ಜ್ಞಾನಿಯಾಗಲು ಆಕಾಂಕ್ಷಿಸುವುದು ಮಾನವರ ಸ್ವಾಭಾವಿಕ ಅಪೇಕ್ಷೆಯಾಗಿದೆ. ಕೆಲವರು ತಮ್ಮನ್ನು ತಾವು ಜ್ಞಾನಿಗಳೆಂದು ಪರಿಗಣಿಸುತ್ತಾರೆ ಹಾಗೂ ಇನ್ನೂ ಹೆಚ್ಚು ಜ್ಞಾನಿಗಳಾಗಬೇಕೆಂದು ಬಯಸುತ್ತಾರೆ. ಇನ್ನು ಕೆಲವರು ತಮ್ಮ ಸ್ವಂತದ ಜ್ಞಾನದಿಂದ ಬೇಸತ್ತು. ಯಾವುದೋ ಒಂದು ಉಚ್ಚಮಟ್ಟದ ಜ್ಞಾನಕ್ಕಾಗಿ ಅಥವಾ ದೈವೀ ಜ್ಞಾನಕ್ಕಾಗಿ ಹಪಹಪಿಸುತ್ತಾರೆ. ಮಾನವ ಕುಲವನ್ನು ಪೀಡಿಸುತ್ತಿರುವ ಎಲ್ಲ ಕೆಡಕುಗಳನ್ನು ಜ್ಞಾನವೇ ಪರಿಹರಿಸುವುದು ಎಂಬ ಮೂಲಭೂತ ನಂಬಿಕೆಯಿದೆ. 

ಹೃದಯಗ್ರಂಥಿಯ ಕಾರಣದಿಂದ ಉಂಟಾಗುವ ಇಚ್ಛೆಗಳು/ ಬಯಕೆಗಳು ಮಾನವನ ಚಿಂತನ ಶಕ್ತಿಯ ತಳಹದಿಯನ್ನು ನಿಯಂತ್ರಿಸುವ ಕಾರ್ಯಭಾರಿಯಾದಾಗ, ಜ್ಞಾನಕ್ಕಾಗಿ ಇರುವ ಆಸಕ್ತಿಯೇ ಅಸಂಖ್ಯಾತ ಬಯಕೆಗಳ ಪೈಕಿ ಒಂದು ಬಯಕೆ ಆಗಿಬಿಡುತ್ತದೆ. ಜ್ಞಾನದ ಅರ್ಥವು ಹೃದಯವನ್ನು ಸದಾ ಕಾಡುವ ಬಯಕೆಗಳಿಂದ ಬಣ್ಣ ತಳೆಯುತ್ತದೆ. ಕೆಲವೊಮ್ಮೆ ವಿವೇಕಯುಕ್ತ ಜ್ಞಾನವು ಸೌಖ್ಯ, ಸಂತೃಪ್ತಿಗಳ ಪ್ರಾಪ್ತಿಗೋಸ್ಕರ ಬಳಸುವ, ಭೌತ ವಸ್ತುಗಳ ವಿಶಿಷ್ಟ ಗುಣಧರ್ಮಗಳ ಕುರಿತಾದ ತಿಳಿವಳಿಕೆಯೆಂದು ಅರ್ಥೈಸಲಾಗುತ್ತದೆ. ಇನ್ನು ಬೇರೆ ಸಂದರ್ಭಗಳಲ್ಲಿ ಒಬ್ಬನ ತಿಳಿವಳಿಕೆಯ ವಿಸ್ತರಣೆ ಅಥವಾ ಅಹಂಕಾರ, ಪ್ರತಿಷ್ಠೆಗಳನ್ನು ಉದ್ದೀಪನಗೊಳಿಸುವ ಅಥವಾ ಸಂತೋಷಗೊಳಿಸುವ ಬೌದ್ಧಿಕ ಆಲೋಚನಾಶಕ್ತಿಯ ಮತ್ತು ತಾರ್ಕಿಕತೆಯ ಬೆಳವಣಿಗೆ ಎಂದು ಕೂಡ ಅರ್ಥ ಮಾಡಲಾಗುತ್ತದೆ. 

‘ಜ್ಞಾನ’ವನ್ನು ಲೌಕಿಕ ಜ್ಞಾನ ಮತ್ತು ದೈವೀ ಜ್ಞಾನ ಎಂಬ ಎರಡು ರೀತಿಗಳಲ್ಲಿ ಸಾರ್ವತ್ರಿಕವಾಗಿ ಸ್ವೀಕರಿಸಲಾಗಿದೆ. ಸೃಷ್ಟಿಯು ಪ್ರಾರಂಭವಾದಾಗ, ಅದು, ದೈವೀ ಶಕ್ತಿಯ ಪ್ರವಾಹವು ಇಳಿದು ಬಂದಂತಿತ್ತು. ಒಂದು ಘಟ್ಟದವರೆಗೆ ಅದು ಒಂದು ಪ್ರಧಾನ ಧಾರೆಯಾಗಿತ್ತು; ಅಲ್ಲಿಂದ ಎರಡು ಮುಖ್ಯ ಪ್ರವಾಹಗಳಾಗಿ ಕವಲೊಡೆಯಿತು. ಅಷ್ಟಕ್ಕೂ ಅಲ್ಲಿ ಕೆಲವು ಉಪ-ಪ್ರವಾಹಗಳು ಕೂಡ ಇದ್ದುವೆಂಬುದೇನೋ ಸರಿಯೆ. ಈ ಮೇಲೆ ಹೇಳಿದ ಎರಡು ಪ್ರವಾಹಗಳಲ್ಲಿ ಒಂದು ಅಧೋಮುಖಿಯಾಗಿತ್ತು ಮತ್ತು ಇನ್ನೊಂದು ಬಲಗಡೆಗೆ ಊರ್ಧ್ವಮುಖೀ ಪ್ರವೃತ್ತಿಯದಾಗಿತ್ತು. ಅಧೋಮುಖಿ ಪ್ರವಾಹವು ಬಹುಶಃ ಭೌತಿಕತೆಗೆ ಮತ್ತು ಘನೀಕರಣಕ್ಕೆ ಸಂಬಂಧಿಸಿದೆ ಮತ್ತು ಬಲಗಡೆಯ ಪ್ರವಾಹವು ಆಧ್ಯಾತ್ಮಿಕ ಮತ್ತು ಉದಾತ್ತೀಕರಣಕ್ಕೆ ಸಂಬಂಧಿಸಿದೆ. ದೈವೀ ಜ್ಞಾನವು ಬಲಗಡೆಯ ಪ್ರವಾಹಕ್ಕೆ ಸೇರಿದುದು ಮತ್ತು ಲೌಕಿಕ ಜ್ಞಾನವು ಬಹುಶಃ ಅಧೋಮುಖಿ ಪ್ರವಾಹಕ್ಕೆ ಸೇರಿದುದಾಗಿದೆ. 

ದೈವೀ ಜ್ಞಾನದ ಅಭೀಷ್ಟೆಯು ಭಾರತೀಯ ಯೋಗಿಗಳ ಮತ್ತು ಋಷಿಗಳ ವೈಶಿಷ್ಟ್ಯವಾಗಿದೆ. ಇದಕ್ಕೆ ಬಹುತೇಕ ಪ್ರತಿಯೊಬ್ಬ ಮಹಾ ಋಷಿಯೂ ವಿಧಿಸಿರುವ ಮೊದಲ ಆವಶ್ಯಕತೆಯೆಂದರೆ, ಹೃದಯದ ಶುದ್ದೀಕರಣ ಮತ್ತು ಅಧೋಮುಖಿ ಪ್ರವೃತ್ತಿಗಳನ್ನು ನಿಗ್ರಹಿಸುವುದು. ಅವರು ಹೇಳುವ ಪ್ರಕಾರ, ಹೃದಯಗ್ರಂಥಿಯನ್ನು ಯಾರು ಭೇದಿಸಿರುವರೋ ಅವರಲ್ಲಿ ಮಾತ್ರವೇ ದೈವೀಜ್ಞಾನ ಉದಯಿಸುವುದು. 

ಎಲ್ಲಿಂದ ದೈವೀ ಧಾರೆಗಳು ಕೆಳಮುಖವಾಗಿ ಹರಿಯಲು ಪ್ರಾರಂಭಿಸಿದವೋ ಅದರ ಸ್ವಲ್ಪವೇ ಕೆಳಗೆ ಜ್ಞಾನದ ಬಿಂದುವಿದೆ. ದೈವೀ ಜ್ಞಾನದ ಬಿಂದುವನ್ನು ತಲುಪಲು ಬಯಸುವವನು, ಮೊದಲು ಬಲಬದಿ ಹರಿಯುವ ದೈವೀ ಪ್ರವಾಹದ ಶಾಖೆಗೆ ಅನುಸಾರವಾಗಿ ತನ್ನ ಚಲನೆಯನ್ನು ಬಲಬದಿಗೆ ತಿರುಗಿಸಬೇಕಾಗುವುದೆಂಬುದನ್ನು ಮಹಾ ಯೋಗಿಗಳು ಕಂಡು ಹಿಡಿದರು. ಹೃದಯ ಮಂಡಲದಲ್ಲಿ ಐದು ಮುಖ್ಯ ಬಿಂದುಗಳಿವೆ. ಈ ಐದು ಬಿಂದುಗಳ ಯಾತ್ರೆಯನ್ನು ಪೂರ್ಣಗೊಳಿಸಿದ ನಂತರ, ಮುಂದೆ ಕ್ರಮಾಗತವಾಗಿ ಬರುವ ಪ್ರತಿಯೊಂದು ಬಿಂದುವು, ಆ ಹಿಂದಿನ ಬಿಂದುವಿನ ಬಲಬದಿಗೆ ಅಥವಾ ಅದರ ಮೇಲುಗಡೆಯ ಸ್ತರದಲ್ಲಿರುತ್ತದೆ. ಆಧ್ಯಾತ್ಮ-ಕ್ಷೇತ್ರದಲ್ಲಿಯ ಯಾತ್ರಿಕನು ದೈವೀ ಜ್ಞಾನದ ವಲಯವನ್ನು ಪ್ರವೇಶಿಸುವನು. 

ಎಲ್ಲ ಬಿಂದುಗಳನ್ನೂ ದಾಟಿ ದೈವೀ ವಲಯವನ್ನು ಪ್ರವೇಶಿಸಿದವನೊಬ್ಬನು ಸಂಚಾರಣಗೊಳಿಸುವ ದೈವೀ ಶಕ್ಯಾಘಾತವು, ದೈವೀ ಜ್ಞಾನವನ್ನು ಪಡೆಯಬೇಕೆಂಬ ಅಭೀಷ್ಟೆಯುಳ್ಳವನಿಗೆ ಮಹತ್ತರ ಸಹಾಯ ಮಾಡುತ್ತದೆ. ನಿಜವಾಗಿ, ಉನ್ನತ ಸ್ತರಗಳಲ್ಲಿ ಅಂತಹ ಪ್ರಾಣಾಹುತಿಯು (ದೈವೀ ಶಕ್ತಿಸಂಚಾರಣವು ಅತ್ಯಂತ ಆವಶ್ಯಕವಾಗುತ್ತದೆ. ಏಕೆಂದರೆ, ಅವುಗಳಲ್ಲಿ ಎಷ್ಟು ಜಾರುವಿಕೆಯಿರುವುದೆಂದರೆ, ಯಾರ ಸಹಾಯವೂ ಇಲ್ಲದೆ ಅಲ್ಲಿ ನೆಲೆಗೊಳ್ಳುವುದು ಅಸಾಧ್ಯ. ಒಬ್ಬ ಯೋಗ್ಯತಾವಂತ ಸಮರ್ಥ ಗುರುವಿನ ಪ್ರಾಣಾಹುತಿ ಮಾತ್ರವೇ ಸಾಧಕನನ್ನು ಉನ್ನತ ಸ್ತರಗಳಿಗೆ ತಳ್ಳುವುದಕ್ಕೆ ಸಹಾಯಕವಾಗಬಲ್ಲುದು. ಜ್ಞಾನಪ್ರಾಪ್ತಿಯ ಬಗ್ಗೆ ತೀವ್ರ ಪ್ರೇಮವುಳ್ಳವರು, ದೈವೀ ಜ್ಞಾನದ ಈ ಕ್ಷೇತ್ರದಲ್ಲಿ ಸಂಶೋಧನೆಯನ್ನು ಕೈಗೆತ್ತಿಕೊಳ್ಳಬೇಕೆಂದೂ ಇದುವರೆಗೆ ಅಜ್ಞಾತವಾಗಿ ಉಳಿದ ನವೀನ ಪಥಗಳನ್ನೂ ಮತ್ತು ಸಾಧ್ಯತೆಗಳನ್ನೂ ಅನಾವರಣಗೊಳಿಸಬೇಕೆಂದೂ ವಿನಂತಿಸಿಕೊಳ್ಳುತ್ತೇನೆ. 

” ನಿಜವಾಗಿ ವಿಶ್ವಸೃಷ್ಟಿಯ ಪೂರ್ವದಲ್ಲಿದ್ದ ಸ್ಥಿತಿಯೇ ದ ವೇದವಾಗಿದೆ. ಭಗವಂತನು ನಿಮಗೆ ಆ ಸ್ಥಿತಿಯ ಸದಾ ಆನಂದವನ್ನು ದಯಪಾಲಿಸಲಿ. ನೀವೂ ಕೂಡ ಅದನ್ನು ಅದ ಹೊಂದುಏಲ. ಹೀಗೆ, ವಿಶ್ವನಿರ್ಮಾಣದ ಕಾಲದಲ್ಲಿ ವೇದಗಳು ಅಸ್ತಿತ್ವದಲ್ಲಿ ಬಂದುವು ಅನ್ನುವುದು ತೀರ ಸತ್ಯದ ವಿಷಯವಾಗಿದೆ. 

– ಶ್ರೀ ಬಾಬೂಜಿ