(ಡಿಸೆಂಬರ ೮, ೧೯೭೧ ಶಹಜಹಾನಪುರದಲ್ಲಿ ರೆಕಾರ್ಡ್ಮಾಡಿದ್ದು.)

“ಮಹಾತ್ಮರು ಜನ್ಮವೆತ್ತಿ ಬರುವುದು ಆಕಸ್ಮಿಕವಾಗಿ ಅಲ್ಲ. ಅವರು ಜನ್ಮ ತಾಳುವುದು, ಜಗತ್ತು ಕಾತರದಿಂದ ನಿರೀಕ್ಷಿಸಿ ಕಾಯುತ್ತಿದ್ದಾಗ” – ಹೀಗೆಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಸಂತರು ಆಗಮಿಸುತ್ತಾರೆ, ಮತ್ತು ತಮ್ಮ ಕಾರ್ಯವನ್ನು ಪೂರೈಸಿ ಹಿಂದಿರುಗುತ್ತಾರೆ, – ಹೀಗಿದೆ ಪ್ರಕೃತಿಯ ವ್ಯವಸ್ಥೆ. ಎಂದಿಗೂ ಆಧ್ಯಾತ್ಮಿಕತೆಯ ತವರುಮನೆಯೆನಿಸಿದ್ದ ಭರತಖಂಡವು ಸನಾತನ ಯೋಗಪದ್ದತಿಯನ್ನು ಸಂಪೂರ್ಣವಾಗಿ ಮರೆತು, ಅಂಧಕಾರದಲ್ಲಿ ತಡಕಾಡುತ್ತಿತ್ತು.

ಜಡಭೌತಿಕವಾದವು, ಆಧ್ಯಾತ್ಮಿಕತೆಯನ್ನು ಸ್ಥಾನಪಲ್ಲಟಗೊಳಿಸಿತ್ತು. ಅಜ್ಞಾನದಕಾರುಗಿಲುಎಲ್ಲೆಡೆಗೆ ಆವರಿಸಿತ್ತು. ‘ಯೌಗಿಕಪ್ರಾಣಾಹುತಿ’ಯು ನಮಗೇ ಅಪರಿಚಿತವೆನಿಸಿಬಿಟ್ಟಿತ್ತು. ಆಧ್ಯಾತ್ಮಿಕತೆಯು ಹತಾಶೆಯಿಂದ ತತ್ತರಿಸುತ್ತಿರುವ ಇಂಥಸ್ಥಿತಿಯಲ್ಲಿ, ಎಲ್ಲವನ್ನೂ ಸರಿಪಡಿಸಿ, ಮಾನವತೆಯನ್ನು ಮೇಲೆತ್ತಲೋಸುಗ ಓರ್ವ ಮಹಾವ್ಯಕ್ತಿಯ ತುರ್ತು ಆವಶ್ಯಕತೆಯಿತ್ತು.

ಇಂಥ ಸಮಯದಲ್ಲಿ, ಪ್ರಕೃತಿಯ ಶಕ್ತಿಯು ಮಾನವ ರೂಪ ಧರಿಸಿ, ಉತ್ತರಪ್ರದೇಶದ ಫತೇಗಡದ, ಸಮರ್ಥಸದ್ಗುರು ಮಹಾತ್ಮಾ ಶ್ರೀರಾಮಚಂದ್ರಜಿಯವರ ರೂಪದಲ್ಲಿ ಅವತರಿಸಿತು. ಈ ಆಧ್ಯಾತ್ಮಿಕ ಪ್ರತಿಭೆಯ ಉದಯವು ೧೮೭೩ನೇ ಫೆ. ೨ರಂದು, ಬಸಂತಪಂಚಮಿಯ ದಿನ, ಒಂದು ಗೌರವಾನ್ವಿತ ಕುಟುಂಬದಲ್ಲಿ ಆಯಿತು. ಆಧ್ಯಾತ್ಮಿಕತೆಯ ವಿಸ್ತಾರವಾದ ಕ್ಷೇತ್ರವನ್ನು ಅವರು ಪರಿಶೋಧಿಸಿದರಲ್ಲದೆ, ಯೋಗಪದ್ದತಿಯನ್ನು ಪುನಾರಚನೆಗೈದು ಬೆಳೆಸಿದರು. ಇದರ ಫಲವಾಗಿ, ಎಲ್ಲ ಮಾನವಜೀವಿಗಳಿಗೂ ಅದು ಸುಲಭಗ್ರಹಿಕೆಗೆ ಎಟುಕುವಂತಾದುದಲ್ಲದೆ, ಬಹಳಷ್ಟು ಸಮಯದ ಉಳಿತಾಯವಾಗುವಂತಾಯಿತು.

ಹೃದಯದ ಕಣ್ಣಿನಿಂದ, (ಅಂತರ್ದೃಷ್ಟಿಯಿಂದ) ಜಗತ್ತು ಈ ಪದ್ಧತಿಯನ್ನು ಈಕ್ಷಿಸಿದ್ದಾದರೆ, ಆಶ್ಚರ್ಯಚಕಿತ ಗೊಂಡೀತು. ಸಾಕ್ಷಾತ್ಕಾರವು ಈಗ ಅತಿ ಸುಲಭದ ಮಾತಾಯಿತು. ಅದು ಅತ್ಯಂತ ಕಠಿಣವೆಂಬ ಹಳೆಯಕಲ್ಪನೆಯು ದೂರವಾಗಿ, ಕಣ್ಮರೆಯಾಯಿತು. ಧ್ಯಾತ್ಮಿಕ ತರಬೇತಿಯ ಮುಖ್ಯಅಂಗವೇ “ಪ್ರಾಣಾಹುತಿ”. – ಅದು ಕಾರ್ಯವನ್ನು ಸುಲಭಗೊಳಿಸುವುದು. “ಸಹಜಮಾರ್ಗ’ವೆಂದು ಕರೆಯಲಾದ ಈ ಪದ್ದತಿಯಲ್ಲಿ ಅದನ್ನು ಅಳವಡಿಸಲಾಗಿದೆ. ನಾವು ಹೃಯದ ಮೇಲೆ ಧ್ಯಾನ ಮಾಡುವುದರಿಂದ ಆರಂಭಿಸುತ್ತೇವೆ- ಹೃದಯವು ಮಾನವ ಶರೀರದ ಕೇಂದ್ರ ಬಿಂದು, “ಯಾತ್ರೆ’ಯು ಆರಂಭಗೊಂಡಾಗ, ಅನುಭವಗಳು ಬರತೊಡಗುತ್ತವೆ. ಬದಲಾವಣೆಗಳು ಮತ್ತು ಅವುಗಳ ಅನುಭವಗಳು ಏನಿರುವುವೆಂಬುದನ್ನು “ಅನಂತದೆಡೆಗೆ” ಎಂಬ ಪುಸ್ತಕದಲ್ಲಿ ಕೊಡಲಾಗಿದೆ. ನಾನದನ್ನು ಪುನರುಚ್ಚರಿಸುವುದಿಲ್ಲ. ಪ್ರತಿಯೊಂದು ಬಿಂದುವಿನಲ್ಲಿಯೂ ನಾಲ್ಕು ಅವಸ್ಥೆಗಳು ಅನುಭವಕ್ಕೆ ಬರುತ್ತವೆ. ನಾವು ಮುಂದುವರಿದಂತೆಲ್ಲ, ಅವು ಹೆಚ್ಚು ಹೆಚ್ಚು ಸೂಕ್ಷ್ಮ ತರವಾಗುತ್ತ ಹೋಗುತ್ತವೆ ; ಹಾಗೂ, ನಾವು ಅಸ್ತಿತ್ವದ ಶಿಖರ ಬಿಂದುವನ್ನು ತಲುಪುವವರೆಗೂ ಅವು ಮುಂದುವರಿಯುತ್ತವೆ.

ಪಿಂಡ ದೇಶದ ಎಲ್ಲ ಬಿಂದುಗಳ ಯಾತ್ರೆಯು ಮುಗಿದ ತರುವಾಯ ನಾವು ಬ್ರಹ್ಮಾಂಡಮಂಡಲವನ್ನು ತಲುಪುವೆವು. ಇದು ವೈಶ್ವಿಕ (Cosmic) ಪ್ರದೇಶ. ನಿಸರ್ಗದ ಎಲ್ಲ ಶಕ್ತಿಗಳೂಇಲ್ಲಿಕಾರ್ಯನಿರತವಾಗಿವೆ. ಮತ್ತು ನಾವು ಅವುಗಳನ್ನು ಹೀರಿಕೊಳ್ಳಲು ಪ್ರಯತ್ನಿಸುವೆವು. ಇದು ವಿಸ್ತಾರವಾದ ಪ್ರದೇಶವೆಂಬುದೇನೋ ನಿಃಸಂಶಯ. ಆದರೆ ಇದರ ನಂತರ ಬರುವ ವಲಯಗಳು ಇನ್ನೂ ವಿಸ್ತಾರವುಳ್ಳವು. ಪ್ರತಿಯೊಂದು ಬಿಂದುವೂ ಒಂದು ವಿಶಾಲಖಂಡವೇ ಆಗಿದೆ. ನಾವು ಆ ಖಂಡಗಳನ್ನು ಕ್ರಮಿಸಲು ಪ್ರಾರಂಭಿಸಿದಾಗ ಅವುಗಳ ಅಂದವು ಮತ್ತೂ ಹೆಚ್ಚು ಅನುಭವಕ್ಕೆ ಬರುವುದು. ತದ ನಂತರ ನಾವು ಪರಬ್ರಹ್ಮಾಂಡ ಮಂಡಲವನ್ನು ಪ್ರವೇಶಿಸುವೆವು. ನಂತರ ಬರುವುದು ಪ್ರಪನ್ನ” ಸ್ಥಿತಿ. ಅಲ್ಲಿ ನಾವು ಭಕ್ತಿಯ ಪರಾಕಾಷ್ಠೆಯನ್ನೂ ಮತ್ತು ಭಗವಂತನ ಮಹಾತ್ಮವನ್ನೂ ಅನುಭವಿಸುತ್ತೇವೆ. ಆಮೇಲೆ ಬರುವುದು “ಪ್ರಭು” ಬಿಂದು (ಸ್ನಾನ). ಅಲ್ಲಿ ನಮಗೆ ಸೃಷ್ಟಿಯಲ್ಲಿ ನಮ್ಮ ಭಾಗವೇನೆಂಬುದು ಅನುಭವಕ್ಕೆ ಬರುವುದು. ಇದಾದ ನಂತರ ಬರುವುದು “ಪ್ರಪನ್ನಪ್ರಭು” ಸ್ಥಾನ. ಅಲ್ಲಿ ಈಯೆರಡು ಸ್ಥಿತಿಗಳೂ (ಪ್ರಪನ್ನ ಮತ್ತುಪ್ರಭು), ವಿರಲತರ ಸ್ವರೂಪದಲ್ಲಿ ಇರುವುವು. ಇದರಾಚೆಗೆ, ೬೪ ಬಿಂದುಗಳುಂಟು. ಇವು ನನ್ನ ಸಂಶೋಧನೆಗಳು, ಮಾನವನು ಈ ಎಲ್ಲ ಬಿಂದುಗಳ ಯಾತ್ರೆಗೈದು, ಅವುಗಳನ್ನು ದಾಟಿದಾಗ ಸುಪ್ತಶಕ್ತಿ ಸಂಪನ್ನನಾಗುತ್ತಾನೆ. ಈ ಎಲ್ಲ ಬಿಂದುಗಳನ್ನು ದಾಟಿ ಹೋದ ನಂತರ ನಾವು ಕೇಂದ್ರಮಂಡಲದಲ್ಲಿ ಪ್ರವೇಶಿಸುವ ಶುಭಸಮಾಚಾರದೊರೆಯುವುದು.

ಇದು ಭಗವಂನ ಶುದ್ದಸಾಮ್ರಾಜ್ಯ. ನಾನು (ಸಂಶೋಧಿಸಿ) ಕಂಡಂತೆ, ಅದರಲ್ಲಿ ಏಳು ಪ್ರಭಾವಲಯಗಳುಂಟು. ಹೇಗಾದರೂ ಮಾಡಿ ನಾವು ಅತ್ಯುಚ್ಚ ಕೋಟಿಯ ಸದ್ಗುರುವನ್ನು ಪಡೆದರೆ, ಆಗ ನಾವು ಆ ಎಲ್ಲ ವೃತ್ತಗಳನ್ನೂ ದಾಟಿ ಮುಂದುವರಿಯುತ್ತೇವೆ.

ದರೆ, ಇನ್ನೂ ಕಾರ್ಯವು ಪೂರ್ಣವಾದಂತಲ್ಲ. ಎಲ್ಲ ಪ್ರಭಾವಲಯಗಳನ್ನು ದಾಟಿದ ನಂತರ ಅಭ್ಯಾಸಿಯು ಇಡೀ ವಿಶ್ವವನ್ನು ವ್ಯಾಪಿಸುವ ವಿಸ್ತಾರದ ಅನುಭವವನ್ನು ಪಡೆಯುತ್ತಾನೆ. ಆಗ ದೈವೀ ಜ್ಞಾನದ ಹಂತವು ಬರುವುದು. ನಂತರ ನಾವು ‘ಕೈವಲ್ಯ’ (Absolute) ದದರ್ಶನದ ಅನುಭವವನ್ನು ಹೊಂದುವವು. ಕೊನೆಗೆ ಬ್ರಹ್ಮದಲ್ಲಿ ಲಯಾವಸ್ಥೆಯ ಪ್ರಾರಂಭ. ಈ ಹಂತವನ್ನು ತಲುಪಿದಾಗ ಜೀವನದ ಸಮಸ್ಯೆಯು ಸಂಪೂರ್ಣವಾಗಿ ಪರಿಹಾರವಾದಂತಾಯಿತು. ಮತ್ತು ಇದು ನಮ್ಮೆಲ್ಲ ಆಧ್ಯಾತ್ಮಿಕ ಚಟುವಟಿಕೆಗಳ ಕೊನೆಯ ಪಾದ. ಆದರೂ, ಇದೇ ಕೊನೆಯಲ್ಲ. ಈ ಕಾರ್ಯ ಸರಣಿಯ ಕೊನೆಯೆಂಬಂತೆ, ನಾವು ಅನಂತದಲ್ಲಿ ಈಜಲು ಪ್ರಾರಂಭಿಸುತ್ತೇವೆ. ಇಲ್ಲಿ ನಾನು ಇನ್ನೊಂದು ಮಾತನ್ನು ಹೇಳಬೇಕು. “ಸತ್ಯತೆ’ಯತ್ತಣ ನಮ್ಮಯಾತ್ರೆಯ ಉಚ್ಚಸ್ತರದಲ್ಲಿ, ಶರೀರದ ಪ್ರತಿಯೊಂದು ಅಣುವೂ ಶಕ್ತಿಯಾಗಿ, ನಂತರ, ಅದರ ‘ಕೇವಲ’ ಸ್ಥಿತಿಯಲ್ಲಿ ಮಾರ್ಪಡುತ್ತವೆ. ನಮ್ಮ ಅಸ್ತಿತ್ವದ ವ್ಯೂಹವೇ ಸಂಪೂರ್ಣವಾಗಿ ದೈವೀಮಯವಾಗಿಬಿಡುತ್ತದೆ ಮತ್ತು, ಮಾನವನು ಗತಿಶೀಲನಾಗುತ್ತಾನೆ.

***