- ಒಂದು ಸ್ಥಿತಿಯ ನಿಜವಾದ ಜ್ಞಾನವೆಂದರೆ ನಾವು ಲಯಹೊಂದಿದ ಸ್ಥಿತಿಯಲ್ಲಿ ಸಮಗ್ರ ಏಕರೂಪತೆ.SMP-29 CH III knowledge and nature
- ಪುಸ್ತಕೀಯ ಜ್ಞಾನವನ್ನು ಅವಲಂಬಿಸಿದ ಯೋಗ ಸಾಧನಗಳು ಹೆಚ್ಚಾಗಿ ತಪ್ಪು ದಾರಿಯನ್ನು ಹಿಡಿಸುವಂಥವೂ ನಮ್ಮ ಆಧ್ಯಾತ್ಮಿಕ ಪ್ರಗತಿಗೆ ಹಾನಿಕಾರಕವಾದವೂ ಆಗಿರುತ್ತದೆ.RD -36
- ಜ್ಞಾನ ಶಬ್ದಕ್ಕೆ ಬಹುಶ: ‘ಗಾಢ ಶಾಂತಿ’ಯೆಂದು ಅರ್ಥ ಮಾಡಬಹುದು. ಸಂಕ್ಷೇಪವಾಗಿ ಹೇಳುವುದಾದರೆ, ‘ಜ್ಞಾನ’ ವೆಂದರೆ ‘ತಿಳುವೆಳಿಕೆ’ಯಲ್ಲ, ‘ಹೊಂದುವಿಕೆ’ (ಅಥವಾ ಪಡೆಯುವಿಕೆ)
- ಸಾಮಾನ್ಯ ಅರ್ಥದಲ್ಲಿ ಜ್ಞಾನ ಎಂದರೆ ತಿಳಿವಳಿಕೆ. ಅದು ದೈಹಿಕ, ಮಾನಸಿಕ ( ಬೌದ್ಧಿಕ), ಭೌತಿಕ ಅಥವಾ ಆಧ್ಯಾತ್ಮಿಕ ಎಂದು ವಿವಿಧ ರೀತಿಯದಿರಬಹುದು. ‘ಆಧ್ಯಾತ್ಮಿಕ’ವೆಂಬಲ್ಲಿ ಅದು ಅದೆಷ್ಟು ಅಸ್ಪಷ್ಟ ರೀತಿಯಲ್ಲಿ ಬಳಕೆಯಾಗುತ್ತಿದೆಯೆಂದರೆ ಅದರಿಂದ ಸೂಚಿತವಾಗುವ ನಿಜವಾದ ಅರ್ಥವನ್ನು ಅರಿಯುವುದು ಕಷ್ಟವಾಗುತ್ತದೆ. ಸಾಮಾನ್ಯ ತಿಳುವಳಿಕೆಯ ನಿಮ್ನ ಸ್ತರದಿಂದ ಹಿಡಿದು ಆಂತರಿಕ ಪ್ರಜ್ಞೆಯ ಉನ್ನತ ಮಟ್ಟದವರೆಗೂ ಅದರ ವ್ಯಾಪ್ತಿ ಹಬ್ಬಿದೆ. ಇದು ಬಹಳ ಗೊಂದಲಕ್ಕೂ, ಅಪಾರ್ಥಕ್ಕೂ ಎಡೆ ಮಾಡಿಕೊಡುತ್ತದೆ. ಕೆಲವೂಂದು ಶಾಸ್ತ್ರಗ್ರಂಥಗಳನ್ನು ಕಲಿತವನೂ, ಇನ್ನೂಬ್ಬ, ಪ್ರತಿಕ್ಷಣವೂ ‘ಅಹಂ ಬ್ರಹ್ಮಾಸ್ಮಿ’ ಎಂಬಂಥ ರೂಢ ವಾಕ್ಯಗಳನ್ನು ಉಚ್ಚರಿಸುವವನೂ ತಾನು ಜ್ಞಾನಿ ಅಥವಾ ಪ್ರಬುದ್ಧನೆಂದು ಹೇಳಿಕೊಳ್ಳ ಬಯಸುತ್ತಾನೆ. ಆತನ ಆಂತರಿಕ ಮಟ್ಟವೇನೇ ಇರಲಿ , ಜನರೂ ಆತನನ್ನು ಅಂತೆಯೇ ಒಪ್ಪಿಕೊಳ್ಳುತ್ತಾರೆ. ನಿಜವಾದ ಅರ್ಥದಲ್ಲಿ, ತನ್ನ ( ಆಧ್ಯಾತ್ಮಿಕ) ಸಾಧನೆಯ ಯಾತ್ರಾಕಾಲದಲ್ಲಿ ಅಭ್ಯಾಸಿಯು ಬೇರೆ ಬೇರೆ ಗ್ರಂಥಿಗಳಲ್ಲಿಯ ಆಧ್ಯಾತ್ಮಿಕ ಸ್ಥಿತಿಗಳ ಮೂಲಕ ಹಾದು ಹೋಗುವಾಗ ಅಭ್ಯಾಸಿಯಲ್ಲಿ ವಿಕಾಸಗೊಳ್ಳುವ ಆಂತರಿಕ ಮಾನಸಿಕ ಸ್ಥಿತಿಗೆ ಜ್ಞಾನ ಎಂಬ ಶಬ್ದ ಅನ್ವಯಿಸುತ್ತದೆ. ವಾಸ್ತವವಾಗಿ ‘ಜ್ಞಾನ’ ಎಂದರೆ, ಪ್ರತಿಯೊಂದು ಗ್ರಂಥಿಯಲ್ಲಿಯೂ ಇರುವ ಸ್ಥಿತಿಯನ್ನು ಸಾಕ್ಷಾತ್ಕರಿಸಿಕೊಳ್ಳುವುದಾಗದೆ. ಗ್ರಂಥಿಗಳು ಅಸಂಖ್ಯೆಯವಾಗಿರುವುದರಿಂದ ಅಭ್ಯಾಸಿಯು ಮುಟ್ಟಿದ ಮಟ್ಟಕ್ಕೆ ಅನುಗುಣವಾಗಿ ಅವನು ಪಡೆದುಕೊಂಡ ಜ್ಞಾನವು ಭಿನ್ನವಾಗಿರುತ್ತದೆ. ಹಾಗೆ ಒಬ್ಬನು ಮುಟ್ಟಿರುವ ಮಟ್ಟವನ್ನು ಅಥವಾ ಕಂಡುಕೊಂಡ ಜ್ಞಾನದ ಪರಿಮಿತಿಯನ್ನು ಖಚಿತವಾಗಿ ಹೇಳದೆ ಯಾರನ್ನಾಗಲಿ ಜ್ಞಾನಿಯೆಂದು ಕರೆಯುವುದು ಅರ್ಥಹೀನವೇ ಸೈ. ಜ್ಞಾನವು ಪ್ರಕಾಶಗೊಂಡ ಸಂಪೂರ್ಣ ಪ್ರಜ್ಞೆಯಲ್ಲಿ ನಾವು ಪ್ರವೇಶ ಹೊಂದಿ, ಅದರ ಪರಿಣಾಮವನ್ನು ಅರಗಿಸಿಕೊಂಡು.TI P3
- “ಯಾರು ಗತಿಸಿ ಹೋದುದರ ಬಗ್ಗೆ ಶೋಕಿಸುವುದಿಲ್ಲವೋ ವರ್ತಮಾನದ ಬಗ್ಗೆ ಕೃತಜ್ಞನಾಗಿರುವನೋ ,ಅವನೇ ಜ್ಞಾನಿ”AB I P 45 16 Feb 1929
- ಸಾಮಾನ್ಯ ತಿಳುವಳಿಕೆಯ ನಿಮ್ನಸ್ತರದಿಂದ ಹಿಡಿದು ಆಂತರಿಕ ಪ್ರಜ್ಞೆಯ ಉನ್ನತ ಮಟ್ಟದವರೆಗೂ ಅದರ ವ್ಯಾಪ್ತಿ ಹಬ್ಬಿದೆ. ಜ್ಞಾನವು ಪ್ರಕಾಶಗೊಂಡ ಸಂಪೂರ್ಣ ಪ್ರಜ್ಞೆಯಲ್ಲಿ ನಾವು ಪ್ರವೇಶ ಹೊಂದಿ, ಅದರ ಪರಿಣಾಮವನ್ನು ಅರಗಿಸಿಕೊಂಡು ಅದರಲ್ಲಿ ಲಯಹೊಂದಿದಾಗಲೇ ನಿಜವಾದ ಜ್ಞಾನದ ಸ್ಥಿತಿ ಉಂಟಾಗುತ್ತದೆ.SMP 29-30
- ಸತ್ಯದ ಒಳಗೂ ಹೊರಗೂ ಇರುವುದು ಜ್ಞಾನವೇAB I P 32 14 april 1928