(ಇಂಗ್ಲಿಷ್ ಮೂಲದಿಂದ)
ಭಾರತವು ಆಧ್ಯಾತ್ಮದ ನೆಲೆವೀಡಾಗಿದೆ.ಅನೇಕನೇಕ ಮಹರ್ಷಿಗಳೂ ಆಚಾರ್ಯರೂ ತಮ್ಮ ಜೀವನವನ್ನು ಇದಕ್ಕಾಗಿಯೇ ಮುಡುಪಾಗಿಟ್ಟು ದೇವರ ಸಾಕ್ಷಾತ್ಕಾರ ಹೊಂದಿ ಪರಿಪೂರ್ಣತೆಯ ಶಿಖರವನ್ನು ತಲುಪಿದ್ದಾರೆ.ಅಜ್ಞಾನದ ಅಂಧಕಾರವನ್ನು ತೊಲಗಿಸಿ ಜನತೆಯಲ್ಲಿ ಜ್ಞಾನದ ಬೆಳಕನ್ನು ಬೀರಿದ ಮಹಾವಿಭೂತಿಗಳಲ್ಲಿ ಮಹಾತ್ಮಾ ಬುದ್ಧ, ಚೈತನ್ಯ ಮಹಾಪ್ರಭುಗಳು, ಸ್ವಾಮಿ ವಿವೇಕಾನಂದರು ಹಾಗೂ ಫತೆಹ್ ಗಡದ ಸಮರ್ಥ ಗುರು ಮಹಾತ್ಮಾ ರಾಮಚಂದ್ರಜಿ ಮಹಾರಾಜರು ಹಲವು ಉದಾಹರಣೆಗಳು.ನಿಜವಾದ ಯೋಗಿಯು ಪೂರ್ಣತ್ವದ ಅತ್ಯುನ್ನತ ಮಟ್ಟದಲ್ಲಿ ಭಗವಂತನೊಂದಿಗೆ ಸಾಮರಸ್ಯವನ್ನು ಪಡೆದು ಈಶತ್ವವನ್ನು ಹೊಂದಿರುತ್ತಾನೆ. ಭಗವತ್ ಸಾಕ್ಷಾತ್ಕಾರವು ಜಗತ್ತಿನೆದುರು ಯಾವಾಗಲೂ ಅತ್ಯಂತ ಜಟಿಲ ಸಮಸ್ಯೆ ಯಾಗಿ ನಿಂತಿದೆ. ಋಷಿಗಳು ತಮ್ಮ ಸಿದ್ಧಿ-ಸಾಮರ್ಥ್ಯ ಗಳಿಗನುಸಾರವಾಗಿ ನಾನಾ ರೀತಿಗಳಲ್ಲಿ ಈ ಸಮಸ್ಯೆ ಯನ್ನು ಬಿಡಿಸಲು ಯತ್ನಿಸಿದ್ದಾರೆ ಅದರ ಪರಿಣಾಮವಾಗಿ ಜಗತ್ತಿನಲ್ಲಿ ಬೇರೆ ಬೇರೆ ಧರ್ಮಗಳು ಹುಟ್ಟಿಕೊಂಡಿವೆ. ಅಧ್ಯಾತ್ಮದಲ್ಲಿ ಸ್ವತಃ ಉಚ್ಚ ಮಟ್ಟವನ್ನು ಮುಟ್ಟಿದ ಋಷಿಗಳಿಂದ ಅವೆಲ್ಲವೂ ಪ್ರವರ್ತಿತವಾಗಿವೆ. ಅವರು ಸ್ವಾನುಭವದಮಟ್ಟಿಗೆ ಜನತೆಯ ಯೋಗ್ಯತಾನುಸಾರವಾಗಿ ಜನರಿಗೆ ಮಾರ್ಗದರ್ಶನ ಮಾಡಿದರು. ಅಜ್ಞ ಜನರಿಗೆ ಬುದ್ಧಿಯ ಬೆಳಕನ್ನು ನೀಡಿ ಅವರನ್ನು ಸನ್ಮಾರ್ಗದಲ್ಲಿ ತೊಡಗಿಸಲು ಶಕ್ಯವಿದ್ದಷ್ಟು ಪ್ರಯತ್ನಪಟ್ಟರು. ಆದರೆ ದುರ್ದೈವದಿಂದ ಜನರು ಪ್ರಾಯಶಃ ಅವರ ಉಪದೇಶದ ಅಂತಸ್ಸಾರವನ್ನು ಗ್ರಹಿಸದೆ, ಹೆಚ್ಚಾಗಿ ಬಾಹ್ಯರೂಪವನ್ನು ಗ್ರಹಿಸಿದರು. ಇದರ ಮುಖ್ಯ ಕಾರಣವೆಂದರೆ, ಸಾಮಾನ್ಯವಾಗಿ ಜನರು-ಕೆಲವರು ಬುದ್ಧಿವಂತ ರನ್ನು ಬಿಟ್ಟು-ತಮ್ಮ ಅಭ್ಯುದಯಕ್ಕಾಗಿ ಸ್ವತಃ ಪ್ರಯತ್ನಿಸಿ ಸ್ವಾನುಭವಗಳಿಸದೆ ಅನ್ಯರ ಅನುಭವವನ್ನೇ ಅವಲಂಬಿಸಿದರು.ಉನ್ನತ ಹಂತಗಳಿಗೇರಿ ಭಗವಂತನನ್ನು ತಾವು ವೈಯಕ್ತಿಕವಾಗಿ ಸಾಕ್ಷಾತ್ಕರಿಸಿಕೊಳ್ಳಲು ಯಾವ ಪ್ರಯತ್ನವನ್ನು ಅವರು ಮಾಡಲಿಲ್ಲ. ನಿಜವಾಗಿಯೂ ಈ ಕ್ಷೇತ್ರದಲ್ಲಿ ನಮಗೆ ಪರಾನುಭವವು ಅಷ್ಟು ಪ್ರಯೋಜನಕಾರಿಯಾಗುವುದಿಲ್ಲ.ನಾವು ಸ್ವತಃ ಅನುಭವ ಹೊಂದಿ ಸಾಕ್ಷಾತ್ಕಾರ ಪಡೆಯದ ಹೊರತು ನಿಜವಾಗಿ ಯಾವ ಲಾಭವನ್ನೂ ಹೊಂದಿರುವೆವೆಂದು ಹೇಳಲಾಗದು. ಈ ರೀತಿ,ಆ ಪ್ರಾಚೀನ ಮಹರ್ಷಿಗಳ ಉಪದೇಶದ ಮೂಲೋದ್ದೇಶವು ಕಡೆಗಣಿಸಲ್ಪಟ್ಟು ಕ್ರಮೇಣ ಮರೆಯಾಗುತ್ತ ಬಂದು ಅದರ ಸಾಧನಾಂಗವು ಪೂರ್ಣ ಲುಪ್ತವಾಯಿತು. ನಾವು ನಿಜವಾದ ಅಂತಸ್ಸತ್ತ್ವವನ್ನು ಕಳೆದುಕೊಂಡು ಬಾಹ್ಯವಿಧಿಯಲ್ಲಿಯೇ ಸಿಕ್ಕಿಬಿದ್ದೆವು.ಇದೇ ನಮ್ಮನ್ನು ಭ್ರಮೆಗೊಳಿಸಿ ಅದಃಪತನದ ಹಾಗೂ ಸರ್ವನಾಶದ ಕಗ್ಗತ್ತಲೆಯಲ್ಲಿ ನೂಕಿತು. ಸ್ವಾರ್ಥಪರ ಉದ್ದೇಶಗಳು ತಲೆಯೆತ್ತಿದವು. ಕಾಲ ಕಳೆದಂತೆಲ್ಲ ಇಂಥ ಕೆಡಕುಗಳು ಬೆಳೆಯುತ್ತ ಹೋಗಿ ಕೊನೆಗೆ ಎಲ್ಲ ಕಡೆಗೃ ಪಾಪದ ಹಾಗೂ ಪಥನದ ವಾತಾವರಣವನ್ನು ನಿರ್ಮಿಸಿರುವವು.ಕತ್ತಲೆಯ ಕಾರ್ಮೋಡಗಳು ಸುತ್ತಲೂ ವ್ಯಾಪಿಸಿಬಿಟ್ಟಿವೆ. ಪರಿವರ್ತನವು ಅನಿವಾರ್ಯವಾಗಿದೆ. ಸಮರ್ಥವಾದ ದೈವೀಶಕ್ತಿಗೆ ಇದನ್ನು ಸರಿಪಡಿಸಲು ಅಥವಾ ಸಂಹರಿಸಲು ಸಾಧ್ಯವಿದೆ. ಜಗತ್ತು ಆ ಕಡೆಗೇ ಭರದಿಂದ ಸಾಗುತ್ತಿರುವುದರ ಚಿಹ್ನೆಗಳು ಸ್ಪಷ್ಟವಾಗಿ ಗೋಚರಿಸುತ್ತದೆ.
ಜನರಿಗೆ ಆಧ್ಯಾತ್ಮಿಕ ತರಬೇತಿಯನ್ನು ಕೊಟ್ಟು ಅವರನ್ನು ಉಚ್ಚಮಟ್ಟಕ್ಕೆ ತರಬೇಕೆಂಬದೇ ಇದುವರೆಗಿನ ಎಲ್ಲ ಗುರುಗಳ ಪ್ರಯತ್ನ ವಾಗಿದೆ. ತಮ್ಮ ಜೀವಮಾನವೆಲ್ಲ ಅವರು ಇದಕ್ಕಾಗಿಯೇ ನಿರ್ವಂಚನೆಯಿಂದ ದುಡಿದರು. ಅವರೆಲ್ಲರೂ ಮಾನವನಲ್ಲಿ ಪ್ರಧಾನವಾಗಿದ್ದ ಚಿತ್ ಶಕ್ತಿಯನ್ನು ಇದಕ್ಕಾಗಿ ಒಂದಿಲ್ಲೊಂದು ರೀತಿಯಲ್ಲಿ ಬಳಸಿದುದು ಗಮನಾರ್ಹ ವಾಗಿದೆ. ಇಂತುಎಲ್ಲರೂ ಒಂದು ವಿಧವಾಗಿ ರಾಜಯೋಗದ ಮೂಲತತ್ವವನ್ನು ಆಶ್ರಯಿಸಿದುದು ಕಂಡುಬರುತ್ತದೆ. ರಾಜಯೋಗವು ನಿಜವಾಗಿಯೂ ಒಂದು ಮತ-ಧರ್ಮ ವಲ್ಲ.ಅದೊಂದು ಶಾಸ್ತ್ರ. ಭಗವಂತನೊಂದಿಗೆ ತಾದಾತ್ಮ್ಯ ಹೊಂದಬೇಕಾದರೆ ಹೇಗೆ ಮುಂದುವರಿಯಬೇಕು ಎಂಬುದನ್ನು ಅದು ತಿಳಿಸಿಕೊಡುತ್ತದೆ. ಚಿತ್ ಶಕ್ತಿಯೇ ಅದರ ಮುಖ್ಯ ತತ್ವ.ಅದು ಅತ್ಯಂತ ಪರಿಣಾಮ ಕಾರಿ ಪದ್ಧತಿಯಾಗಿದ್ದು ಅಷ್ಟೇ ಸರಳವೂ ಆಗಿದೆ. ದೇವರು ಸುಲಭನಾಗಿದ್ದು ಋಜುಮಾರ್ಗದಿಂದ ದೊರೆಯಬಲ್ಲನು. ಹೀಗೆ ರಾಜಯೋಗ ಶಾಸ್ತ್ರವು,ಅದರ ಮೂಲ ರೂಪದಲ್ಲಿ ತೆಗೆದುಕೊಂಡುದಾದರೆ ತೀರ ಸುಲಭವಾಗಿದೆ.ಈ ಪದ್ಧತಿಯಲ್ಲಿ ಮಾರ್ಗದರ್ಶಕ ಪ್ರಾಣಾಹುತಿಯ ಮೂಲಕ ತರಬೇತಿಯನ್ನು ಕೊಡುವನು.ಕಾಲ ಪರಿಸ್ಥಿತಿ ಹಾಗೂ ಜನತೆಯ ಯೋಗ್ಯತೆಗನುಸಾರವಾಗಿ ಋಷಿಗಳು ಇದರಲ್ಲಿ ಅನೇಕ ಬದಲಾವಣೆಗಳನ್ನೂ ಸುಧಾರಣೆಗಳನ್ನೂ ಮಾಡಿದ್ದಾರೆ. ಇದನ್ನು ತಿಳಿಸುವುದಕ್ಕಾಗಿ ಈ ವಿಷಯದ ಮೇಲೆ ವಿಸ್ತ್ರತವಾದ ಭಾಷ್ಯಗಳನ್ನು ಬರೆದಿದ್ದಾರೆ. ಆದರೆ ದುರ್ದೈವದಿಂದ ಅವೆಲ್ಲವೂ ವಿಷಯವನ್ನು ಮತ್ತಷ್ಟು ಜಟಿಲಗೊಳಿಸಿವೆ.ದೊಡ್ಡ ದೊಡ್ಡ ತತ್ವ ಜ್ಞಾನಿಗಳು ವಿದ್ವಾಂಸರೂ ಬರೆದ ಭಾಷ್ಯಗಳು ಹಾಗೂ ವಿವರಣೆಗಳು ನಿಜವಾದ ಉದ್ದೇಶವನ್ನು ಈಡೇರಿಸಲಾರವು. ಅದು ಅತೀಂದ್ರಿಯ ವಿಷಯವಾಗಿದ್ದು ಶಬ್ದಗಳಿಂದ ಅಭಿವ್ಯಕ್ತವಾಗಲಾರದು.ಆಧ್ಯಾತ್ಮ ಮಾರ್ಗದಲ್ಲಿ ಮನುಷ್ಯನು ಅನುಭವಿಸುವ ನಾನಾ ಬಗೆಯ ಮಾನಸಿಕ ಅವಸ್ಥೆ ಗಳನ್ನು ಯಾವ ಶಬ್ದಗಳೂ ಬಣ್ಣಿಸಲಾರವು. ಅದನ್ನು ಕೇವಲ ಅನುಭವಿಸಿಯಾಗಲೀ ಸಾಕ್ಷಾತ್ಕರಿಸಿಕೊಂಡಾಗಲಿ ತಿಳಿಯಬೇಕು. ಮುಂದೆ ಹೋದಂತೆ ಅಭಿವ್ಯಕ್ತಿಯು ಸಂಪೂರ್ಣವಾಗಿ ಕುಂಠಿತವಾಗುವುದು.ಓದುವರಿಂದ ನೀವು ಜ್ಞಾನ ಸಂಪಾದನೆ ಮಾಡಿ ಯೋಗಶಾಸ್ತ್ರದ ಪ್ರಾಧ್ಯಾಪಕರಾಗಬಲ್ಲಿರಿ.ವಾದದಲ್ಲಿ ಸಿದ್ಧಾಂತಗಳನ್ನು ಪ್ರತಿಪಾದಿಸಿ ಗೆಲ್ಲಬಹುದು.ಆದರೆ ಅದರಿಂದ ನಿಮಗೇನು ಪ್ರಯೋಜನ?ಅದು ಅನುಭವವೇದ್ಯ. ವಿಷಯವಾಗಿದ್ದು ಪ್ರತ್ಯಕ್ಷ ಸಾಧನೆಯನ್ನು ಕೈಕೊಂಡಾಗಲೇ ಅದರಲ್ಲಿ ವರ್ಣಿಸಲಾದ ಸ್ಥಿತಿಗಳನ್ನು ಅನುಭವಿಸಬಹುದು. ಹೀಗೆ ಜನಸಾಮಾನ್ಯರು ಅದನ್ನು ತಮ್ಮ ಶಕ್ತಿ ಯೋಗ್ಯತೆಗಳಿಗೆ ಮೀರಿದ ವಸ್ತು ವೆಂದೊ ಗೃಹಸ್ಥಜೀವನದಲ್ಲಿ ಪಡೆಯಲು ಶಕ್ಯವೆಂದೊ ಭಾವಿಸತೊಡಗಿದರು.ಅವರ ಪಾಲಿಗದು ಗುಪ್ತ ಧನದಂತಾಗಿ ಉಳಿಯಿತು.ನಿಜವಾಗಿ ನೋಡಿದರೆ, ಈ ಶಾಸ್ತ್ರಾಭ್ಯಾಸಕ್ಕಾಗಿ ತಮ್ಮ ಸಮಯವನ್ನೆಲ್ಲ ವಿನಿಯೋಗಿಸಿ ಅದರಿಂದ ಲಾಭ ಹೊಂದಿದವರು ತೀರ ಕಡಿಮೆ. ಪ್ರಾಪಂಚಿಕ ಜೀವನವನ್ನು ಸಾಗಿಸುವವರಿಗಂತೂ ಇದು ಅಸಾಧ್ಯವೇ ಆಗಿದೆ. ಅವರು ತಮ್ಮ ನಿತ್ಯದ ಕೆಲಸದಲ್ಲಿ ದಿನವಿಡೀ ತೊಡಗಿದ್ದು ಹೊಟ್ಟೆಪಾಡಿಗಾಗಿ ಹೋರಾಡುತ್ತ ಕಷ್ಟ ಕಾರ್ಪಣ್ಯಗಳ ದವಡೆಯಲ್ಲಿ ಸಿಕ್ಕಿದ್ದಾರೆ.ಅವರ ಜೀವನದ ಪ್ರತಿಕ್ಷಣವೂ ಇವೇ ವಿಚಾರಗಳಿಂದ ತುಂಬಿದ್ದು ದೇವರ ಅಥವಾ ಆತ್ಮದ ಬಗೆಗೆ ವಿಚಾರಮಾಡಲು ಅವರಿಗೆ ಅವಕಾಶವಿಲ್ಲ್ಲ.ಅವರು ನಿಜವಾದ ಋಜುಮಾರ್ಗದಿಂದ ಬಹಳದೂರವಿದ್ದು ಅಜ್ಞಾನದ ಕತ್ತಲೆಯಲ್ಲಿ ತಡವರಿಸುತ್ತಿದ್ದಾರೆ. ಅವರ ಜೀವನದ ಸಮಸ್ಯೆಯು ಪರಿಹಾರವಾಗದೆ ಹಾಗೆಯೇ ಉಳಿದುಕೊಳ್ಳುವುದು. ಇಂಥವರ ಗತಿಯು ತುಂಬ ಶೋಚನೀಯ. ಅವರಿಗೆ ಪ್ರತ್ಯಾಶೆಯಿಲ್ಲ,ಸಮಾಧಾನವಿಲ್ಲ. ಯಾವುದಾದರೊಂದು ಪವಿತ್ರ ಗ್ರಂಥದಿಂದ ದಿನಾಲೂ ಕೆಲವು ಸಾಲುಗಳನ್ನು ಪಠಿಸುವುದು, ಗಂಗೆಯ ಪುಣ್ಯ ಜಲದಲ್ಲಿ ಯಾವಾಗಲಾದರೊಮ್ಮೆ ಸ್ನಾನ ಮಾಡುವುದು, ತಿಂಗಳ ನಿರ್ದಿಷ್ಟ ದಿನಗಳಲ್ಲಿ ಉಪವಾಸವಿರುವುದು,ಇವಿಷ್ಟೇ ಗೃಹಸ್ಥರಿಗೆ ಸಾಕಾಗುವುದೆಂದು ಭಾವಿಸಲಾಗಿದೆ. ಇದು ಸರ್ವಸಾಮಾನ್ಯವಾದನಂಬುಗೆ.ಇವರ ಮನಸ್ಸಲ್ಲಿ ಆಧ್ಯಾತ್ಮ ವಿಚಾರವಾಗಲಿ ಮುಕ್ತಿ ಅಥವಾ ಭಗವತ್ ಸಾಕ್ಷಾತ್ಕಾರವಾಗಲೀ ಎಂದಿಗೂ ಸುಳಿಯುವುದಿಲ್ಲ.ಈ ಸತ್ಯಪಥ ವಿಮುಖತೆಯು ಕೇವಲ ನಮ್ಮ ಅಜ್ಞಾನ ಹಾಗೂ ಯೋಗ್ಯ ಮಾರ್ಗದರ್ಶನದ ಅಭಾವದಿಂದಷ್ಟೇ ಆಗಿಲ್ಲ; ನಮ್ಮ ಹೃದಯದಲ್ಲಿ ಬೇರೂರಿ ಕುಳಿತು ಸತ್ಯವಸ್ತುವಿನ ಪ್ರಾಪ್ತಿಯಲ್ಲಿ ವಿರೋಧಿಗಳಾಗಿ ದಾರಿಯನ್ನಡ್ಡಗಟ್ಟುತ್ತಿರುವ ಅಂತರಿಕ ಪ್ರತ್ಯವಾಯುಗಳ ಮೂಲಕವೂ ಆಗಿದೆ. ಅಲ್ಲದೇ ಸಾಮಾನ್ಯವಾಗಿ ಮಾನವ ಜೀವನದ ಕೊನೆಯ ಅಧ್ಯಾಯವಾದ ವಾರ್ಧಕ್ಯವು ಈ ಕಾರ್ಯಕ್ಕಾಗಿ ಮೀಸಲಾಗಿದೆ ಎಂದು ಭಾವಿಸಲಾಗುವುದು. ಆಗ ಮನುಷ್ಯನು ಪ್ರಾಪಂಚಿಕ ಹೊಣೆಗಳಿಂದ ಮುಕ್ತನಾಗಿ ನಿಶ್ಚಿಂತನಾಗಿರುವೆನೆಂದು ಬಹುಜನರ ಗ್ರಹಿಕೆ. ಆದರೆ ನಾವೆಂದೂ ಚಿಂತೆ-ಹೊಣೆಗಳಿಂದ ಮುಕ್ತರಾಗಲಾರೆವೆಂಬುದನ್ನು ಪ್ರತ್ಯಕ್ಷಾನುಭವವು ಸಿದ್ಧಮಾಡಿದೆ. ಅಲ್ಲದೇ ಮುಪ್ಪಿನ ಅವಸ್ಥೆಯು ಬಂದೇ ತೀರುವುದೆಂಬ ಭರವಸೆಯಿಲ್ಲ.ಒಂದು ವೇಳೆ ಬಂದರೂ ಆ ಕಾಲಕ್ಕಾಗಲೇ ನಮ್ಮ ಶಕ್ತಿ-ಚೈತನ್ಯಗಳು ಉಡುಗಿ ಹೋಗಿರುತ್ತವೆ
ಭಗವತ್ ಸಾಕ್ಷಾತ್ಕಾರವಾಗಿ’ಸಹಜ ಮಾರ್ಗ’ವನ್ನು ಪ್ರಚುರ ಗೊಳಿಸಿದ(ತಮ್ಮ ಗುರುವಿನ ಹೆಸರಿನಲ್ಲಿ)ಶ್ರೀ ರಾಮಚಂದ್ರ ಮಿಷನ್ನಿನ ಸಂಸ್ಥಾಪಕರಾದ ಶ್ರೀ ರಾಮಚಂದ್ರಜೀ ಮಹಾರಾಜ,ಷಾಹಜಹಾನ್ ಪೂರ್ ಇವರಿಗೆ ಅತ್ಯಂತ ಋಣಿಯಾಗಿದ್ದೇವೆ. ಇದು ಪುರಾತನ ರಾಜಯೋಗಪದ್ಧತಿಯೇ ಆಗಿದ್ದು ದೈನಂದಿನ ಪ್ರಾಪಂಚಿಕ ಜೀವನದಲ್ಲಿ ತೊಡಗಿದವರಿಗೆ ಸುಗಮವಾಗಬೇಕೆಂಬ ದೃಷ್ಟಿಯಿಂದ ಅದರಲ್ಲಿ ಕಾಲಮಾನದ ಅವಶ್ಯಕತೆಗನುಸಾರವಾಗಿ ಹಲವು ಬದಲಾವಣೆ ಹಾಗೂ ಸುಧಾರಣೆಗಳನ್ನು ಮಾಡಲಾಗಿದೆ.ಇದು ಅವರಿಗೆ ಪ್ರಜ್ಞಾನದ ಅತ್ಯುಚ್ಚ ಸ್ಥಿತಿಯಲ್ಲಿ ಪ್ರಕಟವಾಗಿದೆಯಾದುದರಿಂದ ಅತ್ಯಂತ ಪ್ರಭಾವಿಯೂ ಪರಿಪೂರ್ಣವೂ ಆಗಿದೆ. ಇದಕ್ಕೂ ಪೂರ್ವ ದಲ್ಲಿ ಭಗವತ್ ಸಾಕ್ಷಾತ್ಕಾರವು ಅತ್ಯಂತ ಕಠಿಣವೂ ಜನ್ಮ ಜನ್ಮಾಂತರಗಳಲ್ಲಿ ಸಿದ್ಧಿಸಬಹುದಾಧ ಕಾರ್ಯವೂ ಆಗಿದೆಯೆಂದು ಸಾಮಾನ್ಯವಾಗಿ ನಂಬಲಾಗುತ್ತಿತ್ತು. ಇದು ಬಹುಮಟ್ಟಿಗೆ ನಿಜವೂ ಆಗಿದೆ. ದೊಡ್ಡ ದೊಡ್ಡ ಋಷಿಗಳು ಬಹು ಜನ್ಮಗಳ ನಿರಂತರ ಪ್ರಯತ್ನದಿಂದಲೇ ಪೂರ್ಣತೆಯನ್ನು ಪಡೆದಿದ್ದಾರೆ. ಆಗಿನ ಕಾಲದಲ್ಲಿ ಜೀವನಾವಧಿಯಾದರೂ ಇಂದಿಗಿಂತ ಸಾಕಷ್ಟು ದೀರ್ಘ ವಾಗಿರುತ್ತಿದ್ದಿತು.ಇದರಿಂದ ಸಾಮಾನ್ಯ ಗೃಹಸ್ಥರಿಗೆ ಒಂದು ತರಹದ ನಿರಾಶೆ ಯುಂಟಾಗಿದ್ದಿತು.ಒಂದು ಉನ್ನತ ಪರ್ವತದೆದುರಿಗೆ ನಿಂತುಕೊಂಡ ಒಬ್ಬ ರೋಗಿಷ್ಠನೂ ದುರ್ಬಲನೂ ಆದ ಮನುಷ್ಯನು ಅದನ್ನು ಏರಬೇಕೆಂಬ ವಿಚಾರ ಮಾತ್ರದಿಂದಲೇ ಧೈರ್ಯವುಡಗಿ ಅದು ತನ್ನ ಶಕ್ತಿ-ಸಾಮರ್ಥ್ಯಗಳಿಗೆಮೀರಿದ ಮಾತೆಂದು ಅಲ್ಲಿಂದಲೇ ತಿರುಗಿಹೋಗುವನು. ಆತನ ಮನಃ ಸ್ಥ್ಯೈರ್ಯವು ಸಡಿಲವಾಗಿ ಪ್ರಯತ್ನ ಮಾಡಬೇಕೆಂಬ ಆಸೆಯು ಸಹ ಹೊರಟುಹೋಗುವುದು. ಆದರೆ ಅದೇ ಯಾವುದಾದರೊಂದು ಬಾಹ್ಯಸಹಾಯವು(ಪಲ್ಲಕ್ಕಿ,ಮೋಟರು,ರೈಲುಗಾಡಿ ಇತ್ಯಾದಿ)ಲಭ್ಯವಾದರೆ ಆತನಪ್ರಯತ್ನ ದಲ್ಲಿ ಉತ್ಸಾಹಬರುವುದು.ಅಷ್ಟೇಅಲ್ಲ,ಮೊದಲುಯಾವುದು ಅಶಕ್ಯವೆಂದು ತೋರುತ್ತಿದ್ದಿತೋ ಅದನ್ನುಅವನು ಸಾಧಿಸಿಬಿಡುವನು.ಆಧ್ಯಾತ್ಮಿಕಸಿದ್ಧಿಯ ದಾರಿಯಲ್ಲಿ ನಮ್ಮಧ್ಯೇಯವನ್ನು ಸುಲಭವಾಗಿ ಮುಟ್ಟುವಂತೆ ಮಾಡುವ ಬಾಹ್ಯಸಹಾಯವಾವುದು?ಭಗವಂತನೊಂದಿಗೆ ಸಾಮರಸ್ಯವನ್ನುಹೊಂದಿ ಆ ಉನ್ನತಸ್ಥಿತಿಯಲ್ಲಿ ನೆಲೆಸಿರುವ ಸಮರ್ಥಸದ್ಗುರುವಿನ ಶಕ್ತಿಯೇಆಸಹಾಯವಾಗಬಲ್ಲದು.ಅತ್ಯಂತ ಪತಿತನಾದ ದುರದೃಷ್ಟ ಮನುಷ್ಯನನ್ನು ಸಹ ಆತನು ತನ್ನ ಸಾಮರ್ಥ್ಯದಿಂದ ಮೇಲಕ್ಕೆತ್ತಿ ಪೂರ್ಣತೆಯ ಹಾಗೂ ಸಾಕ್ಷಾತ್ಕಾರದ ಪಥದಮೇಲೆನಿಲ್ಲಿಸಬಹುದು. ‘ಸಹಜಮಾರ್ಗ’ವು ಪದ್ಧತಿಯಲ್ಲಿ ಹೀಗೆಯೇ ಇದೆ.ಈ ಪದ್ಧತಿಯ ಮೂಲಕ, ದೈಹಿಕ, ನೈತಿಕ ಹಾಗೂ ಆಧ್ಯಾತ್ಮಿಕವಾಗಿ ಅತ್ಯಂತ ಪತಿತನಾದ ಮನುಷ್ಯನು ಕೂಡ ದೃಷ್ಟಿಮಾತ್ರದಿಂದ ತನ್ನ ಅಪವಿತ್ರ ಆವರಣಗಳನ್ನು ಕಳೆದುಕೊಂಡು ಪರಿಪೂರ್ಣತೆಯ ಮಾರ್ಗದಲ್ಲಿ ಬಹು ತೀವ್ರ ಮುಂದುವರಿಯಬಹುದಾಗಿದೆ.ಆದರೆ ನೀವು ಆರಿಸಿಕೊಂಡ ಮಾರ್ಗದರ್ಶಿಯು ನಿಜವಾಗಿಯೂ ಯೋಗ್ಯನಿದ್ದು ಮಾರ್ಗದರ್ಶನ ಕಾರ್ಯದಲ್ಲಿ ತೀರ ಸಮರ್ಥನಾಗಿರುವೆನೆಂಬುದನ್ನು ನಿಶ್ಚಿತ ಮಾಡಿಕೊಳ್ಳಬೇಕು.ಈ ಮಟ್ಟಕ್ಕಿಂತ ಅವನು ಸ್ವಲ್ಪಾದರೂ ಕೆಳಗಿದ್ದುದ್ದಾದರೆ ನೀವು ಚರಮಗುರಿಯನ್ನು ಮುಟ್ಟಲಾರಿರಿ. ಇದು ಅತ್ಯಂತ ಮಹತ್ವದ ವಿಷಯವಾದುದರಿಂದ ಇದರ ಕಡೆಗೆ ವಿಶೇಷ ಗಮನಕೊಡತಕ್ಕದ್ದು.ಅಯೋಗ್ಯ ಗುರುವಿನ ಕೈಯಲ್ಲಿ ಸಿಗುವುದಕ್ಕಿಂತ ಜೀವನಾವಧಿ ಗುರುವಿಲ್ಲದಿರುವುದು ಹೆಚ್ಚು ಶ್ರೇಯಸ್ಕರವಾದುದು.
ಸಹಜ ಮಾರ್ಗದ ಈಗಿನ ಪದ್ಧತಿಯಲ್ಲಿ ಮಾರ್ಗದರ್ಶಕನು ತನ್ನ ಸಂಕಲ್ಪ ಶಕ್ತಿಯಿಂದ ಪ್ರಾಣಾಹುತಿಯ ಮೂಲಕ ಅಭ್ಯಾಸಿಯ ಪ್ರಗತಿಮಾರ್ಗದಲ್ಲಿ ಬಾಧಕವಾದ ವಿವಿಧ ಸಂಸ್ಕಾರಗಳ ಜಾಳಿಗೆಯನ್ನು ಕತ್ತರಿಸಿ ಸಾಕ್ಷಾತ್ಕಾರದ ದಾರಿಗುಂಟ ತಂದುಬಿಡುವನು. ಆತನ ಆಧ್ಯಾತ್ಮಿಕ ಪ್ರಗತಿಗೆ ಅವಶ್ಯಕವಾದ ಬಲವನ್ನೂ ಉತ್ಸಾಹವನ್ನು ಆತನಲ್ಲಿ ಸಂಚಾರಗೊಳಿಸುವನು. ಈ ರೀತಿ ಆತನ ದಾರಿಯು ಸುಗಮವೂ ಸರಳವೂ ಆಗಿ ಶೀಘ್ರ ಪ್ರಗತಿಯಾಗುವುದು.ಗುರುವಿನ ಜಾಗರೂಕ ದೃಷ್ಟಿಯು ಸದಾ ಆತನ ಮೇಲಿರುವದಲ್ಲದೆ ಆತನ ಮುಕ್ತಿ ಮಾರ್ಗದಲ್ಲಿ ಅಡ್ಡಬರುವ ಅನಿಷ್ಟಗಳನ್ನೆಲ್ಲ ನಿವಾರಣೆ ಮಾಡುತ್ತಿರುತ್ತದೆ.ಆತನ ಸಹಾಯದಿಂದ ಅಭ್ಯಾಸಿಯು ಅಧ್ಯಾತ್ಮದ ವಿವಿಧ ಹಂತಗಳನ್ನು ಏನೂ ಶ್ರಮವಿಲ್ಲದೆ ದಾಟುವನು. ಹೀಗೆ ಆತನ ಗುರಿಯು ಒಂದೇ ಜೀವನದಲ್ಲಿ ಪ್ರಾಪ್ತವಾಗಿ ಅವನು ಮುಕ್ತಿಯನ್ನು ಹೊಂದುವನು. ಇದು,ತನ್ನ ಪೂರ್ವಜರು ಕೂಡಿಟ್ಟ ಅಪಾರ ಸಂಪತ್ತಿಗೆ ಕ್ಷಣಾರ್ಧದಲ್ಲಿಯೇ ಒಡೆಯನಾಗುವ ಮನುಷ್ಯನಂತಿದೆ. ಈಗ ಆತನ ಮುಂದಿರುವ ಪ್ರಶ್ನೆ ಗಳಿಸುವುದಲ್ಲ;ಗಳಿಸಿದುದನ್ನು ಸಂರಕ್ಷಿಸುವುದು. ಮತ್ತೊಬ್ಬ ಮನುಷ್ಯನು ಹೇರಳ ಹಣ ಗಳಿಸಲು ಬೇರೆ ಉಪಾಯಗಳನ್ನು ಅನುಸರಿಸುವನು.ತನ್ನ ಖರ್ಚನ್ನು ಕಡಿಮೆ ಮಾಡಿ ಸಾಧ್ಯವಾದಷ್ಟು ಉಳಿಸುತ್ತ ಆದಾಯವನ್ನು ಹೆಚ್ಚಿಸುವನು.ಆತನ ಸಂಪತ್ತು ದಿನಾಲೂ ಹೆಚ್ಚುತ್ತ ಹೋಗಿ,ಕೆಲ ಕಾಲಾನಂತರ ನೂರಾರು ರೂಪಾಯಿಗಳು ಕೂಡುವವು. ತನ್ನ ಜೀವನದ ಕೊನೆಯಲ್ಲಿ ಆತನು ತಾನು ಕೂಡಿಸಿದ ಹಣವು ತೀರ ಕಡಿಮೆಯೆಂಬುದನ್ನು ಜೀವನಾವಧಿ ಶ್ರಮಪಟ್ಟರೂ ತಾನು ಅಪೇಕ್ಷಿಸಿದುದಕ್ಕಿಂತ ತೀರ ಕಡಿಮೆ ಸಂಗ್ರಹವಾದುದನ್ನು ಕಾಣುವನು. ಆತನ ಬಯಕೆ ಈಡೇರಬೇಕಾದರೆ ಇನ್ನೂ ಒಂದು ಅಥವಾ ಹಲವು ಜನ್ಮಗಳು ಬೇಕು. ಇದೇ ಪ್ರಕಾರ ನಾವು ಮಾರ್ಗದರ್ಶಿಯಿಂದ ಪ್ರಾಣಾಹುತಿಯ ಮೂಲಕ ಪಡೆದ ಆಧ್ಯಾತ್ಮಿಕ ಶಕ್ತಿಯು ಪೂರ್ವಜರು ಗಳಿಸಿಟ್ಟ ಸಂಪತ್ತಿನಂತೆ.ಅದನ್ನು ನಾವು ದಕ್ಕಿಸಿಕೊಂಡರೆ ಸಾಕು. ಇದು ಈ ಪದ್ಧತಿಯ ಒಂದು ಅಪೂರ್ವ ವೈಶಿಷ್ಟ್ಯ. ತರಬೇತಿಯ ಹಳೆಯ ಪದ್ಧತಿಯಲ್ಲಾದರೋ ಅಭ್ಯಾಸಿಯು ಸ್ವಪ್ರಯತ್ನವನ್ನೇ ಅವಲಂಬಿಸಬೇಕಾಗುತ್ತಾದ್ದಿತು;ಕಠಿಣವಾದ ಸಾಧನೆಗಳನ್ನು ಮಾಡುತ್ತ ದಾರಿಯಲ್ಲಿ ಅಡ್ಡಗಟ್ಟುವ ಪ್ರವ್ರತ್ತಿಗಳನ್ನೂ ಇಚ್ಛೆಗಳನ್ನೂ ಅದುಮುತ್ತ ಮುಂದುವರಿಯಬೇಕಾಗುತ್ತಿತ್ತು.ಆದರೆ ಈ ಸಹಜಮಾರ್ಗಪದ್ಧತಿಯಲ್ಲಿ ಅಭ್ಯಾಸಿಗೆ ತಿಳಿಯದಂತೆಯೇ ತೀರ ಸಹಜ ರೀತಿಯಲ್ಲಿ ಮಾರ್ಗದರ್ಶಿಯ ಸಂಕಲ್ಪ ಶಕ್ತಿಯ ಪ್ರಭಾವದಿಂದ ಆತನ ರೂಪಣ ವಾಗುತ್ತ ಹೋಗುವುದು.ಇಂದಿನ ಜೀವನದ ಮಹತ್ವದ ವಸ್ತುಗಳಾದ ದೀರ್ಘ ಪರಿಶ್ರಮ ಹಾಗೂ ಸಮಯ ಇವುಗಳ ಉಳಿತಾಯವಾಗುವುದು.ಸಮರ್ಥ ಮಾರ್ಗದರ್ಶಿಯ ಸಹಾಯದಿಂದ ಸಾಧಕನು ಅತ್ಯಲ್ಪ ಸಮಯದಲ್ಲಿ ಆಧ್ಯಾತ್ಮದ ವಿವಿಧ ಘಟ್ಟಗಳನ್ನು ದಾಟುತ್ತ ಹೋಗುವನು. ಅಭ್ಯಾಸಿಯು ಮಾಡಬೇಕಾದ ಕೆಲಸ ಮಾತ್ರವೆಂದರೆ ಪ್ರೀತಿಯಿಂದಲೂ ಶ್ರದ್ಧೆ-ವಿಶ್ವಾಸಗಳಿಂದಲೂ ಇಂಥ ಮಾರ್ಗದರ್ಶಿಯ ಹತ್ತಿರ ಹೋಗಬೇಕು. ಉಳಿದುದೆಲ್ಲ ಮಾರ್ಗದರ್ಶಿಯನ್ನೇ ಕೂಡಿದೆ. ಒಂದು ರೀತಿಯಿಂದ ಅವನು ಸಾಧಕನ ಆಧ್ಯಾತ್ಮಿಕ ಪ್ರಗತಿಯ ಹಾಗೂ ಪೂರ್ಣತೆಯ ಹೊಣೆಯನ್ನು ಹೊರುವನು.
ಗೃಹಸ್ಥಾಶ್ರಮದಲ್ಲಿ ಯೋಗಾಭ್ಯಾಸವು ಸಾಧ್ಯವಿಲ್ಲವೆಂದು ಸಾಮಾನ್ಯವಾಗಿ ನಂಬಲಾಗಿದೆ. ಮನುಷ್ಯನು ಪ್ರಪಂಚವನ್ನು ಸಂಪೂರ್ಣವಾಗಿ ತ್ಯಜಿಸಿ ಅದರಿಂದ ಎಲ್ಲ ಭೌತಿಕ ಸಂಬಂಧಗಳನ್ನೂ ಕಡಿದುಕೊಂಡು ಒಂದು ಗಹನಾರಣ್ಯದ ಮೂಲೆಯಲ್ಲಿ ಏಕಾಂತವಾಸಿಯಾಗಿ ಯೋಗಾಭ್ಯಾಸ ಮಾಡದಹೊರತು ಅವನು ನಿಜವಾದ ಯೋಗಿಯಾಗಲು ಸಾಧ್ಯವಿಲ್ಲವೆಂದು ತಿಳಿಯಲಾಗಿದೆ. ಮುಕ್ತಿಗಾಗಿ ಹಾಗೂ ಆಧ್ಯಾತ್ಮಿಕ ಪರಿಪೂರ್ಣತೆಗಾಗಿ ಯಾವ ಜೀವನವಾಗಲೀ ಅದರ ಸ್ವಲ್ಪ ಭಾಗದಲ್ಲಾಗಲೀ ಸಂನ್ಯಾಸವು ಅಗತ್ಯವೆಂದು ಭಾವಿಸಲಾಗುತ್ತದೆ.ಸಂನ್ಯಾಸಿಯು ಪ್ರಾಪಂಚಿಕ ವಿಷಯಗಳಿಂದ ಅಲಿಪ್ತನಾಗಿದ್ದು ಏಕಾಂತ ಜೀವನವನ್ನು ಸಾಗಿಸುತ್ತ ತನ್ನ ಸಮಯ ಶಕ್ತಿಗಳನ್ನೆಲ್ಲ ಆಧ್ಯಾತ್ಮಿಕ ಪ್ರಗತಿಗಾಗಿ ವಿನಿಯೋಗಿಸುವನು.ಒಂದು ನಿರ್ದಿಷ್ಟ ಜೀವನವನ್ನು ನಡೆಸುವುದರಿಂದಲೂ ವಿಶಿಷ್ಟ ಬಣ್ಣದ ಉಡುಪನ್ನು ಧರಿಸುವುದರಿಂದಲೂ ಉಳಿದ ಜನರಿಗಿಂತ ಬೇರೆಯವನಾಗಿ ಕಾಣುವನು.ಈ ಕಲ್ಪನೆಯು ನಮ್ಮಲ್ಲಿ ಎಷ್ಟರಮಟ್ಟಿಗೆ ಬೇರೂರಿದೆಯೆಂದರೆ,ಕಾವಿ. ಬಟ್ಟೆ ಧರಿಸಿದ ಸಂನ್ಯಾಸಿಯನ್ನುಳಿದು ಇತರರನ್ನು ಯೋಗಿಗಳೆಂದಾಗಲೀ ಸಂತರೆಂದಾಗಲೀ ಭಾವಿಸಲಾರೆವು,ಒಪ್ಪಲಾರೆವು. ಇಷ್ಟೇ ಅಲ್ಲ, ಸಂನ್ಯಾಸಿಯ ವೇಷವನ್ನು ಧರಿಸಿದ ಪ್ರತಿಯೊಬ್ಬನನ್ನೂ ಸಂತನೆಂದೂ ಯೋಗಿಯೆಂದು ತಿಳಿದುಕೊಳ್ಳುವರು.ಆತನ ಆಂತರಿಕ ಸ್ಥಿತಿಯೇನೆ ಇರಲಿ,ಅದರ ಕಡೆಗೆ ಗಮನಕೊಡುವ ಇಲ್ಲವೆ ಅದನ್ನು ತಿಳಿದುಕೊಳ್ಳುವ ಗೊಡವೆಗೆ ಯಾರೂ ಹೋಗುವುದಿಲ್ಲ.ಪ್ರಪಂಚ ಹಾಗೂ ಅದರ ಪರಿಸರಗಳಿಂದ ಅಲಿಪ್ತವಾಗಿರುವುದು ಕೇವಲ ಬಾಹ್ಯಸಂಗತೀಯಾಗಿರದೆ ಮನಸ್ಸಿನ ಒಂದು ಸ್ಥಿತಿಯಾಗಿದೆ. ಅದನ್ನು ಬಾಹ್ಯ ಸಾಧನಗಳಿಂದಲೂ ಕೃತ್ರಿಮ ಪರಿಸ್ಥಿತಿಗಳಿಂದಲೂ ಪಡೆಯಲಾಗುವುದಿಲ್ಲ.ಜೀವನದ ತೊಡಕುಗಳಿಂದ ಮತ್ತು ಪ್ರಾಪಂಚಿಕ ವ್ಯವಹಾರಗಳಿಂದ ಅಂತರ್ಯದಲ್ಲಿ ದೂರವಾಗಿರುವುದೇ ನಿಜಾರ್ಥದಲ್ಲಿ ಅವುಗಳ ಸಂಬಂಧವು ಕಡಿದು ಹೋದಂತೆ.ಪ್ರಾಪಂಚಿಕ ಜೀವನವನ್ನು ಸಾಗಿಸುವ ಗೃಹಸ್ಥನೇ ಆಗಲಿ,ಅರಣ್ಯದಲ್ಲಿ ತಾಪಸ ಜೀವನವನ್ನು ಕಳೆಯುವ ಸಂನ್ಯಾಸಿಯೇ ಆಗಲಿ-ಪ್ರಪಂಚದೊಂದಿಗೆ ಮಾನಸಿಕ ಆಲಿಪ್ತತೆಯನ್ನು ಅನುಭವಿಸಿದಾಗಲೇ ನಿಜವಾಗಿ ಪ್ರಪಂಚವನ್ನು ತ್ಯಜಿಸಿದಂತೆ.ನಮ್ಮ ಮಾರ್ಗಕ್ರಮಣದಲ್ಲಿ ಬೇರೆ ಬೇರೆ ಆಧ್ಯಾತ್ಮಿಕ ಸ್ಥಿತಿಗಳನ್ನು ದಾಟುತ್ತ ಹೋದಂತೆಲ್ಲ ಈ ವಿರಕ್ತ ಸ್ಥಿತಿಯು ಪ್ರಾಪ್ತವಾಗುವುದು. ಸಾಂಸಾರಿಕ ಆಶೆ-ಆಕಾಂಕ್ಷೆಗಳು ಕ್ರಮೇಣ ನಮ್ಮ ಮನಸ್ಸಿನಿಂದ ಕಳಚಿ ಬೀಳುವವು.ಆಗ ಅದರ ಮೇಲೆ ಅವುಗಳ ಸಂಸ್ಕಾರವುಂಟಾಗುವುದಿಲ್ಲ.ಆಗ ಮಾತ್ರ ನಾವು ಸಂಸಾರದಲ್ಲಿದ್ದು ಸಾಂಸಾರಿಕ ಕರ್ತವ್ಯಗಳನ್ನು ನೆರವೇರಿಸುತ್ತಿದ್ದರೂ ನಿಜವಾದ ಅರ್ಥದಲ್ಲಿ ವೈರಾಗ್ಯವನ್ನು ಹೊಂದಿದಂತೆ. ಇದೇ ಸಂನ್ಯಾಸದ ನಿಜ ಸ್ವರೂಪ. ಇದನ್ನು ಹೇಗೆ ಸಂಪಾದಿಸಬಹುದು?ಸಹಜ ಮಾರ್ಗದ ವರ್ತಮಾನ ಪದ್ಧತಿಯಲ್ಲಿ ಮಾರ್ಗದರ್ಶೀಯಿಂದ ಇದು ಅತ್ಯಂತ ಸುಲಭವಾಗಿ ಪ್ರಾಪ್ತವಾಗುವುದು.
ಯೋಗಾಭ್ಯಾಸಕ್ಕಾಗಿ ಸದೃಢ ಶರೀರವೇನೋ ಅಗತ್ಯ ವಾಗಿದೆ. ಆದುದರಿಂದಲೇ ಒಳ್ಳೆಯ ಆರೋಗ್ಯ ಹಾಗೂ ಗಟ್ಟಿಮುಟ್ಟಾದ ಶರೀರ ಇವುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗಿದೆ. ಹಠಯೋಗವು ಮುಖ್ಯವಾಗಿ ಇದನ್ನೇ ಕುರಿತು ಚರ್ಚಿಸುವುದು. ಶರೀರವನ್ನು ಸುಧಾರಿಸುವುದರ ಮೂಲಕ ಆಂತರಿಕ ಚಕ್ರಗಳನ್ನು ಶುದ್ಧಗೊಳಿಸಿ ಬೆಳಗಿಸಲು ಬೇರೆ ಬೇರೆ ಶಾರೀರಿಕ ಹಾಗೂ ಮಾನಸಿಕ ಅಭ್ಯಾಸಗಳನ್ನು ವಿಧಿಸುವುದು. ಆದುದರಿಂದ ರಾಜಯೋಗವನ್ನು ಯಶಸ್ವಿಯಾಗಿ ಅನುಸರಿಸಲು ಹಠಯೋಗದ ಪ್ರಾಥಮಿಕ ಅಭ್ಯಾಸವು ಅಗತ್ಯ ವೆಂದು ಭಾವಿಸಲಾಗುತ್ತಿತ್ತು. ಆದರೆ ಸಹಜಮಾರ್ಗದ ಪದ್ಧತಿಯಲ್ಲಿ ಮಾರ್ಗದರ್ಶಿಯ ಸಾಮರ್ಥ್ಯವೇ ನಮ್ಮನ್ನು ಮುನ್ನಡೆಸಿ ಧ್ಯೇಯಸಾಧನೆಯನ್ನು ಶಕ್ಯಗೊಳಿಸುವುದು.ಸದೃಢ ಶರೀರವು ನಿಸ್ಸಂದೇಹವಾಗಿ ಬಹಳ ಸಹಾಯಕವಾಗುವುದು.ಆದರೆ ಇದರರ್ಥ ಕೃಶದೇಹಿಗಳಿಗೂ ದುರ್ಬಲರಿಗೂ ಸದ್ಗತಿ ಪಡೆಯುವ ಯಾವ ಅವಕಾಶವೂ ಇಲ್ಲವೆಂದೇನಲ್ಲ. ದೇಹಾರೋಗ್ಯವು ಹೇಗೆ ಇದ್ದರೂ ಮಾರ್ಗದರ್ಶಿ ಅಥವಾ ಗುರುವಿಗೆ ಸಂಪೂರ್ಣ ಶರಣಾಗತರಾದಾಗ ಅದು ದೊರಕಿಯೇ ತೀರುವುದು. ಆಗ ಅವರ ಪ್ರಗತಿಯು ನಿಶ್ಚಿತ ವಾಗುವುದು. ಗುರುವಿನ ಹೃದಯವನ್ನು ಸಹಜವಾಗಿಯೇ ಅವರು ನಿರಂತರವಾಗಿ ತಟ್ಟುವುದರಿಂದ ಅವರ ಪ್ರಗತಿಯು ಕುಂಠಿತವಾಗದೇ ಸಾಗುವುದು. ಹೀಗೆ, ಅವರ ದೇಹವು ದುರ್ಬಲವಾಗಿದ್ದು ಆರೋಗ್ಯವು ಕೆಟ್ಟಿದ್ದರೂ ಧ್ಯೇಯಸಿದ್ದಿಯಾಗಿ ಕೊನೆಗೆ ಮುಕ್ತಿಯನ್ನು ಹೊಂದುವರು.
ಮದ್ರಾಸ್ ಜುಲೈ೨,೧೯೪೮
ಸಿ.ಎಂ.ಟಿ.ಮೂದಲಿಯಾರ್