1. ಪ್ರತಿಯೊಂದು ಘಟನೆಯೂ ಯಾವಾಗಲೂ ಭಗವಂತನ ಇಚ್ಛೆಗನುಸಾರವಾಗಿಯೇ ನಡೆಯುವುದು. ಆತನೆ ನಿಜವಾದ ಕರ್ತಾರ. ಅದನ್ನು ನಮ್ಮ ಇಚ್ಛೆಯೊಂದಿಗೆ ಅಥವಾ ಪ್ರಯತ್ನಗಳೊಂದಿಗೆ ಆರೋಪಿಸಿಕೊಂಡಾಗ ಮಾತ್ರ ತೊಂದರೆಯುಂಟಾಗುತ್ತದೆ. ಅದೇ ಕಾರಣದಿಂದಾಗಿಯೇ ನಾವು  ಯಶಸ್ವಿಗಳಾದಾಗ ಹರ್ಷ ಪಡುತ್ತೇವೆ; ಅಪಯಶ ಹೊಂದಿದಾಗ ದುಖಿ:ಸುತ್ತೆವೆ. ನಮ್ಮನ್ನು ಬಂಧನದಲ್ಲಿಡುವುದು ಇದೇ.VR I 99
  2. ಪ್ರಾಮಾಣಿಕತೆಯು ಕೊನೆಗೆ ಒಳ್ಳೆಯ ಫಲವನ್ನು ಕೊಡುವುದು. ಅಪ್ರಾಮಾಣಿಕತೆಯು ಮೊದಮೊದಲು ಮಾತ್ರ ಲಾಭ ಕೊಡುವುದು – ಅದೂ ಕ್ವಚಿತ್ತಾಗಿ.AB I P 12
  3. ಶಾಂತಿಯು ನಮಗೆ ಬೇಕಾದ ವಸ್ತು; ಅಶಾಂತಿಯು ನಾವು ಉಪಯೋಗಿಸುವ ಆಯುಧ. ಅಶಾಂತಿಯಿಂದ ನಮಗೆ ಶಾಂತಿ ದೊರೆಯುವುದು. ಅಶಾಂತಿಯು ದೈವಿಕತೆಯ ಕಡೆಗಿನ ನಮ್ಮ ಮುನ್ನಡೆಗೆ ಸಹಾಯಕವಾಗುವುದು.AB I P 28
  4. ‘ಕೃತಘ್ನ ಮನುಷ್ಯನು ಆಧ್ಯಾತ್ಮವಿದ್ಯೆಗೆ ಅರ್ಹನಲ್ಲ’ವೆಂಬ ವಿಚಾರ ಬಂದಿತು. ಇಂಥವನು ಆಧ್ಯಾತ್ಮದ ಕಡೆಗೆ ಬರಲು ಇಚ್ಛೆಪಟ್ಟರೆ ಕೃತಘ್ನತೆಯ ಚಟವನ್ನು ಮೊದಲು ಬಿಟ್ಟು ಬಿಡಬಡಬೇಕು.AB I P 154.
  5. ನಾಲ್ಕನೇಯ ನಿಯಮ-ಸತ್ಯಹೇಳುವುದರ ಅರ್ಥವೇನೆಂದರೆ ನಾವಿದ್ದ ಸ್ಥಿತಿಯಲ್ಲಿ ನಮ್ಮನ್ನು ಪ್ರಕಟಗೊಳಿಸುವುದು. ಈ ಸ್ಥಿತಿಗೆ ಬಂದ ಮನುಷ್ಯನು “ ಅದು ಏನಿದೆಯೋ ಇದೆ” ಎಂದು ವಿವಶನಾಗಿ ಹೇಳುವನು.TM 42
  6. ಜನಸಾಮಾನ್ಯರ ಬುದ್ಧಿಗೆ ಈ ತತ್ವಜ್ಞಾನವು ನಿಲುಕುವುದಿಲ್ಲವಾದ್ದರಿಂದ ಈ ವಿವರಣೆಯು ಹೊಸತೆನಿಸಬಹುದು. ಈ ಕಾರಣದಿಂದಲೇ ಪ್ರತಿಯೊಂದನ್ನೂ ಭಗವಂತನಿಂದ ಬಂದ ವರವೆಂದು ತಿಳಿದು ಯಾರೊಂದಿಗೂ ದ್ವೇಷಭಾವನೆ ಬೆಳೆಸಬಾರದೆಂಬ ಸರ್ವಸಾಮಾನ್ಯ ಉಪದೇಶ ಮಾಡಲಾಯಿತು.TM 50
  7. ನಮ್ಮ ನಿಯಮಗಳಲ್ಲಿ ಸಂಧ್ಯೆ ಹಾಗೂ ಉಪಾಸನೆ ಮೊಟ್ಟ ಮೊದಲು ಬಂದಿವೆ. ಕಾರಣವೇನೆಂದರೆ, ಅವನ್ನಾಚರಿಸುವುದರಿಂದ ನಾವು ಯಾವ ಶಕ್ತಿಯನ್ನು ಒಂದಿಲ್ಲೊಂದು ದಿನ ಸಹಜವಾಗಿ ಪಡೆಯತೊಡಯಬೇಕಾಗಿದೆಯೋ ಅದನ್ನು ಆರಂಭದಿಂದಲೇ ಪಡೆಯತೊಡಗುವೆವು.TM-13