1. ಪಶ್ಚಾತಾಪವೆಂದರೆ ಮತ್ತೇನೂ ಅಲ್ಲ- ತನ್ನಲ್ಲಿಯ ವಿಚಾರ ತರಂಗಗಳನ್ನು ಆಘಾತದಿಂದ ಸ್ವಛ್ಛಗೊಳಿಸಿ ನಿರ್ವಾತ ಪ್ರದೇಶವನ್ನು ನಿರ್ಮಿಸಿಕೊಳ್ಳುವುದು. ಆಗ ಮೇಲಿನಿಂದ ಇಳಿದು ಬರುವ ಪ್ರವಾಹವು ಆ ಕಡೆಗೆ ತಿರುಗಿ ನಿಸರ್ಗದ ಸಮಾನತೆಯನ್ನು ಕಾಪಾಡುವುದು. ಇದರಿಂದ ಪೂರ್ವ ಸಂಸ್ಕಾರವೆಲ್ಲ ತೊಳೆದುಹೋಗುವುದು, ಇದೇ ಪಶ್ಚಾತಾಪದ ನಿಜ ಸ್ವರೂಪ.TM 58
  2. ಪಶ್ಚಾತಾಪವೆಂದರೆ ಒಂದು ಆಘಾತದ ಪರಿಣಾಮದಿಂದದಾಗಿ ನಮ್ಮಲ್ಲಿಯ ವಿಚಾರದ ಅಲೆಯಲ್ಲಿ ಸ್ವಲ್ಪಮಟ್ಟಿಗೆ ಉಂಟಾಗುವ ನಿರ್ವಾತದ ಸ್ಥಿತಿಯೇ ವಿನ: ಬೇರೇನೂ ಅಲ್ಲ. ನಿಸರ್ಗದೊಂದಿಗೆ ಏಕರೂಪವಾಗಿರುವುದಕ್ಕಾಗಿ ಇದು ಮೇಲಿನಿಂದ ಹರಿದು ಬರುವ ಧಾರೆಯದಿಕ್ಕನ್ನು ಬದಲಾಯಿಸಿ ಹಿಂದೆ ಉಂಟಾಗಿರುವ ಪರಿಣಾಮವನ್ನು ತೊಳೆದುಕೊಂಡು ಹೋಗಲು ಸಹಾಯ ಮಾಡುವುದು. ಇದನ್ನು ಪಶ್ಚಾತಾಪದ ನಿಜವಾದ ರೂಪವೆಂದು ಪರಿಗಣಿಸಬಹುದು. VR II 95
  3. ಒಂದು ವೇಳೆ ಮನುಷ್ಯ ತಾನು ಮಾಡಿದ ತಪ್ಪುಗಳಿಗಾಗಿ ಪಶ್ಚಾತಾಪಪಟ್ಟು ಆತ ಆಧ್ಯಾತ್ಮಿಕತೆಯತ್ತ, ಒಲವನ್ನುಹೊಂದಿ ನಿಮ್ಮ ಬಳಿಗೆ ಬಂದರೆ ಆತನನ್ನು ಸೇರಿಸಿಕೊಳ್ಳಬಹುದು. ಆದರೆ ಆತನು ಆ ತಪ್ಪುಗಳನ್ನು ಮತ್ತೆ ಮಾಡಬಾರದು. ಆತನು ತನ್ನ ತಪ್ಪುಗಳಿಗೆ ಪಶ್ಚಾತಾಪ ಹೊಂದಿ ತನ್ನ ಲಕ್ಷವನ್ನು ತಿರುಗಿಸಿದರೆ ತೀವ್ರವೇ ಪರಶುದ್ಧನಾಗುತ್ತಾನೆ.  ತನ್ನ ತಪ್ಪುಗಳನ್ನು ಮನ್ನಿಸಲು ಪ್ರಾರ್ಥನೆ ಮಾಡುವುದು, ಅಳುವುದು ಮುಂತಾದವು ಇದರಲ್ಲಿ ಸಮಾವೇಶಗೊಂಡಿವೆ. ಒಂದು ವೇಳೆ ಭಕ್ತನು ಆರ್ತಭಾವದಿಂದ ಕ್ಷಮೆಗಾಗಿ ಪ್ರಾರ್ತಿಸಿದರೆ ನಾನು ನಾಚಿಕೆ ಪಟ್ಟವನಾಗಿ ಆತನನ್ನು ಮತ್ತೆ ಸ್ವೀಕರಿಸುತ್ತೇನೆ ಎಂದು ಪವಿತ್ರ ಕುರಾನಿನಲ್ಲಿ ಹೇಳಲಾಗಿದೆ.VR II 262