(೧-೧೩ ಡಿಸೆಂಬರ ೧೯೬೮ ರಂದು ತಿರುಪತಿಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಮಾಡಿದ ಉದ್ಘಾಟನಾ ಸಂದೇಶ)

ಮಗುವು ಶ್ಚರ್ಯಪಡಲು ಆರಂಭಿಸಿದಾಗ, ನಿಜವಾಗಿಯೂ, ಅದು “ಚಿಂತನೆ’ ಮಾಡುವ ಪ್ರಕ್ರಿಯೆ ಶುರುವಾಗುತ್ತದೆ, ಮತ್ತು ಅಭಿವ್ಯಕ್ತಿಗೆ ಬೇಕಾದ ಪುಷ್ಟಿಯನ್ನು ಅದು ತಂದೆ-ತಾಯಿಗಳಿಂದ ಪಡೆಯುತ್ತದೆ. ವಿಚಾರಗಳು ಶೇಖರಣೆಗೊಂಡು ಶಕ್ತಿಯಾಗಿ ಬೆಳೆದಾಗ, ಅವು, ಅವುಗಳ ‘ಆಟ’ಕ್ಕೆ ‘ಕಾರ್ಯಯಂತ್ರ’ವಾಗಿ ಬಿಡುತ್ತದೆ. ಇದು, ಮಗುವು ಮಾತನಾಡಲು ಆರಂಭಿಸುವವರೆಗೆ ಕೆಲಕಾಲ ಮುಂದುವರಿಯುತ್ತದೆ. ಈಗ ಅಭಿವ್ಯಕ್ತಿಗೆ ಭಾಷೆ ದೊರೆಯಿತು, ಮತ್ತು ಮಗುವೇ ಸ್ವತಃ ತನ್ನ ಅಭಿವ್ಯಕ್ತಿಗೆ ಭಾಷೆಯನ್ನು ಹೊರಗೆಡವುತ್ತದೆ. ಮೆದುಳೇ ನಿಜವಾಗಿ ಅದರ ಕೇಂದ್ರ. ಹಾಗೂ, ಅದು, ಈಗಾಗಲೇ ಕೊಡಮಾಡಲ್ಪಟ್ಟ ‘ಸೂಚನೆ’ಗಳಿಗನುಗುಣವಾಗಿ ಕಾರ್ಯವೆಸಗುತ್ತದೆ. ಗ, ಮೊದಮೊದಲು ತಂದೆತಾಯಿಗಳ, ಮತ್ತು ಕೆಲಕಾಲಾನಂತರ ತನ್ನದೇ ಆದ ಬೇರೆ ಬೇರೆ ‘ಸೂಚನೆಗಳು, ವಿವಿಧ ರೀತಿಯಲ್ಲಿ ಟಿಸಿಲೊಡೆಯುವ ಒಂದು ಸಂಗ್ರಹವಾಗುತ್ತವೆ. ಈ ಕೇಂದ್ರವು ತನ್ನ ಕಾರ್ಯ ಪೂರ್ತಿಗನುಗುಣವಾಗಿ, ವಿವಿಧ ಕಾಲುವೆಗಳನ್ನು ಸೃಷ್ಟಿಸುತ್ತದೆ. ಬೇರೆ ಶಬ್ದಗಳಲ್ಲಿ ಹೇಳಬೇಕೆಂದರೆ, ಅದೊಂದು, ಮಧ್ಯದಲ್ಲಿ ತನ್ನ ಕೇಂದ್ರವನ್ನು ಹೊಂದಿದ ಜೇಡರ ಬಲೆಯಂತಾಗುತ್ತದೆ. ಶಕ್ತಿಯ ಪರಿಮಾಣದಿಂದ, ಕಾಲುವೆ (ತೋಡುಗಳು) ನಿರ್ಮಾಣವಾಗುವುವಲ್ಲದೆ, ಅವು ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತ ಹೋಗುತ್ತವೆ. ಅಂದರೆ, ಮಗುವು ಈ ಬಲೆಲ್ಲಿ ಸಿಕ್ಕಿಬಿದ್ದಂತಾಯಿತು. ಸೂಚನೆಗಳ ಮೂಲಕ ಅವನಲ್ಲಿ ಸೇರಿಕೊಂಡ ಪಾರ್ಥಿವ (ಭೌತಿಕ) ಶಕ್ತಿಯನ್ನು ಹೊರಗೆಳೆಯದ ಹೊರತು, ಸಾಂಗತ್ಯ (harmony) ದ ಕೊರತೆಯನ್ನು ನೀಗಲಾಗದು.

ಮನಶ್ಯಾಸ್ತ್ರವು (ಈ) ವಿಷಯಗಳ ಚಿತ್ರಣವನ್ನೇನೋ ನೀಡುತ್ತದೆ. ಆದರೆ, ಅವುಗಳನ್ನು ಸರಿಪಡಿಸುವ ಉಪಾಯಗಳು ಅಲ್ಲಿಲ್ಲ. ‘ಸಹಜಮಾರ್ಗ’ವೊಂದೇ ಅದರಲ್ಲಿ ಸ್ವಾಭಾವಿಕತೆಯನ್ನು ಪುನಃಸ್ಥಾಪಿಸಬಲ್ಲದು.

ಈಗ, ಅದನ್ನು ನೆರವೇರಿಸುವ ಬಗೆಯೇನು ? ಬೆಳೆದುನಿಂತ ಮಗುವು ತನಗೆ ಮಾಡಿಕೊಳ್ಳಬೇಕಾದುದೇನು ? ಮತ್ತು ಸಹಜಾವಸ್ಥೆಯನ್ನು ಅರ್ಥಾತ್, ದೈವಿಕತೆಯನ್ನು ತಂದುಕೊಳ್ಳಲು ಅವನಿಗೆ ಯಾವ ರೀತಿಯಲ್ಲಿ ನೆರವು ನೀಡಬೇಕಿದೆ ? ಮಗುವು ಯಾವ ರೀತಿಯಲ್ಲಿ ರೂಪಿಸಲ್ಪಡಬೇಕೆಂದರೆ, ಅವನ (ಮನಸ್ಸಿನಲ್ಲಿ) ತೋಡುಗಳುಂಟಾಗುವುದು ಕೊನೆಗೊಳ್ಳುವಂತೆ ಮಾಡಬೇಕು. ಅದರ ಬಗ್ಗೆ ಯೋಗ್ಯವಾದ ತಿಳಿವಳಿಕೆಯನ್ನು, ಮಾಹಿತಿಯನ್ನು ಕೊಡಬೇಕೆಂದು ಜನರು ಸೂಚಿಸುತ್ತಾರೆ. ಅದಕ್ಕೂ ಒಂದಿಷ್ಟು ಮಹತ್ವವಿದೆಯೆಂಬುದೇನೋ ಸರಿ. ಆದರೆ, ಅದೇ ರೋಗದಿಂದ ನರಳುತ್ತಿರುವವರು ಅದನ್ನು ಗುಣಪಡಿಸಲಾರರು. ಕೊಡಮಾಡುವ ತಿಳಿವಳಿಕೆಯ ಹಿಂದೆ ವಿಚಾರಶುದ್ದಿಯಿದ್ದ ಹೊರತು ಅದು ಸಾಧ್ಯವಿಲ್ಲ. ಅಂದರೆ, ಹೇಳುವವರ ಶಬ್ದಗಳು (ಮಾತುಗಳು) ಇಚ್ಚಿತ ಕಾರ್ಯವನ್ನೆಸಗುವ ಶಕ್ತಿಯಿಂದ ಪರಿಪ್ಲತವಾಗಿರಬೇಕು.

ಅಂದರೆ, ಶಿಕ್ಷಕನು (ಗುರುವು) ಮೊತ್ತಮೊದಲು ಹಳೆಯ ಸೌಧವನ್ನು ನೆಲಸಮ ಮಾಡಿ, ನಂತರ ಇಟ್ಟಿಗೆ ಗಾರೆಗಳಿಲ್ಲದ ಹೊಸ ಕಟ್ಟಡವನ್ನು ಕಟ್ಟಿ ನಿಲ್ಲಿಸಬೇಕು. ಅಂಥ ಸಂದರ್ಭದಲ್ಲಿ ಬೆಳೆದು ನಿಂತ ಮಗುವಿಗೆ ಕೊಡಬೇಕಾದ ಸಹಾಯ ಇದೇ. ಈಗ ಬರುವುದು, ಸಹಜಮಾರ್ಗದಲ್ಲಿ ಪ್ರಶಿಕ್ಷಕರು ಮಾಡುವ ಕಾರ್ಯ : ಮೆದುಳಿನ ಕೋಶಗಳು, ಪ್ರತಿಯೊಂದು ರೀತಿಯ ಆಲೋಚನೆಗಳ ಭಂಡಾರವಾಗಿವೆ. ಮತ್ತು ಅವುಗಳ ನಾಭಿಯು ಮಧ್ಯದಲ್ಲಿದೆ. ಅವರು (ಪ್ರಶಿಕಕರು / ಗುರುಗಳು) ನಾಭಿಯಲ್ಲಿ ನಿರ್ಮಿತವಾದ ಸಂಸ್ಕಾರಗಳನ್ನು. ಹೊರಹಾಕುತ್ತಾರೆ, ಅದರಿಂದಾಗಿ, ಮನಸ್ಸಿನಲ್ಲಿ ನಿರ್ಮಿತವಾದ ತೋಡುಗಳಾಗಲಿ, ಅವುಗಳ ಕವಲುಗಳಾಗಲೀ ಪುಷ್ಟಿ ಸಿಗದಂತಾಗುತ್ತವೆ. ನಾವು ಕೇಂದ್ರವನ್ನು ಸ್ಪರ್ಶಿಸಿದಾಗ ನಡೆಯುವ ಸಹಜ ಕ್ರಿಯೆ ಇದು. ತದನಂತರ ನಾವು ಮಾಡಬೇಕಾದುದೇನು ? ತೋಡುಗಳೇನೋ ಅಳಿದವು, ಆದರೂ ತುಸುಮಟ್ಟಿಗೆ ಅವುಗಳ `ಪಸೆ’ ಇದೆ, ಯಾಕೆಂದರೆ ಆಲೋಚನಾ ಪ್ರವಾಹದ ನೀರು ಸಾಕಷ್ಟು ಕಾಲ ಅಲ್ಲಿ ಹರಿಯುತ್ತಿತ್ತು. ಅದಕ್ಕೂ ಉಪಾಯ ಅಂತೆಯೇ ಇದೆ. ಅವುಗಳನ್ನು ಸಮಸ್ಥಿತಿಗೆ ತರುವ ಬದಲಾಗಿ, ಆ ಕಾಲುವೆಗಳನ್ನು ಭಗ್ನಗೊಳಿಸಿ, ಸಮತಳವನ್ನಾಗಿ ಮಾಡಬೇಕು.

ಇದಾದ ನಂತರ, ಇನ್ನೊಂದು ಸಂಗತಿ ಘಟಿಸುತ್ತದೆ. ಸಂಸ್ಕಾರಗಳು ಕೇಂದ್ರವನ್ನು ತಲುಪಿದಾಗ ತಮ್ಮ ಇರುವಿಕೆಗೋಸ್ಕರ, ಒಂದು ರೀತಿಯ ವಿದ್ಯುತ್ತನ್ನು ಹುಟ್ಟು ಹಾಕಿಕೊಳ್ಳುತ್ತವೆ. ಅಲ್ಲಿ ವಿಚಾರ (ಆಲೋಚನೆಗಳೂ, ಮತ್ತು ಅಂಥ ವಿಚಾರಗಳನ್ನು ಸ್ವಾಗತಿಸುವ ಅಭ್ಯಾಸವೂ ಇರುವುವು- ಅದಕ್ಕೆ ಆ ಮಗು ಅಥವಾ ವ್ಯಕ್ತಿಯೇ ಕಾರಣಕರ್ತ. ಈಗ ಆ ವಿಚಾರಗಳನ್ನು ಬರಮಾಡಿಕೊಳ್ಳುವ  ಅಭ್ಯಾಸವನ್ನೂ ಅಳಿಸಿಹಾಕಬೇಕು. ಈ ಕೆಲಸವಾಯಿತೆಂದರೆ ಸೌಧದ ಎಲ್ಲ ಗೋಡೆಗಳೂ ಕುಸಿದಂತಾಯಿತು. ಈಗ ಬರುವುದು ದೈವಿಕತೆಯ ಪಾಳಿ, ಯಾಕೆಂದರೆ, ಅದರ ಕಾರ್ಯಕ್ಕೆ ಈಗ ಕ್ಷೇತ್ರವು ಅಣಿಗೊಂಡಿದೆ. ಎಲ್ಲವೂ ಬಿದ್ದು ಹೋದನಂತರ, ನಂತರ ಬರುವುದಾದರೂ ಏನು ಎಂದು ಜನರು ಕೇಳಬಹುದು- ಅದು ‘ಶುದ್ದತೆ’ಯಲ್ಲದೇ ಬೇರಲ್ಲ. ಅದನ್ನೇ ಸತ್ಯ (ಪರತತ್ವ)ವೆಂದು ವ್ಯಾಖ್ಯಾನಿಸಲಾಗಿದೆ.

‘ಸಹಜಮಾರ್ಗ’ ಪದ್ದತಿಯಲ್ಲಿ, ಈಗ, ‘ದೈವೀಕರಣ’ವೆಂಬ ಹೊಸದೊಂದು ಅಧ್ಯಾಯ ಆರಂಭವಾಗುತ್ತದೆ. ಅದು ಆಸುರೀಕರಣವನ್ನು ನಮ್ಮ ಸಂರಚನೆಯಿಂದ ದೂರ ಮಾಡುವ ದೈವೀಕರಣ. ಈ ಕೆಲಸವನ್ನು ನಾವು ನಮ್ಮ ಅಸ್ತಿತ್ವದ ಪ್ರತಿಯೊಂದು ಕಣದ ಕೇಂದ್ರದ ಮೇಲೂ ಮಾಡಬೇಕಿದೆ. ಶರೀರದ ಪ್ರತಿಯೊಂದು ಅಣು-ಅಣುವಿನ ಮೇಲೂ ಕಾರ್ಯವು ಮುಂದುವರಿಯುತ್ತದೆಯೆಂದು ನಾನು ಹೇಳಿದರೆ ಜನರು ನಕ್ಕಾರು. ನಾವು ಅನುಸರಿಸುವ ಕಾರ್ಯ ವಿಧಾನವನ್ನು ನಾನಿಲ್ಲಿ ಸಂಕ್ಷಿಪ್ತದಲ್ಲಿ ಹೇಳಿದ್ದೇನೆ. ಅಂಥ ವ್ಯಕ್ತಿಯನ್ನು ರೂಪಣಗೊಳಿಸುವುದು ಸಹಜಮಾರ್ಗವೊಂದೇ ಸೈ.

***