(ತಿನ್‌ಸುಕಿಯಾ ಧ್ಯಾನಮಂದಿರದ ಉದ್ಘಾಟನಾ ಸಮಾರಂಭ, ೨೫೭)

ನಮ್ಮ ಮಿಷನ್ನಿನ, ತಿನ್‌ಸುಕಿಯಾ ಕೇಂದ್ರದ ಧ್ಯಾನಮಂದಿರದ ಉದ್ಘಾಟನಾ ಸಮಾರಂಭದ ಈ ಶುಭದಿನವು, ಭಾರತದೇಶದ ಮತ್ತು ಹೊರಗಿನ ನಮ್ಮ ಮಿಷನ್ನಿನ ಅಭ್ಯಾಸಿಗಳಿಗೆ, ವಿಶೇಷತಃ ತಿನ್‌ಸುಕಿಯಾ ಕೇಂದ್ರದ ಅಭ್ಯಾಸಿಗಳಿಗೆ ಸೌಭಾಗ್ಯದ ಮುನ್ಸೂಚಿಯಾಗಲೆಂದೇ ನನ್ನ ಪ್ರಾರ್ಥನೆ.

ವಿಕಸನದ ಚರಮಾವಸ್ಥೆಗೆ ತಮ್ಮನ್ನು ಕೊಂಡೊಯ್ಯಲು, ಅವರಿಗೆ ಬೋಧಿಸಲಾದ ಅಭ್ಯಾಸದ ಅನುಷ್ಠಾನದ ಅಂಗಗಳಷ್ಟೇ ಸಾಕೆಂಬುದು ಅಭ್ಯಾಸಿಗಳಲ್ಲಿ ತುಂಬಿರುವ ಸಾಮಾನ್ಯ ಕಲ್ಪನೆ. ಅವರ ಚಿಂತನೆಯು ಅದರಿಂದಾಚೆಗೆ ಹೋಗಲೊಲ್ಲದು. ರಾಜಯೋಗವು ನಮ್ಮ ಪದ್ದತಿಯ ಬುನಾದಿಯೆಂದು ನಾವು ಸೂಚಿಸುತ್ತೇವೆ. ಅದು ಸರಿ. ಆದರೆ ಅವರ ಕಲ್ಪನಾ ಲಹರಿಯು ಅದರ ಆಳವನ್ನು ತಲುಪದೆ, ಕೇವಲ ವಿಧಿನಿಯಮಗಳ ಅನುಷ್ಠಾನಕ್ಕಷ್ಟೆ ನಿಂತುಬಿಡುತ್ತದೆ. ಸಹಜಮಾರ್ಗದಲ್ಲಿ ಪ್ರಾಣಾಹುತಿಯ ಕಂಪು ಅಂತರಾಳದಲ್ಲಿ ನೆಲಸುವುದೆಂಬುದಂತೂ ಖಂಡಿತ. ಆದಾಗ್ಯೂ, ಇನ್ನೂ, ಹಿಂದೆ ಉಳಿಯುವ ಅಂಶಗಳೆಂದರೆ ಪ್ರೇಮ ಮತ್ತು ಭಕ್ತಿ, ಧ್ಯಾನದ ಕ್ರಿಯೆಯೊಂದಿಗೇ ಇವೂ ಅಂತರ್ಗತವಾಗಿರಬೇಕಾದುದು ಅತ್ಯಾವಶ್ಯಕ. (ಸಾಧನೆಯ) ಈ ಎರಡೂ ಮುಖಗಳು (ಧ್ಯಾನ, ಹಾಗೂ ಪ್ರೇಮ ಮತ್ತು ಭಕ್ತಿ) ಒಂದಾಗಿ ಬೆರೆಯಬೇಕೆಂಬುದನ್ನು ನಾನು ಒತ್ತಿ ಹೇಳಲೇಬೇಕು. ಏಕೆಂದರೆ ಹೀಗೆ ಮಾಡುವುದರಿಂದ ಸಾಧಕನು ತನ್ನ ಗುರಿಯನ್ನು ಶೀಘ್ರವಾಗಿ ತಲುಪಲು ಶಕ್ತನಾಗುವನು. ಈ ಅಂಶಗಳನ್ನು ನಿಮ್ಮೊಳಗೆ ಉಂಟುಮಾಡಿಕೊಳ್ಳಬೇಕಾದುದು ನಿಮ್ಮ ಹೊಣೆ. ಇದರ ಸಾಧನೆಯು, ಆ ಪರತತ್ವದ, ಅಂದರೆ ಈಶ್ವರನ ಸ್ಮರಣೆಯನ್ನು ನಿರಂತರವಾಗಿ ಕಾಯ್ದು ಕೊಳ್ಳುವುದಕ್ಕೆ ಶ್ರಮಿಸುವುದನ್ನು ಒಳಗೊಂಡಿದೆ. ಇಲ್ಲಿಯೂ ಸಹ, ಈ ತರದ ಸಾಧನೆಯಿಂದ ಮನಸ್ಸಿಗೆ ದಣಿವುಂಟಾಗಿ, ಪರತತ್ವದ ಸ್ಮರಣೆಯನ್ನು ಒಂದರ್ಧ ದಿನದಷ್ಟು ಮಾತ್ರ ಉಳಿಸಿಕೊಳ್ಳಲು ಸಾಧ್ಯವಾದೀತೆಂದು ಕೆಲವರು ಆಕ್ಷೇಪವೊಡ್ಡಬಹುದು.

ನೀವು ಏನೇ ಕೆಲಸ ಮಾಡಲಿ, “ಅದು ಭಗವದಾದೇಶ, ಅದರಿಂದಾಗಿ, ಹಾಗೆ ಮಾಡುವುದು ನನ್ನ ಕರ್ತವ್ಯ” ಎಂಬ ಭಾವನೆಯಿಂದ ಮಾಡಿರಿ. ಇದರಿಂದ ಸ್ಮರಣೆಯ ಸ್ಥಿತಿಯು ದೃಢವಾಗಿ ಮುಂದುವರಿಯುತ್ತದೆ. ಮತ್ತು ಇನ್ನೊಂದು ವಿಶೇಷ ಲಾಭವೆಂದರೆ, ಸಂಸ್ಕಾರಗಳುಂಟಾಗುವುದು ನಿಂತು ಹೋಗುತ್ತದೆ. ಭಗವಂತನ ಸ್ಮರಣೆಯನ್ನು ಸದಾಕಾಲ ಇಟ್ಟುಕೊಳ್ಳುವುದರಿಂದ, ನಮ್ಮಲ್ಲಿಪರಮಪ್ರಭುವಿನ ಮೇಲೆ ಆಳವಾದ ಪ್ರೇಮವುಂಟಾಗಿ, ಕ್ರಮೇಣ ವರ್ಧಿಸಿ ಉಕ್ಕಿ ಹರಿಯುವ ಸ್ಥಿತಿಯನ್ನು ತಲುಪುತ್ತದೆ. ಈ ಸ್ಥಿತಿಯ ಮೂಲಕ, ಕ್ರಮಶಃ ಭಕ್ತಿಯು ತನ್ನ ಪರಿಪೂರ್ಣ ರೂಪವನ್ನು ತಾಳುತ್ತದೆ. ಆದುದರಿಂದ, ಈ ಕ್ರಮವನ್ನು ಅನುಸರಿಸುವುದು ಅತ್ಯಂತ ಆವಶ್ಯಕ. * ಇನ್ನು, ಎರಡನೆಯ ಆವಶ್ಯಕತೆಯೆಂದರೆ, ಸದಾಚರಣೆ, ಮತ್ತು ಚ್ಚಾರಿತ್ರ್ಯ. ಅಂದರೆ, ನಮ್ಮ ನಡತೆಯು ಎಂದೆಂದಿಗೂ, ಇತರರು ಬೆರಳಿಟ್ಟು ತೋರಿಸುವಂತಿರಕೂಡದು. ನಮ್ಮ ನಿತ್ಯಜೀವನದ ನಿಯಮಗಳು, ಮತ್ತು ಎಲ್ಲರೊಂದಿಗಿನ ನಮ್ಮ ನಡೆನುಡಿಗಳು ಹಿತವಾಗಿಯೂ, ನಿಷ್ಕಪಟವಾಗಿಯೂ ಇರಬೇಕು. ಅಂತಹ ನಡೆನುಡಿಯಿಂದ ನಿಮಗೆ ನಿಜವಾದ ಸುಖಸಂತೋಷಗಳು ಲಭಿಸುವುದರ ಜೊತೆಗೆ, ಪ್ರಶಾಂತ ಸ್ಥಿತಿಯೊಂದು ನಿಮ್ಮೊಳಗೆ ತಂತಾನೇ ಅರಳಲಾರಂಭಿಸುವುದು. ಪರಮಾತ್ಮನ ಚಿಂತನೆಯಿಂದ ದೈವಿಕ ಪ್ರೇಮ ಮತ್ತು ಭಕ್ತಿಗಳು ವರ್ಧಿಸುತ್ತವೆ. ಈ ಪ್ರೇಮವನ್ನು ಬೆಳೆಸಿಕೊಳ್ಳುವುದು ನಿಮ್ಮ ಕೆಲಸ, ಅಲ್ಲದೆ, ನಿಮ್ಮ ಬಹುಮುಖ್ಯವಾದ ಕರ್ತವ್ಯವೆಂದು ನಾನು ಖಂಡಿತವಾಗಿ ಹೇಳುತ್ತೇನೆ. ನೀವು ಇದನ್ನು ಮಾಡದಿದ್ದರೆ, ಸೇವಾ ಮನೋಧವುಳ್ಳ ಪ್ರತಿಯೋರ್ವ ಅಭ್ಯಾಸಿಗೂ ವಿಧಿಸಲಾದ ಕರ್ತವ್ಯವನ್ನು ನಿರ್ವಹಿಸಿದಂತಾಗುವುದಿಲ್ಲ. ಅಲ್ಲದೆ, ನಿಮ್ಮ ಕರ್ತವ್ಯ ನಿರ್ವಹಣೆಯು ಸಂಪೂರ್ಣವಾಗುವಂತೆ ನೋಡಿಕೊಳ್ಳುವುದು ಓರ್ವ ಸಂತನ, ಅಷ್ಟೇಕೆ, ಓರ್ವ ಮನುಷ್ಯನೆನಿಸಿಕೊಂಡವನ ಗುಣವಿಶೇಷ. ನಾವು ನಮ್ಮ ದೃಷ್ಟಿಯನ್ನು ಅಂತರ್ಮುಖಿಯಾಗಿಟ್ಟುಕೊಂಡಿರಬೇಕು, ಸತ್ಯ ಹುದುಗಿರುವುದು ಲ್ಲಿ. ನೀವು ಹೀಗೆ ಮಾಡಿದಾಗ ನಮ್ಮ ಅಸ್ತಿತ್ವ’ವು ಎಲ್ಲಿಂದ ಮೂಡಿ ಬಂದಿತೋಸ್ತರದಲ್ಲಿ ನಮ್ಮ ಸ್ಥಿತಿಯು ನೆಲೆಸುತ್ತದೆ ; ಅಂದರೆ ನಾವು ನಿಜವಾದ ಸಂಪದ್ಭಂಡಾರ’ದ ಮೇಲೆ ನಮ್ಮ ಮುದ್ರೆಯನ್ನು ಮೂಡಿಸಿದಂತಾಗುತ್ತದೆ. ಈಗ ಆ ವಿಸ್ತಾರದ ಸ್ವರೂಪವನ್ನು ಬೆಳೆಸಿಕೊಳ್ಳುವುದು ನಮಗೆ ಬಿಟ್ಟಿದ್ದು, ಈ ವಿಸ್ತರಣ ಸ್ವರೂಪವು . ಉದ್ಭವಿಸುವುದು, ನಾವು ಆ ಪರತತ್ವದ ಧ್ಯಾನದ ಅನುಷ್ಠಾನದೊಂದಿಗೆ, ನಮ್ಮ ದೃಷ್ಟಿಯನ್ನು ಹೆಚ್ಚು ಹೆಚ್ಚು ಅಂತರ್ಮುಖಿಯಾಗಿಸಲು ಪ್ರಯತ್ನಶೀಲರಾದಾಗ. ಆ ಪರತತ್ವ ಪ್ರಾಪ್ತಿಗೋಸ್ಕರ ನಿಮ್ಮಲ್ಲಿ ತೀವ್ರವಾದ ತಳಮಳ ಉಂಟಾದರೆ, ಯಶಸ್ಸು ಸಿಗಲು ಹೆಚ್ಚು ಸಮ ಬೇಕಿಲ್ಲ. ನೀವು ‘ಆನಂದ’ದತ್ತ ಕೈಚಾಚುತ್ತಿದ್ದೀರಿ. ನಾನಾದರೋ, ”ತೀವ್ರ ಸಂವೇಗ’ ಹಾಗೂ ‘ಕಾತರತೆ’ಗಳನ್ನು ಕುರಿತು ಹೇಳುತ್ತಿದ್ದೇನೆ. ಆದರೆ, ಸೋದರ, ಈ ತಳಮಳ ಮತ್ತು ಕಾತರಗಳಿಂದ ದೊರೆಯುವ ಸಂತೋಷವು ‘ಶಾಂತಿ’ಯಿಂದ ಖಂಡಿತ ದೊರೆಯಲಾರದು. ಯಾವಾಗ ಕಾತರತೆಯು ವೃದ್ಧಿಗೊಂಡು ಚರಮಾವಸ್ಥೆಯನ್ನು ಮುಟ್ಟಿ, ಶಕ್ತಿಯ ಎಲ್ಲೆಯನ್ನು ದಾಟಿ ಮುಂದೆ ಹೋಗುವುದೋ, ಆಗಲೇ ನಿಜವಾದ ಶಾಂತಿ’ಯು ಆರಂಭವಾಗುವುದು.

ನನ್ನ ಬಲವಾದ ಅಭಿಲಾಷೆಯೆಂದರೆ, ಜನರಿಗೆ ಆಧ್ಯಾತ್ಮಿಕ ಉನ್ನತಿ ಚರಮಾವಸ್ಥೆಯ ಸುಳುಹನ್ನು ಕೊಡಬೇಕೆಂಬುದು ಸಹಜಮಾರ್ಗದ ಬೋಧನೆಗಳು ಅತ್ಯುನ್ನತ ಮಟ್ಟದವು. ಯಾಕೆಂದರೆ, ಅವು ಜೀವನದ ಅಂತಿಮ ಗುರಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುವುದನ್ನು ಕಲಿಸುತ್ತವೆ. ತ್ಯುನ್ನತವಾದುದನ್ನೇ ಗುರಿಯಾಗಿಟ್ಟುಕೊಂಡು, ಅದರ ಸಾಧನೆಗೆ ಸಹಾಯಮಾಡಬಯಸುವ ಯಾವುದೇ ಬೋಧನೆಯೂ ಅತ್ಯುನ್ನತ ಮಟ್ಟದ್ದೇ ಆಗಿರತಕ್ಕದ್ದು ಆವಶ್ಯಕ. ಪರಮತತ್ವದ ಪ್ರಾಪ್ತಿಗಾಗಿ ನೀವು ಸದಾ ವ್ಯಾಕುಲರಾಗಿರಬೇಕೆಂದು ನಾನು ಚಡಪಡಿಸುತ್ತಿರುತ್ತೇನೆ. ಏಕೆಂದರೆ, ಅದೇ ನನಗೆ ನಿಜವಾದ ಶಾಂತಿಯನ್ನೀಯುವುದು. ನೀವು ಎಷ್ಟರಮಟ್ಟಿಗೆ ಈ ರೀತಿ ಚಡಪಡಿಸುವಿರೋ, ಅಷ್ಟೇ ಶಾಂತಿಯು ನನ್ನ ಪಾಲಿಗೆ ಲಭಿಸುತ್ತದೆ. ಜನರಿಗೆ, ಇಷ್ಟೆಲ್ಲಾ ಸೇವೆ ಸಲ್ಲಿಸಿದ್ದಕ್ಕೆ ಪ್ರತಿಫಲವಾಗಿ ನನಗೆ ಸಿಗುವುದು ‘ಶಾಂತಿ’ ಎಂಬುದನ್ನು ನೀವು ನಂಬಿ, ನೆನಪಿನಲ್ಲಿಟ್ಟುಕೊಳ್ಳುವಿರಾದರೆ, ನಿಮಗುಳಿದಿರುವ ಏಕೈಕ ಕಾಯಕವೆಂದರೆ, ನೀವು ಸದಾ ಚಡಪಡಿಕೆಯ ಸ್ಥಿತಿಯಲ್ಲಿರುವುದೊಂದೇ ಆದುದರಿಂದ ಅದರ ಯೋಚನೆಯೂ ಸುಳಿಯದಂತೆ ನಾವು ಇದರ ವಿಚಾರದಲ್ಲಿಯೇ ಆಳವಾಗಿ ಮುಳುಗಿಹೋಗೋಣ.