1. ಜನರು ಗೊಂದಲದ ಗೂಡು ಆಗಿದ್ದಾರೆ. ಒಂದು ವಿಚಾರವನ್ನು ( ಅರ್ಥಾತ್ ಗುರುವಿನ ವಿಚಾರವನ್ನು) ತೆಗೆದುಕೊಂಡು ಅದನ್ನು ಬಲಪಡಿಸತಕ್ಕದ್ದು. ನಿರರ್ಥಕ ಮಾತುಗಳನ್ನಾಡುವುದನ್ನು ನಿಲ್ಲಿಸಬೇಕು. ಗುರುವನ್ನಲ್ಲದೆ ಬೇರೆ ವ್ಯಕ್ತಿಗಳ ವಿಚಾರಕ್ಕೆ ಅಸ್ಪದ ಕೊಡಕೂಡದು. ನೀನು ಕೂಡ ಈ ಕೆಲಸದಲ್ಲಿ ಅವರಿಗೆ ಸಹಾಯ ಮಾಡಬೇಕು. ವಿಚಾರದ ಪಕ್ವತೆಯು ನಿನ್ನ ಹೊಣೆಗಾರಿಕೆಯಾಗುವುದು. ಯಾರಾದರೂ ಅದಕ್ಕೆ ವಿರುದ್ಧವಿದ್ದರೆ , ಅವರಿಗೆ ಬೇರೆ ಮನೆಯನ್ನು ( ನೆಲೆಯನ್ನು)  ನೋಡಿಕೊಳ್ಳಲು ಹೇಳಬೇಕು. ಇದು ಸಂಸ್ಥೆಯ ತಳಪಾಯ.AB II VOL I P 57
  2. ಆಧ್ಯಾತ್ಮಿಕತೆಯನ್ನು ಕರುಣಿಸಲು ನನ್ನ ಗುರುಗಳಂತಹ ಅತ್ಯುನ್ನತ ಪ್ರತಿಭಾವಂತ ಮಾರ್ಗದರ್ಶಿಗೆ ಬಹಳ ಕಾಲ ಹಿಡಿಯುವದಿಲ್ಲ. ಅಭ್ಯಾಸಿಯ ರೂಪಣಕ್ಕಾಗಿಯೆ ಬಹಳಷ್ಟು ಸಮಯ ಬೇಕಾಗುವುದು.VR I 94-95.
  3. ತನ್ನ ಆಧ್ಯಾತ್ಮಿಕ ತರಬೇತಿ ವಿಧಾನಗಳಿಗಾಗಿ ನಿಬಂಧನೆಗಳನ್ನು ಹಾಕಬಾರದು. ಏಕೆಂದರೆ, ಅಭ್ಯಾಸಿಗೆ ಯಾವುದು ಒಳ್ಳೆಯದೆಂಬುದು ಶಿಕ್ಷಕನಿಗೆ ಗೊತ್ತು.VR I 16
  4. ಶಿಸ್ತು ಸಮರ್ಪಣದ ಪ್ರಾರಂಭಿಕ ಸೋಪಾನVR I 100
  5. ವಿಗ್ರಾಹಾರಾಧನೆ ಎಂದರೆ :-ಅ) ಮನುಷ್ಯನು ತನ್ನ ಚಟಗಳ ಅಧೀನನಾಗಿದ್ದರೆ.

    ಬ) ಅಸ್ತಿತ್ವದಲ್ಲಿರುವ ಒಂದು ವಸ್ತುವನ್ನು ಕಲ್ಪಿಸಿದರೂ

    ಚ) ಒಬ್ಬನು ತನ್ನ ಕುಟುಂಬ ಮತ್ತು ಮಕ್ಕಳನ್ನು ಪ್ರೀತಿಸಿದರೂ

    ದ) ಯಾವುದೇ ಭೌತಿಕ ವಸ್ತುವಿನಲ್ಲಿ ಆಸಕ್ತಿ ಹೊಂದಿರುವುದು.

    ಇದನ್ನೆಲ್ಲ ಹೇಗೆ ನಿರಾಸಗೊಳಿಸಬಹುದು? ವಿಚಾರವು ಇಂತಹ ಯಾವ ಸಂಸ್ಕಾರಗಳನ್ನು ಗ್ರಹಿಸದಿದ್ದಲ್ಲಿ ಇದು ಸಾಧ್ಯವಾಗುತ್ತದೆ. VR II 212

  6. ಮಡಿವಂತಿಕೆಯೆಂದರೆ ಒಬ್ಬನು ತನ್ನ ಮುಂದೆ ದಾರಿಯನ್ನು ಅಡ್ಡಗಟ್ಟುವ ಒಂದು ಗೋಡೆಯನ್ನು ನಿಲ್ಲಿಸಿಕೊಂಡಂತೆ ಎಂದು ನಾನು ಬಗೆಯುತ್ತೇನೆ.VR II 236.
  7. ಸಹಜಮಾರ್ಗ ಪದ್ಧತಿಯಲ್ಲಿ ಮಾರ್ಗದರ್ಶಿಯು ತನ್ನ ಶಕ್ತಿಯಿಂದ ಅಭ್ಯಾಸಿಯ ಕೆಳಮುಖದ ಪ್ರವೃತ್ತಿಗಳನ್ನು ದುರ್ಬಲಗೊಳಿಸುವನು. ಇದರಿಂದ ಅವು ತಾವಾಗಿಯೇ ಭಗವದಭಿಮುಖವಾಗುವವು. ಮನಸ್ಸಿನ ಈ ಸ್ಥಿತಿಯು ಚೈತನ್ಯದ ಉನ್ನತ ಸ್ತರಕ್ಕೆ ಸಂಬಂಧಪಟ್ಟಿದೆ. ಮೊದಲಿನದು ನಿಮ್ನ ಸ್ತರಕ್ಕೆ. ಇದೇ ತತ್ವವೇ ಆಧ್ಯಾತ್ಮಿಕ ತರಬೇತಿಯ ತಳಹದಿಯಾಗಿದೆ.TM 15
  8. ಪ್ರಾಪಂಚಿಕ ಹಾಗೂ ಸಾಂಸಾರಿಕ ಜೀವನದ ಕಷ್ಟಗಳನ್ನು ಕುರಿತು ನಮ್ಮ ಗುರುಗಳು ಹೀಗೆ ಹೇಳುತ್ತಿದ್ದರು. “ ನಮ್ಮ ಮನೆಯು ಸಮಾಧಾನ-ತಿತಿಕ್ಷೆಗಳ ಶಿಕ್ಷಣ ಭೂಮಿಯಾಗಿದೆ. ಗೃಹಸ್ಥ ಜೀವನದ ವಿಪತ್ತುಗಳನ್ನು ಮೌನವಾಗಿ ಸಹಿಸುವುದೇ ನಮಗೆ ಎಲ್ಲಕ್ಕಿಂತಲೂ ಶ್ರೇಷ್ಠ ತಪಸ್ಸು. ಆದುದರಿಂದ ಎಲ್ಲ ಪ್ರಸಂಗಗಳಲ್ಲಿಯೂ ನಾವು ಮಾಡಬೇಕಾದ ಕಾರ್ಯವೆಂದರೆ ಕ್ರೋಧ ಶೋಕಗಳ ಭಾವನೆಗಳಿಗೆಡೆಗೊಡದೆ ಧೈರ್ಯವನ್ನು ತಾಳಿ ನಮ್ಮದೇ ತಪ್ಪೆಂದು ತಿಳಿದು ಶಾಂತ ಮನಸ್ಸಿನಿಂದ ಸಹಿಸಿಕೊಳ್ಳಬೇಕು. ಅರಣ್ಯದ ಏಕಾಂತ ವಾಸವೂ ಜಗತ್ತಿನ ಎಲ್ಲ ವ್ಯಾಪಾರಗಳಿಂದ ದೂರವಾಗಿರುವುದು ಕೆಲವರಿಗೆ ಸಹಿಷ್ಣುತೆ-ಸಮಾಧಾನಗಳನ್ನು ಬೆಳೆಸುವ ಸಾಧನಗಳಾಗಿರಹುದು. ಆದರೆ ನಮಗೆ ಇಷ್ಟ ಮಿತ್ರರ ಮೂದಲಿಕೆಗಳೆ ಮಿಗಿಲಾದ ತಪಸ್ಸೂ ಯಶಸ್ಸಿನ ನಿಶ್ಚಿತ ಸಾಧನಗಳೂ ಆಗಿವೆ.RD 24
  9. ಮಿತತ್ವವೆಂದರೆ ಎಲ್ಲ ಇಂದ್ರೀಯ-ಸಂವೇದನೆಗಳಲ್ಲಿ ಹಾಗೂ ಶಕ್ತಿಗಳಲ್ಲಿ ಸಮತ್ವವನ್ನು ಕಾಪಾಡಿಕೊಂಡು ಹೋಗುವುದು; ಹೆಚ್ಚು ಕಡಿಮೆಗಳಿಲ್ಲದಂತೆ ಆಯಾ ಕಾರ್ಯಗಳಿಗೆ ಆಯಾ ಸಮಯದಲ್ಲಿ ಸ್ವಾಭಾವಿಕವಾಗಿ ಬೇಕಾದಷ್ಟನ್ನೇ ಮನಸ್ಸಿನ ಮೇಲೆ ಸ್ವಲ್ಪವೂ ಪರಿಣಾಮ ಮಾಡಿಕೊಳ್ಳದೆ ಉಪಯೋಗಿಸುವುದು.RD 33
  10. ನಿಜವಾದ ಸಾಕ್ಷಾತ್ಕಾರವು ಸಾಧನ ಕ್ಷೇತ್ರದಲ್ಲಿ ತರಬೇತಿ ಹೊಂದುವುದರಿಂದ ಕೈಗೂಡುವುದಲ್ಲದೆ ಜ್ಞಾನವಾಗಲಿ ಪಾಂಡಿತ್ಯವಾಗಲಿ ಯಾವ ಸಹಾಯವನ್ನೂ ನೀಡಲಾರವು.RD 37
  11. ಉಚ್ಚ ಸ್ಥಿತಿಗಳನ್ನು ಹೊಂದಲು ಕೇವಲ ಯೌಗಿಕ ಪ್ರಾಣಾಹುತಿಯ ಪದ್ಧತಿಯಿಂದಲ್ಲದೆ ಆಧ್ಯಾತ್ಮಿಕ ತರಬೇತಿಯು ಅನ್ಯಥಾ ಸಾಧ್ಯವಿಲ್ಲವೆಂಬುದನ್ನು ಇಲ್ಲಿ ನಿಮಗೆ ಧೃಢವಾಗಿ ಹೇಳಬಲ್ಲೆ.RD 46
  12. ನನ್ನ ಜೀವನ ಸಮಯದಲ್ಲಿ ನೀವು ಪಡೆದ ಸಿದ್ಧಿಗಳು ನಾನು ಗತಿಸಿದ ನಂತರ ಬೆಲೆಯುಳ್ಳವುಗಳಾಗುವವು. ಎಂಬುದನ್ನು ಕೂಡಾ ನಾನು ಭರವಸೆ ಕೊಡಬಲ್ಲೆ. ಆದರೆ ಈಗ ಅದನ್ನು ಅಲಕ್ಷಿಸಿ ನಾನು ಈ ಭೌತಿಕ ಜಗತ್ತಿನಿಂದ ನಿರ್ಗಮಿಸಿದ ನಂತರವೂ ನನ್ನೊಡನೆ ಪ್ರೇಮ ಬೆಳೆಸಿ ಅದನ್ನು ಪಡೆಯಬಹುದೆಂಬ ವಿಚಾದದಲ್ಲಿ ನೀವಿದ್ದುದಾದರೆ, ಆಗ ಅದು ಕಬ್ಬಿಣದ ಕಡಲೆಯಾದೀತು.VR II 50
  13. ಆದುದರಿಂದ ಜನಸಾಮಾನ್ಯರ ಆಧ್ಯಾತ್ಮಿಕ ವಿಕಸಕ್ಕಾಗಿ ಇಂದಿನ ಪ್ರಾಪಂಚಿಕ ಜೀವನಕ್ಕೆ ಹೊಂದಿಕೊಳ್ಳುವಂತಹ ಸರಿಯಾದ ಆಧ್ಯಾತ್ಮಿಕ ತರಬೇತಿಯು ಅಗತ್ಯವಾಗಿದ್ದು, ದುರ್ದೈವದಿಂದ ಇದುವರೆಗೂ ಅದನ್ನು ಕಡೆಗಣಿಸಲಾಗಿದೆ.RD 56
  14. ತರಬೇತಿಯ ಮುಖ್ಯ ಉದ್ದೇಶವೆಂದರೆ, ಮನುಷ್ಯನು , ಸಾಧ್ಯವಾದಷ್ಟು ಹೆಚ್ಚು ದೈವೀಗುಣಗಳನ್ನು ಆತ್ಮಗತಮಾಡಿಕೊಳ್ಳುತ್ತ ಹೋಗಬೇಕು.RD 53
  15. ಆಂತರಿಕ ಶುಧ್ಧತೆಯ ಕಡೆಗೆ , ಅರ್ಥಾತ್ ಚಕ್ರಗಳ ಶುಧ್ಧೀಕರಣದ ಕಡೆಗೆ, ಗಮನ ಕೊಡುತ್ತ ಇಂದ್ರಿಯಗಳ ಹಾಗೂ ಇತರ ಶಕ್ತಿಗಳ ಕಾರ್ಯದಲ್ಲಿ ಪೂರ್ಣ ಮಿತತ್ವದಿಂದ ಮುಂದುವರಿಯುವದೇ ಸರಿಯಾದ ತರಬೇತಿಯಾಗಿದೆ.RD 59.
  16. ಮಗು ಮಾತನಾಡಲು ಅಥವಾ ವಿಚಾರ ಮಾಡಲು ಆರಂಭಿಸುವವರೆಗೆ, ಅದೇ ತಾನೇ ರೂಪುಗೊಳ್ಳುತ್ತಿರುವ ಅದರ ಸ್ವಭಾವದ ಮೇಲೆ ತಂದೆ-ತಾಯಿಗಳ ಹಾಗೂ ಇತರರ ಸೂಚನೆಗಳು ಆ ಎಳೆಯ ಜೀವನದ ಅಂಗವಾಗಿ ಹೋಗುತ್ತದೆ. ಮಗು ಸೂಚನೆಗಳ ಅರ್ಥದಂತೆ ಆಗಿಬಿಡುತ್ತದೆ.AB I P 1
  17. ಮಗುವಿನ  ತಿಳಿವಳಿಕೆ ಅಥವಾ ವಿಚಾರಶಕ್ತಿಯು ಬೆಳೆದಿರದಿದ್ದರೂ ತಂದೆ-ತಾಯಿಗಳು ಮಾತನಾಡಿದ ಪರಿಣಾಮವನ್ನು ಅದು ಗ್ರಹಿಸಬಲ್ಲದು. ಆದುದರಿಂದ ಎಳೆಯ ಮಕ್ಕಳೆದುರಿಗೂ ಮಾತನಾಡುವಾಗ ತುಂಬಾ ಎಚ್ಚರ ವಹಿಸಬೇಕು.AB I P2
  18. ನಾನು ಮಾನವ ಜೀವಿಗಳನ್ನು ನೋಡಿದಾಗಲೆಲ್ಲ ಅವರ ವೃತ್ತಿಗಳು ಊರ್ಧ್ವ ಮುಖವಾಗಿ ಅರ್ಥಾತ್ ಭಗವಂತನ ಕಡೆಗೆ ಇರುವುದರ ಬದಲು ಅಧೋಮುಖವಾಗಿ ಪ್ರಪಂಚದ ಕಡೆಗೆ ಇರುವುದನ್ನು ಕಾಣುತ್ತೇನೆ.AB I P97
  19. ನಾನು ಅವನಿಗೆ ಎಚ್ಚರಿಕೆ ಕೊಡುತ್ತಿದ್ದೇನೆ ಮತ್ತು ಸೂಚನೆಗಳನ್ನು ಕೊಡುತ್ತಿದ್ದೇನೆ. ಕೇವಲ ಆಧ್ಯಾತ್ಮಿಕತೆಯೊಂದೇ ಕೆಲಸಕ್ಕೆ ಬಾರದು; ಕೆಲವೇ ಜನರು ಬಾಹ್ಯ ಅಭಿವ್ಯಕ್ತಿಯಿಂದ ಆಂತರಿಕ ಸ್ಥಿತಿಯನ್ನು(ಸಾಮರ್ಥ್ಯವನ್ನು) ಕಂಡುಕೊಳ್ಳುತ್ತಾರೆ. ಮಾತಿನಲ್ಲಿ ಆಕರ್ಷತೆಯಿರಬೇಕು. ಸೂಕ್ಷ್ಮ ನಮ್ಯತೆಯಿರಬೇಕು, ಮಾರ್ದವವಿರಬೇಕು. ಇದನ್ನು ನಾನು ಎಲ್ಲರನ್ನೂ ಉದ್ದೇಶಿಸಿ ಹೇಳುತ್ತಿದ್ದೇನೆ. ಒಬ್ಬನಲ್ಲಿ ಆಧ್ಯಾತ್ಮಿಕವಾಗಿ ಯಾವ ಕೊರತೆಯಿಲ್ಲದಿದ್ದರೂ ಅವನಲ್ಲಿ ಈ ಅಭಿವ್ಯಕ್ತಿಯು ಅಪೇಕ್ಷಿತ ಮಟ್ಟದಲ್ಲಿಲ್ಲದಿದ್ದರೆ ನಾನು ಅವನನ್ನು ಪರಿಪೂರ್ಣನೆಂದು ಪರಿಗಣಿಸುವುದಿಲ್ಲ.AB II VOL II P 121
  20. ವಸ್ತುಗಳ ಸಂಪೂರ್ಣ ಜ್ಞಾನಕ್ಕಾಗಿ ಅದನ್ನು ಬೇರೆಯವರಿಗೆ ವಿವರಿಸಲು ಹೊರಡುವ ಮೊದಲೇ ಅದಕ್ಕೆ ಆವಶ್ಯಕವಾಗಿರುವ ಮಾನಸಿಕ ಸ್ಥಿತಿಯನ್ನು ಪ್ರಾಯೋಗಿಕವಾಗಿ ಹೊಂದಿದವನಾಗಿರಬೇಕು.VR II 80
  21. ಪ್ರಾಪಂಚಿಕ ದುಖ:ಗಳ ಬಗೆಗೆ ಹೇಳುವುದಾದರೆ ಭೌತಿಕ ಶರೀರವನ್ನು ಹೊಂದಿದ ಯಾವನೂ ಅವುಗಳಿಂದ ಮುಕ್ತನಾಗಿಲ್ಲ. ನಮ್ಮ ಅವತಾರಗಳು ಕೂಡ ದುಖ:ದಿಂದ ಮುಕ್ತರಾಗಿರಲಿಲ್ಲ. ಜನ್ಮಜನ್ಮಾಂತರಗಳಲ್ಲಿ ನಾವು ಹೊಂದುವ ದುಖ:ಗಳನ್ನು ಕೊನೆಗೊಳಿಸಬೇಕು. ದುಖ:ದಲ್ಲಿರುವವರೊಂದಿಗೆ ನಮ್ಮನ್ನು ನಾವು ಹೋಲಿಸಿಕೊಂಡಾಗ ನಮ್ಮ ದುಖ:ವು ಕಡಿಮೆ ಪ್ರಮಾಣದ್ದೆಂಬ ಅನುಭವವಾಗುವುದೆಂದು ನನಗೆ ವಿಶ್ವಾಸವಿದೆ. ನಮ್ಮ ಅಂತರ್ಯದಲ್ಲಿ ಯಾವುದೋ ಒಂದರ ಪ್ರಭುತ್ವವಿದ್ದು ಅದು ದುಖ:ವನ್ನು ಗಂಭೀರಗೊಳಿಸುವುದಿಲ್ಲ.VR II 229
  22. ಯೊಗ್ಯ ಪ್ರಶಿಕ್ಷಕನು ಯೌಗಿಕ ಪ್ರಾಣಾಹುತಿಯ ಶಕ್ತಿಯಿಂದ ಅಭ್ಯಾಸಿಯ ಮನಸ್ಸಿನ ನಿಮ್ನ ವೃತ್ತಿಗಳನ್ನು ದುರ್ಬಲಗೊಳಿಸಿ ಆತನ ಹೃದಯಾಂತರಾಳದಲ್ಲಿ ದೈವೀ ಪ್ರಕಾಶದ ಬೀಜವನ್ನು ಬಿತ್ತುತ್ತಾನೆ. ಈ ವಿಧಾನದಲ್ಲಿ ಪ್ರಶಿಕ್ಷಕನು ದೈವಿಕವಾದ ಅನಂತ ಶಕ್ತಿಯ ಬೆಂಬಲ ಪಡೆದ ತನ್ನ ಸಂಕಲ್ಪಶಕ್ತಿಯನ್ನು ಉಪಯೋಗಿಸುತ್ತಾನೆ.VR II 149.
  23. ವೃಷ್ಟಿ ಮನಸ್ಸಿನಿಂದ ಬಂದ ಈ ಇಚ್ಛಾಶಕ್ತಿಯು ನಮ್ಮ ದಾರಿಯನ್ನು ಸುಗಮಗೊಳಿಸುವುದು. ವ್ಯಕ್ತಿಗತ ಮನಸ್ಸಿನಿಂದ ಹಲವೊಂದು ವಸ್ತುವನ್ನು ಹೊರದೂಡಬೇಕೆಂಬ ವಿಚಾರವನ್ನು ನಾವು ಇಟ್ಟುಕೊಳ್ಳುವೆವು . ದಿನದಿನಕ್ಕೂ ಅದರ ಬಲವು ಹೆಚ್ಚುವುದು; ಹಾಗೂ ನಮ್ಮ ಮನಸ್ಸಾದರೂ ಮೇಲಕ್ಕೇರಬೇಕೆಂಬ ವಿಚಾರದಿಂದ ಬಲವತ್ತರವಾಗುತ್ತ ಹೋಗಿ ಕೆಟ್ಟ ತರಬೇತಿಯ ಪರಿಣಾಮವನ್ನು ಕಳೆದುಕೊಳ್ಳುವುದು. ಇದು ಎರಡು ಪ್ರಯೋಜನಗಳನ್ನು ಸಾಧಿಸುವುದು; ಮೊದಲನೆಯದಾಗಿ ಇದು ವ್ಯಷ್ಟಿ ಮನಸ್ಸನ್ನು ಶುದ್ಧಮಾಡುವುದು; ಎರಡನೆಯದಾಗಿ ಮಾನವ ಜೀವನದ ಗುರಿಯನ್ನು ಸಮೀಪಗೊಳಿಸುವುದು.ERY 7
  24. ನಿರೀಕ್ಷಣೆಯು ಒಂದು ತರಹದ ತೀವ್ರ ಸ್ಮರಣೆಯಗಿದ್ದು ಆಧ್ಯಾತ್ಮಿಕತೆಗೆ ತುಂಬ ಪ್ರಯೋಜನಕಾರಿಯಾಗಿದೆ.VR II 236
  25. ಸಂಪೂರ್ಣ ಯಶಸ್ಸಿಗೆ ಆತ್ಮವಿಲಯನವೇ ಏಕಮಾತ್ರ ಮಾರ್ಗ, ಅದನ್ನು ಸತತವಾಗಿ ಸಾಧಿಸುತ್ತ ಮುಂದುವರಿಯಬೇಕು, ಪ್ರೇಮ ಹಾಗೂ ಭಕ್ತಿಗಳು ಸಹಜವಾಗಿಯೇ ಅದರ ಅನಿವಾರ್ಯ ಲಕ್ಷಣಗಳಾಗಿವೆ. ತನ್ನನ್ನು ತಾನು ಲಯಗೊಳಿಸಿದಾಗಲೇ ಪಡೆಯಲು ಯೊಗ್ಯವಾದ ನಿಜವಾದ ಜೀವನವೂ ಜೀವನೋದ್ದೇಶವೂ ಆದ ಶಾಶ್ವತ ಅಸ್ತಿತ್ವದ ಕಡೆಗೆ ಹೆಜ್ಜೆಯಿಡುತ್ತಾನೆ. ಗುರುವಿನ ಜೀವಿತಕಾಲದಲ್ಲಿ ಆತನಿಂದ ಶಕ್ತಿಯು ನಿರಂತರವಾಗಿ ಹರಿಯುತ್ತಲೇ ಇರುವುದರಿಂದ ಇದು ಮತ್ತಷ್ಟು ಸುಲಭ ಪ್ರಾಪ್ಯವಾಗುವುದು. ಅದರ ನಂತರ ಲೋಕೋಕ್ತಿಯಂತೆ “ನಂದಿದ ಜ್ವಾಲೆಯಲ್ಲಿ ತನ್ನನ್ನು ತಾನು ಸುಟ್ಟುಕೊಳ್ಳುವುದು ಪ್ರತಿಯೊಂದು ಪತಂಗದ ಸಾಮರ್ಥ್ಯವಲ್ಲ.VR II 196
  26. ಒಂದು ವೇಳೆ ಪ್ರಶಿಕ್ಷಕನನ್ನು ಸ್ವಲ್ಪ ನಂಬಿ ಆತನಿಂದ ಲಾಭವಾಗುವುದೆಂದೆನಿಸಿದರೆ, ಇದು ನಿಜವಾದ ಜಿಜ್ಞಾಸುವಿನ ಹೃದಯದಲ್ಲಿ ಶ್ರಧ್ಧೆಯನ್ನು ಬೆಳೆಸಲಾರಂಭಿಸುತ್ತದೆ.VR II 241
  27. ದೇವರಿಗೆ ಮನಸ್ಸೆಂಬುದು ಇಲ್ಲವಾದ ಕಾರಣ, ಪರತತ್ತ್ವದೊಂದಿಗೆ ಸಂಬಂಧ ಸ್ಥಾಪಿಸಲು ವಿಕಾಸ ಹೊಂದಿರುವ  ಮಾನವ ಮನಸ್ಸಿನ ಅವಶ್ಯಕತೆಯಿದೆ. ಈ ವಿಷಯದಲ್ಲಿ ಇನ್ನೂ ಸ್ವಲ್ಪ ಹೇಳಬಯಸುತ್ತೇನೆ. ಒಂದು ವೇಳೆ , ದೇವರು ಅಥವಾ ಬ್ರಹ್ಮಕ್ಕೆ ಮನಸ್ಸಿದೆ ಎಂದು ಭಾವಿಸಿದರೆ , ಅಲ್ಲಿ ಮನಸ್ಸಿನ ಕಾರ್ಯವೂ ನಡೆಯಲೇಬೇಕು. ಆಗ ಆತನೂ ಕೂಡ  ತನ್ನ ಕರ್ಮಫಲಗಳನ್ನು ಅನುಭವಿಸಬೇಕಾಗುವುದು. ಆದರೆ ಅವನು ಎಲ್ಲಾ ಪರಿಣಾಮಗಳಿಂದ ಮುಕ್ತನೆಂದು ಎಲ್ಲರೂ ಒಪ್ಪುತ್ತಾರೆ. ಇದರ ಅರ್ಥ , ಅಲ್ಲಿ ಮನಸ್ಸಿನ ಕಾರ್ಯ ಇಲ್ಲವೆಂದಾಯಿತು. ಎಂದರೆ , ಕೊನೆಗೂ ಅಲ್ಲಿ ಮನಸ್ಸೂ ಇಲ್ಲ ಎಂದಾಯಿತು. ನನ್ನ ಅಭಿಪ್ರಾಯದಲ್ಲಿ ಈ ವೈಚಾರಿಕ ಗೊಂದಲ ದೇವರ ಬಗೆಗಿನ ನಾನಾ ಕಲ್ಪನೆಗಳಿಂದಲೇ ಉಂಡಾಗಿರಬೇಕು. ಈ ಕಲ್ಪನೆಯಂತೆ ದೇವರ ಬಗೆಗೆ ಮಾತನಾಡುವಾಗ ದೇವರು ಎಂದರೆ, ತನ್ನ ಮೂಲ ಅವಸ್ಥೆಯಲ್ಲಿ ಎಲ್ಲದರ ಆಚೆಗೆ , ಶಕ್ತಿ, ಕ್ರಿಯೆ ಅಥವಾ ಪ್ರಜ್ಞೆಗಿಂತಲೂ ಆಚೆಗಿರುವ ಬ್ರಹ್ಮ ಎಂದು ನನ್ನ ಇಂಗಿತ.VR II 216
  28. ನಮ್ಮ ಪ್ರಾಪಂಚಿಕ ಜೀವನವನ್ನು ನಡೆಸಲು ಅವಶ್ಯಕವಾಗಿರುವ ಎಲ್ಲಾ ವಸ್ತುಗಳಿಂದಲೂ ನಾವು ವಂಚಿತರಾಗಿ ಅದರ ಸ್ಥಳದಲ್ಲಿ ಹೊಂದಲು ಯೋಗ್ಯವಾದ ಆಂತರಿಕ ಜೀವನವು ದಯಪಾಲಿಸಲ್ಪಟ್ಟರೆ ನಾವು ಯಾವ ರೀತಿಯಲ್ಲಿಯೂ ಹಾನಿಗೊಳಗಾಗುವುದಿಲ್ಲ.VR II 220
  29. ನನ್ನ ಬಳಿ ತರಬೇತಿಯಲ್ಲಿರುವ  ಸಂಗಡಿಗರ ವಿಷಯದಲ್ಲಿ ಹೇಳುವುದಾದರೆ, ನಾನು ಅವರನ್ನು ನನ್ನ ಶಿಷ್ಯರೆಂದು ಭಾವಿಸಿದರೆ, ನನ್ನ ಗುರುಗಳ ಅನುಗ್ರಹದ ಪವಾಡ ಸದೃಶ ಪರಿಣಾಮದಿಂದಾಗಿ ಕರುಣೆಯಿಂದ ಕತ್ತರಿಸಿ ಹಾಕಲ್ಪಟ್ಟ ಸಂಬಂಧದ ಕೊಂಡಿಯನ್ನು ನಾನೇ ದೃಢಪಡಿಸಿದ ಅಪಕೀರ್ತಿಗೆ ಗುರಿಯಾಗುವುದಿಲ್ಲವೇ? ಅವರಿ ಶಿಷ್ಯರೆಂಬ ವಿಚಾರ ನಾನು ಗುರು ಎಂಬ ಭಾವನೆಯನ್ನು ಹುಟ್ಟಿಸಬಹುದು. ಅಂತಹ ಸ್ಥಿತಿಯಲ್ಲಿ ನನ್ನಿಂದ ಕೊಡಲಾಗುವ ತರಬೇತಿಯು ಎಂದಿಗೂ ಶುದ್ಧ ಹಾಗೂ ಅಹಂಕಾರದ ಭಾವನೆಯಿಂದ ಮುಕ್ತವಾಗಿರಲಾರದು. ಅಲ್ಲದೆ, ನನಗೆ ಅವಮಾನವನ್ನುಂಟುಮಾಡುವ ಅಥವಾ ನನ್ನ ಅಂತಸ್ತನ್ನು ನ್ಯೂನಗೊಳಿಸುವ ಯಾವುದೇ ವಿಷಯವು ನನ್ನಲ್ಲಿ ಕೋಪವನ್ನು ಕೆರಳಿಸಬಹುದು. ದೇವರ ಕೃಪೆಯಿಂದ ಇದು ನಮ್ಮ ಸಂಸ್ಥೆಯಿಂದ ಎಂದೆಂದಿಗೂ ದೂರವೇ ಇರಲಿ.VR II 70-71.
  30. ನಮ್ಮ ಸಾಧನೆಗೆ ನಿಜವಾಗಿಯೂ ಆವಶ್ಯಕವಾದುದೆಂದರೆ ಮಾಯೆ, ಮೋಹ ಅಥವಾ ಭೌತಿಕ ಮಮತೆಯ ಭಾವನೆಗಳ ನಿಗ್ರಹ. ದ್ವೇಷ ತಿರಸ್ಕಾರಗಳು ಪ್ರೀತಿಯ ತೀರ ವಿರುದ್ಧವಾಗಿದ್ದು ಮಮತೆಯು ಕೂಡ ಅದೇ ಗುಂಪಿಗೆ ಸೇರಿದೆ. ಅಥವಾ ಇನ್ನೂ ಸರಿಯಾದ ಅರ್ಥದಲ್ಲಿ , ಅದೇ ವಸ್ತುವಿನ ಇನ್ನೊಂದು ತುದಿಯಾಗಿದೆ. ಈ ರೀತಿ, ಮಮತೆಗೆ ಬದಲಾಗಿ ಅದಕ್ಕೆ ವಿರುದ್ಧವಾದ ತಿರಸ್ಕಾರ ದ್ವೇಷಗಳನ್ನಿರಿಸಿಕೊಳ್ಳುವುದು ತೀರ ಅಸಂಗತವಾಗಿದ್ದು ಮನುಷ್ಯನು ಮಾಯೆ-ಮೋಹಗಳ ಭಾವನೆಯಿಂದ ಎಂದಿಗೂ ಮುಕ್ತವಾಗಲಾರನು. ಅದರ ಸರಿಯಾದ ಪ್ರತಿಸ್ಥಾಪನೆಯೆಂದರೆ ಆಕರ್ಷಣೆ ಹಾಗೂ ತಿರಸ್ಕಾರಗಳಿಂದ ಮುಕ್ತವಾದ ಕರ್ತವ್ಯ ಮಾತ್ರ.VR II 89
  31. ಪ್ರಾಣಾಹುತಿಯನ್ನು ಸಂಕಲ್ಪ ಶಕ್ತಿಯ ಮೂಲಕ ಕೊಡಲಾಗುತ್ತಿದ್ದು ಅದು ಯಾವಾಗಲೂ ಪರಿಣಾಮಕಾರಿಯಾಗಿರುತ್ತದೆ. ಒಂದು ವೇಳೆ ಆಧ್ಯಾತ್ಮಿಕ ಪ್ರಶಿಕ್ಷಕನು ತನ್ನ ಸಂಕಲ್ಪ ಶಕ್ತಿಯಿಂದ ಅಭ್ಯಾಸಿಯ ಮನಸ್ಸಿನ ರೂಪಣಕ್ಕಾಗಿ ಬಳಸಿದ್ದಾದರೆ, ಅದು ಬಹು ಪರಿಣಾಮಕಾರಿ ಹಾಗೂ ಅತ್ಯುತ್ತಮ ಫಲಕೊಡುತ್ತದೆ.VR II 148.
  32. ನೀವು ಸ್ವತ: ವೇದನೆಯ ಸಾಗರವಾಗುವಷ್ಟು ನಿಮ್ಮ ಹೃದಯಗಳು ಅದರಿಂದ ತುಂಬಿ ತುಳುಕಿದಾಗ ಮಾತ್ರ ನನ್ನ ಶ್ರಮಕ್ಕೆ ಫಲ ದೊರಯುವುದು.VR I 6.
  33. ಕಷ್ಟ-ಕಾರ್ಪಣ್ಯಗಳನ್ನು ಕುರಿತು ನನ್ನವೇ ಆದ ಕೆಲವು ಅನುಭವಗಳಿವೆ. ಅವುಗಳ ಮೇಲೆ ವಿಚಾರ ಮಾಡಿದಾಗ ದುಖ: ವ್ಯಾಧಿಗಳು ಪ್ರಚ್ಛನ್ನ ರೂಪದಲ್ಲಿ ನಿಸರ್ಗದ ವರವೆಂಬ ನಿಶ್ಚಯಕ್ಕೆ ಬಂದಿದ್ದೇನೆ. ಅದು ಸಂಸ್ಕಾರಗಳ ಪರಿಣಾಮದಿಂದ ಮುಕ್ತರಾಗಲು ನಮಗೆ ಸಹಾಯ ಮಾಡುವುದು. ಅವುಗಳ ಅವಶೇಷಗಳಿಂದ ನಾವು ಮುಕ್ತರಾದಾಗ ಆಧ್ಯಾತ್ಮಿಕ ಪ್ರಗತಿಯು ತಡೆಯಿಲ್ಲದೆ ಸಾಗುವುದು. ಆದರೆ ನಮ್ಮ ಮನಸ್ಸು ಅದರ ಕಡೆಗೆ ಒಳಗಿನಿಂದ ವಾಲಿರಬೇಕು. VR I 48-49
  34. ಪ್ರತಿಯೊಬ್ಬನೂ ಕೆಲ ಮಟ್ಟಿಗಾದರೂ ಕ್ಲೇಶಗಳಿಗೆ ಗುರಿಯಾಗಿರುವನು. ಎಲ್ಲ ಪ್ರಸಂಗಗಳಲ್ಲಿಯೂ ತೃಪ್ತಿ-ಸಂತೋಷಗಳಿಂದಿದ್ದು ಕ್ಲೇಶಗಳ ಕಡೆಗೆ ಗಮನಕೊಡದಿರುವವರೇ ಸುಖಿಗಳು. ಅದಕ್ಕಾಗಿ ಪ್ರೇಮ ಆಸಕ್ತಿಗಳ ಭಾವನೆಯಿಂದ  ಮಹಾಶಕ್ತಿಯನ್ನು ಕುರಿತು ಚಿಂತೆ ಹುಟ್ಟಿಸಿಕೊಳ್ಳಬೇಕು. ಮಿಕ್ಕ ವಸ್ತುಗಳನ್ನೆಲ್ಲ ಬೊಗಳುವ ನಾಯಿಗಳೆಂದು ಭಾವಿಸಬೇಕು. ಆಗ ಮನುಷ್ಯನಲ್ಲಿದ್ದುದ್ದೆಲ್ಲ ಸರಿಯಾಗಿ ರೂಪಣ ಹೊಂದಿ ಸಮತ್ವದ ಹಾಗೂಮಿತತ್ವದ ಸ್ಥಿತಿಯನ್ನು ಹೊಂದುವುದು. ಮಾನವ ಪರಿವರ್ತನೆ ಎಂಬ ಮಾತಿನ ಸರಿಯಾದ ಇಂಗಿತ ಅದೇ. VR I 54
  35. ನಾನು ಬಡತನದ ಜೀವನವನ್ನು ಆಯ್ದುಕೊಂಡೆ. ರೊಟ್ಟಿ-ಚಟ್ನಿಯ ಹೊರತು ಬೇರೆನೂ ತಿನ್ನಬಾರದೆಂಬ ವಿಚಾರ ನನಗೆ ರಮ್ಯವಾಗಿ ತೋರಿತು. ಇಂಥ ಸ್ಥಿತಿಯನ್ನು ತಮಗೂ ತಂದು ಕೊಡಲು ಇದುವರೆಗೆ ಯಾರೂ ನನಗೆ ಅವಕಾಶ ಕೊಟ್ಟಿಲ್ಲವೆಂಬುದು ಶೋಚನೀಯ ಸಂಗತಿ. VR I 56-57
  36. ಇಛ್ಛೆಗಳನ್ನು ಹೇಗೆ ಗೆಲ್ಲಬೇಕೆಂದು ನೀವು ಕೇಳುವಿರಿ. ಇದಕ್ಕೆ ನನ್ನ ಉತ್ತರವಿಷ್ಟೇ: “ತೊಳೆಯುವವನ  ಕೈಯಲ್ಲಿಯ ಶವದಂತೆ ನಿಮ್ಮನ್ನು ಭಗವಂತನಿಗೆ ಅರ್ಪಿಸಿಕೊಂಡು ಬಿಡಿರಿ.VR I 159
  37. ನಿಜವಾದ ಶಿಷ್ಯನು ತನ್ನ ಗುರುವಿನ ಅನುಕರಣೆ ಮಾಡಬೇಕೆಂದು ಹೇಳಲಾಗುತ್ತದೆ. ಆದರೆ ಅದೇ ಕಾಲಕ್ಕೆ, ಗುರುಗಳು ಆಜ್ಞಾಪಿಸಿದಂತೆ ಮಾಡಬೇಕೆ ಹೊರತು ಅವರು ಮಾಡಿದಂತೆ ಮಾಡಬಾರದೆಂದೂ ಹೇಳುತ್ತಾರೆ. ಇವೆರಡೂ ಆದೇಶಗಳನ್ನೂ ಹೇಗೆ ಸಮನ್ವಯಗೊಳಿಸಬೇಕೆಂಬ ಪ್ರಶ್ನೆ ಬರುತ್ತದೆ. ನಿಜವಾದ ಗುರು ಬಾಹ್ಯಾಭ್ಯಂತರದಲ್ಲಿ ಅಸಾಧಾರಣ ಗುಣಗಳನ್ನು ಹೊಂದಿರುತ್ತಾನೆಂದು ಭಾವಿಸಲಾಗುತ್ತದೆ. ಆ ಗುಣಗಳನ್ನು ಅಭ್ಯಾಸಿಯು ಅನುಕರಿಸುತ್ತ ಹೋದರೆ ಅದೇ ರೀತಿ ಪರಿವರ್ತನೆ ಹೊಂದುತ್ತಾನೆ. ಗುರುಗಳನ್ನು ಅನುಕರಿಸಬೇಕೆಂದು ಹೇಳುವುದು ಈ ದೃಷ್ಟಿಯಿಂದಲೇ. ಎರಡನೇಯ ಆದೇಶ ಕೂಡ ಉಚಿತವೇ ಆಗಿದೆ. ಅಭ್ಯಾಸಿಯು ಗುರುಗಳ ಅಪ್ಪಣೆಗಳನ್ನು ಪಾಲಿಸಬೇಕೆ ವಿನಾ ಅವರು ಮಾಡಿದಂತೆ ಮಾಡಬಾರದೆಂದು ಅದು ನಿರ್ದೇಶಿಸುತ್ತದೆ.VR I 243
  38. “ದುಖ:ಗಳಿಗಾಗಿ ನೀ ದೂರಬೇಡ ; ದು:ಖವಿಲ್ಲದೆ ಸುಖವು ಸಿಗದು ನೋಡ !”TM 44
  39. ನಮ್ಮ ವಿಚಾರಗಳಿಂದ ನಮಗೆ ಬಲ ದೊರೆಯುತ್ತದೆ. ದೇವ ನಿರ್ಮಿತ ಹಾಗೂ ಮನುಷ್ಯ ನಿರ್ಮಿತ ವಸ್ತುಗಳಲ್ಲಿ ಪೂರ್ಣ ಸಾಮರಸ್ಯ ಉಂಟಾದಾಗಲೇ ಇದು ಸಾಧ್ಯವಾಗುವುದು.TM 54
  40. ಮಣ್ಣಿನ ಮುದ್ದೆಗಿಂತಲೂ ಅದರಿಂದ ಮಾಡಿದ ಒಂದು ಆಟಿಕೆಯ ವಸ್ತುವನ್ನೂ ನಾವು ಎಷ್ಟೋ ವ್ಯತ್ಯಾಸದ ದೃಷ್ಟಿಯಿಂದ ನೋಡುತ್ತೇವೆ. ಮಣ್ಣಿನ ಮುದ್ದೆಗಿಂತಲೂ ಅದರಿಂದ ಮಾಡಿದ ಆಟಿಕೆಯನ್ನು ಹೆಚ್ಚು ಮೆಚ್ಚುವೆವು. ಅದರಂತೆಯೆ ಮನುಷ್ಯನು ತನ್ನನ್ನು ಸರಿಯಾಗಿ ರೂಪಿಸಿಕೊಂಡು ಭಗವಂತನ ಮುಂದೆ ಹೋದರೆ ಭಗವಂತನು ಬೇರ ಬೇರೆ ದೃಷ್ಟಿಯಿಂದ ಆತನನ್ನು ನೋಡುವನು. ಆದುದರಿಂದ ನಾವು ಭಗವಂತನ ದೃಷ್ಟಿಯನ್ನು ಆಕರ್ಷಿಸುವಂತೆ ನಮ್ಮನ್ನು ರೂಪಿಸಿಕೊಳ್ಳಬೇಕು. ಈ ದೈವೀ ವ್ಯವಹಾರದ ಅನುಕರಣೆಯನ್ನು ನಮ್ಮ ನಿತ್ಯ ಜೀವನದಲ್ಲಿ ಆಚರಿಸಬೇಕು.TM 34-35
  41. ಸಾಮಾನ್ಯವಾಗಿ ಜನರು ಧ್ಯಾನ ಸಮಯದಲ್ಲಿ ತಮ್ಮ ಮನಸ್ಸಿನಲ್ಲಿ ನುಗ್ಗುವ ಅಸಂಖ್ಯ ವಿಚಾರಗಳನ್ನು ಕುರಿತು ದೂರುವರು. ತಮ್ಮ ಮನಸ್ಸನ್ನು ತಟಸ್ಥ ಸ್ಥಿತಿಗೆ ತರುವವರೆಗೂ ತಾವು ಮಾಡುವ ಸಾಧನವು ಸಫಲವಾಗದೆಂದು ಅವರ ಎಣಿಕೆ. ಆದರೆ ಅದು ಹಾಗಲ್ಲ. ನಾವು ಧ್ಯಾನ ಮಾಡುತ್ತಿರುವೆವೇ ವಿನಾ ಏಕಾಗ್ರತೆಯ ಅಭ್ಯಾಸವನ್ನಲ್ಲ. ಈ ಸಮಯದಲ್ಲಿ ನಾವು ನಮ್ಮ ಮನಸ್ಸಿನಲ್ಲಿ ಬರುವ ಅನ್ಯ ವಿಚಾರಗಳ ಕಡೆಗೆ ಲಕ್ಷಕೊಡದೆ ಧ್ಯಾನವನ್ನು ಮುಂದುವರಿಸಬೇಕು. ಎಂದಿಗೂ ವಿಶ್ರಮಿಸದ ನಮ್ಮ ಜಾಗ್ರತ ಮನಸ್ಸಿನ ಕಾರ್ಯಗಳಿಂದಾಗಿ ವಿಚಾರಗಳ ಪ್ರವಾಹ  ಬರುತ್ತದೆ. ನಮ್ಮ ಜಾಗೃತ ಮನಸ್ಸು ಹರಿದಾಡುತ್ತ ಅಗಣಿತ ವಿಚಾರಗಳನ್ನು ಮಾಡುತ್ತಿದ್ದಾಗಲೂ ನಾವು ಸುಪ್ತಚೇತನದ ಮೂಲಕ ಧ್ಯಾನದಲ್ಲಿ ಮಗ್ನರಾಗಿಯೆ ಇರುತ್ತೇವೆ. ಈ ಪ್ರಕಾರ ಯಾವ ದೃಷ್ಟಿಯಿಂದ ನೋಡಿದರೂ ನಮಗೆ ಹಾನಿಯಿಲ್ಲ. ಕಾಲಕ್ರಮದಲ್ಲಿ ಸಾಕಷ್ಟು ಅಭ್ಯಾಸವಾದ ಮೇಲೆ ಜಾಗ್ರತ ಮನಸ್ಸೂ ರೂಪಗೊಂಡು ಸುಪ್ತಚೇತನದೊಂದಿಗೆ ಮೇಳವಾಗಿ ಕೆಲಸ ಮಾಡಲು ಆರಂಭಿಸುವುದು.RD 61
  42. ಮನುಷ್ಯನ ಸರಿಯಾದ ರೂಪಣವು ನಮ್ಮ ಎಲ್ಲ ಇಂದ್ರಿಯಗಳ ಹಾಗೂ ಶಕ್ತಿಗಳ ಬಳಕೆಯಲ್ಲಿ ಮಿತತ್ವದಿಂದೊಡಗೂಡಿದ ಮನಸ್ಸಿನ ರಚನೆಯನ್ನೊಳಗೊಳ್ಳುತ್ತದೆ. ಈ ಪ್ರಕಾರ ಸಮರ್ಥ ಗುರುವಿನ ನೇತೃತ್ವದಲ್ಲಿ ನಡೆಯುವ ಒಳ್ಳೆಯ ತರಬೇತಿಯು ನಮ್ಮ ಸರಿಯಾದ ರೂಪಣದಲ್ಲಿ ಬಹಳ ಮಹತ್ವದ್ದಾಗಿದೆ. ಅದಿಲ್ಲದೆ ಆಧ್ಯಾತ್ಮ ಉಚ್ಚ ಸಿದ್ದಿಗಳು ಎಂದಿಗೂ ಸಾದ್ಯವಾಗುವುದಿಲ್ಲ.RD 53-54
  43. ವಿವೇಕ-ವೈರಾಗ್ಯಗಳು ನಿಜವಾಗಿಯೂ ಸಾಧನಗಳಾಗಿರದೆ ಹಲವು ಸಾಧನಗಳ ಪರಿಣಾಮವೆಂಬುದು ಈ ವಿಷಯದ ಸೂಕ್ಷ್ಮಾಭ್ಯಾಸದಿಂದ ತಿಳಿದುಬರುವುದು. ವಿವೇಕವಾಗಲಿ ವೈರಾಗ್ಯವಾಗಲಿ, ಸ್ಮರಣೆ ,ಭಕ್ತಿ ಅಥವಾ ಪ್ರೇಮ ಮುಂತಾದ ಯೌಗಿಕ ಸಾಧನಗಳ ಸತತಾಭ್ಯಾಸದಿಂದ ಬೇರೆ ಬೇರೆ ಹಂತಗಳಲ್ಲಿ ಬೆಳೆಸಲಾದ ಒಂದು ಮಾನಸಿಕ ಸ್ಥಿತಿಯಾಗಿದೆ. ಇಂದ್ರೀಯಗಳು ಪೂರ್ಣವಾಗಿ ಶುಧ್ಧವಾಗದ ಹೊರತು ನಿಜವಾದ ವಿವೇಕವು ಬೆಳೆಯುವುದಿಲ್ಲ. ಮನಸ್ಸು ಸುಕ್ಷಿತವೂ ಸುನಿಯಂತ್ರಿತವೂ ಆಗಿ ಅಹಂಕಾರವು ಪರಿಶುದ್ಧ ಸ್ಥಿತಿಯನ್ನು ಹೊಂದದ ಹೊರತು ಇಂದ್ರಿಯಗಳು ಶುದ್ಧವಾಗಲಾರವು.RD 91
  44. ನನ್ನ ಜೀವನದ ಪ್ರತಿಯೊಂದು ಘಟ್ಟದಲ್ಲಿಯೂ “ಪ್ರಾಮಾಣಿಕನಾಗಿರು; ಕಳವು ಮಾಡಬೇಡ” ಎಂಬ ಪಾಠವನ್ನು ನಮ್ಮ ತಾಯಿ ಕಲಿಸಿದರು. ಅವರ ತರಬೇತಿಯ ಪರಿಣಾಮವಾಗಿ ಅದು ನನ್ನ ಜೀವನದ ಒಂದು ಅಬಿನ್ನ ಅಂಗವೇ  ಆಗಿ ಹೋಯಿತು.AB I P1
  45. ನಿಮ್ಮ ಕ್ರಿಯೆಗಳೆಲ್ಲ ಮೊದಲನೆಯ ಮೆಟ್ಟಿಲಿನಲ್ಲಿ, ಹೃದಯದಿಂದಲೇ ಶಾಸಿತವಾಗಿ ನಿಯಂತ್ರಿತವಾಗುವವು. ಅದರ ನಿರ್ದೇನಶವು ಸರಿಯಾಗಿದ್ದರೆ ಅವು ಸರಿಯಾದ ದಾರಿಯನ್ನು ಹಿಡಿಯುವವು; ಅವಿವೇಕದ್ದಾಗಿದ್ದರೆ ತಪ್ಪು ದಾರಿಯನ್ನು ಹಿಡಿಯುವವು.; ಅರ್ಥಾತ್ ಅದು ಅವೆಲ್ಲವುಗಳ ಯಜಮಾನನಾಗಿದೆ. ನಿಯಾಮಕ ಶಕ್ತಿಯೂ ಆಗಿದೆ. ಹೀಗಿದೆ ನಿಮ್ಮೊಳಗಿನ ಹೃದಯದ ಸ್ಥಿತಿ. ಅದು ನಾನಾ ರೀತಿಯಿಂದ ನಾನಾ ವರ್ಣಗಳಲ್ಲಿ ಕಾರ್ಯ ಮಾಡುತ್ತಿದೆ. ಅದರ ಮೂಲಕ ಭಗವಂತನ ಮುಖ್ಯಧಮನಿಯು ಸೃಷ್ಟಿಯ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದೆ. ನಿಮ್ಮ ಹೃದಯದೊಳಗಿನ ಲಂಬಕದಂತಹ ಬಡಿತವು ಕೇಂದ್ರದ ಅಡಿಯಲ್ಲಿರುವ ಅದೃಶ ಚಲನದ ಪರಿಣಾಮವಲ್ಲದೇ ಬೇರೆನೂ ಅಲ್ಲ .  ಗುಪ್ತ ಚಲನದೊಂದಿಗೆ ನಮ್ಮ ಹೃದಯದ ಸಂಪರ್ಕವಿರುವುದರಿಂದ ತನ್ನ ಸಾಮರ್ಥ್ಯದ ಮಟ್ಟಿಗೆ ಅದು ತನ್ನ ಸ್ಥಳದಲ್ಲಿ ಅದೇ ಕಾರ್ಯವನ್ನು ಮಾಡುತ್ತಿದೆ. ಈ ಪ್ರಕಾರ ಅದರ ಕಾರ್ಯವು ಆ ಅದೃಶ್ಯ ಚಲನದಂತೆಯೇ ಇರುವುದು. ಅಗೋ , ಭಗವಂತನ ಅದೃಶ್ಯ ಚಲನದ ದೃಶ್ಯ ಸ್ವರೂಪ! ಅದು ಸಾಗರದಲ್ಲಿಯ ಒಂದು ಬಿಂದುವಾಗಿದೆ.ERY 24
  46. ಈ ರೀತಿಯಿಂದ ಉಂಟಾದ ಕಂಪನಗಳು  ಕೆಲಕಾಲ ಹೃದಯದಲ್ಲಿದ್ದು ಅನಂತರ ಅವು ಉಳಿದ ಚಕ್ರಗಳಿಂದ ಹರಡಿ ಕೊನೆಗೆ ದೇಹದ ಪ್ರತಿಯೊಂದು ಕಣಕ್ಕೂ ವ್ಯಾಪಿಸುವವು. ಆಗ ಅದನ್ನು ‘ಅನಾಹತ’ವೆಂದು ತಿಳಿಯಲಾಗುವುದು. RD 61
  47. ಈ ವಿವೇಚನೆಯ ನಂತರ ನೀವು ಸ್ವಯಂ ನಿರ್ಮಿಸಿದ ಜಾಲವನ್ನು ಛೇದಿಸಿ ನಿಸರ್ಗದ ಜೀವಾಳದಂತಿದ್ದ  ಗುಪ್ತಶಕ್ತಿಯನ್ನು ಮತ್ತೆ ಪಡೆಯಲು ಯತ್ನಿಸಬೇಕೆಂದು ನನ್ನ ವಿನಮ್ರ ಪ್ರಾರ್ಥನೆ.TM 40
  48. ದೇವರನ್ನು ಒಡೆಯನೆಂದೂ ತನ್ನನ್ನು ಆತನ ಸೇವಕನೆಂದೂ ಭಾವಿಸಿ ಯಾವಾಗಲೂ ಆತನ ಸೇವೆ ಮಾಡುತ್ತಿರುವಲ್ಲಿಯೆ ಮಾನವನ ಸೌಜನ್ಯವಿದೆ. ಹೀಗೆ ಮಾಡುವದರಿಂದ ಮನಿಷ್ಯನಲ್ಲಿ ಲಯಾವಸ್ಥೆಯುಂಟಾಗಿ ಆತನ ಕಡೆಗೆ ಭಗವಂತನ ಲಕ್ಷ್ಯವು ನೇರವಾಗಿ ಹರಿಯುವುದು.TM 56
  49. ಒಡೆಯನ ದೃಷ್ಟಿ ಯಾವಾಗಲೂ ತನ್ನ ಕಡೆಗೆ ಇದ್ದು ತಾನು ಆತನ ಸಾಮಿಪ್ಯ ಹೊಂದಬೇಕೆಂಬುದೇ ಭಕ್ತನ ಏಕ ಮಾತ್ರ ಉದ್ದೇಶ. ಸಜ್ಜನಿಕೆಯು ಈಗ ಬೇರೆ ರೂಪತಾಳುವುದು. ನಾವು ಭಗವಂತನನ್ನು ನಮ್ಮ ಸ್ವಾಮಿಯೆಂದು ತಿಳಿದ ಮೇಲೆ, ಅರಿತಾಗಲಿ ಅರಿಯದೆ ಆಗಲಿ ನಾವು ಮಾಡಿದ ತಪ್ಪುಗಳನ್ನು ಅಪರಾಧಿಯಂತೆ ಆತನೆದುರಿಗೆ ಇಡತಕ್ಕದ್ದು. ಇದರಿಂದ ನಮ್ಮ ದೈನ್ಯತೆಯು ಸೂಚಿತವಾಗುವುದು. ಒಡೆಯನ ಮನಸ್ಸಿನಲ್ಲಿಯೂ ಭಕ್ತನ ಅಪರಾಧ ಕ್ಷಮ್ಯವೆಂಬ ಭಾವನೆ ಬರುವುದು. ಏಕೆಂದರೆ, ಭಕ್ತನು ತಾನು ದೀನನೆಂದು ಭಾವಿಸಿ ತಾನೆ ಅದನ್ನು ಒಡೆಯನ ಮುಂದೆ ಇಟ್ಟುದು! ಇದರಲ್ಲಿರುವ ಮಾರ್ದವತೆಯನ್ನು ಶಬ್ದಗಳಿಂದ ವರ್ಣಿಸಲು ಸಾಧ್ಯವಿಲ್ಲ. ಎಂತಲೇ ಭಕ್ತನ ಅಸಹಾಯ ಸ್ಥಿತಿಯ ಬಗ್ಗೆ ಭಗವಂತನಿಗೆ ವಿಶ್ವಾಸ ಹುಟ್ಟುತ್ತದೆ.TM 56-57
  50. ಈ ಸಂಬಂಧವು ಸ್ಥಾಪಿತವಾಗುವುದಕ್ಕಿಂತ ಮುಂಚೆ ಭಕ್ತನು ದೊಡ್ಡ ದೊಡ್ಡ ತಪ್ಪುಗಳನ್ನು ಮಾಡಿರುವ ಸಂಭವವುಂಟು. ಆದರೆ ಇನ್ನು ಮೇಲೆ ಕ್ರಮೇಣ ಅವು ಕಡಿಮೆಯಾಗುತ್ತ ಹೋಗಿ ಅವುಗಳ ಅಸ್ತಿತ್ವವೇ ಇಲ್ಲದಂತಾಗುವುದು.TM 57
  51. ಯಾವುದನ್ನು ನಾನು ಅಸಹಾಯ ಸ್ಥಿತಿಯೆಂದು ಕರೆದಿರುವೆನೋ ಅದನ್ನುಂಟು ಮಾಡಿಕೊಳ್ಳುವುದು ದೀನತೆಯ ಸ್ಥಿತಿಯೆನಿಸುವುದು. ಇದನ್ನು ಹೊಂದಿದವನು ಸರ್ವಸ್ವವನ್ನೂ ಹೊಂದಿದಂತೆಯೆ.TM 58
  52. ನಾವು   ಹತ್ತಿಯಂತೆ  ಹಗುರವಾಗಿ, ಸಮರ್ಥ ಗುರುವಿನ ಒಂದೇ ಒಂದು ತಳ್ಳುವಿಕೆಯಿಂದ ಪರಮಾತ್ಮನ ಕಡೆಗಿನ        ನಮ್ಮ ಉಡ್ಡಯನ ಪ್ರಾರಂಭಗೊಳ್ಳುವಂತಾಗಬೇಕು.SMP 45
  53. ಕೆಳಗಿನ ಹಗ್ಗ ಹರಿದಾಗ ಅರ್ಥಾತ್ ಅಧೋಮುಖ ಪ್ರವೃತ್ತಿಯು ನಿಂತಾಗ ತನ್ನ ಮೂಲವನ್ನು ಸೇರಬೇಕೆಂಬ ಅಭಿಲಾಷೆಯುಂಟಾಗುವುದು ಸಹಜವೆ. ಆದುದರಿಂದಲೇ ಸಂಧ್ಯೆ ಮತ್ತು ಉಪಾಸನೆಯ ಕಡೆಗೆ ಆತನ ಮನಸ್ಸು ಹರಿಯತೊಡಗುವುದು.TM 14
  54. ದೈವೀ ನಿರ್ದೇಶಗಳು ಮತ್ತು ಆಜ್ಞೆಗಳು ಯಾವಾಗಲೂ ತಮ್ಮ ಮನಸ್ಸನ್ನು ನಿಗ್ರಹಿಸಿದವರಿಗೇ ಬರುತ್ತವೆ.VR II 208
  55. ನಿಜವಾದ ಆನಂದ ಹೇಗಿದೆಯೆಂದರೆ , ಅದರಲ್ಲಿ ಆನಂದವಿಲ್ಲ. ಆನಂದದ ಸಂವೇದನೆ ಇರುವವರೆಗೆ ಅದರಲ್ಲಿ ಮಾಯೆ ಕೂಡಿಕೊಂಡಿರುತ್ತದೆ.VR II 247.
  56. ಪಿಂಡ ಪ್ರದೇಶವನ್ನು ದಾಟಿದಮೇಲೆ , ಆಜ್ಞಾಚಕ್ರದ ಅನಂತರ ಬ್ರಹ್ಮಾಂಡ ಮಂಡಲಕ್ಕೆ ಬರುವುದು. ಈ ರೀತಿ ಚಿತ್ ಸರೋವರವು ಬ್ರಹ್ಮಾಂಡದಲ್ಲಿದ್ದು ಸರಸ್ವತಿಯ ಸ್ಥಾನವೂ ಕೂಡ ಅಲ್ಲಿಯೇ ಇದೆ. ‘ರಾಜಯೋಗದ ಪ್ರಭಾವ’ದ  (ಎರಡನೇಯ ಮುದ್ರಣ ಪುಟ 25)ರಲ್ಲಿ ಹೇಳಿದಂತೆ, ಹೃದಯ ಮಂಡಲವು ತಲೆಯಿಂದ ಪಾದದವರೆಗೆ ವಿಸ್ತಾರ ಹೊಂದಿದ್ದು ಸಂಪೂರ್ಣ ಸೃಷ್ಟಿಯು ಈ ವೃತ್ತದಲ್ಲಿ ಅರ್ಥಾತ್ ಶಿಖರದವರೆಗೆ , ಇದೆ.VR II 208
  57. ನಿಸರ್ಗದ ಶಕ್ತಿಗಳು ಹಾಗೂ ಶಕ್ತಿ ಚಾಪಗಳ ಬಗೆಗೆ ನಾನು ಈಗಾಗಲೇ ವಿವರಿಸಿದ್ದೇನೆ ಅವೆಲ್ಲವುಗಳನ್ನು ಬೇಕಾದ ರೀತಿಯಲ್ಲಿ ಮಾನವನ ರೂಪಾಂತರಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಹೃದಯದಲ್ಲಿ ದೈವೀ ಪ್ರಕಾಶದ ಕಲ್ಪನೆಯೊಂದಿಗೆ ಧ್ಯಾನಮಾಡುತ್ತಾ ನಾವು ಮುಂದುವರೆಯುತ್ತೇವೆ. ಈ ರೀತಿ ಮಾಡುವುದರಿಂದ ನಾವು ಸಾವಕಾಶವಾಗಿ ಮೇಲೇಳಲು ಪ್ರಾರಂಭಿಸುತ್ತೇವೆ ಅಥವಾ ಇದನ್ನೇ ಇನ್ನೂ ಚನ್ನಾಗಿ ಹೇಳುವುದಾದರೆ ಆಂತರಿಕ ಆಳಕ್ಕೆ ಮುಳುಗಲಾರಂಭಿಸುತ್ತೇವೆ ಇದರ ಪ್ರತಿಫಲವಾಗಿ ಅಭ್ಯಾಸಿಯು ವಿಸ್ತಾರವನ್ನು ಅನುಭವಿಸಲು ಪ್ರಾರಂಭಿಸುವನು. ಇದು ಮೊದಲ  ಅನಂತತೆಯ ಬೀಜವನ್ನು ನೆಟ್ಟಿದ್ದೇವೆಂದು ಇದರ ಅರ್ಥ ಅಥವಾ ಬೇರೆ ಶಬ್ದಗಳಲ್ಲಿ ಹೇಳುವುದಾದರೆ ನಮ್ಮ ದೃಷ್ಟಿಯಿಂದ ಜಾರಿಹೋದ ವಸ್ತುವನ್ನು ಪುನರುಜ್ಜೀವನಗೊಳಿಸಿದ್ದೇವೆ. ಈಗ ಎರಡನೆಯ ಹಂತವು ನಮಗೆ ದೃಷ್ಟಿ ಗೋಚರವಾಗುತ್ತದೆ. ಮನುಷ್ಯನು ಪ್ರತಿಯೊಂದು ಜೀವಿಯೂ  ದೇವರ ಸನ್ನಿಧಿಯನ್ನು  ಅನುಭವಿಸುತ್ತಾನೆ.  ಮೂರನೆಯ ಸಂಗತಿಯೆಂದರೆ ಇದೇ ವಸ್ತುವಿನ ಬದಲಾಗುವ ಲಕ್ಷಣಗಳ ಅನುಭವ. ಇದು ಬದಲಾವಣೆ ಹೊಂದಿ ಎಲ್ಲವೂ ದೇವರಿಂದ ಹಾಗೂ ಎಲ್ಲವೂ ಆತನ ಸೃಷ್ಟಿ ಎಂಬುದು ಅನುಭವಕ್ಕೆ ಬರುತ್ತದೆ. ನಾಲ್ಕನೆಯ ಹಂತವು ಅಂತಿಮವಾಗಿ ನಾವು ಪಡೆಯಬೇಕಾದ ನಿರಸನದ ಅವಸ್ಥೆಯನ್ನು ತರುತ್ತದೆ. ಪ್ರತಿಯೊಂದು ಪರಮಾಣುವಿನಲ್ಲಿ ಹಾಗೂ ಎಲ್ಲಾ ವಸ್ತುಗಳನ್ನು ಏಕರೂಪತೆಯನ್ನು ಅನುಭವಿಸುತ್ತೇವೆ ಸಾಧನ ಪದ್ಧತಿ ಸರಿಯಾಗಿದ್ದು ಮಾರ್ಗದರ್ಶಕನು ಪರಿಪೂರ್ಣನಾಗಿದ್ದರೆ ಪ್ರತಿಯೊಬ್ಬನು ಇದೇ ರೀತಿ ಮುಂದುವರಿಯುವನು. ನಾವು ಮುಂದಿನ ವಲಯಕ್ಕೆ ಹೋದಂತೆಲ್ಲ ಬ್ರಹ್ಮಾಂಡ ಮಂಡಲವನ್ನು ಮುಟ್ಟುವವರೆಗೆ ಇವು ವಿರಳತೆಯನ್ನು ಪಡೆಯುತ್ತವೆ.VR II 128-129
  58. ಗೀತೆಯಲ್ಲಿ ನಿಷ್ಕಾಮ ಕರ್ಮದ ಬಗೆಗೆ ವಿಶೇಷ ಮಹತ್ವ ಕೊಡಲಾಗಿದೆ. ಸರಿಯಾದ ಮಾರ್ಗದಿಂದ ಪ್ರಾಯೋಗಿಕವಾಗಿ ಅದನ್ನು ಸಾಧಿಸದೆ ಒಬ್ಬನು ಜೀವಾವಧಿ ಅದನ್ನು ಬಾಯಲ್ಲಿ ಹೇಳುತ್ತಾ ಹೋದರೂ ಆತನಲ್ಲಿ ಅದು ಹುಟ್ಟುವುದೇ ಇಲ್ಲ. ಇದು ನಿಜವಾಗಿಯೂ ಒಂದು ತರಹದ ಲಯಾವಸ್ಥೆ ಅದಿಲ್ಲದೆ ಅರ್ಜುನನಿಗೆ ಕರುಣಿಸಿದ ವಿರಾಡ್ ದರ್ಶನವು ಸರ್ವಥಾ ಸಾಧ್ಯವಾಗುತ್ತಿರಲಿಲ್ಲ. ಇದಕ್ಕಾಗಿ ಯೋಗ್ಯ ಸಾಮರ್ಥ್ಯ ಹಾಗೂ ಪ್ರಗತಿಪರ ಅಂತರ್ ದೃಷ್ಟಿಯು ಅಭ್ಯಾಸವಾಗಿರುವುದು ಅನಿವಾರ್ಯವಾಗಿದೆ. ವಿರಾಡ್ ದರ್ಶನವವನ್ನು ಪಡೆದ ಅರ್ಜುನನು ಕೂಡ ಭಯಪ್ರದ ದೃಶ್ಯವನ್ನು ತಾಳಲಾರದೆ ಅರಚಿದನಂತೆ. ಅದಕ್ಕೆ ಕಾರಣವೆಂದರೆ ಆತನಲ್ಲಿ ಸಂಚರಣಗೊಳಿಸಲಾಗಿದ ಲಯಾವಸ್ಥೆಯೇನೋ  ಕೇವಲ ವಿರಾಡ್ ದೇಶದ ಸ್ಥಿತಿಗೆ ಸಂಬಂಧಿಸಿದುದಾಗಿತ್ತು ಆದರೆ ಆತನು ಪ್ರತ್ಯಕ್ಷ ಕಂಡದ್ದು ಮಾತ್ರ ವಿರಾಡ್ ದೇಶಕ್ಕಿಂತ ಬಹಳ ಆಚೆಗಿರುವ ಬ್ರಹ್ಮಾಂಡ ಮಂಡಲದ ಪೂರ್ಣ ಶಕ್ತಿಯ ದರ್ಶನ.VR II 85
  59. ಕನ್ನಡಿಯಂತೆ ಸ್ವಚ್ಛವಾದ ಹೃದಯದಲ್ಲಿ ದೇವರ ಮಹಿಮೆ ಪ್ರತಿಬಿಂಬಿತವಾಗುತ್ತದೆ.VR I 19
  60. ಕಾಮವಿಕಾರಗಳನ್ನು ನಾಶಗೊಳಿಸಿದರೆ ಬುದ್ದಿ ಶಕ್ತಿಯು ಪೂರ್ಣ ನಷ್ಟವಾಗುವುದು ಕಾರಣವೇನೆಂದರೆ, ಕಾಮವಿಕಾರಗಳು ಪ್ರಚೋದನೆಯನ್ನು ಹುಟ್ಟಿಸುವವು; ಪ್ರಚೋದನೆಯು ಬುದ್ದಿ ಶಕ್ತಿಯನ್ನುಂಟುಮಾಡುವುದು. ಆದುದರಿಂದ, ಅದನ್ನು ನಿಯಂತ್ರಣಗೊಳಿಸಬೇಕು, ಅಷ್ಟೇ. ಬೇರೆ ಶಬ್ದಗಳಲ್ಲಿ ಹೇಳುವುದಾದರೆ, ಪಾಶವೀ ಕಾಮವನ್ನು ಮಾನವೀಯ ಕಾಮದಲ್ಲಿ ರೂಪಾಂತರಗೊಳಿಸಬೇಕು.VR I 268
  61. ಮನಸ್ಸಿನ ಕಾರ್ಯಕ್ಕೆ ಹೃದಯವೇ ಕ್ಷೇತ್ರ. ಮನಸ್ಸು ಯಾವಾಗಲೂ ತಾನಿದ್ದಂತೆಯೇ ಇರುವುದು. ಮನಸ್ಸಿನ ಕ್ಷೇತ್ರವಾದ ಹೃದಯವನ್ನೇ ನಾವು ಸರಿಪಡಿಸಬೇಕು.VR I 270.
  62. ಈ ಮರ್ತ್ಯಲೋಕವು ವಾಸ್ತವವಾಗಿ ಪರಲೋಕದ ಪ್ರತಿಬಿಂಬವಾಗಿದೆ. ನಾವು ಈ ಪ್ರತಿಬಿಂಬವನ್ನು ಸರಿಪಡಿಸಿಕೊಂಡರೆ ಪ್ರತಿಬಿಂಬದ ಮೂಲವಾದ ಪರಲೋಕವೂ ಸರಿಪಟ್ಟು ಶುಧ್ಧವಾಗುವುದು.TM 47
  63. ಯಾವಾಗ ನಾವು ಶಾಂತಿಯ ಇರವನ್ನೂ ಮರೆತು ಬಿಡುವೆವೂ ಆಗ ನಿಜವಾದ ಅರ್ಥದಲ್ಲಿ ಭಾವನೆಗಳ ಭಾರದಿಂದ ಅಥವಾ ಸಂಸ್ಕಾರದಿಂದ ಮುಕ್ತರಾಗುವೆವು.ಈ ಹಂತದಲ್ಲಿ ಸ್ಥಿತಿಯು ವಿಚಿತ್ರವಾಗಿರುತ್ತದೆ. ಅದು ವಸ್ತುತ: ಆನಂದವೂ ಅಲ್ಲ ಅಥವಾ ಬೇರೆ ಮತ್ತೇನಾದರೂ ಅಲ್ಲ.RD 46
  64. ಆಧ್ಯಾತ್ಮಿಕ  ಗುರುವು, ಕನಿಷ್ಠ ಪಕ್ಷಕ್ಕೆ , ಎಲ್ಲಿ ಪ್ರತಿಯೊಂದು ಸಂಗತಿಯು ಈ ಭೌತಿಕ ಜಗತ್ತಿನಲ್ಲಿ ಘಟಿಸುವ ಮೊದಲು ಸೂಕ್ಷ ರೂಪದಲ್ಲಿ ಗೋಚರಿಸುವುದೋ, ಆ ಬ್ರಹ್ಮಾಂಡ ಮಂಡಲದವರೆಗಾದರೂ( ವಿರಾಡ್ ದೇಶವೆಂದೂ ಅದಕ್ಕೆ ಸಂಜ್ಞೆ) ಮುಟ್ಟದೆ, ಸಾಮಾನ್ಯವಾಗಿ ತಾನು ಅನ್ಯರಿಗೆ ತರಬೇತಿಯನ್ನು ಕೊಡಲು ಯೋಗ್ಯನೆಂದು ತಿಳಿಯಬಾರದು.RD 49
  65. ಸರಿಯಾದ ತರಬೇತಿಯ ಆರಂಭದ ಹೆಜ್ಜೆಯಲ್ಲಿ ಸಾಧಕನ ಮನ:  ಪ್ರವೃತ್ತಿಗಳನ್ನು ಭಗವದಭಿಮುಖವಾಗಿ  ತಿರುಗಿಸುವುದು. ಇದಕ್ಕಾಗಿ ಪಂಡಿತರಾದ ಧರ್ಮಗುರುಗಳು ಬಹುಶ: ಶಾಸ್ತ್ರಗ್ರಂಥಗಳಿಂದ ಎತ್ತಿಕೊಂಡ ಶಾರೀರಿಕ ಹಾಗೂ ಮಾನಸಿಕ ಸಾಧನಗಳನ್ನು ಯೋಚಜಿಸುವರು. ಅವುಗಳನ್ನನುಸರಿಸಲು ಅನೇಕ ವೇಳೆ  ಜನರಿಗೆ ಬಲು ಕಠಿಣವೆನಿಸುವುದರಿಂದ  ಅವರು ಮುಂದಿನ ಪ್ರಗತಿ ಇಲ್ಲದೆ ಆರಂಭದಶೆಯಲ್ಲಿಯೆ ಅನಿಯಮಿತ ಅವಧಿಯವರೆಗೆ ಉಳಿದುಬಿಡುತ್ತಾರೆ. ಸಮರ್ಥ ಗುರುವು ಸ್ವಪ್ರಯತ್ನದಿಂದ ಪ್ರಾಣಾಹುತಿಯ ಬಲವನ್ನು ಉಪಯೋಗಿಸಿ ಶಾಶ್ವತವಾದ ಹಾಗೂ ಆಳವಾದ ಪರಿಣಾಮ ಉಂಟಾಗುವಂತೆ ಮಾಡಬೇಕು. ನಮ್ಮ ಮನಸ್ಸು ಭಗವಂತನ ಕಡೆಗೆ ತಿರುಗಿದಾಗ ಸ್ವಾಭಾವಿಕವಾಗಿಯೇ ನಾವು ನಮ್ಮ ಎಲ್ಲ ಕಾರ್ಯಗಳಲ್ಲಿಯೂ ಆ ಶ್ರೇಷ್ಠ ಶಕ್ತಿಯೊಡನೆ ಸಂಪರ್ಕವನ್ನು ಅನುಭವಿಸುತ್ತೇವೆ. ಈ ಮಾನಸಿಕ ಸ್ಥಿತಿಯು ಆಂತರ್ಯದಲ್ಲಿ ನಿರಂತರವಾಗಿ ಸ್ಥಾಪಿತವಾದಾಗ. ನಾವು ಮಾಡುವ ಪ್ರತಿಯೊಂದು ಕಾರ್ಯವೂ ಭಕ್ತಿಯ ಅಂಗವಾಗಿ , ಇಲ್ಲವೆ ದೈವಿ ಸಮರ್ಪಣೆಯಾಗಿ ತೋರಿ . ತಾವು ದೇವರ ಎಲ್ಲಾ ಕಾಲದಲ್ಲಿಯೂ ದೇವರ ಸತತ ಸ್ಮರಣೆಯಲ್ಲಿರುವೆವು. ಶೀಘ್ರದಲ್ಲಿಯೆ ಸಾಧಕನ ಹೃದಯದಲ್ಲಿ ಆಂತರಿಕ ಕಂಪನಗಳನ್ನು ಅನುಭವಿಸತೊಡಗುವನು.  ಇದು ಶಬ್ದ ಅಥವಾ ಅಜಪಾ ಎಂಬ ಆಧ್ಯಾತ್ಮಿಕ ಸ್ಥಿತಿಯ ಆರಂಭ.RD 60
  66. ಕೆಲ ಜನರು ತಮ್ಮ ಜೀವನದ ಸಮಸ್ಯೆಯನ್ನು ಪರಿಹರಿಸಲು ಕೇವಲ ದೀಕ್ಷೆಯೊಂದೆ ಸಾಕಾಗುವುದೆಂದು ತಿಳಿಯುವರು. ಯಾವ ರೀತಿಯಿಂದಾದರೂ ಗುರುವಿನಿಂದ ಅವರು ದೀಕ್ಷೆಯನ್ನು ಪಡೆದುದಾದರೆ ಅವರಿಗೆ ಉಳಿದ ಮುಂದಿನ ಸಾದನೆಯ ಅಥವಾ ಅಭ್ಯಾಸದ ಅಗತ್ಯವಿಲ್ಲ. ಗುರುವಿನ ಒಂದು ಪ್ರೇರಣೆಯೆ ತಮ್ಮನ್ನು ಕೊನೆಗೆ ಸಂಸ್ಕಾರಗಳ ಹಾಗೂ ಮಾಯೆಯ ಬಂಧನಗಳಿಂದ ಬಿಡುಗಡೆ ಮಾಡಿ ಮುಕ್ತಿಯ ಕಡೆಗೆ ಒಯ್ಯುವುದೆಂದು  ಅವರ ಕಲ್ಪನೆ . ಈ ಕಲ್ಪನೆ ಅಕ್ಷರಶ: ಸತ್ಯವಾದರೂ ಗುರುವು ವಿಶೇಷತ: ಅತ್ಯುಚ್ಚ ಮಟ್ಟದವನಿದ್ದು ಆತನಿಗೆ ನೀವು  ಸಂಪೂರ್ಣವಾಗಿ ಶರಣಾಗತರಾಗದ ಹೊರತು ಅಷ್ಟು ಉತ್ತೇಜನಕಾರಿಯಾ ಗಲಿಕ್ಕಿಲ್ಲ,RD 63
  67. ಎಲ್ಲಿ ‘ನಾನು’ ಎಂಬ ಭಾವನೆಯ ಸಹಿತವಾಗಿ ಎಲ್ಲವೂ ಕೊನೆಗೊಳ್ಳುವುದು ಆ ಸ್ಥಿತಿಗೆ ನಾವು ಕಟ್ಟಕಡೆಗೆ ಬರಬೇಕಾಗಿದೆ. ಹೀಗಿದೆ ನಾವು ಕೊನೆಗೆ ಪಡೆಯಬೇಕಾದ ಪೂರ್ಣ ಆತ್ಮ ನಿರಸನದ ಸ್ಥಿತಿ. ಅಲ್ಲಿ ‘ಅಹಂ’ ಎಂಬ ಧ್ವನಿಯು ತೀರ ಅಪಸ್ವರವಾಗುವುದು. ‘ಅಹಂ ಬ್ರಹ್ಮಾಸ್ಮಿ’ಯ ಸ್ಥಿತಿಯು ಮೂಲತ: ಚೇತನತೆಯಿಂದ ಮೈದೋರಿ ನಾವು ಯೋಗ್ಯ ಮಾರ್ಗದರ್ಶನದಲ್ಲಿ ದಾರಿಗುಂಟ ಮುಂದುವರಿದಂತೆಲ್ಲ ಅದು ನಮ್ಮೊಳಗೆ ತನ್ನಿಂದ ತಾನೇ ಬೆಳೆಯುತ್ತಾ ಹೋಗುವುದು ಅದು ಒಳಗೆ ಕಂಪನಗಳನ್ನು ಹುಟ್ಟಿಸುವುದರ ಪರಿಣಾಮವಾಗಿ ಮನಸ್ಸು ಅವುಗಳಿಗೆ ಮರುದನಿಗೊಡುವುದು. ಮನಸ್ಸಿನ ಈ ಸ್ಥಿತಿಯು ಆಧ್ಯಾತ್ಮಿಕ ಪ್ರಗತಿಯ ಪ್ರತಿಯೊಂದು ಹೆಜ್ಜೆಯಲ್ಲಿಯೂ ಮೂರು ರೂಪಗಳಲ್ಲಿ ಕಾಣಿಸಿಕೊಳ್ಳುವುದು: ‘ಅಹಂ ಬ್ರಹ್ಮಾಸ್ಮಿ’  (ನಾನು ಬ್ರಹ್ಮ) ; ‘ಸರ್ವಂ ಖಲ್ವಿದಂ ಬ್ರಹ್ಮ  ‘ (ಎಲ್ಲವೂ ಬ್ರಹ್ಮ );  ‘ಸರ್ವಂ ಬ್ರಹ್ಮಣ:’ ( ಎಲ್ಲವೂ ಬ್ರಹ್ಮನಿಂದ), ವಸ್ತುತಃ ಮೂರು ರೂಪಗಳಲ್ಲಿಯ ಈ ಸಮಗ್ರ ಸ್ಥಿತಿಯು ವಿವಿಧತೆಯಲ್ಲಿಯೂ ಒಂದೇ ಆಗಿದೆ.  ಅದು ಪಿಂಡ ದೇಶದಲ್ಲಿ  ಸ್ಥೂಲ ರೂಪದಿಂದ ಕಾಣಿಸಿಕೊಳ್ಳುವುದು . ಬ್ರಹ್ಮಾಂಡ ಮಂಡಲದಲ್ಲಿ ಹೆಚ್ಚು ಸೂಕ್ಷ್ಮವಾಗುವುದು. ಈ ಎಲ್ಲ ಸ್ಥಿತಿಗಳೂ . ಎರಡನೆಯ ಅಧ್ಯಾಯದಲ್ಲಿ ತೋರಿಸಲಾದ ರೇಖಾಚಿತ್ರದ 16 ವೃತ್ತಗಳಲ್ಲಿ ಮೊದಲನೆಯದರಲ್ಲಿಯೇ ಕೊನೆಗೊಳ್ಳುವವು.RD 65
  68. ಸ್ಥೂಲ ಶರೀರದಿಂದ ನಾವು ಸೂಕ್ಷ ಶರೀರಕ್ಕೆ ಬರುವೆವು. ಅಲ್ಲಿಂದ ಹೆಜ್ಜೆ ಹೆಜ್ಜೆಗೂ ಸಕ್ಷವಾಗುತ್ತ ಕಾರಣ ಶರೀರಕ್ಕೆ ಬಂದು ಬೇರೆ ಆವರಣಗಳನ್ನು ಕಳಚುತ್ತ ಮುಂದಕ್ಕೆ ಸಾಗುವೆವು.RD 89
  69. ಪರಾ ಮನಸ್ಸಿನ ಅನಂತರ ಬಂದ ಎಲ್ಲಾ ವಸ್ತುಗಳೂ ಹೃದಯ ಮಂಡಲಕ್ಕೆ ಸೇರಿದುವಾಗಿವೆ. ಅದರ ಪರಿಮಿತಿಯಲ್ಲಿಯೇ ಎಲ್ಲಾ ಚಕ್ರಗಳು ಅಡಕವಾಗಿವೆ. ಬೇರೆ ಶಬ್ದಗಳಲ್ಲಿ ಹೇಳಬೇಕಾದರೆ ಅವು ಈ ದೊಡ್ಡ ಕ್ಷೇತ್ರದ ಒಂದು ಭಾಗವೆಂದು ಹೇಳಬಹುದು. ಮಾನವನ ಪ್ರಗತಿಯ ಎಲ್ಲಾ ಸ್ತರಗಳು ಇದರಲ್ಲಿ ಅಡಗಿವೆ. ಪ್ರಜ್ಞಾನವು ಇಲ್ಲಿದೆ. ಸುಷುಪ್ತಿಯು ಇದರ ಒಂದು ಭಾಗವಾಗಿದೆ. ಈ ಕ್ಷೇತ್ರದಲ್ಲಿ ನಾವೆಲ್ಲರೂ ನೀರಲ್ಲಿಯ ಹಂಸಗಳಂತೆ ವಿಹರಿಸುತ್ತಿದ್ದೇವೆ. ದಿವ್ಯ ಲೋಕದ ಮುಕ್ತಾತ್ಮರೊಂದಿಗೆ ವ್ಯವಹರಿಸುವ ಸ್ಥಿತಿಯು ಇಲ್ಲಿಂದಲೇ ಆರಂಭವಾಗುವುದು. ಈ ವಲಯದಲ್ಲಿ ವೃಷ್ಟಿ ಮನಸ್ಸು ತನ್ನ ಕಾರ್ಯ ಮಾಡುತ್ತಿರುವುದು. ಇದು ಭಗವಂತನ ಬಹುಮುಖ್ಯವಾದ ಧಮನಿ.ERY 16
  70. ಗುರೂಪದೇಶವನ್ನನುಸರಿಸುವುದರಿಂದ ವಿಸ್ತಾರವಾದ  ಈ ಹೃದಯ ಮಂಡಲವನ್ನು ದಾಟುವುದು ಸುಲಭವಾಗಿದೆ. ಆದರೆ ಯಾರು ಎಲ್ಲ ಮಂಡಲವನ್ನು ದಾಟಿ  ಬಹು ಎತ್ತರಕ್ಕೆ ಹೋಗಿರುವನೋ ಮತ್ತು ಯಾರಲ್ಲಿ ಯೌಗಿಕ ಪ್ರಾಣಾಹುತಿಯ ಶಕ್ತಿಯಿದೆಯೋ ಆತನೆ ಸಮರ್ಥ ಗುರುವಾಗಲು ಯೋಗ್ಯನೆಂಬುದನ್ನು ನೆನಪಿನಲ್ಲಿಡ ತಕ್ಕದ್ದು. ನಿಸ್ಸಂದೇಹವಾಗಿ ದೃಡ ಸಂಕಲ್ಪವು ಅಗತ್ಯವಾಗಿರಬೇಕು.ERY 30
  71. ನಾನು ‘ಆತ’ನನ್ನು ಏಕೆ ಪ್ರೀತಿಸುವೆನೆಂಬುದೇ ತಿಳಿಯದಿದ್ದಾಗ ಪ್ರೀತಿಯ ಅರ್ಥವೇನು? ಕೆಲ ವೇಳೆ ಪ್ರೇಮದ ಅವಸ್ಥೆಯಲ್ಲಿ ಭಾವೋದ್ವೇಗ ಉಂಟಾಗುವುದು. ಕೆಲವೇಳೆ ಮನುಷ್ಯನು ಅಳುವುದಕ್ಕಾರಂಭಿಸುವನು. ಮತ್ತೆ ಕೆಲವೇಳೆ ಅಳುವ ಮನಸ್ಥಿತಿಯಲ್ಲಿರುವನು.  ಭಾವೋದ್ವೇಗವು ಮಾನವೀಯ ದೌರ್ಬಲ್ಯವೆಂಬುದರಲ್ಲಿ ಸಂದೇಹವಿಲ್ಲ. ಆದರೂ ಅದು ನೈಸರ್ಗಿಕವಾಗಿರುವುದರಿಂದ ಅದಕ್ಕೆ ನಾನು ಅನುಮತಿ ಕೊಡುವೆನು. ಅದರಿಂದ ಯಾವ ಹಾನಿ ಇಲ್ಲ , ಬದಲು ಸ್ವಲ್ಪ ಲಾಭವೇ ಆಗುವುದು. ಸಾಮಾನ್ಯವಾಗಿ , ಮನುಷ್ಯನು ತಡೆದುಕೊಳ್ಳದಂತಾದಾಗ ಆತನಿಗೆ ಅಳು ಬರುವುದು. ಬೇರೆ ಶಬ್ದದಲ್ಲಿ ಹೇಳುವುದಾದರೆ , ಆತನಿಗೆ ತಡೆದುಕೊಳ್ಳುವ ಸಾಮರ್ಥ್ಯದ ಕೊರತೆಯಿದೆ. AB I P 32
  72. ಪ್ರತಿಯೊಂದು ಬಗೆಯ ಪ್ರಗತಿಗೂ ಏಳು ಬೀಳುಗಳು ಅಗತ್ಯ,AB I P 30
  73. ಅಂಜಿಕೆಯು ನಿಮ್ಮ ಮನದ ಸೃಷ್ಟಿಯಾಗಿದ್ದರೆ ಪ್ರೇಮವು ಊರ್ಧ್ವ ಮನದ ಸೃಷ್ಟಿಯಾಗಿದೆ. ಅಂಜಿಕೆಯಾದರೂ ಮನಸ್ಸಿನ ಭ್ರಾಂತಿಯೆ. ಪ್ರೇಮವು ಜಾಗ್ರತವಾದಾಗ ಭಯವು ಮಾಯವಾಗುತ್ತದೆ. ಕಾರಣವಿಲ್ಲದೆ ಭಯಪಡುವ ಅವಸ್ಥೆಯೊಂದು ಸಾಧಕನಿಗೆ ಬರುವದುಂಟು. ನಿಮ್ಮ  ಮನಸ್ಸು ಅಪ್ಪಣೆ ತೆಗೆದುಕೊಳ್ಳುವ ಅವಸ್ಥೆಗೆ ನೀವು ಬೆಳೆದು ಮೇಲಕ್ಕೆರುತ್ತಿರುವಿರೆಂದು ಅದರ ಅರ್ಥ.AB I P 37
  74. ವಿಚಾರವು ಸತ್ಯದ ತುಕ್ಕು. ವಿಚಾರವೇ ಶಬ್ದಗಳ ಮೂಲ. ವಿಚಾರಗಳು ಪರಿಶುಧ್ಧವಾಗಿದ್ದರೆ ಶಬ್ದಗಳೂ ಶುದ್ಧ ಹಾಗೂ ಪರಿಣಾಮಕಾರಿಯಾಗುವವು.AB I P 42
  75. ಧ್ವನಿ ನಿತ್ಯವಾಗಿ ಎಲ್ಲೆಲ್ಲೂ ಇದೆ. ಆದರೆ ದೈವೀಕೃಪೆಯಿಂದ ಅಂತರ್ಜ್ಞಾನವನ್ನು ಬೆಳೆಸಿಕೊಂಡವರಲ್ಲದೆ ಇತರರು ಅದನ್ನು ಆಲಿಸಲಾರರು. ಇದೇ ಅನಾಹತ ಅಜಪಾ.AB I P 59
  76. ನಾವು ಹೃದಯದ ಮೇಲೆ ಧ್ಯಾನ ಮಾಡುವೆವು. ಧ್ಯಾನ ಸಮಯದಲ್ಲಿ ನಾವು ಓಂಕಾರದ ಸಹಜ ಕಂಪನಗಳನ್ನು ಕೇಳುವವರೆಗೆ ಆಳಕ್ಕೆ ಇಳಿಯುತ್ತ ಹೋಗುವೆವು. ನಾವು ‘ಮೇಲಿನ’ದನ್ನು ತಲುಪಲಾರಂಬಿಸಿದುದರ ಸಂಕೇತವಿದು. ಅದು ಕಟ್ಟಕಡೆಗೆ ತನ್ನ ಸ್ವರೂಪವನ್ನು ತಾನಾಗಿಯೆ ಪ್ರಕಟಗೊಳಿಸುವುದು. ಹೃದಯದಲ್ಲಿ ಅಜಪಾ ಅನುಭವವಾದಾಗ ಅದು ಆ ಚಕ್ರದಲ್ಲಿ ಸ್ವಲ್ಪ ಒತ್ತಡ ಹಾಕಿ ಎಲ್ಲ ಕಡೆಗೂ ಹರಿದಾಡುವುದು. ಕೊನೆಗೆ ಇಡೀ ಅಸ್ತಿತ್ವದಲ್ಲಿಯೇ ಅನುಭವವಾಗುವುದು. ಸಾಧಕನು ತನ್ನ ಮುನ್ನಡೆಯಲ್ಲಿ ತ್ರಿಕುಟಿ ಸ್ಥಾನಕ್ಕೆ ಬಂದಾಗ ಅಲ್ಲಿ ಶಕ್ತಿ ತುಂಬಿದ್ದರೆ ಅನಾಹತವು ನಿಜವಾಗಿ ಆರಂಭವಾಗುವುದು.AB I P 59.
  77. ಗುರು ತನ್ನ ಶಿಷ್ಯನ ಕಾರಣ ಶರೀರವನ್ನು ತನ್ನಲ್ಲಿ ಲಯಗೊಳಿಸಿ ಕೊಳ್ಳುವನು.  ಶಿಷ್ಯನ ಕಾರಣ ಶರೀರವು ಲಯ ಹೊಂದಿದ ಮೇಲೆ ಸಂಸ್ಕಾರಗಳ ನಿರ್ಮಾಣ ನಿಂತು ಬಿಡುವುದು. ‘ಪಿಂಡದ’ ಕಾರಣವು ಬ್ರಹ್ಮಾಂಡ ಮತ್ತು ಬ್ರಹ್ಮಾಂಡದ ಕಾರಣವು ಪರ ಬ್ರಹ್ಮಾಂಡ. ಪರ ಬ್ರಹ್ಮಾಂಡದಲ್ಲಿ ಸಂಭವಿಸುವುದೆಲ್ಲ ಬ್ರಹ್ಮಾಂಡ ಮಂಡಲಕ್ಕೆ ಇಳಿದು ಬರುವುದು  ಅಲ್ಲಿಂದ ಪಿಂಡಕ್ಕೆ ಇಳಿದುಅದು ಭೋಗದ ರೂಪ ತಾಳುತ್ತದೆ ಅರ್ಥಾತ್ ಪಿಂಡದಲ್ಲಿ ಉಂಟಾದ ಭೋಗದ ಮೂಲ ಪರಬ್ರಹ್ಮಾಂಡದಲ್ಲಿದೆ.AB II  VOL I P 61.
  78. ಏನಾದರೂ ತಪ್ಪು ಘಟಿಸಿದರೆ ವಿಶೇಷವಾಗಿ ನಾನು ಹೇಳುವುದು ಯಾರೊಂದಿಗಾದರೂ ಸಂಭಾಷಣೆ ಮಾಡುವಾಗ. ಅವನು ಅವರಲ್ಲಿ ಕ್ಷಮೆ ಯಾಚಿಸಬೇಕು.  ಅಶ್ರುಪೂರ್ಣನಾಗಿ, ಎಷ್ಟು ಹೃದಯದಾಳದಿಂದ ಕ್ಷಮೆಯಾಚಿಸುವನೋ ಅದೇ ಪ್ರಮಾಣದಲ್ಲಿ ಆ ತಪ್ಪಿನ ಶಕ್ತಿಯನ್ನು ಅದು ಕಡಿಮೆ (ದುರ್ಬಲ)ಮಾಡುವುದು.  ಆದರೆ ಸಮಸ್ಯೆ ಏನೆಂದರೆ ಹಾಗೆ ಹೇಳಬಾರದಿತ್ತೆಂದು ಅವನಿಗೆ ಅನ್ನಿಸುವುದೇ ಇಲ್ಲ. ತಾನು ಹೇಳುವುದೆಲ್ಲವೂ ತನ್ನ ಹಕ್ಕು ಎಂದು ಅವನು ಭಾವಿಸುತ್ತಾನೆ. ತಾನು ಹೇಳಿದುದೇ ಸರಿ ಎಂದು ತಿಳಿಯುತ್ತಾನೆ.  ಬೇರೆಯವರಿಗೆ ಪಥ್ಯವಾಗದಿದ್ದುದರ ಗುರುತು ಇಷ್ಟೇ- ಯಾವುದರಿಂದ ಬೇರೆಯವರಿಗೆ ನೋವುಂಟಾಗುವುದು ಅಥವಾ ಅವನ ಮುಖಲಕ್ಷಣ ಬದಲಾಗುವುದು ಆಗ ಅದು ಅವರಿಗೆ ಅಪಥ್ಯವಾಗಿದೆ ಎಂದು ತಿಳಿದುಕೊಳ್ಳಬೇಕು.  ಅವನು ಹಿಂದಿನ ವಿಷಯಗಳ ಬಗ್ಗೆ ಯೋಚಿಸಲಿ, ಯಾವುದು ನೆನಪಿಗೆ ಬರುವುದೋ ಆ ಬಗ್ಗೆ ಪಶ್ಚಾತಾಪ ಪಟ್ಟು ಮೇಲೆ ಹೇಳಿದ ಸೂಚನೆಗಳನ್ನು ಕಾರ್ಯರೂಪದಲ್ಲಿ  ತರಲಿ ಭಗವಂತನನ್ನು ಬಿಟ್ಟರೆ ಬೇರೆ ಯಾರೂ ಪರಿಪೂರ್ಣರಲ್ಲ. ಇದರ ಬಗ್ಗೆ ಯಾವನೂ ಹೆಮ್ಮೆ ಪಟ್ಟುಕೊಳ್ಳುವುದು ನಿರರ್ಥಕ.   ಭಗವಂತನ ಅನುಗ್ರಹದಿಂದ ಮಾತ್ರವೇ ಇದು ಪರಿಪೂರ್ಣ ನಿರ್ದೋಷನಾಗಿರುವುದರ ಸ್ಥಿತಿ. ಇದರ ಅರ್ಥ ಅಂದ ಮೇಲೆ ಹೆಮ್ಮೆ ಪಟ್ಟುಕೊಳ್ಳುವುದಕ್ಕೆ ಅವಕಾಶವಾದರೂ ಎಲ್ಲಿದೆ ?  ದ್ವಂದ್ವ ವಸ್ತುಗಳಲ್ಲಿ ಮನಸ್ಸಿನ ರಂಜನೆ ಉಂಟು. ಒಳಿತು ಮತ್ತು ಕೆಡುಕುಗಳು ಪರಸ್ಪರ ವಿರುದ್ಧವಾದವುಗಳು. ಒಳ್ಳೆಯದನ್ನು ನಾವು ಗುರುತಿಸಬಹುದಾದದ್ದು, ಅದೇ ರೀತಿ  ಕೆಡಕು ಇದ್ದಾಗಲೇ ಅದರ ವಿರುದ್ಧವಾಗಿ ಒಳ್ಳೆಯದು ಅಂದಾಜಿಸಲು ಸಾಧ್ಯ.  ಅವುಗಳ ಆಧಾರತಲ ಏನೆಂಬುದನ್ನು ಗಮನಿಸಿ ನೋಡಿ. ಇವೆಲ್ಲವೂ ಮನುಷ್ಯನ ಮನರಂಜನೆಗೋಸ್ಕರ ಪ್ರಕೃತಿಯು ಕೂಡಿಟ್ಟ ಆಟಿಗೆಯ ವಸ್ತುಗಳು . ಇದನ್ನು ಹೀಗೆ ಒಬ್ಬನು ತಿಳಿದರೆ ಅವನ ದೋಣಿ ದಾಟಿ ದಡ ಮುಟ್ಟಿದಂತೆಯೇ.AB II VOL I P 68
  79. ‘ಹೃದಯ’ದಲ್ಲಿ ನಿನ್ನ ಪ್ರಯಾಣ ಅದಾಗಲೇ ಮುಕ್ತಾಯಗೊಂಡಿದೆ ಹೃದಯ ಚಕ್ರದ ಮೊದಲನೆಯ ಹಂತದ ಸ್ಥಿತಿಯಲ್ಲಿ ಒಂದೇ ಕಡೆ ಇರುವ ನಿಶ್ಚಲತೆಯ ಭಾವ ಬೆಳೆಯುತ್ತದೆ.  ಎರಡನೆಯ ಘಟ್ಟವೆಂದರೆ ಅದರಲ್ಲಿ ಶಾಶ್ವತವಾಗಿ ನೆಲೆಸುವುದು. ( ಯಾವ ಗುರಿಯ ಮೇಲೆ ಹೃದಯವು ಏಕತ್ರಿತವಾಗಿ ಅದರ ಸಾನಿಧ್ಯವನ್ನು ಅನುಭವಿಸುವುದೋ ಅದರಲ್ಲಿ).  ಇದು ಸಾಮಾನ್ಯ ಸಂಗತಿ ಅಲ್ಲ ಮೂರನೆಯ ಘಟ್ಟವೆಂದರೆ  ಅದನ್ನು ಮರೆಯುವುದು.  ಅದಾದ ನಂತರ ಮತ್ತೆ ಪ್ರಯಾಣ ಪ್ರಾರಂಭವಾಗುವುದು. ಅನೇಕ ಸಂಗತಿಗಳು ತೆರೆದು ಕೊಳ್ಳುವವು( ಪ್ರಕಾಶಕ್ಕೆ ಬರುವವು) ಮುಂದಿನ ವಿಷಯಗಳು ಅನುಭವಕ್ಕೆ ಸಂಬಂಧಪಟ್ಟದ್ದು.  ಶಬ್ದಗಳಿಂದ ಅಭಿವ್ಯಕ್ತಿಸಲು ಸಾಧ್ಯವಿಲ್ಲ.AB II VOL I P 163
  80. ಯಾವುದೇ ವ್ಯಕ್ತಿಯು ಒಂದು ವಸ್ತುವಿನಿಂದ ತೃಪ್ತನಾದಾಗ, ನಂತರ ಅವನು ಆ ವಸ್ತುವಿನಿಂದ ಅದೇ (ಹಿಂದಿನ ) ಸಂತೋಷವನ್ನು ಅನುಭವಿಸುವುದಿಲ್ಲ.  ಕ್ರಮೇಣ ಅವನು ಅದನ್ನು ಒಂದು ಸಾಮಾನ್ಯ ವಿಷಯವೆಂಬಂತೆ ಕಾಣುವಲ್ಲಿಗೆ ಬರುತ್ತಾನೆ.AB II VOL I P 163.
  81. ತನ್ನನ್ನು ಭಕ್ತ ಮತ್ತು ಆತನನ್ನು ಓಡೆಯನೆಂದು ಪರಿಗಣಿಸುವುದು ಮಾನವನ ಸೌಜನ್ಯತೆಯಾಗಿದೆ. ಜನರು ಈ ಸ್ಥಿತಿಯನ್ನು ಮರೆತು ತಮ್ಮ ಬಯಕೆಗಳನ್ನು ಅನುಗ್ರಹಿಸಲು ದೇವರನ್ನು ಸಾಧನವೆಂದು ಪರಿಗಣಿಸುತ್ತಾರೆ.AB II VOL I P 175
  82. ಯಾರೇ ಆಗಲಿ , ಒಂದಿಷ್ಟು ಉನ್ನತಿಯನ್ನು ಹೊಂದಿದರೆ ಅವನಲ್ಲಿ ತನ್ನನ್ನು ಕುರಿತು, ಅಷ್ಟೇ ಪ್ರಮಾಣದಲ್ಲಿ ನಿಮ್ನತೆಯ ಭಾವ ಕಂಡು ಬರುತ್ತದೆ. ಇದು ನಿಸರ್ಗದ ಒಂದು ರಹಸ್ಯ. AB II VOL I P 200
  83. ಪ್ರಗತಿಯ ಘಟ್ಟವು , ತಮ್ಮ ಗುರುಗಳ ಮೇಲೆ ಅವರ ಪ್ರೇಮ, ಶ್ರಧ್ಧೆ ಮತ್ತು ಆತ್ಮ ನಿಗ್ರಹಗಳ ಪ್ರಮಾಣಕ್ಕೆ ಅನುಗುಣವಾಗಿದೆ ಎಂಬುದನ್ನು ಜನರು ಅರಿತುಕೊಳ್ಳಲಿ,AB II VOL I P 201.
  84. ಗೌತಮ ಬುಧ್ಧನು ಹೇಳಿದ  ವಿಚಾರಗಳನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಒಂದು ವೇಳೆ ನಮ್ಮ ಮುಖ್ಯ ಗುರಿಯತ್ತ ನಮ್ಮೆಲ್ಲ ಶಕ್ತಿಯನ್ನು ಉಪಯೋಗಿಸಿ ಮುಂದುವರಿದುದಾದರೆ ಈ ಜಗತ್ತಿನ ವಿಚಾರವೇ ನಮಗೆ ಗೌಣ ವಿಷಯವಾಗುತ್ತದೆ. ಈ ವಿಚಾರವು ಪಕ್ವಾವಸ್ಥೆಯನ್ನು ಮುಟ್ಟುವವರೆಗೆ ಧ್ಯಾನದ ಪ್ರಕ್ರಿಯೆಯನ್ನು ಮುಂದುವರಿಸಿ. ಇದು ಧ್ಯಾನದ ಕೊನೆಯ ಹಂತ.VR II 170
  85. ಎಲ್ಲರೂ ಸುಲಭವಾಗಿ ಅನುಸರಿಸಲು ಸಾಧ್ಯವಾಗುವಂತಹ ಸರಳ ವಿಧಾನವನ್ನು ಸೂಚಿಸುತ್ತೇನೆ. ಒಂದು ವೇಳೆ ಯಾರಾದರೂ ತನ್ನ ಹೃದಯವನ್ನು ಮಾರಿಕೊಳ್ಳಬಲ್ಲನಾದರೆ, ಅರ್ಥಾತ್, ಅದನ್ನು ದಿವ್ಯ ಸ್ವರೂಪನಾದ ಸದ್ಗುರುವಿಗೆ ಕಾಣಿಕೆಯಾಗಿ ಸಮರ್ಪಿಸುವುದಾದರೆ- ಮತ್ತೇನೂ ಮಾಡುವುದು ಉಳಿಯುವುದಿಲ್ಲ. ಇದು, ಅವನನ್ನು ಅತ್ಯಂತ ಸಹಜವಾದ ರೀತಿಯಲ್ಲಿ, ಅನಂತ ಸತ್ಯದಲ್ಲಿ ಲೀನವಾಗುವ ಸ್ಥಿತಿಗೆ ತರುತ್ತದೆ.  ಈ ಉದ್ದೇಶಕ್ಕೆ ಅಗತ್ಯವಾಗಿ ಬೇಕಾಗಿರುವುದೆಂದರೆ ದಿಟ್ಟತನದ ಆರಂಭವಷ್ಟೆ.ME P 10
  86. ‘ಸಹಜ ಮಾರ್ಗ’ ಪದ್ಧತಿಯಲ್ಲಿ , ಈಗ ‘ದೈವೀಕರಣ’ವೆಂಬ ಹೊಸದೊಂದು ಅಧ್ಯಾಯ ಆರಂಭವಾಗುತ್ತದೆ. ಅದು ಅಸುರೀಕರಣವನ್ನು ನಮ್ಮ ಸಂರಚನೆಯಿಂದ ದೂರ ಮಾಡುವ ದೈವೀಕರಣ. ಈ ಕೆಲಸವನ್ನು ನಾವು ನಮ್ಮ ಅಸ್ತಿತ್ವದ ಪ್ರತಿಯೊಂದು ಕಣದ ಮೇಲೂ ಮಾಡಬೇಕಿದೆ. ಶರೀರದ ಪ್ರತಿಯೊಂದು ಅಣು-ಅಣುವಿನ ಮೇಲೂ ಕಾರ್ಯವು ಮುಂದುವರಿಯುತ್ತದೆಂದು ನಾನು ಹೇಳಿದರೆ ಜನರು ನಕ್ಕಾರು. ನಾವು ಅನುಸರಿಸುವ ಕಾರ್ಯ ವಿಧಾನವನ್ನು ನಾನಿಲ್ಲಿ ಸಂಕ್ಷಿಪ್ತದಲ್ಲಿ ಹೇಳೀದ್ದೆನೆ. ಅಂಥ ವ್ಯಕ್ತಿಯನ್ನು ರೂಪಣಗೊಳಿಸುವುದು ಸಹಜ ಮಾರ್ಗವೊಂದೇ ಸೈ.ME P 49
  87. ಮನುಷ್ಯನ ಸುಖ-ಸೌಕರ್ಯಗಳಿಂದ ಕೂಡಿದ, ಅಚ್ಚುಕಟ್ಟಾದ ಜೀವನವನ್ನು ಸಾಗಿಸಲು ಸಾಧ್ಯವಾಗಬೇಕೆಂಬ ದೃಷ್ಟಿಯಿಂದ ಒಳ್ಳೆಯ ಲೌಕಿಕ ತರಬೇತಿಯನ್ನು ಕೊಡುವ ಪ್ರಯತ್ನ ನಡೆಯುತ್ತಿದೆ. ಆದರೆ ಆತ್ಮಸಾಕ್ಷಾತ್ಕಾರಕ್ಕಾಗಿ ಬೇಕಾಗುವ ಮನಸ್ಸಿನ ತರಬೇತಿಯನ್ನು ದುರ್ಲಕ್ಷ ಮಾಡಲಾಗಿದೆ. ಜೀವನದ ಈ ಮಹತ್ವ ಪೂರ್ಣವಾದ ಸಮಸ್ಯೆಗೆ ತೀರ ಕಡಿಮೆ ಪ್ರಾಶಸ್ತ್ಯ ಕೊಡಲಾಗಿದೆ. ದಿನಾಲೂ ದೇವಿ ದೇವತೆಯರ ಸ್ತುತಿಪರವಾದ ಶ್ಲೋಕಗಳನ್ನು ಪಠನ ಮಾಡುವುದಾಗಿ, ಪೂಜೆಯ ರೂಪದಲ್ಲಿ ಕೆಲವು ಔಪಚಾರಿಕ ಸಂಪ್ರದಾಯಗಳನ್ನಾಚರಿಸುವುದಾಗಲಿ ಇವಿಷ್ಡನ್ನೇ ಜನತೆಗೆ ಕಲಿಸಲಾಗುತ್ತದೆ. ಅವರು ತಮ್ಮ ಜೀವನಾವಧಿ ಆಚರಿಸಿದರೂ ಯಾವ ಲಾಭವನ್ನೂ ಹೊಂದುವುದಿಲ್ಲ.RD 53