ಸನ್ಮಾನ ಸಹೋದರ ರಾಘವೇಂದ್ರ ರಾವ್ ಅವರಿಗೆ ಪೂಜ್ಯ ಗುರುಗಳ ಪ್ರಥಮ ದರ್ಶನವು ೨೨ ಅಕ್ಟೋಬರ ೧೯೫೫ ರಂದು ಷಹಜಹಾನಪುರದ ಗುರುಗಳ ಮನೆಯಲ್ಲಿ ಆಯಿತು. ಇವರು ಪ್ರಥಮ ಭೆಟ್ಟಿಯಲ್ಲಿಯೇ ಗುರುಗಳ ಹಾಗೂ ಅವರ ಸಂಸ್ಥೆಯ ಸಾರತತ್ವವನ್ನೇ ಅರಗಿಸಿಕೊಂಡ ಒಬ್ಬ ಅಭ್ಯಾಸಿಗಳಾಗಿದ್ದಾರೆ. ಬೇರೆ ಶಬ್ದಗಳಲ್ಲಿ ಹೇಳುವದಾದರೆ, ಪ್ರಥಮ ಭೆಟ್ಟಿಯಲ್ಲಿಯೇ ಪೂಜ್ಯ ಗುರುಗಳ ಸಂಪೂರ್ಣ ಕೃಪೆಗೆ ಪಾತ್ರರಾದರು.

ಗುರುಗಳ ಕೃಪೆಯಿಂದ, ಬಂಧು ರಾಘವೇಂದ್ರ ರಾವ್ ಅವರು, ಗುರುವಿನ ನಿರಂತರ ಸ್ಮರಣೆಯ ವಿಧಾನದಲ್ಲಿ ಬಹು ಬೇಗ ಪ್ರಭುತ್ವವನ್ನು ಪಡೆದು, ಅದರ ಸಹಾಯದಿಂದ ಅವರ ಸನ್ನಿಧಾನವನ್ನು ಸಂಪಾದಿಸಿದರು.

ಮೇಲೆ ವಿವರಿಸಲಾದ ಇಂಥ ಮನಸ್ಥಿತಿಯಲ್ಲಿ ಬರೆಯಲಾದ ಇಂಥ ಅಭ್ಯಾಸಿಯೊಬ್ಬನ ಲೇಖನಗಳಿವು. ಶುಭ ಸಂದರ್ಭಗಳಲ್ಲಿ ಈ ಅಭ್ಯಾಸಿಯು ಮಾಡಲಾದ ಕೆಲವು ಭಾಷಣಗಳನ್ನೊಳಗೊಂಡ ಈ ಬರಹಗಳು, ಸಹಜಮಾರ್ಗ ಸಾಧನೆಯ ಮೂಲತತ್ವಗಳ ಸ್ಪಷ್ಟ ಪ್ರಕಟನೆಗಳಾಗಿವೆ. ಈ ಅಮೂಲ್ಯ ಸಾಹಿತ್ಯವು ಸುದೀರ್ಘ ಕಾಲದವರೆಗೆ ಎಲ್ಲ ಸತ್ಯ ಶೋಧಕರಿಗೆ ಮಾರ್ಗದರ್ಶನ ಮಾಡಬಲ್ಲದು.

ಸುಮ್ಮನೇ ಓದಿದಾಗಲೂ ಒಬ್ಬನು ದೈವೀ ಕಂಪನಗಳ ಪ್ರಸರಣವನ್ನು ಅನುಭವಿಸಬಲ್ಲನು. ಹಾಗೂ ಸಹಜಮಾರ್ಗ ಪದ್ಧತಿಯ ಸಾಧನೆಯನ್ನು ಅನುಸರಿಸಲು ಪ್ರೇರೇಪಿತನಾಗುವನು. ಬಂಧು ರಾಘವೇಂದ್ರರಾಯರ ಕಾಣಿಕೆಗಳ ಈ ಸಂಗ್ರಹ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪದಾರ್ಪಣೆ ಮಾಡಬಯಸುವ ಮಾನವ ಕುಲಕ್ಕೆ ಗುರುಗಳ ಸಂದೇಶವನ್ನು ತಲುಪಿಸುವ ಬಹು ಮುಖ್ಯ ಸಾಧನವಾಗಬಲ್ಲದು ಎಂದು ನಾವು ನಂಬಿದ್ದೇವೆ.

ಎಪ್ರಿಲ್‌ ೩೦, ೧೯೯೯ ಬುದ್ಧ ಪೂರ್ಣಿಮಾ

ನ್ಯಾಯಮೂರ್ತಿ ಡಿ. ಆರ್. ವಿಟ್ಠಲರಾವ ನ್ಯಾಯಮೂರ್ತಿ (ನಿ)

ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು