- ಪ್ರತಿಯೊಂದು ಘಟನೆಯೂ ಯಾವಾಗಲೂ ಭಗವಂತನ ಇಚ್ಛೆಗನುಸಾರವಾಗಿಯೇ ನಡೆಯುವುದು. ಆತನೆ ನಿಜವಾದ ಕರ್ತಾರ. ಅದನ್ನು ನಮ್ಮ ಇಚ್ಛೆಯೊಂದಿಗೆ ಅಥವಾ ಪ್ರಯತ್ನಗಳೊಂದಿಗೆ ಆರೋಪಿಸಿಕೊಂಡಾಗ ಮಾತ್ರ ತೊಂದರೆಯುಂಟಾಗುತ್ತದೆ. ಅದೇ ಕಾರಣದಿಂದಾಗಿಯೇ ನಾವು ಯಶಸ್ವಿಗಳಾದಾಗ ಹರ್ಷ ಪಡುತ್ತೇವೆ; ಅಪಯಶ ಹೊಂದಿದಾಗ ದುಖಿ:ಸುತ್ತೆವೆ. ನಮ್ಮನ್ನು ಬಂಧನದಲ್ಲಿಡುವುದು ಇದೇ.VR I 99
- ಪ್ರಾಮಾಣಿಕತೆಯು ಕೊನೆಗೆ ಒಳ್ಳೆಯ ಫಲವನ್ನು ಕೊಡುವುದು. ಅಪ್ರಾಮಾಣಿಕತೆಯು ಮೊದಮೊದಲು ಮಾತ್ರ ಲಾಭ ಕೊಡುವುದು – ಅದೂ ಕ್ವಚಿತ್ತಾಗಿ.AB I P 12
- ಶಾಂತಿಯು ನಮಗೆ ಬೇಕಾದ ವಸ್ತು; ಅಶಾಂತಿಯು ನಾವು ಉಪಯೋಗಿಸುವ ಆಯುಧ. ಅಶಾಂತಿಯಿಂದ ನಮಗೆ ಶಾಂತಿ ದೊರೆಯುವುದು. ಅಶಾಂತಿಯು ದೈವಿಕತೆಯ ಕಡೆಗಿನ ನಮ್ಮ ಮುನ್ನಡೆಗೆ ಸಹಾಯಕವಾಗುವುದು.AB I P 28
- ‘ಕೃತಘ್ನ ಮನುಷ್ಯನು ಆಧ್ಯಾತ್ಮವಿದ್ಯೆಗೆ ಅರ್ಹನಲ್ಲ’ವೆಂಬ ವಿಚಾರ ಬಂದಿತು. ಇಂಥವನು ಆಧ್ಯಾತ್ಮದ ಕಡೆಗೆ ಬರಲು ಇಚ್ಛೆಪಟ್ಟರೆ ಕೃತಘ್ನತೆಯ ಚಟವನ್ನು ಮೊದಲು ಬಿಟ್ಟು ಬಿಡಬಡಬೇಕು.AB I P 154.
- ನಾಲ್ಕನೇಯ ನಿಯಮ-ಸತ್ಯಹೇಳುವುದರ ಅರ್ಥವೇನೆಂದರೆ ನಾವಿದ್ದ ಸ್ಥಿತಿಯಲ್ಲಿ ನಮ್ಮನ್ನು ಪ್ರಕಟಗೊಳಿಸುವುದು. ಈ ಸ್ಥಿತಿಗೆ ಬಂದ ಮನುಷ್ಯನು “ ಅದು ಏನಿದೆಯೋ ಇದೆ” ಎಂದು ವಿವಶನಾಗಿ ಹೇಳುವನು.TM 42
- ಜನಸಾಮಾನ್ಯರ ಬುದ್ಧಿಗೆ ಈ ತತ್ವಜ್ಞಾನವು ನಿಲುಕುವುದಿಲ್ಲವಾದ್ದರಿಂದ ಈ ವಿವರಣೆಯು ಹೊಸತೆನಿಸಬಹುದು. ಈ ಕಾರಣದಿಂದಲೇ ಪ್ರತಿಯೊಂದನ್ನೂ ಭಗವಂತನಿಂದ ಬಂದ ವರವೆಂದು ತಿಳಿದು ಯಾರೊಂದಿಗೂ ದ್ವೇಷಭಾವನೆ ಬೆಳೆಸಬಾರದೆಂಬ ಸರ್ವಸಾಮಾನ್ಯ ಉಪದೇಶ ಮಾಡಲಾಯಿತು.TM 50
- ನಮ್ಮ ನಿಯಮಗಳಲ್ಲಿ ಸಂಧ್ಯೆ ಹಾಗೂ ಉಪಾಸನೆ ಮೊಟ್ಟ ಮೊದಲು ಬಂದಿವೆ. ಕಾರಣವೇನೆಂದರೆ, ಅವನ್ನಾಚರಿಸುವುದರಿಂದ ನಾವು ಯಾವ ಶಕ್ತಿಯನ್ನು ಒಂದಿಲ್ಲೊಂದು ದಿನ ಸಹಜವಾಗಿ ಪಡೆಯತೊಡಯಬೇಕಾಗಿದೆಯೋ ಅದನ್ನು ಆರಂಭದಿಂದಲೇ ಪಡೆಯತೊಡಗುವೆವು.TM-13