(ಪಾಶ್ಚಾತ್ಯ ದೇಶಗಳ ಪ್ರವಾಸದಿಂದ ಹಿಂದಿರುಗಿ ಬಂದಾಗ, ಮದ್ರಾಸಿನಲ್ಲಿ ೯ ನೇ ಜುಲೈ ೧೯೭೨ ರಂದು ನೀಡಿದ ಸಂದೇಶ)

ದೇವರು ಸರಳನು, ಮತ್ತು ಆತನನ್ನು ಪಡೆಯಲು ಅನುಸರಿಸಬೇಕಾದ ವಿಧಾನವೂ ಸಹ ಸರಳ ಮತ್ತು ನೇರದ್ದಾಗಿದೆ. ತಾಂತ್ರಿಕವಾಗಿ ‘ವಿವೇಕಶಾಲಿ‘ಯೆಂದು ಕರೆಯಲ್ಪಡುವ ಮನುಷ್ಯಜೀವಿಯು ದೇವರನ್ನು ಪಡೆಯಲು ಯತ್ನಿಸಿದ್ದಾನೆ. ಲೋಚನೆಯು ಶುದ್ಧಾಂಗ ‘ದೈವಿಕವಾದಾಗ ತನ್ನ ಮೂಲವನ್ನು ತಪ್ಪದೇ ಲುಪಬಲ್ಲುದು. ಗುಣಾವಗುಣ, ಉಪಾಧಿಗಳಿಂದ ಕಲುಷಿತವಾದರೆ, ಸಾಕ್ಷಾತ್ಕಾರವು ಭ್ರಷ್ಟವೂ, ಹೀನ ಮಟ್ಟದ್ದೂ ಆಗುತ್ತದೆ. ಸ್ಥೂಲ ಪದ್ಧತಿಗಳು ಸ್ಥೂಲ ಪರಿಣಾಮಗಳನ್ನುಂಟು ಮಾಡುವುವು.

ಸರಳ, ಶುದ್ಧ ಮತ್ತು ಅಂತಿಮ ತತ್ವವೂ ಆದದ್ದರ ಮೇಲಣ ಧ್ಯಾನವೊಂದೇ ಮನುಷ್ಯನನ್ನು ಈ ಅಪಾಯದಿಂದ ಉಳಿಸಬಲ್ಲುದು. ಇದು ಖಂಡಿತವಾಗಿಯೂ, ಮನುಷ್ಯನನ್ನು ಹೆಚ್ಚು ಹೆಚ್ಚು ಸರಳಗೊಳಿಸಿ, ಅವನ ಮೂಲದ ನೆಲೆಯತ್ತ ಕೊಂಡೊಯ್ಯುವುದು ಹೇಗೆ ಯೋಚಿಸುವಿರೋ, ಅಂತೆಯೇ ಆಗುವಿರಿ.

ಸೂಕ್ಷ್ಮಾತಿಸೂಕ್ಷ್ಮವಾದುದನ್ನು ಸಾಕ್ಷಾತ್ಕರಿಸಿಕೊಳ್ಳಲು ಸೂಕ್ಷ್ಮತರವಾದ ಪದ್ಧತಿಯೇ ಬೇಕು. ಒಂದೇ ಪದ್ಧತಿ, ಒಬ್ಬನೇ ಗುರು, ಮತ್ತು ಒಂದೇ ದೈವವನ್ನು ಹೊಂದಿರಬೇಕು. ಅದನ್ನು ಆರಿಸಿಕೊಳ್ಳಬೇಕಾದವರು ನೀವೇ.

ನಾವು ಸೂಕ್ಷ್ಮ ವಿಧಾನವನ್ನು ಅಂಗೀಕರಿಸಿದಾಗ ಮಾತ್ರವೇ, ಆಲೋಚನೆಯ ಸಾಂದ್ರತೆಯನ್ನು ದೂರಮಾಡುವದು ಸಾಧ್ಯ. ಈ ಕ್ಷೇತ್ರದಲ್ಲಿ ನನ್ನ ಅನುಭವವೇನೆಂದರೆ, ನಿಮಗೆ ದೈವಿಕತೆಯು ಬೇಕಾಗಿದ್ದಲ್ಲಿ, ಅನುಸರಿಸುವ ಮಾರ್ಗವು ಸರಳ, ಸುಲಭ ಹಾಗೂ ಸಹಜವಾಗಿರಬೇಕು. – ಒಬ್ಬ ಹುಡುಗನು ಎಳೆವಯಸ್ಸಿನಲ್ಲಿ ಆಟಿಗೆಯನ್ನು ಮೆಚ್ಚಿಕೊಳ್ಳುತ್ತಾನೆ. ಅವನು ಬೆಳೆದಂತೆಲ್ಲ, ಆಟಿಗೆಯ ಮೇಲಿನ ಪ್ರೀತಿಯು ಹೊರಟುಹೋಗುತ್ತದೆ. ತನ್ನ ಸಂತೋಷಕ್ಕಾಗಿ ಅವನು ಮೊದಲು ಪ್ರೀತಿಸಿದ್ದಕ್ಕಿಂತ ಹೆಚ್ಚು ಸೂಕ್ಷ್ಮವಾದ ವಸ್ತುಗಳನ್ನು ಅಪೇಕ್ಷಿಸುತ್ತಾನೆ.

ನನಗೆ ಇಲ್ಲಿ ಒಂದು ದೊಡ್ಡ ಅಡಚಣೆ ಎದುರಾಗುತ್ತದೆ. ಜನರು ತಮ್ಮ ಮನಬಂದದ್ದನ್ನು ಅನುಸರಿಸುತ್ತ, ತಮಗಿಷ್ಟವಾದುದನ್ನು ಮಾಡುತ್ತಾರೆ, ಆದರೆ, ಅದರ ಪರಿಣಾಮ ಮಾತ್ರ, ನಾನು ಬಯಸಿದಂತೆ ಗಬೇಕೆಂದು ನಿರೀಕ್ಷಿಸುತ್ತಾರೆ. ಹಾಗಾಗುವುದು ನನಗೂ ಅವರಿಗೂ ಅತ್ಯಂತ ಪ್ರಿಯವಾದುದೇನೋ ಸರಿ. ಪರಿಣಾಮವೆಂದರೆ, ಒಂದು ರೀತಿಯ ಅಡ್ಡ ಗೋಡೆ ಏರ್ಪಡುವುದು. ಅನೇಕರ ಹೃದಯದಲ್ಲಿ ಇದು ನನಗೆ ಕಂಡುಬರುತ್ತದೆ. ಇದು (ಈ ಅಡ್ಡಗೋಡೆಯು) ಸತ್ಯವಸ್ತುವನ್ನು ಮರೆಮಾಚಿ, ಅದನ್ನು ಅಭ್ಯಾಸಿಯ ದೃಷ್ಟಿ ಪಥದಿಂದ ದೂರವಿಡುತ್ತದೆ. ನೀವು ನನ್ನನ್ನು ಹೊಣೆಗಾರನನ್ನಾಗಿ ಮಾಡುವುದಾದರೆ, ನಾನು ಹೇಳುವುದನ್ನು ನೀವು ಅನುಸರಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಜಪವನ್ನು ಮಾಡುವುದು ಹೇಗೆಂದು ಗೊತ್ತಿಲ್ಲದಿದ್ದರೂ, ಜನರು ಅದನ್ನು ಮಾಡುತ್ತಾರೆ. ಹಾಗೆಯೇ ಇತರ ಪೂಜಾ ಪದ್ಧತಿಗಳಿವೆ, ಜನರು ಅವುಗಳನ್ನು ಮಾಡುವುದು ತಮ್ಮ ತೃಪ್ತಿಗೋಸ್ಕರವೇ ಹೊರತು, ಭಗವಂತನನ್ನು ಮೆಚ್ಚಿಸಲಿಕ್ಕಲ್ಲ. ನಾನು ನಿಮ್ಮಲ್ಲಿ ಸ್ವಾಭಾವಿಕತೆಯನ್ನುಂಟುಮಾಡಲು ಬಯಸುತ್ತೇನೆ. ಆದರೆ ನೀವು ಯಾಂತ್ರಿಕತೆಯನ್ನು ಹೆಚ್ಚು ಮೆಚ್ಚುತ್ತೀರಿ. ಹೀಗೆ ನೀವು, ಕನ್ನಡಿಯನ್ನು ಅದರ ಹಿಂಭಾಗದಿಂದ ನೋಡುತ್ತೀರಿ.

ನಾವು ‘ರಾಜಯೋಗ’ದಂತಹ ಪ್ರಮಾಣ ಗ್ರಂಥಗಳನ್ನು ಓದುವುದಿಲ್ಲವೆಂಬುದು ಶೋಚನೀಯ ಸಂಗತಿ. ತಪ್ಪು ಆಚರಣೆಗಳಿಂದ ಶೇಖರಣೆಗೊಂಡ ಇತರ ವಸ್ತುಗಳೆಲ್ಲ ಹೊರಟುಹೋದಾಗ ರಾಜಯೋಗವು ಪಾದಾರ್ಪಣೆ ಮಾಡುತ್ತದೆ. ಪ್ರಶಿಕ್ಷಕರು (Preceptors) ಸ್ಥೂಲತೆಯನ್ನು ತೆಗೆದುಹಾಕಿ ಶುದ್ದೀಕರಣ ಮಾಡುತ್ತಾರೆ. ಆದರೆ ಜನರು ಮತ್ತೆ ಅದಕ್ಕೇ ಸುತ್ತಿಕೊಳ್ಳುತ್ತಾರೆ. ಆದ್ದರಿಂದ, ಇದರ ಪರಿಹಾರೋಪಾಯವನ್ನು ನೀವೇ ಕಂಡುಕೊಳ್ಳಬೇಕು ; ನಿಮ್ಮ ಕಾಲಿನ ಮೇಲೆಯೇ ನೀವು ನಡೆಯಬೇಕಷ್ಟೆ ! – ಹಾಗೆ. ಅದಕ್ಕೆ ಶಕ್ತಿಯ ಆವಶ್ಯಕತೆಯಿದೆ- ಎಂಬುದೇನೋ ಸರಿ, – ಅದಕ್ಕೆ ನಮ್ಮ ನೆರವು ನಿಮಗೆ ಅನಿವಾರ್ಯ, ಮತ್ತು, ಅದು ನಿಮಗೆ ಸದಾ ಲಭ್ಯವಿದೆ.

ಇಂದಿನ ನಮ್ಮ ಸತ್ಸಂಗದಲ್ಲಿ, ನಾನು ಮದರಾಸಿನ ಗಣ್ಯವ್ಯಕ್ತಿಗಳಲ್ಲನೇಕರನ್ನು ಕಾಬಹುದೆಂದು ಆಶಿಸಿದ್ದೆ. ಆದರೆ ಕೆಲವರನ್ನು ಮಾತ್ರ ಕಾಣುತ್ತಿದ್ದೇನೆ.