದುಕೊಂಡಿತು. ನನಗೆ ನನ್ನ ಗುರುಗಳಲ್ಲದೆ ದೇವರೆನ್ನುವವನು ಇದ್ದಿಲ್ಲ.AB P 17
  28. ಅರ್ಥಾತ್ , ಯಾರಾದರೂ ತಮ್ಮ ಕರ್ತವ್ಯದಲ್ಲಿ ಚ್ಯುತಿದೋರಿದರೆ ಅವರ ಬಗೆಗಿನ ನನ್ನ ಕರ್ತವ್ಯದಲ್ಲಿ ನಾನೇಕೆ ಲೋಪಗೊಳಿಸಬೇಕು? “ನಾನು ನಿನಗೆ ಮಾಡುವುದೆಲ್ಲ ನನ್ನ ಕರ್ತವ್ಯ; ನೀನು ನನಗೆ ಮಾಡದಿದ್ದುದು ನಿನ್ನ ಹೊಣೆ” ಯಾರಾದರೂ ನನಗೆ ರವೆಯಷ್ಟು ಉಪಕಾರ ಮಾಡಿದರೂ ಅದನ್ನು ತೀರಿಸುವುದು ನನ್ನ ಸ್ವಭಾವವಾಗಿಬಿಟ್ಟಿದೆ. ಆದರೆ ಪ್ರತಿಯಾಗಿ ನಾನೇನು ಮಾಡಿದರೂ ಆ ಉಪಕಾರವಂತೂ ಇದ್ದೇ ಇರುತ್ತದೆ.AB I P12
  29. ಏನೇ ಆದರೂ ಇದೇ ಭಾವನೆಯಿಂದ ಮುಂದುವರಿದೆ. ಕೊನೆಗೆ ನನ್ನ ಗುರುಗಳು ಪಾರ್ಥಿವ ಶರೀರವನ್ನು ಬಿಟ್ಟಮೇಲೆ ಒಂದು ಕನಸಿನಲ್ಲಿ ಕಾಣಿಸಿಕೊಂಡು ನನ್ನ ಅವಸ್ಥೆಯನ್ನು ಈ ಶಬ್ದಗಳಲ್ಲಿ ವಿವರಿಸಿದರು; “ನಾನು ನೀನಾಗಿರುವೆ, ನೀನು ನಾನಾಗಿರುವಿ ನಾನು-ನೀನಿಬ್ಬರೂ ಬೇರೆ ಬೇರೆ ಎಂದು ಈಗ ಯಾರು ನುಡಿಯರೀ ಮಾತನು.AB I P 17
  30. ಈ ವಿಷಯದ ಮರ್ಮವೇನೆಂದರೆ, ಯಾರನ್ನು ‘ಆತನು’ ಆಕರ್ಷಿಸುವನೋ ಅವರೇ ಯಶಸ್ವಿಗಳು. ನೀವೂ ನಾನೂ ವ್ಯರ್ಥವಾಗಿ ಕೈ ಕಾಲುಗಳನ್ನು ಬಡಿಯುವೆವು, ಅಷ್ಟೆ. ಯೊಗ್ಯ ಕಾಲ ಬಂದಾಗ ಆಯೆಲ್ಲ ಜನರೂ ಕ್ರಮೇಣ ಸನ್ಮಾರ್ಗಕ್ಕೆ ಬರುವರು.  ಪ್ರತಿಯೊಬ್ಬರ ಸಂಸ್ಕಾರಗಳೂ, ಭಾವಗಳೂ ಭಿನ್ನಭಿನ್ನವಿರುತ್ತವಾದ ಕಾರಣ ಪ್ರತಿಯೊಬ್ಬರ ಕಾಲವೂ ಕ್ಲುಪ್ತವಾಗಿರುತ್ತದೆ.AB I P 74
  31. ನನ್ನ ವಿಚಾರಗಳನ್ನು  ಅಭಿವ್ಯಕ್ತಗೊಳಿಸಿ ನನ್ನ ಕರ್ತವ್ಯಪಾಲನೆ ಮಾಡಿದ್ದೇನೆ. ನಿಜವಾದ  ಭಗವಂತನಿಗೆ ನನ್ನನ್ನು ಅರ್ಪಿಸಿಕೊಂಡ ಮೇಲೆ ತನ್ನ ಇಚ್ಛಾನುಸಾರ ನನ್ನನ್ನು ರೂಪಿಸುವ ಗುರು ಆತನೇ.AB I P 127
  32.  ಶಾರೀರಿಕ ಬಲವಿರುವ ಜಟ್ಟಿಯು ತನ್ನ ಅಸ್ತಿತ್ವವನ್ನೆಲ್ಲ ದೇಹವೆಂದು ಭಾವಿಸುವಂತೆ ನಾನೂ ನನ್ನ ಅಸ್ತಿತ್ವವನ್ನು ಸಮಗ್ರ ಆತ್ಮವೆಂದು ಅನುಭವಿಸುತ್ತಿದ್ದೇನೆ.AB I P 35
  33. ಲಯಾವಸ್ಥೆಯ ಮಟ್ಟಕ್ಕನುಗುಣವಾಗಿ ನಿರಂತರತೆ ಪ್ರದಾನ ಮಾಡಲ್ಪಡುವುದು. AB I P 138
  34. ಶಿಷ್ಯನು ತನ್ನ ಸರ್ವಸ್ವವನ್ನೂಗುರುವಿಗೆ ಸಮರ್ಪಿಸಿ ಆತನ ಮಾನಸಿಕ ವಲಯವನ್ನು ಪ್ರವೇಶಿಸಿದ್ದಾದರೆ ಅವನಿಗೆ ದಿವ್ಯ ಲೋಕದಲ್ಲಿ ಜನ್ಮ ನೀಡಲು ಗುರುವಿಗೆ ಕೇವಲ ಏಳು ತಿಂಗಳುಗಳು ಬೇಕಾಗುವವು. ಆದರೆ ಗುರುವಿನ ಮಾನಸಿಕ ಕ್ಷೇತ್ರದಲ್ಲಿದ್ದಾಗ ಶಿಷ್ಯನಿಗೆ ತನ್ನ ವಿಚಾರಗಳ ಮತ್ತು ಅನುಭವಗಳ ಅರಿವು ಇನ್ನೂ ಇರುವುದರಿಂದ  ಸಾಮಾನ್ಯವಾಗಿ ಈ ಕ್ರಮವು ಬಹುಕಾಲದವರೆಗೆ ತಡೆಹಿಡಿಯಲ್ಪಡಿತ್ತದೆ.
  35. ಉಳಿದೆಲ್ಲವುಗಳಿಗಿಂತ ದೊಡ್ಡದಾದ ಹಾಗೂ ಹೆಚ್ಚು ಪ್ರಕಾಶಮಾನವಾದ ಒಂದು ಜೀವ ಕೋಶವಿದೆ. ಅದನ್ನು ನೀವು ಪ್ರಧಾನ ಕೋಶವೆಂದು ಹೇಳಬಹುದು. ಪ್ರಧಾನ ಕೋಶವು ನಾವು ವಾಸಿಸುತ್ತಿರುವ ಜಗತ್ತಿಗೆ ನೇರವಾಗಿ ಸಂಬಂಧಪಟ್ಟಿದ್ದು ಅದನ್ನು ನಿಯಂತ್ರಿಸುವುದು. ಅಲ್ಲದೇ ಇದೇ ಕಾರಣದಿಂದಾಗಿ ಈ ಜಗತ್ತಿನಲ್ಲಿ ನಮಗೆ ಕಾಣ ಬರುವಂಥ ವಿಭೂತಿಗಳು ಬೇರೆ ಯಾವ ಲೋಕದಲ್ಲಿಯೂ ಕಂಡುಬರುವದಿಲ್ಲ. ನಾವು ( ಅರ್ಥಾತ್ ನಮ್ಮ ಜಗತ್ತು) ಪ್ರಧಾನ ಕೋಶದೊಂದಿಗೆ ಸಂಬಂಧಪಟ್ಟಿರುವುದರಿಂದ ಅದರ ಶಕ್ತಿಗಳೇ ಬಹುಮಟ್ಟಿಗೆ ನಮ್ಮಲ್ಲಿಯೂ ಇರುವವು. ಪ್ರಧಾನ ಕೋಶವು ಮೊದಲನೇಯ ಧಕ್ಕೆಯ ಪರಿಣಾಮವಾಗಿರುವುದರಿಂದ ಅದರಲ್ಲಿ ಎಲ್ಲ  ಶಕ್ತಿ ಕೇಂದ್ರೀಕರಣವು ಹೆಚ್ಚಿನ ಪ್ರಮಾಣದಲ್ಲಾಗಿದ್ದು ಅದು ಉಳಿದವುಗಳಿಗಿಂತ ದೊಡ್ಡದೂ ಹೆಚ್ಚು ಪ್ರಕಾಶಮಾನವೂ ಆಗಿರುವುದು.ERY 63-64
  36. ನನ್ನ ಜೀವನದಲ್ಲಿ ನಾನು ಯಾವಾಗಲೂ ಸ್ವಂತದ ಹಿತಕ್ಕಿಂತ ನ್ಯಾಯಪರತೆಗೆ ಹೆಚ್ಚಿನ ಸ್ಥಾನ ಕೊಟ್ಟಿದ್ದೇನೆ.AB I P 10
  37. ನನಗೆ ವಿಶ್ವದ ಪ್ರತಿಯೊಂದು ಅಣುವಿನೊಂದಿಗೂ,ನಮ್ಮ ಪರಂಪರೆಯ ಹಾಗೂ ಇತರ ಪರಂಪರೆಯ ಸಂತರೊಂದಿಗೂ ಒಂದು ಸಂಬಂಧ ಹಾಗೂ ಬಾಂಧವ್ಯದ ಅನುಭವವಾಗುತ್ತಿದೆ.AB I P 116
  38. ಮಾನವಕುಲದ ಮೇಲೆ ನನಗಿರುವ ಆಳವಾದ ಮಮತೆಯಿಂದಾಗಿ ಪ್ರತಿಯೊಂದು ಹೃದಯವು ಶಾಂತಿ ಸಂತೋಷಗಳಿಂದ ತುಂಬಿ ತುಳುಕಲಿ ಎಂದು ನಾನು ನನ್ನ ಹೃದಯದ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದೇನೆ. ಅವು ನನ್ನ ಅಸ್ಥಿತ್ವದ ಅವಿಭಾಜ್ಯ ಅಂಗವೇ ಆಗಿರುವ ಸಹಜೀವಿಗಳ ಹೃದಯದಲ್ಲಿ ಬುದ್ಭುದಿಸಲಿ. ನಿಮ್ಮ ಹೃದಯಗಳಲ್ಲಿ ಕಾಲಕ್ರಮೇಣ ಸಹಜವಾದ ರೀತಿಯಿಂದ ಪರಿಣಾಮವನ್ನುಂಟು ಮಾಡಲು ನನ್ನ ಹೃದಯವು ಎಡಬಿಡದೆ ನಿಶಬ್ದವಾಗಿ ಪ್ರೇರಣೆಯನ್ನೀಯುತ್ತ. ಇಲ್ಲಾಗಲಿ , ಬೇರೆಡೆಗಳಲ್ಲಾಗಲಿ ಇರುವ ನಿಮ್ಮೆಲ್ಲರೊಡನೆ ಜೋಡಿಸಲ್ಪಟ್ಟಿದೆ. ಆದರೆ ಅಂತಿಮ ತತ್ವದ ಸಾಕ್ಷಾತ್ಕಾರಕ್ಕೋಸ್ಕರ, ತನಗೆ ಬೇಕಾದ ಆಧ್ಯಾತ್ಮಿಕ ಅವಶ್ಯಕತೆಗಳ ಬಗ್ಗೆ ಜಾಗ್ರತನಾಗುವುದು ಪ್ರತಿಯೊಬ್ಬ ಜೀವಾತ್ಮನಿಗೂ ಸೇರಿದ್ದುME 9
  39. ನನ್ನ ಕಾಯಿಲೆಯಲ್ಲಿ ಆಗಾಗ ಪೂಜ್ಯ ಲಾಲಾಜಿಯವರನ್ನು ಕನಸಿನಲ್ಲಿ ಕಾಣುತ್ತಿದ್ದೆ. ನನ್ನ ಕಾಯಿಲೆಯ ಬಗ್ಗೆ ಎಷ್ಟೋ ಸಲ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ಉದಾಹರಣೆಗಾಗಿ, ಈ ರೋಗದಲ್ಲಿ ಅಲೋಪಥಿ ಚಿಕಿತ್ಸೆ ಬೇಡವೆಂದು ಸೂಚಿಸಿದರು. ಅದರಂತೆ ಮಾಡಲಾಯಿತು. ಎಷ್ಟೋ ಬಾರಿ ಕನಸಿನಲ್ಲಿ ಅವರು ಪ್ರಾಣಾಹುತಿ ಕೊಡುತ್ತಿದ್ದರು. ಎರಡನೇಯದೆಂದರೆ, ನಾನು ಎಂಬತ್ನಾಲ್ಕು ಲಕ್ಷ ಯೋನಿಗಳ ಆನಂದವನ್ನು ಅನುಭೋಗಿಸುತ್ತಿರುವೆನೆಂಬ ವಿಚಾರ ಬರುತ್ತಿದೆ. ಆದುದರಿಂದ ಕಳೆದ ಎರಡು ವರ್ಷಗಳಲ್ಲಿ ನಾನು ಒಂದಿಲ್ಲೊಂದು ರೋಗವಿಲ್ಲದೆ ಒಂದು ದಿನವನ್ನು ಕಳೆದಿಲ್ಲ. ಶಾರೀರಿಕ ಹಾಗೂ ಮಾನಸಿಕ ಯಾತನೆಗಳನ್ನು ಅನುಭೋಗಿಸುತ್ತೇನೆ. AB I P 168
  40. ಶಕ್ತಿಯು ಕೇವಲ ಒಬ್ಬನಲ್ಲಿ ಮಾತ್ರ ಉಳಿಯುವುದು. ಲಾಭವು ಎಲ್ಲರಿಗೂ ಸಿಗುತ್ತದೆ.AB II VOL I P 20
  41. ತನ್ನನ್ನು ಆತನ ಉಪಕರಣವಾಗಿಸದೇ ಯಾವದೇ ಅವತಾರಿ ಪುರುಷ ಅಥವಾ ಮಹಾತ್ಮನು (ದೇಹವಿಲ್ಲದೇ) ಕೆಲಸ ಮಾಡಲಸಾಧ್ಯ.AB II VOL I P 109
  42. ಯಾರು ತನ್ನನ್ನು ಸಂಪೂರ್ಣವಾಗಿ ಆತನ ಇಛ್ಛೆಗೆ ಸಮರ್ಪಿಸಿಕೊಂಡಿರುವನೊ ಅತನೆಡೆಗೆ ಆ ಮಹಾನ್ ಶಕ್ತಿ(ಪ್ರಕೃತಿ)ಯ ದೃಷ್ಟಿಯಿರುವುದು.AB II VOL II P 206
  43. ನಿನ್ನ ಜೀವಿತಾವಧಿಯಲ್ಲಿ ಯಾರಲ್ಲಾದರೂ  ನಿನ್ನಂತೆ (ಆಧ್ಯಾತ್ಮಿಕ) ತರಬೇತಿ  (ನೀನು ಪಡೆಯಲು ಸಾಧ್ಯವಾದಷ್ಟು) ಗ್ರಹಿಸುವ ಸಾಮರ್ಥ್ಯವಿದೆಯೆಂದು ಕೊಳ್ಳುವಿಯಾ? ನನ್ನ ಅಂದಾಜು ಏನೆಂದರೆ, ನಿನ್ನ ಉತ್ತರಾಧಿಕಾರಿ – ಪ್ರತಿನಿಧಿಯಾಗಿ ಬರುವ ವ್ಯಕ್ತಿಯಲ್ಲಿಯೂ ಸಹ ಬಲವಂತವಾಗಿ (ಆಧ್ಯಾತ್ಮಿಕ ಶಕ್ತಿ) ತುಂಬುವ ಅಗತ್ಯವಿರುತ್ತದೆ.AB II VOL II P 207
  44. ನಮ್ಮ ಪೂಜ್ಯ ಗುರುಗಳಾದ ಸಮರ್ಥ ಸದ್ಗುರು ಶ್ರೀ ಲಾಲಾಜೀ ಯವರ ಜನ್ಮದಿನವನ್ನಾಚರಿಸಲು ನಾವೆಲ್ಲ ಇಲ್ಲಿ ನೆರೆದಿರುವೆವು. ನಮ್ಮ ಮಿಷನ್ನಿನ ಅತ್ಯಂತ ಮಹತ್ವದ ಆಚರಣೆ ಇದಾಗಿದೆ. ಈ ಜಗತ್ತು ಇರುವವರೆಗೂ ಈ ಶುಭ ದಿನವು ಆಚರಿಸಲ್ಪಡುವುದು. ಇದು ನಮ್ಮ ಮುಂದಿನ ಪೀಳಿಗೆಗೆ ಸಂದೇಶ.AB II VOL II P 250