1. ನಿಜವಾಗಿಯೂ  ಶ್ರದ್ಧೆಯು ಇಡೀ ಆಧ್ಯಾತ್ಮಿಕ ಕಟ್ಟಡದ ಬುನಾದಿಯಾಗಿದೆ.RD 69
  2. ನೀವು ನಿಜವಾಗಿಯೂ ಯಶ ಗಳಿಸಬೇಕಾದರೆ ಸತ್ಯವಸ್ತುವಿನಲ್ಲಿಯೂ, ಸಾಕ್ಷಾತ್ಕಾರಕ್ಕಾಗಿ ನೀವು ಅನುಸರಿಸುವ ಸರಿಯಾದ ದಾರಿಯಲ್ಲಿಯೂ, ನೀವು ಶರಣು ಹೋದ ಸಮರ್ಥ ಗುರುವಿನಲ್ಲಿಯೂ ಶ್ರದ್ಧೆಯಲ್ಲಿಟ್ಟು ಈ ಅಡಿಗಲ್ಲಿನ ಮೇಲೆಯೇ ಆಧ್ಯಾತ್ಮಿಕ ಸೌಧವನ್ನು ರಚಿಸಬೇಕು.RD 69-70
  3. ಪಾಂಡಿತ್ಯದ, ವಾಕ್ಪಟುತ್ವದ ಅಥವಾ ಶಕ್ತಿಯ ಬಾಹ್ಯಾಡಂಬರದ ಪ್ರೋತ್ಸಾಹನವು ಅನೇಕ ಸಂಗತಿಗಳಲ್ಲಿ ಅನರ್ಥಕಾರಿಯಾದ ಪರಿಣಾಮಗಳನ್ನುಂಟು ಮಾಡುವ ಅಂಧ ಶ್ರದ್ಧೆಯನ್ನು ಬೆಳೆಸುತ್ತದೆ.RD 70
  4. ನಿಜವಾದ ಅರ್ಥದಲ್ಲಿ ಶ್ರದ್ಧೆಯು ಮರ್ತ್ಯನನ್ನು ಅಮೃತತ್ವದೊಂದಿಗೆ ಜೋಡಿಸುವ ಕೊಂಡಿಯಾಗಿದೆ.ಅಮೃತದೊಂದಿಗೆ ತಾನು ಸ್ವತ: ಸಂಬಂಧಪಟ್ಟ ಗುರುವಿನ ಮಧ್ಯಸ್ತಿಕೆಯಿಂದ ಇದು ನಿ:ಸಂದೇಹವಾಗಿ ಸಾಧಿಸುವುದು. ಒಮ್ಮೆ ಸ್ಥಾಪಿತವಾದ ಸಂಬಂಧವು ಎಂತಹ ಸಂದರ್ಭದಲ್ಲಿಯೂ ಮುರಿಯಲು ಬಾರದಂತಿದ್ದು. ನಾವು ಕೊನೆಯ ಮಜಲನ್ನು ಮುಟ್ಟುವವರೆಗೂ ಉಳಿದುಕೊಳ್ಳುತ್ತದೆ. ಶ್ರದ್ಧೆಯು ಯೋಗದ ಮೂರನೆಯ ಸಾಧನವಾದ ಷಟ್ಸಂಪತ್ತಿಗಳಲ್ಲೊಂದು. ಈ ಹಂತದಲ್ಲಿ ಶ್ರದ್ಧೆಯು ನಿಜವಾದುದಾಗಿದ್ದು ಮನುಷ್ಯನು ಅದರಿಂದ ಕ್ಷಣಕಾಲವೂ ವಿರಹಿತನಾಗದಷ್ಟು ದೃಢವಾಗಿ ಸ್ಥಾಪಿತವಾಗಿರುತ್ತದೆ.RD-71
  5. ನಿಜವಾದ ಶ್ರದ್ಧೆಯು ಅನಿರ್ವಚನೀಯ ಸದ್ಗುಣವಾಗಿದ್ದು ಸಾಂಪ್ರದಾಯಿಕ ಧರ್ಮದ ವಲಯವನ್ನು ಮೀರಿರುವುದು. ಅದು ನಮ್ಮನ್ನು ಯಶಸ್ಸಿನ ಕಡೆಗೆ ಒಯ್ಯುವ ನಿರ್ಭೀತ ಧೈರ್ಯವಾಗಿದೆ; ನಮ್ಮ ಮಾರ್ಗವನ್ನು ಸುಗಮಗೊಳಿಸುವ ವ್ಯಾಪಕ ಶಕ್ತಿಯಾಗಿದೆ. ವಸ್ತುತ: ನಮ್ಮ ಜೀವನದ ಸಮಸ್ಯೆಯನ್ನು ಬಿಡಿಸುವುದು ಅದೊಂದೇ.RD-71
  6. ಈ ರೀತಿಯಿಟ್ಟ ಶ್ರದ್ಧೆಯು ನಿಜವಾದುದೂ ಕೊನೆಯವರೆಗೂ ಉಳಿಯುವಂತಹದೂ ಆಗಿರುತ್ತದೆ. ಇದಕ್ಕೆ ವಿರುದ್ಧವಾಗಿ, ತೋರಿಕೆಯ ಕರ್ಷಣೆಗಳಿಂದಾಗಲಿ ಕ್ಷುಲ್ಲಕವಾದ ಭೌತಿಕ ಸಿದ್ಧಿಗಳ ಪ್ರದರ್ಶನದಿಂದಾಗಲಿ ಸಂಪಾದಿಸಲಾದ ಶ್ರದ್ಧೆಯು ಶ್ರದ್ಧೆಯೇ ಅಲ್ಲ. ಅದು ಬಲತ್ಕಾರ ಮಾತ್ರ.RD -67
  7. ನನ್ನ ತಲೆ ಯಾರ ತೊಡೆಯ ಮೇಲಿದ್ದಿತೋ ಆ ಮನುಷ್ಯನು ನನಗೆ ಗುರುಗಳು ಬಹಳ ಶೀಘ್ರ ಕಲಿಸಿದರೆಂದು ಅಭಿಪ್ರಾಯಪಟ್ಟ. ಗುಹೆಯಿಂದ ಹೊರಗೆ ಬಂದ ಮೇಳೆ, ತಾನೂ ಗುರುಗಳಿಂದ ಕಲಿಯಬೇಕೆಂದು ಆ ಮನುಷ್ಯನಿಗೆ ಹೇಳಿದೆ. ಆದರೆ ಅವನು ತನ್ನ ಅಸಮ್ಮತಿಯನ್ನು ನಿರಾಶೆಯನ್ನು ವ್ಯಕ್ತಪಡಿಸಿದ.AB I P 118