1. ಭಕ್ತಿಯು ಗುರಿಯನ್ನು ಮಟ್ಟಲು ಒಂದು ಸಾಧನವೇ ಹೊರತು ತಾನೇ ಗುರಿಯಲ್ಲ.RD 15
  2. ಸರ್ವ ಶ್ರೇಷ್ಠ ಗುರುವಿನಲ್ಲಿ ತಾದಾತ್ಮ್ಯ ಹೊಂದುವುದಕ್ಕಾಗಿ ನಾವು ಭಕ್ತಿಯನ್ನಾಚರಿಸುವೆವು.RD 79
  3. ಏನು ಮಾಡುತ್ತಿದ್ದೇನೆ , ಏಕೆ ಮಾಡುತ್ತಿದ್ದೇನೆ’ ಎಂಬ ಅರಿವಿಲ್ಲದೆ ಸರ್ವಶಕ್ತನ ತರಂಗದಲಿ ಕೈಕಾಲು ಬಡಿಯುವುದು. ತನ್ನ ಅರಿವಾಗಲಿ ಸಾಧನೆಯ ಅರಿವಾಗಲಿ ಇಲ್ಲದಿರುವುದೇ ಶ್ರೇಷ್ಠತಮ ಭಕ್ತಿ.AB I P 43.
  4. ಭಕ್ತನು ಯಾವಾಗಲೂ ಭಕ್ತಿಯ ವಲಯದಲ್ಲಿರುವುದೇ ಮಾನವೀಯ ವಿನಯದ ಪರಿಪೂರ್ಣ ಲಕ್ಷಣ. ಮೂಲದಿಂದ ಬಂದ ಎಲ್ಲ ವಸ್ತುಗಳೂ ಒಂದೇ ಉಗಮದಿಂದ ಬಂದುವೆಂದು ತಿಳಿಯಬೇಕು.TM 45
  5. ನನ್ನ ಸರ್ವಸ್ವವೆಂದು ನಾನು ಭಾವಿಸಿಕೊಂಡವನ ವಿಷಯದಲ್ಲಿ ನಾನು ಕೊನೆಯವರೆಗೂ ಅಂಧಭಕ್ತನಾಗಿಯೆ ಇದ್ದೆ. ಯಾವುದು ಸರಿ ಯಾವುದು ತಪ್ಪು ಎಂಬ ಬಗ್ಗೆ ನಾನೆಂದೂ ಪೇಚಾಡಲಿಲ್ಲ. ಎಲ್ಲವೂ ಕೇವಲ ಆತನೊಬ್ಬನನ್ನು ಕುರಿತ ವಿಚಾರದಲ್ಲಿಯೆ ಕರಗಿ ಹೋಗಿತ್ತು.ದೇವ-ದೇವತೆಗಳ ಪೂಜೆಯ ವಿಷಯದಲ್ಲಿ ಹೇಳಬೇಕಾದರೆ, ನನಗೆಂದಿಗೂ ಅವರ ಅಗತ್ಯವಿರಲಿಲ್ಲ. ಈಗಲೂ ಇಲ್ಲ.VR I
  6. ವಸ್ತುತಃ ನಿರಂತರ ಸ್ಮರಣೆಯು ಧ್ಯಾನಾಭ್ಯಾಸದ ಸಹಜ ವಿಕಾಸ. ಧ್ಯೇಯ ವಸ್ತುವಿಗೆ ಅಥವಾ ನಿರಂತರ ಸ್ಮರಣೆಗೆ ಅಭ್ಯಾಸಿಯು ನಿಷ್ಠೆ(ಭಕ್ತಿ)ಯುಳ್ಳವನಾದಾಗ ಅದಕ್ಕೆ ಹೆಚ್ಚಿನ ಸಾಮರ್ಥ್ಯ ಪ್ರಾಪ್ತವಾಗುತ್ತದೆ. ಆಗ ಅದು ಶುಷ್ಕ ಅಭ್ಯಾಸವಾಗಿರದೆ, ಮಧುರವಾದ ಸಂಪೂರ್ಣ ನಿಮಗ್ನಗೊಳಿಸುವ ಪ್ರವರ್ತನೆಯಾಗುತ್ತದೆ.  ಪ್ರೇಮ, ಭಕ್ತಿಗಳ ಬೆಂಕಿ ಮಾತ್ರವೇ ತುಚ್ಛ ಕಸಗಳನೆಲ್ಲ ಸುಟ್ಟುಹಾಕಿ, ಬಂಗಾರವನ್ನು ಕಸದಿಂದ ಬೇರ್ಪಡಿಸಿ ದೊರಕಿಸಿಕೊಡುತ್ತದೆ.SMP 66
  7. ಭಕ್ತಿ ಮತ್ತು ಪ್ರೇಮಗಳು ಸರಳವಾಗಿವೆ ಎಂದೆನಿಸುವುದೇನೋ ಸರಿ, ಆದರೆ, ಅದೇ ಹೊತ್ತಿನಲ್ಲಿ, ಅವುಗಳನ್ನು ಸಾಧಿಸುವುದು ಬಹಳ ಕಠಿಣವಾಗಿರುವುದೂ ಹೌದು. ನಿಜವಾದ ಭಕ್ತಿಯಲ್ಲಿ ಸೋಗಿನ ಲವಕೇಶವೂ ಇರುವುದಿಲ್ಲ, ಮತ್ತು ಅದು ಜ್ಞಾನ ಪ್ರಕಾಶನದ ಜೊತೆ ಜೊತೆಯಾಗಿಯೇ ಇರುತ್ತದೆ.SMP 66-67
  8. ಭಕ್ತಿಯ ಸೂಕ್ಷ್ಮತಮ ದಶೆಯೆಂದರೆ, ಸಂಪೂರ್ಣ ಸಮರ್ಪಣೆಯೆಂದು ಹೇಳಬಹುದು. ಅದರಲ್ಲಿ(ಸಂಪೂರ್ಣಸಮರ್ಪಣೆಯಲ್ಲಿ) ಸಮರ್ಥಸದ್ಗುರುವಿನ ಅನುಗ್ರಹದಿಂದ, ಸಮರ್ಪಣೆಯ ಅರಿವು ಕೂಡ ಸಂಪೂರ್ಣವಾಗಿ ಹಿಂದೆ ಸರಿದಿರುತ್ತದೆ.SMP 67
  9. ಭಕ್ತಿ, ಸಮರ್ಪಣೆ ಮುಂತಾದವುಗಳನ್ನು ಸಹಜ ರೀತಿಯಲ್ಲಿ ಅಭ್ಯಾಸ ಮಾಡುವುದು ಹೇಗೆಂಬ ಸಮಸ್ಯೆಯೊಂದಿದೆ. ಈ ಉದ್ದೇಶಕ್ಕೆ ಮಾನವನೊಬ್ಬನು ಮಾನವವರ್ಗಕ್ಕೆ ಸೇರಿದ ವ್ಯಕ್ತಿಯನ್ನು ಅತ್ಯಂತ ಹೆಚ್ಚು ಪ್ರೀತಿಸಬಲ್ಲನೆಂದು ಹೇಳಲಾಗುತ್ತದೆ. ಆದುದರಿಂದ ಗುರುವನ್ನು ಪರತತ್ವದ ಮೂರ್ತರೂಪವೆಂದು ಪರಿಗಣಿಸಲಾಗುವುದು. ನನ್ನ ಮಟ್ಟಿಗೆ, ನನ್ನ ಗುರುಗಳು ನನ್ನ ಪ್ರೇಮದ ಏಕ ಮಾತ್ರ ವಸ್ತುವಾಗಿದ್ದರು. ನಾನು ಕೇವಲ ಅವರನ್ನು, ಅವರನ್ನೊಬ್ಬರನ್ನೇ ಪ್ರೀತಿಸುವವನಾಗಿದ್ದೇನೇ ಹೊರತು, ಸ್ವಾತಂತ್ರ್ಯವನ್ನಾಗಲಿ, ಶಾಂತೀಯನ್ನಾಗಲಿ, ಪರಿಪೂರ್ಣತೆಯನ್ನಾಗಲಿ, ಅಥವಾ ಇನ್ನಾವುದನ್ನಾಗಲಿ ಪ್ರೀತಿಸುವವನಾಗಿರಲಿಲ್ಲ. ಅವರ ಮೇಲೆ ಧ್ಯಾನಮಾಡಲಿಕ್ಕೆ ಮತ್ತು ಭಕ್ತಿನಿಷ್ಠರಾಗಿರಲಿಕ್ಕೆ, ಅತ್ಯಂತ ಯೋಗ್ಯವ್ಯಕ್ತಿಯಾಗಿದ್ದ ಅವರು, ನಾನು ಅವರನ್ನು ಹಾಗೆ ಪ್ರೇಮಿಸಲು ನಿಃಸಂದೇಹವಾಗಿ ಅರ್ಹರಾಗಿದ್ದರು. ಅಹಂಕಾರದ ಭಾವನೆಗಳಿಂದಲೂ, ಆಶೆಗಳಿಂದಲೂ, ಪ್ರಾಪಂಚಿಕ ಲೇಪಗಳಿಂದಲೂ ಸಂಪೂರ್ಣ ಮುಕ್ತರಾಗಿದ್ದ ಅವರು ಕೇವಲ ಆತ್ಮನಿಷ್ಠರಾಗಿದ್ದರು.SMP 67