1. ಇಂದು ನಾನು ದೊಡ್ಡ ತತ್ತ್ವ ಜ್ಞಾನವನ್ನು ನಿಮ್ಮೆದುರಿಗೆ ಇಡುತ್ತಿರುವೆನು. ಜನರು ಅದನ್ನು ಬಹಳ ಕಡಿಮೆ ತಿಳಿದು ಕೊಂಡಿದ್ದಾರೆ. ಸಾಮಾನ್ಯವಾಗಿ ಜನರು ಸತ್ತನ್ನೇ ಮೂಲವೆಂದು ಭಾವಿಸುವರು. ಭಗವಂತನನ್ನು ತಿಳಿಯಲು ಅದನ್ನೇ ಅಳತೆಗೋಲನ್ನಾಗಿ ಮಾಡಿರುವರು. ಆದರೆ ಅದರ ಹಿಂದಿರು ರಹಸ್ಯ ಅವರಿಗೆ ತಿಳಿಯದು. ಇದರ ತಳದಲ್ಲಿರುವ ಆ ವಿಶಿಷ್ಟ ವಸ್ತು ಇದುವರೆಗೂ ಅವರ ದೃಷ್ಟಿಗೆ ಬಿದ್ದಿಲ್ಲ. ಈ ಸಂಗತಿಗಳೆಲ್ಲ ಕೇವಲ ‘ತಮ’ಕ್ಕೆ ಸಂಬಂಧ ಪಟ್ಟುವು. ಯೋಗಿಗಳು ಪಡೆಯಬೇಕಾದ ವಿಶೀಷ್ಠ ವಸ್ತು ಇದೇ. ಈ ಬಿಂದುವಿನವರೆಗೆ ಬಂದು ಮುಟ್ಟುವುದು ಬಹಳ ಕಠಿಣ. ಸತ್ತನ್ನು ಪಡೆಯುವುದು ತೀರ ಸುಲಭ. ಆದರೆ ನಾನು ‘ತಮ’ವೆಂದು ಕರೆದಿರುವದು ಅಷ್ಟು ಸುಲಭ ಪ್ರಾಪ್ಯವಲ್ಲ. ಅದರಾಚೆ ಏನೂ ಇಲ್ಲ. ಸಾಮಾನ್ಯವಾಗಿ ಜನರು ಮಾತುಗಳನ್ನೇನೋ ಬಹಳಷ್ಟು ಆಡುತ್ತಾರೆ. ಆದರೆ ವಸ್ತುಗಳ ತಳಕ್ಕೆ ಯಾರೂ ಹೋಗುವುದಿಲ್ಲ. ಸ್ವಚ್ಛತೆ , ಸರಳತೆ , ಶಾಂತಿಗಳೂ ಇದರ ಮುಂದೆ ಏನೂ ಅಲ್ಲ. ಅದು ಇವೆಲ್ಲವುಗಳಿಂದ ಬೇರೆಯಾಗಿದೆ. ನೀವು ವರ್ಷಗಟ್ಟಲೆಯ ಪರಿಶ್ರಮದಿಂದಲೂ ಅಗಣಿತ ಜನ್ಮಾಂತರಗಳ ಅನಂತರವೂ ಪಡೆಯುವ ವಸ್ತು ಇದೇ. ಜಗತ್ತಿನ ದೊಡ್ಡ ದೊಡ್ಡ ಸಂತರು ಸಹ ಈ ದೃಶ್ಯದಿಂದ ವಂಚಿತರಾಗಿದ್ದಾರೆ.

    ನೀವು ಶೋಧಿಸುತ್ತಿರುವ, ಮತ್ತು ನಿಜವಾದ  ಜೀವನವಾಗಿರುವ ಆತ್ಮ ನಿರಸನದ ಸ್ಥಿತಿ ಇದರಲ್ಲಿಯೆ ಇದೆ. ಎಲ್ಲ ಚಟುವಟಿಕೆಗಳೂ ಈ ಬಿಂದುವಿಗೆ ಬರುವ ಮೊದಲೇ ಮುಗಿದು ಹೋಗುವವು. ನಿಸರ್ಗದ ರಹಸ್ಯವನ್ನು ನಾನಿಂದು ಬಯಲಿಗಿಡುತ್ತಿದ್ದೇನೆ. ಈಶ್ವರ ಅಥವಾ ಮೂಲ ಅವಸ್ಥೆಯ ಕೀಲು ಇದೇ. TM5