ಪ್ರಿಯ ಸೋದರ, ಸೋದರಿಯರೆ,

ಪೂಜ್ಯ ಗುರುಗಳ ೭೯ ನೇ ಹುಟ್ಟುಹಬ್ಬದ ಆಚರಣೆಗಾಗಿರುವ ಆಚರಣಾ ಸಮಿತಿಯ ಅಧ್ಯಕ್ಷನಾಗಿ ಇಲ್ಲಿ ಬರುವದಕ್ಕಾಗಿ, ನೀವೆಲ್ಲರೂ ತೋರಿದ ಆಸಕ್ತಿಯನ್ನು ಕಂಡು ನನಗೆ ಸಂತೋಷವಾಗಿದೆ. ನಿಮ್ಮನ್ನೆಲ್ಲ ಸ್ವಾಗತಿಸುವೆ ಹಾಗೂ ನಿಮಗೆ ಶುಭಾಶಯಗಳನ್ನು ಸಲ್ಲಿಸುವೆ.
ಗುರುಗಳು ಇಲ್ಲಿ ನಮ್ಮೊಂದಿಗಿದ್ದಾರೆ. ನಮ್ಮ ಗುರುಗಳ ಹುಟ್ಟುಹಬ್ಬವನ್ನು ಆಚರಿಸಲು ನಾವು ಒಂದುಗೂಡಿದ್ದೇವೆ. ಅದಕ್ಕಾಗಿ ಗುರುಗಳ ಆರೋಗ್ಯಕ್ಕಾಗಿ ದೀರ್ಘ ಆಯುಷ್ಯ ಹಾಗೂ ಕ್ಷೇಮಕ್ಕಾಗಿ ಪ್ರಾರ್ಥನೆಯ ಸ್ಥಿತಿಯಲ್ಲಿರುವದು ನಮ್ಮ ಕರ್ತವ್ಯವಾಗುವದು ಮತ್ತು ಗುರುಗಳಿಗೆ ಎಲ್ಲ ಬಗೆಯ ಅನುಕೂಲತೆಗಳನ್ನೊದಗಿಸುವದು ಹಾಗೂ ಅವರ ಮೇಲೆ ಸ್ವಲ್ಪಾದರೂ ಒತ್ತಡ ಬೀಳದಂತೆ ನೋಡಿಕೊಳ್ಳುವದು ನಮಗೆ ಅತಿ ಅಗತ್ಯದ್ದಾಗಿದೆ. ನಿಜವೇನೆಂದರೆ, ನಮ್ಮ ಉನ್ನತಿಗಾಗಿ ವಿಶೇಷಕಾರ್ಯದಲ್ಲಿ ಗುರುಗಳು ಈಗಾಗಲೇ ನಿರತರಾಗಿದ್ದಾರೆ. ಅಂದಾಗ, ಮತ್ತೆ ನಮ್ಮ ಚಿಕ್ಕ ಪುಟ್ಟ ಒತ್ತಡಗಳನ್ನು ಅವರ ಮೇಲೆ ಹೇರಿದರೆ, ಅದನ್ನೆಲ್ಲ ಸಹಿಸಿಕೊಳ್ಳುವದು ಅವರಿಗೆ ಅತಿ ದುರ್ಭರವಾಗುವದು, ದೈಹಿಕವಾಗಿ ಅವರು ದಣಿದುಕೊಳ್ಳುವರು ಹಾಗೂ ಅದು ಅವರಿಗೆ ಅತಿ ಆಯಾಸದಾಯಕವಾಗುವದು. ನಿನ್ನೆ ಅವರು ಇಲ್ಲಿಗೆ ಬಂದಾಗ ಮತ್ತು ಕೆಲವೇ ಹೆಜ್ಜೆ ನಡೆದಾಗ ಬಹಳ ಅಶಕ್ತಿಯನ್ನು ಅನುಭವಿಸಿದರು ಹಾಗೂ ಅದರಿಂದಾಗಿ ತಕ್ಷಣವೇ ಮನೆಗೆ ಕರೆದೊಯ್ಯಲಾಯಿತು.
ಆದಕಾರಣ, ಗುರುಗಳು ನಮ್ಮ ಮಧ್ಯದಲ್ಲಿದ್ದಾಗ ಅವರ ಸಾನಿಧ್ಯದ ಪ್ರಯೋಜನ ಪಡೆಯುವ ಅತ್ಯುತ್ತಮ ವಿಧಾನವನ್ನು ನಿಮಗೆ ಹೇಳುವೆನು. ಅದೊಂದು ರಹಸ್ಯ, ಆದಾಗ್ಯೂ ನೀವೆಲ್ಲರೂ ಅದನ್ನು ಅರ್ಥಮಾಡಿಕೊಳ್ಳುವಂತೆ ತಿಳಿಸಲು ಪ್ರಯತ್ನಿಸುವೆ. ಆ ರಹಸ್ಯವನ್ನು ಬಹಿರಂಗಗೊಳಿಸುವೆನು. ಎಲ್ಲಕ್ಕಿಂತ ದೊಡ್ಡ ರಹಸ್ಯ ಮೌನವೇ ಆಗಿದೆ. ಆದಾಗ್ಯೂ ಗುರುಗಳಿಗೆ ಮಿತಿಮೀರಿದ ಪ್ರಯಾಸವಾಗದಂತೆ ಅಥವಾ ಪ್ರಯಾಸ ಮಾಡದಂತೆ ಈ ಅವಕಾಶವನ್ನು ನಮ್ಮ ಆಧ್ಯಾತ್ಮಿಕ ಉನ್ನತಿಗಾಗಿ, ಅದೆಷ್ಟು ಉತ್ತಮರೀತಿಯಲ್ಲಿ ಉಪಯೋಗಮಾಡಿಕೊಳ್ಳಬಹುದೆಂದು ನಿಮಗೆ ಹೇಳಲು ಪ್ರಯತ್ನಿಸುವೆ. ಆದ್ದರಿಂದ ನೀವು ಮೌನವಾಗಿ ನಿಮ್ಮ ಹೃದಯದಲ್ಲಿ ಪ್ರಾರ್ಥನೆಯ ಹಾಗೂ ಸ್ವೀಕೃತಿಯ ಒಂದು ಸ್ಥಿತಿಯನ್ನು ಬೆಳೆಯಿಸಿಕೊಳ್ಳಿರಿ. ನನ್ನ ಪ್ರಿಯ ಸೋದರ, ಸೋದರಿಯರೇ, ನಿಮಗೆ ಇದು ಅರ್ಥವಾಗುತ್ತಿದೆಯಾ ?
ನೀವೆಲ್ಲರೂ ವಿಧಿಬದ್ಧ ಅಭ್ಯಾಸಿಗಳಿರುವಿರಿ ಹಾಗೂ ಅಭ್ಯಾಸ ಮತ್ತು ಅನುಭವದಿಂದ ಸಹಜಮಾರ್ಗದ ತಂತ್ರವನ್ನು ಅರಿತಿರುವಿರಿ ಎಂದು ನಾನು ಒಪ್ಪಿಕೊಳ್ಳುತ್ತಿರುವೆ. ನಿಮ್ಮಲ್ಲಿ ಕೆಲವರಿಗೆ ಅದು ಗೊತ್ತಿಲ್ಲವಾದರೆ ಸರಿ, ನೀವು ಅದನ್ನು ಕಲಿಯಬಲ್ಲಿರಿ. ಆದರೆ ಯಾರು ಅಭ್ಯಾಸವನ್ನು ಅರಿತಿರುವಿರೋ ನಾನು ವಿಶೇಷವಾಗಿ ಅವರನ್ನು ಉದ್ದೇಶಿಸಿ ಮಾತನಾಡುತ್ತಿರುವೆನು. ಯಾಕೆಂದರೆ ಈಗ ತಾನೇ ನಮ್ಮ ಧ್ಯಾನವಾಯಿತು. ಈಗ ಅದೆಷ್ಟು ಉತ್ತಮವಾಗಿ ಈ ಅವಕಾಶವನ್ನು ನಮ್ಮ ಆಧ್ಯಾತ್ಮದ ಉನ್ನತಿಗಾಗಿ ಉಪಯೋಗಿಸಬಲ್ಲೆವು ಅನ್ನುವದೇ ಪ್ರಶ್ನೆಯಾಗಿದೆ. ಆದ್ದರಿಂದ, ಮತ್ತೊಮ್ಮೆ ನಾನು ಈಗಾಗಲೇ ಹೇಳಿದಂತೆ, ಪ್ರತಿಯೊಬ್ಬ ಅಭ್ಯಾಸಿಯೂ ರಹಸ್ಯದ ನೈಪುಣ್ಯವನ್ನರಿಯಬೇಕು. ಯಾಕೆಂದರೆ, ಅದು ನಮ್ಮಲ್ಲಿ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಒಂದು ಬೃಹತ್ ಪ್ರಮಾಣದಲ್ಲಿ ಅದರದೇ ಮಳೆಗರೆಯಬಹುದು. ನಾವು ಶಿಲೆಗಳಲ್ಲ. ನಾವು ಅದನ್ನು ಸ್ವೀಕರಿಸಬಹುದು ಹಾಗೂ ಅದನ್ನು ನಿರಾಕರಿಸಬಹುದು. ಅದನ್ನು ಶಿಲೆಗಳಂತೆ ನಿರಾಕರಿಸಿದರೆ ಅದು ಕೆಳಗೆ ಬಿದ್ದು ಕಳೆದು ಹೋಗುವದು.
ಇಲ್ಲಿ ನಮಗೆ ಅಭ್ಯಾಸವನ್ನು ನೀಡಲಾಗಿದೆ. ಕೃಪೆಯನ್ನು ಪೂರ್ಣವಾಗಿ ಪಡೆಯುವದನ್ನು ನಾವು ಅಭ್ಯಾಸಮಾಡಬಹುದು. ಕಾರಣ, ನಿಮ್ಮ ಹೃದಯವನ್ನು ತೆರೆಯಿರಿ ಹಾಗೂ ಗುರುವಿನ ಮತ್ತು ಏಕಮಾತ್ರ ಗುರುವಿನ ಇಚ್ಛೆಯನ್ನು ಹೊರತುಪಡಿಸಿ ಬೇರೆ ಎಲ್ಲ ಇಚ್ಛೆಗಳನ್ನು ತೆಗೆದು ಹಾಕಿರಿ. ಅವನಿಂದ ಏನನ್ನಾದರೂ ಪಡೆಯಲು ಅವನ ಮೇಲೆ ಒತ್ತಡ ಹಾಕಬೇಡಿರಿ. ಗುರುವಿಗೆ ಸ್ವತಂತ್ರವಾಗಿರಲು ಬಿಡಿರಿ. ಹಾಗೂ ನಮ್ಮ ಶಕ್ತಿಗಳಿಗನುಗುಣವಾಗಿ ಅಥವಾ ಯೋಗ್ಯತೆಗೆ ಅನುಗುಣವಾಗಿ ಅವನು ನಮಗೆ ಏನನ್ನಾದರೂ ಕೊಡಲಿ, ನಮ್ಮನ್ನು ನಾವು ಸಮರ್ಥ ಹಾಗೂ ಸುಯೋಗ್ಯರನ್ನಾಗಿ ಮಾಡಿಕೊಳ್ಳೋಣ. ಅದು ನಮ್ಮ ಕರ್ತವ್ಯವಾಗಿದೆ. ಅದನ್ನು ನಾವು ಹೇಗೆ ಮಾಡಬೇಕು ? ನಮ್ಮ ಹೃದಯವನ್ನು ಶುದ್ಧಗೊಳಿಸುವದರಿಂದ. ಎಲ್ಲ ಇಚ್ಛೆಗಳನ್ನೂ ಹೊರದಬ್ಬಿರಿ. ನಿಮ್ಮ ಹೃದಯದಿಂದ ಎಲ್ಲ ಸ್ಥೂಲತೆಯನ್ನೂ ತೆಗೆದುಹಾಕಿರಿ. ಎಲ್ಲ ಜಟಿಲತೆಗಳನ್ನೂ ಹಾಗೂ ಜಟಿಲ ವಿಚಾರಧಾರೆಯನ್ನೂ ತ್ಯಜಿಸಿರಿ.
ಸಹಜಮಾರ್ಗವು ಅತ್ಯಂತ ಸರಳಮಾರ್ಗವಿದೆ. ಇದು ಅತ್ಯಂತ ಸುಲಭ ಮಾರ್ಗವೂ ಹೌದು. ನೀವು ಸಾಧನೆಯಿಂದ ನಿಪುಣತೆಯನ್ನು ಮಾತ್ರ ಬೆಳೆಯಿಸಿಕೊಳ್ಳಬೇಕು. ಅದಕ್ಕಾಗಿ ಅವನ ಬಗೆಗೆ ಚಿಂತನೆಮಾಡಿ. ಅವನ ಅತ್ಯುತ್ತಮ ಸೇವೆ ಹೇಗೆ ಮಾಡುವದೆಂದು ಯೋಚಿಸಿರಿ. ಆದರೆ ಅದು ಶಾರೀರಕ ಸೇವೆ ಅಲ್ಲ. ನಿಮ್ಮಲ್ಲಿ ಪ್ರತಿಯೊಬ್ಬನೂ ಅವರನ್ನು ಎತ್ತಲು ಪ್ರಯತ್ನಿಸಿದರೆ, ಅವನನ್ನು ನೀವು ಬರೀ ತುಂಡು ತುಂಡಾಗಿ ಬೇರೆ ಮಾಡುವಿರಿ. ಅದು ಸರಿಯಾದ ಮಾರ್ಗವಲ್ಲ. ಒಂದೇ ಕೆಲಸವನ್ನು ನಾವೆಲ್ಲರೂ ಏಕಕಾಲಕ್ಕೆ ಮಾಡಲು ಆಗದು. ಒಂದು ವೇಳೆ ನಾವು ಹಾಗೆ ಮಾಡಿದರೆ, ನಾವು ಏನನ್ನೂ ಸಾಧಿಸಲಾರೆವು. ಇದು ಕೇವಲ ಭೌತಿಕ ದೃಷ್ಟಿಯಾಗಿದೆ. ಆದಕಾರಣ ಯಾವುದು ಒಳ್ಳೆದು ಅಂತ ನೀವು ಆಲೋಚಿಸುವಿರೋ, ಅಂಥ ಸಹಾಯವನ್ನು ಭೌತಿಕ ದೃಷ್ಟಿಯಿಂದ ಮಾಡುವ ವಿಚಾರ ಮಾಡಬೇಡಿರಿ. ನೀವು ಅಭ್ಯಾಸಿಗಳಿರುವಿರಿ, ನೀವೆಲ್ಲರೂ ಸೋದರ, ಸೋದರಿಯರೂ ಆಗಿರುವಿರಿ ಎಂಬ ಕಾರಣಕ್ಕಾಗಿ, ಯಾವದೇ ಬಗೆಯ ಸಹಾಯ ಬೇಕಾದಲ್ಲಿ ಸರಿ, ನಿಮ್ಮಲ್ಲಿ ಯಾರನ್ನಾದರೂ ಯಾವುದೇ ವಿಶೇಷ ಸೇವೆಗಾಗಿ ಕೇಳಿಕೊಳ್ಳಲು ನಾವು ಸಂಕೋಚಪಡುವದಿಲ್ಲ. ನಿಮ್ಮನ್ನು ಕೇಳಿಕೊಳ್ಳುವ ಅಥವಾ ಬೇಡಿಕೊಳ್ಳುವ ಮೊದಲೇ ನೀವು ಕುಣಿದಾಡತೊಡಗಿದರೆ ಜಿಗುಪ್ಪೆಯನ್ನುಂಟು ಮಾಡುವಿರಿ ಹಾಗೂ ಸರಳವಾದ ಕೆಲಸಕ್ಕೆ ನೀವು ಆತಂಕ ಒಡ್ಡುವಿರಿ.

ಇಲ್ಲಿ ನಮ್ಮ ಬಂಧು ಭಗಿನಿಯರು ತಮ್ಮ ಶಕ್ತಾನುಸಾರ ವ್ಯವಸ್ಥೆ ಮಾಡಿದ್ದಾರೆ. ನಮ್ಮ ಸಂಸ್ಥೆ ಬೆಳೆಯುತ್ತಿದೆ. ಅದಕ್ಕೆ ಎಷ್ಟೇ ಕೆಲಸವಾದರೂ ಸಾಲದು. ಇಡೀ ವಿಶ್ವದ ತುಂಬ ನಾವು ವಿಸ್ತರಿಸುವೆವು. ಕಾರಣ ಒಂದು ಪರಿಮಿತ ಜಾಗ ಯಾವಾಗಲೂ ಪರಿಮಿತವೇ ಆಗುವದು ಹಾಗೂ ಯಾವಾಗಲೂ ತುಂಬಿಹರಿಯುವದು. ಕಾರಣ ಅದೆಷ್ಟು ಉತ್ತಮವಾಗಿ ಭಾಗವಹಿಸಬಹುದು, ಅದೆಷ್ಟು ಉತ್ತಮವಾಗಿ ಸೇವೆ ಸಲ್ಲಿಸಬೇಕು ಹಾಗೂ ಅತ್ಯಧಿಕ ಪ್ರಯೋಜನ ಪಡೆಯಬೇಕು, ಅನ್ನುವದನ್ನು ನಿರ್ಧರಿಸಲು ಮತ್ತೊಮ್ಮೆ ನೀವು ಆಲೋಚಿಸಬೇಕಾಗುವದು. ಈ ಎಲ್ಲ ಸಂಗತಿಗಳನ್ನು ಒಂದು ಗುಂಪಿನ ಅಥವಾ ಉನ್ಮಾದ ಗುಂಪಿನ ಮನೋಭಾವನೆ ಬೆಳೆಯಿಸಿಕೊಳ್ಳುವದರಿಂದ ಮಾಡಲಾಗುವದಿಲ್ಲ. ಅದನ್ನು ಬೃಹತ್ ಪ್ರಮಾಣದಲ್ಲಿ ಮಾಡಲಾಗುವದಿಲ್ಲ.
ಆಧ್ಯಾತ್ಮವೆಂದರೆ ಆತ್ಮವಿದ್ಯೆ, ಅದು ನಿಮಗೆ ಪ್ರತಿಯೊಬ್ಬರಿಗಾಗಿ ಇದೆ. ನಿಮಗೆ ನಿಮ್ಮದೇ ಆದ ದಾರಿಯನ್ನು ಕಂಡು ಹಿಡಿಯಬೇಕಾಗುವದು. ಆದ್ದರಿಂದ ನಿಮ್ಮ ದಾರಿಯನ್ನು ನೀವು ಅಭಿವೃದ್ಧಿಗೊಳಿಸಬೇಕು. ನೀವು ನಿಮ್ಮದೇ ನೈಪುಣ್ಯವನ್ನು ಬೆಳೆಯಿಸಿಕೊಳ್ಳಬೇಕು. ಸಾಮಾನ್ಯ ನಿಯಮಗಳುಂಟು ಹಾಗೂ ರಹಸ್ಯವೇನಾದರೂ ಇದ್ದರೆ ನನ್ನ ಹಾಗೂ ನಿನ್ನಂಥ ಸಾಮಾನ್ಯರ ತಿಳುವಳಿಕೆಗೆ ತರುವದಕ್ಕೆ ಗುರುಗಳು ಅತ್ಯುತ್ತಮ ಪ್ರಯತ್ನ ಮಾಡುತ್ತಿರುವರು. ಆದಾಗ್ಯೂ, ಅದು ನಿಶ್ಯಬ್ದವಾಗಿದೆ. ಅದರ ವಿಷಯದಲ್ಲೂ ನಾವು ಅಭಿವೃದ್ಧಿಗೊಳ್ಳಬೇಕಾಗಿದೆ. ಅದು ಧ್ಯಾನಾಭ್ಯಾಸದಿಂದ ಆಗುವದು. ನಮ್ಮ ಸಹಜ ಮಾರ್ಗದಲ್ಲಿ ಈ ಧ್ಯಾನಾಭ್ಯಾಸವು ನೀವೇ ಅನುಭವಿಸಿದಂತೆ ಬಹಳ ಸರಳವಾಗಿದೆ. ಸುಮ್ಮನೆ ಕಣ್ಣುಗಳನ್ನು ಮುಚ್ಚಿರಿ ಹಾಗೂ ಹೃದಯದಲ್ಲಿರುವ ದೈವೀಪ್ರಕಾಶದ ಬಗೆಗೆ ಸರಳರೀತಿಯಲ್ಲಿ ಚಿಂತಿಸಿರಿ. ಮಾನಸಿಕ ಕಲ್ಪನೆಗಳನ್ನು ಮಾಡಬೇಡಿರಿ. ಇಲ್ಲವಾದರೆ ಅದು ನೈಜ ಹಾಗೂ ಸಹಜವಾಗಲಾರದು. ಆಂತರಿಕವಾಗಿ ಗುದ್ದಾಡುತ್ತ ಹೋರಾಡುತ್ತ ಹೋಗಬೇಡಿರಿ. ಸುಮ್ಮನೆ ಕುಳಿತುಕೊಳ್ಳಿರಿ ಮತ್ತು ಧ್ಯಾನ ಮಾಡಿರಿ. ದೈವೀಕೃಪೆಯ ಆಗಮನಕ್ಕಾಗಿ ನೀವು ಕಾಯುತ್ತಿರುವಿರಿ. ಈ ಅಭ್ಯಾಸ ಬೆಳೆಯಿಸಿಕೊಳ್ಳಿರಿ. ನೀವು ೫ ನಿಮಿಷ ಅಥವಾ ಅರ್ಧ ಗಂಟೆ ಕುಳಿತಿರಬಹುದು. ಏನೇ ಆಗಲಿ ಪ್ರತಿದಿನ ಬೆಳಿಗ್ಗೆ ಒಂದು ಗಂಟೆ ನೀವು ಕುಳಿತರೆ ಅತ್ಯುತ್ತಮ ಫಲಿತಾಂಶ ಪಡೆಯುವಿರಿ. ಈ ಅಭ್ಯಾಸ ಸಂಪೂರ್ಣ ಆವಶ್ಯಕವಾಗಿದೆ. ಹಾಗೂ ತದನಂತರ ನೀವೆಲ್ಲರೂ ತಿಳಿದಿರುವಂತೆ ಸಾಯಂಕಾಲದ ಶುದ್ದೀಕರಣವಿದೆ. ನೀವು ಅದನ್ನು ಮಾಡಿರಿ. ಮತ್ತು ನಂತರ ಪ್ರಾರ್ಥನೆ ಇದೆ. ಈ ಎಲ್ಲವುಗಳಲ್ಲಿ ಪ್ರಾರ್ಥನೆ ಬಹಳ ಮಹತ್ವದ್ದಾಗಿದೆ. ಸಹಜ ಮಾರ್ಗದ ನಮ್ಮ ಪ್ರಾರ್ಥನೆ ದೇವರ ಹಾಗೂ ದೇವತೆಗಳ ಮುಖಸ್ತುತಿಯಲ್ಲಿ ತೃಪ್ತಿ ಪಡುವ ಬೇರೆ ಧಾರ್ಮಿಕ ಪ್ರಾರ್ಥನೆಗಳಂತಿಲ್ಲ. ಅದೊಂದು ಅದ್ಭುತವೆ ಆಗಿದೆ. ಅದು ನಿಮಗೆ ಗುರಿಯನ್ನು, ನಿಮ್ಮ ಮಾರ್ಗದ ಅಡೆತಡೆಗಳನ್ನು, ಯಾರಿಂದ ಸಹಾಯವನ್ನು ಆಪೇಕ್ಷಿಸಬೇಕೆಂಬುದನ್ನು, ಹಾಗೂ ಯಾರಿಗೆ ಶರಣಾಗತರಾಗಬೇಕೆಂಬುದನ್ನು ತೋರಿಸುವದು. ಪ್ರಾರ್ಥನೆಯೆನ್ನುವದು ಕೇವಲ ಶಬ್ದಗಳಿಗೆ ಸೀಮಿತವಾಗಿಲ್ಲ. ನಿಮಗೆ ಕಲ್ಪನೆ ಮಾಡಿಕೊಡುವ ವಾಕ್ಯಗಳಿದ್ದಾಗಲೂ, ಅದು ಶಬ್ದಗಳು ಅಡಗಿಸಿಕೊಂಡಿರುವ ಅರ್ಥವನ್ನೂ ಕೂಡ ಮೀರಿದೆ. ಆದರೆ, ಅಲ್ಲಿ ಆ ಶಬ್ದಗಳ ಹಿಂದೆ ಭಾವವೆಂಬುದಿರುವದು. ಅಲ್ಲಿಯೇ ಆ ಸ್ಥಿತಿಯು ಇರುವದು. ಯಾವಾಗ ಶಬ್ದಗಳನ್ನು ಮರೆಯಲಾಗುವದೋ, ಯಾವಾಗ ಭಾವನೆಯೆನ್ನುವದನ್ನು ಸಹ ಮರೆಯಲಾಗುವದೋ ಹಾಗೂ ನೀವು ಯಾವಾಗ ಪ್ರಾರ್ಥನೆಯ ಸ್ಥಿತಿಯಲ್ಲಿ ಲಯಗೊಳ್ಳುವಿರೋ, ನೀವು ಪ್ರಾರ್ಥನೆಯ ಸ್ಥಿತಿಯಲ್ಲಿ ನಿದ್ರೆ ಹೋಗುವಿರಿ. ಆಗ ಆ ನಿದ್ರೆಯು ಪ್ರಾಣಿಗಳ ಸಾಮಾನ್ಯವಾದ ನಿದ್ರೆಯ ಸ್ಥಿತಿಯಿಂದ ಪ್ರಾರ್ಥನೆಯ ಸ್ಥಿತಿಗೆ ಪರಿವರ್ತಿತವಾಗುವದು. ಇದೇ ನಿಮ್ಮ ನಿದ್ರಾವಸ್ಥೆಯನ್ನು ಸರಿಯಾಗಿ ಉಪಯೋಗಿಸುವ ವಿಧಾನವಾಗಿದೆ.
ಮಾನವ ಜೀವಿಗಳು ಪ್ರಾಣಿಗಳಿಗಿಂತ ಹೆಚ್ಚು ಉತ್ತಮರಲ್ಲ ಅಂತ ವಿಜ್ಞಾನಿಗಳು ನಮಗೆ ಹೇಳಿದ್ದಾರೆ. ಅದು ಏನೇ ಇರಲಿ. ಮಾನವ ಜೀವನದ ವೈಶಿಷ್ಟ್ಯ ಒಂದಿದೆ. ನಾವು ಆಲೋಚನೆ ಮಾಡಬಲ್ಲೆವು. ಹಾಗೂ ನಮ್ಮ ವಿಚಾರ ಶಕ್ತಿಯನ್ನು ಉಪಯೋಗಿಸಿ ಪ್ರಾಣಿಗಳಿಗಿರುವ ಮಿತಿಗಳಿಂದ ಬಹಳ ಮೇಲಕ್ಕೇರಬಹುದು. ಪಶುಪ್ರವೃತ್ತಿಗಳು ನಿಸ್ಸಂದೇಹವಾಗಿ ನಮ್ಮಲ್ಲಿ ಇವೆ, ಆದರೆ ಒಂದು ಶ್ರೇಷ್ಠ ಪ್ರವೃತ್ತಿಯೂ ಇದೆ. ಹೆಚ್ಚು ಶ್ರೇಷ್ಠವಾದುದನ್ನು ಕಾಣುವದರ ವಿವೇಚನಾ ಶಕ್ತಿಯು ನಮಗಿದೆ. ಅದೇ ನಮ್ಮ ಗುರಿಯಾಗಿದೆ. ಅದೇ ನಾವು ಸಾಧಿಸಬೇಕಾಗಿರುವ ವಿಕಾಸಕ್ರಮದ ಸ್ಥಾನವಾಗಿದೆ. ಅದಕ್ಕಾಗಿ ಪ್ರಾರ್ಥನೆಯ ಸ್ಥಿತಿಯನ್ನು ಬೆಳೆಯಿಸಿಕೊಳ್ಳಲು ನಮ್ಮನ್ನು ನಾವು ಸಿದ್ಧಗೊಳಿಸಬೇಕು.

ಅದಕ್ಕೆ ಪದ್ಧತಿ ಯಾವುದು ? ನಾನು ಈಗ ಹೇಳಿದುದು ಅದರ ಪದ್ಧತಿ, ಮಲಗಲು ಹೋದಾಗ ನಿಮ್ಮನಿದ್ರೆಯನ್ನು ಪ್ರಾರ್ಥನೆಯ ಒಂದು ಸ್ಥಿತಿಯಾಗಿ ಪರಿವರ್ತಿಸಿರಿ, ಈ ಅಭ್ಯಾಸವನ್ನು ಮಾಡಿ, ನೀವು ಅದರ ಕಾರ್ಯಕುಶಲತೆಯನ್ನು ಪಡೆದಾಗ, ಯಾವಾಗಲೂ ಪ್ರಾರ್ಥನೆಯ ಸ್ಥಿತಿಯಲ್ಲಿಯೇ ಉಳಿಯಬಲ್ಲಿರಿ. ಯಾವಾಗ ಅದು ಸಾಧ್ಯವಾಗುವದೋ, ನೀವು ದೈವೀಕೃಪೆ ಆಕರ್ಷಿಸಲು ಶಕ್ತರಾಗುವಿರಿ. ನಂತರ ನೀವು ದೈವೀಕೃಪೆಯನ್ನು ಹೀರಿ, ನುಂಗಿ, ಜೀರ್ಣಿಸಿಕೊಳ್ಳಬಹುದು. ನೀವು ಅದಕ್ಕಾಗಿ ಅರ್ಹರಾಗುವಿರಿ. ನಿಮ್ಮ ನೈಪುಣ್ಯತೆಯನ್ನು ಬೆಳೆಯಿಸಿಕೊಳ್ಳಲು ಅದೇ ದಾರಿಯಾಗಿದೆ. ನಿಮ್ಮಲ್ಲಿ ಪ್ರತಿ ಒಬ್ಬರೂ ಆ ಕೌಶಲ್ಯವನ್ನು ಬೆಳೆಯಿಸಿಕೊಳ್ಳಬೇಕು. ಆದ್ದರಿಂದ ನಾನು ಹೇಳಿದಂತೆ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಯಾರ ಹುಟ್ಟು ಹಬ್ಬವನ್ನು ನಾವು ಆಚರಿಸುತ್ತಿರುವೆವೋ ಅವನು ಅತ್ಯಧಿಕ ಸುಖಿಯಾಗಿರುವಂತೆ, ಸೌಖ್ಯದಿಂದಿರುವಂತೆ ಹಾಗೂ ಅನುಕೂಲಕರವಾಗಿರುವಂತೆ ನಾವು ನೋಡಿಕೊಳ್ಳಬೇಕಾಗಿದೆ. ಅವನು ಸಂತುಷ್ಟನಾಗಲೇಬೇಕು. ಎಲ್ಲಿ, ನಾವು ಪೂಜಿಸುತ್ತಿರುವ ದೇವನು ಸಂತುಷ್ಟನಾದನೋ ಇಲ್ಲವೋ ಅಂತ ಕಾಳಜಿಮಾಡುವದಿಲ್ಲವೋ, ಅಂತಹ ಸಾಂಪ್ರದಾಯಿಕ ಪೂಜೆ ಇದಲ್ಲ. ಅಲ್ಲಿ ದೇವರು ಯಾರು ಅಂತ ನಮಗೆ ತಿಳಿದಿಲ್ಲ. ಆ ದೇವರು ಸಂತುಷ್ಟನಾದನೋ ಇಲ್ಲವೋ ಅಂತ ನಾವು ಕಾಳಜಿ ಮಾಡುವದಿಲ್ಲ. ನಮ್ಮನ್ನು ನಾವು ಸಂತೋಷಗೊಳಿಸುವಂಥ ಪೂಜೆಯನ್ನು ನಾವು ಮಾಡುತ್ತಲೇ ಹೋಗುವೆವು. ಅದು ನಾವು ಬೆಳೆಯಿಸಿಕೊಂಡಿರುವ ಆಲೋಚನೆಯ ಅಭ್ಯಾಸದಿಂದಾಗಿದೆ. ಇಲ್ಲಿ ನಾವು ಅದನ್ನು ಮೀರಿ ಮುಂದೆ ಹೋಗುತ್ತೇವೆ. ದಯವಿಟ್ಟು ಇದನ್ನು ಗಮನಿಸಿರಿ. ದೈವೀಕೃಪೆಯನ್ನು ಪಡೆಯುವದಕ್ಕಾಗಿ ನಾವು ಕಾರ್ಯನಿರತರಾಗಬೇಕು. ಅದಕ್ಕಾಗಿ ದೈವತ್ವವನ್ನು ಸಂತುಷ್ಟಗೊಳಿಸಬೇಕು.
ಇಲ್ಲಿ. ದೈವೀ ಕೃಪೆಯು ಗುರುವಿನ ರೂಪದಲ್ಲಿ ನಮಗೆ ಸಿಕ್ಕಿದೆ. ಹಾಗೂ ಗುರು ಪ್ರಶಿಕ್ಷಕರನ್ನು ನೀಡಿದ್ದಾನೆ. ಈ ಪ್ರಶಿಕ್ಷಕನು ನಮಗೆ ನಮ್ಮ ಪೂಜಾ ವಿಧಾನಗಳು ದೇವರಿಗೆ ಸಂತುಷ್ಟಪಡಿಸುವವೋ ಇಲ್ಲವೋ ಅಂತ ಹೇಳುವನು ಹಾಗೂ ಮಾರ್ಗದರ್ಶನ ಮಾಡುವನು. ನಿಮ್ಮ ಪೂಜಾ ವಿಧಾನಗಳು ದೇವರನ್ನು ಸಂತುಷ್ಟಪಡಿಸಲಾರದವುಗಳಾಗಿದ್ದರೆ, ಪ್ರಶಿಕ್ಷಕನು ನಿಮಗೆ ದೇವರನ್ನು ಹೇಗೆ ಸಂತುಷ್ಟಗೊಳಿಸುವದು ಹಾಗೂ ಅವನ ಕೃಪೆಯನ್ನು ಹೇಗೆ ಪಡೆಯುವದು ಅಂತ ತಿಳಿಸುವನು. ಸಹಜಮಾರ್ಗದ ವೈಶಿಷ್ಟ್ಯದ ಬಗೆಗೆ ಆಲೋಚಿಸಿರಿ, ಅದು ಪ್ರಾಣಾಹುತಿ ಆಗಿದೆ. ಕೃಪೆಯನ್ನು ಪ್ರಾಣಾಹುತಿಯ ಮೂಲಕ ನೀಡಬಹುದು. ನಿಮ್ಮಲ್ಲಿ ಪ್ರತಿಯೊಬ್ಬರೂ ಅದನ್ನು ಹೊಂದಿದ್ದೀರಿ. ಯಾವಾಗ ಕೃಪೆಯನ್ನು ಧಾರೆಯೆರೆಯಲಾಯಿತು. ಆಗ ದೇವರನ್ನು ಸಂತುಷ್ಟಗೊಳಿಸುವ ಒಂದು ಸರಿಯಾದ ಮನೋವೃತ್ತಿಯನ್ನು ನೀನು ಆರಿಸಿಕೊಂಡೆ ಹಾಗೂ ನೀನು ಅದನ್ನು ಸರಿಯಾಗಿ ಸ್ವೀಕರಿಸಿದೆ ಎಂದು ಅದರ ಅರ್ಥ. ಕೃಪೆಯೆನ್ನುವದಿದೆ. ಪ್ರಾಣಾಹುತಿಯೂ ಇದೆ, ಅದು ದೇವರನ್ನು ಹೊಂದಲು ನಿನಗೆ ಸಹಾಯಕವಾಗುವದು. ಅದೇ ಗುರಿಯಾಗಿದೆ. ತುಚ್ಛ ಆಶೆಗಳ ರೂಪದಲ್ಲಿ ವ್ಯಕ್ತವಾಗುವ ಯಾವ ಗುರಿಯೂ ದೃಷ್ಟಿಯಲ್ಲಿಲ್ಲ. ನಿಮ್ಮ ಪ್ರಗತಿಯನ್ನು ಅಡ್ಡಗಟ್ಟುವ ಬೇರೆ ಬಹಳಷ್ಟು ಇಚ್ಛೆಗಳಿರಬಹುದು. ಬಹಳಷ್ಟು ಸಲ ಪರಸ್ಪರ ವಿರೋಧಮಯವಾದ ಹಾಗೂ ಘರ್ಷಣೆಯನ್ನುಂಟು ಮಾಡುವ, ಹಾಗೂ ನಿಮ್ಮ ಸದಸದ್ವಿವೇಕವನ್ನು ನಷ್ಟಗೊಳಿಸುವ ತುಚ್ಛ ಆಶೆಗಳನ್ನು ಸಫಲಗೊಳಿಸುವದರಲ್ಲಿ ಎಲ್ಲ ಶಕ್ತಿಯೂ ಹಾಳಾಗಬಹುದು. ಗುರಿಯು ನಿಮ್ಮ ಎದುರಿಗೆ ಇದ್ದುದಾದರೆ, ನಿಮ್ಮ ಎಲ್ಲ ಕ್ರಿಯೆಗಳೂ ಸರಿಯಾಗಿ ಅಭಿಮುಖಗೊಳ್ಳುವವು.
(ಎಪ್ರಿಲ್ ೨೯, ೧೯೭೮ ರಂದು ಬೆಂಗಳೂರಿನಲ್ಲಿ ಪೂಜ್ಯ ಗುರುಗಳ ೭೯ ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ಮಾಡಿದ ಭಾಷಣ)

ಗುರುವಿನ ಧ್ಯೇಯ ಪ್ರಾಪ್ತಿಯ ವಾಗ್ದಾನ ನೀಡುವ ಇಂದಿನ ದಿನವನ್ನು ದಯಪಾಲಿಸಿರುವ ಈ ಸಮಯವು ಆನಂದದಾಯಕವಾಗಲಿ.

-ಬಾಬೂಜಿ