1. ವಸ್ತುಗಳ ಜೊತೆಗೆ ಅನುಚಿತ ಆಸಕ್ತಿ ಹೊಂದಿರುವುದು ನಿಜವಾದ ಕೇಡು. ಇದೇ ನಮ್ಮ ದುಃಖಗಳಿಗೆ ಮುಖ್ಯ ಕಾರಣ.SMP-47
  2. ಮೋಹದಿಂದ ಹುಟ್ಟಿದುದೆಲ್ಲವೂ ದುಃಖವೇ.SMP-49
  3. ಸಾಮಾನ್ಯವಾಗಿ ದು:ಖಗಳು ತಿರಸ್ಕರಣೀಯವೆಂದು ಬಗೆಯಲಾಗಿದೆ. ಆದರೆ ಅವುಗಳನ್ನು ವರಗಳೆಂದು ತಿಳಿದು ಅವುಗಳಿಗಾಗಿ ದೇವರನ್ನು ಪ್ರಾರ್ಥಿಸಿ ಅತ್ಮ ಸಂತೋಷದಿಂದ ಅವುಗಳನ್ನನುಭವಿಸಿದ ಋಷಿಗಳಾಗಿ ಹೋಗಿದ್ದಾರೆ.RD-22
  4. ಮನಸ್ಸಾದರೂ ಸತತವಾಗಿ ಕಾರ್ಯಪ್ರವೃತ್ತವಾಗಿರುವುದರಿಂದ ಒಂದು ಪದಾರ್ಥದ ಬಗ್ಗೆ ನಮ್ಮಲ್ಲಿ ಮೆಚ್ಚುಗೆಯನ್ನೂ ಮತ್ತೊಂದರ ಬಗ್ಗೆ ತಿರಸ್ಕಾರವನ್ನೂ ಹುಟ್ಟಿಸಿ ಎರಡೂ ಅತಿರೇಕಗಳನ್ನುಂಟು ಮಾಡುತ್ತದೆ. ಈ ಪ್ರಕಾರ  ದು:ಖಗಳು ಜನ್ಮತಾಳುತ್ತವೆ. ಇದೆಲ್ಲವೂ ಮಾನವ ಮನಸ್ಸಿನ ಸೃಷ್ಟಿಯಾಗಿದ್ದು ಪದಾರ್ಥಗಳ ಸರಿಯಾದ ಸಂಬಂಧವನ್ನು ಕುರಿತಾದ ನಮ್ಮ ಅಜ್ಞಾನದ ಪರಿಣಾಮವಾಗಿದೆ.RD-22
  5. ದು:ಖಗಳಿಗೆ ನಮ್ಮ ಇಚ್ಛೆಗಳೇ ಮುಖ್ಯ ಕಾರಣ . ಆದುದರಿಂದ ದು:ಖಗಳ ಪರಿಹಾರದ ಒಂದೇ ಒಂದು ಉಪಾಯವೆಂದರೆ ನಮ್ಮ ಇಚ್ಛೆಗಳನ್ನು ಕಡಿಮೆ ಮಾಡುವುದು. ಇಚ್ಛೆಗಳು ಕಡಿಮೆಯಾದಷ್ಟು ದು:ಖಗಳೂ ಕಡಿಮೆಯಾಗುವವು.RD-23