( ೧೫ – ೧೨ – ೧೯೫ ೭ ರಂದು ಗುಲ್ಬರ್ಗ ಕೇಂದ್ರದಲ್ಲಿ ನೀಡಿದ ಸಂದೇಶ )

ಪ್ರಿಯರೇ ,

ಮಾನವಕುಲದ ಮೇಲೆ ನನಗಿರುವ ಆಳವಾದ ಮಮತೆಯಿಂದಾಗಿ ಪ್ರತಿಯೊಂದು ಹೃದ ಯವೂ ಶಾಂತಿ , ಸಂತೋಷಗಳಿಂದ ತುಂಬಿ ತುಳುಕಲಿ ಎಂದು ನಾನು ನನ್ನ ಹೃದಯದ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದೇನೆ. ಅವು, ನನ್ನ ಅಸ್ತಿತ್ವದ ಅವಿಭಾಜ್ಯ ಅಂಗವೇ ಆಗಿರುವ ನನ್ನ ಸಹಜೀವಿಗಳ ಹೃದಯದಲ್ಲಿ ಬುದ್ಗುದಿಸ ಲಿ . ನಿಮ್ಮ ಹೃದಯಗಳಲ್ಲಿ ಕಾಲಕ್ರಮೇಣ ಸಹಜವಾದ ರೀತಿಯಿಂದ, ಪರಿಣಾಮವನ್ನುಂಟುಮಾಡಲು, ನನ್ನ ಹೃದಯವು ಎಡೆಬಿಡದೆ ನಿಃಶಬ್ದವಾಗಿ ಪ್ರೇರ ಣೆ ಯನ್ನೀಯುತ್ತ, ಇಲ್ಲಾಗಲಿ, ಬೇರೆಡೆಗಳಲ್ಲಾಗಲಿ ಇರುವ ನಿಮ್ಮೆಲ್ಲರೊಡನೆ ಜೋಡಿಸಲ್ಪಟ್ಟಿದೆ. ಆದರೆ, ಅಂತಿಮ ತತ್ವದ ಸಾಕ್ಷಾತ್ಕಾರಕ್ಕೋಸ್ಕರ, ತನಗೆ ಬೇಕಾದ ಆಧ್ಯಾತ್ಮಿಕ ಆವಶ್ಯಕತೆಗಳ ಬಗ್ಗೆ ಜಾಗ್ರತನಾಗುವುದು ಪ್ರತಿ ಯೊಬ್ಬ ಜೀವಾತ್ಮನಿ ಗೂ   ಸೇ ರಿದ್ದು.

ಧಾರ್ಮಿಕ ಚೇತನವು ಒಂದಿಲ್ಲೊಂದು ವಿಧದಲ್ಲಿ ಸದಾ ಪ್ರವಹಿಸುತ್ತಿರುವ ದೇ ಶಕ್ಕೆ ಸೇರಿದವರು ನಾವು . ಜೀವನದ ಗುರಿಯನ್ನು ತಲುಪಲು ವಿವಿಧ ಸಾಧನಗಳು ಅಂಗೀಕರಿಸಲ್ಪಟ್ಟಿವೆ. ಜೀವನದ ನಿಜವಾದ ತಿರುಳಿನಲ್ಲಿ (ಸಾರದಲ್ಲಿ) ಲೀನನಾಗುವ ರೀ ತಿ ಯಲ್ಲಿ ಹೃ ದ ಯವು ಆ ಗುರಿಯೊಂದಿಗೆ ಸಂಬಂಧ ಹೊಂದಿದ್ದರೆ, ಆ ಸಾಧನಗಳು ಸರಿಯಾಗಿರಬಹುದು. ನಾವು ಯಾವ ಪರಮಸತ್ಯದಿಂದ ಉದಿಸಿ ಬಂದಿರುವೆವೋ, ಅದರಲ್ಲಿ ಐಕ್ಯವನ್ನು ಸಾಧಿಸಲೋಸುಗವೇ ನಾವು ಹುಟ್ಟಿ ಬೆಳೆದಿದ್ದೇವೆ. ನಾವು ನಮ್ಮೊಡನೆ ಅನಂತ’ದ ಸಾರವನ್ನೇ ತಂದಿದ್ದೇವೆ. ನಮ್ಮ ಆಲೋಚನೆಯು ಅನಂತದಲ್ಲಿ ಲೀನವಾಗಲು, ಅದನ್ನು ಮುಕ್ತವಾಗಿಡಲೋಸುಗ, ಆ “ಸಾರ’ದ ಸಂಪರ್ಕದಲ್ಲಿ ( ಅತ್ಯಂತ ಸಮೀಪವಾಗಿ) ಇರಲು ಪ್ರಯತ್ನಿಸಬೇಕು. ನಾವಿದನ್ನು ಅಲಕ್ಷಿಸಿದರೆ, ನಾವು ಆಲೋಚನೆಗಳ ಚಟುವಟಿಕೆಗಳಿಗೇ ಬದ್ಧರಾಗಿದ್ದು ಬಿಡುತ್ತೇವೆಯೇ ಹೊರತು ಮೂಲದಲ್ಲಿರುವ ಅಪರಿಮಿತವಾದ ಸತ್ಯಕ್ಕಲ್ಲ . ಸಾರಭೂತವಾದ ನೈಜಭಾವವನ್ನು ಲಕ್ಷಿಸದೆ ಸಮರ್ಪಿಸುವ ಪ್ರಾರ್ಥನೆ, ಸ್ತೋ ತ್ರಗಳು ಸಾಮಾನ್ಯವಾಗಿ ಮಿಥ್ಯಾಪ್ರಶಂಸೆಯಾಗಿ ಪರಿಣಮಿಸುತ್ತವೆ.

ಪರಿಹಾರವು ಪಕ್ಕದಲ್ಲೇ ಇದ್ದರೂ , (ಅದನ್ನು ಗಣಿಸದೆ), ದೊಡ್ಡ ಉಪದೇಶಕರು, ಉನ್ನತ ಮಟ್ಟಕ್ಕೊಯ್ಯುವ ಮಾರ್ಗೋಪಾಯಗಳನ್ನು ಯೋಜಿಸಲು ಸದಾ ಕ್ರಿಯಾಶೀಲತೆಯಿಂದ ತರ್ಕಿಸುತ್ತಲೇ ಬಂದಿದ್ದಾರೆ. ವಾಸ್ತವದಲ್ಲಿ, ಯಾವ ಮಾರ್ಗವು ನಿಮಗೆ ಹತ್ತಿರವಿರುವುದೋ, ಅದೇ ಪರಮಾತ್ಮನನ್ನು ಸೇರುವ ಅತ್ಯಂತ ಸಮೀಪದ ಮಾರ್ಗವೂ ಆಗಿದೆ. ಈ ವಿಷಯದಲ್ಲಿ ನನ್ನ ಪೂಜ್ಯ ಗುರುಗಳಾದ, ಫತೇಗಡದ ಮಹಾತ್ಮಾ ಶ್ರೀ ರಾಮಚಂದ್ರಜಿ ಮಹಾರಾಜರು, ಜೀವನದ ಗುರಿಯನ್ನು ತಲುಪಲು ಅತ್ಯಂತ ಸುಲಭೋಪಾಯವನ್ನು ಒದಗಿಸಿ, ಮಾನವಕುಲಕ್ಕೆ ಮಾಡಿದ ಸೇವೆಯು ಆಶ್ಚರ್ಯವನ್ನುಂಟುಮಾಡುವಂತಹದು. ಅವರ ಪದ್ದತಿಗಳು ಎಷ್ಟು ಸರಳವಾಗಿವೆಯೆಂದರೆ, ಅ ವು ಗಳ ಸರಳತೆಯೇ ಜನಸಾಮಾನ್ಯರ ತಿಳಿವಳಿಕೆಗೆ ಒಂದು ತೆರೆಯಾಗಿದೆ. ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ‘ಸತ್ತೆ’ಯನ್ನು (ಪರಮಾತ್ಮನನ್ನು) ಸಾಕ್ಷಾತ್ಕರಿಸಿಕೊಳ್ಳಲು ಸರಳ ಹಾಗೂ ಸೂಕ್ಷ್ಮ ಸಾಧನಗಳ ಆವಶ್ಯಕತೆಯಿದೆ. ಸಾಕ್ಷಾತ್ಕಾರವನ್ನು ಅತೀವ ಕಷ್ಟಕರ ಹಾಗೂ ಜಟಿಲವಾದ ಕೆಲಸವೆಂಬಂತೆ ಬಿಂಬಿಸಲಾಗಿದೆ. ಇದು ಜನರಲ್ಲಿ ಅತಿಯಾದ ಅಧೀರತೆ ಯನ್ನುಂಟುಮಾಡಿ, ಅವರು ದಿಗಿಲಾಗಿ ದೂರ ಸರಿಯುವಂತೆ ಮಾಡುತ್ತದೆ. ಅಂತಹ ಭಾವನೆಗಳನ್ನು ಮನಸ್ಸಿನಿಂದ ತ ಳ್ಳಿಹಾಕಬೇಕು. ಯಾಕೆಂದರೆ ಅವು ನಮ್ಮ (ಆಧ್ಯಾತ್ಮಿಕ) ಮುನ್ನಡೆಯಲ್ಲಿ ಸಹಾಯಕವಾದ ನಮ್ಮ ಏಕೈಕ ಪರಿಕರವಾದ ಮನಸ್ಸನ್ನು ದುರ್ಬಲಗೊಳಿಸುತ್ತವೆ. ಈ ನನ್ನ ಸ್ವಂತ ಅನುಭವದ ಆಧಾರದ ಮೇಲೆ, ಎಲ್ಲರೂ ಸುಲಭವಾಗಿ ಅ ನುಸರಿಸಲು ಸಾಧ್ಯವಾಗುವಂತಹ ಸರಳ ವಿಧಾನವನ್ನು ಸೂಚಿಸುತ್ತೇನೆ. ಒಂದು ವೇಳೆ ಯಾರಾದರೂ ತನ್ನ ಹೃದಯವನ್ನು ಮಾರಿಕೊಳ್ಳಬಲ್ಲನಾದರೆ, ಅರ್ಥಾತ್, ಅದನ್ನು ದಿವ್ಯಸ್ವರೂಪನಾದ ಸದ್ಗುರುವಿಗೆ ಕಾಣಿಕೆಯಾಗಿ ಸಮರ್ಪಿಸುವುದಾದರೆ ಮತ್ತೇನೂ ಮಾಡುವುದು ಉಳಿಯುವುದಿಲ್ಲ. ಇದು, ಅವನನ್ನು ಅತ್ಯಂತ ಸಹಜವಾದ ರೀತಿಯ ಲ್ಲಿ , ಅನಂ ತ ಸತ್ಯದಲ್ಲಿ ಲೀನನಾಗುವ ಸ್ಥಿತಿಗೆ ತರುತ್ತದೆ. ಈ ಸರಳ ಹಾಗೂ ಸುಲಭ ವಿಧಾನವನ್ನನುಸರಿಸಿದರೆ, ಅದು ಈ ಪ್ರಕ್ರಿಯೆಯ ಆರಂಭವೇ ಅದರ ಅಂತ್ಯವೂ ಆಗುವಂತೆ ಮಾಡುತ್ತದೆ. ಪ್ರೇರಕ ಶಕ್ತ್ಯಾಘಾತಗಳು (ಶಕ್ತಿಧಾರೆಗಳು) ಅವನೊಳಗೆ ತನ್ನಿಂದ ತಾನೇ ಹರಿಯಲು ಪ್ರಾರಂಭಿಸಿ, ಅವನ ಇಡೀ ವ್ಯಕ್ತಿತ್ವದ ಸಂರಚನೆಯನ್ನೇ ಪರಿವರ್ತಿತಗೊಳಿಸುತ್ತವೆ. ಜೀವನದ ಅತ್ಯಂತ ಪ್ರಿಯ ಧೈಯವನ್ನು ಸಾಧಿಸಲು ಈ ಪುಟ್ಟ ಹೃದಯವಲ್ಲದೆ , ಬೇರಾವುದು ತಾನೇ ಸೂಕ್ತ ಕಾಣಿಕೆಯಾದೀತು !

ಇನ್ನೊಂದು ಮಾತು , ಹೃದಯ ಸಮರ್ಪಣೆಯನ್ನು ಅತ್ಯಂತ ಸುಲಭ ರೀ ತಿಯಲ್ಲಿ ಸಾಧಿಸಲು ಬೇಕಾಗಿರುವುದೆಂದರೆ, ಒಂದೇ ಒಂದು ಸಂಕಲ್ಪ ಕ್ರಿಯೆ’ ಮಾತ್ರ. ಆದರೆ ಸಂಕಲ್ಪವು ಎಷ್ಟು ಹಗುರ ಹಾಗೂ ಸೂಕ್ಷ್ಮವಾಗಿರುವುದೋ, ಅ ಷ್ಟೇ ಪ್ರಮಾಣದಲ್ಲಿ ಅದರ ಕಾರ್ಯವಿಧಾನವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಜಾಗೃತ ಪ್ರಜ್ಞೆಯ ಆಳವಾದ ಗರ್ಭದಲ್ಲಿ ಬೀಜದಂತೆ ಪವಡಿಸಿದ ಪುಟ್ಟ, ಸಂಕಲ್ಪ ಕ್ರಿಯೆಯೊಂದು, ಶೀಘ್ರವಾಗಿಯೇ ಒಂದು ಪೂರ್ಣ ಬೃಹತ್ ವೃಕ್ಷವಾಗಿ ಬೆಳೆದು ತನ್ನ ರೆಂಬೆ-ಕೊಂಬೆಗಳನ್ನು ಎಲ್ಲೆಡೆಗೂ ಚಾಚುವುದು.

ಕೊನೆಯದಾಗಿ , ಈ ಪದ್ಧತಿಯ ಅನುಸರಣೆಯು ಆರಂಭದಿಂದಲೇ ವೈರಾಗ್ಯದ ಮನೋವೃತ್ತಿಯನ್ನು ನಿಶ್ಚಿತವಾಗಿ ತರುತ್ತದೆ. ಈ ಉದ್ದೇಶಕ್ಕೆ ಅ ಗತ್ಯವಾಗಿ ಬೇಕಾಗಿರುವುದೆಂದರೆ ದಿಟ್ಟತನದ ಆರಂಭವಷ್ಟೆ. ಪ್ರಾಮಾಣಿಕನಾದ ಸಾಧಕನು ತನ್ನ ನಿಜವಾದ ಆತ್ಮನ ಕರೆಗೆ ಓಗೊಟ್ಟು ಜಾಗ್ರತನಾಗಿ, ಬೆಳಕು ಕಾಣುವಂತಾಗಲಿ. –

ನಿಜವಾದ ಜೀವನವನ್ನು ಹೊಂದಲು ಎಲ್ಲ ಜೀವಿಗಳಲ್ಲಿ ಆಂತರಿಕ ಜಾಗ್ರತಿಯಾಗಲಿ ಎಂಬ ಪ್ರಾರ್ಥನೆಯೊಂದಿಗೆ (ಈ ಸಂದೇಶವನ್ನು) ಮುಕ್ತಾಯಗೊಳಿಸುತ್ತೇನೆ