1. ಮಾನವ ಜನಾಂಗದ ಉದಯವಾದಂದಿನಿಂದ ದೇವರನ್ನು ಪೂಜಿಸುವುದು ಬಾಹ್ಯ ದೃಶ್ಯಗಳ ಹಿಂದಿರುವ ರಹಸ್ಯಗಳನ್ನು ಕಂಡುಹಿಡಿಯುವುದು ಹಾಗೂ ಮೂಲಸತ್ಯವನ್ನು ಅರಿತುಕೊಳ್ಳುವುದು ಅದರ ಅನ್ವೇಷಣೆಯಾಗಿದೆ. ಇಂತಿದು ಧರ್ಮದ ಜನನ. ಪೂಜಕನು ಸ್ವರ್ಗದ ಶಾಶ್ವತಾನಂದವನ್ನಾಗಲಿ ಇಂತಹ ಯಾವುದಾದರೊಂದು ದೃಷ್ಟಿಕೋನವನ್ನಾಗಲಿ ತನ್ನ ಅಂತಿಮ ದ್ಯೇಯವನ್ನಾಗಿ ಇಟ್ಟುಕೊಳ್ಳುವನು. ಈ ಪ್ರಕಾರ ಆಯಾ ಹಿರಿಯ ಧರ್ಮ ಸಂಸ್ಥಾಪಕರ ವೈಯಕ್ತಿಕ ಅನುಭವಗಳ ಆಧಾರದ ಮೇಲೆ ನಿರ್ಧಿಷ್ಟ ಪೂಜೆ ಫುರಸ್ಕಾರಗಳನ್ನೊಳಗೊಂಡ ಧರ್ಮಗಳು ಜಗತ್ತಿನಲ್ಲಿ ಜನ್ಮ ತಾಳಿವೆ. ಆದರೆ ಸಾವಿರಾರು ವರ್ಷಗಳು ಕಳೆದು ಪರಿಸರಗಳೆಲ್ಲವೂ ಪರಿವರ್ತನೆ ಹೊಂದಿ ಜೀವನವೆ ಮೂಲತಃ ಮಾರ್ಪಟ್ಟ ನಂತರವೂ ಅವೆ ಹಳೆಯ ಸ್ವರೂಪಗಳಿಗೂ ತತ್ವಗಳಿಗೂ ಅಂಟಿಕೊಳ್ಳಲಾಗುತ್ತಿದೆ.
  2. ನಮ್ಮ ಕುರುಡು ನಂಬಿಕೆಯು ಸತ್ಯದ ಬಗೆಗೆ ನಮ್ಮನ್ನು ಅಜ್ಞಾನದಲ್ಲಿ ಇಡುವುದಲ್ಲದೆ ನಮಗೆ ಅರಿವಾಗದಂತೆ ಬೇರೆ ರೀತಿಯ ಪೂಜೆ ಪುರಸ್ಕಾರಗಳಲ್ಲಿ ನಂಬಿಕೆಯನ್ನಿಡುವ ಜನರ ಬಗ್ಗೆ ನಮ್ಮಲ್ಲಿ ತಿರಸ್ಕಾರದ ಭಾವನೆಯನ್ನು ಬಲಿಸುತ್ತದೆ. ದೇವರು ಒಂದು ಬಲ ಅಥವಾ ಶಕ್ತಿಯೆಂಬ ಭಾವನೆಯು ಕೂಡಾ ಸೀಮಿತವಾದುದೆ ಆಗಿದೆ.
  3. ಧರ್ಮದ ಮೂಲ ಆಧಾರವಾಗಿದ್ದ ವಿಶ್ವಪ್ರೇಮವು ಮಾಯವಾಗಿದ್ದು, ಸಾಮಾನ್ಯವಾಗಿ ಜೀವೇಶ್ವರನನ್ನು ಕೂಡಿಸುವ ಕೊಂಡಿಯೆಂದು ತಿಳಿಯಲಾದ ಧರ್ಮವು ಈಗ ಪ್ರತಿಬಂಧವಾಗಿ ನಿಂತಿದೆ.
  4. ದೇವರು ಒಂದು ಬಲ ಅಥವಾ ಶಕ್ತಿಯೆಂಬ ಭಾವನೆಯು ಕೂಡಾ ಸೀಮಿತವಾದುದೆ ಆಗಿದೆ.
  5. ಧರ್ಮದ ಕೊನೆಯೇ ಆಧ್ಯಾತ್ಮದ ಆರಂಭ.
    ಆಧ್ಯಾತ್ಮದ ಕೊನೆಯೇ ಸತ್ಯದ ಆರಂಭ.
    ಹಾಗೂ ಸತ್ಯದ ಕೊನೆಯೇ ನಿಜವಾದ ಆನಂದ.
    ಅದೂ ಹೊರಟು ಹೋದಾಗ ನಾವು ಗುರಿಯನ್ನು ಮುಟ್ಟುವೆವು.
  6. ಮತಧರ್ಮವು ಸ್ವಾತಂತ್ರ್ಯದತ್ತ ಸಾಗುವ ಮಾನವನ ಯಾತ್ರೆಗೆ ಅವನನ್ನು ಸಿದ್ಧಗೊಳಿಸುವ ಒಂದು ಪ್ರಾರಂಭಿಕ ಹಂತ ಮಾತ್ರ.
  7. ನಿಸರ್ಗದಲ್ಲಿ ನೋಡತಕ್ಕುದು ಇನ್ನೂ ಇದೆಯೆಂಬುದನ್ನು ತಿಳಿಯಲು ಮಾತ್ರ ಧರ್ಮವು ಸಹಾಯಮಾಡಬಲ್ಲುದು.
  8. ದೇವತೆಗಳ ಪೂಜೆಯು ಅವರವರ ಸೀಮಿತವಾದ ಕ್ಷೇತ್ರಕ್ಕೊಯ್ಯುವುದೆಂದೂ ಅದು ಮೋಕ್ಷಕ್ಕಿಂತ ತೀರ ಕೆಳಮಟ್ಟದ್ದೆಂದೂ ಗೀತೆಯಲ್ಲಿ ಶ್ರೀ ಕೃಷ್ಣನು ಸ್ಪಷ್ಟಗೊಳಿಸಿದ್ದಾನೆ.
  9. ಸಂತ ಕಬೀರ ಬಹಳ ಸುಂದರವಾಗಿ ಹೇಳುತ್ತಾರೆ ಕಲ್ಲನ್ನು ಪೂಜಿಸುವುದರಿಂದ ದೇವರು ಸಿಗುವಂತಿದ್ದರೆ ಪರ್ವತವನ್ನೇ ಪೂಜಿಸಿರಿ ಆದರೆ ಅದಕ್ಕಿಂತ ಬೀಸುವಕಲ್ಲೇ ಒಳಿತು ಅದರಿಂದ ಪ್ರಪಂಚವೆಲ್ಲವೂ ಬೀಸಿಕೊಂಡು ಹೊಟ್ಟೆ ತುಂಬಿಕೊಳ್ಳುವುದು