ಸಮರ್ಥ ಗುರು ಮಹಾತ್ಮಾ ಶ್ರೀ ರಾಮಚಂದ್ರಜಿ ಮಹಾರಾಜ, ಫತೇಹಗಡ (ಉ.ಪ), ಹಾಗೂ ಅವರ ಅರ್ಹ ಶಿಷ್ಯರಲ್ಲೊಬ್ಬರಾದ, ಉತ್ತರ ಪ್ರದೇಶದ ಷಾಹಜಹಾನಪುರದ ಶ್ರೀ ರಾಮಚಂದ್ರಜಿಯವರ ಸಂಶೋಧನೆಗಳು ಮತ್ತು ಪ್ರಕಟಣೆಗಳಿಂದಾಗಿ, ‘ಸಹಜಮಾರ್ಗ’ ಎಂಬ ಹೆಸರಿನಲ್ಲಿ ಆಧ್ಯಾತ್ಮಿಕ ತರಬೇತಿಯ ಹೊಸದೊಂದು ಕ್ರಾಂತಿಕಾರಿ ಪದ್ಧತಿ ಬೆಳಕಿಗೆ * ಬಂದಿದೆ. ಷಾಹಜಹಾನಪುರದ ಶ್ರೀ ರಾಮಚಂದ್ರಜಿಯವರೇ “ಶ್ರೀ ರಾಮಚಂದ್ರ ಮಿಷನ್’ದ (ಸಮರ್ಥ ಗುರುವಿನ ಹೆಸರುಳ್ಳ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು. ಅವರೇ ಈ ‘ಸಹಜಮಾರ್ಗದರ್ಶನ’ ಗ್ರಂಥದ ಲೇಖಕರು.
ಈ ಗ್ರಂಥವು ಬೇರೆ ಬೇರೆ ಸಮಯಗಳಲ್ಲಿ ಬರೆಯಲಾದ ಹಾಗೂ ಕೆಲವು ಪ್ರಕಟಿಸಲಾದ, ಪ್ರಸ್ತುತ ಲೇಖಕರ ಲೇಖನಗಳ ಹಾಗೂ ಪತ್ರಗಳ ಸಂಗ್ರಹವಾಗಿದೆ. ಯೋಗದ ಅಭ್ಯಾಸಿಗಳಿಗೆ ಆಧ್ಯಾತ್ಮಿಕ ಆಹಾರ ಹಾಗೂ ತತ್ತ್ವಜ್ಞಾನಿಗಳಿಗೆ ಮನಃಸಂಬಂಧಿತ ಆಹಾರವನ್ನು ಒದಗಿಸುವ ವಿವಿಧ ವಿಷಯಗಳನ್ನು ಈ ಗ್ರಂಥವು ಒಳಗೊಂಡಿದೆ.
ಇದು ಸಂಪೂರ್ಣ ಶುದ್ಧವಾದ ಮನಸ್ಸು ಮಾತ್ರ ಸ್ಪರ್ಶಿಸಬಹುದಾದ, ತಲುಪಬಹುದಾದ ಅತ್ಯುಚ್ಚ ಮಟ್ಟದ ಅತಿಮಾನಸ ಪ್ರಜ್ಞೆಯ ಅತ್ಯುಚ್ಚ ಅನುಭವವನ್ನಾರಿಸಿದ ಪ್ರಮಾಣಗ್ರಂಥ ಸ್ವರೂಪದ್ದಾಗಿದೆ. ವಾಸ್ತವವಾಗಿ, ‘ಪ್ರಮಾಣ ಗ್ರಂಥಗಳೆಂದೆನಿಸಿದ ಅನೇಕ ಧಾರ್ಮಿಕ ಗ್ರಂಥಗಳ ಅಧಿಕೃತತೆಯ ಹಕ್ಕು ಅವುಗಳ ಮೂಲ ಪುರುಷರ ಅನುಭವಗಳ ದೆಸೆಯಿಂದಾಗಿ ಬಂದಿದೆ; ಆದರೆ, ಕಾಲಘಟ್ಟಗಳ ಹಾಗೂ ಪರಿಸ್ಥಿತಿಗಳ ಧ್ವಂಸಕ ಪರಿಣಾಮಗಳಿಂದಾಗಿ, ಸದ್ಯದ ಮಾನವ ಬುದ್ಧಿಯ ಮಟ್ಟವು, ಎಲ್ಲ ಭೌತಿಕ, ಅತಿಭೌತಿಕ (ಭೌತಾತೀತ), ಅಷ್ಟೇ ಅಲ್ಲ, ಆಧ್ಯಾತ್ಮಿಕ ನಿರ್ಬಂಧನೆಗೆ ಒಳಪಡದ, ನಿರಪೇಕ್ಷ ಅಂತರ್ಜ್ಞಾನ- ದರ್ಶನಕ್ಕಾಗಿ ಹಾತೊರೆಯುತ್ತಿದೆ. ಮಾನವ ಹೃದಯದ ಅಂತರಾಳವನ್ನು ನೇರವಾಗಿ ಮುಟ್ಟುವ ಈ ಗ್ರಂಥದಿಂದ ಈ ಬೇಡಿಕೆಯು ಧಾರಾಳವಾಗಿ ಈಡೇರಿಸಲ್ಪಟ್ಟಿದೆ.
ತಮ್ಮ ಸಾರತತ್ತ್ವವು ಕಣ್ಮರೆಯಾಗಿ ಹೋಗಿ, ಕೇವಲ ಕರ್ಕಶ ಮಾಡುವ ಅಸ್ಥಿಪಂಜರಗಳಾಗಿ ಉಳಿದಿರುವ, ಪ್ರಾಚೀನ ಪವಿತ್ರ ಗ್ರಂಥಗಳ ನಿಜವಾದ ಶುದ್ಧತೆ/ಪಾವಿತ್ರ್ಯಗಳನ್ನು ಈ ಗ್ರಂಥವು ಪ್ರಕಾಶಪಡಿಸುತ್ತದೆ. ಈ ಗ್ರಂಥದಲ್ಲಿ ಉಲ್ಲೇಖಿಸಲಾದ ವಿಷಯಗಳು ಸಪ್ರಮಾಣವಾಗಿವೆ. ಏಕೆಂದರೆ, ಇವು ಕೇವಲ ಲೇಖಕನ ಅನುಭವವನ್ನಾಧರಿಸಿವೆ ಎಂಬುದಕ್ಕಾಗಿ ಮಾತ್ರವಲ್ಲ, ಬದಲಿಗೆ, ಬಹಳಷ್ಟು ಜನರು ಇವುಗಳನ್ನು ಅನುಭವಪಟ್ಟಿದ್ದಾರೆ ಮತ್ತು ಇತರರಿಂದಲೂ – ಅವು ಖಚಿತಗೊಳಿಸಲ್ಪಟ್ಟಿವೆ, ಹಾಗೂ ಪ್ರಾಮಾಣಿಕವಾಗಿ ಹಾಗೆ ಮಾಡಲು ಬಯಸುವ ಯಾರು ಬೇಕಾದರೂ ಅವುಗಳನ್ನು ಪ್ರಮಾಣೀಕರಿಸಿ ನೋಡಬಹುದಾಗಿದೆ.
ದೈವೀ ಶಕ್ತಿ-ಸ್ಪಂದನಗಳನ್ನು ಸಂಚಾರಣಗೊಳಿಸುವ ನಮ್ಮ ಗುರುಗಳ ಸಾಮರ್ಥ್ಯ, ಆಧ್ಯಾತ್ಮಿಕ ಅಭ್ಯಾಸಗಳ ಸರಿಯಾದ ಪದ್ಧತಿಗಳು, ಹಾಗೂ ದೃಷ್ಟಿಯಲ್ಲಿಟ್ಟುಕೊಳ್ಳಬೇಕಾದ ಅತ್ಯುಚ್ಚ ಗುರಿ, ಇವುಗಳು ಸಹಜಮಾರ್ಗದ ವಿಶೇಷ ಧನಾತ್ಮಕ ಅಂಶಗಳಾಗಿವೆ. ಗುರುತ್ವದ ಕುರಿತಾದ, ಮುಕ್ತಿಯನ್ನು ಪಡೆಯಲು ಸಂನ್ಯಾಸಾಶ್ರಮ ಮತ್ತು ತಾಪಸಿಕ ಜೀವನವು ಅನಿವಾರ್ಯವೆಂಬ ಬಗ್ಗೆ, ಆದಿಕಾಲದ (ಅಪರಿಷ್ಕೃತ) ಹಾಗೂ ಮಾನವರೂಪಿ ದೇವರ (ಕಲ್ಪನೆಯ) ಬಗ್ಗೆ, ತಥಾಕಥಿತ ‘ಯೋಗ’ದ ಅಪಕ್ವ, ಯಾಂತ್ರಿಕ ಶಾರೀರಿಕ ಅಭ್ಯಾಸಗಳ ಬಗ್ಗೆ ಇರುವ ಸಾಂಪ್ರದಾಯಿಕ ಹಾಗೂ ತಪ್ಪಾಗಿ ಭಾವಿಸಲಾದ ಕಲ್ಪನೆಗಳ ನಿರಾಕರಣೆಗಳು, ಸಾಕ್ಷಾತ್ಕಾರದ ಸಮಸ್ಯೆಗೆ ಅದರ (ಸಹಜಮಾರ್ಗದ) ಕ್ರಾಂತಿಕಾರಕ ಅನುಸಂಧಾನ ವಿಧಾನವನ್ನು ತೋರಿಸುತ್ತದೆ. ಮಾನವ ಕುಲವು ಅದರ ಪ್ರಯೋಗವನ್ನು ಕೈಗೊಳ್ಳಲು ಇರುವ ಏಕೈಕ ತಡೆಗೋಡೆಯೆಂದರೆ, ಅದರ ಸರಳತೆಯೇ ಆಗಿದೆ.
ಈ ಗ್ರಂಥವು ದರ್ಶನ ಶಾಸ್ತ್ರದಲ್ಲಿ – ಅನ್ವೇಷಣೆ ಮತ್ತು ಸಂಶೋಧನೆಯ ಹೊಸ ಮಾರ್ಗಗಳನ್ನು ತೆರೆಯುವುದು. ತಮ್ಮ ಅವಲೋಕನದ ಕ್ಷೇತ್ರವನ್ನು ಮತ್ತೂ ವಿಸ್ತಾರಗೊಳಿಸಿವುದು ಹಾಗೂ ಶ್ರೀಮಂತಗೊಳಿಸುವುದು ತತ್ತ್ವಶಾಸ್ತ್ರಜ್ಞರಿಗೆ ಬಿಟ್ಟ ವಿಷಯ. ಪ್ರತಿಯೊಂದು ಪ್ರಬಂಧ-ವಿಷಯವೂ ಒಂದು ಹೊಸ ಪರಿಪ್ರೇಕ್ಷ್ಯದಲ್ಲಿ (ನೋಟ) ಕಾಣಿಸಿಕೊಳ್ಳುತ್ತದೆ ಹಾಗೂ ವಾಸ್ತವಿಕ ಅನುಭವದ ಮೇಲೆ ಆಧರಿಸಿರುವದರಿಂದ, ಅನಾವಶ್ಯಕ ಕಾಲ್ಪನಿಕ ಊಹಾಪೂಹದ ಭ್ರಮೆಗಳ ಮತ್ತು ಶ್ರಂದ ಉಳಿತಾಯವಾಗುತ್ತದೆ. ( ವರ್ಜಿಸುತ್ತದೆ) . ಯಾವುದೇ ಆಡಂಬರದ ಮತ್ತು ಪಾಂಡಿತ್ಯದ ಶಬ್ದಾವಳಿಗಳನ್ನು ಉಪಯೋಗಿಸಿಲ್ಲವಾದರೂ, ಲೇಖಕರು ಸ್ಪಷ್ಟ ನಿರೂಪಣೆಗಳನ್ನು ಕೊಡುತ್ತಾರೆ. ಉದಾಹರಣೆಗೆ, ಜ್ಙಾನದ ಕುರಿತು ಅವರು ಹೇಳುವುದು – “ ಅದರ ವ್ಯಾಪ್ತಿಯು ಸಾಮಾನ್ಯ ಜ್ಞಾನದ ನಿಮ್ನ ಸ್ತರದ ಗ್ರಹಿಕೆಯಿಂದ ಅಂತರಿಕ ಜ್ಞಾನೋದಯದ ಉಚ್ಚ ಮಟ್ಟದವರೆಗೂ ವಿಸ್ತರಿಸಿಕೊಂಡಿದೆ.
ಒಬ್ಬ ನಿಜವಾದ ಯೋಗಿಯಂತೆ ಅವರು ಅನುಭವವನ್ನೇ ನಿಜವಾದ ಜ್ಞಾನ ಪ್ರಮಾಣ ಎಂದು ಒತ್ತಿ ಹೇಳುತ್ತಾರೆ. “ಆಕಾಶವು ದೇವರ ಸೃಷ್ಟಿಗೆ ತಾಯಿಯ ಪಾತ್ರವಹಿಸಿತು ಹಾಗೂ ಕಾಲವು ಅದರ ಅಭಾವದ ಸ್ಥಿತಿಯಾಗಿತ್ತು” ಎಂದು ನಿಸರ್ಗದ ನೇರ(ಅನುಭವಿಕ) ವೀಕ್ಷಣೆಯಿಂದ ಹೇಳಿ, ತತ್ವಜ್ಞಾನಿಗಳು ಹಾಗೂ ವಿಜ್ಞಾನಿಗಳಿಗೆ ಒಂದು ಅದ್ಭುತವಾದ ಕಲ್ಪನೆಯನ್ನು ಒದಗಿಸುತ್ತಾರೆ. ಮತ್ತೆ ʼಜಿವಾತ್ಮʼದ ಕುರಿತು ಅವರು ಹೇಳುವದೇನಂದರೆ- ಜೀವಾತ್ಮವು (ವ್ಯಕ್ತಿಗತ ಆತ್ಮವು) (ವ್ಯಷ್ಯ್ಟಾತ್ಮ) ತನ್ನ ವ್ಯಷ್ಟಿತ್ವವನ್ನು ( ಪ್ರತ್ಯೇಕ ಸತ್ತೆಯನ್ನು) ಧಾರಣ ಮಾಡಿದಾಗ ತನ್ನ ಅಸ್ತಿತ್ವದ ಅರಿವು ಪಡೆಯಿತು ಮತ್ತು ಅದರ ಅಸ್ತಿತ್ವದ ತಳಹದಿಯಾಯಿತು” ಎಂದು ಹೇಳಿ ಭ್ರಮಾತ್ಮಕ ಕಲ್ಪನೆಗಳಿಗೆ ತೆರೆಯೆಳೆಯುತ್ತಾರೆ. ತತ್ತ್ವಶಾಸ್ತ್ರದ ಮತ್ತು ಕೆಲವು ವೈಜ್ಞಾನಿಕ ವಿಷಯಗಳ ಮೇಲೆ ಕೂಡ ಬೆಳಕು ಬೀರುವ, ಚಿಂತನದ ಮೌಲಿಕತೆ ಹಾಗೂ ನಾವಿನ್ಯತೆಗಳನ್ನು ವ್ಯಕ್ತಗೊಳಿಸುವ ಅನೇಕ ವಾಕ್ಯಗಳಿಗಾಗಿ, ವಾಸ್ತವವಾಗಿ ಇಡೀ ಗ್ರಂಥವನ್ನು ಉಲ್ಲೇಖಿಸಬಹುದು. ಈ ಗ್ರಂಥದಲ್ಲಿ ವ್ಯಕ್ತಪಡಿಸಿದ ಪ್ರತಿಯೊಂದು ವಿಚಾರದ ಮೇಲೆ ಗ್ರಂಥಗಳನ್ನೇ ಬರೆಯಬಹುದು.
ಈ ಗ್ರಂಥದ ಆಳವಾದ ಅಧ್ಯಯನ ಮಾಡಲು ಹಾಗೂ ಅದರಲ್ಲಿ ಉಲ್ಲೇಖಿಸಲಾದ ಸತ್ಯಗಳನ್ನು, ಸಹಜಮಾರ್ಗ ಪದ್ಧತಿಗೆ ಅನುಸಾರವಾಗಿ ಯೋಗ್ಯ ಮಾರ್ಗದರ್ಶಕನ ಬಳಿಯಲ್ಲಿ ಅಭ್ಯಾಸವನ್ನು ಕೈಗೆತ್ತಿಕೊಳ್ಳುವ ಮೂಲಕ ಪ್ರಮಾಣಿಸಿ ನೋಡಲು ಓದುಗರನ್ನು ಆಹ್ವಾನಿಸಲಾಗಿದೆ.