ಈಗ ನಾವು ಹನ್ನೆರಡನೆಯ ಗ್ರಂಥಿಯನ್ನು ತಲುಪಿದೆವು. ಅಲ್ಲೇನಿದೆ? ಬೇರೆ ಬೇರೆ ಲಯಾವಸ್ಥೆ ಹಾಗೂ ಸಾರೂಪ್ಯತೆಯ ಅವಸ್ಥೆಗಳಿಂದ ನಮಗೆ ಏನೆಲ್ಲ ದೊರೆತಿದ್ದಿತೋ ಅದೂ ಈಗ ಲಯವಾಯಿತು, ಇನ್ನು ನಾವು ಅದರ ಸಾರೂಪ್ಯತೆಯಲ್ಲಿ ಬರಬೇಕಾಯಿತು. ಅದೂ ಮುಗಿಯಿತು. ನಾವು ಆ ದಶೆಯಲ್ಲಿ ಬಂದೆವು. ಇಲ್ಲಿಯ ದೃಶ್ಯವು ಬಹಳ ಸ್ವಚ್ಛ ಹಾಗೂ ನಿರ್ಮಲವಿದೆ. ಇದರ ಮುಂದೆ ಸರಳತೆಯ ಸಾವಿರಪಾಲು ಭಾರವೆನಿಸುವುದು. ನಾವು ಇನ್ನೂ ಮುಂದುವರಿದಾಗ, ‘ಸರಳತೆ’ ಗಿಂತ ಹೆಚ್ಚು ಒಳ್ಳೆಯ ಶಬ್ದ ಬಳಸಲು ಸಿಕ್ಕರೂ ಇದಕ್ಕಿಂತ ಎಷ್ಟೋ ಪಾಲು ಭಾರವೇ ಆಗುವುದು. ಈಗ ಸಾಯುಜ್ಯತೆ ಬಂದಿತು. ನಮಗೊಂದು ಹೊಸ ಬಗೆಯ ಜೀವನ ಪ್ರಾಪ್ತವಾಯಿತು. ಅದರ ಅನುಭವವು ನಮಗೆ ಮುಂದಿನ ಗ್ರಂಥಿಯಾಗುವುದು.