ದಿನಾಂಕ 12–3-2006 ರಂದು ಪೂಜ್ಯ ರಾಘವೇಂದ್ರರಾಯರನ್ನು ರಾಯಚೂರಿನಲ್ಲಿ ಕಾಣುವ ಪ್ರಸಂಗ ಒದಗಿತು. ಸಮಯ 11:15 AM, ನಾನು ಒಳಗೆ ಕಾಲಿಡುತ್ತಿದ್ದಂತೆಯೇ, ಅವರು ತಮ್ಮ ಕೈಗಳನ್ನೆತ್ತಿ ಹಸನ್ಮುಖಿಯಾಗಿ ಸ್ವಾಗತಿಸಿದರು. ಅವರ ದೇಹವು ತುಂಬಾ ನಿಶಕ್ತವಾಗಿಯೂ, ಕಣ್ಣುಗಳು ಕಾಂತಿಯುಕ್ತ ಮತ್ತು ಧ್ವನಿಯು ಕಂಪನಯುಕ್ತ ಮತ್ತು ಪ್ರತಿಧ್ವನಿಯಂತೆ ಕೇಳುತ್ತಿತ್ತು. ಅವರ ಧ್ವನಿಯು ನಮ್ಮ ಸದ್ಗುರುಗಳು ನನಗೆ ತರಬೇತಿಯ ಅಪ್ಪಣೆ ಕೊಟ್ಟ ದಿನದಂದು ಕೇಳಿದ ದ್ವನಿಯಂತೆಯೇ ಇತ್ತು. ಈ ಹಿಂದೆ ಅವರು ಹೇಳಿ ಬರೆಸಿದುದನ್ನು ನೋಡುವಂತೆ ನನಗೆ ಹೇಳಿದರು.
ಮಧ್ಯಾಹ್ನ ನನ್ನ ಮತ್ತು ಪೂಜ್ಯ ಭಾಯಿ ಸಾಹೇಬರ ನಡುವೆ ಮಾತುಕತೆಗಳಾದವು. ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ತಮಗೆ ಆದ ಅನಿಸಿಕೆಗಳಲ್ಲಿ ಬಂದ ಕೆಲವು ವಿಷಯಗಳ ಬಗ್ಗೆ ತಿಳಿಸಿದರು, ಮತ್ತು ಹೇಳಿಕೆಗಳನ್ನು ಸವಿಸ್ತಾರವಾಗಿ ಬರೆಯುವಂತೆ ಹೇಳಿದರು. ಆಗ ನನಗೆ, ಅವರು ಉನ್ನತ ಮಟ್ಟದ ಜಾಗ್ರತಾವಸ್ಥೆಯಲ್ಲಿದ್ದಂತೆ ಅನಿಸಿತು. ಒಬ್ಬನಿಗೆ ತನ್ನ ಜೀವನದಲ್ಲಿ ಅನಿಸಿದ ಆಧ್ಯಾತ್ಮಿಕ ಅವಸ್ಥೆಗಳು ಸಾಮಾನ್ಯವೂ ಮತ್ತು ಮನಸ್ಸಿನ ಮೇಲೆ ಅವಲಂಬಿತವೂ ಆಗಿರುತ್ತವೆಂದು ಒತ್ತಿ ಹೇಳಿದರು. ಒಬ್ಬನ ಮರಣಾನಂತರದ ಬರುವ ಅವಸ್ಥೆಗಳು ಅಗಣಿತವಾಗಿರುತ್ತವೆ. ಯಾವುದೇ ಸ್ಥಿತಿಯಲ್ಲಿ ಅವಸ್ಥೆಯಲ್ಲಿದ್ದರೂ ತಿರುಗಿ ಬರುವ ಸಾಧ್ಯತೆಯಿದೆ. ಆದರೆ ಯಾವಾಗ ಒಬ್ಬನು ಅಂತಿಮ ಚೇತನವನ್ನು ತಲುಪುವನೋ ಆಗ ಮಾತ್ರ ಅವನು ತಿರುಗಿ ಬರುವುದಿಲ್ಲ. ಅಂತಹ ಉಚ್ಚ ಮಟ್ಟವನ್ನು, ಅಂತಿಮ ಚೇತನವನ್ನು ಹೊಂದಲು ಹಂಬಲಿಸಬೇಕು. ಅದನ್ನೇ ತನ್ನ ಜೀವನದ ಗುರಿಯಾಗಿ ನಿಶ್ಚಿತಪಡಿಸಿಕೊಳ್ಳಬೇಕು.
ನಮ್ಮ ಸಾಧನಾ ಪದ್ಧತಿಯಲ್ಲಿ ಹೃದಯದಲ್ಲಿ ದೈವಿ ಪ್ರಕಾಶವಿದೆಯೆಂಬ ಕಲ್ಪನೆಯಿಂದ (ಊಹೆ) ಪ್ರಾರಂಭವಾಗುತ್ತದೆ. ಗುರುಗಳ ಕೃಪೆಯಿಂದ ಒಬ್ಬನು ಮುಂದುವರಿದರೆ ಅವನು ಪ್ರಗತಿ ಪಥದಲ್ಲಿ ಸಾಗಿದಂತೆಲ್ಲ ಅವನು ಒಂದು ಭ್ರಮೆಯ ಲೋಕದಲ್ಲಿ ಪ್ರವೇಶಿಸಿದಂತೆ ಅನುಭವಿಸುತ್ತಾನೆ. ಅಂದರೆ ಪಾತಾಳ ಲೋಕ, ದೇವಲೋಕ, ಬ್ರಹ್ಮಲೋಕ ಮುಂತಾದವು. ನಮ್ಮ ಪುರಾಣಗಳು ಈ ಲೋಕಗಳಿಗೆ ಹೆಚ್ಚಿನ ಬೆಲೆ ಕೊಟ್ಟರೂ ಅವು ಹಾಗಿಲ್ಲ. ನಾವು ಅಂತಿಮ ಸತ್ಯವನ್ನು ಪಡೆಯುವವರೆಗೂ ಮುಂದೆ ಸಾಗಬೇಕಾಗಿದೆ. ಒಂದು ವೇಳೆ ಅಲ್ಲಿ ಒಬ್ಬನು ಕೆಲ ಕಾಲ ನಿಂತರೆ, ಕಾಣುವನು, ಇಲ್ಲಾ ಅನಿಸಿಕೆಗೆ ಬರುವದು, ಇಲ್ಲಾ ನಿರೀಕ್ಷಿಸುವನು, ಇಲ್ಲಾ ಅದರಂತೆಯೇ ಆಗುವನು. ಅಲ್ಲಿ ಕತ್ತಲೆಯೂ ಇಲ್ಲ, ಬೆಳಕು ಇಲ್ಲ, ಸುಖವೂ ಇಲ್ಲ. ದುಃಖವೂ ಇಲ್ಲ, ಒಳ್ಳೆಯದೆಂಬುದು ಇಲ್ಲ, ಕೆಟ್ಟದ್ದೂ ಇಲ್ಲ, ಸಮ್ಮತಿ-ಅಸಮ್ಮತಿಗಳಿಲ್ಲ, ಘನವಸ್ತುವೂ ಇಲ್ಲ, ಶಕ್ತಿಯೂ ಇಲ್ಲ, ಅವಕಾಶವೂ ಇಲ್ಲ, ಸಮಯವೂ ಇಲ್ಲ. ಅಲ್ಲಿರುವದು ಪೂರ್ಣ ಮೌನದಿಂದ ಕೂಡಿದ ವಿಶಾಲತೆ ಮತ್ತು ವಿಶಾಲತೆ ಮಾತ್ರ. ಇಲ್ಲಿ ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಕೆಲಸ ಮಾಡುವದಿಲ್ಲ. ಏಕೆಂದರೆ ಇದು ಎಲ್ಲದರ ಅತೀತವಾಗಿದೆ. ಇಲ್ಲಿ ಸೂರ್ಯ, ಚಂದ್ರ ಪ್ರಕಾಶಿಸುವದಿಲ್ಲ. ನಕ್ಷತ್ರಗಳು ಹೊಳೆಯುವದಿಲ್ಲ. ಪೂರ್ಣ ಅಜ್ಞಾನದ ಅವಸ್ಥೆ, ಅತಿ ಕ್ಷುಲ್ಲಕ ಮತ್ತು ಅತಿ ವಿನಯ ಮತ್ತು ನಮ್ರತೆಯಿಂದ ಕೂಡಿದ ಅವಸ್ಥೆಯೊಂದೇ ಇರುವದು.
ಒಂದೇ ಕಿರಣ ಅನೇಕ ಅಲೆ/ತರಂಗಗಳ ಪ್ರಮೇಯ/ಸಂಗತಿ :-
ಈ ಹೇಳಿಕೆ ಸೃಷ್ಟಿ ರಚನೆಯ ವಿಧಾನದ ಬಗ್ಗೆ ಇದೆ. ದೈವೀಕೃಪೆಯೆಂದು ಕರೆಯಲಾಗುವ ಒಂದು ಕಿರಣವಿದೆ. ಅದರಲ್ಲಿ ಅನೇಕ ಅಲೆಗಳಿವೆ ಮತ್ತು ಒಂದಕ್ಕೊಂದು ಪೂರಕವಾಗಿ ಚಲಿಸುತ್ತವೆ. ಅವುಗಳ ಉದ್ದಳತೆ ಮತ್ತು ವಿಸ್ತಾರ ಬೇರೆ ಬೇರೆ ಆಗಿರುತ್ತವೆ. ಅವುಗಳ ಚಲನೆಯು ಅಲೆಗಳಂತೆ ಇವೆ. ಯಾವಾಗ ಒಂದು ಉಚ್ಚ ಉನ್ನತಿಯನ್ನು ಹೊಂದಿರುವ ಅಲೆಯು ಅದರ ವಿರುದ್ಧವಾದ ಇನ್ನೊಂದು ಅಲೆ ಅಂದರೆ ನಿಮ್ಮ ಉನ್ನತಿಯನ್ನು ಹೊಂದಿದ ಅಲೆಯೊಡನೆ ಬೆರೆಯುವದೋ ಆಗ ಅದು ಜನನಕ್ಕೆ (ಹುಟ್ಟಿಗೆ) ಕಾರಣವಾಗುತ್ತದೆ. ಆಗ ಅದರಲ್ಲಿ ಜೀವವಿದೆ ಎಂಬುದು ಸೂಚಿಸುತ್ತದೆ. ಇದುವೇ ಸೃಷ್ಟಿ ನಿರ್ಮಾಣದ ರಹಸ್ಯ ಈ ಅಲೆಗಳಲ್ಲಿ ಬದಲಾವಣೆಯ ಕಾರಣದಿಂದಾಗಿ ಹುಟ್ಟು- ಸಾವು ಕಾಣುತ್ತವೆ. ಇದು ಜನ್ಮದ ರಹಸ್ಯವಾಗಿದೆ. ಈ ಕಿರಣದಲ್ಲಿ ಸಸ್ಯಗಳು, ಪ್ರಾಣಿಗಳು ಮತ್ತು ಬಂಡೆಗಳು ಮುಂತಾದವುಗಳಿವೆ. ಸೃಷ್ಟಿಯ ಮುಂಚೆ ವಿಸ್ತಾರತೆಯೊಂದೆ ಪೂರ್ತಿ ಮೌನದೊಂದಿಗೆ ಇತ್ತು. ವಿಶ್ವದಲ್ಲಿರುವ ಸಮಸ್ತವೂ ಮಾನವ ಜೀವನವನ್ನೊಳಗೊಂಡು ಅದೇ ಕಿರಣದ ಭಿನ್ನ ಭಿನ್ನ ಅಲೆಗಳಾಗಿವೆ. ಪ್ರತಿಯೊಬ್ಬನೂ ಆ ವಿಶ್ವದ ಅತಿ ಚಿಕ್ಕದಾದ ಪ್ರತಿರೂಪವಾಗಿದ್ದಾನೆ. ಎಲ್ಲರೂ ಒಂದೇ.
ಬ್ರಹ್ಮ, ವಿಷ್ಣು, ಮಹೇಶ, ಇಂದ್ರ, ಚಂದ್ರ ಮತ್ತು ಸೂರ್ಯ ಎಲ್ಲರೂ ಸಹ ಆ ಕಿರಣದಲ್ಲಿರುವ ಅಲೆಗಳ ಆವಿರ್ಭಾವವೇ (Manifestation). ಅನೇಕ ಹುಟ್ಟು ಸಾವುಗಳು ಅದರಲ್ಲಿಯೇ ನಡೆಯುತ್ತವೆ. ಪೂಜ್ಯ ಭಾಯಿ ಸಾಹೇಬರ ನಿರೀಕ್ಷೆಯಂತೆ ಹೇಳಿರುವ ಉಕ್ತ ಲೇಖನ ಇದಾಗಿದೆ. ಈಗ ತಲೆಯೆತ್ತುವ ಪ್ರಶ್ನೆಯೆಂದರೆ ಈ ಎಲ್ಲ ಆಗು ಹೋಗುಗಳನ್ನು ಗಮನಿಸಬಹುದೇ ? ‘ಹೌದು’ ಇದು ಸಾಧ್ಯವೆಂಬುದೇ ನಿರ್ಧಿಷ್ಟವಾದ ಉತ್ತರವಾಗಿದೆ. ಯಾರಿಗೆ ಸದ್ಗುರುಗಳು ಒಲಿಯುವರೋ ಅಥವಾ ದೀಕ್ಷೆ ಕೊಟ್ಟು ತನ್ನವನನ್ನಾಗಿ ಮಾಡಿರುತ್ತಾರೆಯೋ ಅಂತಹವನು ಇದನ್ನು ನೋಡಬಲ್ಲ. ಅವನಿಂದ ಏನೂ ಬಚ್ಚಿಡಲು ಸಾಧ್ಯವಿಲ್ಲ. ನಿಸರ್ಗವು ಆತನಿಗೆ ಒಂದು ತೆರೆದ ಪುಸ್ತಕದಂತಿದ್ದು ಹುಟ್ಟು-ಸಾವು ಮತ್ತು ಸೃಷ್ಟಿಗೆ ಸಂಬಂಧಿಸಿದ ಎಲ್ಲ ರಹಸ್ಯಗಳು ಗೋಚರವಾಗುತ್ತವೆ.
ಈ ವಿಷಯವನ್ನು ವಿವರಿಸಲು ನಾನೊಂದು ಉದಾಹರಣೆಯನ್ನು ಕೊಡುವೆ. ನಾವು ಚಲನ ಚಿತ್ರವನ್ನು ನೋಡಲು ಹೋದಾಗ ಇದು ಸಾಮಾನ್ಯವಾಗಿ ಅನುಭವಕ್ಕೆ ಬರುವದಾಗಿದೆ. ಚಿತ್ರಮಂದಿರದಲ್ಲಿ ಕತ್ತಲೆಯು ಆವರಿಸಿರುತ್ತದೆ. ಯಾವಾಗ ಚಿತ್ರ ಪ್ರಾರಂಭವಾಗುವದೋ ಆಗ ಬೆಳಕು ಪ್ರೋಜೆಕ್ಟರ್‌ನಿಂದ ಪರದೆಯ ಮೇಲೆ ಬೀಳುತ್ತದೆ. ತತ್ಪರಿಣಾಮವಾಗಿ ನಾವು ಪರದೆಯ ಮೇಲೆ ಚಿತ್ರವನ್ನು ಮಾತ್ರ ಕಾಣುತ್ತೇವೆ. ಒಂದು ವೇಳೆ ಆ ಚಿತ್ರ ಮಂದಿರದಲ್ಲಿ ಹೊಗೆ/ದೂಳು ತುಂಬಿಕೊಂಡಿದ್ದರೆ, ಬೆಳಕು ಚಲಿಸುವ ಪಥವನ್ನು ನೋಡಬಲ್ಲೆವು. ಆ ಪಥವು ಬೆಳಕಿನ ಕಿರಣಗಳದ್ದೇ ಆಗಿದೆ. ಬೆಳಕಿನ ಕಿರಣಗಳು ತಮ್ಮಷ್ಟಕ್ಕೆ ತಾವೆ ಗೋಚರವಾಗುವದಿಲ್ಲ. ಆ ಕಿರಣಗಳ ಪಥದಲ್ಲಿ ಧೂಳಿನ ಕಣಗಳು ಅಡ್ಡ ಬಂದಾಗ ಮಾತ್ರ ಅವು ಗೋಚರಿಸುವವು. ಈ ಮೇಲಿನ ಉದಾಹರಣೆಯು, ಒಂದೇ ಕಿರಣ ಅನೇಕ ಅಲೆಗಳು ಎಂಬ ತತ್ವವನ್ನು ಗ್ರಹಿಸಲು ಸಹಾಯಕವಾಗುವದೆಂದು ನನಗೆ ಅನಿಸುತ್ತದೆ.
ಪ್ರಾಣಾಹುತಿ :-
ಒಂದೇ ಕಿರಣ, ಅನೇಕ ತರಂಗಗಳು ಎಂಬ ತತ್ವದಲ್ಲಿ ವಿವರಿಸಿದಂತೆ ಇಡೀ ಜಗತ್ತಿನ ಆಟವು ದೈವೀ ಕೃಪೆಯೆಂಬ ಏಕಮಾತ್ರ ಕಿರಣಕ್ಕೆ ಬದ್ಧವಾಗಿದೆ. ಅನೇಕ ಅಲೆಗಳು ವಿವಿಧ ರೀತಿಯಲ್ಲಿ ಆವಿರ್ಭಾವಗೊಳ್ಳುವವು. ಮನುಷ್ಯನು ಸಹ ಆ ಏಕಮಾತ್ರ ಕಿರಣದಲ್ಲಿಯ ಅಲೆಗಳಿಂದ ಮಾಡಲ್ಪಟ್ಟಿದ್ದಾನೆ. ಯಾವಾಗ ಮೂಲ ಶಕ್ತಿಗೆ (Divine Energy) ಒಂದು ದಿಶೆಯನ್ನು ಕೊಡಲಾಗುವದೋ ಅದು ಆಗ ಬಲವಾಗಿ (Power) ಪರಿಣಮಿಸುವದು. ಆಗ ಅದನ್ನು ಏಕಮಾತ್ರ ಕಿರಣದಲ್ಲಿಯ ಅಲೆಗಳಲ್ಲಿ ನಿಶ್ಚಿತ ಫಲಾಪೇಕ್ಷೆಯ ಉದ್ದೇಶದಿಂದ ಪ್ರೇರೆಪಿಸಲಾಗುವದು. ತತ್ಪರಿಣಾಮವಾಗಿ ದೊಡ್ಡ ಮತ್ತು ಸಣ್ಣ ಅಲೆಗಳಲ್ಲಿ ಕ್ರಿಯೆ ಮತ್ತು ಪ್ರಕ್ರಿಯೆಗಳುಂಟಾಗುವವು. ಈ ಪ್ರಕ್ರಿಯೆಯೇ ಪ್ರಾಣಾಹುತಿ. ಇದು ದೈವೀ ಬಲ. ಇದಕ್ಕೆ ಸಮಾನಾಂತರವಾದುದು ಬೇರೆ ಇಲ್ಲ. ಇದರ ಶುದ್ಧತೆ ಮತ್ತು ಪವಿತ್ರತೆಯೂ ಅಸಮಾನ/ಅದ್ವಿತೀಯವಾದುದು. ಮಾನವರಿಗೆ ನಮ್ಮ ಸದ್ಗುರುಗಳು ನೀಡಿದ ಇದು ಒಂದು ಬೆಲೆ ಕಟ್ಟಲಾಗದ ಕಾಣಿಕೆಯಾಗಿದೆ.
ತತ್ವಶಾಸ್ತ್ರಗಳು :-
ಭಾರತ ದೇಶವು ಒಂದು ಉನ್ನತ ಪರಂಪರೆಯನ್ನು ಹೊಂದಿದ ನಾಡಾಗಿದೆ. ಪುರಾತನ ಕಾಲದ ಪ್ರಸಿದ್ಧ ಸಂತರಿಂದ ಇದು ಹರಸಲ್ಪಟ್ಟಿದೆ. ಧಾರ್ಮಿಕ ಸಾಹಿತ್ಯಕ್ಕೆ ಇಲ್ಲಿ ಕೊರತೆಯೇ ಇಲ್ಲ. ತತ್ವಶಾಸ್ತ್ರಗಳು, ಧಾರ್ಮಿಕ ಮತ್ತು ಅಧಿಭೌತಿಕ ಸಾಹಿತ್ಯಗಳಿಂದ ತುಂಬಿತುಳುಕುತ್ತಿದೆ. ಜನರು ಅದನ್ನು ಪ್ರಸ್ಥಾನತ್ರಯ (ವೇದೋಪನಿಷತ್, ಬ್ರಹ್ಮ ಸೂತ್ರ ಮತ್ತು ಭಗವದ್ಗೀತೆ) ಎಂದು ಸ್ವೀಕರಿಸಿದ್ದಾರೆ. ಅವೆಂದರೆ ಆಧ್ಯಾತ್ಮಿಕ ಸಾಧನೆಯಲ್ಲಿ ಮಾರ್ಗದರ್ಶನ ಪಡೆಯಲು ನೆರವಾಗುವ ಗ್ರಂಥಗಳು. ಯಾವೊಂದು ತತ್ವವು ಅಂತಿಮ ಸತ್ಯವನ್ನು ಪ್ರತಿಪಾದಿಸುವದಿಲ್ಲವೆಂಬುದು ಗಮನಕ್ಕೆ ಬಂದಿದೆ. ಅವುಗಳಲ್ಲಿ ನ್ಯೂನ್ಯತೆಗಳಿವೆ. ಆದಾಗ್ಯೂ ಪ್ರಸ್ಥಾನತ್ರಯವು ಪ್ರಮಾಣ ಗ್ರಂಥವೆಂಬ ತನ್ನ ಅಂತಸ್ತನ್ನು ಮುಂದುವರೆಸಿಕೊಂಡು ಬಂದಿದೆ. ಇದು ಜಿಜ್ಞಾಸುಗಳಿಗೆ ಮಾರ್ಗದರ್ಶನವನ್ನು ನಿಡುವದೋ? ಇಲ್ಲವೋ? ಎಂಬುದು ಚರ್ಚಾಸ್ಪದವಾಗಿದೆ.
ಪೂಜ್ಯ ಭಾಯಿ ಸಾಹೇಬರು ‘ಪುನರಪಿ ಜನನಂ-ಪುನರಪಿ ಮರಣಂ’ ಎಂಬ ತತ್ವವನ್ನು ಖಡಾಖಂಡಿತವಾಗಿ ತಳ್ಳಿ ಹಾಕಿದ್ದಾರೆ. ವಿಶ್ವದಲ್ಲಿನ ಬೇರೆ ಬೇರೆ ಲೋಕಗಳನ್ನು ಗಣನೆಗೆ ತೆಗೆದುಕೊಳ್ಳದೇ ಕೇವಲ ಈ ನಶ್ವರವಾದ ಜಗತ್ತನ್ನೇ ದೃಷ್ಟಿಯಲ್ಲಿಟ್ಟುಕೊಂಡಿರುವವರ ಗ್ರಹಿಕೆಯಾಗಿದೆ. ಆ ಒಂದೇ ಕಿರಣದಲ್ಲಿನ ಅಲೆಗಳ/ತರಂಗಗಳ ಆವಿರ್ಭಾವವೇ (Manifestation) ಇದಾಗಿರುವದರಿಂದ ಯಾವಾಗ ಅವನು (ಈಶ್ವರನು) ಸರ್ವವ್ಯಾಪಿಯಾಗಿರುವನೋ ಹುಟ್ಟು ಸಾವಿನ ಪ್ರಶ್ನೆ ಎಲ್ಲಿ ಬರುವದು? ಭೌತಿಕ ದ್ರವ್ಯವು ದ್ರವ್ಯವನ್ನೇ ನೋಡುವದು (Matter sees matter only) ಎಂದು ನಮ್ಮ ಗುರುಗಳು ಹೇಳಿದ್ದಾರೆ. ನಮ್ಮ ಸದ್ಗುರುಗಳ ಸಹಾಯ ಮತ್ತು ಕೃಪೆಯಿದ್ದರೆ ಒಬ್ಬನು ಸೂಕ್ಷ್ಮಾತಿಸೂಕ್ಷ್ಮ ಹಾಗೂ ಅಣೋರಣಿಯ ಘಟನೆಗಳನ್ನು ಎಲ್ಲಾ ಹಂತಗಳಲ್ಲಿ ಕಾಣಬಹುದು. ಹೆಸರುವಾಸಿಯಾದ ಸಂತರು ಭೌತಿಕ ದೇಹವನ್ನು ಹೊಂದಿದ್ದಾಗ ಮಾಡಿದ ಶೋಧ ಮತ್ತು ಪ್ರಯತ್ನದ ಫಲವೇ ಭಾರತದಲ್ಲಿನ ತತ್ವಶಾಸ್ತ್ರಗಳ ಸಂಗ್ರಹ. ಸದ್ಗುರುಗಳ ಸಹಾಯ ಮತ್ತು ಕೃಪೆಯಿದ್ದಲ್ಲಿ ಮರಣಾನಂತರದ, ಮುಂದಿನ ಜೀವನವು, ನಿಸರ್ಗವನ್ನು ಪರಿಶೀಲಿಸುವ ಸಾಮರ್ಥ್ಯವನ್ನು ಹೊಂದಿದವನಾಗುತ್ತಾನೆ. ಅಂತಿಮ ಸತ್ಯದಲ್ಲಿ ಆಗುವ ಘಟನೆಗಳನ್ನು ಪರಿಶೀಲಿಸುವದಕ್ಕೆ ವಿಫಲನಾಗಿರುವದರ ಕಾರಣವೇ ಇದಾಗಿದೆ. ಅವು ಅರ್ಥಪೂರ್ಣ ಮಾರ್ಗದರ್ಶನವನ್ನು ನೀಡಲಾರವು.
ಈಗ ಪ್ರತಿಯೊಬ್ಬನು, ತನ್ನ ವೈಯಕ್ತಿಕ ಮಟ್ಟದಲ್ಲಿ ವಿಚಾರ ಮಾಡಿ ತಲೆತಲಾಂತರದಿಂದ ನಡೆದುಬಂದವುಗಳನ್ನು ಬುಡಮೇಲು ಮಾಡಬೇಕಾದ ಸಮಯ ಬಂದಿದೆ. ಅವನು ಸುಯೋಗ್ಯ ಮಾರ್ಗದರ್ಶಿಯನ್ನು ಹುಡುಕುವ ಅವಶ್ಯಕತೆ ಇದೆ, ಹಾಗೂ ನಿರ್ಧಿಷ್ಟ ಮತ್ತು ಸರಿಯಾದ ತೀರ್ಮಾನಕ್ಕೆ ಬರಬೇಕಾಗಿದೆ.
ಸಾಯುವ ಕಲೆ –
ಸಾಮಾನ್ಯವಾಗಿ ಒಬ್ಬನು ತನ್ನ ಸಾವಿನ ವಿಚಾರವನ್ನು ಕೇಳಿ, ಅಥವಾ ಒಬ್ಬನು ತಾನು ಸಾಯಲೇಬೇಕೆಂಬುದು ಕೇಳಿ ಭಯಭೀತನಾಗುತ್ತಾನೆ. ನಿಜವಾಗಿಯೂ ಜೀವನದ ಕಾಮನೆಯನ್ನು ಒಪ್ಪತಕ್ಕದ್ದೇ. ಆದರೂ ಒಂದಿಲ್ಲೊಂದು ದಿನ ಪ್ರತಿಯೊಬ್ಬ ವ್ಯಕ್ತಿಯು ಸಾವನ್ನು ಎದುರಿಸಲೇಬೇಕೆಂಬುದು ಅಷ್ಟೇ ಸತ್ಯವಾಗಿದೆ. ಅದರಿಂದ ತಪ್ಪಿಸಿಕೊಳ್ಳಲಾಗುವದಿಲ್ಲ. ಸಾವಿನ ಭಯವು ಒಂದು ವಿಶಿಷ್ಟ ತತ್ವದಿಂದ ಕೂಡಿದೆ. ಅಂದರೆ ಪ್ರತಿಯೊಂದರ ಅಂತ್ಯ ಸರಿ, ಇದು ಎಲ್ಲಾ ಭೌತಿಕತೆಯ ಮತ್ತು ನಶ್ವರತೆಯ ಅಂತ್ಯ. ಆದರೆ ಇದು ಚೇತನ(ಆತ್ಮದ ಅಂತ್ಯವಲ್ಲ. ಆತ್ಮವು ಅಂತಿಮ ಚೇತನ ಸತ್ಯವನ್ನು ತಲುಪಿದಾಗ ಮಾತ್ರ ಕೊನೆಗೊಳ್ಳುವದು. ಇನ್ನೊಂದು ರೀತಿಯಲ್ಲಿ ಹೇಳುವದಾದರೆ, ಇದು ತನ್ನ ಊರ್ಧ್ವಮುಖ ಪಯಣವನ್ನು, ನಿಸರ್ಗದ ನಿಯಮಾನುಸಾರವಾಗಿ ಆರಂಭಿಸುತ್ತದೆ. ಆದ್ದರಿಂದ ಆಧ್ಯಾತ್ಮಿಕ ಅರ್ಥದಲ್ಲಿ, ಸಾವು ಭೌತಿಕತೆಯ ಒಂದು ಕೊನೆಯೆಂದು ಮತ್ತು ಆತ್ಮಕ್ಕೆ ಹೊಸ ಜೀವನ ನೀಡುವದೆಂದು ಗ್ರಹಿಸಲಾಗಿದೆ. ಸಾಮಾನ್ಯವಾಗಿ ಮಾನವನು ಭೌತಿಕವಾದಿಯೂ, ಭೋಗಾನ್ವೇಶಕನೂ ಮತ್ತು ದೇಹ ದೃಷ್ಟಿಯುಳ್ಳವನು ಹಾಗೂ ಸಾವಿನ ಭಯವುಳ್ಳವನಾಗಿದ್ದಾನೆ. ಆದರೆ ಯಾವನು ಜೀವನದ ಗುರಿಯನ್ನು ಸಾಕ್ಷಾತ್ಕರಿಸಿಕೊಳ್ಳಲು ಆಸಕ್ತನಾಗಿದ್ದಾನೆಯೋ ಅಂತಹವನು ಯೋಗ್ಯ ಮಾರ್ಗದರ್ಶಕನ ಅಡಿಯಲ್ಲಿ ಸೂಕ್ತ ಸಾಧನೆಯನ್ನು ತೆಗೆದುಕೊಳ್ಳಬೇಕು. ಸಾಧನೆಯು ಪ್ರಾಮಾಣಿಕ ಪ್ರಯತ್ನ ಮತ್ತು ತ್ಯಾಗದ ಮನೋಭಾವವನ್ನು ಬೇಡುತ್ತದೆ. ಸಾಧನೆಯಲ್ಲಿ ಮುಂದುವರಿದಂತೆಲ್ಲ, ನಿರ್ದಿಷ್ಟ ಬದಲಾವಣೆಗಳಾಗುತ್ತವೆ. ಕೆಳಮಟ್ಟದ ಪ್ರವೃತ್ತಿಗಳು ಕಾಣದಂತಾಗುತ್ತವೆ. ದೃಷ್ಟಿಯು ವಿಶಾಲವಾಗುವದು. ಜೀವನಕ್ಕೆ ಹೊಸ ಅರ್ಥ ಬರುವದು. ಸಾವಿನ ಭಯವು ಇಲ್ಲದಂತಾಗುವದು. ಸಧೃಡತೆಯು ಗುರಿಯ ಕಡೆಗೆ ಮುನ್ನಡೆಯಲು ಪ್ರೇರೇಪಿಸುವದು. ಆದಾಗ್ಯೂ, ದೈವೀ ಕೃಪೆಯು ಈ ನಿಟ್ಟಿನಲ್ಲಿ ಅತ್ಯಾವಶ್ಯವಾಗುವದು. ಒಂದು ವೇಳೆ ಒಬ್ಬನು “ಸಾಯುವ ಕಲೆ” ಯನ್ನು ಕರಗತಗೊಳಿಸಿಕೊಳ್ಳಬೇಕಾದರೆ ಕೇವಲ ಸಹಜಮಾರ್ಗವು ಒಂದೇ ದಾರಿ.
ದೇಹವನು ದಂಡಿಸದೆ, ಚಿತ್ತವನು ಖಂಡಿಸದೆ, ಉಂಡುಂಡು ತಿರುಗಾಡಿ, ಬಮ್ಮನ ಪಡೆವೆನೆಂದೊಡೆ, ಇದು ರಂಡೆಯ ಮನೆಯೇನು ಸರ್ವಜ್ಞ
ಪೂಜ್ಯ ಭಾಯಿ ಸಾಹೇಬರು ಕನ್ನಡದಲ್ಲಿ ಮೇಲಿನ ವಚನವನ್ನು ಉದಹರಿಸಿದರು. ಭಗವಂತನ ಸಾಕ್ಷಾತ್ಕಾರವು ತಮಾಶೆಯಲ್ಲ, ಎಂಬುದನ್ನು ಇದು ತೋರಿಸುತ್ತದೆ. ಇದು ಕಷ್ಟಕರವಾದದ್ದು. ಅಶಕ್ಯದ ನಂತರದ್ದು. ಆದಾಗ್ಯೂ ಇದಕ್ಕೆ ಆಸಕ್ತಿ ಮತ್ತು ವಿವೇಚನೆಯಿಂದೊಡಗೂಡಿದೆ. ವೈಯಕ್ತಿಕ ಪ್ರಯತ್ನದ ಅವಶ್ಯಕತೆಯನ್ನು ಎತ್ತಿ ತೋರಿಸುತ್ತದೆ.
ನಮ್ಮ ಸದ್ಗುರುಗಳು ಸತ್ಯಶೋಧಕರಿಗಾಗಿ, ಒಂದು ಸರಳ ಮತ್ತು ಸಹಜವಾದ ಯೋಗಿಕ ಸಾಧನಾ ಪದ್ಧತಿಯನ್ನು ಕೊಡಮಾಡಿದ್ದಾರೆ. ಈ ಪದ್ಧತಿಯು ನಮ್ಮ ಪ್ರಸ್ತುತ ಜೀವನದ ಪರಿಸ್ಥಿತಿಗೆ ತುಂಬಾ ಹೊಂದಿಕೆಯಾಗುವದಾಗಿದೆ. ಪ್ರಾಣಾಹುತಿಯ ಅತಿರಿಕ್ತ ಅನುಕೂಲತೆಯು ಇದೆ. ಜಿಜ್ಞಾಸುಗಳಿಗೆ ಈ ಸಮಯವು ಪರಿಪಕ್ವವಾಗಿದೆ. ಈ ವಚನವು ಒಂದು ಸೂಕ್ಷ್ಮ ಸಲಹೆಯನ್ನು ನೀಡುತ್ತದೆ. ಅದೇನೆಂದರೆ, ಈ ಹಿಂದೆ ಅನೇಕರು ಸತ್ಯಶೋಧದ ಪ್ರಯತ್ನ ಮಾಡಿದ್ದರೂ, ಆಗಿನ ಸಾಮಾಜಿಕ ಪರಿಸ್ಥಿತಿಯು ತುಂಬಾ ಶ್ರಮದಾಯಕವೂ, ಸರಿಯಾದ ಮಾರ್ಗದರ್ಶನವಿಲ್ಲದ್ದೂ ಆಗಿತ್ತು. ಹಾಗಾದರೆ ಈಗಿನ ಪರಿಸ್ಥಿತಿ ಹೇಗಿದೆ? ಉತ್ತರವನ್ನು ವೈಯಕ್ತಿಕ ಚರ್ಚೆಗೆ ಹಾಗೂ ತಿರ್ಮಾನಕ್ಕೆ ಬಿಡುವುದು ಸೂಕ್ತ.
ಒಂದು ಮರೀಚಿಕೆ :-
ನೀವು ಸಮಾಜದ ಅಭಿರುಚಿ ಮತ್ತು ನಂಬುಗೆಗಳ ವಿರುದ್ದ ಏನಾದರೂ ಮಾಡಿದರೆ ಅದು ನಿಮ್ಮನ್ನು ಗೇಲಿ ಮಾಡುತ್ತದೆ. ಇತಿಹಾಸವು ಇಂತಹ ಪುರಾತನ ದೇಹಾಲಸ್ಯದ ಹೇಳಿಕೆಗೆ ಸಾಕ್ಷಿಯಾಗಿದೆ. ಪ್ರಸ್ತುತ ಪರಿಸ್ಥಿತಿಯು ಅದಕ್ಕಿಂತ ಭಿನ್ನವಾದುದೆಂದು ನನಗೆ ಅನಿಸುವದಿಲ್ಲ. ಒಂದು ಸಂದರ್ಭ ಹೀಗಿದೆ: ಪೂಜ್ಯ ಭಾಯಿ ಸಾಹೇಬರು ಒಂದು ಸೊಳ್ಳೆಯ ಕಡಿತದ ಬಗ್ಗೆ ಅದರ ಪ್ರೀತಿ ಮತ್ತು ಆದರಗಳನ್ನು ವ್ಯಕ್ತಪಡಿಸಿದಾಗ ಪ್ರಾಯಶಃ ಆ ಸೂಚನೆಯು ಗಾಳಿಗೆ ತೂರಲ್ಪಟ್ಟಿತು. ಅದರ ಪ್ರಾಮುಖ್ಯತೆಯು ಒಂದು ಕೀಟ (ಪ್ರಾಣಿಗಳ ಬಗ್ಗೆ ಅವರಿಗಿರುವ ಪ್ರೀತಿಯು ಮಾನವೀಯತೆಗೆ ಇದ್ದಷ್ಟೇ ಇದೆಯೆಂಬ ಸತ್ಯಾಂಶವನ್ನು ಹೊರಸೂಸುತ್ತದೆ. ಏಕೆಂದರೆ ಪ್ರತಿಯೊಂದೂ ಆ ಏಕಮಾತ್ರ ಕಿರಣದಲ್ಲಡಗಿದ ಅಲೆಗಳಿಂದ ಉತ್ಪನ್ನವಾದುದೇ ಆಗಿದೆ. ಇದು ಸ್ವಯಂವಿಧಿತವಾಗಿದ್ದು, ಬೇರೆ ವಿವರಣೆಯ ಅಗತ್ಯವಿಲ್ಲ. ಸೂರ್ಯೋದಯವನ್ನು ನೋಡಲು, ಒಂದು ದೀಪದ ಅವಶ್ಯಕತೆಯಿದೆಯೆಂದು ಭಾವಿಸುವಿರಾ? ಇದು ಅಂತಹದ್ದೇ ಆಗಿದೆ. ಇದು ಅವರ ವ್ಯಕ್ತಿತ್ವವನ್ನು ತೋರುವದಾಗಿದೆ. ಇಲ್ಲಿ ಅದು ಅಗೋಚರ ಹಾಗೂ ವಿಶ್ವವ್ಯಾಪಿ, ದಯಮಾಡಿ ಪ್ರಚಲಿತವಿರುವ ಗಾಬರಿ ಮತ್ತು ಭಯಾನಕ ವಾತಾವರಣವನ್ನು ನೋಡಿರಿ. ಆಗ ಅವರು ಒಂದು ಮರೀಚಿಕೆಯಲ್ಲವೇ?
ಇದು ನನ್ನ ನಿವೇದನೆಯಾಗಿದ್ದು ಪೂಜ್ಯ ಭಾಯಿ ಸಾಹೇಬರು ಕೊಟ್ಟ ಹೇಳಿಕೆಯ ವಿವರಣೆಯನ್ನು ಸವಿಸ್ತಾರ ಮಾಡಲು ನಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇನೆ. ಈ ವಿವರಣೆಯು ನನಗೆ ಅಪೂರ್ಣವೆನಿಸುವದು. ಏಕೆಂದರೆ ನನ್ನ ಬುದ್ದಿಯು ಇದಕ್ಕೆ ಮೀರಿ ಹೋಗದಾಗಿದೆ. ಪೂಜ್ಯ ಭಾಯಿ ಸಾಹೇಬರು ಸೂಕ್ತವಾಗಿ ಹೇಳಿದಂತೆ ಇವೆಲ್ಲ ಕೇವಲ ಶಬ್ದಗಳೇ ಶಬ್ದಗಳು ಮಾತ್ರ.