ಸಾಹಿತ್ಯದ ಪ್ರಕಾರ, ತರಬೇತಿಯು ಒಂದು ಕ್ರಿಯೆಯಾಗಿದ್ದು, ಜ್ಞಾನ ಮತ್ತು ನೈಪುಣ್ಯತೆಯನ್ನು ನೀಡುವ ಕಲೆ ಅಥವಾ ವಿಧಾನವಾಗಿದೆ. ಇದು ನಿರ್ಧಿಷ್ಟವಾಗಿದ್ದು ಒಬ್ಬನ ಸಾಮರ್ಥ್ಯ, ಯೋಗ್ಯತೆ ಮತ್ತು ಕಾರ್ಯಾಚರಣೆಯನ್ನು ಸುಧಾರಿಸುವದಾಗಿದೆ. ಇದು ನಮ್ಮ ಜೀವನದ ಪ್ರತಿಯೊಂದು ಮುಖದಲ್ಲೂ ಅತ್ಯಾವಶ್ಯಕವಾಗಿದೆ. ಸಾಮಾನ್ಯ ಮನುಷ್ಯನಿಗೂ ಸಹ ಹೊಟ್ಟೆ ತುಂಬಿಸಿಕೊಳ್ಳಲು ಒಂದು ರೀತಿಯ ತರಬೇತಿಯು ಅಗತ್ಯ. ಇಂದು ಪ್ರತಿಯೊಬ್ಬನು ನಯವಾದ ಜೀವನವನ್ನು ಸಾಗಿಸಲು ಬಯಸುತ್ತಾನೆ. ಆ ಉದ್ದೇಶಕ್ಕಾಗಿ ಪ್ರತಿಯೊಬ್ಬನು ಹೊಸ ಹೊಸ ಕಲಿಕೆಯ ಮತ್ತು ತರಬೇತಿಯನ್ನು ಅನುಸರಿಸುತ್ತಾನೆ. ಈಗಿನ ಸಮಾಜವು ತನ್ನದೇ ಆದ ಮೌಲ್ಯ ಮತ್ತು ಗ್ರಹಿಕೆಗಳನ್ನು ರೂಪಿಸಿಕೊಂಡಿದೆ. ಇದು ಬದಲಾದ ಜೀವನ ಶೈಲಿಯಲ್ಲಿ ಅನುರೂಪವಾಗಿ ಪ್ರತಿಬಿಂಬಿತವಾಗಿದೆ. ಪರಿಸ್ಥಿತಿಯೊಡನೆ ಹೊಂದಿಕೊಳ್ಳಲು ತರಬೇತಿಯು ಅವಶ್ಯವಾಗಿದೆ. ತರಬೇತಿಯು ಹೇಗೆ ಪ್ರತಿಯೊಬ್ಬನ ಜೀವನದಲ್ಲಿ ಎಲ್ಲಾ ವಿಷಯಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ ಎಂಬುದು ಎತ್ತಿ ತೋರಿಸುವದಾಗಿದೆ.

ಇದೇ ಪ್ರಕಾರ, ನಮ್ಮ ಗುರುಗಳು ನಮ್ಮ ಜೀವನಕ್ಕೆ ಒಂದು ಹೊಸ ಅರ್ಥ ಮತ್ತು ದಿಶೆಯನ್ನು ನೀಡಿದ್ದಾರೆ. ಬೇರೆ ಮಾತಿನಲ್ಲಿ ಹೇಳುವದಾದರೆ ಇದು ಇರುವಿಕೆಯನ್ನು ಜಾಗೃತಗೊಳಿಸುವದಾಗಿದೆ. ಇದು ಮುಂದುವರೆದು ಭೌತಿಕ ಅಸ್ತಿತ್ವದ ಮೇಲೆ ಪರಿಣಾಮ ಬೀರುವದು ಆರಂಭದಲ್ಲಿ ಇದು ದೈವಿಕತೆಯೆಡೆ ವಾಲಿದಂತಿರುವುದು. ಕಾಲ ಕಳೆದಂತೆ, ಜೀವನವು ಕ್ರಿಯೆ ಪ್ರತಿಕ್ರಿಯೆಗಳ ಪರಿಣಾಮವನ್ನು ಎದುರಿಸುವದು.

ಇದು ಪುನರಾವರ್ತಿತ ಜನ್ಮಗಳನ್ನು ಭೋಗಿಸುವದು. ತನ್ನದೇ ಆದ ಅಂತರ್ಜಾಲದ ನಿರ್ಮಾಣದಲ್ಲಿ ಮುಂದುವರೆಯುವದು. ತತ್ಪರಿಣಾಮವಾಗಿ ತನ್ನ ಸಮತೋಲನೆಯನ್ನು ಕಳೆದುಕೊಳ್ಳುವದು. ಅದು ಸೂಕ್ಷ್ಮದಿಂದ ಸ್ಕೂಲತೆಯ ಕಡೆ ಪರಿವರ್ತಿತವಾಗುವದು. ಇದು ಸೃಷ್ಟಿಯ ಆರಂಭದಿಂದ ನಡೆದು ಬಂದ ಸ್ವಯಂ ಅಭಿವೃದ್ಧಿಯಾಗಿದೆ. ಜೀವನವು ಆಧ್ಯಾತ್ಮಿಕತೆಯಿಂದ ಭೌತಿಕತೆಯ ಕಡೆ ಜಿಗಿದಂತಾಗಿದೆ. ಒಬ್ಬನು ಮೂಲ ಸ್ಥಿತಿಯನ್ನು ಪಡೆಯಲಿಚ್ಛಿಸಿದರೆ ಈ ಕ್ರಮವನ್ನು ವಿಪರ್ಯಸ್ತಗೊಳಿಸಬೇಕು. ನಮ್ಮ ಗುರುಗಳು ಹಾಕಿ ಕೊಟ್ಟಂತೆ ನಮ್ಮ ಸಾಧನೆಯಲ್ಲಿ ಇದೇ ನಮ್ಮ ಪ್ರಯತ್ನವಾಗಿದೆ. ಇದೇ ರೀತಿ ನಮ್ಮ ಪದ್ಧತಿಯು ನೈತಿಕತೆ ಮತ್ತು ಸದಾಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತದೆ. ಸಮಾಜವು ಈ ವಿಷಯದ ಬಗ್ಗೆ ತನ್ನದೇ ಗ್ರಹಿಕೆಯನ್ನು ಹೊಂದಿದೆ. ಇಲ್ಲಿ ನಾವು ನೈತಿಕತೆಯನ್ನು ಒಂದು ಸ್ಥಿತಿಯೆಂದು ಎಲ್ಲಿ ಎಲ್ಲಾ ವೃತ್ತಿಗಳು ಒಮ್ಮುಖವಾಗಿ ಯೋಗ್ಯ ಸದುದ್ದೇಶಕ್ಕಾಗಿ ತೊಡಗಿರುವವೋ ಅಂತಹ ಸ್ಥಿತಿ. ಅದೇ ಪ್ರಕಾರ ಸದಾಚಾರವು ಒಂದು ಮಾನಸಿಕ ಸ್ಥಿತಿಯಾಗಿದ್ದು ಗುರುವಿನ ಸಾಕ್ಷಾತ್ಕಾರಕ್ಕಾಗಿ ನಿರಂತರ ಅಶಾಂತವಾಗಿರುವಂತಹದ್ದು.

ನಮಗೆ ನಮ್ಮ ಪದ್ಧತಿಯ ಪರಿಚಯವಿದೆ. ನಾವೆಲ್ಲಾ ವಿಧಿಸಲಾದ ನಿಯಮಗಳನ್ನು ಅನುಸರಿಸುತ್ತಿದ್ದೇವೆ. ಇದರ ಜೊತೆಗೆ ವಾರದ ಸತ್ಸಂಗಗಳಲ್ಲಿ ಮತ್ತು ಇತರ ಸಮಾರಂಭಗಳಲ್ಲಿ ನಿಯಮಿತತನದಿಂದ ಹಾಜರಾಗುತ್ತೇವೆ. ಈಗ ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳೋಣ. “ನಮ್ಮ ಸಾಧನೆಯಲ್ಲಿ ನಾವೆಷ್ಟು ನೈಪುಣ್ಯತೆ ಮತ್ತು ಜ್ಞಾನವನ್ನು ಪಡೆದು ಮುಂದುವರೆದಿದ್ದೇವೆ”, ಈ ಪ್ರಶ್ನೆಗೆ ಉತ್ತರವು ತಾನೇ ಸಂಗ್ರಹಾಲಯವಾಗುವದು. ಇದರ ಶ್ರೇಣಿಯ ಒಂದು ತುದಿಯು ‘ಗೊತ್ತಿಲ್ಲ ದಿಂದ ಹಿಡಿದು ಮತ್ತೊಂದೆಡೆ ‘ಗುರುಗಳಿಗೆ ಗೊತ್ತು’ ಎಂದಾಗುವದು. ನಮ್ಮ ಪದ್ಧತಿಯಲ್ಲಿ ಸಾಮಾನ್ಯ ನಿಯಮಗಳಿದ್ದು ಆದಾಗ್ಯೂ ಇದರ ಸಾಧನೆಯು ವೈಯಕ್ತಿಕ ಮತ್ತು ಅವಶ್ಯಕತೆಗನುಸಾರವಾಗಿ ಇರುವದು. ಇದು ಓರ್ವ ವ್ಯಕ್ತಿ, ಯಾವನು ಜೀವನದ ಗುರಿಯನ್ನು ಹೊಂದಲು ಆಸಕ್ತನಾಗಿರುವನೋ ಅಂತಹವನಿಗೆ ಅನ್ವಯಿಸುವದು. ಇದು ವೈಯಕ್ತಿಕವೂ, ಸ್ವಸಾಮರ್ಥ್ಯದ ಮೇಲೆ ಅವಲಂಬಿಸಿದುದೂ ಆಗಿದೆ. ತನ್ನ ಜೀವನದ ಸಮಸ್ಯೆಯನ್ನು ಬಗೆಹರಿಸುವುದು ಅವನವನ ವೈಯಕ್ತಿಕ ಜವಾಬ್ದಾರಿಯೂ ಆಗಿದೆ. ಈ ಹಿಂದೆ ಕಾಣಿಸಿದಂತೆ, ನಾವು ತರಬೇತಿಯ ಪ್ರಾಮುಖ್ಯತೆಯನ್ನು ಅರಿತಿದ್ದೇವೆ. ಆದಾಗ್ಯೂ ಸಾಧನೆಯು ಅತ್ಯಾವಶ್ಯ. ತರಬೇತಿಯ ತತ್ವ :-

ನಮ್ಮ ಗುರುಗಳು ವಿವಿಧ ಸ್ಥಳಗಳಲ್ಲಿ ತರಬೇತಿಯ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ ಮತ್ತು ತರಬೇತಿಯನ್ನು ನೀಡಲು ಪ್ರಶಿಕ್ಷಕರನ್ನು ನೇಮಿಸಿದ್ದಾರೆ. ನಮ್ಮ ಪದ್ಧತಿಯಲ್ಲಿ ತರಬೇತಿಯು ಅದ್ವಿತೀಯವಾಗಿದೆ. ಇದು ಯಾವಾಗಲೂ ಒಬ್ಬನಿಂದ ಒಬ್ಬನಿಗೆ ಮಾತ್ರ. ಇದು ರೂಢಿಯಲ್ಲಿರುವ ತರಗತಿಯ ಪದ್ಧತಿಯಿಂದ ವಿಭಿನ್ನವಾಗಿದೆ. ಇದನ್ನು ಗುಂಪಿನಲ್ಲಿ ಕೈಗೊಳ್ಳಲಾಗುವದಿಲ್ಲ. ಇದು ಕೇವಲ ಪ್ರಾಣಾಹುತಿಯ ಮೂಲಕ ಆಗುವಂತಹದ್ದು. ಇದು ಆಂತರಿಕ ಮತ್ತು ಮೌನವಾಗಿದೆ. ಇದು ಕೇಂದ್ರಾಪಗಾಮಿಯಾಗಿದೆ. ಅಂದರೆ ತೀರ ಒಳಗಿನ ಕೇಂದ್ರದಿಂದ ಹೊರಗಿನ ಪರಿಧಿಯವರೆಗೆ ಇದೇ ಕಾರಣದಿಂದಾಗಿ ಆರಂಭದಲ್ಲಿ ಅಭ್ಯಾಸಿಗಳಿಗೆ ಸೂಕ್ಷ್ಮ ಬದಲಾವಣೆಗಳು ಅನಿಸಿಕೆಗೆ ನಿಲುಕುವದಿಲ್ಲ. ಕಾಲಕಳೆದಂತೆ ಒಬ್ಬನು ಕೇಂದ್ರಾಭಿಮುಖವಾಗಿ ವಿಸ್ತರಣೆಗೊಳ್ಳುವದನ್ನು ಗ್ರಹಿಸಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವದು. ಇದರ ಗುಣಮಟ್ಟ ಮತ್ತು ವೈಖರಿಯೂ ಸಹ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವದು. ಸಾಮಾನ್ಯವಾಗಿ ಇದರ ಪರಿಣಾಮವನ್ನು ಶಬ್ದಗಳಲ್ಲಿ ವ್ಯಕ್ತಪಡಿಸಲು ಕಷ್ಟವಾಗುವದು. ಅಂದರೆ ಅಲ್ಲಿ ಪರಿಣಾಮವಿಲ್ಲವೆಂದು ಅರ್ಥವಲ್ಲ. ನಿಜಕ್ಕೂ, ಅದು ಯಾವಾಗಲೂ ನಿಶ್ಚಿತವೂ, ಖಚಿತವೂ ಆಗಿ ಗ್ರಹಿಕೆಗೆ ಅತೀತವಾಗಿದೆ.

ಅನೇಕ ಅಭ್ಯಾಸಿಗಳು ತಪ್ಪು ಗ್ರಹಿಕೆಗೆ ಅವಕಾಶವನ್ನು ಕೊಡುವರು ಎಂಬುದನ್ನು ತಿಳಿಯುವದು ಗಮನಾರ್ಹ. ಅಭ್ಯಾಸಿಯು ನಮ್ಮ ಪದ್ಧತಿಯ ಪ್ರಕಾರ ಸಾಧನೆಯನ್ನು ಆರಂಭಿಸಿದ ಕೂಡಲೆ ತನ್ನ ಪ್ರಗತಿ ಮತ್ತು ಪರಿವರ್ತನೆಯ ಬಗ್ಗೆ ಯೋಚಿಸುತ್ತಾನೆ. ಇದು ಸ್ವಾಗತಾರ್ಹ. ಇದು ಪ್ರೋತ್ಸಾಹದಾಯಕ. ಇದು ನಮ್ಮ ಪದ್ಧತಿಯ ಪರಿಣಾಮವನ್ನು ಪ್ರತಿಬಿಂಬಿಸುವದಾಗಿದೆ. ಆರಂಭದ ಉತ್ಸುಕತೆಯು, ಅವನನ್ನು ಸಾಧನೆಯಗುಂಟ ಮುಂದೆ ಸಾಗಲು ಪ್ರೇರೇಪಿಸುತ್ತದೆ. ಅವನು ತನ್ನಷ್ಟಕ್ಕೆ ತಾನೇ ಎಲ್ಲಾ ಮಾಡುತ್ತಿರುವದಾಗಿ ಯೋಚಿಸುತ್ತಾನೆ. ಇದು ದ್ವಂದ್ವತೆಯ ಆರಂಭ. ಅವನು ವರ್ಷಗಟ್ಟಲೆ ತನ್ನ ವೈಯಕ್ತಿಕ ಸಾಧನೆಯನ್ನು ಮುಂದುವರೆಸುತ್ತಾನೆ. ಅವನು ವಾರದ ಸತ್ಸಂಗಗಳಿಗೆ ಹಾಜರಾಗುವದರ ಮೂಲಕ ತನ್ನ ಸಾಧನೆಗೆ ಪುಷ್ಟಿ ಕೊಡಲು ಪ್ರಯತ್ನಿಸುವನು. ಅವನು ಒಂದಾದ ಮೇಲೆ ಒಂದರಂತೆ ಸಮಾರಂಭಗಳಿಗೆ ಹಾಜರಾಗುತ್ತಾನೆ. ಅವನು ಮಹಾ ಸೇವೆಯನ್ನು ಸಲ್ಲಿಸುತ್ತಿರುವದಾಗಿ, ತನ್ನಷ್ಟಕ್ಕೆ ತಾನೇ ತಿಳಿಯುವನು. ಕ್ರಮವಾಗಿ, ಪ್ರಗತಿಯ ವಿಚಾರವು ಗಾಳಿಗೆ ತೋರಿದಂತಾಗುವದು. ಕೆಲವೂಮ್ಮೆ ಗುರಿಯು ದೃಷ್ಟಿಯಿಂದ ಕಣ್ಮರೆಯಾಗುವದು. ಪ್ರಶ್ನಿಸಿದ್ದಾದರೆ ಅವನು ತಾನು ಸಾಧನೆಯನ್ನು ನಿಯಮಿತತನದಿಂದ ಮಾಡುತ್ತಿರುವೆನೆಂದು ಸತ್ಸಂಗ, ಸಮಾರಂಭಗಳಿಗೆ ತಪ್ಪದೇ ಹಾಜರಾಗುತ್ತಿರುವೆನೆಂದು ಪ್ರತಿಪಾದಿಸುವನು. ನಿಸ್ಸಂದೇಹವಾಗಿ ಈ ಎಲ್ಲ ಕವಾಯತುಗಳು, ಪೂರಕವಾದ ಪಾತ್ರವನ್ನು ವಹಿಸುವವು. ಇದು ತರಬೇತಿ ಎನಿಸುವದೇ ಇಲ್ಲ. ಎಲ್ಲಾ ಸಮಯದಲ್ಲೂ ತರಬೇತಿ ಪಡೆಯುತ್ತಿರುವದಾಗಿ ಅವನು ತನ್ನಷ್ಟಕ್ಕೆ ತಾನೆ ಯೋಚಿಸುತ್ತಾನೆ.

ತರಬೇತಿಯ ಮಹತ್ವ :

ಅಭ್ಯಾಸಿಯು ತನ್ನ ವೈಯಕ್ತಿಕ ಸಾಧನೆಯನ್ನು ಸಾಕಷ್ಟು ಸಮಯದವರೆಗೆ ಮುಂದುವರೆಸಿದಾಗ ಭದ್ರ ನೆಲೆಯೂರುವನು. ಹೊಸ ಜಾಗೃತಿ ಮೂಡಿದಂತೆ ಅವನು ಅನುಭವಿಸುವನು. ಜೀವನಕ್ಕೆ ಒಂದು ಅರ್ಥವಿರುವದಾಗಿ ಅನಿಸುವದು. ಅವನು ಅನುಸರಿಸುತ್ತಿರುವ ಪದ್ಧತಿಯಲ್ಲಿ ಅಡಕವಾಗಿರುವ ಉದ್ದೇಶವನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡುವನು. ನಿಧಾನವಾಗಿ ಮತ್ತು ದೃಢವಾಗಿ, ಈ ಜೀವನಕ್ಕೆ ಒಂದು ನಿಶ್ಚಿತವಾದ ಗುರಿ ಇದೆಯೆಂಬ ತೀರ್ಮಾನಕ್ಕೆ ಬರುವನು. ಈ ರೀತಿಯಾಗಿ ಅವನ ಜೀವನದ ಧೈಯವು ನಿರ್ಧರಿತವಾಗುತ್ತದೆ. ಆರಂಭದಲ್ಲಿ ಇದು ಮುಸುಕಾಗಿ ಹಾಗೂ ಅಸ್ಪಷ್ಟವಾಗಿರುವದು. ಗುರಿಯ ಸ್ಪಷ್ಟತೆಯ ಬಗ್ಗೆ ಅವನಲ್ಲಿ ಡೋಲಾಯಮಾನವಾದ ಭಾವವಿರುವದು. ಇನ್ನೂ ಹೆಚ್ಚಿನ ಪ್ರಯತ್ನದೊಂದಿಗೆ ಅವನು ಅದನ್ನು ಹಿಂಬಾಲಿಸುವನು. ಅವನ ಪ್ರಯತ್ನದ ಪ್ರಾಮಾಣಿಕತೆಯು, ಅವನಿಗೆ ವಿಚಾರ ವಿನಿಮಯದ, ಮೇಲಿಂದ ಮೇಲೆ ಸ್ಪಷ್ಟಿಕರಣವನ್ನು ಹೊಂದುವ, ಸಾಹಿತ್ಯ ಲಭ್ಯತೆಯ ಅವಕಾಶವನ್ನು ಒದಗಿಸುವದು. ಅವನು ಗುರಿಯ ಸ್ಪಷ್ಟತೆಯ ಕಡೆಗೆ ಬರುವ ಒಲವನ್ನು ತೋರುವನು. ಇಂತಹ ಅವಸ್ಥೆಯೊದಗಿದಾಗ, ಅವನು ತರಬೇತಿಯ ಅರ್ಹತೆಯನ್ನು ಪಡೆಯುವನು. ಬೇರೆ ಮಾತಿನಲ್ಲಿ ಹೇಳುವದಾದರೆ, ಅವನಲ್ಲಿ ನಿಜವಾದ ಮಾನವ ಜೀವನದ ಗುರಿಯು ಪ್ರತಿಬಿಂಬಿಸತೊಡಗಿದಾಗ ತರಬೇತಿಗಾಗಿ ಕೈಗೆತ್ತಿಕೊಳ್ಳಲಾಗುವದು. ನಮ್ಮ ಪದ್ಧತಿಯು, ತರಬೇತಿಗೆ ಇದನ್ನು ಮೂಲಭೂತ ಅವಶ್ಯಕತೆಯೆಂದು ಪರಿಗಣಿಸುವದು. ತರಬೇತಿಯು ನಮ್ಮ ಗುರುಗಳ ವಿಶೇಷ ಕೃಪಾವರಣವೆಂಬುದನ್ನು ಅವನ ತಿಳುವಳಿಕೆಗೆ ತರಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಒಬ್ಬ ಪ್ರಶಿಕ್ಷಕನ ಮೂಲಕ ಒದಗಿಸಲಾಗುವದು. ಆದ್ದರಿಂದ ಒಬ್ಬ ಪ್ರಶಿಕ್ಷಕನ ಸಹಾಯ ಮತ್ತು ಮಾರ್ಗದರ್ಶನ ಅತ್ಯಾವಶ್ಯವಾಗಿದೆ. ನಮ್ಮ ಗುರುಗಳು ವಿವಿಧ ಕಡೆ ಅನೇಕ ಪ್ರಶಿಕ್ಷಕರನ್ನು ನೇಮಿಸಿದ್ದಾರೆ. ಅವನಿಗೆ ಪರಿಸ್ಥಿತಿಯು ಮೋಜಿನದಾಗಿ ಕಾಣಿಸುತ್ತದೆ. ಕೆಲವು ವೇಳೆ ಒಂದು ಯೋಚನೆಯು ಅವನಲ್ಲಿ ಸುಳಿಯುತ್ತದೆ. ಇದರಿಂದಾಗಿ ಉದ್ದೇಶವನ್ನು ಈಡೇರಿಸಲು ಅವನು ಪ್ರತಿಯೊಬ್ಬ ಪ್ರಶಿಕ್ಷಕನನ್ನು ಆಗ್ಗಾಗೆ ಸಂದರ್ಶಿಸುವ ವಿಚಾರವನ್ನು ಹೊಂದುತ್ತಾನೆ.ಅವನ ಈ ಕೃತ್ಯಕ್ಕೆ ಅವನಲ್ಲಿ ಸತರ್ಕ ನಿರ್ಧಾರವು ಸಿಗಬಹುದು ಇಲ್ಲವೇ ಸಿಗದೇ ಇರಬಹುದು. ಅವನು ಉರುಳುವ ಕಲ್ಲಿನಂತೆ ಆಗುವ ಸಾಧ್ಯತೆಯಿದೆ. ಈ ಅವರೋಹಣವನ್ನು ತಪ್ಪಿಸುವದಕ್ಕಾಗಿ, ತನ್ನ ತರಬೇತಿಗಾಗಿ ಒಬ್ಬ ಪ್ರಶಿಕ್ಷಕನನ್ನು ಆಯ್ದುಕೊಳ್ಳುವದು ಉತ್ತಮ. ತನ್ನ ಒಲವಿಗೆ ತಕ್ಕಂತೆ ಪ್ರಶಿಕ್ಷಕನನ್ನು ಆಯ್ದುಕೊಳ್ಳುವದು ಅಭ್ಯಾಸಿಗೆ ಸೇರಿದ್ದು. ಹಾಗೆ ಮಾಡಲು ಅವನು ಸ್ವತಂತ್ರನಾಗಿದ್ದಾನೆ. ನಮ್ಮ ಪದ್ಧತಿಯೂ ಸಹ ಅವನಿಗೆ ಈ ಸ್ವಾತಂತ್ರ್ಯದ ಖಾತರಿಯನ್ನು ನೀಡಿದೆ. ಒಮ್ಮೆ ಅವನು ಪ್ರಶಿಕ್ಷಕನನ್ನು ಆಯ್ದ ನಂತರ ಅವನು ಕೆಲವು ವಿಷಯಗಳನ್ನು ಗಮನಿಸಬೇಕಾಗಿದೆ. ಉದಾ:- ಪ್ರಶಿಕ್ಷಕನನ್ನು ತನಗೆ ಬೇಕಾದಾಗ ಸಂಪರ್ಕಿಸಲು ಅನುಕೂಲವಾದ ಸ್ಥಳದಲ್ಲಿ ನೆಲೆಸಿದ್ದಾನೆಯೇ, ಪ್ರಶಿಕ್ಷಕನು ತರಬೇತಿ ನೀಡುವ ಇಚ್ಛೆಯುಳ್ಳವನಾಗಿದ್ದಾನೆಯೇ ಇತ್ಯಾದಿ. ಸಂಕ್ಷಿಪ್ತವಾಗಿ ಹೇಳುವದಾದರೆ ಮೊದಲೇ ಅಭ್ಯಾಸಿಯು ಪ್ರಶಿಕ್ಷಕನನ್ನು ಸಾಧ್ಯವಿರುವ ಎಲ್ಲಾದೃಷ್ಟಿಕೋನಗಳಿಂದ ಮಾಹಿತಿಯನ್ನು ಗ್ರಹಿಸಬೇಕು. ಪೂರ್ತಿಯಾಗಿ ಮನವರಿಕೆಯಾದ ನಂತರವೇ ತರಬೇತಿಯನ್ನು ಪಡೆಯಲು ತನ್ನನ್ನು ತಾನು ಅವನ ಅಧೀನಗೊಳಿಸಬೇಕು ಮತ್ತು ಪ್ರಶಿಕ್ಷಕನನ್ನು ಮಾರ್ಗದರ್ಶಿಯೆಂದು ತಿಳಿಯಬೇಕು/ಉಪಚರಿಸಬೇಕು.

ತರಬೇತಿಯ ಕ್ರಮ :-

ಸ್ವಾನುಭವದಿಂದ ಹೇಳುವದಾದರೆ ತರಬೇತಿಯ ಕ್ರಮವು

ಕೆಳಗಿನಂತಿದೆ.

  1. ಸಿದ್ಧತಾವಸ್ಥೆ:  ಮೂಲಭೂತವಾದ ಪ್ರಾಥಮಿಕ ಕ್ರಿಯೆ.
  2. ತರಬೇತಿಯ ಅವಸ್ಥೆ: ಹೊಸ ಜಾಗೃತಿಯನ್ನು ಪ್ರವೇಶಪಡಿಸುವದು.
  3. ಉತ್ಕರ್ಷಣಾವಸ್ಥೆ: ಆಧ್ಯಾತ್ಮಿಕ ಮರುಹೊಂದಾಣಿಕೆಯನ್ನು ತರುವದು.

ಆಧ್ಯಾತ್ಮಿಕ ಪಯಣದಲ್ಲಿ ಅಭ್ಯಾಸಿಯೂ ಸೂಕ್ಷ್ಮ ಮತ್ತು ಮೂಲಭೂತ ಬದಲಾವಣೆಗಳನ್ನು ಎದುರಿಸುತ್ತಾನೆ. ಪರಿವರ್ತನೆಯು ಕ್ರಮವಾಗಿ ಮತ್ತು ಸಹಜ ರೀತಿಯಲ್ಲಿ ಆಗುವುದು.

ನಮ್ಮ ಗುರುಗಳು ಪರಿವರ್ತನೆಯ ವಿವಿಧ ಹಂತಗಳನ್ನು ಅರ್ಥಗರ್ಭಿತವಾಗಿ ಕೆಳಗಿನಂತೆ ಸೂಚಿಸಿದ್ದಾರೆ

  1. ಧರ್ಮದ ಕೊನೆಯೇ ಆಧ್ಯಾತ್ಮದ ಆರಂಭ.
  2. ಆಧ್ಯಾತ್ಮದ ಕೊನೆಯೇ ಸತ್ಯತೆಯ ಆರಂಭ.
  3. ಸತ್ಯತೆಯ ಕೊನೆಯೇ ನಿಜವಾದ ಆನಂದ.

ಇದು ಅಭ್ಯಾಸಿಯ ಅನಿಸಿಕೆಗೆ ಬರುವ ಸೂಕ್ಷ್ಮ ಬದಲಾವಣೆಗಳನ್ನು ಎತ್ತಿ ತೋರಿಸುವ ನವೀನ ರೀತಿಯಾಗಿದೆ. ಸೂಕ್ಷ್ಮ ಬದಲಾವಣೆಗಳಿಂದ. ಆದ ಪರಿವರ್ತನೆಯು ಅಭ್ಯಾಸಿಯಲ್ಲಿ ಕ್ರಿಯಾತ್ಮಕ ಮನೋಭಾವ ಮತ್ತು ಧೋರಣೆಗಳ ರೂಪದಲ್ಲಿ ಪ್ರತಿಬಿಂಬಿತವಾಗುತ್ತದೆ. ತರಬೇತಿಯು ಸೂಕ್ಷ ಬದಲಾವಣೆ ಮತ್ತು ತತ್ಪರಿಣಾಮವಾದ ಪರಿವರ್ತನೆಯನ್ನು ಒದಗಿಸುತ್ತದೆ. ಕೇವಲ ವೈಯಕ್ತಿಕ ಸಾಧನೆಯೊಂದೇ ಇಷ್ಟ ಪರಿವರ್ತನೆಯನ್ನು ತರಬಲ್ಲುದೇ? ಎಂಬ ಪ್ರಶ್ನೆ ಉದ್ಭವಿಸಬಹುದು. ಒಳ್ಳೆಯದು, ವೈಯಕ್ತಿಕ ಸಾಧನೆಯು ಪ್ರಾಥಮಿಕ ಅವಶ್ಯಕತೆಯಾಗಿದ್ದು ಇದು ಯಾವಾಗಲೂ ಪೂರಕವಾಗಿರುತ್ತದೆ. ಇದರ ಆರಂಭಿಕ ಉಪಯುಕ್ತತೆಯನ್ನು ಅಲ್ಲಗಳೆಯಲಾಗದು. ಒಮ್ಮೆ ಅಭ್ಯಾಸಿಯು ತರಬೇತಿಗೊಳಗಾದಲ್ಲಿ ಅವನು ಸಾಧನೆಯನ್ನು ಶೌರ್ಯ ಮತ್ತು ಸಾಹಸಗಳಿಂದ ಅನುಸರಿಸಬೇಕಾಗಿದೆ. ಅವನು ಮಾರ್ಗದರ್ಶಿಯೊಂದಿಗೆ ಪೂರ್ಣಪ್ರಮಾಣದಲ್ಲಿ ಸಹಕರಿಸಬೇಕು. ಅಭ್ಯಾಸಿಯ ಅವಶ್ಯಕತೆಯನುಸಾರ ಅವನ ತರಬೇತಿ ಕ್ರಮ ಮತ್ತು ದಿಶೆಯನ್ನು ನಿರ್ಧರಿಸುವದು ಮಾರ್ಗದರ್ಶಿಗೆ ಸೇರಿದ್ದು, ತರಬೇತಿಯು ಹೇಗೆ ಕೆಲಸ ಮಾಡುತ್ತದೆಂಬುದನ್ನು ವಿವರಿಸುವದು ಸ್ವಲ್ಪ ಕಷ್ಟಕರ. ಇದು ಆಯಾ ವ್ಯಕ್ತಿಗೆ ನಿರ್ದಿಷ್ಟವಾದುದಾಗಿದ್ದು, ಇದನ್ನು ಸಾಮಾನ್ಯ ಸ್ಥರದಲ್ಲಿ ವಿವರಿಸಲಾಗದು. ಸಾಮಾನ್ಯ ತಿಳುವಳಿಕೆಗಾಗಿ ಅದನ್ನು ಕೆಳಗಿನಂತೆ ಸಾಮಾನ್ಯ ರೂಪದಲ್ಲಿ ನಮೂದಿಸಲಾಗಿದೆ.

ಒಬ್ಬ ಅಭ್ಯಾಸಿಯು ಸಾಕಷ್ಟು ಸಮಯದವರೆಗೆ ಶುದ್ಧಿಕರಣ ಕ್ರಮಕ್ಕೆ ಒಳಪಡುತ್ತಾನೆ. ಅಧೋಮುಖ ಪ್ರವೃತ್ತಿಗಳನ್ನು ಸರಿಪಡಿಸಲಾಗುವದು. ಅವಶ್ಯಕತೆಯನುಸಾರ ಆಗಿಂದಾಗ್ಗೆ ಸಲಹೆಗಳನ್ನು ನೀಡಲಾಗುತ್ತದೆ. ಅವನು ಆತ್ಮಶೋಧನೆಯ ಮನೋವೃತ್ತಿಯನ್ನು ಅಭಿವೃದ್ಧಿಗೊಳಿಸಿಕೊಳ್ಳಲು ಉತ್ತೇಜಿಸಲಾಗುವದು. ಮಾಹಿತಿಯನ್ನು ಗ್ರಹಿಸಲು ಮತ್ತು ಉತ್ತೇಜನ ನೀಡಲು ಮೇಲಿಂದ ಮೇಲೆ ವಿಚಾರ ವಿನಿಮಯಕ್ಕೆ ಆಸ್ಪದ ನೀಡಲಾಗುವದು. ಪರಿಗಣನೆಗಾಗಿ ಅವನನ್ನು ನಿರಂತರ ನಿರೀಕ್ಷಣೆ- ಯಲ್ಲಿಡಲಾಗುವದು. ಆರಂಭದಲ್ಲಿ ಅವನ ಮನಸ್ಸಿನ ಮತ್ತು ಇಂದ್ರಿಯಗಳ ನಿಯಂತ್ರಣವೇ ಉದ್ದೇಶವಾಗಿರುವದು. ತರಬೇತಿಯು ಮುಂದುವರಿದಂತೆ ತನ್ನ ವೈಯಕ್ತಿಕ ಸಾಧನೆಯಲ್ಲಿ ಗುಣಾತ್ಮಕ ಬದಲಾವಣೆಯು ಕಂಡುಬರುವದು. ನಿಯಮಗಳ ಅರ್ಥದಲ್ಲಿ ಬದಲಾವಣೆಯನ್ನು ಗ್ರಹಿಸುವನು. ಅವನಲ್ಲಿ ವಿಧೇಯತೆ ಮತ್ತು ನಿಯಮಿತತನಗಳು ಅಭಿವೃದ್ಧಿಗೊಳ್ಳುವವು. ಅವನ ವಿಚಾರಶಕ್ತಿಯು ಉತ್ತೇಜಿತಗೊಳ್ಳುವದು. ಸಾಧನೆಯಲ್ಲಿ ಅವನ ಅಭಿರುಚಿ ತೀವ್ರಗೊಳ್ಳುವದು. ನಿಯಮಗಳು ಅರ್ಥಗರ್ಭಿತವೆನಿಸುವವು. ಒಂದಾದ ನಂತರ ಒಂದು ತಂತುಗಳು ಜಾಗೃತಗೊಳ್ಳುವವು ಮತ್ತು ಒಳ ನೋಟವನ್ನು ಪಡೆಯುವವು. ದಿನನಿತ್ಯದ ಆದ್ಯತೆಗಳ ಸಂಖ್ಯೆಯು ಕುಗ್ಗುವದು. ಜೀವನದ ಗುರಿಯೊಂದೇ ತನಗೆ ಸಂಬಂಧಿಸಿದುದೆಂದು ಮುಂದುವರೆಯುವನು. ಅವನು ದಿನ ನಿತ್ಯದ ಕೆಲಸಗಳಲ್ಲಿ, ಸಮಾಜದಲ್ಲಿ ಐಕ್ಯತೆಯ ಭಾವದಿಂದಿರುವನು. ಅದೇ ವೇಳೆಗೆ ಅವನು ಇತರೆ ಎಲ್ಲವುಗಳಿಂದ ಬೇರೆಯಾದಂತೆ ಭಾವಿಸುವನು. ಗುರುಗಳೆಡೆ ಅವನು ಸೆಳೆಯಲ್ಪಡುತ್ತಿರುವಂತೆ ಅನುಭವಿಸುವನು. ಪರಿಸ್ಥಿತಿಯು ಕ್ರಿಯಾತ್ಮಕವಾಗುವದು. ಅದು ‘ಪಕ್ವತೆಯ’ ಕಡೆಗೆ ಧಾವಿಸುವದು. ಇದರ ಪರಿಣಾಮವು ಗುರುಗಳ ಇಚ್ಛೆಗೆ ಅವನು ಅಧೀನನಾದಂತೆ. ಈ ಸ್ಥಿತಿಯಲ್ಲಿ ಅವನಿಗೆ ತಾನು ಜೀವನ ಪರ್ಯಂತ ಮಾಡಿದ ಪ್ರಯತ್ನಗಳೆಲ್ಲಾ ವ್ಯರ್ಥವೆಂಬ ಅರಿವು ಮೂಡುವದು. ಬೇರೆ ಮಾತಿನಲ್ಲಿ ಹೇಳುವದಾದರೆ ಇದೇ ಯೋಗ್ಯ ತರಬೇತಿಯಾಗಿದ್ದು ಒಬ್ಬನನ್ನು ಗಂತವ್ಯದೆಡೆಗೆ ಒಯ್ಯುವದು. ನಮ್ಮ ಗುರುಗಳೇ ಈ ರೀತಿ ತರಬೇತಿಯನ್ನು ಸುರಕ್ಷಿತಗೊಳಿಸಿದ್ದಾರೆ. ಪ್ರಶಿಕ್ಷಕನೆ ಇದರ ಕ್ರಮವನ್ನು ನಿರ್ದೇಶಿಸುವನು. ಸಂಕ್ಷಿಪ್ತವಾಗಿ ಹೇಳುವದಾದರೆ ತರಬೇತಿ ಪದ್ಧತಿಯ ಕಾರ್ಯವು ಸೂಕ್ಷ್ಮ ನಿಯಮವನ್ನೊಳಗೊಂಡಿದ್ದು; ಕಾರಣ ಮತ್ತು ಪರಿಣಾಮಗಳ ಸಿದ್ಧಾಂತವನ್ನೊಳಗೊಂಡಿದೆ.

ಮರು-ನೆನಹು :-

ನಾವು ಎಲ್ಲ ರೀತಿಯಿಂದ ಪರಿಪೂರ್ಣ ಗುರುಗಳನ್ನು, ಪದ್ಧತಿ ಮತ್ತು ರೀತಿಯನ್ನು ಹೊಂದಿದ್ದೇವೆಂಬುದು ಬೇರೆ ಹೇಳಬೇಕಾಗಿಲ್ಲ. ನಮ್ಮ ಸಾಧನೆಯಲ್ಲಿ ತರಬೇತಿಯು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆಂಬುದನ್ನು ಬೇರೆ ಒತ್ತಿ ಹೇಳಬೇಕಾಗಿಲ್ಲ. ನಮ್ಮ ಗುರುಗಳು ಈ ವಿಷಯಕ್ಕಾಗಿಯೇ ಒಂದು ಭಾಗವನ್ನು ನಿಗದಿಪಡಿಸಿದ್ದಾರೆ. (ಸತ್ಯೋದಯ, ಪುಟ-53) ಪೂಜ್ಯ ಭಾಯೀ ಸಾಹೇಬರು ತಮ್ಮ ಪುಸ್ತಕ ‘ಸಹಪಥಿಕನ ಕರೆ’ ಪುಟ 41ರಲ್ಲಿ ಒಂದು ನಿರ್ದಿಷ್ಟ ಪ್ರಬಂಧವನ್ನು ತಂದಿದ್ದಾರೆ. ಈಗ ಮರುನೆನೆಪಿಗೆ ತರಲು ಏನು ಉಳಿದಿದೆ? ಈ ಪ್ರಶ್ನೆಯು ಕಾರ್ಯಾಚರಣೆಗೆ ಸಂಬಂಧಿಸಿದ್ದು, ಇದು ಸಂದರ್ಭೋಚಿತವಾಗಿ ಉತ್ತರಿಸಲು ಕಷ್ಟಕರವಾಗಿದೆ. ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳುವವರೆಗೆ ಇದು ಕಷ್ಟಕರವೇ. ಅಂದರೆ ನೀವು ಎಂದಾದರೂ ವೈಯಕ್ತಿಕ ಸಾಧನೆಯಲ್ಲಿ ತರಬೇತಿಯನ್ನು ಅನ್ವಯಿಸುವದರ ಬಗ್ಗೆ ಚಿಂತಿಸಿದ್ದೀರಾ? ಇದು ಅತಿ ಮುಖ್ಯವಾಗಿದೆ. ಏಕೆಂದರೆ ತರಬೇತಿಯೊಂದೇ ಒಬ್ಬ ವ್ಯಕ್ತಿಯನ್ನು ಪ್ರಾಣಿಯ ಮಟ್ಟದಿಂದ ಮಾನವನ ಮಟ್ಟಕ್ಕೆ ಮತ್ತು ಅಲ್ಲಿಂದ ದೈವತ್ವದ ಮಟ್ಟಕ್ಕೆ ಏರಿಸುವದಾಗಿದೆ.