ಸಹಪಥಿಕನ ಕರೆ

ಪೀಠಿಕೆ

ಸನ್ಮಾನ ಸಹೋದರ ರಾಘವೇಂದ್ರ ರಾವ್ ಅವರಿಗೆ ಪೂಜ್ಯ ಗುರುಗಳ ಪ್ರಥಮ ದರ್ಶನವು ೨೨ ಅಕ್ಟೋಬರ ೧೯೫೫ ರಂದು ಷಹಜಹಾನಪುರದ ಗುರುಗಳ ಮನೆಯಲ್ಲಿ ಆಯಿತು. ಇವರು ಪ್ರಥಮ ಭೆಟ್ಟಿಯಲ್ಲಿಯೇ ಗುರುಗಳ ಹಾಗೂ ಅವರ ಸಂಸ್ಥೆಯ ಸಾರತತ್ವವನ್ನೇ ಅರಗಿಸಿಕೊಂಡ ಒಬ್ಬ ಅಭ್ಯಾಸಿಗಳಾಗಿದ್ದಾರೆ. ಬೇರೆ ಶಬ್ದಗಳಲ್ಲಿ ಹೇಳುವದಾದರೆ, ಪ್ರಥಮ ಭೆಟ್ಟಿಯಲ್ಲಿಯೇ ಪೂಜ್ಯ...

ಮುನ್ನುಡಿ

ಅನೇಕ ಯುಗಗಳಿಂದ ಮಾನವನ ಸುಖಶೋಧನೆ ಬಹುಬಗೆಯಾಗಿ ಹಾಗೂ ಛಲ ಬಿಡದೆ ಸಾಗಿದೆ. ಮತ್ತು ತನ್ನ ಎಡೆಬಿಡದ ಯತ್ನಗಳಲ್ಲಿ ಆತನು ಬಹಳಷ್ಟು ನಿರಾಶೆಯನ್ನು ಎದುರಿಸಿದ್ದಾನೆ. ಯಾಕೆಂದರೆ, ಅವನ ಸುಖದ ಶೋಧನೆ ಸುಖದ ವಿಷಯಗಳೆನಿಸಿದ ಅಥವಾ ಅವನು ತಿಳಿದಂತೆ ಸುಖದ ಮೂಲವೆನಿಸಿದ ವಸ್ತುಗಳಿಂದ ಆವೃತ್ತವಾಗಿದ್ದು, ಈ ಶೋಧವನ್ನು ಭಯಾನಕ ಸ್ವಪ್ನಗಳನ್ನಾಗಿಸಿತು....

ಅನುವಾದಕನ ಅರಿಕೆ

ಗುರು ಬಂಧುಗಳಾದ ಶ್ರೀ ರಾಘವೇಂದ್ರ ರಾವ್, ರಾಯಚೂರ, ಅವರು ರಚಿಸಿದ “Call of the Fellow Traveller” ಎಂಬ ಇಂಗ್ಲೀಷ ಗ್ರಂಥವು ೧೯೯೯ ರ ಎಪ್ರಿಲ್‌ ೩೦ ರಂದು ನಮ್ಮ ಪೂಜ್ಯ ಗುರುಗಳಾದ ಮಹಾತ್ಮಾ ಶ್ರೀ ರಾಮಚಂದ್ರಜೀ ಷಹಜಹಾನಪುರ (ಉತ್ತರ ಪ್ರದೇಶ) ಅವರ ಜನ್ಮ ಶತಮಾನೋತ್ಸವದ ಶುಭಸಂದರ್ಭದಲ್ಲಿ...

ಈ ಪರಿಷ್ಕೃತ ಆವೃತ್ತಿಯನ್ನು ಕುರಿತು ಎರಡು ಮಾತು

ನಮ್ಮ ಪ್ರಿಯ ಗುರುಬಂಧು ಶ್ರೀ ರಾಘವೇಂದ್ರ ರಾವ್, ರಾಯಚೂರು ಅವರ ಲೇಖನಗಳ ಹಾಗೂ ಭಾಷಣಗಳ ಸಂಗ್ರಹ “Call of the Fellow Traveller’ ಗ್ರಂಥದ ಕನ್ನಡ ಅನುವಾದವನ್ನು 2001ರಲ್ಲಿ ನಾವು ‘ಸಹಪಥಿಕನ ಕರೆ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದೆವು. ಅನಂತರ ಶ್ರೀ ರಾಘವೇಂದ್ರರಾಯರ ಇನ್ನೂ ಕೆಲವು ಲೇಖನಗಳು (ಇಂಗ್ಲಿಷ್...

1. ಬಾಬೂಜಿ ಮಹಾರಾಜರಿಗೆ ಪ್ರಣಾಮಗಳು

ಪ್ರಿಯ ಸೋದರ ಸೋದರಿಯರೆ, ಮಹಾತ್ಮರು ಆಕಸ್ಮಿಕವಾಗಿ ಜನ್ಮ ತಾಳುವುದಿಲ್ಲ, ಹಾಗೂ ಅವರ ಜೀವನೋದ್ದೇಶವು ಸುಲಭವಾಗಿ ಪೂರ್ಣಗೊಳ್ಳುವುದಿಲ್ಲ. ನಮ್ಮ ಗುರುಮಹಾರಾಜರು ಕಾಲದ ಅವಶ್ಯಕತೆಗೆ ಅನುಸಾರವಾಗಿ ಈ ಧೈಯೋದ್ದೇಶವನ್ನು ಪೂರ್ಣಗೊಳಿಸಲು ನಮಗೆ ನೀಡಿದ್ದಾರೆ, ಮತ್ತು ಆ ಕಾರ್ಯವನ್ನು ಪೂರ್ಣಗೊಳಿಸುವುದು ನಮಗೆ ಬಿಟ್ಟದ್ದಾಗಿದೆ. ಈ ಕಾರ್ಯವನ್ನು ಕೈಗೆತ್ತಿಕೊಳ್ಳುವುದರಲ್ಲಿ ನಾವು ಅತ್ಯಂತ ಸುದೈವಿಗಳಾಗಿದ್ದೇವೆ,...

2. ಪ್ರಭಾವಕಾರಿ ಧ್ಯಾನ

ಹಲವಾರು ಬಗೆಯ ಧ್ಯಾನಗಳನ್ನು ವಿಧಿಸುವ ಹಲವಾರು ಶಿಕ್ಷಕರು (ಗುರುಗಳು) ಇದ್ದಾರೆ. ಈ ವಿಧಾನಗಳು ಕೇವಲ ಐದು ನಿಮಿಷಗಳ ಅತೀಂದ್ರಿಯ ಧ್ಯಾನದಿಂದ ಹಿಡಿದು ಸುಮಾರು ನಾಲ್ಕು ಅಥವಾ ಇನ್ನೂ ಹೆಚ್ಚು ಗಂಟೆಗಳ ಕಾಲ ಕೆಲವೊಂದು ಆಯ್ದ ಶಬ್ದಗಳ ಮಾನಸಿಕ ಪುನರುಚ್ಚರಣೆಯವರೆಗೆ ವಿವಿಧ ಪ್ರಕಾರಗಳದ್ದಿವೆ. ಮುಗ್ಧ ಜನರು ಅಂತಹ ಅಭ್ಯಾಸಗಳನ್ನು...

3. ಜ್ಞಾನಾಸಕ್ತಿ

ಜ್ಞಾನಿಯಾಗಲು ಆಕಾಂಕ್ಷಿಸುವುದು ಮಾನವರ ಸ್ವಾಭಾವಿಕ ಅಪೇಕ್ಷೆಯಾಗಿದೆ. ಕೆಲವರು ತಮ್ಮನ್ನು ತಾವು ಜ್ಞಾನಿಗಳೆಂದು ಪರಿಗಣಿಸುತ್ತಾರೆ ಹಾಗೂ ಇನ್ನೂ ಹೆಚ್ಚು ಜ್ಞಾನಿಗಳಾಗಬೇಕೆಂದು ಬಯಸುತ್ತಾರೆ. ಇನ್ನು ಕೆಲವರು ತಮ್ಮ ಸ್ವಂತದ ಜ್ಞಾನದಿಂದ ಬೇಸತ್ತು. ಯಾವುದೋ ಒಂದು ಉಚ್ಚಮಟ್ಟದ ಜ್ಞಾನಕ್ಕಾಗಿ ಅಥವಾ ದೈವೀ ಜ್ಞಾನಕ್ಕಾಗಿ ಹಪಹಪಿಸುತ್ತಾರೆ. ಮಾನವ ಕುಲವನ್ನು ಪೀಡಿಸುತ್ತಿರುವ ಎಲ್ಲ ಕೆಡಕುಗಳನ್ನು...

4. ಆಗ ಮತ್ತು ಈಗ

ನಾನು ಶ್ರೀರಾಮಚಂದ್ರ ಮಿಷನ್ ಸೇರಿದ ಸ್ವಲ್ಪ ಸಮಯದ ನಂತರ ಸಮಾಜದ ನನ್ನ ಚಿಕ್ಕ ವಲಯದಲ್ಲಿ ನಾನೊಂದು ವಿಚಿತ್ರ ಸನ್ನಿವೇಶವನ್ನು ಎದುರಿಸಬೇಕಾಯಿತು. ನನ್ನ ಎಲ್ಲ ಸಂಗಡಿಗರಲ್ಲಿ ನಾನು ಒಂದು ಆಧ್ಯಾತ್ಮಿಕ ಸಂಸ್ಥೆಯನ್ನು ಸೇರಿದುದನ್ನು ಅರಿತ ನನ್ನ ಮಿತ್ರರಲ್ಲಿ ಕೆಲವರು ಆಶ್ಚರ್ಯಚಕಿತರಾಗಿದ್ದರು. ಒಂದಿಲ್ಲೊಂದು ದಿನ ನಾನು ಇಂತಹ ದುಡುಕಿನ ಕೆಲಸ...

5. ಅಮರತ್ವಕ್ಕೆ ದಾರಿ

 ತಮ್ಮ ಮಮತೆಯ ಮಗನ ಮರಣದ ಸಮಯ ಭವಿಷ್ಯವಾಣಿಯ ಪ್ರಕಾರ ಸನ್ನಿಹಿತವಾಗುತ್ತಿರುವುದರ ಕಾರಣ, ಮಾರ್ಕಂಡೇಯನ ತಂದೆ-ತಾಯಿಗಳು ದುಃಖಕ್ಕೀಡಾಗಿದ್ದರು. ಮಗನು ಅದಾಗಲೇ ಪರಮ ಪ್ರಭುವಿನ ಪೂಜೆಗೆ ಹೋಗಿದ್ದನು. ಮೃತ್ಯು ದೇವನು ಆ ಬಾಲಕನಿದ್ದಲ್ಲಿಗೆ ಹೋಗಿದ್ದ, ಆದರೂ ಪರಮಾತ್ಮನ ಕೃಪಾರ ಕ್ಷೆಯಲ್ಲಿದ್ದ ಅವನನ್ನು ಮುಟ್ಟಲಾಗಲಿಲ್ಲ. ಮೃತ್ಯುದೇವತೆ ಬರಿಗೈಯಿಂದ ಹಿಂದಿರುಗಿ ಬರಬೇಕಾಯಿತು. ಮೃತ್ಯು...

6. ಭಾರತದಲ್ಲಿ ಬೆಳಗುತ್ತಿರುವ ಹೊಸಬೆಳಕು

ಸುಮಾರು 2500 ವರ್ಷಗಳ ಹಿಂದೆ ಗೌತಮ ಬುದ್ದನೆಂಬ ಒಬ್ಬ ಮಹಾ ವ್ಯಕ್ತಿಯು. ಈ ಭೌತಿಕ ಜೀವನದ ಕಷ್ಟಗಳಿಂದ ಮಾನವರು ಮುಕ್ತರಾಗಿ ನಿರ್ವಾಣ ಹೊಂದಲು ಸಾಧನಗಳಾಗುವ ಅನುಷ್ಠಾನದ ಬಗ್ಗೆ ಬೋಧಿಸಿದನೆಂದು ಇತಿಹಾಸಕಾರರು ನಮಗೆ ಹೇಳುತ್ತಾರೆ. ಈಗಲೂ ಅವೇ ದುಃಖಗಳನ್ನು ಅನುಭವಿಸುತ್ತಿರುವ, ಆದರೂ ನಿರ್ಮಾಣಕ್ಕಾಗಿ ಇನ್ನೂ ಆಶಿಸುತ್ತಿರುವ ಅನೇಕ ಬಗೆಯ...