1. ಮನುಷ್ಯನ ಸಂರಚನೆಯಲ್ಲಿರುವ ಪ್ರತಿಯೊಂದು ಮಾನವತ್ವದ ನಿಯಮಕ್ಕೆ ಒಳಪಟ್ಟಿದೆ. ಈ ಎಲ್ಲ ,ಪ್ರತಿಯೊಂದರ ಮೂಲದಲ್ಲಿಯೂ ದೈವತ್ವವು ಇದ್ದೇ ಇದೆ. ಈ ಕಾರಣದಿಂದಲೇ “ದೇವರು ಮನುಷ್ಯನೊಳಗೆ ಇದ್ದಾನೆಂದು ಹೇಳುತ್ತಾರೆ” ಮತ್ತು ಹೆಚ್ಚು ಕಡಿಮೆ ಎಲ್ಲ ಧರ್ಮಬೋಧಕರು ಇದೇ ಅಭಿಪ್ರಾಯವನ್ನು ತಳೆದಿದ್ದಾರೆ.
  2. ಮಾನವನು ಎರಡು ಧ್ರುವಗಳುಳ್ಳ ಒಂದು ಜೀವಿ. ಅದರ ಬೇರು ಮೂಲ ಆಧಾರಕ್ಕೆ ಅತಿ ನಿಕಟವಾಗಿದೆ ಮತ್ತು ಇನ್ನೊಂದು ತುದಿ ಪ್ರಪಂಚದ ಕಡೆಗಿದೆ.
  3. ಕ್ಷೋಭದ ಪ್ರತಿಚ್ಛಾಯೆಯೇ ಮಾನವನ ಮನಸ್ಸು. ಹೀಗೆ ವೃಷ್ಟಿ ಮನಸ್ಸು ದೈವೀ ಮನಸ್ಸಿನ(ಕ್ಷೋಭದ) ಒಂದು ಅಂಶ.
  4. ಮಾನವನು ಪ್ರಕೃತಿಯ ಒಂದು ಉಪಕರಣ
  5. ಸೃಷ್ಟಿಯ ಮೂಲದಲ್ಲಿ ಮಾನವತೆಯು ದೈವತ್ವಕ್ಕೆ ಸದೃಶವಾಗಿತ್ತು. ವಿಕಾಸದ ಪಥದಲ್ಲಿ ಕ್ರಿಯೆ–ಪ್ರತಿಕ್ರಿಯೆಗಳಿಂದುಂಟಾದ ಆಘಾತಗಳ ಪರಿಣಾಮವಾಗಿ ಅದು ಸ್ಥೂಲತರ ರೂಪವನ್ನು ತಳೆಯಿತು. ದೈವತ್ವದೊಂದಿಗೆ ನಮ್ಮ ಸಂಬಂಧದ ಕೊಂಡಿಯನ್ನು ಕಾಯ್ದುಕೊಂಡು ಹೋಗಲು ಮಾನವನ ಅಸ್ತಿತ್ವ ರಚನೆಯ ಎಲ್ಲ ಘಟಕಾಂಶಗಳನ್ನೂ ಅವುಗಳ ಆದಿಯಲ್ಲಿದ್ದ ಸಮತ್ವ ಮತ್ತು ಶಾಂತಿಯ ಸ್ಥಿತಿಗೆ ತರಬೇಕಿದೆ. ಅವುಗಳಲ್ಲಿ ಯೊಗ್ಯ ಮಿತತ್ವವನ್ನು ಉಂಟುಮಾಡುವದರಿಂದ ಅದು ಸಾಧಿಸಲ್ಪಡುವುದು; ನಾವು ಸಹಜಮಾರ್ಗದಲ್ಲಿ ಮಾಡುವುದು ಇದನ್ನೇ. ನಮ್ಮ ಸಂಕಲ್ಪ ಶಕ್ತಿಯ ಕ್ರಿಯೆಯ ಮೂಲಕ ಮಿತತ್ತವವಿಲ್ಲದಿರುವಿಕೆಯನ್ನು ಹೋಗಲಾಡಿಸಿ, ಸಮತ್ವವನ್ನು ಕಾಯ್ದುಕೊಂಡು ಹೋಗುವುದೇ ನಮ್ಮ ದೈನಂದಿನ ಧ್ಯಾನಾಭ್ಯಾಸದ ಉದ್ದೇಶ. ಈ ರೀತಿಯಲ್ಲಿ ನಮ್ಮಲ್ಲಿರುವ ಮಾನವತೆಯು ದೈವತ್ವದಲ್ಲಿ ರೂಪಾಂತರಗೊಳ್ಳಲು ಪ್ರಾರಂಭಿಸುತ್ತದೆ. ‘ಮಾನವನದೈವೀಕರಣ’ ವೆಂಬ ಪದದ ನಿಜವಾದ ಅರ್ಥವು ಇದೇ ಆಗಿದೆ.
  6. ನಿಸರ್ಗದಲ್ಲಿ ಎರಡು ತತ್ತ್ವಗಳಿವೆ. ಒಂದು ಧನಾತ್ಮಕ; ಇನ್ನೊಂದು ಋಣಾತ್ಮಕ. ಪ್ರತ್ಯೇಕಿಸುವುದು ಮತ್ತು ಬಿಟ್ಟು ಬಿಡುವುದು ಋಣಾತ್ಮಕ ತತ್ವವೆನಿಸುವುದು. ಭೌತದರವ್ಯವು ಬೆಳೆದಾಗ ಈ ಶಕ್ತಿಯಿಂದ ಅದನ್ನು ತೆಗೆದುಹಾಕಲಾಗುವುದು. ಕೊರತೆಯನ್ನು ತುಂಬುವುದು ಧನಾತ್ಮಕ ತತ್ವ. ಈ ಸೃಷ್ಟಿಯ ಆರಂಭದಿಂದಲೂ ಇವೇ ತತ್ವಗಳನ್ನು ಅನುಸರಿಸಲಾಗುತ್ತಿದೆ. ಏನೇ ಕೊರತೆಯಿದ್ದರೂ ಭಕ್ತರು ಅದನ್ನು ಪೂರ್ಣ ಗೊಳಿಸುವರು. ಆಧಿಕ್ಯವಿದ್ದಲ್ಲಿ ಅವರೇ ಸಮತೋಲನಕ್ಕೆ ತರುವರು. ನಿಸರ್ಗಕ್ಕೆ ಕೈಕಾಲುಗಳಿಲ್ಲ. ಅದು ಸದಾ ಚಲನೆಯಲ್ಲಿರುವ ಯಂತ್ರ. ಈ ಯಂತ್ರವನ್ನು ದುರ್ಬಲ ಅಥವಾ ಬಲಿಷ್ಠಗೊಳಿಸಬಲ್ಲಾತನು ನೀನೇ. ನಿಸರ್ಗದ ಈ ಯಂತ್ರವು ಪೂರ್ಣ ಬಲಗೊಂಡಾಗ ‘ಒಳ್ಳೆಯ ಕಾಲ ‘ ಎಂದು ಕರೆವರು. ಅದು ಎಷ್ಟುಮಟ್ಟಿಗೆ ಬಲಗುಂದುವುದೋ ಅಷ್ಟು ಮಟ್ಟಿಗೆ ‘ ಅವನತಿಯ ಕಾಲ ‘ ಎನ್ನಲಾಗುವುದು. ಸತ್ಯಯುಗ, ತ್ರೇತಾಯುಗ, ದ್ವಾಪರ ಮತ್ತು ಕಲಿಯುಗ ಇವು ಇದಕ್ಕನುಸಾರವಾಗಿಯೇ ವರ್ಣಿತವಾಗಿವೆ. ಸದ್ಯ ಆ ಯಂತ್ರವು ಸಡಿಲವಾಗುತ್ತಿದೆ. ಅದರ ಭಾಗಗಳು ದುರ್ಬಲವಾಗಿವೆ. ಆದುದರಿಂದ ನಿಸರ್ಗವು ಈ ಕಡೆಗೆ ಲಕ್ಷ ಕೊಡುತ್ತಿದೆ. ಪರಿಣಾಮವು ಸ್ಪಷ್ಟವಿದೆ. ವಾಸ್ತವವಾಗಿ ನಿಸರ್ಗದಲ್ಲಿ ರಹಸ್ಯಗಳಿಲ್ಲ. ಗುರುವಿನ ಪೂರ್ಣತೆಯ ದೃಷ್ಟಾಂತವಾಗಿರುವ ಅದು ತುಂಬಾ ಸರಳವಾಗಿದೆ.
  7. ಮಾನವನ ಪುಟ್ಟ ಸೃಷ್ಟಿಯನ್ನು ಅಸ್ತಿತ್ವಕ್ಕೆ ತಂದ ಅದು ಮೂಲ ವೈಶ್ವಿಕ ಶಕ್ತಿಯ ಸಂಕ್ಷಿಪ್ತ ರೂಪವಾಗಿದೆ.
  8. ಮಿಷನ್ನಿನ ಕಾರ್ಯ-ಚಟುವಟಿಕೆಯು, ಪೂಜ್ಯ ಗುರುಗಳ ಬೋಧನೆಯನ್ನು ಪ್ರತಿಯೊಂದು ಹೃದಯಕ್ಕೂ ತಲುಪಿಸಿ, ಮಾನವತೆಯನ್ನು ಅಧ:ಪತನದಿಂದ ರಕ್ಷಿಸುತ್ತದೆ. ಮಾನವಕುಲವು ಇಂದು ಭೌತಿಕತೆಯ ಅಂಧಕಾರದಲ್ಲಿ ಕಂಗಾಣದೆ ತಡಕಾಡಿತ್ತಿದೆ.
  9. ಪ್ರಪಂಚದಿಂದ ನಿಷ್ಕಲಂಕವಾಗಿ ಪಾರಾಗುವುದು ಬಹಳ ಕಠಿಣ. ತನ್ನ ಭಾವನೆಗಳನ್ನು ಭಗವಂತನ ಕಡೆಗೆ ತಿರುಗಿಸುವಾತನೇ ಮನುಷ್ಯ.
  10. ಬಹುತೇಕಬತ್ತಿಹೋಗಿದ್ದ ಆ “ಮೂಲಸ್ರೋತ”ವನ್ನು ಬೆಳಗಿಸಿದವರು ನಮ್ಮ ಪೂಜ್ಯಗುರುಮಹಾರಾಜರು ಮಾತ್ರವೇ. ಅವರು ಮಾನವಕುಲಕ್ಕೆ ನೀಡಿದ ಸಂದೇಶವನ್ನು ಈ ರೀತಿಯಲ್ಲಿ ಘೋಷಿಸುವುದು ಔಚಿತ್ಯಪೂರ್ಣವೆನಿಸುತ್ತದೆ : “ಓಬದ್ಧಜೀವಿಗಳೇ, ಮುಕ್ತರಾಗಲು ಈಗಲಾದರೂ ಮುಂದಡಿಯಿಡಿ.”
  11. ಒಬ್ಬನೇ ಆದ ಸರ್ವಶ್ರೇಷ್ಠ ದೇವರಿಂದ ಅರ್ಥಾತ್ ಪರ ತತ್ವದಿಂದ ಈಎರಡೂಹರಿದುಬಂದಿರುವುದರಿಂದ ಮಾನವತ್ವವು ದೈವದಂತೆಯೇ ಅತ್ಯಂತ ಪರಿಶುದ್ಧ ಸ್ಥಿತಿಯಲ್ಲಿ ಇದ್ದಿತು. ಅದರೊಳಗಿನ ಕ್ರಿಯಾಶಕ್ತಿಯೂ ನಾಮಮಾತ್ರಕ್ಕೆ ಇದ್ದಿತು ಅಥವಾ ಸುಪ್ತಾವಸ್ಥೆಯಲ್ಲಿದ್ದಿತೆಂದು ಹೇಳಬಹುದು. ಕ್ರಿಯೆ – ಪ್ರಕ್ರಿಯೆಗಳಿಂದಾದ ಆಘಾತ ( ಸೆಳೆತ)ಗಳು ಒಂದು ಬಗೆಯ ಎಚ್ಚರವನ್ನು ಉತ್ತೇಜಿಸಲು ಆರಂಭಿಸಿದವು. ಹಾಗೂ ವೈವಿಧ್ಯಗಳೂ ವೈರುಧ್ಯಗಳೂ ಕಾಣಿಸಲಾರಂಭಿಸಿದವು. ಶೀತೋಷ್ಣ ಗಳು ಮೂರ್ತರಚನೆಗಳನ್ನು ಉತ್ತೇಜಿಸುತ್ತಾ ವಿವಿಧ ರೀತಿಯಲ್ಲಿ ಮುಂದುವರಿದವು. ಇವೆಲ್ಲವೂ ಮನುಷ್ಯನ ರಚನೆಯಲ್ಲಿ ಪ್ರವಿಷ್ಟವಾದವು ಹೀಗೆ ಮನುಷ್ಯನು ಸೃಷ್ಟಿಯಲ್ಲಿರುವ ಎಲ್ಲ ವಸ್ತುಗಳ ಒಂದು ಸಮ್ಮಿಶ್ರಣವಾದನು.