ಈ ತಾತ್ವಿಕ ಪ್ರಬಂಧಗಳ ಸಂಕಲನ ಆಧ್ಯಾತ್ಮಿಕ ಸಾಧನೆಯ ಆಚರಣೀಯ ಅಂಶಗಳನ್ನು ಪರಿಚಯಿಸುತ್ತದೆ. ಇಲ್ಲಿರುವ ಲೇಖನಗಳು ಸಾಧನೆಯನ್ನು ಕೈಗೊಂಡಿರುವ ಜಿಜ್ಞಾಸುಗಳಿಗೆ ಮತ್ತು ಆಧ್ಯಾತ್ಮದಲ್ಲಿ ಪ್ರಾಮಾಣಿಕ ಆಸಕ್ತರಿಗೆ ಉಪಯೋಗಕರವಾಗಿದೆ ಮತ್ತು ಕಾಲಕ್ಷೇಪಕ್ಕಾಗಿ ಓದುವ ಸಾಹಿತ್ಯವಾಗಿರುವದಿಲ್ಲ. ಇಲ್ಲಿ ವಿಷಯವನ್ನು ಕಾರ್ಯಾಚರಣೆಯ ದೃಷ್ಟಿಯಿಂದ ವಿವರಿಸಲಾಗಿದೆ. ಅಭ್ಯಾಸಿಗಳ ಚಿಂತನಾ ಶಕ್ತಿಯನ್ನು, ಆತ್ಮಶೋಧನೆಯನ್ನು ಪ್ರಚೋದಿಸುವದೆಂದು ಆಶಿಸಲಾಗಿದ್ದು, ವೈಯಕ್ತಿಕ ಸಾಧನೆಯನ್ನು ಯಾಂತ್ರಿಕವಾಗಿರುವದನ್ನು ತಪ್ಪಿಸಿ ಸರಿಪಡಿಸಿಕೊಳ್ಳಬಹುದು. ಇಲ್ಲಿ ಎಚ್ಚರಿಕೆಯ ಮಾತೊಂದನ್ನು ಹೇಳುವದು ಉಚಿತ. ಸೂಕ್ಷ್ಮವಾದ ವಿಷಯವನ್ನು ಸರಳ ಭಾಷೆಯಲ್ಲಿ ವಿವರಿಸಲಾಗಿದೆ. ಅದರಲ್ಲಿ ಅಡಕವಾಗಿರುವ ಸ್ಪೂರ್ತಿಯನ್ನು ಗ್ರಹಿಸುವ ಪ್ರಯತ್ನ ಮಾಡುವದು ಉತ್ತಮ. ನಮ್ಮ ಪದ್ಧತಿಯ ಬಗ್ಗೆ ಅಧಿಕೃತ ಮತ್ತು ವಿಫುಲವಾದ ಸಾಹಿತ್ಯ ಲಭ್ಯವಿದೆ. ಇಲ್ಲಿರುವ ಲೇಖನಗಳು ಅದಕ್ಕೆ ಪೂರಕವಾಗಿ ನಿಲ್ಲುವಂತಹದ್ದು. ಒಂದು ವೇಳೆ ಓದುಗರಿಗೆ ಏನಾದರೂ ವ್ಯತ್ಯಾಸ ಅಥವಾ ವಿಷಯಾಂತರ ಕಂಡುಬಂದಲ್ಲಿ ಅವರು ಮೂಲ ಅಧಿಕೃತ ಸಾಹಿತ್ಯವನ್ನೇ ಅವಲಂಬಿಸಬೇಕೆಂದು ಸೂಚಿಸುವೆ.
ಲೇಖಕರಾದ ಡಾ.ಎಸ್.ಬಿ.ಶ್ಯಾಮರಾವ್‌ರವರು ಕರ್ನಾಟಕದ ಗುಲಬರ್ಗಾ ಜಿಲ್ಲೆ ಯವರು. ಅವರು ಉದಾರ ಹಿನ್ನೆಲೆಯಿರುವ ಮಧ್ಯಮ ವರ್ಗದ ಕುಟುಂಬದವರು. ಬಾಲ್ಯದಲ್ಲಿ, ಅವರು ನಿಷ್ಠಾವಂತ ಧಾರ್ಮಿಕರಾಗಿದ್ದರು . ಅದೇ ವೇಳೆಗೆ ಅವರ ತಂದೆಯವರ ಪ್ರೋತ್ಸಾಹವು ದೊರಕಿತು. ಅವರು ಪ್ರೌಢ ಶಾಲೆ ಮತ್ತು ಪದವಿ-ಪೂರ್ವ ವಿಧ್ಯಾಭ್ಯಾಸವನ್ನು ಮುಗಿಸಿ ವೈದ್ಯಕೀಯ ಪದವಿಗಾಗಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿಧ್ಯಾಲಯವನ್ನು ಸೇರಿದರು. ಅವರು ಕರ್ನಾಟಕ ವಿಶ್ವವಿದ್ಯಾಲಯದ ಚರ್ಮರೋಗಗಳ ಸ್ನಾತಕೋತ್ತರ ಡಿಪ್ಲೊಮಾ ವ್ಯಾಸಂಗವನ್ನು ಹುಬ್ಬಳ್ಳಿಯಲ್ಲಿ ಮಾಡಿದರು. ಅವರು ಜುಲೈ 1998ರಲ್ಲಿ ಸರಕಾರಿ ಸೇವೆಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾಗಿ ನಿವೃತ್ತರಾದರು. ಪ್ರಥಮ ಬಾರಿಗೆ ಡಿಸೆಂಬರ್ 1968ರಲ್ಲಿ ರಾಯಚೂರಿನಲ್ಲಿ ಗುರುಗಳ ಸಂಪರ್ಕಕ್ಕೆ ಬಂದರು. ಅದಾದ ಕೆಲವೇ ಮಾಸಗಳಲ್ಲಿ ನಮ್ಮ ಪದ್ಧತಿಯ ಪ್ರಕಾರ ಸಾಧನೆಯನ್ನು ಕೈಗೊಂಡರು. ಪ್ರಾರಂಭದಿಂದಲೇ ಅವರ ಪ್ರಗತಿಯು ಅದ್ಭುತವೂ, ಸ್ಥಿರವೂ ಆಗಿತ್ತು. ಜನವರಿ 1970ರಲ್ಲಿ ತರಬೇತಿ ನೀಡುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಯಿತು. ಇತರರನ್ನು ಈ ಸಾಧನೆಯಲ್ಲಿ ತೊಡಗಿಸುವ ಮತ್ತು ಉತ್ತೇಜನವೀಯುವ ವಿವಿಧ ಕಾರ್ಯಕ್ರಮಗಳೆಡೆ ಸದಾ ಅವರ ಗಮನವಿರುತ್ತಿತ್ತು. ಪ್ರಸ್ತುತ ಲೇಖನಗಳ ಸಂಗ್ರಹವು ಜಿಜ್ಞಾಸುಗಳಿಗೆ, ಮಾರ್ಗದರ್ಶನ ನೀಡುವ ಮತ್ತು ಹುರಿದುಂಬಿಸುವ ಅವರ ಪ್ರಯತ್ನಕ್ಕೆ ಋುಜುವಾತಾಗಿದೆ. ಆಧ್ಯಾತ್ಮಿಕ ವಿಷಯದಲ್ಲಿ ಅವರ ಸಹಾಯ ಬಯಸುವ ಪ್ರಾಮಾಣಿಕ ಜಿಜ್ಞಾಸುಗಳಿಗೆ ಮಾರ್ಗದರ್ಶನ ನೀಡಲು ಅವರು ಸದಾ ಸಿದ್ಧರಾಗಿದ್ದಾರೆ. ಕೇವಲ ಪ್ರಾಮಾಣಿಕ ಜಿಜ್ಞಾಸುಗಳಿಗೆ ಮಾತ್ರ ಸ್ವಾಗತ ನೀಡುವದು ಔಪಚಾರಿಕ ದರ್ಶಕರಿಗೆ ಅದೇ ದಾಟಿಯಲ್ಲಿ ಹಿಂತಿರುಗಿಸುವದು ಅವರ ಎರಡನೇ ವ್ಯಕ್ತಿತ್ವವಾಗಿದೆ.
“ನೀನೆ ಮಾನವ ಜೀವನದ ಗುರಿ” ಎಂಬ ಶೀರ್ಷಿಕೆಯು ನಿಜಕ್ಕೂ ಮನಸೆಳೆಯುವಂತದ್ದು. ಇದು ಹೊಸ ಅರ್ಥವನ್ನು ಕೊಡುತ್ತದೆ. ಅದೇ ಸಮಯ ಚಿಂತನೆಯನ್ನು ಕೆರಳಿಸುತ್ತದೆ. “ನೀನೇ” ಎಂಬುದು ದ್ವಿತೀಯ ಪುರುಷ. ಇದು ಈ ಶಬ್ದದ ಭೌತಿಕ ರೂಪವಾಗಿದೆ. ಆಧ್ಯಾತ್ಮಿಕ ಅರ್ಥದಲ್ಲಿ ಈ ಶಬ್ದವು “ಅದು” ನಾವು ಗುರುಗಳೆಂದು ಕರೆಯುವದಕ್ಕೆ ಅನ್ವಯಿಸುತ್ತದೆ. ನಮ್ಮ ಅಸ್ತಿತ್ವದ ಮತ್ತು ಎಲ್ಲ ಅವಿರ್ಭಾವದ ಮೂಲ ಕಾರಣ ಗುರುಗಳೇ ಆಗಿದ್ದಾರೆ. ವಿಶೇಷವಾಗಿ ಮಾನವ ಜೀವನವು ಅವನನ್ನು ಸಾಕ್ಷಾತ್ಕರಿಸಿಕೊಳ್ಳುವದಕ್ಕಾಗಿಯೇ ಇದೆ. ಇದೇ ನಿಜವಾದ ಮಾನವ ಜೀವನದ ಗುರಿಯಾಗಿದೆ. ಪ್ರಾಣಿಗಳ ರಾಜ್ಯ ಮತ್ತು ಸಸ್ಯಗಳ ರಾಜ್ಯ ಬೇರೆಯಾಗಿದ್ದು ಅವುಗಳಲ್ಲೂ ಜೀವವಿದೆ. ಅವುಗಳಿಗೆ ಜೀವನದ ಗುರಿ ಇರಬಹುದು ಇಲ್ಲದೇ ಇರಬಹುದು. ಆದರೆ ನಿಜವಾದ ಗುರಿ ಎಂಬುದು ಅವಕ್ಕೆ ಅನ್ವಯಿಸುವದಿಲ್ಲ. ಏಕೆ ಇಲ್ಲ ಎಂಬ ಪ್ರಶ್ನೆ ಏಳಬಹುದು. ನಮ್ಮ ಪದ್ಧತಿಯಲ್ಲಿ ಆಧ್ಯಾತ್ಮಿಕ ಸಾಧನೆಗೆ ವಿಚಾರ ಶಕ್ತಿಯ ಸಹಾಯ ಅಗತ್ಯ. ಯಾವದು ಮಾನವನಲ್ಲಿ ಮಾತ್ರ ಉತ್ಕೃಷ್ಟವಾಗಿ ಅಭಿವೃದ್ಧಿಗೊಂಡಿದೆಯೋ ಅದು. ಅದೇ ತರಹ ಮಾನವ ಜೀವನವು ವಿಭಿನ್ನ ಗೂಢಾರ್ಥವನ್ನು ಹೊಂದಿದೆ. ಅದೆಂದರೆ ಜೀವಂತವಿರುವದು ಮತ್ತು ಆಧ್ಯಾತ್ಮಿಕತೆ. ನಮ್ಮ ಸಾಧನೆಯು ಸಾಮಾನ್ಯ ಗ್ರಹಸ್ಥ ಜೀವನವನ್ನು ಸಾಗಿಸುತ್ತ ಆಧ್ಯಾತ್ಮಿಕತೆಯನ್ನು ಪಡೆಯಲು ಅಪೇಕ್ಷಿಸುತ್ತದೆ. ಶಬ್ದಗಳ ಹಿಂದೆ ಅಡಗಿದ ಅರ್ಥವನ್ನು ಎತ್ತಿ ತೋರಿಸಲು ಸಂಕ್ಷಿಪ್ತವಾಗಿ ಕೆಲವು ಉದಾಹರಣೆಗಳನ್ನು ಕೊಡಲಾಗಿದೆ. ಅವನ್ನು ಶೀರ್ಷಿಕೆಯ ವ್ಯಾಪ್ತಿಗೆ ಸೀಮಿತಗೊಳಿಸಲಾಗಿದೆ. ಈ ಸಂಪುಟದಲ್ಲಿ ಅನೇಕ ಲೇಖನಗಳಿವೆ. ಅವುಗಳಲ್ಲಿ ಅಡಕವಾಗಿರುವ ವಿಶೇಷ ತತ್ವಗಳನ್ನು ಒಂದೊಂದಾಗಿ ನೋಡೋಣ.
ಗುರುಗಳ ಸಂಕ್ಷಿಪ್ತ ಚಿತ್ರಣವು, ಸ್ಫೂರ್ತಿದಾಯಕವೂ, ಸಲಹೆಗಳಿಂದ ಸಂಪದ್ಭರಿತವೂ ಆಗಿದೆ. ಒಂದೊಂದರ ವಿಶೇಷತೆಯನ್ನು ಎತ್ತಿ ತೋರಿಸುವದು ಕಷ್ಟಕರ. ನಮ್ಮ ಪದ್ಧತಿಯು ಮಾನವತೆಗೆ ನೀಡಲಾದ ಒಂದು ಪಾರಿತೋಷಕವಾಗಿದೆ. ಕ್ರಾಂತಿಕಾರಕ ವಿಚಾರಗಳು, ಜಾಗತಿಕ ವಿಚಾರಗಳ ಘಟನೆಯನ್ನು ಬದಲಿಸುತ್ತವೆ. ಸಾಮಾನ್ಯ ಗೃಹಸ್ಥ ಜೀವನದಲ್ಲಿದ್ದುಕೊಂಡೇ ಮಾನವನು ಉನ್ನತ ಆಧ್ಯಾತ್ಮಿಕ ಸ್ತರಗಳಿಗೆ ಏರಬಲ್ಲನೆಂಬ ದಿಟ್ಟತನದ ಘೋಷಣೆಯು, ಮಾನವತೆಯ ಇತಿಹಾಸದಲ್ಲೇ ಅಪ್ರತಿಮವಾದುದು.
‘ಗುರುಗಳ ಧೈಯ’ಎಂಬ ಲೇಖನದಲ್ಲಿ ನಮ್ಮ ಸಾಧನೆಗೆ ಹೊಸ ತಿರುವನ್ನು ಕೊಡಲಾಗಿದೆ. ಇದರಲ್ಲಿ ಗುರು-ಧೈಯ-ಪದ್ಧತಿ ಎಂಬ ತತ್ವದಲ್ಲಿ ಅಡಗಿರುವ ಆಂತರೀಕ ಸಂಬಂಧವನ್ನು ಎತ್ತಿ ತೋರುವ ದಿಟ್ಟತನದ ಪ್ರಯತ್ನವಿದೆ. ಗಂಭೀರವಾದ ವಿಷಯವನ್ನು ಸೂಕ್ಷ್ಮವಾಗಿ ಪ್ರತಿಪಾದಿಸಲಾಗಿದೆ. ಸಹಪಥಿಕನ ಕರೆ ಎಂಬ ಪುಸ್ತಕದಿಂದ ಆಯ್ದ ಹೇಳಿಕೆಗಳು ಸೂಕ್ಷ್ಮವೂ, ನಿಖರವೂ ಆಗಿವೆ. ‘ಆಯ್ಕೆ’ ಎಂಬ ಉಪಶೀರ್ಷಿಕೆಯು ಕಣ್ಣೆರೆಸುವದಾಗಿದೆ.
‘ಭವಿಷ್ಯತ್ತಿನ ನಾಗರೀಕತೆ’ಯು ಭೂತ, ವರ್ತಮಾನ ಮತ್ತು ಭವಿಷ್ಯದ ಸರಿಯಾದ ಆಗು-ಹೋಗುಗಳನ್ನು ಒದಗಿಸುತ್ತದೆ. ದೇವರು ಮತ್ತು ಆಧ್ಯಾತ್ಮಿಕ ಮೌಲ್ಯಗಳ ತತ್ವವನ್ನು ಎತ್ತಿ ತೋರಿಸುವದಾಗಿದೆ. ಇದು ಸಮಯೋಚಿತವಾಗಿ ಬಂದಿದೆ. ಇದು ಸಾಮಾನ್ಯ ಮಾನವನಿಗೆ ಹಾಗೂ ಅಭ್ಯಾಸಿಗಳಿಗೆ ಸಹಾಯ ಮಾಡುತ್ತದೆ. ಮಾರ್ಗದರ್ಶಕನನ್ನು ಕಂಡು ಹಿಡಿಯುವದು, ಮಾರ್ಗದರ್ಶನವನ್ನು ಹೇಗೆ ಪಡೆಯುವದು ಎಂಬುದನ್ನೂ ಸಹ ಸ್ಪಷ್ಟ ಶಬ್ದಗಳಲ್ಲಿ ತರಲಾಗಿದೆ.
“ಪ್ರಾರ್ಥನೆ” ಪ್ರಾರ್ಥನೆಯ ನಿಜವಾದ ಅರ್ಥವನ್ನು ದೃಷ್ಟಾಂತಸಹಿತ ವಿವರಣೆಯನ್ನು ಯಶಸ್ವಿಯಾಗಿ ಕೊಡಲಾಗಿದೆ. ನಮ್ಮ ಪ್ರಾರ್ಥನೆಯು ಸಂಪ್ರದಾಯದ ಪ್ರಾರ್ಥನೆಗಿಂತ ಹೇಗೆ ಬೇರೆಯಾಗಿದೆಯೆಂಬುದನ್ನು ತೋರಿಸಲಾಗಿದೆ. “ಅದು ವಾಸ್ತವಿಕ ಸ್ಥಿತಿಯ ನಿರೂಪಣೆಯಾಗಿದೆ” ಎಂಬ ವಾಕ್ಯವು ಅರ್ಥಪೂರ್ಣ ಸತ್ವವನ್ನು ಬಹಿರಂಗಪಡಿಸುತ್ತದೆ. ಕೆಲವು ತತ್ವಗಳು ಅದರಲ್ಲಿ ಅಡಕವಾಗಿದ್ದರೂ, ಅವು ಮಾರ್ಗದರ್ಶಕ ಮೈಲುಗಲ್ಲುಗಳಾಗಿವೆ. ಅವು ಮಾನವನ ಯಥಾವತ್ತಾದ ಜಾತಕವನ್ನು ಚಿತ್ರಿಸುತ್ತವೆ. ‘ಗುರು’ ಎಂಬ ಒಂದೇ ಶಬ್ದದ ವಿವರಣೆಯು ಸಮಂಜಸ ಪ್ರಸ್ತಾಪದ ಬೆಳಕಿನ ಸಹಾಯದಿಂದ ನಮ್ಮನ್ನು ಅದರ ಮಹತ್ವದ ಆಳಕ್ಕೆ ಒಯ್ಯುತ್ತದೆ. ಅದು ನಮ್ಮ ಬುದ್ಧಿಗೆ ನಿಲುಕಬಲ್ಲುದೆ ! ಎಂಬುದು ಚರ್ಚಾಸ್ಪದ ವಿಷಯ.
“ನೀನೆ ಮಾನವನ ಜೀವನದ ಗುರಿ”. ಈ ನಿಬಂಧವು ಮನುಷ್ಯನ ಆಷಾಢಭೂತಿತನವನ್ನು ಹೊರಗೆಡುವ ಪ್ರಯತ್ನ ಮಾಡುತ್ತದೆ. ಅವನು ಜೀವನ ಮತ್ತು ದೇಹ ತನಗೆ ಸೇರಿದವೆಂದು ಹೇಳಿಕೊಳ್ಳುತ್ತಾನೆ. ಆದರೆ ವಾಸ್ತವ್ಯದಲ್ಲಿ ಅವು ಭಗವಂತನ ದೇಣಿಗೆ, ಈ ಮೂಲ ಸತ್ಯವನ್ನು ಮರೆತು, ತನ್ನದೇ ಆದ ಪುಟ್ಟ ಸೃಷ್ಟಿಯನ್ನು ನಿರ್ಮಿಸಿಕೊಂಡು ಜೀವನದ ಗುರಿಯಿಂದ ತನ್ನನ್ನು ತಾನು ದೂರ ಮಾಡಿಕೊಂಡಿದ್ದಾನೆ. ವರ್ತಮಾನ ಸ್ಥಿತಿಯು ಸಾಕಷ್ಟು ಬದಲಾವಣೆ ಹೊಂದಿದೆ. ಗುರುಗಳು ಇದರ ಬಗ್ಗೆ ನಮಗೆ ಅರಿವಿಕೆಯನ್ನು ನೀಡಿದ್ದಾರೆ. ಜೀವನದ ಗುರಿಯನ್ನು ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ಪರಿಣಾಮಗಳ ರೂಪದಲ್ಲಿ ಸ್ಪಷ್ಟಿಕರಿಸಲಾಗಿದೆ. ಅಜ್ಞಾನದ ಹೆಸರಿನಲ್ಲಿ ಯಾರೂ ತಪ್ಪಿಸಿಕೊಳ್ಳಲಾರರು. ಪ್ರತಿಯೊಬ್ಬರೂ ಎಚ್ಚರಗೊಂಡು ಅದರ ಕರೆಗೆ ಓಗೊಡಲೇಬೇಕು. ಜೀವನದ ಸಮಸ್ಯೆಗೆ ಪರಿಹಾರ ಪಡೆಯಬೇಕೆನ್ನುವ ಜಿಜ್ಞಾಸುವಿದ್ದರೆ ಅದು ಅನಿವಾರ್ಯವಾದ ಕರ್ತವ್ಯವಾಗಿರುತ್ತದೆ.
“ನೀನೆ ನಮ್ಮ ಏಕ ಮಾತ್ರ ಸ್ವಾಮಿ ಮತ್ತು ಇಷ್ಟದೈವ”, ಅನೇಕ ಹೆಸರುಗಳಿಂದ ಕರೆಯಲ್ಪಡುವ ಆ ಒಬ್ಬನಿಂದಲೇ ಸೃಷ್ಟಿಯ ನಿರ್ಮಾಣವಾಗಿದೆ. ಗೊಂದಲಕ್ಕೆ ಅವಕಾಶ ಉಂಟಾಗಿರುವದು ಅದರಿಂದಲೇ. ಏಕ ಮಾತ್ರ ಸ್ವಾಮಿ ಮತ್ತು ಇಷ್ಟದೈವ ಯಾರು ಎಂಬ ಕಲ್ಪನೆಯನ್ನು ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ. ಆತನೇ ವಿಭೂತಿ ಪುರುಷನಾಗಿದ್ದಾನೆ. ಆತನೇ ಮಾನವ ರೂಪದಲ್ಲಿ ಬಂದಿರುತ್ತಾನೆ. ಆತನಿಗೆ ಆರಂಭವೂ ಇಲ್ಲ, ಅಂತ್ಯವೂ ಇಲ್ಲ. ಬೇರೆ ಬೇರೆ ಲೋಕಗಳನ್ನೊಳಗೊಂಡ ಇಡೀ ವಿಶ್ವಕ್ಕೆ ಅನ್ವಯಿಸುವ ಸೃಷ್ಟಿಯ ನಿಯಮಗಳನ್ನು ಆತನ ಪ್ರಭುತ್ವಕ್ಕೊಳಪಟ್ಟಿರುತ್ತದೆ. ಆತನು ಮಾನವ ಕುಲದ ಏಳಿಗೆ ಮತ್ತು ಉದ್ಧಾರಕ್ಕೋಸ್ಕರ ಬಂದವನಲ್ಲದೇ ಈಡೀ ವಿಶ್ವದ ಆಗುಹೋಗುಗಳನ್ನು ಕ್ರಮಿಸುತ್ತಾನೆ. ಕೇವಲ ಆತನೊಬ್ಬನೇ ಪೂಜೆಗೆ ಅರ್ಹನಾಗಿರುತ್ತಾನೆ.
“ಮಾನವನ ಸೃಷ್ಟಿ”, ಸೃಷ್ಟಿಯ ನಿರ್ಮಾಣದ ಕಾಲದಲ್ಲಿಯ ಘಟನೆಗಳನ್ನು ಸ್ಪಷ್ಟವಾಗಿ ಚಿತ್ರಿಸಲಾಗಿದೆ. ಮೂಲ ಕೇಂದ್ರ ಮತ್ತು ಅದರಿಂದ ಹೊರಹೊಮ್ಮಿದ ಕಣಗಳಲ್ಲಿಯ ಸಮಾನ ರೂಪತೆಯನ್ನು ಶಕ್ತಿ ಮತ್ತು ಅದರ ಸಾಮರ್ಥ್ಯದಲ್ಲಿ ಕಾಣಬಹುದಾಗಿದೆ. ಅಸಮಾನರೂಪತೆ ಧಾರೆಗಳ ದಿಕ್ಕಿನಲ್ಲಿ ಇರುವದು ಹಾಗೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಹರಿಯುತ್ತಿರುವವು. ಮೊದಲನೇಯದು ಭಗವಂತನ ಸೃಷ್ಟಿಯ ಕಾರ್ಯದ ಉದ್ದೇಶವಾದರೆ ಎರಡನೇಯದು ಮನುಷ್ಯನ ಸೃಷ್ಟಿಯ ಕಾರ್ಯವಾಗಿರುತ್ತದೆ. ಕ್ರಮೇಣವಾಗಿ ನಡೆದು ಬಂದ ವಿಕಾಸವು ಇಂದಿಗೂ ಜಾರಿಯಲ್ಲಿರುತ್ತದೆ. ಮಾನವನಿಗೆ ಅದರ ಅರಿವು ಇರುವದಿಲ್ಲ. ಅದು ಆತ್ಮದ ಸ್ವಾತಂತ್ರ್ಯದಲ್ಲಿ ಬಂಧನಕಾರಿಯಾಗಿರುತ್ತದೆ. ಅದು ಅವನನ್ನು ದೈವತ್ವದಿಂದ ಮಾನವತ್ವದೆಡೆಗೆ ಸೆಳೆಯುತ್ತದೆ. ಒಂದು ವೇಳೆ ಸಾಮಾನ್ಯ ಮನುಷ್ಯ ತನ್ನದೇ ನಿರ್ಮಿತ ಸೃಷ್ಟಿಯಿಂದ ಎಚ್ಚೆತ್ತು ಹೊರಗೆ ಬಂದದ್ದೇ ಆದರೆ ಈ ಲೇಖನವು ಪರಿಣಾಮಕಾರಿಯಾಗಿದೆಯೆಂದು ತಿಳಿಯತಕ್ಕದ್ದು,
“ಧ್ಯಾನ”. ಲೇಖನವು ಪದ್ಧತಿ, ಅರ್ಥ ಮತ್ತು ರಹಸ್ಯಗಳ ಬಗ್ಗೆ ನಿಜಾಂಶವನ್ನು ಬಹಿರಂಗಗೊಳಿಸಿದೆ. ಮಾರ್ಗದರ್ಶನವಿಲ್ಲದ ಧ್ಯಾನವು ವಿದ್ಯುತ್ ಹರಿಯುವ ತಂತಿಯನ್ನು ಮುಟ್ಟಿದ ಹಾಗೆ ಎನ್ನುವದು ಸ್ಪಟಿಕದಷ್ಟೇ ಸ್ಪಷ್ಟವಾಗಿದೆ. ವಜ್ರ ಹುಡುಕುವವನ ಕಥೆಯು ನೇರವಾಗಿ ಹೃದಯವನ್ನೇ ತಟ್ಟುತ್ತದೆ. ಧ್ಯಾನದಿಂದಾಗುವ ಪರಿವರ್ತನೆಗಳ ಪಟ್ಟಿಯು ವಿಶ್ಲೇಷಣೆ ಹಾಗೂ ವಿಮರ್ಶೆಗಳಿಗಾಗಿರುವ ಪುಟ್ಟ ನಿಘಂಟುವಿನಂತಿದೆ. ಚಿಗುರು ಎಲೆ ಮತ್ತು ಉದುರಿ ಬೀಳುವ ಎಲೆಯ ಉದಾಹರಣೆಯು ನಮ್ಮ ಗುರುಗಳೇ ಪ್ರತಿಯೊಂದು ಆಗು-ಹೋಗುಗಳಿಗೆ ಆಧಾರ ಎಂಬುದಕ್ಕೆ ನಿದರ್ಶನವಾಗಿರುತ್ತದೆ. ಆಧ್ಯಾತ್ಮದಲ್ಲಿ ಹೋಲಿಕೆ ಮತ್ತು ವಿಭಿನ್ನತೆಗಳ ಪ್ರಶ್ನೆಗೆ ಸ್ಥಾನವೇ ಇರುವದಿಲ್ಲ.
‘ಶುದ್ದೀಕರಣ’ವು ತುಂಬಾ ಆಚರಣೀಯವಾಗಿದ್ದು ಅಷ್ಟೇ ಸ್ಪಷ್ಟವೂ ಸ್ವಯಂವೇದ್ಯವೂ ಆಗಿದೆ. ಶುದ್ದೀಕರಣ ಕ್ರಿಯೆಯಲ್ಲಿ ವಿವಿಧ ಅಂಶಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆಯನ್ನು ಖಂಡಿತವಾಗಿ ಒದಗಿಸುತ್ತದೆ. ಇದರಲ್ಲಿ ಅಡಕವಾಗಿರುವ ಮಾರ್ಗದರ್ಶಕ ಸೂತ್ರದಿಂದ ಇದು ಮೌಲ್ಯಾತೀತವಾಗಿದೆ.
“ನಿರಂತರ ಸ್ಮರಣೆ”. ತತ್ವ ಮತ್ತು ಸಾಧನೆಯ ನಡುವಣ ಘರ್ಷಣೆಯನ್ನು ಲೇಖನವು ಸೂಕ್ಷ್ಮವಾಗಿ ಹೊರತಂದಿದೆ. ಅನೇಕ ತಪ್ಪು ಕಲ್ಪನೆ ಹಾಗೂ ಅದರೊಂದಿಗೆ ಸಾಧನೆಯ ಪಟ್ಟಿಯನ್ನು ನೀಡಲಾಗಿದೆ. ಈ ದಿಶೆಯಲ್ಲಿ ಗುರುಗಳ ಹೇಳಿಕೆಗಳು ಸೂಕ್ತ ಮತ್ತು ಮಹತ್ವವುಳ್ಳದ್ದಾಗಿದೆ.
“ನೀನೆ ನಮ್ಮ ಏಕ ಮಾತ್ರ ಸ್ವಾಮಿ ಮತ್ತು ಇಷ್ಟದೈವ”, ಅನೇಕ ಹೆಸರುಗಳಿಂದ ಕರೆಯಲ್ಪಡುವ ಆ ಒಬ್ಬನಿಂದಲೇ ಸೃಷ್ಟಿಯ ನಿರ್ಮಾಣವಾಗಿದೆ. ಗೊಂದಲಕ್ಕೆ ಅವಕಾಶ ಉಂಟಾಗಿರುವದು ಅದರಿಂದಲೇ. ಏಕ ಮಾತ್ರ ಸ್ವಾಮಿ ಮತ್ತು ಇಷ್ಟದೈವ ಯಾರು ಎಂಬ ಕಲ್ಪನೆಯನ್ನು ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ. ಆತನೇ ವಿಭೂತಿ ಪುರುಷನಾಗಿದ್ದಾನೆ. ಆತನೇ ಮಾನವ ರೂಪದಲ್ಲಿ ಬಂದಿರುತ್ತಾನೆ. ಆತನಿಗೆ ಆರಂಭವೂ ಇಲ್ಲ, ಅಂತ್ಯವೂ ಇಲ್ಲ. ಬೇರೆ ಬೇರೆ ಲೋಕಗಳನ್ನೊಳಗೊಂಡ ಇಡೀ ವಿಶ್ವಕ್ಕೆ ಅನ್ವಯಿಸುವ ಸೃಷ್ಟಿಯ ನಿಯಮಗಳನ್ನು ಆತನ ಪ್ರಭುತ್ವಕ್ಕೊಳಪಟ್ಟಿರುತ್ತದೆ. ಆತನು ಮಾನವ ಕುಲದ ಏಳಿಗೆ ಮತ್ತು ಉದ್ಧಾರಕ್ಕೋಸ್ಕರ ಬಂದವನಲ್ಲದೇ ಈಡೀ ವಿಶ್ವದ ಆಗುಹೋಗುಗಳನ್ನು ಕ್ರಮಿಸುತ್ತಾನೆ. ಕೇವಲ ಆತನೊಬ್ಬನೇ ಪೂಜೆಗೆ ಅರ್ಹನಾಗಿರುತ್ತಾನೆ.
“ಮಾನವನ ಸೃಷ್ಟಿ”, ಸೃಷ್ಟಿಯ ನಿರ್ಮಾಣದ ಕಾಲದಲ್ಲಿಯ ಘಟನೆಗಳನ್ನು ಸ್ಪಷ್ಟವಾಗಿ ಚಿತ್ರಿಸಲಾಗಿದೆ. ಮೂಲ ಕೇಂದ್ರ ಮತ್ತು ಅದರಿಂದ ಹೊರಹೊಮ್ಮಿದ ಕಣಗಳಲ್ಲಿಯ ಸಮಾನ ರೂಪತೆಯನ್ನು ಶಕ್ತಿ ಮತ್ತು ಅದರ ಸಾಮರ್ಥ್ಯದಲ್ಲಿ ಕಾಣಬಹುದಾಗಿದೆ. ಅಸಮಾನರೂಪತೆ ಧಾರೆಗಳ ದಿಕ್ಕಿನಲ್ಲಿ ಇರುವದು ಹಾಗೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಹರಿಯುತ್ತಿರುವವು. ಮೊದಲನೇಯದು ಭಗವಂತನ ಸೃಷ್ಟಿಯ ಕಾರ್ಯದ ಉದ್ದೇಶವಾದರೆ ಎರಡನೇಯದು ಮನುಷ್ಯನ ಸೃಷ್ಟಿಯ ಕಾರ್ಯವಾಗಿರುತ್ತದೆ. ಕ್ರಮೇಣವಾಗಿ ನಡೆದು ಬಂದ ವಿಕಾಸವು ಇಂದಿಗೂ ಜಾರಿಯಲ್ಲಿರುತ್ತದೆ. ಮಾನವನಿಗೆ ಅದರ ಅರಿವು ಇರುವದಿಲ್ಲ. ಅದು ಆತ್ಮದ ಸ್ವಾತಂತ್ರ್ಯದಲ್ಲಿ ಬಂಧನಕಾರಿಯಾಗಿರುತ್ತದೆ. ಅದು ಅವನನ್ನು ದೈವತ್ವದಿಂದ ಮಾನವತ್ವದೆಡೆಗೆ ಸೆಳೆಯುತ್ತದೆ. ಒಂದು ವೇಳೆ ಸಾಮಾನ್ಯ ಮನುಷ್ಯ ತನ್ನದೇ ನಿರ್ಮಿತ ಸೃಷ್ಟಿಯಿಂದ ಎಚ್ಚೆತ್ತು ಹೊರಗೆ ಬಂದದ್ದೇ ಆದರೆ ಈ ಲೇಖನವು ಪರಿಣಾಮಕಾರಿಯಾಗಿದೆಯೆಂದು ತಿಳಿಯತಕ್ಕದ್ದು,
“ಧ್ಯಾನ”. ಲೇಖನವು ಪದ್ಧತಿ, ಅರ್ಥ ಮತ್ತು ರಹಸ್ಯಗಳ ಬಗ್ಗೆ ನಿಜಾಂಶವನ್ನು ಬಹಿರಂಗಗೊಳಿಸಿದೆ. ಮಾರ್ಗದರ್ಶನವಿಲ್ಲದ ಧ್ಯಾನವು ವಿದ್ಯುತ್ ಹರಿಯುವ ತಂತಿಯನ್ನು ಮುಟ್ಟಿದ ಹಾಗೆ ಎನ್ನುವದು ಸ್ಪಟಿಕದಷ್ಟೇ ಸ್ಪಷ್ಟವಾಗಿದೆ. ವಜ್ರ ಹುಡುಕುವವನ ಕಥೆಯು ನೇರವಾಗಿ ಹೃದಯವನ್ನೇ ತಟ್ಟುತ್ತದೆ. ಧ್ಯಾನದಿಂದಾಗುವ ಪರಿವರ್ತನೆಗಳ ಪಟ್ಟಿಯು ವಿಶ್ಲೇಷಣೆ ಹಾಗೂ ವಿಮರ್ಶೆಗಳಿಗಾಗಿರುವ ಪುಟ್ಟ ನಿಘಂಟುವಿನಂತಿದೆ. ಚಿಗುರು ಎಲೆ ಮತ್ತು ಉದುರಿ ಬೀಳುವ ಎಲೆಯ ಉದಾಹರಣೆಯು ನಮ್ಮ ಗುರುಗಳೇ ಪ್ರತಿಯೊಂದು ಆಗು-ಹೋಗುಗಳಿಗೆ ಆಧಾರ ಎಂಬುದಕ್ಕೆ ನಿದರ್ಶನವಾಗಿರುತ್ತದೆ. ಆಧ್ಯಾತ್ಮದಲ್ಲಿ ಹೋಲಿಕೆ ಮತ್ತು ವಿಭಿನ್ನತೆಗಳ ಪ್ರಶ್ನೆಗೆ ಸ್ಥಾನವೇ ಇರುವದಿಲ್ಲ.
‘ಶುದ್ದೀಕರಣ’ವು ತುಂಬಾ ಆಚರಣೀಯವಾಗಿದ್ದು ಅಷ್ಟೇ ಸ್ಪಷ್ಟವೂ ಸ್ವಯಂವೇದ್ಯವೂ ಆಗಿದೆ. ಶುದ್ದೀಕರಣ ಕ್ರಿಯೆಯಲ್ಲಿ ವಿವಿಧ ಅಂಶಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆಯನ್ನು ಖಂಡಿತವಾಗಿ ಒದಗಿಸುತ್ತದೆ. ಇದರಲ್ಲಿ ಅಡಕವಾಗಿರುವ ಮಾರ್ಗದರ್ಶಕ ಸೂತ್ರದಿಂದ ಇದು ಮೌಲ್ಯಾತೀತವಾಗಿದೆ.
“ನಿರಂತರ ಸ್ಮರಣೆ”. ತತ್ವ ಮತ್ತು ಸಾಧನೆಯ ನಡುವಣ ಘರ್ಷಣೆಯನ್ನು ಲೇಖನವು ಸೂಕ್ಷ್ಮವಾಗಿ ಹೊರತಂದಿದೆ. ಅನೇಕ ತಪ್ಪು ಕಲ್ಪನೆ ಹಾಗೂ ಅದರೊಂದಿಗೆ ಸಾಧನೆಯ ಪಟ್ಟಿಯನ್ನು ನೀಡಲಾಗಿದೆ. ಈ ದಿಶೆಯಲ್ಲಿ ಗುರುಗಳ ಹೇಳಿಕೆಗಳು ಸೂಕ್ತ ಮತ್ತು ಮಹತ್ವವುಳ್ಳದ್ದಾಗಿದೆ.
ನಾನು ಮತ್ತು ನನ್ನದರ ಸಂಕೀರ್ಣತೆ, ಸಕೀಯ ಹಾಗೂ ಆಕೀಯ ಸ್ಮರಣೆ ಮತ್ತು ರೂಪ ಹಾಗೂ ಆಕಾರಗಳ ತಾರತಮ್ಯತೆಗಳ ಬಗೆಗೆ ಹೊಸ ಸಲಹೆಗಳನ್ನು ಅತ್ಯಂತ ಮಾರ್ಮಿಕವಾಗಿ ವಿವರಿಸಲಾಗಿದೆ. ನಿರಂತರ ಸ್ಮರಣೆಯ ಬಗ್ಗೆ ಮೇಲಿಂದ ಮೇಲೆ ಓದುವಂತೆ ಹಾಗೂ ಆಳವಾದ ಚಿಂತನೆಯನ್ನು ಮಾಡುವದರ ಅವಶ್ಯಕತೆಯನ್ನು ಎತ್ತಿ ತೋರಿಸಲಾಗಿದೆ.
“ಅಭ್ಯಾಸಿ’ ಎಂಬುದನ್ನು ಮಾರ್ಗದರ್ಶನಕ್ಕಾಗಿ ಸಿದ್ಧ ಕೈಪಿಡಿಯಾಗಿ ತೆಗೆದುಕೊಳ್ಳಬಹುದು. ಇದು ಸಲಹಾತ್ಮಕವೂ ಮತ್ತು ಪ್ರಯೋಗಾತ್ಮಕವೂ ಆಗಿದೆ. ನಮ್ಮ ಸಾಧನೆಯ ಪ್ರತಿಯೊಂದು ಅಂಗವನ್ನು, ಪ್ರತ್ಯೇಕ ಉಪಶೀರ್ಷಿಕೆಯಡಿಯಲ್ಲಿ ಘಟನಾವಳಿಯಂತೆ ವರ್ಣಿಸಲಾಗಿದೆ. ನಮ್ಮ ಸಾಹಿತ್ಯವು ಸಾಕಷ್ಟು ವಿವರಣೆಯೊಂದಿಗೆ ತುಂಬಿದೆ. ನಮ್ಮ ಸಾಧನೆಯ ಪ್ರತಿಯೊಂದು ಅಂಗವನ್ನು ಸುಯೋಜಿತವಾಗಿ ಈ ಲೇಖನದಲ್ಲಿ ಅಳವಡಿಸುವ ಪ್ರಯತ್ನ ಮಾಡಲಾಗಿದೆ. ಪ್ರತಿಯೊಬ್ಬರಿಗೂ ತಮ್ಮ ತಮ್ಮ ಪರಿಗಣನೆಗೆ ಮತ್ತು ಪರಿಚಯಕ್ಕೆ ಆಹ್ವಾನ ನೀಡುತ್ತದೆ.
‘ಸಮಾರಂಭಗಳು’ ಎಂಬ ಪ್ರಬಂಧವು ತುಂಬಾ ವಿಫುಲವಾಗಿ, ಅಭ್ಯಾಸಿಗಳಿಗೆ ಅತೀವ ಸಹಾಯವನ್ನು ನೀಡುವದಾಗಿದೆ. ನಮ್ಮ ಸಮಾರಂಭಗಳಿಗೆ ಹಾಜರಾಗುವ ಅಭ್ಯಾಸಿಗಳಿಗೆ, ಅವರ ಕರ್ತವ್ಯಗಳನ್ನು ನೆನೆಪಿಸುವದಾಗಿದೆ. ನಾವು ಸಾಂಪ್ರದಾಯಿಕವಾಗಿ ಆಚರಿಸುತ್ತಿರುವ ಕ್ರಿಯೆಗಳ ಮೇಲೆ ಬೆಳಕು ಬೀರುವದಾಗಿದೆ. ನಮ್ಮ ಸಮಾರಂಭಗಳಿಗೆ ಸಂಬಂಧಿಸಿದಂತೆ ಸೂಚಿಸಲಾದ ಮಾರ್ಗದರ್ಶಕ ಅಂಶಗಳು, ಸಂದರ್ಭೋಚಿತವೂ, ಅವಶ್ಯಕವೂ ಆಗಿವೆ.
‘ತರಬೇತಿ’ಯು ದಿಟ್ಟ ಮತ್ತು ನೇರ ಸಲಹೆಯನ್ನು ನೀಡುವದಾಗಿದೆ. ಇದು ತರಬೇತಿಯ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುವದು. ಈ ತರಬೇತಿಯ ಪ್ರಭಾವದಿಂದಾಗಿ ಆರಂಭದಲ್ಲಿ ಉಪಯೋಗಕರವೆಂದು ಕಂಡು ಬಂದದ್ದು, ಕೊನೆಗೆ ವ್ಯರ್ಥ ವಿಷಯವಾಗಿ ಪರಿಣಮಿಸುವದು. ಇದು ಗುರುಗಳ ಸಹಾಯದ ಅವಶ್ಯಕತೆಯಿದೆಯೆಂಬುದನ್ನು ಸಾಧಿಸುತ್ತದೆ.
“ನೈಜ ಅಭ್ಯಾಸಿಯು ಅಭ್ಯಾಸಿಗಳನ್ನು ಅವರ ಗಾಢ ನಿದ್ರೆಯಿಂದ ಎಬ್ಬಿಸುವದಾಗಿದೆ. ಸಾಧಕನು ಎಚ್ಚೆತ್ತರೆ ಮಾತ್ರ ದಾರಿ ಉಂಟು ಎಂಬುದು ಸರಳ ಸಮೀಕರಣವಾಗಿದೆ. ಪತಾಕೆಯು ಪೂರ್ಣ ಪ್ರಮಾಣದಲ್ಲಿ ಹಾರಲಿ ಅರ್ಧಕ್ಕೆ ನಿಲ್ಲದಂತಿರಲಿ.
“ಸರಳ ಜೀವನ” ಎಂಬ ಪ್ರಬಂಧವು, ಆ ಪದಬಂಧದಲ್ಲಿ ಹುದುಗಿರುವ ಅರ್ಥವನ್ನು ಎತ್ತಿ ತೋರಿಸುವದಾಗಿದೆ. ಸರಳ” ಎಂಬ ಶಬ್ದವು ಸರಳತೆಯನ್ನು ‘ಜೀವನ’ ಎಂಬ ಶಬ್ದವು ಮಾನವ ಜೀವನದ ನಿಜವಾದ ಗುರಿಯನ್ನು ಪಡೆಯಲು ಅಂಕಿತವಾದ ಇರುವಿಕೆಯನ್ನು ಪ್ರತಿನಿಧಿಸುತ್ತದೆ. ಸರಳತೆಯು ಭಗವಂತನ ಸಾರತತ್ವವು, ನಿಸರ್ಗದ ಜೀವಾಳವೂ ಆಗಿದೆ. ಜೀವನಾವಸ್ಥೆಯನ್ನು, ಜೀವನದ ಗುರಿಯನ್ನು ಸಾಧಿಸಲು ಸದುಪಯೋಗ ಪಡಿಸಬೇಕಾಗಿದೆ. ಯಾವಾಗ ಜೀವನವು ಸರಳತೆಯಿಂದ ತುಂಬಿ ತುಳುಕುತ್ತದೆಯೋ, ಆಗ ಅದನ್ನು ಸರಳ ಜೀವನವೆನ್ನಲಾಗುತ್ತದೆ. ನಮ್ಮ ಪದ್ಧತಿಯಲ್ಲಿ ನಿರ್ದಿಷ್ಟ ನಿಯಮಗಳನ್ನು ವಿಧಿಸಲಾಗಿದೆ. ಅದೆಂದರೆ, ಬೆಳಿಗ್ಗೆ ಧ್ಯಾನ, ಸಾಯಂಕಾಲದ ಶುದ್ದೀಕರಣ, ಮಲಗುವ ಮುನ್ನ ಪ್ರಾರ್ಥನೆ ಮತ್ತು ನಿರಂತರ ಸ್ಮರಣೆ. ಯಾರಾದರು ನಿಜವಾದ ಸರಳತೆಯನ್ನು ಬೆಳೆಸಿಕೊಳ್ಳಲು ಇಚ್ಚಿಸಿದಲ್ಲಿ, ಅವರು ಮೇಲ್ಕಾಣಿಸಿದ ನಿಯಮಗಳನ್ನು ಪ್ರಾಮಾಣಿಕವಾಗಿ, ಚಾಚೂ ತಪ್ಪದೇ ಅನುಸರಿಸಬೇಕಾಗಿದೆ. ಇದು ನಿಜಕ್ಕೂ ಚಿಂತನೆಯನ್ನು ಪ್ರಚೋದಿ- ಸುವಂತದ್ದು.
ಪ್ರಾಣಾಹುತಿಯ ಬಗೆಗಿನ ಲೇಖನವು ಸೃಷ್ಟಿಯ ರಹಸ್ಯ ಮತ್ತು ಆಧ್ಯಾತ್ಮಿಕತೆಯ ಚೌಕಟ್ಟುಗಳನ್ನು ವಿವರಿಸುತ್ತದೆ. ಮಾನವನ ವಿಕಾಸದಲ್ಲಿ ಪ್ರಾಣಾಹುತಿಯು ‘ತೃತೀಯ ಬಲ’ವಾಗಿ ಹೇಗೆ ವರ್ತಿಸುವದೆಂಬುದನ್ನು ವಿಶದೀಕರಿಸುತ್ತದೆ. ಮಾನವೀಯ ಮನಸ್ಸಿನ ವಿಚಾರ ಮತ್ತು ಅದರ ಶಕ್ತಿಯನ್ನು ಸೂಕ್ತ ಉದಾಹರಣೆಗಳಿಂದ, ಸುಂದರವಾಗಿ ಸ್ಪಷ್ಟಿಕರಿಸಲಾಗಿದೆ. “ಒಂದು ಸದಾವಕಾಶ’ಎಂಬ ಶೀರ್ಷಿಕೆಯಡಿಯಲ್ಲಿ ಪ್ರಾಣಾಹುತಿಯ ಮಹತ್ವವನ್ನು ಅತ್ಯುತ್ತಮವಾಗಿ ಎತ್ತಿ ತೋರಿಸಲಾಗಿದೆ.
“ಶುದ್ಧತೆ’ಎಂಬ ಲೇಖನವು ಅದರ ತತ್ವ ಮತ್ತು ಅರ್ಥವನ್ನು ಸುಸ್ಪಷ್ಟಗೊಳಿಸುವದಾಗಿದೆ. ಇದು ನಮ್ಮ ವಿಧಿ, ಗಂತವ್ಯ ಮತ್ತು ಸತ್ಸಂಗದ ಮೇಲೆ ಪ್ರಭಾವ ಬೀರುವದಾಗಿದೆ. ತಿದ್ದುಪಡಿಯ ಕ್ರಮವು ತುಂಬಾ ಉತ್ತೇಜನಕಾರಿಯಾಗಿದೆ.
‘ಆವರಣದ ಅನಾವರಣ’ವೆಂಬ ಲೇಖನವು ತತ್ವ ಮತ್ತು ಆಚರಣೆಯಲ್ಲಿನ ವಿರೋಧಾಭಾಸಗಳನ್ನು ಪ್ರತಿನಿಧಿಸುವದು. ಈ ಸಂಘರ್ಷವು ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಮತ್ತು ವಿಶೇಷವಾಗಿ ನಮ್ಮ ಅಭ್ಯಾಸಿಗಳಲ್ಲಿ ಕಂಡುಬರುವ ನ್ಯೂನ್ಯತೆಯಾಗಿದೆ. ಪರಿವರ್ತನೆಯನ್ನು ಬಯಸುವವರಿಗೆ ಇದು ಸೂಕ್ಷ್ಮವಾದ ಸುಳುಹನ್ನು ನೀಡುವದಾಗಿದೆ. ಇದು ವಿಚಾರದಲ್ಲಿ ಸ್ಪಷ್ಟತೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ಚಿಂತನೆಯು ಅತ್ಯಗತ್ಯ.
“ವೈಮನಸ್ಸು”. ಲೇಖನದ ಮೊದಲನೇಯ ವಾಕ್ಯವೇ ವೈಮನಸ್ಸಿನ ಅರ್ಥ ಹಾಗೂ ಪರಿಣಾಮನ್ನು ತಿಳಿಯಪಡಿಸುತ್ತದೆ. ಆಧ್ಯಾತ್ಮದಲ್ಲಿ ಅದು ಎಷ್ಟೊಂದು ವಿಷಕಾರಿಯಾಗಿದೆಯೆಂಬುದನ್ನು ಸ್ಪಷ್ಟಿಕರಿಸುತ್ತದೆ. ವೈಮನಸ್ಸಿನ ಬೆಳವಣಿಗೆ ಹಾಗೂ ಅದರ ವಿಕಾಸವನ್ನು ಮನದಟ್ಟಾಗುವಂತೆ ಚಿತ್ರಿಸಲಾಗಿದೆ. “ಗೌರವ ಕೊಟ್ಟು ಗೌರವವನ್ನು ಪಡೆ” ಎಂಬ ನುಡಿಗಟ್ಟು ಸಂದರ್ಭೋಚಿತವಾಗಿದೆ. ಇಂತಹ ಸ್ವಭಾವವನ್ನು ಬೆಳೆಸಿಕೊಳ್ಳುವ ಸಲಹೆಯು ಸರ್ವಸಮ್ಮತವಾಗಿರುತ್ತದೆ. ವೈಮನಸ್ಸು ಹೋಗಲಾಡಿಸುವದು ವರ್ತಮಾನ ಸನ್ನಿವೇಶದ ಹಾಗೂ ಸಮಾಜದ ಬೇಡಿಕೆಯಾಗಿದೆ. ಅದು ಈ ಲೇಖನದ ಮೂಲಕ ಹೋಗಲಾಡಿಸಬಹುದಾಗಿದೆ.
‘ಯೋಗ’ಎಂಬ ಲೇಖನವು, ಯೋಗದ ಅರ್ಥವನ್ನು ತುಂಬಾ ಪ್ರಬುದ್ಧವಾಗಿ ಮಾಡಿದೆ. ಇದು ಬರೀ ‘ಕೂಡುವಿಕೆಯೆಂದಲ್ಲ, ಇದು ವಿವಿಧ ಅವಸ್ಥೆಗಳನ್ನು ಹೊಂದಿದ ಐಕ್ಯತೆಯನ್ನು ಪಡೆಯುವ ಒಂದು ಸಕ್ರೀಯ ವಿಧಾನವಾಗಿದೆ. ತತ್ಪರಿಣಾಮವಾಗಿ ಮನಸ್ಸು ಸತ್ಯ ಮತ್ತು ಮಾಯೆಗಳ ನಡುವೆ ಒಂದು ಸಾಕ್ಷಿಯಾಗುತ್ತದೆ. ಇದು ಮಾನವೀಯ ಪ್ರಯತ್ನದಾಚೆ ಇದೆ. ಇದೇ ಕಾರಣಕ್ಕಾಗಿ ಆಧ್ಯಾತ್ಮ ಸಾಧನೆಯಲ್ಲಿ ಗುರುವಿನ ಸಹಾಯವನ್ನು ಬೇಡುತ್ತದೆ.
‘ಇತ್ತೀಚಿನ ತೀರ್ಥಯಾತ್ರೆ’ಯಲ್ಲಿ ಪೂಜ್ಯ ಭಾಯಿ ಸಾಹೇಬರ ಅಂತಸ್ತನ್ನು ತೋರಿಸುವದಾಗಿದೆ. ಪ್ರತಿ ದಿನದ ವಿವರಣೆಗಳು ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ. ನಮ್ಮ ಅಭ್ಯಾಸಿಗಳಲ್ಲಿ ಘನತೆಯ ವಿಚಾರವು ಹುದುಗಿದೆಯೇ ಎಂಬುದು ಚರ್ಚಾಸ್ಪದವಾಗಿದೆ.
‘ಉಕ್ತ ಲೇಖನದ ವಿವರಣೆ’ ಸ್ಪಷ್ಟವಾಗಿ ಪೂರ್ಣತೆಯೆಂದರೆ ಪೂಜ್ಯ ಭಾಯೀ ಸಾಹೇಬರು ಎಂಬುದನ್ನು ಧೃಡಪಡಿಸುತ್ತದೆ. ಇದರಲ್ಲಿ ಅಡಕವಾಗಿರುವ ಸಲಹೆ ಎಂದರೆ ಲೇಖನದಲ್ಲಿಯ ಅಂತಃಸತ್ವವನ್ನು ಗ್ರಹಿಸಲಾಗಿದೆಯೇ ಎಂಬುದನ್ನು ಓದುಗರು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ. ‘ಒಂದು ಮರೀಚಿಕೆ’ ಎಂಬುದು ಈ ನಿಟ್ಟಿನಲ್ಲಿ ನೇರವಾದ ಉದಾಹರಣೆಯಾಗಿದೆ. ಇದು ಒಬ್ಬನ ಮೇಲೆ ಎಷ್ಟು ಪ್ರಭಾವ ಬೀರಿದೆಯೆಂಬುದನ್ನು ಹುಡುಕಲು ಪ್ರಚೋದಿಸುತ್ತದೆ.
“ಸಮರ್ಥ ಸದ್ಗುರುವಿನ ಶಿಷ್ಯತ್ವ”, ಇದು ನಮ್ಮ ಗುರುಗಳು ಕೊಟ್ಟ ಸಂದೇಶಗಳಲ್ಲೊಂದು. ಇದು ಮೂಲತಃ ಉರ್ದು ಭಾಷೆಯಿಂದ ಅನುವಾದಗೊಂಡಿದೆ. ಓದಲು ಸುಲಭವಾಗಿ ಕಂಡರೂ ಅಭ್ಯಾಸಿಯು ಇದರ ಸತ್ವವನ್ನು ತಿಳಿದುಕೊಳ್ಳಲು ಜಾಗರೂಕತೆಯಿಂದ ಓದಬೇಕು. ಈ ನಿಟ್ಟಿನಲ್ಲಿ ಗಣಿತ ಶಿಕ್ಷಕನ ಉದಾಹರಣೆಯು ಯೋಗ್ಯ ಹಾಗೂ ಕಣ್ಣೆರೆಸುವಂತಹದ್ದು, ಸಮರ್ಥ ಶಿಷ್ಯನ ಸ್ಥಾನವನ್ನು ದಿಟ್ಟ ಹಾಗೂ ಸ್ಪಷ್ಟವಾಗಿ ವ್ಯಾಖಿಸುತ್ತದೆ.
ಒಟ್ಟಾರೆ, ಈ ಸಂಪುಟದ ಸಾರವು “ಏನೇ ಬರಲಿ, ಗುರಿಯೊಂದೇ ಎದುರಿನಲ್ಲಿರಲಿ”ಎಂಬ ಒಂದೇ ದಿಶೆಯನ್ನು ನಿರ್ದೇಶಿಸುತ್ತದೆ.
ಡಾ.ವಿಜಯಕುಮಾರ ವೈಕುಂಠ.
MBBS, DCH
ನಿವೃತ್ತ ಜಿಲ್ಲಾ ಲಸಿಕ ಅಧಿಕಾರಿ
ಗುಲಬರ್ಗಾ