(ಹೈದರಾಬಾದಿನ ಯೋಗಾಶ್ರಮದ ಉದ್ಘಾಟನಾ ಸಮಾರಂಭದಲ್ಲಿ ೨೮-೫-೬೭ ರಂದು ನೀಡಿದಸಂದೇಶ)

ನಾನು ನನ್ನ ಸೋದರರೊಂದಿಗಿರುವ ಈ ಸಂದರ್ಭವು ತುಂಬಾ ಸಂತೋಷದ್ದಾಗಿದೆ. ಪುಟ್ಟದಾದರೂ ಸರಿಯೆ, ಈ ಯೋಗಾಶ್ರಮವನ್ನು ಕಟ್ಟಲು ನೆರವಾಗಿರುವ ಎಲ್ಲ ಸತ್ಸಂಗಿ ಬಾಂಧವರಿಗೂ, ಮತ್ತು ಇತರರಿಗೂ ನಾನು ಹೃತ್ತೂರ್ವಕ ಕೃತಜ್ಞತೆಗಳ ವೃಷ್ಟಿಗರೆಯುತ್ತೇನೆ. ಈಗ ನಮ್ಮ ಸಹಜೀವಿಗಳಿಗೆ ಅತ್ಯುತ್ತಮ ಸೇವೆಯನ್ನು ನಮ್ಮ ಶಕ್ಕನುಸಾರ ಮಾಡಲು ಹೆಚ್ಚಿನ ಅನುಕೂಲ ಸ್ಥಿತಿಯಲ್ಲಿದ್ದೇವೆ.

ಇಂದಿನ ಸಮಾಜದ ದುಖ:ಕರ ಸಂಗತಿಯೆಂದರೆ , ಜನರು  ಸೇವಾಭಾವವನ್ನು ಬಿಟ್ಟು ಕೊಟ್ಟು, “ಗುರುತ್ವ”ದ ಧೋರಣೆಯನ್ನು ತಾಳಿದ್ದಾರೆ. ನಾವು ಅಭಾವ ಸ್ಥಿತಿಯಿಂದ, ಅಧಿಕಾರದ ಸ್ಥಿತಿಗೆ, ಹಾಗೂ ಸೇವಾಭಾವದಿಂದ ಸ್ವಾಮಿತ್ವಕ್ಕೆ ಬೆಳೆದು ಬಂದಿರುವುದನ್ನು ಇತಿಹಾಸವು ತಿಳಿಸುತ್ತದೆ. ‘ಗುರು’ ಎಂಬ ಕಲ್ಪನೆಯೇ ನಿಜಕ್ಕೂ “ಸೇವಾಭಾವದಿಂದ ತುಂಬಿ ನಿಂತಿದೆ. ಆದರೆ, ನಮ್ಮ ಸಂತರು ಸಾಮಾನ್ಯವಾಗಿ ಅದನ್ನು ಮರೆಯುತ್ತಾರೆ. ಇಷ್ಟಾಗಿ, ಅವರನ್ನು ವರ ಸದ್ಯದ ಸ್ಥಿತಿಗೆ ತಂದಿರುವುದು ಆ ಸೇವಾ ಮನೋಭಾವವೇ ಸೈ. ತಳಪಾಯದ ಭಾವನೆಯನ್ನೇ ಮರೆತುಬಿಟ್ಟಾಗ, ಅದರ ಮೇಲೆ ನಿಂಸೌಧವೇ ಕುಸಿದುಬೀಳುತ್ತದೆ. ಆಗ ಅಲ್ಲಿ ಸೇವಕನೂ ಇರುವುದಿಲ್ಲ,ಗುರುವೂ ಉಳಿಯುವುದಿಲ್ಲ. ಶಿಕ್ಷಕನು ನೀಡುವ ತರಬೇತಿಯು ಅವನ ಶಿಷ್ಯರಲ್ಲಿ, ಒಂದು ಸೌರಭವನ್ನುಂಟು ಮಾಡುವಂತಿರಬೇಕು, ದು ಎಂಥದೆಂದರೆ, ಸೌರಭವು (ದು ಎಲ್ಲಿಂದ ಬರುವುದೋ) ಆ ತೋಟಕ್ಕೆ ಸೆಳೆದೊಯ್ಯುವಂಥದಿರಬೇಕು- ಗುರುವು ಪರಿಪೂರ್ಣನಾಗಿದ್ದರೆ ಮಾತ್ರ ಇದು ಸಾಧ್ಯ. ಸರ್ವಾಂತರ್ಗತವಾದ ಉಚ್ಚತರ ಶಕ್ತಿಯಿಂದ ತನ್ನ ಶಿಷ್ಯರನ್ನು ಉತ್ತೇಜಿಸುವ ಯೋಗ್ಯತೆಯನ್ನು ತನ್ನಲ್ಲಿ ಬೆಳೆಸಿಕೊಂಡ ಹೊರತು, ಯಾವುದೇ ವ್ಯಕ್ತಿಯೂ, ಆಧ್ಯಾತ್ಮಿಕ ಪ್ರಶಿಕ್ಷಣವನ್ನು ನೀಡಲು ಅರ್ಹನಾಗಲಾರ.

ಅಂಥ ವ್ಯಕ್ತಿಯನ್ನು ಹುಡುಕಿ ಕಂಡುಕೊಳ್ಳುವುದು ಹೇಗೆ – ಎಂಬುದೇ ಈಗ ಏಳುವ ಪ್ರಶ್ನೆ. ಅಂತಹ ಗುರುವನ್ನು ಹೊಂದಲು ತಕ್ಕ ಯೋಗ್ಯತೆಯು ನಮ್ಮಲ್ಲಿರುವುದೇ ಎಂಬುದನ್ನು ಜನರು ಮೊತ್ತಮೊದಲು ತೂಗಿನೋಡಿಕೊಳ್ಳಬೇಕೆಂಬುದು, ನನ್ನ ವಿನಮ್ರ ಸಲಹೆ. ಒಂದು ವೇಳೆ ತಮ್ಮಲ್ಲಿ ಕೊರತೆಯಿರುವುದು ಕಂಡುಬಂದರೆ, ತಮ್ಮನ್ನು ತಾವು ಯೋಗ್ಯರಾಗುವಂತೆ, ಅರ್ಹತೆಯನ್ನು ಗಳಿಸಿಕೊಳ್ಳಲು ಪ್ರಯತ್ನಿಸಬೇಕು. ಕೆಲವೊಮ್ಮೆ, ಅದೃಷ್ಟದ ಅನುಗ್ರಹದಿಂದ, ಒಬ್ಬ ವ್ಯಕ್ತಿಯು ತಾನು ಶ್ರೇಷ್ಠ ರೀತಿಯ ಆಧ್ಯಾತ್ಮಿಕ ತರಬೇತಿಗೆ – ಅರ್ಹನಿಲ್ಲದಿದ್ದರೂ, ಅಂತಹ ಗುರುವನ್ನು ಪಡೆಯುತ್ತಾನೆ. ಹಾಗಾದರೆ ಅದು ಭಗವಂತನ ಕೃಪಾವಿಶೇಷವಲ್ಲದೆ ಬೇರೇನೂ ಲ್ಲ. ಇನ್ನು, ಯಾರಲ್ಲಿ ಅರ್ಹತೆಯಿದೆಯೋ, ಅವರನ್ನು ಕುರಿತು ನಾನು ಪುನರುಚ್ಚರಿಸುವ ನನ್ನ ಅಚ್ಚುಮೆಚ್ಚಿನ ನುಡಿಯೆಂದರೆ, ನಿಜವಾದ ಜಿಜ್ಞಾಸುವಿನ ಆರ್ತ ಹೃದಯದ ಪ್ರಾಮಾಣಿಕವಾದ ಮೊರೆಯು ಗುರುವನ್ನು ಅವನ ಮನೆಬಾಗಿಲಿಗೆ ಕರೆತರುತ್ತದೆ. ಯಾರೇ ಆಗಲಿ, ತನ್ನನ್ನು ಅರ್ಹನನ್ನಾಗಿಸಿಕೊಳ್ಳಲು, ತನ್ನ ಗುರಿಯನ್ನು ಹಾಗೂ ತನ್ನ ಪ್ರಸ್ತುತ ಸ್ಥಿತಿ ಇವುಗಳನ್ನು ತನ್ನ ದೃಷ್ಟಿಯಲ್ಲಿ ಸ್ಪಷ್ಟವಾಗಿ ಇಟ್ಟುಕೊಳ್ಳಬೇಕು. ತರುವಾಯ, ತನ್ನ ಆಧ್ಯಾತ್ಮಿಕ ಬೆಳವಣಿಗೆಗೆ ಸಹಾಯಕರವಾಗುವಂತಹ ಸಾಧನಗಳನ್ನು ಅಂಗೀಕರಿಸಬೇಕು. ಅದಲ್ಲದೆ, ಗುರಿಯ ಸಾಧನೆಗೆ ಅಡ್ಡಿಯನ್ನುಂಟುಮಾಡುವ, ಅಥವಾ ವಿಳಂಬಗೊಳಿಸುವ ವಿಷಯಗಳ ವಿರುದ್ಧ ಜಾಗರೂಕನಾಗಿರಬೇಕು. ಇವು ಸತ್ಯಶೋಧನೆಯ ಮೂಲಸೂತ್ರಗಳು. ದೇವರನ್ನು ಕುರಿತು ತಿಳಿದುಕೊಂಡರೆ ಅಷ್ಟೇ ಸಾಕು ಎಂಬ ಭಾವನೆಯುಳ್ಳವರು ನಮ್ಮಲ್ಲಿ ಅನೇಕರಿದ್ದಾರೆ. ಇದು ಅವರ ತಪ್ಪು ಕಲ್ಪನೆ. ದೇವರನ್ನು ಪಡೆಯುವುದೇ ಆಧ್ಯಾತ್ಮಿಕತೆಯ ನಿಜವಾದ ತಿರುಳು.

ನಾವು ಕ್ರಮಬದ್ಧವಾಗಿ ಮುಂದುವರಿದರೆ, ಅನುಭವಗಳು ಉಂಟಾಗುತ್ತವೆ ಮತ್ತು ಮೊದಲ ದಿನದಿಂದಲೇ ಬದಲಾವಣೆಯು ಬೇರೂರುತ್ತದೆ. ಮೊದಮೊದಲು ಆಗುವ ಅನುಭವಗಳು ಊಹಾತ್ಮಕ ಕಲ್ಪನೆಗಳಿಂದ ಮಿಶ್ರಿತವಾಗಿರಬಹುದೇನೋ ಸರಿ, ಆದರೆ ಮುಂದುವರಿದಂತೆ, ಕೊನೆಯಲ್ಲಿ ಎಂತಹ ಅನುಭವವನ್ನು ಹೊಂದುವೆವೆಂದರೆ, ಅದನ್ನುಳಿದು ಬೇರಾವ ಅನುಭವದ ಅಗತ್ಯವೂ ಬೀಳುವುದಿಲ್ಲ.

ತಮ್ಮದೇ ಆದ ರೀತಿಯಲ್ಲಿ ದೇವರನ್ನು ಪೂಜಿಸುವವರು ಅನೇಕರಿದ್ದಾರೆ, ಆದರೆ, ಅವರಿಗೆ ‘ಗುರಿ’ಯೆಂಬುದು ಇರುವುದಿಲ್ಲ. ಹಾಗಾಗಿ ಅವರು ಆರಂಭಿಸಿದ ವಲಯದಲ್ಲಿಯೇ ಸುತ್ತುತ್ತ ಉಳಿದುಬಿಡುತ್ತಾರೆ. ಸಾಮಾನ್ಯವಾಗಿ ಜನರು, ಇತರರು ನುಸರಿಸುತ್ತಿರುವ ಪದ್ಧತಿಗಳನ್ನು ನೋಡಿ ಅದನ್ನೇ ಅನುಸರಿಸುತ್ತಾರೆ.

ಸಂತನೆನಿಸಿಕೊಂಡ ಪ್ರತಿಯೋರ್ವನೂ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸ್ವಂತದ ಅನುಭವವೇನೂ ಇರದಿದ್ದರೂ, ಒಂದಿಲ್ಲೊಂದು ಪದ್ದತಿಯನ್ನು ಇತರರಿಗೆ ಕೊಡಮಾಡುತ್ತಾನೆಂಬುದು, ಹಿಂದೂಧಮ್ಮದಲ್ಲಿನ ಒಂದು ಶೋಚನೀಯ ಸಂಗತಿ. ಯಾವುದೇ ಪದ್ಧತಿಯಾಗಲಿ, ಅದು ಶ್ರೇಷ್ಠ ಸಂತರ ಅನುಭವ ಅಥವಾ ಪವಿತ್ರ ಗ್ರಂಥಗಳನ್ನು ಆಧರಿಸಿದ್ದು, ಶುದ್ದವೂ, ಗತಿಶೀಲವೂ ಆಗಿರಬೇಕು. ಅದನ್ನು ಶ್ರದ್ದೆಯಿಂದ ಅಂಗೀಕರಿಸಬೇಕು. ಮತ್ತು ನಮ್ಮನ್ನು ಮುಂದಕ್ಕೆ ದೂರ ಕೊಂಡೊಯ್ಯಲಾರದ ಮಾರ್ಗೋಪಾಯಗಳತ್ತ ಒಲವು ತೋರಬಾರದು. ಹನ್ನೊಂದನೇ ಶತಮಾನದಲ್ಲಿ ಭಾರತಕ್ಕೆ ಬಂದಿದ್ದ ಇತಿಹಾಸಕಾರ ಅಲ್ಬರೂನಿಯ ಮಾತು ನನಗೆ ನೆನಪಿಗೆ ಬರುತ್ತದೆ. ಹಿಂದೂಗಳು ಇತರರ ದೃಷ್ಟಿಕೋನದತ್ತ ದೃಷ್ಟಿಯನ್ನು ಹಾಯಿಲೂ ಸಿದ್ಧರಿಲ್ಲ, ಮತ್ತು ಜೀವನದ ಎಲ್ಲ ರಂಗಗಳಲ್ಲಿಯೂ ತಮ್ಮ ಅಭಿಪ್ರಾಯವೇ ಕೊನೆಯದೆಂದು ಅವರು ಭಾವಿಸುತ್ತಾರೆ. ಹೀಗಾಗಿಯೇ, ಅವರ ಅವನತಿಯು ಆರಂಭವಾಗಿದೆ” – ಎಂದವನು ಹೇಳಿದ್ದಾನೆ.

ನಮ್ಮ ಸಹಜಮಾರ್ಗ ಪದ್ದತಿಯಲ್ಲಿ ಗುರುವು ಅಭ್ಯಾಸಿಯ ಪ್ರಗತಿಯ ಪಥದಲ್ಲಿರುವ ಅಡೆತಡೆಗಳನ್ನು ತೊಡೆದುಹಾಕುತ್ತಾನೆ. ಜೊತೆಯಲ್ಲಿಯೇ, ವನಲ್ಲಿ ದೈವೀ ದೀಪ್ತಿಯನ್ನು ತುಂಬುತ್ತಾನೆ. ಇದನ್ನು ಅಭ್ಯಾಸಿಯು ತಾನೇ ಸಾಧಿಸಹೊರಟರೆ, ಅದಕ್ಕೆ ನೂರಾರು ವರ್ಷಗಳೇ ಬೇಕಾಗುವವು, ಇಷ್ಟಾಗಿಯೂ ಬಹುತೇಕ ಅವನು ತನ್ನ ಸಂರಚನೆಯನ್ನು ಶುದ್ಧಿಗೊಳಿಸಿಕೊಳ್ಳಲು ವಿಫಲನಾದಾನು. ನಾವಿಲ್ಲಿ ಹೃದಯದ ಮೇಲಣ ಧ್ಯಾನದಿಂದ ಆರಂಭಿಸುತ್ತೇವೆ. ಹಾಗೂ ತೆಗೆದುಕೊಂಡ ಧೈಯವಸ್ತುವನ್ನು ಶಕ್ಯವಿದ್ದಷ್ಟು ಸೂಕ್ಷ್ಮದ್ದಾಗಿಟ್ಟುಕೊಳ್ಳುತ್ತೇವೆ. ಪ್ರಾಚೀನ ಪ್ರಮಾಣಗಳ ಆಧಾರದ ಮೇಲೆ, ಸ್ಥೂಲ ವಸ್ತುವನ್ನು (ಸಾಕಾರ ವಸ್ತುವನ್ನು) ಧೈಯವಾಗಿಟ್ಟುಕೊಂಡು ಧ್ಯಾನ ಮಾಡುವುದನ್ನು ಶ್ರೀ ರಾಮಾನುಜರು ನಿಷೇಧಿಸಿದ್ದಾರೆ.

ನಾವೆಲ್ಲರೂ ನಮ್ಮ ಪೂರ್ವಾಗ್ರಹಗಳನ್ನು ತ್ಯಜಿಸಿ, ನಮಗೆ ಮುಕ್ತಿಯ ಭರವಸೆಯನ್ನು ಕೊಡುವ ಸತ್ಪಥಕ್ಕೆ ಬರುವಂತಾಗಲೆಂದು ಮನಃಪೂರ್ವಕವಾಗಿ ಪ್ರಾರ್ಥಿಸುತ್ತೇನೆ.

***