1. ಕೇಂದ್ರಮಂಡಲದ ಶೋಧಕ್ಕಿಂತ ಮುಂಚೆ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ‘ಸತ್ಯ’ವೇ ಪ್ರಧಾನವಾಗಿತ್ತು. ಸತ್ಯವೂ ಎಲ್ಲೆಡೆಯಲ್ಲಿಯೂ ಇದೆ; ಅದು ಮಾನವನ ಜೀವನದ ವಿಕಾಸದ ಪ್ರತಿಯೊಂದು ಘಟ್ಟದಲ್ಲಿಯೂ ಇದೆ. ಆಧ್ಯಾತ್ಮ ವಿಜ್ಞಾನದಲ್ಲಿ ಪದಾರ್ಥಗಳ ಸತ್ಯತೆಯನ್ನು ತೋರಿಸಲು ಜನರು ಸಾಮಾನ್ಯವಾಗಿ ಈ ಪದವನ್ನು ಬಳಸುವರು. ಭೌತ ವಸ್ತುವಿನಿಂದ ದೂರವಾದ ಯಾವುದೇ ಪದಾರ್ಥವನ್ನು ಅರ್ಥಾತ್ ಭೌತಿಕತ್ವವು ಮುಗಿದ ನಂತರ ಉಳಿಯುವದನ್ನು ಸತ್ಯವೆಂದು ಹೇಳಬಹುದು. ಆದರೆ ಇವೆರಡೂ ಕೊನೆಗೊಂಡಾಗ ನೀವು ಎನನ್ನುವಿರಿ? ಅದನ್ನು ಸತ್ಯವೆಂದು ಕರೆಯಲಾದೀತೆ? ಇಲ್ಲ. ಏಕೆಂದರೆ ಭೌತಿಕತ್ವ ಅಥವಾ ಜಡತ್ವವು ಮುಗಿದಾಗ ಪ್ರವೃತ್ತಿ ಅಥವಾ ಚೈತನ್ಯತೆಯು ಬರುವುದು. ಇವೆರಡರ ಆಚೆ ನೀವು ನಡೆದಾಗ ಈ ವಸ್ತುಗಳು ಎಲ್ಲಿಂದ ಬಂದುವೋ ಆ ಸ್ಥಿತಿಯನ್ನು ತಲುಪುವಿರಿ. ಅವುಗಳನ್ನು ದಾಟದೆ ಇರುವವರೆಗೆ ನೀವು ‘ಸತ್ಯ’ದ ಸೀಮೆಯಲ್ಲಿಯೇ ಇರುವಿರಿ. ಅದನ್ನು ದಾಟಿದಾಗ  ಸತ್ಯವೂ ಹೊರಟು ಹೋಗಿ “ನಿಷ್ಕೀಯತೆ’ ಅಥವಾ “ಶೂನ್ಯತೆ”ಯೇ ಉಳಿಯುವುದು.ERY-48
  2. ಭಗವಂತನ ಕಾರ್ಯಗಳು ರಹಸ್ಯಮಯವೆಂದು ಹೇಳುವರು. ಕಾರಣವೆಂದರೆ, ದೃಶ್ಯಜಗತ್ತಿನ ಹಿಂದಿರವ ರಹಸ್ಯವು ಮರೆಯಾಗಿದೆ. ಯಾರು ತರಂಗಗಳಲ್ಲಿ ಇಜುತ್ತ ಹೋಗಿ ಕೇಂದ್ರದ ಸಾಮಿಪ್ಯವನ್ನು ಹೊಂದುವರೋ ಅವರಿಗೆ ಮಾತ್ರ ಭಗವಂತನ ನಿಜ ಸ್ವರೂಪ ಕಂಡು ಬರುವುದು. ಇದೆಲ್ಲವೂ ನನ್ನ ವಾಸ್ತವಿಕ ಅನುಭವವೆಂದು ದೃಢವಾಗಿ ಹೇಳಬಲ್ಲೆ. ಇದೆಲ್ಲ, ರಾಜಯೋಗದ ಸಂಪೂರ್ಣ ಅಭ್ಯಾಸದಿಂದಲೂ ನನ್ನ ನರನರಗಳಲ್ಲಿ ಪ್ರವಹಿಸುವ ನನ್ನ ಸದ್ಗುರುಗಳ ಆಶೀರ್ವಾದದಿಂದಲೂ ಸಾಧ್ಯವಾಗಿದೆ.ERY 46-47. Central region
  3. ಜನರು ಈ ಘಟ್ಟವನ್ನು ಸತ್ಯವೆಂದು ಕರೆಯಬಹುದು. ಆದರೆ ನಾವು ಸೇರಿದುದು ಸತ್ಯವನ್ನಲ್ಲ. ಸತ್ಯವು ಬಹಳ ಹಿಂದುಳಿದಿದ್ದು ಈಗ ನಾವು ಅದರಲ್ಲಿ ನೆಲೆಸಿರುವುದಿಲ್ಲ. ಸತ್ಯದ ಅರ್ಥವು ಏನಾದರೊಂದರ ಇರುವಿಕೆಯನ್ನು ಸೂಚಿಸುವುದು. ಆದರೆ ಇಲ್ಲಿ ಅದಿಲ್ಲ. ನಿಜವಾಗಿ ಸತ್ಯವು ಶೂನ್ಯವೆಂದು ವರ್ಣಿಸಲಾದ ಸ್ಥಿತಿಯ ಅವಶೇಷ. ಹೆಚ್ಚು ಸ್ಪಷ್ಟಪಡಿಸಬೇಕಾದರೆ, ಪ್ರಜ್ಞೆಯು ನಮ್ಮ ಗುರಿಯಲ್ಲ. ಅದು ಕೇವಲ ಮಕ್ಕಳ ಆಟಿಕೆಯ ವಸ್ತುವಾಗಿದೆ. ಪ್ರಜ್ಞೆಯು ಎಲ್ಲಿ ತನ್ನ ನೈಜ ರೂಪವನ್ನು ತಾಳಿರುವುದೋ ಆ ಬಿಂದುವನ್ನು ನಾವು ಮುಟ್ಟಬೇಕಾಗಿದೆ. ಯಾವುದರಿಂದ ಔಷಧಗಳು ಸಿದ್ಧವಾಗುವವೋ ಆ ಮೂಲಾರ್ಕವನ್ನು ನಾವು ಶೋಧಿಸಬೇಕಾಗಿದೆ. ಪ್ರಜ್ಞೆಯನ್ನು ಸೃಷ್ಟಿಸುವ ಶಕ್ತಿಯನ್ನು ನಾವು ಶೋಧಿಸುತ್ತಿದ್ದೇವೆ. ಅದೂ ಇಲ್ಲದಂತಾದಾಗ ನಾವು ಶುದ್ಧ ಸರಳ ಸತ್ಯದ ದಂಡೆಗೆ ಬರುವೆವು. ಈ ತತ್ವವು ಶಬ್ದಗಳಿಂದ ಸರಿಯಾಗಿ ವರ್ಣಿಸಲು ಬಾರದಷ್ಟು ಸೂಕ್ಷವಾಗಿದೆ.ERY-46-47
  4. ಆತ್ಮ ಸಾಕ್ಷಾತ್ಕಾರದಲ್ಲಿ ಪ್ರತ್ಯಕ್ಷಾನುಭವವೇ ಸಹಕಾರಿಯಾಗುವುದು. ಈ ದಿಶೆಯಲ್ಲಿ ಬೇರೆ ಯಾವುದೇ ಮಾರ್ಗವಾಗಲಿ ಗ್ರಂಥವಾಗಲಿ ಶಾಸ್ತ್ರವಾಗಲಿ ಪ್ರಯೋಜನಕ್ಕೆ ಬರುವುದಿಲ್ಲ. ಏಕತ್ವದ ಅಥವಾ ಶೂನ್ಯಾವಸ್ಥೆಯ ಸಾಕ್ಷಾತ್ಕಾರವನ್ನು ಸತ್ಯದ ಸಾಕ್ಷಾತ್ಕಾರವೆಂದು ಹೇಳುವುದು ಎಂಥ ವಿಪರ್ಯಾಸ! ಸತ್ಯಕ್ಕೆ ತನ್ನದೇ ಆದ ಒಂದು ವ್ಯಾಖ್ಯೆಯಿದೆ. ಆದರೆ ನಾವು ಕಟ್ಟಕಡೆಗೆ ತಲುಪಬೇಕಾದುದು ಎಲ್ಲವುಗಳ ಆಚೆಗಿದೆ.ERY-48
  5. ಸತ್ಯ ಹೇಳುವುದರ ಅರ್ಥವೇನೆಂದರೆ ನಾವಿದ್ದ ಸ್ಥಿತಿಯಲ್ಲಿ ನಮ್ಮನ್ನು ಪ್ರಕಟಗೊಳಿಸುವುದು. ಈ ಸ್ಥಿತಿಗೆ  ಬಂದ ಮನುಷ್ಯನ್ನು  “ಅದು ಏನಿದೆಯೋ ಇದೆ” ಎಂದು ವಿವಶನಾಗಿ ಹೇಳುವನು. ಶಬ್ದಗಳು ಈ ಸ್ಥಿತಿಯನ್ನು ಹೇಗೂ ವರ್ಣಿಸಲಾರವು. ನಿಜವಾಗಿ ಇದು ಮೂಲದ ಸ್ಥಿತಿ.TM 42 Fifth maxim