ವಾಸ್ತವಿಕವಾಗಿ ನೈಜ ಅಭ್ಯಾಸಿ ಎಂಬುದು ಎರಡು ಶಬ್ದಗಳನ್ನೊಳಗೊಂಡ ಒಂದು ಪದ ಸಮೂಹ. ಅಭ್ಯಾಸಿ ಮತ್ತು ಅದಕ್ಕೆ ಹೊಂದಿದ ವಿಶೇಷಣ. ಇದು ಎಪ್ರಿಲ್ 2001ರಿಂದ ಬಳಕೆಯಲ್ಲಿದೆ. ನಮ್ಮ ಸಮಾರಂಭಗಳ ಆಮಂತ್ರಣ ಪತ್ರಗಳಲ್ಲಿ ಕಾಣಿಸತೊಡಗಿದೆ. ಅಂತಿಮವಾಗಿ ರಾಯಚೂರಿನ ಸೆಮಿನಾರ್‌ನಲ್ಲಿ ಚರ್ಚೆಯ ವಿಷಯವಾಯಿತು. ಇದು ನಮ್ಮೊಂದಿಗೆ ಶಾಶ್ವತವಾಗಿರಲು ಬಂದಂತೆ ಕಾಣಿಸುತ್ತದೆ. ಇದನ್ನು ವಿಶ್ಲೇಶಿಸುವ ಪ್ರಯತ್ನ ಮಾಡೋಣ.

ಅಭ್ಯಾಸಿ ಎಂದರೆ ಉಚ್ಚ ಸ್ಥಿತಿಯನ್ನು ಹೊಂದಲು ಬಯಸುವವನು. ಇದೊಂದು ನಮ್ಮ ಗುರುಗಳಿಂದ ಕೊಡಲ್ಪಟ್ಟ ಸರಳ ವ್ಯಾಖ್ಯಾನ. ಇದು “ಅಭ್ಯಾಸಿ’ ಎಂದರೇನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಬೇರೆ ಶಬ್ದಗಳಲ್ಲಿ ಹೇಳುವದಾದರೆ, ಸಹಜ ಮಾರ್ಗದ ಅಭ್ಯಾಸಿಯು ಅಂತಿಮ ಸತ್ಯ(ಗುರು)ವನ್ನು ಸಾಕ್ಷಾತ್ಕರಿಸಿಕೊಳ್ಳುವದೇ ಅವನ ಗುರಿಯಾಗಿರುತ್ತದೆ. ಸಾಧನೆಯನ್ನು ಕೈಗೊಂಡು ನಿಯಮಗಳ ಪಾಲನೆಯನ್ನು ಮುಂದುವರೆಸುವನು. ಈ ವಿಧಾನವು ಮುಂದುವರೆಯುತ್ತಲೇ ಇರುತ್ತದೆ. ನಾನು ಸಾಧನೆ ಮಾಡುತ್ತಿದ್ದೇನೆಂಬ ಭಾವನೆ ಅಭ್ಯಾಸಿಗೆ ಎಲ್ಲ ಸಮಯಗಳಲ್ಲಿ ಇರುತ್ತದೆ. ನಿಸ್ಸಂದೇಹವಾಗಿ ಸಾಧನೆ ಮುಂದುವರೆಸುತ್ತಿದ್ದಾಗ್ಯೂ ಪದ್ಧತಿಯ ಸರಳತೆ ಅವನನ್ನು ಭ್ರಮೆಗೊಳಿಸುವದು. ತಾನು ತರಬೇತಿಯಲ್ಲಿ ಇದ್ದೇನೆಂಬ ಪ್ರಮುಖ ಅಂಶವನ್ನೇ ಅವನು ಮರೆತಿರುತ್ತಾನೆ.

ಸಾಕ್ಷಾತ್ಕಾರವನ್ನು ಕೇವಲ ಆಧ್ಯಯನದಿಂದಲೇ ಸಾಧ್ಯವಿಲ್ಲವೆಂದು ನಮ್ಮ ಸಾಹಿತ್ಯ ಸ್ಪಷ್ಟಪಡಿಸುತ್ತದೆ. ನಮ್ಮ ಸಾಧನೆಯು ಪ್ರಾಯೋಗಿಕ ದೃಷ್ಟಿಯಿಂದ ಆಧ್ಯಾತ್ಮಿಕ ತರಬೇತಿಯ ಅವಶ್ಯವಿದ್ದು, ನಾವು ಸಮರ್ಥ ಮಾರ್ಗದರ್ಶಕನನ್ನು ಹುಡುಕಬೇಕಾಗುತ್ತದೆ.

ಈಗ ನಮ್ಮ ಗುರುಗಳು ಸಲಹೆ ರೂಪದಲ್ಲಿ ಮಾರ್ಗದರ್ಶನ ಕೊಟ್ಟಿದ್ದಾರೆ. ಅಭ್ಯಾಸಿಯು ಗುರುವನ್ನು ಸಾಕ್ಷಾತ್ಕರಿಸಿಕೊಳ್ಳುವ ಜವಾಬ್ದಾರಿ ಇರುತ್ತದೆಂದು ಅದು ಸೂಚಿಸುತ್ತದೆ. ಜವಾಬ್ದಾರಿಯ ಅರುವನ್ನು ಹೊಂದಿದವನು ನೈಜ(Genuine) ಅಭ್ಯಾಸಿಯ ಅರ್ಹತೆ ಪಡೆಯುತ್ತಾನೆ. ಮಾರ್ಗದರ್ಶನವನ್ನು ಸ್ವೀಕರಿಸುವುದು ಅಥವಾ ಬಿಡುವುದು ನಮಗೆ ಬಿಟ್ಟುಕೊಡಲಾಗಿದೆ. ಯೋಚಿಸುವ ಮತ್ತು ಕಾರ್ಯಪ್ರವೃತ್ತರಾಗಿರುವ ಸ್ವಾತಂತ್ರ ನಮಗೆ ಸೇರಿದ್ದಾಗಿದೆ. ನಮ್ಮನ್ನು ನಾವು ತಿದ್ದಿಕೊಳ್ಳುವದೆಂದಷ್ಟೇ ಇದರ ಅರ್ಥ. ನಾವೆಲ್ಲ ಸಾಧನಾ ಸಂಬಂಧದಲ್ಲಿ ರೂಪಗೊಳ್ಳುವ ಸ್ಥಿತಿಯಲ್ಲಿದ್ದುದರಿಂದ ಸ್ವಾತಂತ್ರವಿರುವುದು ಸಮಂಜಸವಾಗಿಯೇ ಇದೆ. ಅಭ್ಯಾಸಿಗೆ ಉಚ್ಚ ಸ್ಥಿತಿಯ ಹಂಬಲವಿದ್ದರೆ, ವಾಸ್ತವಿಕ ಅಥವಾ ನೈಜ ಅಭ್ಯಾಸಿಯು ತಾನು ಕೈಗೆತ್ತಿಕೊಂಡಿರುವ ಕೆಲಸವನ್ನು ಪೂರ್ಣಗೊಳಿಸುವ ಜವಾಬ್ದಾರಿಯ ಅರಿವು ಹೊಂದಿರುತ್ತಾನೆ. ಜವಾಬ್ದಾರಿಯು ಸ್ವಯಂ ಪ್ರೇರಿತವಾಗಿದ್ದು, ಯಾವುದೇ ಒತ್ತಡದಿಂದಲ್ಲ. ಅದು ವೈಯಕ್ತಿಕ ಆಯ್ಕೆಯಾಗಿರುತ್ತದೆ.

ಗುರುಗಳ ಅತ್ಯುಚ್ಚ ಸ್ಥಿತಿಯನ್ನು ಹೊಂದಬೇಕೆನ್ನುವದೇ ಅಭ್ಯಾಸಿಯ ಗುರಿಯಾಗಿರುತ್ತದೆ. ನಮ್ಮೆಲ್ಲರಿಗೂ ಒಂದು ಬಗೆಯ ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆ ಇರುವದರಿಂದ ಆಧ್ಯಾತ್ಮಿಕ ಸಾಧನೆಯನ್ನು ತದ್ವಿರುದ್ಧವಾಗಿ ತಿಳಿದುಕೊಳ್ಳುವ ಹಾಗು ವ್ಯಾಖ್ಯಾನಿಸುವ ಸಾಧ್ಯತೆ ಇದೆ. ನಮ್ಮ ಗುರುಗಳು ವರ್ಣಿಸುವದಕ್ಕಿಂತ ಕಡಿಮೆ ಮಟ್ಟದಲ್ಲಿ ತೆಗೆದುಕೊಂಡಿದ್ದಾದರೆ ಅದು ನೈಜ ಅಭ್ಯಾಸಿಯ ಅರ್ಥಕ್ಕೆ ವಿರುದ್ಧವಾಗುವದು.

ಆಧ್ಯಾತ್ಮದ ಕ್ಷೇತ್ರದಲ್ಲಿ ನಮ್ಮ ಗುರುಗಳು ವಿಶ್ವತವಾದ ಕೆಲಸ(ಸಂಶೋಧನೆ)ವನ್ನು ಮಾಡಿದ್ದಾರೆ. ವಿಫುಲವಾದ ಸಾಹಿತ್ಯ ಲಭ್ಯವಿದೆ. ಸಹಜಮಾರ್ಗ ಪದ್ಧತಿಯ ಯೋಗಿಕ ಸಾಧನೆ ಅಂತಹ ಕೆಲಸಕ್ಕಾಗಿಯೇ ಇದೆ. ಅಭ್ಯಾಸಿಯು ಸಾಧನೆಯನ್ನು ಸಂಶೋಧನಾ ವಿಷಯವೆಂದು ಪರಿಗಣಿಸಬೇಕೆಂದು ನಿರೀಕ್ಷಿಸಲಾಗಿದೆ. ಸತ್ಯತೆ, ವಿಶ್ವಪ್ರೇಮ, ಶುದ್ಧತೆ, ಸರಳತೆ ಮತ್ತು ಶಾಂತತೆಯಂತಹ ಅನೇಕ ತತ್ವಗಳು ಸಂಶೋಧನಾ ವಿಷಯಗಳಾಗಿವೆ. ಇವೆಲ್ಲವುಗಳ ಮೂಲ ಗುರುಗಳಲ್ಲದೆ ಮತ್ತಾರೂ ಅಲ್ಲ. ಒಂದೇ ತತ್ವ ತೆಗೆದುಕೊಂಡರೂ (ಏಕ ತತ್ವ ಚಿಂತನ), ಅದರ ಮೂಲ ಅದೇ ಅಂತಿಮ ಸತ್ಯ (ಗುರು). ತತ್ವ ಅಥವಾ ಗುಣ ವಿಶೇಷಗಳನ್ನು ಸಂಶೋಧನೆಯ ವಿಷಯಗಳೆಂದು ತೆಗೆದುಕೊಳ್ಳುವ ಬದಲು ಗುರುವನ್ನೇ ಅನ್ವೇಷಣೆಯ ವಿಷಯವನ್ನಾಗಿ ಆರಿಸಿಕೊಂಡು ವಸ್ತು ನಿಷ್ಠೆಯನ್ನಾಗಿರಿಸಬೇಕು. ನಮ್ಮ ಗುರುಗಳ ಮೇಲಿನ ಶ್ರದ್ಧೆ ಮತ್ತು ಅಚಲ ನಿರ್ಧಾರದಿಂದ ನಾವು ಸಂಶೋಧನೆಯನ್ನು ಕೈಗೆತ್ತಿಕೊಂಡಿರುವದರಿಂದ ಅದು ಸುಲಭ ಸಾಧ್ಯವಾಗುವದು. ಅವನು ನಮ್ಮ ಹೃದಯದಲ್ಲಿ ನೆಲೆಸಿರುವನು. ಅಭ್ಯಾಸಿ ಮತ್ತು ಮಾರ್ಗದರ್ಶಕನ ನಡುವೆ ಒಂದು ಬಗೆಯ ಬಾಂಧವ್ಯ ಬೆಳೆಯುವದು. ಅದು ವ್ಯಕ್ತಿಗತ ಮತ್ತು ವೈಯಕ್ತಿಕವಾಗಿ ಉಳಿಯುವದು. ಅಭ್ಯಾಸಿ (ಸಂಶೋಧಕ) ಮತ್ತು ಮಾರ್ಗದರ್ಶಿ (ಗುರು) ನಡುವಣ ಈ ಪ್ರಕರಣ ಮಾರ್ಗದರ್ಶಕನು ನಮ್ಮಲ್ಲಿ ವಿಶ್ವಾಸವಿಡುವಷ್ಟು ಮುಂದುವರೆಯಬೇಕು. ಆಗ ಅವನು ನೈಜ ಅಭ್ಯಾಸಿಯಾಗುವನು. ನೈಜ ಅಭ್ಯಾಸಿ ಜವಾಬ್ದಾರಿಯನ್ನು ಹೊಂದಿದವನಾಗಿರುತ್ತಾನೆ. ಅವನು ತನ್ನ ಹೊಣೆಯನ್ನು ನಿರ್ಲಕ್ಷಿಸಿದರೆ ತಪ್ಪಿತಸ್ಥನಾಗುವನು. ಅದು ಶಿಕ್ಷಾರ್ಹವಾಗುವದು. ದೈವತ್ವಕ್ಕೆ ಅಪರಾಧದ ವಿಷಯವಾಗಿ ಕಾಳಜಿಯಿರುತ್ತದೆ. ನಮ್ಮ ಪದ್ಧತಿಯ ವೈಶಿಷ್ಟ್ಯವೆಂದರೆ ತಪ್ಪಿನಿಂದ ಪಾರಾಗಲು ಹತ್ತನೇಯ ನಿಯಮದಡಿ ದಾರಿಯೊಂದಿದೆ.

ಸಾಧನೆ ಕೈಗೊಂಡ ನೈಜ ಅಭ್ಯಾಸಿ ನಿರಂತರ ಕಲಿಯಲು ಹಾಗೂ ಜ್ಞಾನಾರ್ಜನೆ ಮಾಡುವ ಪ್ರಯತ್ನದಲ್ಲಿರುತ್ತಾನೆ. ಶಾಲೆಗೆ ಹೋಗುವ ಮಕ್ಕಳಂತೆ ಸತ್ಸಂಗದಲ್ಲಿ ಹಾಜರಿ ಹಾಕುವದೊಂದೇ ಅಲ್ಲ. ಪದ್ಧತಿಯ ಪರಿಣಾಮ ಮತ್ತು ಸಫಲತೆಯ ಬಗ್ಗೆ ಮನವರಿಕೆ ಮಾಡಿಕೊಳ್ಳುವದನ್ನು ಬೆಳೆಸಿಕೊಳ್ಳಬೇಕು. ವ್ಯಕ್ತಿಯೊಬ್ಬ ನೈಜ ಅಭ್ಯಾಸಿಯಾಗದೇ ಇರಬಹುದು, ಆದರೆ ವಿಶ್ವಾಸಾರ್ಹತೆಯ ನೈಜತೆ ಇರುತ್ತದೆ. “ಎಲ್ಲವೂ ಇಲ್ಲವೇ ಯಾವುದೂ ಇಲ್ಲ” ಎಂಬುವ ತತ್ವ ಇಲ್ಲಿ ಅನ್ವಯಿಸುವದಿಲ್ಲ. ಅಭ್ಯಾಸಿಯ ನೈಜತೆಯ ಪ್ರತಿಶತ ಅಭ್ಯಾಸಿಯಿಂದ ಅಭ್ಯಾಸಿಗೆ ವ್ಯತ್ಯಾಸವಾಗಿರುತ್ತದೆ. ಪ್ರಸ್ತುತ ಶೀರ್ಷಿಕೆಯು ನಮ್ಮ ಗುರುಗಳು, ತರಬೇತಿಯ ಪದ್ಧತಿಯನ್ನು ಎಷ್ಟೊಂದು ಸುಂದರವಾಗಿ ರಚಿಸಿದ್ದಾರೆಂಬುದು ತೋರಿಸುತ್ತದೆ. ನಮ್ಮ ಗುರುಗಳ ಹೇಳಿಕೆಯಂತೆ ತಮ್ಮ ಸಹಾಯ ತಾವೇ ಮಾಡಿಕೊಳ್ಳುವವರಿಗೆ ದೇವರು ಸಹಾಯ ಮಾಡುತ್ತಾನೆ. ಸದ್ಯದ ಅವಶ್ಯಕತೆಯೆಂದರೆ ತಮ್ಮನ್ನು ತಾವು ಬದಲಾವಣೆಗೆ ಒಳಪಡಿಸಿಕೊಂಡು ಸದಾವಕಾಶವನ್ನು ಉಪಯೋಗಿಸಿಕೊಳ್ಳಬೇಕು. ಸೆಮಿನಾರಿನ ಉದ್ದೇಶ ಅಭ್ಯಾಸಿಗಳನ್ನು ನೈಜ ಮತ್ತು ನೈಜವಲ್ಲದವರೆಂಬ ವರ್ಗೀಕರಣ ಮಾಡಿ ಅವರನ್ನು ವಿಭಜನೆ ಮಾಡುವದಕ್ಕಲ್ಲ. ನಮ್ಮ ಸಾಧನೆಯಲ್ಲಿ ಪ್ರಮಾಣೀಕರಿಸುವ ಅಥವಾ ಪದವಿಯನ್ನೀಯುವ ಪ್ರಮೇಯ ಉದ್ಭವಿಸುವದಿಲ್ಲ.

ನಾವೆಲ್ಲರೂ ಗುರುಗಳ ಉದ್ದೇಶವನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದೇವೆಂಬುದು ನಿಜವಾಗಿಯೂ ಸಂತಸವನ್ನೀಯುವ ಕ್ಷಣ. ನಾವು ಸಹಜ ಮಾರ್ಗದ ಅಭ್ಯಾಸಿಗಳಾಗಿರುವುದು ನಮ್ಮ ಅದೃಷ್ಟ. ನಾವು ನೈಜ ಅಭ್ಯಾಸಿಗಳಾಗಲು ಪ್ರೋತ್ಸಾಹಿತ ಮತ್ತು ವಿಶ್ವಾಸಭರಿತರಾಗೋಣ.