(ಮಿಷನ್ನಿನ, ೧೯೬೩ ವಾರ್ಷಿಕೋತ್ಸವದಲ್ಲಿ ನೀಡಿದ ಸಂದೇಶ)

ಇಂದು ನಾನು, ಸಹಜಮಾರ್ಗ ಅಥವಾ ಸಾಕ್ಷಾತ್ಕಾರದ ಸ್ವಾಭಾವಿಕ ಪಥವೆಂದು ಪರಿಚಿತವಾದ ನಮ್ಮ ಪದ್ದತಿಯ ಮಹತ್ವಪೂರ್ಣ ವೈಶಿಷ್ಟ್ಯಗಳಲ್ಲಿ ಕೆಲವೊಂದನ್ನು ನಿಮ್ಮ ಮುಂದಿಡುತ್ತೇನೆ. ದಿನನಿತ್ಯದ ಸಾಮಾನ್ಯ ಪ್ರಾಪಂಚಿಕ ಜೀವನಕ್ಕೆ ಸುಲಭವಾಗಿ ಹೊಂದಿಕೊಳ್ಳುವ ಅತ್ಯಂತ ಸರಳ ಹಾಗೂ ಸ್ವಾಭಾವಿಕ ಪಥದಲ್ಲಿ ಅದು ಮುಂದುವರೆಯುತ್ತದೆ. ಮನಸ್ಸು ಮತ್ತು ಇಂದ್ರಿಯಗಳನ್ನು ಸ್ತಬ್ದಗೊಳಿಸುವ ದೃಷ್ಟಿಯಿಂದ ಕೈಗೊಳ್ಳುವ ಕಠೋರ ವ್ರತ, ನಿಯಮ, ತಪಶ್ಚರ್ಯೆ ಅಥವಾ ದೇಹದಂಡನೆ ಮುಂತಾದ ಯಾವುದೇ ವಿಧಾನವನ್ನು ಸಹಜಮಾರ್ಗವು ಒಪ್ಪುವುದಿಲ್ಲ. ಸಹಜಮಾರ್ಗದ ತತ್ವವು ಎಷ್ಟೊಂದು ಸರಳವಾಗಿದೆಯೆಂದರೆ, ಅನೇಕ ವೇಳೆ ಅದೇ ಕಾರಣದಿಂದಾಗಿ ಜನರು ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ; ಯಾಕೆಂದರೆ, ಅವರು, ಸಾಕ್ಷಾತ್ಕಾರವು ಅತ್ಯಂತ ಕಷ್ಟಕರ ಕೆಲಸವೆಂದೂ, ಅದನ್ನು ಸಾಧಿಸಲು ಅನೇಕ ಜನ್ಮಗಳ ಹಾಗೂ ಯುಯುಗಗಳ ಅವಿರತ ಪರಿಶ್ರಮವು ಬೇಕಾಗುತ್ತದೆ ಎಂಬ ಭಾವನೆಯನ್ನೂ ತಳೆದಿದ್ದಾರೆ. ಅದು ಹೇಗೇ ಇರಲಿ, ಸತ್ಯವನ್ನು ಕುರಿತು ತಮ್ಮದೇ ಆದ ಭ್ರಾಂತಿ ಪೂರ್ಣ ಕಲ್ಪನೆಗಳನ್ನು ತುಂಬಿಕೊಂಡು, ಅದರ ಪ್ರಾಪ್ತಿಗೆ ಜಟಿಲವಾದ ಮಾರ್ಗೋಪಾಯಗಳನ್ನು ಅನುಸರಿಸಿ ಮುಂದುವರಿಯುವವರಿಗೆ ಅದು ಕಷ್ಟಕರವಾಗಿರಬಹುದು. ವಾಸ್ತವದಲ್ಲಿ, ನಾವು ಸಾಕ್ಷಾತ್ಕರಿಸಿಕೊಳ್ಳಬಯಸುವ ‘ಸತ್ಯ’ವು ಎಷ್ಟು ಸರಳವಾಗಿದೆಯೆಂದರೆ, ಆ ಸರಳತೆಯೇ ಅದಕ್ಕೊಂದು ತೆರೆಯಾಗಿಬಿಟ್ಟಿದೆ. ಒಂದು ಸರಳ ವಸ್ತುವನ್ನು, ಸರಳ ಸಾಧನದಿಂದ ಮಾತ್ರವೇ ಡೆಯಲು ಸಾಧ್ಯ. ಆದ್ದರಿಂದ, ಸರಳವಾದುದರ ಸಾಕ್ಷಾತ್ಕಾರದಲ್ಲಿ, ಅತ್ಯಂತ ಸರಳ ಸಾಧನವೇ ಯಶಸ್ಸಿನ ಭರವಸೆಯನ್ನು ಕೊಡಬಲ್ಲದು.”

ನೆಲದ ಮೇಲೆ ಬಿದ್ದ ಸೂಜಿಯೊಂದನ್ನು ನಿಮ್ಮ ಕೈಬೆರಳುಗಳಿಂದ ಹೆಕ್ಕಿಕೊಳ್ಳುವುದು ಸುಲಭವೇ. ಆದರೆ ಅದಕ್ಕೆ ಒಂದು ಭಾರವೆತ್ತುವ ಯಂತ್ರವನ್ನು ಬಳಸಿದರೆ ಬಹುಶಃ ಅದು ಅಸಾಧ್ಯವೇ ಸೈ. ಸಾಕ್ಷಾತ್ಕಾರದ ವಿಷಯವೂ ಸರಿಯಾಗಿ ಅಂತೆಯೇ ಇದೆ. ಅತ್ಯಂತ ಸರಳವಾದುದನ್ನು ಸಾಕ್ಷಾತ್ಕರಿಸಿಕೊಳ್ಳಲೋಸುಗ ಉಪದೇಶಿಸಲಾಗುವ ಗೊಂದಲಮಯ ಪದ್ಧತಿಗಳು ಮತ್ತು ಜಟಿಲವಾದ ಸಾಧನಗಳು ಗುರಿಯನ್ನು ಸಾಧಿಸಲಾರವು. ಅಷ್ಟೇ ಅಲ್ಲ, ಒಬ್ಬಾತನು ತನ್ನ ಜೀವನವಿಡೀ, ತಾನೇ ಸೃಜಿಸಿಕೊಂಡ ತೊಡಕುಗಳಲ್ಲಿಯೇ ಸಿಕ್ಕಿಬೀಳುವಂತೆ ಅವು ಮಾಡುತ್ತವೆ. ವಾಸ್ತವದಲ್ಲಿ, ಸಾಕ್ಷಾತ್ಕಾರವು, ನರ ಮತ್ತು ಸ್ನಾಯುಗಳೊಂದಿಗಿನ ಸ್ಪರ್ಧೆಯ ಆಟವೂ ಅಲ್ಲ; ಇಲ್ಲವೆ, ವ್ರತನಿಯಮ, ತಪಶ್ಚರ್ಯೆ ಅಥವಾ ದೇಹದಂಡನೆಯನ್ನೊಳಗೊಂಡ ಶಾರೀರಿಕ ಕಸರತ್ತಾಗಲಿ ಅಲ್ಲ. ಅದು, ಅಂತರಾತ್ಮನು ತನ್ನ ನಿಜಸ್ವಭಾವಕ್ಕೆ ಮಾರ್ಪಡುವುದೇ ಆಗಿದೆ. ಸಹಜಮಾರ್ಗವು ಸಾಕ್ಷಾತ್ಕಾರಕ್ಕೆ ಸಂಬಂಧಿಸಿದಂತೆ ಇರುವ ಅನುಚಿತ ಸ್ಥಾನವನ್ನು ತಳೆದ ಅನಾವಶ್ಯಕ ವಸ್ತುಗಳನ್ನು ಕಡೆಗಣಿಸುತ್ತದೆ. ಈ ಪದ್ಧತಿಯಲ್ಲಿ ಉಪದೇಶಿಸಲಾದ ‘ಅಭ್ಯಾಸ’ಗಳು, ಕಣ್ಮುಚ್ಚಿ ಧ್ಯಾನದಲ್ಲಿ ಕೂಡುವಂಥ ಕೇವಲ ಯಾಂತ್ರಿಕ ಮತ್ತು ಔಪಚಾರಿಕ ಕ್ರಿಯೆಗಳಲ್ಲ. ಅವಕ್ಕೆ ಒಂದು ಖಚಿತವಾದ ಗುರಿ, ಉದ್ದೇಶ ಹಾಗೂ ಕೊನೆಗಳುಂಟು. ಅದರಲ್ಲಿ ಎರಡು ಪಾರ್ಶ್ವಗಳಿವೆ. ಒಂದು- ಸ್ವಂತ ಅಭ್ಯಾಸ, ಎರಡನೆಯದು- ಯೌಗಿಕ ಪ್ರಾಣಾಹುತಿಯ ಮೂಲಕ ಗುರುವಿನ ಆಸರೆ. ಗುರುವಿನ ಆಸರೆಯು ಅಭ್ಯಾಸಿಯ ಪಥದಲ್ಲಿರುವ ಅಡೆತಡೆಗಳನ್ನೂ ಮತ್ತು ಜಟಿಲತೆಯನ್ನೂ ನಿವಾರಿಸಿ, ಪ್ರಗತಿಯನ್ನು ತೀವ್ರಗೊಳಿಸುತ್ತದೆ. ಪ್ರಾಚೀನ ಅಭ್ಯಾಸ ಕ್ರಮಗಳಲ್ಲಿ ನ್ನ ಅಡ್ಡಿ ಆತಂಕಗಳನ್ನು ನಿವಾರಿಸಿಕೊಳ್ಳಲು ಅಭ್ಯಾಸಿಯು ಕಷ್ಟಪಟ್ಟು ಹೆಣಗಾಡಬೇಕಾಗಿತ್ತು ; ಗುರುವಿನ ಕೆಲಸವಾದರೋ, ಆ ಉದ್ದೇಶಕ್ಕೆ ಬೇಕಾದ ಕೆಲವು ಯಾಂತ್ರಿಕ ಆಚರಣೆಗಳನ್ನು ಅಭ್ಯಾಸಿಗೆ ವಿಧಿಸುವುದರಲ್ಲಿ ಕೊನೆಗೊಳ್ಳುತ್ತಿತ್ತು. ಆದರೆ ಸಹಜಮಾರ್ಗ ಪದ್ಧತಿಯಲ್ಲಿ ಹಾಗಿಲ್ಲ. ಈ

ವಿಷಯದಲ್ಲಿ ಹೆಚ್ಚಿನ ಹೊಣೆಗಾರಿಕೆಯು ಗುರುವಿನ ಮೇಲೆಯೇ ಇದೆ. ಗುರುವು ಯೌಗಿಕ ಪ್ರಾಣಾಹುತಿಯ ಮೂಲಕ ತನ್ನದೇ ಆದ ಶಕ್ತಿಯನ್ನು ಪ್ರಯೋಗಿಸಿ, ಅಭ್ಯಾಸಿಯ ಮನಸ್ಸಿನಿಂದ ಅಡಚಣೆಗಳನ್ನು ನಿವಾರಿಸಿ, ತೊಡಕುಗಳನ್ನು ತೊಲಗಿಸುತ್ತಾನೆ.

ಅತ್ಯಂತ ಪ್ರಾಚೀನವಾದ ಈ ಯೌಗಿಕ ಪ್ರಾಣಾಹುತಿಯು ಎಂದಿನಿಂದಲೂ ರಾಜಯೋಗದ ತಳಹದಿಯೇ ಆಗಿದ್ದು, ಇತ್ತೀಚಿನ ಕಾಲಾವಧಿಯಲ್ಲಿ ಅದರ

ನಿಜವಾದ ಪ್ರವರ್ತಕರಾದ ಹಿಂದುಗಳಿಗೇ ಅದು ಹೆಚ್ಚು ಕಡಿಮೆ ಕೈತಪ್ಪಿ ಹೋಗಿದ್ದಿತು. ಈ ಪದ್ಧತಿಯು, ನನ್ನ ಗುರುಗಳಾದ ಫತೇಹ್ಗಡದ ಮಹಾತ್ಮಾ ರಾಮಚಂದ್ರಜಿ ಮಹಾರಾಜರ ಅದ್ಭುತ ಸಾಧನೆಯಿಂದಾಗಿ ಪುನಚೇತನಗೊಂಡು ಈಗ ಬೆಳಕಿಗೆ ಬಂದಿದೆ. ಈ ಕಾರ್ಯವಿಧಾನದಲ್ಲಿ, ಗುರುವು ತನ್ನ ಅಂತಶ್ಯಕ್ತಿನ್ನು ಪ್ರಯೋಗಿಸಿ ಅಭ್ಯಾಸಿಯಲ್ಲಿಯ ಸುಪ್ತ ಶಕ್ತಿಗಳನ್ನು ಜಾಗೃತಗೊಳಿಸಿ, ಉತ್ತೇಜಿಸಿ, ಕಾರ್ಯಪ್ರವೃತ್ತವಾಗುವಂತೆ ಚುರುಕುಗೊಳಿಸುತ್ತಾನೆ, ಅಲ್ಲದೆ, ದೈವೀಧಾರೆಯ ಪ್ರವಾಹವನ್ನು ಅಭ್ಯಾಸಿಯ ಹೃದಯದ ಕಡೆಗೆ ತಿರುಗಿಸುತ್ತಾನೆ. ತನ್ನ ಮನಸ್ಸು ಮತ್ತು ಇಂದ್ರಿಯಗಳನ್ನು ಸಂಪೂರ್ಣವಾಗಿ ಶಿಸ್ತು ಮತ್ತು ನಿಯಂತ್ರಣಕ್ಕೊಳಪಡಿಸಿಕೊಂಡಿರುವ ಗುರುವಿನ ಶಕ್ತಿಯೊಡನೆ, ತನ್ನನ್ನು ತಾನು ಜೋಡಿಸಿಕೊಳ್ಳುವುದೇ ಅಭ್ಯಾಸಿಯು ಮಾಡಬೇಕಾದ ಏಕಮಾತ್ರ ಕರ್ತವ್ಯ. ಹಾಗಾದಾಗ ಗುರುವಿನ ಶಕ್ತಿಯು ಅಭ್ಯಾಸಿಯ ಹೃದಯದತ್ತ ಪ್ರವಹಿಸಲಾರಂಭಿಸಿ, ಅವನ ಮನಃಪ್ರವೃತ್ತಿಗಳನ್ನು ಸಹ ನಿಯಂತ್ರಿಸತೊಡಗುತ್ತದೆ. ಆದರೆ ಇದಕ್ಕೂ ಮತ್ತು ಸಾಂಪ್ರದಾಯಿಕ ಗುರುತ್ವದ ಭಾವನೆಗೂ ಯಾವುದೇ ಸಂಬಂಧವಿಲ್ಲ.

ನಮ್ಮ ಸಂಸ್ಥೆಯಲ್ಲಿ, ನಾವಿದನ್ನು ತ್ಯಾಗ ಮತ್ತು ಸೇವಾ ಭಾವದಿಂದೊಡಗೂಡಿದ ಸಹಭಾತೃತ್ವದ ರೂಪದಲ್ಲಿ ತೆಗೆದುಕೊಳ್ಳುತ್ತೇವೆ. ಆದರೆ, ಅಲ್ಲಿಯೂ ಒಂದು ತೊಂದರೆಯಿದೆ. ಜನರು ಸಾಮಾನ್ಯವಾಗಿ ಆಕರ್ಷಕ ಪವಾಡಗಳನ್ನು ಪ್ರದರ್ಶಿಸುವವನಿಂದ ಪ್ರಭಾವಿತರಾಗುವ ಒಲವುಳ್ಳವರಾಗಿದ್ದಾರೆ. ಅಭ್ಯಾಸದ ಪರಿಣಾಮದಿಂದಾಗಿ, ಈ ಸಾಮರ್ಥ್ಯವು ತನ್ನಿಂದ ತಾನೇ ವೃದ್ಧಿ ಹೊಂದುವುದಾದರೂ, ಅದನ್ನು ಯೌಗಿಕ ಸಿದ್ದಿಯ ಒರೆಗಲ್ಲೆಂದು ಪರಿಗಣಿಸಲಾಗದು. ಅದಲ್ಲದೆ, ಒಬ್ಬ ನಿಜವಾದ ಯೋಗಿಯು ಪ್ರದರ್ಶಿಸುವ ಉದ್ದೇಶದಿಂದ ಪವಾಡಗಳತ್ತ ಎಂದೂ ಒಲವು ತೋರಲಾರ. ಪವಾಡಗಳಾದರೋ, ಎರಡು ವಿಧಗಳಲ್ಲಿರಬಹುದು. ಒಂದು ದೈವೀಸ್ವರೂಪದ್ದು, ಇನ್ನೊಂದು ಭೌತಿಕ ಸ್ವರೂಪದ್ದು. ಮೊದಲನೆಯದರ ಉದ್ದೇಶವು ದೈವಿಕವಾದುದಾದರೆ, ಎರಡನೆಯದರದು ಐಹಿಕವಾಗಿರುತ್ತದೆ. ಸೂಕ್ಷ್ಮತೆಯಿಂದ ಮುಂದುವರಿಯುವವನಲ್ಲಿ ಮೊದಲ ಬಗೆಯ ಪವಾಡಗಳು ಜಾಗ್ರತಗೊಂಡು, ನಮ್ಮೆದುರಿನ ಜೀವನದ ಸಮಸ್ಯೆಯನ್ನು ಪರಿಹರಿಸುತ್ತವೆ. ತದ್ವಿರುದ್ಧವಾಗಿ, ಸ್ಕೂಲತೆಯಗುಂಟ ಸಾಗುವವರಲ್ಲಿ ಎರಡನೆಯ ಬಗೆಯ ಪವಾಡಗಳು ಬೆಳೆದು ಹೃದಯದ ಮೇಲೆ ಮಿತಿಮೀರಿದ ಭಾರವನ್ನು ಹೇರುತ್ತವೆ. ಈ ಕೀಳುಮಟ್ಟದ ಸಿದ್ಧಿ ಗಳ ಅವಸ್ಥೆಗಳಲ್ಲಿ ಮಗ್ನನಾದವನು, ತಾನೇ ಮುಳುಗಿಹೋಗುವಂತಹ

ತಿರುಗುಣಿಯ ಮಡುವನ್ನು ತನ್ನೊಳಗೆ ನಿರ್ಮಿಸಿಕೊಂಡು, ಒಂದು ರೀತಿಯಲ್ಲಿ, ಸ್ವತಃ ಪೂರ್ಣ ಕಗ್ಗಂಟಾಗಿಬಿಡುತ್ತಾನೆ. ಈ (ಕೆಳಮಟ್ಟದಲ್ಲಿ ಸಿದ್ದಿ ಗಳ ಶಕ್ತಿಪ್ರಯೋಗವು ಇತರರ ಮೇಲೆ ಆದರೆ ಅವರೂ ಕೂಡ ಅದೇ ಸುಳಿಯಲ್ಲಿ ಎಳೆಯಲ್ಪಡುತ್ತಾರೆ. ನಮ್ಮ ಸಂಸ್ಥೆಯಲ್ಲಿ ಬಹುತೇಕ ಪ್ರತಿಯೊಬ್ಬನಿಗೂ ಪವಾಡವನ್ನುಂಟು ಮಾಡುವ ಸಾಮರ್ಥ್ಯವುಂಟು. ಆದರೆ ಗುರುವಿನ ಜಾಗರೂಕ ದೃಷ್ಟಿಯು (ಆ ಕಾರಣದಿಂದಾಗಿ ಅವನು ದಾರಿತಪ್ಪಿಹೋಗದಂತೆ ಅದನ್ನು ನಿಯಂತ್ರಣದಲ್ಲಿಡುತ್ತದೆ. ಅವನಿಗೆ ಅದರ (ಈ ಶಕ್ತಿಗಳ) ಅರಿವೂ ಇರುವುದಿಲ್ಲ. ಆದರೆ ಅದರ ನಿಜವಾದ ಆವಶ್ಯಕತೆಯುಂಟಾದಾಗ ಅವನ ಮಾಧ್ಯಮದ ಮೂಲಕ ಅದು ಘಟಿಸುತ್ತದೆ. ಆದ್ದರಿಂದ, ನಮ್ಮ ಆಧ್ಯಾತ್ಮಿಕ ನೆರವು ಮತ್ತು ಆಸರೆಗೆ ಬೇಕಾಗಿರುವದು, ಆಶ್ಚರ್ಯಕರ ಪವಾಡಗಳನ್ನು ಪ್ರದರ್ಶಿಸಬಲ್ಲ ಅಥವಾ ಆಸನ ಪ್ರಾಣಾಯಾಮ ಮುಂತಾದ ಅಸಾಮಾನ್ಯ ಸಾಹಸವನ್ನೆಸಗಬಲ್ಲ ಗುರುವಲ್ಲ ! ಅಥವಾ ಮಾಯೆ, ಜೀವ, ಬ್ರಹ್ಮಗಳ ತತ್ವಗಳ ಮೇಲೆ ಪಾಂಡಿತ್ಯಪೂರ್ಣ ಪ್ರವಚನಗಳನ್ನು ನೀಡಬಲ್ಲ ವನೂ ಅಲ್ಲ. ಆದರೆ ನಮಗೆ ಬೇಕಾಗಿರುವ ಗುರುವು ಎಂಥವನಿರಬೇಕೆಂದರೆ, ತನ್ನ ಅಂತಶ್ಯಕ್ತಿಯಿಂದ ನಮ್ಮ ಮಾರ್ಗದಲ್ಲಿಯ ಅಡ್ಡಿಗಳನ್ನು ನಿವಾರಿಸಿ, ಪ್ರತ್ಯಕ್ಷ ಅಭ್ಯಾಸದಲ್ಲಿ ಬರಬಹುದಾದ ಸಮಸ್ಯೆಗಳನ್ನು ಪರಿಹರಿಸಬಲ್ಲವನಾಗಿರಬೇಕು. ಯಾವಾತನ ಸಹವಾಸವು ನಿಮ್ಮಲ್ಲಿ ಶಾಂತಿ ಸಮಾಧಾನಗಳ ಭಾವವನ್ನು ಉದ್ದೀಪಿಸುವುದೋ ಮತ್ತು ಅವನ ಪ್ರಭಾವದಿಂದ ನಿಮ್ಮ ಮನಸ್ಸಿನ ತಳಮಳವು ಶಮನಗೊಂಡಂತೆ ಅನಿಸುವುದೋ, ಅಂಥ ವ್ಯಕ್ತಿಯನ್ನು ನೀವು ಸುದೈವವಶಾತ್ ಕಂಡುಕೊಳ್ಳುವಂತಾದರೆ, ಅವನು ಇಂದ್ರಿಯಗಳ ಮಿತಿಯನ್ನು ದಾಟಿ ಮೇಲೇರಿದವನೆಂದೂ, ಮತ್ತು ತನ್ನ ಅಂತಶ್ಯಕ್ತಿಯಿಂದ ನಿಮ್ಮ ಜೀವನದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನೆರವಾಗಬಲ್ಲ ಯೋಗ್ಯ ವ್ಯಕ್ತಿಯೆಂದೂ ನೀವು ತಿಳಿಯಬೇಕು. ಪ್ರೇಮ ಮತ್ತು ಭಕ್ತಿಗಳಿಂದ ನೀವು ನಿಮ್ಮನ್ನು ಅವನೊಡನೆ ಜೋಡಿಸಿಕೊಳ್ಳುವುದರಿಂದ, ನೀವೂ ಅದೇ ರೀತಿಯಲ್ಲಿ ಪರಿವರ್ತನೆಗೊಳ್ಳಲಾರಂಭಿಸುವಿರಿ.

ನಮ್ಮ ಸಂಸ್ಥೆಯಲ್ಲಿ ಅನುಸರಿಸುವ ದೈನಂದಿನ ಅಭ್ಯಾಸವೆಂದರೆ ಹೃದಯದ ಮೇಲಣ ‘ಧ್ಯಾನ’, ಪತಂಜಲಿ ಮಹರ್ಷಿಯು ಉಪದೇಶಿಸಿದ್ದೂ ಇದೇ ಪದ್ದತಿಯನ್ನೇ. ಈ ಪ್ರಕ್ರಿಯೆಯ ಮೂಲತತ್ವವನ್ನು ರಾಜಯೋಗದ ಪ್ರಭಾವ’ದಲ್ಲಿ ಈಗಾಗಲೇ ಚರ್ಚಿಸಿರುವೆನಾದ್ದರಿಂದ, ಮತ್ತೆ ಪುನರಪಿ ಹೇಳಬಯಸುವುದಿಲ್ಲ. ಈ ಪದ್ಧತಿಯು, ನಮ್ಮೊಳಗಿನ ಸ್ಕೂಲತೆಯನ್ನು

ಹೊರಹಾಕಿ, ಅತ್ಯುಚ್ಚತಮ ಸೂಕ್ಷ್ಮಸ್ಥಿತಿಯನ್ನು ಹೊಂದಲು ತುಂಬಾ ಸಹಾಯಮಾಡುತ್ತದೆ. ಭಗವಂತನಲ್ಲಿ ಸಂಪೂರ್ಣವಾಗಿ ಯಾವ ಸ್ಕೂಲತೆಯೂ ಇಲ್ಲವೆಂದು ನಾವು ಅರಿತಿದ್ದೇವೆ, ಆದ್ದರಿಂದಲೇ, ಸಾಕ್ಷಾತ್ಕಾರವೆಂದರೆ ತದ್ವತ್ತಾದ ಸೂಕ್ಷ್ಮತೆಯನ್ನು ಅದರ ಚರಮ ಬಿಂದುವಿನವರೆಗೆ ಸಾಧಿಸುವುದೇ – ಎಂದರ್ಥ. ಸಹಜಮಾರ್ಗದಲ್ಲಿ ನಾವು ನಮ್ಮ ಗುರಿಯಾಗಿ ಇಟ್ಟುಕೊಳ್ಳುವುದೆಂದರೆ ಇದನ್ನೇ. ಅಭ್ಯಾಸಿಯು ತನ್ನ ಸುತ್ತ ಆವರಣಗಳ ರೂಪದಲ್ಲಿ ನೆಲೆಗೊಂಡ ಸ್ಕೂಲತೆಯಿಂದ ಬಿಡುಗಡೆ ಪಡೆಯಲು ಈ ಪದ್ದತಿಯು ನೆರವಾಗುತ್ತದೆ.

ಸಹಜಮಾರ್ಗದ ವಿಧಾನವು ತುಂಬ ಸರಳವಿದ್ದಾಗ್ಯೂ ಅನೇಕ ವೇಳೆ ಅದು ಸಾಮಾನ್ಯ ಗ್ರಹಿಕೆಗೆ ಎಟುಕದೆಹೋಗುತ್ತದೆ. ಏಕೆಂದರೆ, ಅದು ಅಂತಿಮಸತ್ಯದೊಂದಿಗೆ ಸನಿಹದಿಂದ ಹೊಂದಿಕೊಂಡು, ಅತ್ಯಂತ ಸೂಕ್ಷ್ಮವಾದ ಪಥದಲ್ಲಿ ಸಾಗುತ್ತದೆ. ಅದು, ಹೃದಯದಲ್ಲಿ ದೈವೀಪ್ರಕಾಶವು ಇದೆಯೆಂದು ಭಾವಿಸಿ, ಅದರ ಮೇಲೆ ಧ್ಯಾನ ಮಾಡಲು ವಿಧಿಸುತ್ತದೆ. ಆದರೆ, ಅಭ್ಯಾಸಿಯು ಪ್ರಕಾಶವನ್ನು ಯಾವುದೇ ರೂಪ ಅಥವಾ ಆಕಾರದಲ್ಲಿ ನೋಡಲು ಪ್ರಯತ್ನಿಸಕೂಡದೆಂದು ನಿರ್ದೇಶಿಸಲಾಗಿದೆ. ಹಾಗೆ ಮಾಡಿದಲ್ಲಿ, ಒಂದು ಪಕ್ಷ ಅವನಿಗೆ ಪ್ರಕಾಶವು ದೃಷ್ಟಿಗೆ ಗೋಚರಿಸಿದರೂ, ಅದು ನಿಜವಾಗಿರದೆ, ಕೇವಲ ಅವನ ಮನಸ್ಸಿನ ಪ್ರಕ್ಷೇಪವಾದೀತು. ಅದು ಹೇಗೇ ಇರಲಿ, ಅಭ್ಯಾಸಿಯು ಕೇವಲ “ಪ್ರಕಾಶದ ಕಲ್ಪನೆ”ಯಾಗಿ ಮಾತ್ರ ಅಂಗೀಕರಿಸಬೇಕೆಂದು ಸಲಹೆ ನೀಡಲಾಗುತ್ತದೆ. ಹಾಗಿದ್ದಲ್ಲಿ, ಅದು ಅತ್ಯಂತ ಸೂಕ್ಷ್ಮತೆಯುಳ್ಳದ್ದಾಗಿರುತ್ತದೆ, ಮತ್ತು ತನ್ಮೂಲಕ ಅತ್ಯಂತ ಸೂಕ್ಷ್ಮವಾಗಿದ್ದು ದರ ಮೇಲೆ ಧ್ಯಾನ ಮಾಡಲು ತೊಡಗುವೆವು. ಪ್ರತಿಯೊಬ್ಬ ಸಂತನೂ ಅದಕ್ಕೆ “ಪ್ರಕಾಶ’ವೆಂಬ ಶಬ್ದವನ್ನು ಬಳಸಿದ್ದಾನೆ. ನಾನೂ ಅದನ್ನು ಬಳಸದಿರಲಾರೆ, ಯಾಕೆಂದರೆ, ಈ ಉದ್ದೇಶಕ್ಕೆ ಅತ್ಯುತ್ತಮವಾಗಿ ಸೂಕ್ತವೆನಿಸುವ ಅಭಿವ್ಯಕ್ತಿಯೆಂದರೆ ಅದೊಂದೇ. ಆದರೆ ಅದು ಕೆಲವು ತೊಡಕುಗಳನ್ನೊಡ್ಡುತ್ತದೆ. ಅದೆಂದರೆ, ನಾವು ಪ್ರಕಾಶವನ್ನು ಕುರಿತು ಪ್ರಸ್ತಾಪಿಸಿದಾಗ `

ಕೋರೈಸುವಿಕೆ’ಯ ಭಾವನೆಯು ಪ್ರಧಾನವೆನಿಸಿ, ನಾವದನ್ನು ಥಳಥಳಿಕೆಯುಳ್ಳದ್ದೆಂದು ತಿಳಿಯತೊಡಗುತ್ತೇವೆ. ನಿಜವಾದ ಪ್ರಕಾಶ’ವು ಅಂಥ ಅರ್ಥವನ್ನು ಒಳಗೊಂಡಿಲ್ಲ. ಮತ್ತು ಅದನ್ನು ಥಳಕು ಇಲ್ಲದ ಬೆಳಕು” ಎಂದು ನಿರೂಪಿಸಬಹುದು. ಅದು ಕೇವಲ ‘ಸತ್ಯವಸ್ತು’ವಿಗೇ ಅನ್ವಯಿಸುತ್ತದೆ. ಅಥವಾ ಕತ್ತಲೆ ಇಲ್ಲವೆ ಬೆಳಕಿಗೆ ಸಂಬಂಧಿಸಿರದ, ಇವೆರಡಕ್ಕೂ ಅತೀತವಾದ ವಸ್ತು ಯಾವುದಿದೆಯೋ ಅದಕ್ಕೆ ಅನ್ವಯಿಸುತ್ತದೆ ಎಂದು ಹೇಳುವುದೇ ಹೆಚ್ಚು ಸಮರ್ಪಕ.

ನಮ್ಮ ಪದ್ದತಿಯಂತೆ ಅನುಷ್ಠಾನ ಮಾಡುವಾಗ ಅಭ್ಯಾಸಿಯು ಕೆಲವೊಮ್ಮೆ ಪ್ರಕಾಶವನ್ನು ದರ್ಶಿಸುತ್ತಾನೆಂಬುದರಲ್ಲಿ ಸಂದೇಹವಿಲ್ಲ. ಆದರೆ ಅದು ಆರಂಭದಶೆಯಲ್ಲಿ ಮಾತ್ರ. ಏಕೆಂದರೆ, ಆಗ ಭೌತಿಕವಸ್ತುವು (ದೈವಿಕ) ಶಕ್ತಿಯ ಸ್ಪರ್ಶಕ್ಕೆ ಬಂದಿರುತ್ತದೆ. ಬೇರೆ ಶಬ್ದಗಳಲ್ಲಿ ಹೇಳುವುದಾದರೆ, ಅದು ದೈವಿಕ ಶಕ್ತಿಯು ಕೆಲಸ ಮಾಡಲಾರಂಭಿಸಿದೆಯೆಂಬುದರ ಸೂಚನೆ. ಅದಲ್ಲದೆ, ಪ್ರಕಾಶವೇ ನಮ್ಮ

ಗುರಿಯಲ್ಲ. ಆಂತರದಲ್ಲಾಗಲಿ, ಬಾಹ್ಯದಲ್ಲಾಗಲಿ, ಹೊಳಪಿನ ದರ್ಶನವು ಸಾಕ್ಷಾತ್ಕಾರದ ಸಿದ್ಧಿಯ ಸೂಚಕವೂ ಆಗದು.

ಸಹಜಮಾರ್ಗ ಪದ್ಧತಿಯಲ್ಲಿ, ಕೇಂದ್ರ ಮತ್ತು ಉಪಕೇಂದ್ರಗಳು ಸೂಕ್ತವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗಿಸುವಂತೆ, ಅವುಗಳಲ್ಲಿನ ಸುಪ್ತ ಶಕ್ತಿಗಳನ್ನು ಜಾಗೃತಗೊಳಿಸಲಾಗುತ್ತದೆ. ಉನ್ನತ ಕೇಂದ್ರಗಳನ್ನು ಜಾಗ್ರತಗೊಳಿಸಿದಾಗ ಅವು ತಮ್ಮ ಪ್ರಭಾವವನ್ನು ಕೆಳಗಿನ ಕೇಂದ್ರಗಳ ಮೇಲೆ ಬೀರತೊಡಗುತ್ತವೆ. ಮತ್ತು ವು ದೇವತ್ವದ ಸಂಪರ್ಕದಲ್ಲಿ ಬಂದಾಗ ಕೆಳಗಿನ ಕೇಂದ್ರಗಳು ಅವುಗಳಲ್ಲಿ ಯಹೊಂದುತ್ತವೆ. ಹೀಗೆ, ಕೆಳಗಿನ ಕೇಂದ್ರಗಳನ್ನು ಉನ್ನತ ಕೇಂದ್ರಗಳು ತಮ್ಮ ಅಧೀನದಲ್ಲಿ ತರುತ್ತವೆ. ನಿಮ್ಮ ಕೇಂದ್ರಗಳೂ ಸಹ ಅವುಗಳ ಮೇಲೆ ನೆಲಸಿದ್ದ ಸ್ಕೂಲಪರಿಣಾಮಗಳಿಂದ ಬಿಡುಗಡೆಹೊಂದಿ, ಶುದ್ಧಗೊಳಿಸಲ್ಪಡುತ್ತವೆ. ಅತ್ಯುನ್ನತ ಫಲಿತಾಂಶವನ್ನು ತರಬಲ್ಲ, ಯೋಗ್ಯವಾದ ಮತ್ತು ಸ್ವಾಭಾವಿಕ ಮಾರ್ಗವೆಂದರೆ ಇದೇ.

ನಾನು ವಿಶೇಷವಾಗಿ ಒತ್ತಿಹೇಳಬಯಸುವ ಒಂದು ವಿಷಯವೆಂದರೆ, ಅಭ್ಯಾಸಿಯು ಗುರಿಯ ಸಾಕ್ಷಾತ್ಕಾರಕ್ಕೊಸ್ಕರ, ಉತ್ಕಟ ತಳಮಳ, ಅಥವಾ, ಅಶಾಂತ ಕಾತರವೆನ್ನುವಂತಹ ತೀಕ್ಷ್ಮವಾದ ತೃಷ್ಣ ಇವುಗಳನ್ನು ಬೆಳೆಸಿಕೊಳ್ಳಬೇಕು. ಸುಲಭವಾಗಿ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ನಾವು ಬೆಳೆಸಿಕೊಳ್ಳಬೇಕಾದದ್ದು ಈ ಅಸ್ವಸ್ಥತೆಯೆನ್ನಬಹುದಾದ ನೋವಿನ ಸಂವೇದನೆಯನ್ನೇ ! ಆದರೆ, ಯಾರಾದರೂ, ತಾವು ಅಧ್ಯಾತ್ಮ ಕ್ಷೇತ್ರದಲ್ಲಿ ಕಾಲಿಟ್ಟಿರುವುದು ಶಾಂತಿ ಸಮಾಧಾನಗಳನ್ನು ಪಡೆಯಲೆಂದೇ ಹೊರತುನೋವು, ಚಡಪಡಿಕೆಗಳನ್ನಲ್ಲವೆಂದು ಹೇಳಲು ಮುಂದೆ ಬಂದಾರೆಂಬ ಅಳುಕು ನನಗಿದೆ. ಅವರ ದೃಷ್ಟಿಕೋನದಲ್ಲಿ ದು ಸರಿಯಿರಲೂಬಹುದು. ಆದರೆ ನನ್ನ ದೃಷ್ಟಿಕೋನದಲ್ಲಿ, ದೈವಿಕತೆಯ ಮೇಲೆ ಮ್ಮ ದೃಷ್ಟಿಯನ್ನು ನೆಟ್ಟವರಿಗೆ ಎರಡನೆಯದು, (ಅಶಾಂತಿ), ಹಾಗೂ, ಒಂದು ರೀತಿತಂದ್ರಿ ಅಥವಾ ಅಮಲಿನ ಸವಿಯನ್ನು ಬಯಸುವವರಿಗೆ ಮೊದಲನೆಯದು (ಶಾಂತಿ) – ಎಂದು ಹೇಳಬಯಸುತ್ತೇನೆ. ಎರಡನೆಯದನ್ನು ಪಡೆಯುವುದು ಅಷ್ಟೇನೂ ಕಷ್ಟದ ಕೆಲಸವಲ್ಲ. ಆದರೆ, ಮೊದಲನೆಯದನ್ನು ಪಡೆಯುವುದೇನೂ ಮಕ್ಕಳಾಟವಂತೂ ಅಲ್ಲ. ಅನೇಕರು ಶಾಂತಿಸ್ಥಿತಿಯನ್ನು ಸವಿದಿರಬಹುದು. ಯಾವುದರ ಒಂದು ಕಿಡಿಗೋಸ್ಕರ, ಶಾಂತಿ ಸಮಾಧಾನಗಳ ಸಾವಿರ ಅವಸ್ಥೆಗಳನ್ನು ಕೂಡ ತೊರೆದುಬಿಡಲು ಸಿದ್ದರಾಗಬಹುದೋ, ಶಾಂತಿಯ ಸವಿಯನ್ನೀಗ ನಾವು ಸವಿಯೋಣ. ವಿರಳ ವ್ಯಕ್ತಿಶ್ರೇಷ್ಠರನ್ನು ಈ ಜಗತ್ತಿಗೆ ಬರುವಂತೆ ಮಾಡುವ ಇಡೀ ರಚನೆಯ ಅಡಿಪಾಯ, ವಾಸ್ತವಿಕವಾಗಿ, ಇದೇ ಆಗಿದೆ. ನಿಜವಾದ ಶಾಂತಿಯಥಾರ್ಥ ಸ್ಥಿತಿಯು ಗ್ರಹಿಕೆಗೆ ನಿಲುಕದ್ದು. ಅದು ಯಾವ ವೈರುಧ್ಯವನ್ನೂ ಒಪ್ಪುವುದಿಲ್ಲ. ಅದು ಅಕ್ಷರಶಃ ಶಾಂತಿಯೂ ಅಲ್ಲ, ಅಶಾಂತಿಯೂ ಅಲ್ಲ ; ಸಂಯೋಗವೂ ಅಲ್ಲ, ವಿಯೋಗವೂ ಅಲ್ಲ ; ಆನಂದವೂ ಅಲ್ಲ, ಅದರ ವಿರುದ್ಧವಾದುದೂ ಅಲ್ಲ. ಒಟ್ಟಿನಲ್ಲಿ, ನಾವು ಯಾವುದಕ್ಕೋಸ್ಕರ ವೇದನೆಯನ್ನು ಬೆಳಿಸಿಕೊಂಡಿದ್ದೆವೋ ಅದೇ ಅದು. ನೀವೆಲ್ಲರೂ ನೋವನ್ನು ಆಸ್ವಾದಿಸುವಂತಾಗಲಿ.” ಅದನ್ನು ರೂಢಿಸಿಕೊಳ್ಳುವುದು ಅಷ್ಟೇನೂ ಕಷ್ಟವೇನಲ್ಲ. ಆ ಉದ್ದೇಶಕ್ಕೆ ಬೇಕಾಗಿರುವುದು ದೃಢಸಂಕಲ್ಪ ಹಾಗೂ ಅದರತ್ತ ಅವಿಚ್ಛಿನ್ನ ಲಕ್ಷ – ಅಷ್ಟೆ. ಆಗ ನೀವು ಅರಸುತ್ತಿರುವ ವಸ್ತು ನಿಮ್ಮ ಸನಿಹದಲ್ಲಿಯೇ ಕಾಣಸಿಗುವುದು. ಅಷ್ಟೇ ಅಲ್ಲ, ನೀವು ಹುಡುಕುತ್ತಿರುವ ವಸ್ತುವು ನೀವೇ ಆಗಿರಬಹುದು. ಅದಕ್ಕೆ ಬೇಕು ಜ್ವಲಂತ ಹೃದಯ. ಅದು ಮಾರ್ಗದಲ್ಲಿರುವ ಕಳೆ ಪೊದೆಗಳನ್ನು ಸುಟ್ಟು ಹಾಕಿತು.

***