1. ನಮ್ಮ ಕೃತಿಗಳು ಹಾಗೂ ವಿಚಾರಗಳು ಈ ವಿಪರ್ಯಾಸದಲ್ಲಿ ಬಹುಮಟ್ಟಿಗೆ ಕಾರಣವಾಗಿವೆ.ನಾವು ವಿವಿಧ ವಿಚಾರಗಳ ಮತ್ತು ಕಲ್ಪನೆಗಳ ಸಂಪರ್ಕದಲ್ಲಿದ್ದಾಗ ಅವು ನಮ್ಮ ಇಂದ್ರಿಯಗಳ ಹಾಗೂ ಭಾವನೆಗಳ ಮೇಲೆ ಸಂಸ್ಕಾರಗಳನ್ನುಂಟು  ಮಾಡುವವು.ಆಗ ಎಲ್ಲ ಇಂದ್ರಿಯಗಳೂ ಕೆಟ್ಟುಹೋಗಿ ತಪ್ಪು ದಾರಿಯನ್ನು ಹಿಡಿಯುವವು.ಈ ಅಭ್ಯಾಸವು ಬಹುಕಾಲದವರೆಗೆ ಮುಂದುವರಿದರೆ ನಾವು ಅವನ್ನು ಮತ್ತಷ್ಟೂ ಕೆಡಿಸುವೆವು. ಹೀಗೆ ನಾವು ಇಂದ್ರಿಯಗಳ ಹಾಗೂ ಸಂವೇದನೆಗಳ ಮೇಲೆ ಉಂಟು ಮಾಡಿದ ಸಂಸ್ಕಾರವು ಅವನ್ನು ಬಂಡೆಗಲ್ಲಿನಂತೆ ಗಟ್ಟಿಮಾಡಿ ನಿರ್ಬೋಧಗೊಳಿಸುವವು. ಆತ್ಮವೇನೋ  ಆಲಿಪ್ತವಾಗಿಯೇ ಇರುವುದು. ಆದರೆ ನಾವೇ ಉಂಟುಮಾಡಿದ ಇಂಥ ಅಡ್ಡಿ-ಆವರಣಗಳು ರೇಶ್ಮೆಹುಳದ ಗೂಡಿನಂತೆ ಅದನ್ನು ಆವರಿಸುವವು. ಅನಂತರ  ಏನಾಗುವುದು?ನಾವು  ಆತ್ಮದ  ಕಡೆಗೆ   ಇಣುಕಿ   ಕೂಡ   ನೋಡಲಾಗುವುದಿಲ್ಲ;  ಸಾಕ್ಷಾತ್ಕಾರವಂತೂ ದೂರದ ಮಾತಾಯಿತು. ನಮ್ಮ  ದುರ್ವಿಚಾರಗಳ ಹಾಗೂ ದುರಾಚಾರಗಳ ಪರಿಣಾಮದಿಂದಾಗಿ ನಾವು ನಮ್ಮ ವೀವೇಕ ಬುದ್ಧಿಯನ್ನೂ ಯಥಾರ್ಥ ಜ್ಞಾನವನ್ನೂ ಕೆಡಿಸಿಬಿಡುವೆವು. ಮೇಲೆ ಹೇಳಿದಂತೆ ಇಂಥ ಜಡಸ್ಥಿತಿಯನ್ನು ಹೊಂದಿದವರಿಗೆ ರಾಜಯೋಗದ ಶಿಕ್ಷಣ ಪದ್ಧತಿಯು ಹಿಡಿಸುವುದಿಲ್ಲ. ಆದುದರಿಂದಲೇ ನಾವು ಹೇಳುವುದರ ಕಡೆಗೆ ಜನರು ಕಿವಿ ಗೊಡುವುದಿಲ್ಲ. ಸತ್ಯವನ್ನು ಪಡೆಯುವುದಕ್ಕಾಗಿ ಅವರು ದೃಢ ನಿರ್ಧಾರ ಮಾಡಿದುದಾದರೆ ಗುರುದೇವರ ಶಕ್ತಿಯು ಅವರಲ್ಲಿ ಪರಿಣಾಮವನ್ನುಂಟು ಮಾಡುವುದು. ಅಲ್ಲದೆ, ಯೌಗಿಕ ಪ್ರಾಣಾಹುತಿಯ ಬಲದಿಂದ ಅಭ್ಯಾಸಿಯಲ್ಲಿಯ   ಆಂತರಿಕ ತೊಡಕುಗಳನ್ನು ದೂರಮಾಡಿ ಆವರಣಗಳನ್ನು ಛೇದಿಸಲು ಸಮರ್ಥನಿರುವ ಗುರುವಿನ ಸಹಾಯದಿಂದಲೇ. ಸ್ಥೂಲತೆಯು ನಿರ್ಮೂಲವಾಗಬಲ್ಲದು.ERY 15-16
  2. ಸಾಧ್ಯವಾದಷ್ಟು ತನ್ನನ್ನೇ ತಾನು ಗಮನಿಸಿಕೊಂಡು, ತನ್ನಲ್ಲಿರುವ ದೋಷಗಳನ್ನು ಗುರುತಿಸಬೇಕು ಮತ್ತು ಇವುಗಳನ್ನು ಒಂದೊಂದಾಗಿ ಕೈಬಿಡಬೇಕು. ಕಷ್ಟವನ್ನು ಎದುರಿಸುವಾಗ, ಓಡೆಯನ  ಸಹಾಯ ಕೆಳಬೇಕು.AB II VOL II P 20.
  3. ಮಾನವನ ಶರೀರವು ಆತ್ಮದ ವಾಸಸ್ಥಾನ. ಪ್ರಿಯವಾಗಲಿ ಅಪ್ರಿಯವಾಗಲಿ , ಎಲ್ಲ ವಸ್ತುಗಳೂ ಅದರಲ್ಲಿವೆ. ಸಮಯ ಬಂದಾಗ ಅವೆಲ್ಲ ತಮ್ಮ ಪ್ರಯೋಜನಕ್ಕೆ ಬರುವವು. ನಮಗೆ ಅಗತ್ಯವಿದ್ದಾಗ ಉಪಯೋಗವಾಗುವಂತೆ ಅವನ್ನು ನಾವೇ ಸುವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು. ವಾಸ್ತವವಾಗಿ. ಅವುಗಳ ಹೊಂದಿಕೆ ಮತ್ತು ಉಪಯೋಗದಲ್ಲಿಯ ಕ್ರಮಭಂಗವೇ ತೊಂದರೆಯನ್ನು ತಂದೊಡ್ಡುವುದಲ್ಲದೇ ಅವು ತಾವಾಗಿಯೇ ಎನೂ ಮಾಡುವುದಿಲ್ಲ. ಕ್ಲೇಶಗಳ ವಿಷಯವೂ ಹೀಗೆಯೆ. ಅವುಗಳನ್ನು ಸರಿಯಾಗಿ ಬಳಸಿದ್ದಾದರೆ ನಮಗೆ ಲಾಭದಾಯಕವೂ, ಇಲ್ಲದಿದ್ದರೆ ಹಾನಿಕಾರಕವೂ ಆಗಬಲ್ಲದು.VR I 53
  4. ಯಾವುದಾದರೊಂದು ಕಾರ್ಯವನ್ನು ನಮ್ಮ ಹೃದಯ ಮತ್ತು ಬುದ್ಧಿಪೂರ್ವಕವಾಗಿ ಮಾಡಿದಾಗ ಅಡಿಯಲ್ಲಿ ಅದರ ಸಂಸ್ಕಾರಗಳುಂಟಾಗುವವು. ಭೋಗದಿಂದ ಅವುಗಳ ಪರಿಣಾಮ ಕ್ಷಯವಾಗಿವವರೆಗೆ ಅವು ಬೀಜರೂಪದಲ್ಲಿ ಅಲ್ಲಿಯೇ ನೆಲೆಸಿರುವವು. ಈ ಪ್ರಕಾರ ಭೋಗವು ಆವಶ್ಯಕವಾಗಿದೆ. ಸೃಷ್ಟಿಯ ಆದಿಯಲ್ಲಿದ್ದಂತೆ ಪ್ರತಿಯೊಂದು ವಸ್ತುವೂ ಶುದ್ಧರೂಪದಲ್ಲಿರಬೇಕೆಂಬುದು ನಿಸರ್ಗದ ಅನಿವಾರ್ಯ ನಿಯಮವಾಗಿದೆ. ಅದರ ಮೇಲೆ ಕಿಂಚಿತ್ ಮಲಿನತೆಯಾದರೂ ಕೂಡ ಅದರ ಪ್ರಕಾಶವನ್ನು ಮಂದಗೊಳಿಸುತ್ತದೆ. ಇದು ಸ್ವಯಂ ಒಂದು ಶಕ್ತಿಯಾದ ಕಾರಣ ಒಂದು ತರದ ಜೀವನವನ್ನು ತಳೆದು ಕರ್ಮಗಳೊಡನೆ ಸಂಬಂಧ ಪಡೆಯುತ್ತದೆ. ಇಷ್ಟೆಲ್ಲ ಏಕೆಂದರೆ, ನಾವು ನಮ್ಮನ್ನು ಕರ್ತೃಗಳೆಂದು ತಿಳಿದೆವು.TM 48
  5. ನಮ್ಮ ಜೀವಾತ್ಮದ ಸುತ್ತಲೂ ಆವರಿಸಿದ , ನಮ್ಮ ಆಚಾರ-ವಿಚಾರಗಳ ಫಲ ರೂಪವಾದ ಅನೇಕ ತೊಡಕು-ಆವರಣಗಳ ಪರಿಣಾಮಜನಕವಾದ ಸಂಸ್ಕಾರಗಳ ರಾಶಿಯೆ ನಮ್ಮ “ಆಸ್ತಿ”.RD 21.
  6. ವೈರಾಗ್ಯವು ನಿಜ ಅರ್ಥದಲ್ಲಿ ನಮ್ಮ ಎಲ್ಲ ಇಂದ್ರಿಯಗಳ ಹಾಗೂ ಶಕ್ತಿಗಳ ಬಳಕೆಯಲ್ಲಿ ಮಿತತ್ವದಿಂದೊಡಗೂಡಿದ ಮನಸ್ಸಿನ ರಚನೆಯಾಗಿದೆ.RD 90
  7. ಭಕ್ತನು ತನ್ನಲ್ಲಿರುವ ಅಡ್ಡಿ-ಆತಂಕಗಳನ್ನು ದೂರ ಮಾಡಿ ಭಾರವನ್ನು ಇಳಿಸಿ ಬಿಟ್ಟಿರುವನೆಂದು ಇದರರ್ಥ. ಈಗ ಆತನು ಮಲ, ವಿಕ್ಷೇಪ, ಆವರಣರಹಿತನಾಗಿ ನಿಸರ್ಗದ ಧಾರೆಗಳಂತೆ ಪವಿತ್ರ ರೂಪದಲ್ಲಿರುವನು.TM 57
  8. ಈ ಅಪೇಕ್ಷೆಗಳು ನಮ್ಮ ದೈಹಿಕ ಮತ್ತು ಮಾನಸಿಕ ಕ್ರಿಯೆಗಳನ್ನು ರೂಪಿಸುವುವಲ್ಲದೆ ಆತ್ಮದ ಸುತ್ತಲೂ ಹೆಚ್ಚು ಹೆಚ್ಚು ಆವರಣಗಳನ್ನು ಹಾಕುತ್ತ ಸಂಸ್ಕಾರಗಳನ್ನುಂಟು ಮಾಡುವವು.RD-21
  9. ಪ್ರಶ್ನೆ : ಮಹಾ ಪ್ರಳಯದ ಸಮಯದಲ್ಲಿ ಎಲ್ಲ ಭೌತ ಪದಾರ್ಥವೂ ಕುರುಹು ಸಹಿತ ನಾಶವಾಗುವುದೆಂದ ಮೇಲೆ ಸೃಷ್ಟಿಗೆ ಬೇಕಾದ ಪದಾರ್ಥವು ಎಲ್ಲಿಂದ ಬರುವುದು?
    ಉತ್ತರ :  ಒಂದರಿಂದ ಅನೇಕವಾಗಬೇಕೆಂಬ ಕ್ಷೋಭವು ಪದಾರ್ಥವನ್ನು ಸೃಷ್ಟಿಸುವುದು. ಭಗವಂತನಿಂದ ಬೇರೆಯಾಗಿರುವ ಈ ವಿಚಾರವೇ ಭೌತಿಕತೆಯನ್ನು ಸೃಷ್ಟಿಸುವುದು.”ತನ್ನ”ನ್ನು (Himself – God)  ಬಿಟ್ಟು ಅನ್ಯ ವಿಚಾರವೇ ಪದಾರ್ಥವನ್ನು ಸೃಷ್ಟಿಸುವುದು.AB II VOL III P 189