(೧೯೦ ಜನವರಿಯಲ್ಲಿ ನೀಡಿದ ಸಂದೇಶ)

ನಾವು ಈ ಜಗತ್ತಿನಲ್ಲಿ ಪ್ರಪ್ರಥಮ ಬಾರಿಗೆ ಜನ್ಮ ತಳೆದುಬಂದಾಗ ಪರಿಶುದ್ಧರಾಗಿದ್ದೆವು ; ಯಾಕೆಂದರೆ ನಾವು ಯಾವ ಮೂಲ’ದಿಂದ ಇಳಿದುಬಂದೆವೋ ಅದು ‘ಶುದ್ಧತೆ’ಯೇ ಆಗಿದೆ. ಕಾಲ ಗತಿಸಿದಂತೆ ನಮ್ಮ ಅಸಂಖ್ಯ ಜನ್ಮಗಳಲ್ಲಿ, ನಮ್ಮ ಕರ್ಮಗಳ ಮೂಲಕ ನಾವು ನಮ್ಮ ಸುತ್ತಲೂ ವಿವಿಧ ಬಗೆಯ ಸ್ಥೂಲತೆಗಳನ್ನು ಕಲೆಹಾಕಿಕೊಂಡಿದ್ದೇವೆ.

ಈ ನಮ್ಮ ಪ್ರಸ್ತುತ ಬಾಳಿನಲ್ಲಿಯೂ ಕೂಡ, ನಾವು ಕರ್ಮಗಳನ್ನು ಗೈಯುತ್ತಲೇ ಇದ್ದೇವೆ. ಪರಿಣಾಮವಾಗಿ, ಈ ಕರ್ಮಗಳೇ ನಿಧಾನವಾಗಿ ಮೂಲಭೂತ ಶುದ್ಧತೆಯ ಸುತ್ತಲೂ ಪದರ ಪದರವಾಗಿ ಸ್ಥೂಲತೆಯನ್ನು ಉಂಟುಮಾಡುತ್ತವೆ. ಇದರಿಂದಾಗಿ ಕಾಲಕ್ರಮೇಣ, ನಾವು, ತನ್ನ ಸುತ್ತಲೂ ಗೂಡನ್ನು ಹೆಣೆದುಕೊಂಡ ರೇಷ್ಮೆ ಹುಳುವಿನಂತೆ ಆಗುತ್ತೇವೆ. ಮಾನವನು ಪ್ರಾಪಂಚಿಕ ಜೀವನದ ಈ ಹಂತವನ್ನು ತಲುಪಿದಾಗ, ಅವನ ಬದುಕು, ಕರ್ಮ ಮತ್ತು ಅದರ ಪರಿಣಾಮಗಳೆರಡರಲ್ಲಿಯೂ ಕೃತ್ರಿಮವೂ, ಸ್ಥೂಲವೂ ಆಗಿರುವುದು. ಮೂಲದ ಶುದ್ಧತೆಯು ಕುಂದಿ, ಕಂಡೂ ಕಾಣದಷ್ಟು ಮಂದ ಮಿಣುಕಾಗಿ ಕ್ಷೀಣಿಸಿಹೋಗುತ್ತದೆ. ತನ್ನ ಮೂಲದ ಅಥವಾ ನಿಜಧಾಮದ ನೆನಪು ಈಗ ಮಾಸಿಹೋಗಿದೆ. ಮತ್ತು ಒಂದಾದಮೇಲೊಂದು ಕರ್ಮಗಳು ಜರುಗಿದಂತೆ, ಅವನ ಸುತ್ತಣ ಚಿಪ್ಪು ಮತ್ತೂ ಮತ್ತೂ ಗಟ್ಟಿಯಾಗುತ್ತ ಹೋಗುತ್ತದೆ. ಹೀಗೆ ತನ್ನ ಮೂಲ ಸ್ಥಾನದ ನೆನಪು ಕ್ಷೀಣಿಸುತ್ತ ಹೋಗಿ, ಬಹುಶಃ ಸಂಪೂರ್ಣ ಮರೆತೇ ಹೋಗುತ್ತದೆ.

ಈಗ, ನಮ್ಮ ಸದ್ಯದ ಬದುಕಿನ ಬಗ್ಗೆ (ಅಸ್ತಿತ್ವದ ಸ್ಥಿತಿಯ) ಬಗ್ಗೆ ಜಿಗುಪ್ಪೆ ಹೊಂದುವ ಸ್ಥಿತಿಯನ್ನು ನಾವು ಲುಪಿದ್ದೇವೆ ; ಹಾಗಿದ್ದರೂ, ನಮ್ಮ “ನಿಜವಾದ ಅಸ್ತಿತ್ವ’ವಾದ, ಶುದ್ಧವೂ, ಆಹ್ಲಾದಕರವೂ ಆದ ಆ ಮೂಲಸ್ಥಿತಿಯ ನೆನಪು

ನಮ್ಮ ನೈಜ ಅಸ್ತಿತ್ವ ನಮಗಿಲ್ಲ. ಇದೇಕೆಂದರೆ, ನಾವು ‘ಪರ’ವನ್ನು ಬಹುತೇಕ ಸಂಪೂರ್ಣವಾಗಿ ಮರೆತು, ಈ ಇಹದ ಅಸ್ತಿತ್ವದ ಬದುಕಿಗೆ ಒಗ್ಗಿಕೊಂಡುಬಿಟ್ಟಿದ್ದೇವೆ.

ಈ ಅಸ್ತಿತ್ವದಿಂದ ಆಚೆಗೆ ದಾಟಿಹೋಗುವುದಕ್ಕೆ ಏಕೈಕ ಮಾರ್ಗವೆಂದರೆ, ಮತ್ತೆ ನಮ್ಮ ಮೂಲ ನೆಲೆಗೆ ಹಿಂದಿರುಗುವುದು. ನಮ್ಮನ್ನು ಕಟ್ಟಿ ಹಾಕಿರುವ ಬಂಧನಗಳಿಂದ ಬಿಡಿಸಿಕೊಂಡು, ತಿರುಗಿ ನಮ್ಮ ಮೂಲನೆಲೆಗೆ ದಾರಿಯನ್ನು ಕಂಡುಕೊಳ್ಳುವುದು, ಮೂಲಸ್ಥಾನದೊಂದಿಗೆ ಸಂಬಂಧವನ್ನು ಸ್ಥಾಪಿಸಿಕೊಂಡಿರುವ, ಹಾಗೂ, ಅದರಿಂದ ತನ್ನ ಪ್ರಾಣಾಹುತಿ ಶಕ್ತಿಯ ಮೂಲಕ ಅತ್ಯುನ್ನತ ಪ್ರಜ್ಞೆಯನ್ನು ಸಂವಹನಗೊಳಿಸಿ, ನಮ್ಮನ್ನು ಬಂಧಿಸಿದ ಎಲ್ಲ (ಗ್ರಂಥಿ) ಗಂಟುಗಳನ್ನೂ ಬಿಡಿಸಬಲ್ಲ ಮಾರ್ಗದರ್ಶಿಯೋರ್ವನ ಸಹಾಯವಿಲ್ಲದೆ  ಸಾಧ್ಯವಾಗದು.

ಪ್ರಾಣಾಹುತಿಯ ಪ್ರಪ್ರಥಮ ಮತ್ತು ತತ್‌ಕ್ಷಣದ ಪರಿಣಾಮವೆಂದರೆ, ಶಬ್ದಗಳಲ್ಲಿ ಬಣ್ಣಿಸಲಾಗದಂತಹ ಶಾಂತಿ ಹಾಗೂ ನೀರವತೆಯು ಉಂಟಾಗುವುದು. ಧ್ಯಾನದಲ್ಲಿಯ ಈ ಅನುಭವವು ನಾವು ಹಿಂದಿರುಗಲೇ ಬೇಕಾದ ಮೂಲನೆಲೆಯ ನೆನಪನ್ನು ಮೆಲ್ಲಗೆ ಮಾಡಿಕೊಡುವುದು. ಮತ್ತು ಪದೇ ಪದೇ ಉಂಟಾಗುವ ಈ ಅನುಭವವು ನಮ್ಮ ಉಗಮದ ಮೂಲನೆಲೆಯ ನೆನಪನ್ನು ಬಲಪಡಿಸಿ, ಐಹಿಕ ಜೀವನದ ಸಂಕೋಲೆಗಳನ್ನು ಸಡಿಲುಗೊಳಿಸುತ್ತದೆ. ಪ್ರಾಣಾಹುತಿಯು ನಮ್ಮನ್ನು ಆ ನೆನಪಿನ ಮತ್ತೂ ಮತ್ತೂ ಳದ ಹಂಗಳಿಗೆ ಒಯ್ದಂತೆಲ್ಲ, ಮೂಲದತ್ತಣ ನಮ್ಮ ಪ್ರಯಾಣವು ಭದ್ರವಾಗಿ ಸ್ಥಿರಗೊಳ್ಳುತ್ತದೆ.

ನೀವೆಲ್ಲರೂ ಈ ಅನುಭವದಿಂದ ಅನುಗ್ರಹೀತರಾಗಿ, ಇಂದು ಬೆಳಗುತ್ತಿರುವ ಬೆಳಕನ್ನು ಕಾಣುವಂತಾಗಲೆಂದು ಪ್ರಾರ್ಥಿಸುತ್ತೇನೆ.