1. ಈ ರಹಸ್ಯವೇ ‘ಪ್ರಾಣಾಹುತಿ’ ಎಂದು ಕರೆಯಲಾದ ‘ಪ್ರಾಣಸಂವಹನಶಕ್ತಿ’. ಈ ಶಕ್ತಿಯು ಶುದ್ಧಮನಸ್ಸಿನ ಕಾಲುವೆಗಳ ಮೂಲಕ ಕೆಲಸ ಮಾಡುತ್ತದೆ. ಇಚ್ಛಾಶಕ್ತಿ(ಸಂಕಲ್ಪಶಕ್ತಿ)ಯ ಮೂಲಕ ಅದನ್ನು ಪ್ರಯೋಗಿಸಲಾಗುತ್ತದೆ; ಅದರ ಪರಿಣಾಮಕಾರಿತ್ವಚ್ಯುತಿಯಾಗದಂಥದು. ಆಧ್ಯಾತ್ಮಿಕ ಶಿಕ್ಷಕನು ಅಭ್ಯಾಸಿಯ ಮನಸ್ಸನ್ನು ರೂಪಿಸಲು ತನ್ನ ಸಂಕಲ್ಪ ಶಕ್ತಿಯನ್ನು ಪ್ರಯೋಗಿಸಿದರೆ ಅದು ಪ್ರಭಾವಶಾಲಿಯಾಗಿರುತ್ತದೆ ಮತ್ತು ಅತ್ಯುತ್ತಮ ಫಲ ನೀಡುತ್ತದೆ.SMP-84
  2. ಪ್ರಾಣಾಹುತಿಯ ಶಕ್ತಿಯು ಅತ್ಯುಚ್ಚ ತರಗತಿಯ ದು ಯೌಗಿಕ ಸಿದ್ಧಿಯಾಗಿದ್ದು ಅದರಿಂದ ಯೋಗಿಯು ತನ್ನ ಇಚ್ಛಾಶಕ್ತಿಯ ಮೂಲಕ ಯಾರಲ್ಲಿ ಬೇಕಾದರೂ ಯೌಗಿಕ ಶಕ್ತಿಯನ್ನಾಗಲಿ ದೈವೀ ಪ್ರಭೆಯನ್ನಾಗಲಿ ತುಂಬ ಬಲ್ಲನು ಹಾಗೂ ಆತನ ಆಧ್ಯಾತ್ಮಿಕ ಪ್ರಗತಿಗೆ ಬಾಧಕವಾದ ಯಾವುದೇ ಅನಿಷ್ಟ ಸಂಗತಿಯನ್ನು ತೊಲಗಿಸಬಲ್ಲನು.RD 48-49 Guru
  3. ಅನೇಕ ಸಲ ಋಷಿಗಳು ಪ್ರಾಣಾಹುತಿಯ ಬಲದಿಂದ ಎವೆಯಿಕ್ಕುವುದರೊಳಗಾಗಿ ಮನುಷ್ಯನ ಸ್ವಭಾವವನ್ನೇ ಪರಿವರ್ತಿಸಿದ್ದಾರೆ. ನನ್ನ ಗುರುಗಳಾದ ಫತೆಹ್ ಗಡದ ನಿವಾಸಿ ಸಮರ್ಥ ಗುರು ಶ್ರೀ ರಾಮಚಂದ್ರಜಿ ಮಹಾರಾಜರು, ಸ್ವಾಮಿ ವಿವೇಕಾನಂದರು ಹಾಗೂ ಇನ್ನಿತರ ಮಹರ್ಷಿಗಳ ಅದ್ಭುತ ಉದಾಹರಣೆಗಳು ಇದಕ್ಕೆ ವಿಪುಲವಾದ ಪ್ರಮಾಣಗಳಾಗಿವೆ.RD-49 Guru
  4. ಪ್ರಾಣಾಹುತಿಯೆಂದರೆ ಮನುಷ್ಯನ ಪರಿವರ್ತನೆಗಾಗಿ ದೈವೀ ಶಕ್ತಿಯ ಬಳಕೆ.AB I 33
  5. ಅದು ಜೀವಿಯಲ್ಲಿ ಸುಪ್ತವಾಗಿರುವ ‘ಅವಸ್ಥೆ’ಗೆ ಹೊಸ ಚೈತನ್ಯವನ್ನಿತ್ತು, ಮಾನವನಿಗೆ ಮೀಸಲಾಗಿರುವ ಆ ಅತ್ಯುನ್ನತ ಗುರಿಯನ್ನು ತಲುಪಲು ಅವನನ್ನು ಅಣಿಗೊಳಿಸುತ್ತದೆ. ಅಷ್ಟೇ ಅಲ್ಲ, ಅದು ಪ್ರಗತಿಯ ದಾರಿಯಲ್ಲಿರುವ ಎಲ್ಲಾ ಅಡೆತಡೆಗಳನ್ನೂ ನಿರ್ಮೂಲನ ಮಾಡಿ, ಇಡೀ ಸ್ಥಿತಿಯನ್ನೇ ಮಾರ್ಪಡಿಸುತ್ತದೆ. ME P 85 Role of nature
  6. ಪ್ರಾಣಾಹುತಿಯ ಪ್ರಪ್ರಥಮ ಮತ್ತು ತತ್ಕ್ಷಣದ ಪರಿಣಾಮವೆಂದರೆ, ಶಬ್ದಗಳಲ್ಲಿ ಬಣ್ಣಿಸಲಾಗದಂತಹ ಶಾಂತಿ ಹಾಗೂ ನೀರವತೆಯು ಉಂಟಾಗುವುದು. ಧ್ಯಾನದಲ್ಲಿಯ ಈ ಅನುಭವವು ನಾವು ಹಿಂದಿರುಗಲೇ ಬೇಕಾದ ಮೂಲ ನೆಲೆಯ ನೆನಪನ್ನು ಮೆಲ್ಲಗೆ ಮಾಡಿ ಕೊಡುವುದು. ಮತ್ತು ಪದೇ ಪದೇ ಉಂಟಾಗುವ ಈ ಅನುಭವವು ನಮ್ಮ ಉಗಮದ ಮೂಲನೆಲೆಯ ನೆನಪನ್ನು ಬಲಪಡಿಸಿ,ಐಹಿಕ ಜೀವನದ ಸಂಕೋಲೆಗಳನ್ನು ಸಡಿಲುಗೊಳಿಸುತ್ತದೆ. ಪ್ರಾಣಾಹುತಿಯು ನಮ್ಮನ್ನು ಆ ನೆನಪಿನ ಮತ್ತೂ ಮತ್ತೂ ಆಳದ ಹಂತಗಳಿಗೆ ಒಯ್ದಂತೆಲ್ಲ, ಮೂಲದತ್ತಣ ನಮ್ಮ ಪ್ರಯಾಣವು ಭದ್ರವಾಗಿ ಸ್ಥಿರಗೊಳ್ಳುತ್ತದೆ.ME P 55 Our real existence.
  7. ಪ್ರಾಣಾಹುತಿಯ ಶಕ್ತಿಯು ಶುದ್ಧ ಮನಸ್ಸಿನ ಮೂಲಕವಾಗಿ ಕಾರ್ಯ ಮಾಡುವ ದೈವೀ ಶಕ್ತಿಯಾಗಿದೆ. ಮನಸ್ಸನ್ನು ಹೇಗೆ ಶುದ್ಧ ಮಾಡಲಾಗುತ್ತದೆ? ಅದು ದೈವೀ ಶಕ್ತಿಯ ಸಂಬಂಧವನ್ನು ಹೇಗೆ ಪಡೆಯುತ್ತದೆ? ಸುಲಭವಾದ ಉತ್ತರವೆಂದರೆ ಯಾವಾಗ ಸಂಕಲ್ಪವು ದೇವರೊಡನೆ ಶಾಶ್ವತ ಸಂಬಂಧ ಪಡೆದುಕೊಳ್ಳುವುದೋ ಆಗ ಮಾತ್ರ ಇದು ಸಂಭವ.VR II 151 spiritual training through yogic transmission
  8. ಆತ್ಮನಿರಸನಕ್ಕೆ ಸಮಾನವೆನಿಸುವ ಸ್ಥಿತ್ಯತೀತವಾದ ಅವಸ್ಥೆಯಿಂದ ಕೊಡಲಾಗುವ ಸೌಮ್ಯ ಪ್ರಾಣಾಹುತಿಯಿಂದ ಅಭ್ಯಾಸಿಯ ಮೇಲೆ ಅದ್ಭುತ ಪರಿಣಾಮ ಉಂಟಾಗುವುದೆಂದು ನನ್ನ ಅನುಭವವು ಸಿದ್ಧಮಾಡಿದೆ. ಭಾವಾವೇಶದ ಶಕ್ತಿಯುತ ಪ್ರಾಣಾಹುತಿಯೂ ಈ ಕೆಲಸವನ್ನು ಮಾಡಲಾರದು. ಪರಮತತ್ತ್ವವು ಶಕ್ತಿ, ಆವೇಶ ಅಥವಾ ಉಷ್ಣತೆಯ ಆಚೆಗಿದೆ. ಉಷ್ಣತೆ ಹುಟ್ಟುವುದಕ್ಕಿಂತ ಮೊದಲಿನ ಸ್ಥಿತಿಯನ್ನು ಅದು ಹೋಲುತ್ತದೆ. ವಾಸ್ತವವಾಗಿ ಅದು ಅನುಭವ ಅಥವಾ ತಿಳಿವಳಿಕೆಯನ್ನು ಮೀರಿದೆ. ನಿಜಾರ್ಥದಲ್ಲಿ ಅದು ಪರಮತತ್ತ್ವ.VR I -145. Stages of progress.
  9. ಭೌತವಸ್ತುವಿನ ಕಣಗಳು ಶಕ್ತಿಯಾಗಿ ಮಾರ್ಪಡಬಲ್ಲವು. ಏಕೆಂದರೆ ಭೌತ ಪದಾರ್ಥವು ಕೇವಲ ಶಕ್ತಿಯ ಸ್ಥೂಲ ಅವಸ್ಥೆಯಾಗಿದೆ. ಇದು ವಿಜ್ಞಾನದ ನಿಯಮ . ನನಗೆ ತಿಳಿದ ಮಟ್ಟಿಗೆ ಅಧುನಿಕ ವಿಜ್ಞಾನವು ಕೂಡ ಇದನ್ನು ಒಪ್ಪಿಕೊಳ್ಳುತ್ತದೆ. ಇದು ನಮ್ಮ ಪ್ರಾಣಾಹುತಿಯ ಪದ್ಧತಿಯ ಮೂಲ ಆಧಾರವಾಗಿದೆ. ‘ಪ್ರಾಣಾಹುತಿಯ’ ಕಾರ್ಯವು ವಸ್ತುವನ್ನು ಶಕ್ತಿಯನ್ನಾಗಿ ಮತ್ತು ಶಕ್ತಿಯನ್ನು  ಅಂತಿಮ ತತ್ವದಲ್ಲಿ ಮಾರ್ಪಡಿಸುವುದಾಗಿದೆ.VR II-216.
  10. ‘ಯಾರದಾದರೂ ಪ್ರಾಣಾಹುತಿಯನ್ನು ಸ್ವೀಕರಿಸುವುದು ಬೇಡವಾಗಿದ್ದರೆ, ಆ ವ್ಯಕ್ತಿ ಮತ್ತು ತನ್ನ ನಡುವೆ ಒಂದು ಕಾಲ್ಪನಿಕ ಗೋಡೆಯನ್ನು ಕಲ್ಪಿಸಬೇಕು’ ಎಂಬುದು ಅವನ ಗ್ರಹಿಕೆಯಾಗಿತ್ತು. ಅದು ತಪ್ಪು ಏಕೆಂದರೆ, ಪ್ರಾಣಾಹುತಿಯನ್ನು ಗೋಡೆಗಳಾಚೆಗೂ ಕಳುಹಿಸಲು ಸಾಧ್ಯ. ವಿಚಾರವು ಗೋಡೆಯನ್ನು ದಾಟಿ ಸಾಗಲು ಏಕೆ ಸಾಧ್ಯವಿರಬಾರದು? ಒಬ್ಬನು ಮುಚ್ಚಿದ ಕಬ್ಬಿಣದ ಕೋಣೆಯಲ್ಲಿ ಕುಳಿತರೆ ಮತ್ತು ಅವನಿಗೆ ಪ್ರಾಣಾಹುತಿಯನ್ನು ನಿರ್ದೇಶಿಸಿದರೆ, ಅವನನ್ನು ತಲುಪಲು ಅದು ಅಸಮರ್ಥವಾಗುವುದೇ? ಖಂಡಿತ ಇಲ್ಲ. ಅಂದ ಮೇಲೆ ಕೇವಲ ಕಾಲ್ಪನಿಕ ಗೋಡೆಗೆ ಏನು ಸಾಮರ್ಥ್ಯವಿರಲು ಸಾಧ್ಯ? ಯಾರ ಪ್ರಾಣಾಹುತಿಯು ಬೇಕಿಲ್ಲವೂ ಅವನಿಂದ ದೂರ ಉಳಿದು ಭೇಟಿಯಾಗದಿರುವುದೇ ಹೆಚ್ಚು ಒಳಿತು.AB II VOL I P 33.