1. ಶ್ರೇಷ್ಠ ಗುರುವಿಗೆ ನಾವು ಶರಣಾಗತರಾದಾಗ ಆತನಿಂದ ಅತ್ಯುಚ್ಚ ದೈವೀಶಕ್ತಿಯನ್ನು ಸತತವಾಗಿ ಆಕರ್ಷಿಸತೊಡಗುವೆವು.RD 79.
    2. ಆತ್ಮ ಸಮರ್ಪಣೆಯೆಂದರೆ, ಸ್ವಂತದ ಪರಿವೆಯು ಸ್ವಲ್ಪವೂ ಇಲ್ಲದಂತೆ, ಗುರುವಿನ ಇಚ್ಛೆಗೆ ಸಂಪೂರ್ಣವಾಗಿ ತನ್ನನ್ನು ಒಪ್ಪಿಸಿಬಿಡುವುದಲ್ಲದೆ ಬೇರೇನೂ ಅಲ್ಲ. ಈ ಸ್ಥಿತಿಯಲ್ಲಿ ಸ್ಥಿರವಾಗಿ ನೆಲೆಗೊಂಡು ನಿಂತರೆ, ಅದು ಆತ್ಮನಿರಸನದ ಸ್ಥಿತಿಯು ಪ್ರಾರಂಭಕ್ಕೆ ಒಯ್ಯುತ್ತದೆ. SMP-69
    3. ಈ ಸ್ಥಿತಿಯಲ್ಲಿ ಮನುಷ್ಯನು ತನ್ನ ಗುರುವಿನ ಇಚ್ಛೆಯಂತೆ ಮಾತ್ರ ವಿಚಾರಿಸುವನು ವರ್ತಿಸುವನು. ಜಗತ್ತಿನಲ್ಲಿ ತನ್ನದೆಂಬುದೇನೂ ಇಲ್ಲವೆಂದೂ ,ಎಲ್ಲವೂ ಗುರುವಿನ ಪವಿತ್ರನ್ಯಾಸವೆಂದೂ ಅನುಭವಿಸಿ ಪ್ರತಿಯೊಂದು ಕಾರ್ಯವನ್ನು ಗುರುವಿನಾಜ್ಞೆಯೆಂದು  ತಿಳಿದು ಮಾಡುವನು. ಆತನ ಇಚ್ಛೆಯು ಗುರುವಿನ ಇಚ್ಛೆಗೆ ಸಂಪೂರ್ಣವಾಗಿ ವಶವರ್ತಿ. RD 79-80
    4. ಭಕ್ತಿಯಪ್ರಾಥಮಿಕನಿಯಮಗಳನ್ನನುಸರಿಸುತ್ತನಡೆದುಎಲ್ಲಇಂದ್ರಿಯಗಳಹಾಗೂಬುದ್ದಿಶಕ್ತಿಗಳಪೂರ್ಣನಿರಸನವಾದಮೇಲೆಅದುಪ್ರಾರಂಭವಾಗುತ್ತದೆ.RD 80
    5. ನೀವು ಸಮರ್ಪಣಕ್ಕಾಗಿ ಪ್ರಯತ್ನಪಟ್ಟುದಾದರೆ  ‘ಅಹಂ’ಕಾರವು ಬೆಳೆಯುತ್ತ ಹೋಗಿ ಬಲಪಡುವುದು. ಹೀಗೆ, ನೀರಿನಲ್ಲಿ ಜಿಗಿಯುವ ಬದಲು ಬೆಂಕಿಯಲ್ಲಿ ಬಿದ್ದಂತಾಗುವುದು. AB I P 27.
    6. ಆತ್ಮಸಮರ್ಪಣದ ಮೇಲಿನ ಹಂತದಲ್ಲಿ ಇಂಥ ವಿವೇಚನ ಶಕ್ತಿಯು ಬಹುಶ: ಇಲ್ಲದಂತಾಗಿ ಮನುಷ್ಯನು ಪ್ರತಿಯೊಂದು ಕಾರ್ಯವನ್ನು ಗುರುಸಂಕಲ್ಪವೆಂದು ತಿಳಿದು ಮಾಡುವನು. ಆತನ ಮನಸ್ಸಿನಲ್ಲಿ ತಪ್ಪು-ಒಪ್ಪುಗಳ ಪ್ರಶ್ನೆಯೇ ಏಳದು. ಏಕೆಂದರೆ ಗುರುವಿನ ಇಚ್ಛೆಯನ್ನನುಸರಿಸುವುದರಿಂದ ಕೇವಲ ಯುಕ್ತವಾದದ್ದನ್ನೆ ಮಾಡುವೆನೆಂಬುದು ಪೂರ್ಣ ಖಂಡಿತವಾದಂತಾಗುವುದು. ಆಗ ಆತನು ಗುರುಸಂಕಲ್ಪವೆಂದು ಬಗೆದು ಯುಕ್ತವಾದುದನ್ನುಳಿದುಮತ್ತೇನನ್ನೂ ಮಾಡನು.RD 83