1. ಮನುಷ್ಯನು ತನ್ನ ಅಭ್ಯಾಸದ ಗುಲಾಮನಾಗಿದ್ದರೆ ಅವನುವಿಗ್ರಹಾರಾಧಕನಾಗುತ್ತಾನೆ. ನಾವು ಏನನ್ನಾದರೂ ಉಹಿಸಿ ಅದು ಅಸ್ತಿತ್ವದಲ್ಲಿಲ್ಲದಿದ್ದರೆಅದು ಕೂಡ ವಿಗ್ರಹಾರಾಧನೆ. ಒಬ್ಬ ಮನುಷ್ಯನು ತನ್ನ ಕುಟುಂಬ, ಮಕ್ಕಳನ್ನು ಪ್ರೀತಿಸುತ್ತಿದ್ದರೆ, ಅವನು ಕೂಡ ವಿಗ್ರಹಾರಾಧಕ. ಭೌತಿಕ ವಸ್ತುಗಳ ಬಗ್ಗೆ ಯಾವುದೇ ಬಾಂಧವ್ಯವು ವಿಗ್ರಹಾರಾಧನೆ. ಮನಸ್ಸಿನಲ್ಲಿ ವಿಚಾರದ ಯಾವುದೇ ಮುದ್ರಣವಾಗದಿದ್ದರೆ ಆಗ ಅದು ಸಂಪೂರ್ಣವಾಗಿ ಮುಕ್ತವಾಗಿದೆ ಎನ್ನಬಹುದು. ಯಾವುದೇ ವಿಚಾರ ಬಂದರೂ ಅದು ತಾನಾಗಿಯೇ ಹೊರದೊಡಲ್ಪಡುವುದು. ಆದರೆ ಇದು ದೀರ್ಘಾವಧಿಯ ನಂತರ ಆಗುವಂತಹುದು.. ನಾವು ಘನ ವಸ್ತುಗಳ ಆರಾಧನೆಯನ್ನು ತಪ್ಪಿಸಬೇಕು ಇದರಿಂದ ನಾವು ಮೇಲಕ್ಕೇರಲು ಸಾಧ್ಯವಾಗುತ್ತದೆ. ಕೆಲವರು ಸಾಕ್ಷಾತ್ಕಾರದ ಪ್ರಾಯೋಗಿಕ ಸುಳಿವನ್ನು ನೀಡಿದ್ದರೂ ಸಹ, ಕಲ್ಲಿನ ಪ್ರಕಾರದ ವಿಗ್ರಹಾರಾಧನೆಯನ್ನು ಬಿಡುವುದಿಲ್ಲ.
  2. ಯಾವುವದಾದರೊಂದು ಪದ್ಧತಿಯ ಅಥವಾ ಪೂಜಾ ಸ್ವರೂಪದ ನಿಜವಾದ ಮಹತ್ವವನ್ನು ಚರಮಗುರಿಯನ್ನು ಕುರಿತು ನಿಚ್ಚಳವಾದ ಕಲ್ಪನೆಯಿಲ್ಲದೆ ನಾವು ಅದಕ್ಕೆ ಅಂಟಿಕೊಂಡಿದ್ದಾದರೆ ಬಲು ದೊಡ್ಡ ತಪ್ಪುನ್ನು ಮಾಡಿದಂತೆ.
  3. ಸ್ಥೂಲರೂಪಗಳ ಪೂಜೆಯಿಂದ ಉಂಟಾದ ಮನಸ್ಸಿನ ಭಾರ ಅಥವಾ ಆಂತರಿಕ ಜಡತೆಯು ನಮ್ಮ ಆಧ್ಯಾತ್ಮಿಕ ಪ್ರಗತಿಯಲ್ಲಿ ಬಾಧಕವಾಗಿದ್ದು ಅದನ್ನು ದೂರಮಾಡಬೇಕು. ಹೆಚ್ಚು ಹೆಚ್ಚು ಉಗ್ರತೆಯಿಂದ ಅದನ್ನು ಪೂಷಿಸುತ್ತ ಹೋದುದಾದರೆ ಅವರು ಜಡತೆಯ ಹಾಗೂ ವಂಚನೆಯ ಮುಳ್ಳುಕಂಟಿಯಲ್ಲಿ ಸಿಕ್ಕಿಬಿದ್ದು ಶಾಶ್ವತಾನಂದದ ಕ್ಷೇತ್ರದಿಂದ ಬಹುದೂರ ಉಳಿಯುವರು.
  4. ನಾನು ಮೂರ್ತಿ ಪೂಜೆಯನ್ನು ಕೈಕೊಂಡೆ. ಅದು ನನ್ನನು ಮುಂದಕ್ಕೆ ಕೊಂಡೊಯುವ ಬದಲು ಹಿಂದಕ್ಕೆಳೆಯುತ್ತಿರುವಂತೆ ಕಂಡುಬಂದಿತು. ಆದ್ದರಿಂದ ಅದನ್ನು ಸಹ ಬಿಟ್ಟು ಕೊಡಬೇಕಾಯಿತು.
  5. ನಾನು ಕೂಡ್ರುವ ಸ್ಥಳದಲ್ಲಿ ನನ್ನ ಭಾವಚಿತ್ರವನ್ನು ಇಡಬೇಡಿ ನನ್ನ ಭಾವಚಿತ್ರವನ್ನು ತೆಗೆದುಕೊಳ್ಳಲು ಜನರು ಪ್ರೇರೇಪಿಸಲ್ಪಡುತ್ತಿದ್ದರು ಈಗ ಭಾವಚಿತ್ರದ ಆರಾಧನೆ ಪ್ರಾರಂಭವಾಯಿತು
  6. ಯಾವಾಗ ನಾಗರೀಕ ಸಮಾಜದ ಉದಯವಾಯಿತೋ ಆಗ ವಿವಿಧ ರೀತಿಯ ವರ್ಗಗಳು ಚಿಮ್ಮಿ ಹೊರಸೂಸಲ್ಪಟ್ಟವು ಆಗ ಜಾತಿ ಪದ್ಧತಿಗಳಿರಲಿಲ್ಲ ಬೇರೆಬೇರೆ ರೀತಿಯಜನರ ವರ್ಗೀಕರಣವಿತ್ತು.
  7. ಸಾರಭೂತವಾದ ನೈಜಭಾವವನ್ನು ಲಕ್ಷಿಸದೆ ಸಮರ್ಪಿಸುವ ಪ್ರಾರ್ಥನೆ, ಸ್ತೋತ್ರಗಳು ಸಾಮಾನ್ಯವಾಗಿ ಮಿಥ್ಯಾ ಪ್ರಶಂಸೆಯಾಗಿ ಪರಿಣಮಿಸುತ್ತವೆ.
  8. ಭಗವತ್ಗೀತೆಯಲ್ಲಿ ಹೇಳುವಂತೆ ಮನುಷ್ಯನು ಆತನನ್ನು ಯಾವ ರೂಪದಲ್ಲಿ ಆರಾಧಿಸುತ್ತಾನೋ ಆ ರೂಪದಲ್ಲಿ ಪಡೆಯುತ್ತಾನೆ. ಆದರೆ ಸಾಮಾನ್ಯ ತೊಂದರೆ ಎಂದರೆ ಜನರು ಆತನನ್ನು ಯಾವುದೇ ರೂಪದಲ್ಲಿ ಪೂಜಿಸುವುದಿಲ್ಲ, ಬದಲಿಗೆ ಅವರು ಕೇವಲ ರೂಪವನ್ನು ಮಾತ್ರ ಪೂಜಿಸುತ್ತಾರೆ, ಆ ಮೂಲಕ ಮೂಲದಲ್ಲಿನ ವಾಸ್ತವವು ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ. ಇದು ಅತ್ಯಂತ ದೊಡ್ಡ ಪ್ರಮಾದ.