ಅನುವಾದಕನ ಅರಿಕೆ

ಈ ಪುಸ್ತಕವು ಸಹಜಮಾರ್ಗಸಾಧನೆಯ ಅಡಿಗಲ್ಲಿನಂತಿರುವ ಹತ್ತು ನಿಯಮಗಳ ಮೇಲಿನ ವ್ಯಾಖ್ಯಾನ, ಶ್ರೀ ಗುರು ಮಹಾರಾಜರು ಇದನ್ನು ಮೂಲತಃ ಉರ್ದು ಭಾಷೆಯಲ್ಲಿ ಬರೆದಿದ್ದಾರೆ. ಅವರ ಉರ್ದು ಭಾಷೆ ಲಲಿತವೂ ರಸಾದ್ರ್ರವೂ ಅತ್ಯಂತ ಪರಿಣಾಮಕಾರಿಯೂ ಆಗಿದೆ. ಉರ್ದುವಿ ನಲ್ಲಿ ನನ್ನ ಯೋಗ್ಯತೆ ಅತ್ಯಲ್ಪ, ಅನುವಾದ ಮಾಡುವಾಗ ಮೂಲದ ಬಹಳಷ್ಟು ಸ್ವಾರಸ್ಯ ಲೋಪವಾಗಿದೆಯೆಂದೇ ನನ್ನ ಭಾವನೆ. ಉರ್ದು ಬಲ್ಲವರು ಮೂಲವನ್ನು ಓದಿಯೇ ತಣಿಯಬೇಕು.

ಇದನ್ನು ಬಹಳಷ್ಟು ಪರಿಷ್ಕರಿಸಿ ಇದಕ್ಕೊಂದು ರೂಪ ತಂದುಕೊಟ್ಟವರು ನನ್ನ ಗುರುಬಂಧುಗಳಾದ ಶ್ರೀ ರಾಘವೇಂದ್ರರಾಯರು ಹಾಗು ರಾಯಚೂರಿನ ಇತರ ಬಂಧುಗಳು. ಅವರೆಲ್ಲರಿಗೂ ನನ್ನ ಹಾರ್ದಿಕ ವಂದನೆಗಳು. ಇದರ ಪ್ರಕಟನೆಯಲ್ಲಿ ಒಂದಿಲ್ಲೊಂದು ರೀತಿಯಿಂದ ನೆರವಾಗಿರುವ ಎಲ್ಲ ಬಂಧುಗಳಿಗೂ ನನ್ನ ನೆನಕೆಗಳು.

ಕಲಬುರ್ಗಿ

ಸಾಧಾರಣ ಸಂವತ್ಸರ,

ಚೈತ್ರಶುದ್ಧ ಪಾಡ್ಯಮಿ.

ಶ್ರೀ. ಆ. ಸರ್ನಾಡ