ಈಗ ನಾವು ಇದಕ್ಕಿಂತ ಮೇಲಿನ ಗ್ರಂಥಿಯಲ್ಲಿ ಪ್ರವೇಶ ಮಾಡಿದೆವು. ಅಗ್ನಿಯ ಅಸ್ತಿತ್ವವು ಇಲ್ಲದಾಯಿತು, ಈಗ ಅದರ ವಿರುದ್ದ ದಶೆಯಲ್ಲಿ ಸಾಗಿದ್ದೇವೆಂದು ಇದರರ್ಥ, ಇದು ಜಲಸ್ಥಾನ, ಕೇವಲ ಇದೇ ಗ್ರಂಥಿಯಲ್ಲಿ ನಾವು ಲಯವನ್ನು ಪಡೆದು ಉಳಿದು ಕೊಂಡುದಾದರೆ ಸಾಕಷ್ಟು ಸುತ್ತಾಡಿದ ನಂತರವೂ ಇದೇ ತತ್ರ್ಯದ ಮೇಲಷ್ಟೇ ನಮಗೆ ಆಧಿಕಾರವುಂಟಾಗುವುದು. ಜ್ಞಾನವು ನಮಗೇನು ಸಹಾಯ ಮಾಡುವುದು ? ಅದು ನಮ್ಮೊಳಗೆ ಭಗವದನ್ವೇಷಣ ಬುದ್ದಿಯನ್ನು ಹುಟ್ಟಿಸುವುದು. ಈ ಮಾತು ಯಾರ ವಿಚಾರದಲ್ಲಿಯೂ ಬಾರದಿದ್ದರೆ, ಅಥವಾ ವಾಸ್ತವಿಕತೆಯನ್ನು ಹುಡುಕುವುದು ನಮಗೆ ಬೇಡವಾದರೆ ಇದೇ ಗ್ರಂಥಿಯಲ್ಲಿಯೇ ಸಿಕ್ಕಿಬೀಳುವೆವು; ಮತ್ತು ಚಮತ್ಕಾರಗಳನ್ನು ತೋರಿಸಲಾರಂಭಿಸುವೆವು. ನಮ್ಮ ತಳಮಳವು ನಮ್ಮ ಸಹಾಯಕ್ಕೆ ಬಂದು, ಈ ಗ್ರಂಥಿ ಯಲ್ಲಿ ಲಯಹೊಂದಿದ ಮೇಲೆ ಸಾರೂಪ್ಯತೆಯ ದಶೆಯುಂಟಾದುದಾದರೆ ನಮಗೆ ಆ ಅವಸ್ಥೆಯ ಜ್ಞಾನವಾಗುವುದು. ನಮ್ಮ ಧ್ಯೇಯವು ವಾಸ್ತವಿಕತೆಯ ಮೇಲೆಯೇ ನೆಟ್ಟಿರುವುದಾದ್ದರಿಂದ ಆ ಗ್ರಂಥಿಯ ಮೇಲೆ ನಮಗೆ ಅಧಿಕಾರವುಂಟಾದರೂ ಆದರಿಂದ ಕೆಲಸ ತೆಗೆದುಕೊಳ್ಳುವುದರ ಕಡೆಗೆ ನಮ್ಮ ದೃಷ್ಟಿ ಹೊರಳುವುದಿಲ್ಲ. ನೀರನ್ನು ಕಂಡ ಮೇಲೆ ಅನುಭವಕ್ಕೆ ಬರುವ ಪ್ರಸನ್ನತೆಯಷ್ಟೇ ಶಾಂತಗುಣವು ಇದರದಿದೆ. ಈ ಗ್ರಂಥಿಯಲ್ಲಿ ಲಯಹೊಂದಿ ಸಾರೂಪ್ಯತೆಯ ದಶೆಯನ್ನು ಪಡೆದಾಗ ಆ ಸ್ಥಿತಿಯ ಜ್ಞಾನವುಂಟಾಗುವುದು.
ಪ್ರತಿಯೊಂದು ಗ್ರಂಥಿಯ ಅನಂತರ ಉಂಟಾಗುವ ಒಂದು ಸ್ಥಿತಿಯನ್ನು ಕುರಿತು ಬರೆಯುವುದೊಳಿತು, ಯಾವುದೇ ಗ್ರಂಥಿಯಲ್ಲಿ ಲಯಾವಸ್ಥೆಯನ್ನು ಪಡೆದ ಮೇಲೆ ನಾವು ಸಾರೂಪ್ಯತೆಯ ದಶೆಯನ್ನು ಮುಟ್ಟಿದಾಗ ಆ ದಶೆಯೇ ಅದರ ಕೊನೆಯಾಗುವುದಿಲ್ಲ. ಸಾರೂಪ್ಯತೆಯೂ ಲಯವಾಗಿ ಅದಕ್ಕಿಂತ ಉನ್ನತ ಸಾರೂಪ್ಯತೆಯು ದಶೆಯಲ್ಲಿ ಮಾರ್ಪಾಟು ಹೊಂದುವುದು, ಅದನ್ನು ಜ್ಯತೆಯೆಂದು ಕರೆಯುವರು. ಆಗ ಆ ದಶೆಯ ಜ್ಞಾನವನ್ನು ಪೂರ್ಣವಾಯಿತೆಂದು ತಿಳಿಯಬೇಕು.
ಒಳ್ಳೆಯದು, ಈ ಸಾಯುಜ್ಯತೆಯೂ ನಮ್ಮಲ್ಲುಂಟಾಯಿತು. ಈಗ ಇದರ ತರುವಾಯ ಬರುವ ಜ್ಞಾನವನ್ನು ಶೋಧಿಸುತ್ತೇವೆ. ‘ಶೋಧ’ ಮತ್ತು ‘ಹಂಬಲ’ ಗಳಲ್ಲಿ ಬಹಳ ಅಂತರವಿದೆ. ಆದಕಾರಣ ಇಲ್ಲಿ ‘ಹಂಬಲ’ ವೆಂಬ ಶಬ್ದವೇ ಹೆಚ್ಚು ಯೋಗ್ಯ. ಈಗ ಈ ಹಂಬಲ ನಮ್ಮನ್ನು ಐದನೆಯ ಗ್ರಂಥಿಗೆ ಮುಟ್ಟಿಸಿ ಮೊದಲನೆಯ ನಾಲ್ಕೂ ಗ್ರಂಥಿಗಳಲ್ಲಿ ಅತ್ಯುತ್ತಮವಾದ ಸ್ಥಿತಿ ಯನ್ನು ತರುವುದು. ಈಗ ನಮ್ಮೊಳಗೆ ಆ ಗ್ರಂಥಿಯಲ್ಲಿ ಪ್ರವಾಸ ಮಾಡುವ ಅವಸ್ಥೆಯುಂಟಾಯಿತು. ಅಲ್ಲಿಯ ಸಂಗತಿಗಳು ನಮ್ಮ ಅನುಭವಕ್ಕೆ ಬರತೊಡ ಗಿದವು. ನಾವು ಇಲ್ಲಿ ನಮ್ಮ ಆಸನವನ್ನು ಸ್ಥಿರಗೊಳಿಸಿದ್ದೆವೆ. ಆದುದರಿಂದ ನಮ್ಮ ಧ್ಯಾನದ ರೂಪವು ಆ ರೀತಿ ಆಯಿತು. ಹೀಗೆ ಇದು ಮುಂದುವರಿಯಿತು. ಕೊನೆಗೆ ಈ ಪ್ರವಾಸದಲ್ಲಿ ಲಯ ಅವಸ್ಥೆಯನ್ನುಂಟುಮಾಡಿ ಕೊಂಡೆವು. ಆಗ ನಮಗೆ ಇಲ್ಲಿಯ ವಿಚಿತ್ರ ದಶೆಯನ್ನನುಭವಿಸುವ ಸುಯೋಗವೊದಗಿತು. ಈ ಅವಸ್ಥೆಯಲ್ಲಿ ವಾಯು ತತ್ವದ ಮೇಲೆ ನಮಗೆ ಅಧಿಕಾರ ಬರುವುದು. ಆದರೆ ಆ ವಾಯು ಬದಲಾವಣೆ ಹೊಂದಿರುವುದು. ಅದು ಬಿರುಸಾಗಿ ಬೀಸುವುದಿಲ್ಲವಾದರೂ ಅದರಲ್ಲಿ ಹೆಚ್ಚು ಪ್ರಸನ್ನತೆಯನ್ನು ಕೊಡುವ ಯಾವುದೋ ಒಂದು ವಸ್ತುವಿರುವುದು. ಇಲ್ಲಿ ಅಭ್ಯಾಸಿಗೆ ಎರಡು ದಶೆಗಳುಂಟಾಗುವವು. ಒಮ್ಮೊಮ್ಮೆ ಜ್ಞಾನಾವಸ್ಥೆಯಿಂದ ವಾಸ್ತವಿಕ ಜ್ಞಾನಾವಸ್ಥೆಯನ್ನು ತಲುಪಿದಾಗ ಸ್ವಲ್ಪ ದುಃಖವೆನಿಸಿದಂತೆ ಆಗಿ ಕಣ್ಣೀರು ಬರುವುದು. ಕೆಲವೊಮ್ಮೆ ಅಲ್ಲಿಯ ಗಾಳಿಯು ವರ್ತಮಾನ ದಶೆಯ ಅನುಭವಕೊಟ್ಟು ಒಂದು ರೀತಿಯ ಪ್ರಸನ್ನತೆಯನ್ನು ತರುವುದು. ಇದು ಒಮ್ಮೆ ಅಳುವಿನ ರೂಪದಲ್ಲಿ, ಒಮ್ಮೆ ನಗುವಿನ ರೂಪದಲ್ಲಿ ವ್ಯಕ್ತವಾಗುವುದು. ನಮ್ಮ ಸಾಧನ ಪದ್ದತಿಯಲ್ಲಿ ಅಭ್ಯಾಸಿಯನ್ನು ಈ ಅವಸ್ಥೆಯ ಮೇಲೆ ಹೆಚ್ಚು ಕಾಲ ತಡೆಯಲಾಗುವುದಿಲ್ಲ. ನಮ್ಮ ಇಚ್ಚಾಶಕ್ತಿ ಹಾಗೂ ಆತ್ಮಿಕ ಬಲದಿಂದ ಆ ಅವಸ್ಥೆಯ ವಾಸ್ತವಿಕ ಸಾರೂಪ್ಯತೆಯ ದಶೆಯನ್ನು ತಂದು ಕೊಟ್ಟು ಮುಂದಕ್ಕೊಯ್ಯುವೆವು. ಅಂತೂ ಈ ಸಮಯ ಬಂದಿತು. ನಾವು ಇದರಲ್ಲಿ ಸಂಪೂರ್ಣ ಸಾರೂಪ್ಯತೆಯನ್ನು ಪಡೆದು ಮುಂದೆ ಹೋದೆವು. ಈಗ ನಮಗೆ ಪಿಂಡದೇಶದ ಜ್ಞಾನವಾಯಿತು. ಪ್ರತಿಯೊಂದು ಗ್ರಂಥಿಯ ಮೇಲೆ ಧ್ವನಿಯಿದೆ ; ಮತ್ತು ಗ್ರಂಥಿಯು ಎಷ್ಟು ಉನ್ನತಾವಸ್ಥೆಯದಿರುವುದೋ ಧ್ವನಿಯೂ ಅಷ್ಟೇ ಮಧುರವಾಗುತ್ತ ಹೋಗುವುದು. ಪಿಂಡದೇಶದಲ್ಲಿ ಈ ಧ್ವನಿಯು ತೀವ್ರವಾಗಿರುತ್ತದೆ. ಯಾರಾದರೂ, ಕೇವಲ ಈ ಧ್ವನಿಗಳ ಮೇಲಾಗಲೀ, ಆವುಗಳ ಏರಿಳಿತಗಳ ಮೇಲಾಗಲೀ ಧ್ಯಾನ ಮಾಡಿದ್ದಾದರೆ ಆ ಸ್ಥಾನದ ಸಿದ್ದಿ ಗಳು ಅವರಲ್ಲಿ ಬಂದುಬಿಡುವುವು, ಐದೂ ಗ್ರಂಥಿಗಳಲ್ಲಿ ಧ್ವನಿಗಳು ಪರಸ್ಪರ ಸ್ವಲ್ಪ ಹೋಲುತ್ತಿದ್ದರೂ ಅವು ಬೇರೆ ಬೇರೆ ಪ್ರಕಾರದುವಾಗಿವೆ. ಇದನ್ನು ಪಂಚಾಗ್ನಿ ವಿದ್ಯೆಯೆನ್ನುವರು. ರಾವಣನಿಗೆ ಇದು ಸಂಪೂರ್ಣ ಸಿದ್ದಿಸಿತ್ತು. ಆದರೆ ನಾನಂತೂ ಯಾರನ್ನೂ ರಾಕ್ಷಸನನ್ನಾಗಿ ಮಾಡಬಯಸುವುದಿಲ್ಲ. ಚಮತ್ಕಾರಗಳ ಕಡೆಗೂ ಒಯ್ಯುವ ಇಚ್ಛೆಯಿಲ್ಲ. ಆದುದರಿಂದ ಈ ರಹಸ್ಯವನ್ನು ಬಿಚ್ಚುವುದಿಲ್ಲ. ಆ ಕಡೆಗೆ ಹೋಗ ಬಯಸುವವರು ಸ್ವಯಂ ಪ್ರಯತ್ನ ಮಾಡಲಿ. ಆ ಸ್ಥಳಗಳಲ್ಲಿಯ ಸ್ಪಂದನವೇ ಹಾಗಿದೆ. ಅದರಿಂದ ಧ್ವನಿಯ ಅನುಭವ ಬರುವುದು, ದಶೆಗೆ ತಕ್ಕಂತೆ ಧ್ವನಿಯು ತೀವ್ರವಾಗಲೀ, ಮಂದವಾಗಲೀ ಅವಶ್ಯ ಆಗುವುದು.