- ನಮ್ಮ, ಸೃಷ್ಟಿಗೆ ಕಾರಣವಾದ ಶುದ್ಧ ಧಾರೆಗಳಾದರೂ ಪವಿತ್ರತಮ ಮೂಲದಿಂದ ಹುಟ್ಟಿರುವವು. ಆದುದರಿಂದಲೇ ನಮ್ಮಲ್ಲಿ ಪಾವಿತ್ರ್ಯವನ್ನು ಕುರಿತು ವಿಚಾರಗಳು ಸುಳಿಯುತ್ತಿರುವವು. ಆ ಧಾರೆಗಳು ಎಲ್ಲೆಡೆಯಲ್ಲಿಯೂ ಇದ್ದು ಶುದ್ಧ ಸ್ಥಿತಿಯಲ್ಲಿಯೆ ಇರುವವು.TM 53 eight maxim
- ನಿಸರ್ಗದಿಂದ ಬಂದ ಪ್ರತಿಯೊಂದು ವಸ್ತುವೂ ಪವಿತ್ರವಾಗಿರುವುದು.ಏಕೆಂದರೆ ಅವುಗಳ ಮೂಲವೇ ಶುದ್ಧತೆಯಿಂದ ತುಂಬಿತುಳುಕುತ್ತದೆ. ಮನುಷ್ಯನು ಶುದ್ಧ ಹಾಗೂ ಸಾತ್ವಿಕ ಸಾಧನೆಗಳಿಂದ ಮಾಡಿದ ಸಂಪಾದನೆಯಾದರೂ ಅದೇ ರೀತಿ ಪವಿತ್ರವಾಗಿರುವುದು.TM 53 eight maxim
- ಕೆಲ ಜನರು ತಮ್ಮ ಅಂತ:ಕರಣವೇ ತಮ್ಮ ಗುರುವೆಂದು ಹೇಳಿ ಅದನ್ನು ಅನುಸರಿಸುವರು. ಅಂತ:ಕರಣವು ಮನಸ್ಸು, ಬುದ್ಧಿ , ಚಿತ್ತ ಮತ್ತು ಅಹಂಕಾರಗಳಿಂದಾಗಿರುವುದು. ಇವೆಲ್ಲವೂ ಪರಿಶುದ್ಧವಾಗಿ ಸಮಸ್ಥಿತಿಗೆ ಬರುವವರೆಗೆ ಅಂತ:ಕರಣವು ಋತವಾಣಿಯನ್ನು ನುಡಿಯುವುದಿಲ್ಲ. ಆದುದರಿಂದ ಮನಸ್ಸಿನ ಎಲ್ಲ ಶಕ್ತಿಗಳಲ್ಲಿಯೂ ಶುದ್ಧತೆ ಬೇಕು.AB I P 7 early life
- ಈಗ ನಾವು ಆಹಾರದ ಮೇಲೆ ಶುದ್ಧತೆಯ ವಿಚಾರದ ಆಘಾತಕೊಟ್ಟಾಗ, ಕಿಡಿಗಳು ನಮ್ಮನ್ನು ಅಂತಿಮಸ್ಥಿತಿಯ ಸಮೀಪದ ಸ್ತರಕ್ಕೆ ಒಯ್ಯುವುದು.TM 52 eigth maxim
- ಊಟ ಮಾಡುವಾಗ ನಾವು ಅಂತಿಮ ಗುರಿಯ ಕಡೆಗೆ ಲಕ್ಷ್ಯವನ್ನು ಕೇಂದ್ರೀಕರಿಸುವ ಉದ್ದೇಶವೇನೆಂದರೆ ಅದರ ಪ್ರಭಾವವೂ ನಮ್ಮ ಮೇಲೆ ಆಗಿ ನಮ್ಮಲ್ಲಿ ಹೆಚ್ಚು ಹೆಚ್ಚು ಶುದ್ಧತೆ ಬೆಳೆದು ಗುರಿಯನ್ನು ತೀವ್ರ ಮುಟ್ಟಬೇಕು ಎಂಬುದು.TM 53 eigth maxim
- ನಾವೆಲ್ಲರೂ ಮಾನವ ಜೀವನದ ಮುಖ್ಯ ಗುರಿಯೊಂದಿಗೆ, ಬೌದ್ದಿಕವಾಗಿ , ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಂಬಂಧ ಹೊಂದಿದ ಸೋದರರು. ಅದು – ಇದು – ಎಂಬುದೆಲ್ಲ ಈಗ ಅಳಿದುಹೋಗಿದೆ. ಆ ಸರ್ವೇಶ್ವರನ ಎಲ್ಲಾ ಕಾರ್ಯ ಮತ್ತು ಪರಿಸರದಲ್ಲಿ ಕೇವಲ ಪರಿ ಶುದ್ಧತೆಯೊಂದೇ ಉಳಿದುಕೊಂಡಿದೆ. ಪರತತ್ವದೊಂದಿಗೆ ಮನುಷ್ಯರ ಭವಿಷ್ಯವನ್ನು ರೂಪಿಸುವ ಸಾಧನ ಅದೊಂದೇ.ME P 96