1. ಜ್ಞಾನವು ಸಾಕ್ಷಾತ್ಕಾರದ  ಪೂರ್ವ ಸ್ಥಿತಿಯಾದುದರಿಂದ ಅದು ಅಗತ್ಯ ಮತ್ತು ಅಪರಿಹಾರ್ಯವೆಂಬ ಅಭಿಮತ ಹೊಂದಿದವರೂ ಕೆಲವರಿದ್ದಾರೆ. ನಾನು ಅವರೊಡನೆ ಸಮ್ಮತಿಸುವುದಿಲ್ಲ ,ಯಾಕೆಂದರೆ  ಜ್ಞಾನವು ಮಸ್ತಿಷ್ಕದ ಸಿದ್ಧಿ, ಆದರೆ ಸಾಕ್ಷಾತ್ಕಾರವು ಆತ್ಮದ ಜಾಗೃತಿ, ಆದುದರಿಂದ ಜ್ಞಾನದ ಕ್ಷೇತ್ರವನ್ನೂ ಮೀರಿದುದು. ಹಾಗಿರುವುದರಿಂದ, ಧಾರ್ಮಿಕ ಸಿದ್ಧಾಂತಗಳ ಸಿಂಧುತ್ವವನ್ನು  ವಿವರಿಸಬಲ್ಲವನು ಮತ್ತು ವಿಧಿ-ನಿಷೇಧಗಳನ್ನು ಆದೇಶಿಸಬಲ್ಲವನು, ಅಷ್ಟಕ್ಕೇ, ನಿಜವಾದ ಗುರುವೆಂದೆನಿಸಲಾರನು. ನಮಗೆ ಗುರುವಿನಿಂದ ಬೇಕಾದುದು ಆತ್ಮವನ್ನು ಜಾಗ್ರತಗೊಳಿಸಬಲ್ಲ ನಿಜವಾದ ಶಕ್ತಿಯ ಪ್ರೇರಣೆ ಮತ್ತು ಸಾಕ್ಷಾತ್ಕಾರದ ಮಾರ್ಗದಲ್ಲಿ ನಾವು ಕ್ರಮಣ ಮಾಡುವಾಗ ಆತನ ನೇರವಾದ ನೆರವಿನ ಆಧಾರ.SMP 83
  2. ಯಾವಾಗ ಅಭ್ಯಾಸಿ ತನ್ನನ್ನು ಹಾಗೂ ದೇವರನ್ನೂ ಮರೆತುಬಿಡುವನೋ ಆಗ ಅಂತಿಮ ಸ್ಥಿತಿಯನ್ನು ಹೊಂದುವನು. ( ಆತ ಇನ್ನೆಂದೂ ಜಗತ್ತಿನಲ್ಲಿ ಯಾವ ರೂಪದಲ್ಲಿಯೂ ಬರಲಾರನು). VR-11 237
  3. ಅನೇಕ   ವಿದ್ವಾಂಸ  ಸಂತರು  ಸಾಕ್ಷಾತ್ಕಾರದ ಸ್ಥಿತಿಯನ್ನು  ಅನೇಕ  ವಿಲಕ್ಷಣ  ರೀತಿಯಲ್ಲಿ  ಅರ್ಥ ನಿಷ್ಕರ್ಷೆ ಮಾಡಿದ್ದಾರೆ; ಆದರೆ  ಎಲ್ಲಿಯವರೆಗೆ ಅದನ್ನು ವ್ಯಾಖ್ಯೆಗೆ ಅಳವಡಿಸಲ್ಪಡಬಹುದೋ   ಅಲ್ಲಿಯವರೆಗೆ ಅದು  ಸಾಕ್ಷಾತ್ಕಾರವಲ್ಲ ಎಂದು ನನಗೆ  ತೋರುತ್ತದೆ. ನಿಜವಾಗಿಯೂ ಅದೊಂದು ಅಭಿವ್ಯಕ್ತಿಯನ್ನು ಮೀರಿದ ಮೂಕಸ್ಥಿತಿ. ಅಂತರ್ಬಾಹ್ಯದಲ್ಲಿ ಎಲ್ಲೇ ಆಗಲಿ ಪ್ರಕಾಶವನ್ನು ಕಾಣುವುದು ಅಥವಾ ಅನುಭವ ಹೊಂದುವುದು ಸಾಕ್ಷಾತ್ಕಾರವಲ್ಲವೇ ಅಲ್ಲ.SMP 41
  4. ನಿಜವಾಗಿಯೂ ಅದು(ಸಾಕ್ಷಾತ್ಕಾರ) ರುಚಿರಹಿತವಾದ ಬದಲಾವಣೆಯಿಲ್ಲದ ಸ್ಥಿರ(ನಿರಂತರ)ಸ್ಥಿತಿ.  ಅದರಲ್ಲಿ ಯಾವ ಮೋಹಕತೆಯಿಲ್ಲ, ಆಕರ್ಷಣೆಯಿಲ್ಲ; ಸಾಮಾನ್ಯವಾಗಿ ಜನಜನಿತ ಅರ್ಥದ ಆನಂದವೂ ಇಲ್ಲ. ಅದನ್ನು ‘ಸಂಗ್-ಎ-ಬೇ-ನಮಕ್’ ಅಂದರೆ ‘ಉಪ್ಪಿನ ರುಚಿ ಕಳೆದು ಕೊಂಡ ಉಪ್ಪಿನಹರಳು’ ಎಂದು ವರ್ಣಿಸುವುದು ಹೆಚ್ಚು ಸೂಕ್ತವೆನಿಸುತ್ತದೆ. ಓರ್ವನು  ಸಾಕ್ಷಾತ್ಕಾರ  ಹೊಂದಿದನೆಂದರೆ,  ಆಧ್ಯಾತ್ಮಿಕ  ಕ್ಷೇತ್ರದಲ್ಲಿ  ಚ್ಯುತಿಯಿಲ್ಲದಂಥ ಸಂಕಲ್ಪಶಕ್ತಿಯನ್ನು ಅವನು ಬೆಳೆಸಿಕೊಂಡಿರುತ್ತಾನೆ. ಅನುಭವ ಜ್ಞಾನವೇ  ಸತ್ಯವಾದುದು.
    ಸಾಮಾನ್ಯವಾಗಿ ಪಂಡಿತರು  ಸಾಕ್ಷಾತ್ಕಾರವನ್ನು ಅಥವಾ ಅದರ  ಸ್ಥಿತಿಗಳನ್ನು ಕುರಿತು ತಮ್ಮವಿದ್ವತ್ತಿನ ಆಧಾರದ ಮೇಲೆ ತಮ್ಮ ಅಭಿಪ್ರಾಯಗಳನ್ನು  ವ್ಯಕ್ತಮಾಡುತ್ತಾರೆಯೇ ಹೊರತು  ತಮ್ಮ ಪ್ರಾಯೋಗಿಕ ಅನುಭವದ ಆಧಾರದ ಮೇಲಲ್ಲ. ಆ ಕಾರಣ ಇಂದಿನ ಕಾಲದಲ್ಲಿ ‘ಸಾಕ್ಷಾತ್ಕಾರ’ವೆಂಬುದು ಒಂದು ಚಾತುರ್ಯದ ಮಾತಾಗಿಬಿಟ್ಟಿದೆಯೆಂದು ನಾನು ವಿಷಾದದಿಂದ ಹೇಳುತ್ತೇನೆ. ನಿಜವಾಗಿ ಹೇಳುವದಾದರೆ ‘ಸತ್ಯ’ವು ತನ್ನ ವರ್ಣಗಳನ್ನು ಅವರವರ  ಮನಸ್ಸಿನ ರುಚಿ,  ಕೌಶಲಗಳಿಗೆ ಬಿಟ್ಟುಕೊಟ್ಟು  ತಾನು ಆಳದಲ್ಲಿ ಮುಳುಗಿಕೊಂಡಿದೆ.  ಅದರ  ಫಲವಾಗಿ ಜನರು ಆ ವರ್ಣಮಯ ಚಿತ್ರಗಳ ಮೇಲೆ ತಮ್ಮ ಗಮನವನ್ನು ನೆಟ್ಟಿರುತ್ತಾರೆ, ಅದರೊಳಗೆ  ಸಿಕ್ಕಿಕೊಳ್ಳುತ್ತಾರೆ. ಎಷ್ಟರಮಟ್ಟಿಗೆ ಎಂದರೆ ಅದು  ಆಧ್ಯಾತ್ಮಿಕತೆಯೂ ಅಲ್ಲ, ಸತ್ಯವೂ ಅಲ್ಲ. ದೈವೀಜ್ಞಾನವನ್ನು  ಜಾಗ್ರತಗೊಳಿಸುವ, ನೈಜ ಅರ್ಥದ ಸಾಕ್ಷಾತ್ಕಾರವನ್ನು ಪಡೆಯದೆ, ಆ ವಿಷಯವನ್ನು ಮುಟ್ಟಲು ಯಾರಿಗೂ ಅಧಿಕಾರವಿರಬಾರದೆಂದು ನಾನು ನಂಬುತ್ತೇನೆ. ಈ  ಸಮಸ್ಯೆಯ ಪರಿಹಾರಕ್ಕೆ ಸಾಧನಾಮಯ ಜೀವನವೇ ಬೇಕು.SMP  42
  5. ಸಾಕ್ಷಾತ್ಕಾರವು ಒಂದು ಅಚಲವಾದ ಸ್ಥಿತಿಯೆಂದು ಹೇಳಬಹುದು ಇದನ್ನು ಸಾವಿರಾರು ವರ್ಷಗಳಲ್ಲಿ ಎಲ್ಲೋ ಒಬ್ಬರಿಗೆ ಕ್ವಚಿತ್ತಾಗಿ ಕೊಡಲಾಗುವುದು.. ಆದರೆ ಅದನ್ನು ಪೂರ್ಣವಾಗಿ ಪಡೆದ ಗುರುವೊಬ್ಬನು ದೊರೆತರೆ, ಅಭ್ಯಾಸಿಯೂ ಅದಕ್ಕಾಗಿ ಹಂಬಲಿಸುತ್ತಿದ್ದರೆ. ಆಗ ಅದು ಸುಲಭ ಪ್ರಾಪ್ಯವಾಗುವುದು. VR I 182
  6. ಪೂರ್ಣ ಮಿತತ್ವ ಮತ್ತು ಸಮತೆಗಳು ಮತ್ತೆ ಸ್ಥಾಪಿತವಾಗುವವರೆಗೆ ಸಾಕ್ಷಾತ್ಕಾರವು ಶಕ್ಯವಾಗುವುದಿಲ್ಲ.RD 34
  7. ಭಗವತ್ ಸಾಕ್ಷಾತ್ಕಾರವೆಂದರೆ ಆತ್ಮ ಸಾಕ್ಷಾತ್ಕಾರ ಮತ್ತು ಆತ್ಮ ಸಾಕ್ಷಾತ್ಕಾರವೆಂದರೆ ಭಗವಂತನ ಸಾಕ್ಷಾತ್ಕಾರ.RD 88
  8. ಒಮ್ಮೆ ನನ್ನ ಗುರುಗಳು ನನ್ನ ಸ್ಥಿತಿಯಯನ್ನು ಕುರಿತು ಅಭಿಪ್ರಾಯ ಪಡುತ್ತ . “ಮನುಷ್ಯನು ಮೇಲಕ್ಕೇರಿದಂತೆ ಆತನ ದೃಷ್ಟಿಯಲ್ಲಿ ಅವನತಿಯು ದೊಡ್ಡದಾಗುತ್ತ ಹೋಗುತ್ತದೆ” ಎಂದು ಹೇಳಿದರು. ಆದರೆ ಇದು ಯುಗ ಯುಗಾಂತರಗಳಲ್ಲಿ ವಿರಳ ವ್ಯಕ್ತಿಗೇ ಕರುಣಿಸಲಾಗುವ ಅತಿ ದೊಡ್ಡ ವರ.VR I 245
  9. ಪ್ರಾಣಾಹುತಿಯು ಮನುಷ್ಯನಲ್ಲಿ ಸುಪ್ತವಾಗಿರುವ ಅವಸ್ಥೆಗೆ ಹೊಸ ಚೈತನ್ಯವನ್ನಿತ್ತು. ಮಾನವ ಕುಲಕ್ಕೆ ಮಾತ್ರ ಮೀಸಲಾದ ಪರಮೋಚ್ಚ ಪದದ ಪ್ರಾಪ್ತಿಗೆ ಆತನನ್ನು ಅಣಿಗೊಳಿಸುತ್ತದೆ. ಅಷ್ಟೇ ಅಲ್ಲ , ಪ್ರಗತಿಯ ಪಥದಲ್ಲಿನ ಅಡ್ಡಿ ಆತಂಕಗಳನ್ನು ನುಚ್ಚು ನೂರು ಮಾಡಿ. ಮಾನವನ ಇಡೀ ಅಸ್ತಿತ್ವದ ಸ್ವರೂಪವನ್ನೇ ಪರಿವರ್ತಿಸುತ್ತದೆ, ಸಾಕ್ಷಾತ್ಕಾರದ ನಿಜವಾದ ಅರ್ಥವೆಂದರೆ “ಸಾವಿನ ಸಾವು” ಅಥವಾ “ಅಂತ್ಯದ ಅಂತ್ಯ” ಮನುಷ್ಯನು ಈ ಸ್ಥಿತಿಯಲ್ಲಿ ಲೀನನಾದರೆ , ಮುಂದಿನ ದಾರಿ ಸುಗಮವಾಯಿತೆಂದೇ ಅರ್ಥ. ME 85
  10. ದೇವರ ಬಗ್ಗೆ ಹೇಳಬೇಕಾದರೆ, ದೇವರು ಊಹಿಸಲಾಗದ ಕಣ್ಣಿಗೂ ಕಾಣದ ಹಾಗೂ ಕೇಳಲಾರದಂತಹ ಸ್ಥಿತಿಗಳ ಆಚೆಗಿರುವನು. ಆತನು ಸೃಷ್ಟಿಸುವ ಜ್ವಲ ತೇಜಸ್ಸು  ಹಾಗೂ ನಾದಗಳನ್ನು ದಾಟಿದ ಮೇಲೆ ನಾವು ಆತನನ್ನು ತಲುಪುತ್ತೇವೆ.VR II 225Page number 96 of vivarengalu
  11. ನೀವು ಶೋಧಿಸುತ್ತಿರುವ, ಮತ್ತು ನಿಜವಾದ  ಜೀವನವಾಗಿರುವ ಆತ್ಮ ನಿರಸನದ ಸ್ಥಿತಿ ಇದರಲ್ಲಿಯೆ ಇದೆ. ಎಲ್ಲ ಚಟುವಟಿಕೆಗಳೂ ಈ ಬಿಂದುವಿಗೆ ಬರುವ ಮೊದಲೇ ಮುಗಿದು ಹೋಗುವವು. ನಿಸರ್ಗದ ರಹಸ್ಯವನ್ನು ನಾನಿಂದು ಬಯಲಿಗಿಡುತ್ತಿದ್ದೇನೆ. ಈಶ್ವರ ಅಥವಾ ಮೂಲ ಅವಸ್ಥೆಯ ಕೀಲು ಇದೇ.TM 5
  12. ಅಜ್ಞಾನ ಮತ್ತು ಜ್ಞಾನ ಒಂದೇ ವಸ್ತುವಿನ ಎರಡು ತುದಿಗಳು. ಒಂದು ನಿರ್ದಿಷ್ಟ ದೂರದವರೆಗೆ ಅದು ಅಜ್ಞಾನ ಎಂದು ಕರೆಯಲ್ಪಡುತ್ತದೆ. ಅನಂತರ ಅದೇ ಜ್ಞಾನವಾಗಿ ಮಾರ್ಪಡುತ್ತದೆ. ಅವು ಚುಂಬಕದ ಎರಡು ದ್ರುವಗಳಂತೆ ಇವೆ. ಹೀಗೆ ವಿದ್ಯೆ(ಜ್ಞಾನ) ಇಲ್ಲದೆ ಅವಿದ್ಯಗೆ(ಅಜ್ಞಾನಕ್ಕೆ) ಅಸ್ತಿತ್ವವಿಲ್ಲ, ಅಥವಾ ಅವಿದ್ಯೆಯಿಲ್ಲದೆ ವಿದ್ಯೆಗೆ ಅಸ್ತಿತ್ವವಿರುವದಿಲ್ಲ.  ಒಂದು ಇದೆಯೆಂದರೆ ಇನ್ನೊಂದೂ ಇರಲೇಬೇಕು. ಅದರ ಅರ್ಥವೇನೆಂದರೆ, ಅವಿದ್ಯೆಯ ತೆರೆ ಹರಿದುಹೋದ ಮೇಲೆ ವಿದ್ಯೆ-ಅವಿದ್ಯೆಗಳೆರಡೂ ಹೊರಟು ಹೋಗುತ್ತವೆ. ವಿದ್ಯೆ-ಅವಿದ್ಯೆಗಳಲ್ಲಿ ಸೇರಿರುವ ಸಮಗ್ರಮಂಡಲವು ಅವಿದ್ಯೆಯಲ್ಲಿ ಅಡಕಗೊಂಡಿದೆ.  ಇವೆರಡಕ್ಕೂಆಚೆಇರುವ ‘ತಮ’ ಎಂಬುದರ ಸ್ಥಿತಿಯೇ ಅದು.SMP 30
  13. ಪೂರ್ಣ ಲಯಾವಸ್ಥೆಯನ್ನು ಹೊಂದುವುದೆಂದರೆ ಪರಾಕಾಷ್ಠೆಯ ರಿಕ್ತತೆಯನ್ನು ಹುಟ್ಟಿಸಿಕೊಳ್ಳುವುದು. ಹೇಗೂ ಪೂರ್ಣ ರಿಕ್ತತೆತೆಯು ಯಾವ ಸಂದರ್ಭದಲ್ಲಿಯೂ ಸಾಧ್ಯವಾಗುವುದಿಲ್ಲ. ಲಯಾವಸ್ಥೆಯ ಮರೆವಿನ ಸ್ಥಿತಿಯನ್ನು ಪೂರ್ಣ ಲಯವೆಂದು ಭಾವಿಸಬಹುದು. ಅದು ಅತ್ಯಂತ ಪ್ರಭಾವಶಾಲಿಯಾಗಿರುತ್ತದೆ. ದೊಡ್ಡ ದೊಡ್ಡ ಅವತಾರಗಳೂ ಅದನ್ನು ಹೊಂದಿಲ್ಲ. ಹರಿ-ಹರ ಬ್ರಹ್ಮಾದಿ ದೇವತೆಗಳಿಗೂ ಆ ಪ್ರಭಾವವನ್ನು ಎದುರಿಸಲು ಸಾಧ್ಯವಿಲ್ಲ.VR I 27
  14. ಒಬ್ಬನು ಎಲ್ಲವನ್ನೂ ಕಳೆದುಕೊಂಡ ಸ್ಥಿತಿಯ (Negation) ಅತ್ಯಂತ ಕೊನೆಯ ಹಂತವನ್ನೂ ಪಡೆದುಕೊಂಡ ನಂತರ, ಯಾವುದನ್ನು ಅನಂತದ ಅತ್ಯಂತ ಕೊನೆಯ ಸ್ಥಿತಿ(ಅಂತಿಮ ಸ್ಥಿತಿ) ಅಥವಾ ಪರಿಪೂರ್ಣ ಸ್ಥಿತಿಯೆಂದು ಕರೆಯಲ್ಪಡುವುದೋ ಆ ಸ್ಥಿತಿಯವರೆಗೆ ಮುಂದೆ ಮುಂದೆ ಹೋಗುತ್ತಲೇಯಿರಬೇಕಾಗುತ್ತದೆ. ಆವಾಗ ದೇಹದ ಕಣಕಣವೂ ಶಕ್ತಿಯಾಗಿ ಪರಿವರ್ತನೆ ಗೊಳ್ಳವುದು. ಆಗ ಆತನು ನಿಸರ್ಗದ ಉಪಕರಣವಾಗುವನು. ನಿಸರ್ಗದಲ್ಲಿರುವ ಪ್ರತಿಯೊಂದು ವಸ್ತುವೂ, ಆ ಸಮಯದಲ್ಲಿ, ಆತನ ಅಧೀನದಲ್ಲಿದ್ದು, ಪ್ರತಿಯೊಂದರ ಮೇಲೆಯೂ ಆತನ ಹಿಡಿತವಿರುವುದು. ಆದಾಗ್ಯೂ ಇದಾವುದರ ಅರಿವೂ ಆತನಿಗಿರುವುದಿಲ್ಲ.
  15. ಅನಂತತೆಯಲ್ಲಿ ಸಂಪೂರ್ಣವಾಗಿ ಜಿಗಿಯುವದನ್ನು ತಡೆಹಿಡಿಯಲು ಸಣ್ಣ ಪ್ರಮಾಣದಲ್ಲಿಯೇ ಸರಿ , ಮಾನವತೆಯ ಬಂಧನಗಳು  ಇರಲೇ ಬೇಕಾಗುವುದು. ಆದ್ದರಿಂದ ಸ್ಥಿರವಾದ ( ಬದಲಾಗದ) ಸ್ಥಿತಿಯನ್ನು ಹೊಂದಿದ ಮನುಷ್ಯನು ಸಹ  ಪ್ರಾಪಂಚಿಕ ವಾತಾವರಣದಿಂದಾಗಿ ವಿಚಲಿತಗೊಳ್ಳುವುದು ಸಹಜ.VR II 228 Page number 97 of vivarengalu
  16. ಬ್ರಹ್ಮನಲ್ಲಿ ಸಂಪೂರ್ಣವಾಗಿ ಲಯ ಹೊಂದಿದ ವ್ಯಕ್ತಿಯು ಎಲ್ಲ ಸಂದರ್ಭಗಳಲ್ಲಿಯೂ, ಎಂತಹ ಕೆಲಸವಿರಲಿ ಅದನ್ನು ಮಾಡಬಹುದು. ಆದರೆ ವಿಕ್ಷಕನಿಗೆ(ಹೊರಗಿನಿಂದ ನೋಡುವವನಿಗೆ) ಆತನು ಒಂದು ಪ್ರತಿಮೆಯಿದ್ದ ಹಾಗೆ ಕಂಡು ಬರುವನು.VR II 227 Page number 97 of vivarengalu
  17. ಶಕ್ತಿಯ ಹಿಂದೆಳೆದುಕೊಳ್ಳುವದರ ಅನಿಸಿಕೆಯು ಸುಮಾರಾಗಿ ಶೂನ್ಯತೆಯ (ಏನೂ ಇಲ್ಲದ ಸ್ಥಿತಿ) ಸ್ಥಿತಿಗೆ ಹೋಲುತ್ತದೆ. ನನಗೆ ಬೇಕಿರುವುದು ಸಾಮರ್ಥ್ಯವಲ್ಲ. ಅದರ ಅಂತಿಮ ಸ್ಥಿತಿ. ಯಾವಾಗ ಅದರ ಅವಶ್ಯಕತೆ ಉಂಟಾಗುವುದೋ . ಆಗ ಅದು ಇದ್ದೇ ಇರುವುದು.VR II 220 Page number 94 of vivarengalu
  18. ಸಾಮಾನ್ಯವಾಗಿ ಮನಸ್ಸು ಎರಡು ಒಲವುಗಳನ್ನು ಹೊಂದಿದೆ. ಮೊದಲನೆಯದು ಜಗತ್ತಿನ ಕಡೆಗೆ ಅಥವಾ ವಿವಿಧತೆಯತ್ತ ತಿರುಗಿದ್ದರೆ, ಎರಡನೆಯದು, ಅಂತಿಮವಾದ ಏಕತೆಯತ್ತ ತಿರುಗಿದೆ. ಅವುಗಳಲ್ಲಿ ಯೋಗ್ಯ ಹೊಂದಾಣಿಕೆ ಇರಬೇಕು. ಇವೆರಡರಲ್ಲಿ ಯಾವುದಾದರೊಂದಕ್ಕೆ ಅತಿಶಯ ಗಮನ ಕೊಡುವುದು ದೋಷವೇ ಆಗಿದೆ. ಒಬ್ಬ ಸಂತನಿಗೂ ಸಾಮಾನ್ಯ ಮನುಷ್ಯನಿಗೂ ಭೇದವಿರುವುದು ಇಲ್ಲಿಯೇ. ಏಕೆಂದರೆ ಸಂತನು ತನ್ನ ಸಂಕಲ್ಪ ಬಲದಿಂದ ಮನಸ್ಸಿನ ಅಧೋಮುಖವಾದ ಪ್ರವೃತ್ತಿಗಳನ್ನು ಊರ್ಧ್ವಮುಖವಾಗಿ ತಿರುಗಿಸಬಲ್ಲ. ಇದು ಸಾಮಾನ್ಯ ಮನುಷ್ಯನ ಯೋಗ್ಯತೆಗೆ ಮೀರಿದ ವಿಷಯ. ಏಕತೆ ಸ್ಥಿತಿಯಲ್ಲಿ ಸಂಪೂರ್ಣವಾಗಿ ಪ್ರವೇಶಿದ ಒಬ್ಬ ಸಂತ ವಿವಿಧತೆಯತ್ತ ತನ್ನ ಹೆಜ್ಜೆಗಳನ್ನು ತಿರುಗಿ ಇಡಬಲ್ಲ. ಬೇರೆ ಶಬ್ದಗಳಲ್ಲಿ ಹೇಳುವುದಾದರೆ ಏಕತೆಯ ಸ್ಥಿತಿಯಲ್ಲಿ ಸಂಪೂರ್ಣ ಲಯಾವಸ್ಥೆಯನ್ನು ಹೊಂದಿದಾಗ , ಒಬ್ಬನಲ್ಲಿ ಶೂನ್ಯಗೊಳಿಸುವುದು ಏನೂ ಉಳಿದಿರುವುದಿಲ್ಲ. ರೂಪ ಹಾಗೂ ಆಕಾರವಾಗಿ ಕಾಲಕ್ರಮದಲ್ಲಿ ಬೆಳೆಯುವ ಅಸ್ತಿತ್ವದ ಸ್ಥಿತಿಯನ್ನು ತನ್ನ ವಲಯದಲ್ಲಿ ಹೊಂದಿದ ಕೇಂದ್ರದಂತೆ ಆತನು ಪೂರ್ವ ಸ್ಥಿತಿಗೆ ಬರುತ್ತಾನೆ. ಅದರ ಅರ್ಥವೇನೆಂದರೆ, ನಿಜವಾದ ಲಯಸ್ಥಿತಿಗೆ ‘ಏಕತೆಯಲ್ಲಿ ಲಯವಾಗುವುದು’ ಎಂಬ ಪರಿಭಾಷೆ ಸರಿಯಾಗಲಾರದು. ಏಕೆಂದರೆ ಅಲ್ಲಿ ಏಕತೆ ಸಹ ಉಳಿದಿರುವುದಿಲ್ಲ. ಅದನ್ನು ‘ಅದು ಹೇಗಿದೆಯೋ ಹಾಗೆ’ ಎಂದು ಹೇಳುವುದು ಸೂಕ್ತ. ಆದರೆ ಆ ಸ್ಥಿತಿಯಲ್ಲಿ ಆನಂದವಿಲ್ಲ ರಮ್ಯತೆಯಿಲ್ಲ, ಸುಖವೂ ಇಲ್ಲ. ಅದು ಸ್ಥಿತಿ ರಹಿತ ಸ್ಥಿತಿ . ಈ ಅವಸ್ಥೆಗೆ ಎಳೆಯಲ್ಪಟ್ಟ ಒಬ್ಬನು, ಅಭಿರುಚಿ , ಸಂತೋಷ , ಆನಂದ ಯಾವುದನ್ನೂ ಅನುಭವಿಸದೆ ಇರುವುದರಿಂದ ತಾನು ನಷ್ಟ ಹೊಂದಿದೆನೆಂದು ಭಾವಿಸಬಹುದು. ವಾಸ್ತವವಾಗಿ ಒಬ್ಬನು ಬಯಸಬಹುದಾದ ಆನಂದವೆಂದರೆ ಅದೇ. ಆದರೆ ಇದು, ಶಾಸ್ತ್ರಗಳಲ್ಲಿ ಕೊಡಲಾದ ಆನಂದ ಸಾಗರವೆಂಬ ವಿವರಣೆಗೆ ಸರಿಹೊಂದುವುದಿಲ್ಲ, ಎಂದು ಯಾರಾದರೂ ಹೇಳಬಹುದು. ಅದು ಕೇವಲ ತಪ್ಪು ಕಲ್ಪನೆ. ಏಕೆಂದರೆ, ಆನಂದವು ಯಾವ ವಿಧದಲ್ಲಿಯೂ ಸಂತೋಷ ಹಾಗೂ ಸುಖದ ಭಾವನೆಯಿಂದ ಒಡಗೂಡಿ ಇರುವುದಿಲ್ಲ. ಇಗ ಒಬ್ಬನು ಮಧ್ಯದ ಸ್ಥಿತಿಗಳನ್ನು ಅನುಭವಿಸದೆ ಇಲ್ಲಿಯವರೆಗೆ ತರಲ್ಪಟ್ಟಿದ್ದರೆ ಆತನಲ್ಲಿ ವಿಶ್ವಾಸವಾಗಲಿ ಪ್ರಭುತ್ವವಾಗಲಿ ಹುಟ್ಟುವುದಿಲ್ಲ.VR II 58-59-60 In chapter Remembrance , sub title Anandam.