ಸ್ಥಿತಿಯು ಹೀಗಿದ್ದಾಗ ನಾವು ಹನ್ನೊಂದನೆಯ ಗ್ರಂಥಿಯಲ್ಲಿ ಕಾಲಿಟ್ಟೆವು. ಈಗ ಆವರಣ ತಿರುವುಮುರುವಾಯಿತು; ನಿಜತ್ವದ ಸುಳುವು ತೋರ ತೊಡಗಿತು, ಅಂತಃಕರಣವು ವಿವಶವಾಯಿತು… ಒಮ್ಮೆ ಮಿಡಿತ, ಒಮ್ಮೆ ನೋವು. ಯಾವಾಗಲೂ ಅವನನ್ನೇ ಪಡೆಯುವ ಶೋಧವಿದೆ. ಆತನಿಲ್ಲದೆ ಶಾಂತಿ ಸಮಾಧಾನಗಳೆಲ್ಲಿ? ನಿಜ ಹೇಳಬೇಕಾದರೆ, ಶಾಂತಿಯೂ ಈಗ ಅಪ್ಪಣೆ ತೆಗೆದು ಕಂಡಿತು, ಆ ಸ್ಥಾನದಲ್ಲಿ ಈಗ ಏನಿದೆ? ಶಾಂತಿಯ ದಶೆಯೊಳಗಿಂದ ಶಾಂತಿಯನ್ನು ಸೆಳೆದುಕೊಂಡರೆ ಯಾವ ಅನುಭವ ಬರುವುದೋ ಅದೇ ಸ್ಥಿತಿ ಈ ಗ್ರಂಥಿಯನ್ನು ತಲುಪಿದಾಗ ಬರುವುದು. ನಮಗೆ ಈ ಅನುಭವ ಬಂದು ಅದನ್ನೂ ಲಯಗೊಳಿಸಿದೆವು. ಈಗ ಎಲ್ಲವೂ ವಿಸ್ಮೃತವಾಯಿತು. ನಾವು ಎಲ್ಲಿ ಧುಮುಕಿದ್ದೇವೆಂಬ ಜ್ಞಾನವೂ ನಮಗಿಲ್ಲ. ಆದರೂ ನಾವು ಮುಳುಗಿ ಎದ್ದಾಗ ಅದರ ಲಯಾವಸ್ಥೆಯನ್ನು ದಾಟಿದೆವೆಂದು ಹೇಳಬಹುದು. ಈಗ ಅಲ್ಲೇನಿದೆ? ಎಲ್ಲವೂ ಹೊರಟು ಹೋದರೂ ನೋವು ಮಾತ್ರ ಇನ್ನೂ ಇದೆ. ಈ ನೋವು ನಮ್ಮನ್ನು ಗುರಿಯವರೆಗೆ ತಲುಪಿಸಲು ಸಹಾಯಕವಾಗುವುದು, ನಾವು ಮೂಲ ದಶೆಯಲ್ಲಿ ಬೆರೆತು ಹೋದಾಗ ಇದು ಇಲ್ಲದಂತಾಗುವುದು. ಈಗ ನಾವು ಸಾರೂಪ್ಯತೆಯ ಅವಸ್ಥೆಯಲ್ಲಿರುವೆವು. ಬರುಬರುತ್ತ ಆದರದೂ ಲಯವಾದಾಗ ನಾವು ತಿಳಿಯಾದ ಸಾರೂಪ್ಯತೆಯ ದಶೆಯನ್ನು ಸೇರುವೆವು. ಇದು ಹನ್ನೆರಡನೆಯ ಗ್ರಂಥಿಯನ್ನು ಮುಟ್ಟಿದ ಸೂಚನೆ ಕೊಟ್ಟಿತು.