(೧೮ನೇಡಿಸೆಂಬರ೧೯೬೮ ರಂದು ಬೆಂಗಳೂರಿನಲ್ಲಿನೀಡಿದ ಸಂದೇಶ)
ನಾನು ನಿಮ್ಮೆಲ್ಲರೊಡನೆ ತುಂಬ ಸಂತೋಷದಿಂದಿದ್ದೇನೆ. ನನ್ನೆಲ್ಲ ಸಹ ಬಾಂಧವರು ಒಂದೆಡೆ ಸೇರಿದರೆ ಅದು ನನಗೊಂದು ದೇವಾಲಯವಾಗುತ್ತದೆ. ಮತ್ತು ತಮ್ಮ ಹೃದಯಗಳನ್ನೇ ದೇವಾಲಯವನ್ನಾಗಿ ಮಾಡಿಕೊಳ್ಳುವುದು ಅವರ ಕರ್ತವ್ಯ. ನೀವೆಲ್ಲರೂ ಧ್ಯಾನಾಭ್ಯಾಸವನ್ನು ನಿರ್ದೇಶಿತವಾದಂತೆ ಮಾಡುತ್ತಿದ್ದೀರಿ, ಅದರಿಂದ ನನಗೆ ತುಂಬಾ ಸಂತೋಷವಾಗಿದೆ. ಆದರೆ ಧ್ಯಾನದ ನಂತರ ಅದರೊಂದಿಗೆ ಸಂಪರ್ಕ ಚ್ಯುತರಾಗಿ ಉಳಿಯುವವರೂ ಕೆಲವರಿದ್ದಾರೆ. ಅವರು ಭಗವಂತನ ಕಲ್ಪನೆಯನ್ನು ಮರೆತು, ದಿನವಿಡೀ ತಮ್ಮದೇ ವಿಷಯಗಳ ಸ್ಮರಣೆಯಲ್ಲಿ ತೊಡಗಿರುತ್ತಾರೆ. ದೈವೀ ಉದ್ದೇಶಕ್ಕೆ ತಕ್ಕುದಾಗಿ ತಮ್ಮನ್ನು ರೂಪಿಸಿ ಕೊಳ್ಳುವ ಕೆಲಸ ಅವರಿಗೇ ಸೇರಿದ್ದು. ಆರಂಭದಲ್ಲಿ ಅವರು “ಈ ಮಿಷನ್ನು ನಮ್ಮದು”, ಭಗವಂತನು ನಮ್ಮವನು ಎಂದು ಪರಿಗಣಿಸಿದರೆ, ಆ ಭಗವಂತನ ಸ್ಮರಣೆಯಲ್ಲಿ ಅವರಿಗೆ ತುಂಬ ಸಹಾಯವಾಗುವುದು.
***