(ಪೂಜ್ಯ ಬಾಬೂಜಿ ಮಹಾರಾಜರ ೮೦ ನೇ ವರ್ಧಂತ್ಯುತ್ಸವ,  ಅಹಮದಾಬಾದ್, ೩೦-೪-೧೯೭೯)

ಎಲ್ಲ ಕಾಲ ಮತ್ತು ದೇಶಗಳಿಗೆ ಸೇರಿದ, ಭಗವಂತನ ಪ್ರಜೆಗಳ ಹಿತಕ್ಕೋಸ್ಕರ, ಸರ್ವಸಮರ್ಥರಾದ ಸದ್ಗುರುಗಳ ಮಾರ್ಗದಲ್ಲಿ ನಾವು ಗೈಯುತ್ತಿರುವ ಕಾರ್ಯಗಳನ್ನು ಸಮೀಕ್ಷಿಸಲೋಸುಗ ನಾವಿಲ್ಲಿ ಮತ್ತೆ ಸೇರಿದ್ದೇವೆ. ಜಗತ್ತಿನ ನನ್ನೆಲ್ಲ ಸೋದರ ಸೋದರಿಯರು ‘ಲಯಾವಸ್ಥೆ’ಯ ರುಚಿರಹಿತ ಸ್ವಾದವನ್ನು ಸವಿಯಲಿ ಎಂಬುದು ನನ್ನ ಉತ್ಕಟಾಕಾಂಕ್ಷೆ, ಆಗ ನೀವು ನಮ್ಮ ಸಾಧನಾಪದ್ಧತಿಯ ಪ್ರಭಾವವನ್ನು ಉತ್ತಮ ರೀತಿಯಲ್ಲಿ ಅರ್ಥಮಾಡಿಕೊಳ್ಳಬಲ್ಲಿರಿ. ನಾವು ಜೀವಿಸುತ್ತಿರುವ ಜೀವನವು ನಿಜವಾದ ಜೀವನವಲ್ಲ. ಇದರಾಚೆಗೆ, ಇನ್ನೂ ಮುಂದಕ್ಕೆ ಏನೋ ಒಂದಿದೆ. ನೀವೆಲ್ಲ ಆತನಿಗೆ, ಷ್ಟೇ ಅಲ್ಲ, ಆತನೊಬ್ಬನಿಗೇ ಅನನ್ಯ ನಿಷ್ಠರಾಗಿದ್ದರೆ ಸುದಿನಗಳನ್ನು ಕಾಣುವಿರೆಂದು ನಾನು ಆಶಿಸುತ್ತೇನೆ.

“ದೇವರೇ ಇಲ್ಲ” ವೆಂಬ ನಾಸ್ತಿಕ ಭಾವನೆಗೆ ನಾವು ನಮ್ಮಲ್ಲಿ ಆಸ್ಪದ ಕೊಡಬಾರದು. ದು (ದೇವರು) ಶಾಶ್ವತ ತಂಗುದಾಣ ; ದೇ ನಮ್ಮ ಜೀವಿತದ ಪರಮ ಗುರಿ. ಅರಿತೋ, ಅರಿಯದೆಯೋ, ನಾವು ದೇವತ್ವದ, ಅಂದರೆ, ಜೀವನದ ಗುರಿಯ ಕಡೆಗೆ ಸಾಗುತ್ತಿದ್ದೇವೆ. ಪ್ರಜ್ಞಾಪೂರ್ವಕವಾಗಿ ಸಾಗುತ್ತಿರುವವರು, ನಿಶ್ಚಲ ನೀರಿನಲ್ಲಿ ಈಜುವವರಂತಿದ್ದಾರೆ. ಆದರೆ, ಅರಿವಿಲ್ಲದೆ ಮುನ್ನಡೆಯುವವರ ಸ್ಥಿತಿ, ಮರುಭೂಮಿಯ ಮರಳಿನಲ್ಲಿ ಕೈಕಾಲು ಬಡಿಯುವಂತಿದೆ. ನಿಜವಾಗಿ ಸದ್ಗುರುವು ಈ ಇಬ್ಬರ (ಭಗವಂತನ ಮತ್ತು ಮುಮುಕ್ಷುಗಳ) ನಡುವಿನ ಮಾಧ್ಯಮ ; ಏಕೆಂದರೆ ದೇವರೊಡನೆ ಅಭ್ಯಾಸಿಯ ಸಂಬಂಧವನ್ನು ಕಲ್ಪಿಸುವವನು ಅವನೇ. ಇಷ್ಟಾದರೆ, ಗುರುವಿನ ಕರ್ತವ್ಯದ ಒಂದು ಭಾಗ ಮುಗಿದಂತೆಯೇ.

ಜನರು ಜೀವನದ ಅರ್ಥವನ್ನು ಕುರಿತು ಪ್ರಶ್ನಿಸುತ್ತಾರೆ. ಜೀವನವು ಅರ್ಥಹೀನವೆಂದು ಕೆಲವರ ಮನಸ್ಸಿನಲ್ಲಿದೆ- ಇದೊಂದು ತ್ಮಘಾತಕ ಕಲ್ಪನೆ. ಜೀವನಕ್ಕೆ ತನ್ನದೇ ರ್ಥವಿದೆ ; ಏಕೆಂದರೆ, ಅದರೊಂದಿಗೇ ಒಂದು ಶಕ್ತಿಯೂ ಸಹ ಬರುತ್ತದೆ. ಆ ಶಕ್ತಿಯು, ‘ಯಾವುದೋ ಒಂದ’ನ್ನು ನರ್ಘವೆಂದು ತಮ್ಮೊಳಗೆ ಜೋಪಾನವಾಗಿಟ್ಟುಕೊಳ್ಳಬಯಸುವವರಿಗೆ, ಅದರ ನೆನಪನ್ನು ತರುತ್ತದೆ. ಧ್ಯಾತ್ಮಿಕ ಜೀವನದ ಕಡೆಗೆ ತಿರುಗುವುದೇ ನಿಜವಾದ ಜೀವನದ ಆರಂಭವೆಂದೂ, ಮತ್ತು ಜೀವನದೊಳಗೇ ಹುದುಗಿರುವ “ಜೀವನದೊಳಗಣ ಜೀವನ”ವು ಅದರ ಉತ್ತುಂಗ ಸ್ಥಿತಿಯೆಂದೂ ಒಪ್ಪಿಕೊಂಡೆವೆಂದರೆ, ನಾವು ಪ್ರವೇಶಿಸಲೇಬೇಕಾದ ಆ ಜೀವನವನ್ನು ಪಡೆಯಲು ಮುಂದಾಬೇಕು. ನಮ್ಮ ‘ಅಭ್ಯಾಸ’ವೆಲ್ಲ ನಮ್ಮನ್ನು ಆ ಜೀವನದ ಕಡೆಗೆ ಒಯ್ಯುತ್ತದೆ.

ಪ್ರಾಣಾಹುತಿಯು ಮನುಷ್ಯನಲ್ಲಿ ಸುಪ್ತವಾಗಿರುವ ಅವಸ್ಥೆಗೆ ಹೊಸ ಚೈತನ್ಯವನ್ನಿತ್ತು, ಮಾನವಕುಲಕ್ಕೆ ಮಾತ್ರ ಮೀಸಲಾದ ಪರಮೋಚ್ಚ ಪದದ ಪ್ರಾಪ್ತಿಗೆ ಆತನನ್ನು ಅಣಿಗೊಳಿಸುತ್ತದೆ. ಅಷ್ಟೇ ಅಲ್ಲ, ಪ್ರಗತಿಪಥದಲ್ಲಿನ ಅಡ್ಡಿ ಆತಂಕಗಳನ್ನು ನುಚ್ಚುನೂರು ಮಾಡಿ, ಮಾನವನ ಇಡೀ ಅಸ್ತಿತ್ವದ ಸ್ವರೂಪವನ್ನೇ ಪರಿವರ್ತಿಸುತ್ತದೆ. ಸಾಕ್ಷಾತ್ಕಾರದ ನಿಜವಾದ ಅರ್ಥವೆಂದರೆ “ಸಾವಿನ ಸಾವು” ಅಥವಾ “ಅಂತ್ಯದ ಅಂತ್ಯ”. ಮನುಷ್ಯನು ಈ ಸ್ಥಿತಿಯಲ್ಲಿ ಲೀನನಾದರೆ, ಮುಂದಿನ ದಾರಿ ಸುಗಮವಾಯಿತೆಂದೇ ಅರ್ಥ. ಕಾಲವು ಎಷ್ಟೊಂದು ಬದಲಾಗಿಹೋಗಿದೆಯೆಂದರೆ, ಭಾರತದೇಶದಲ್ಲಿ (ಯೆ), ಬಹುಮಂದಿಗೆ “ಪ್ರಾಣಾಹುತಿ” ಎಂದರೇನೆಂಬುದೇ ಗೊತ್ತಿಲ್ಲ. ಬಹುತೇಕ ಬತ್ತಿಹೋಗಿದ್ದ ಆ “ಮೂಲ ಸ್ರೋತ’ವನ್ನು ಬೆಳಗಿಸಿದವರು ನಮ್ಮ ಪೂಜ್ಯ ಗುರುಮಹಾರಾಜರು  ಮಾತ್ರವೇ. ಅವರು ಮಾನವ ಕುಲಕ್ಕೆ ನೀಡಿದ ಸಂದೇಶವನ್ನು ಈ ರೀತಿಯಲ್ಲಿ  ಘೋಷಿಸುವುದು ಔಚಿತ್ಯಪೂರ್ಣವೆನಿಸುತ್ತದೆ : ‘ಓ ಬದ್ಧ ಜೀವಿಗಳೇ, ಮುಕ್ತರಾಗಲು ಈಗಲಾದರೂ ಮುಂದಡಿಯಿಡಿ.”

ಪ್ರತಿಯೋರ್ವನೂ ಮುಕ್ತಿಯನ್ನು ಬಯಸುತ್ತಾನೆ. ದರೆ “ಮುಕ್ತಿಯಿಂದಲೇ ಮುಕ್ತ”ರಾಗುವ ಕಾಳಜಿಯುಳ್ಳವರು ಇಲ್ಲವೆಂದರೂ ಸರಿಯೆ. ಈ ಅತ್ಯುನ್ನತ ಸ್ಥಿತಿಯು, ತನ್ನನ್ನು ತಾನು ಆ ಪರಮಪುರುಷನಲ್ಲಿ (ಶ್ರೇಷ್ಠ ಸದ್ಗುರುವಿನಲ್ಲಿ) ಸಮರ್ಪಿಸಿಕೊಳ್ಳುವುದರಿಂದಲೇ ಉಂಟಾಗುತ್ತದೆ. ಅದು ಕೇವಲ ಪರತತ್ವದಲ್ಲಿಯೇ ಸಂಪೂರ್ಣವಾಗಿ ಎಲ್ಲವನ್ನೂ ಕರಗಿಸಿಬಿಡುವ ಪ್ರೇಮಾತಿಶಯ ಬಂಧನ ; ಈ ಬಂಧನವು ಮಿಕ್ಕೆಲ್ಲಾ ಬಂಧನಗಳಿಂದ ಬಿಡುಗಡೆಗೊಳಿಸುತ್ತದೆ.

ಮುಕ್ತಿಯು ಮಾನವನನ್ನು ಎಲ್ಲ ಪ್ರಾಪಂಚಿಕ ಬಂಧನಗಳಿಂದಲೂ ಬಿಡುಗಡೆ ಮಾಡುತ್ತದೆ. ಒಬ್ಬ ವ್ಯಕ್ತಿಯು ವಿಕಾಸವನ್ನು ಬಯಸಿದಾಗ ಪ್ರಕೃತಿಯು ಅವನೊಂದಿಗೆ ಸಹಕರಿಸುತ್ತದೆ. ರೋಗಿಯನ್ನು ತಾನು ಅತಿಶಯವಾಗಿ ಪ್ರೀತಿಸಿದರೂ, ವೈದ್ಯನು ಅವನಿಗೆ ಕಹಿಗುಳಿಗೆಗಳನ್ನೇ ಕೊಡುತ್ತಾನೆ. ದೇವರು, ತನ್ನ ಸೃಷ್ಟಿಯು ಯೋಗ್ಯವಾಗಿಯೂ, ಧರ್ಮಸಂಪನ್ನವಾಗಿಯೂ, ಶುಚಿರ್ಭೂತವಾಗಿಯೂ ಇರಬೇಕೆಂದು ಬಯಸುತ್ತಾನೆ. ಆದುದರಿಂದ, ವಿಕಾಸದ ಪ್ರವೇಶದ್ವಾರವನ್ನು ತೆರೆಯಲು ಬೇಕಾದುದೆಲ್ಲವನ್ನೂ ಅವನು ಮಾಡುತ್ತಾನೆ ; ಅದು ಪ್ರಕೃತಿಯ ನಿಯಮ. ‘ಕೆಲಸ ಬಾರದವನು ತನ್ನ ಉಪಕರಣಗಳೊಂದಿಗೆ ಗುದ್ದಾಡುತ್ತಾನೆ’ ಎಂಬುದೊಂದು ಗಾದೆಯಿದೆ. ನಾವು ಕೆಟ್ಟದ್ದು, ಕಷ್ಟಕರವಾದದ್ದು ಎಂದು ಎಣಿಸಿದ್ದೇನಮ್ಮನ್ನು ಮುಕ್ತಿಪದಕ್ಕೊಯ್ಯುವ ಪಥವಾಗಿ ಪರಿಣಮಿಸುತ್ತದೆ. ಒಮ್ಮೆ ನನ್ನ ಗುರುಗಳು ಯಕೃತ್ತಿನ ಊತದ ಅತೀವ ಯಾತನೆಯನ್ನನುವಿಸುತ್ತಿದ್ದಾಗ, ತನ್ನ ಶಿಷ್ಯರು ಕಣ್ಣೀರಿಡುವುದನ್ನು ನೋಡಿ ಹೇಳಿದರು: “ಈ ಬೇನೆಯನ್ನು ಕ್ಷಣಮಾತ್ರದಲ್ಲಿ ಗುಣಪಡಿಸಿಕೊಳ್ಳಬಲ್ಲೆ, ಆದರೆ ಆ ಪರಮಾತ್ಮನ ಕಾರ್ಯರೀತಿಯಲ್ಲಿ ಕೈಹಾಕಬಯಸಲಾರೆ.”

ನಿಜಕ್ಕೂ, ನಾವು ಜೀವಿಸುತ್ತಿರುವ ಜಗತ್ತನ್ನು ನಾವೇ ಕೆಡಿಸಿದ್ದೇವೆ. – ಅದನ್ನೊಂದು ಸೆರೆಮನೆಯೆಂದು ಕರೆಯಬಹುದು. ನಾವು ದೂಷಿತ ವಿಚಾರಗಳನ್ನು ಹೀರಿಕೊಳ್ಳುತ್ತೇವೆ. ಮತ್ತು ಅದರ ಪರಿಣಾಮವು ಇಡೀ ಜಗತ್ತಿನ ಮೇಲಾಗುತ್ತದೆ. ಆದರೆ, ಹೀಗೆ ನಾವು ಸೆರೆಮನೆಯಲ್ಲಿದ್ದರೂ ಸಹ, ನಾವು ಈ ಭಾವನೆಯಿಂದ ಮುಕ್ತರಾಗಿರಬೇಕು. ಅಪರಾಧಿಗಳು ಜೈಲಿನಲ್ಲಿರುತ್ತಾರೆ. ಅಂತೆಯೇ, ಸರಕಾರಿ ಅಧಿಕಾರಿಗಳೂ ಅಲ್ಲಿರುತ್ತಾರೆ. ಅಪರಾಧಿಗಳು ತಾವು ಜೈಲಿನಲ್ಲಿರುವುದಾಗಿ ಭಾವಿಸುತ್ತಾರೆ. ಆದರೆ, ಅಧಿಕಾರಿ ವರ್ಗದವರು ಹಾಗೆ ಭಾವಿಸುವುದಿಲ್ಲ. ಅಳಲು ಇದ್ದಲ್ಲಿಯೇ ಅಮೃತವೂ ಇರುತ್ತದೆ./p

ಹತೋಟಿ ತಪ್ಪಿದ ಮನಸ್ಸಿನಿಂದುಂಟಾಗುವ ವೇದನೆ, ತ್ತು ಕ್ಷೇಶಗಳನ್ನು ಪರಿಹರಿಸುವುದು, ಮನಸ್ಸನ್ನು ನಿಯಂತ್ರಿತಗೊಳಿಸುವುದರಿಂದ (ಶಿಸ್ತಿಗೊಳಪಡಿಸುವುದರಿಂದ ಮಾತ್ರ ಸಾಧ್ಯ. ಮತ್ತು ಅದು ಶಕ್ಯವಾಗುವುದು ನೀವು ಸಹಜಮಾರ್ಗದ ತತ್ವಗಳಿಗೆ ಅಂಟಿಕೊಂಡಾಗ ಹೇಗಾದರೂ ಮಾಡಿ, ಒಂದು ಕುಟುಂಬದ ಸದಸ್ಯರು ಆಧ್ಯಾತ್ಮಿಕ ಜೀವನವನ್ನು ನಡೆಸುವವರಾದರೆ, ಆ ಮನೆಯ ಪರಿಸರವೇ ಬದಲಾಗುವುದು. ಆಂತರಿಕ ಶಾಂತಿಯು ಜಗತ್ತಿನ ಎಲ್ಲ ಸಿರಿಸಂಪತ್ತುಗಳಿಗಿಂತಲೂ ಮಿಗಿಲಾದುದು. ನಾವು ಆಂತರಿಕವಾಗಿ ಪ್ರಗತಿಯನ್ನು ಹೊಂದಿದಾಗ, ‘ಒಳಗು’ ಮತ್ತು ‘ಹೊರಗು’ – ಇವೆರಡೂ ಏಕರೂಪವಾಗಿ ಪರಿಣಮಿಸುವುವು. ಈ ರೀತಿ ಎಲ್ಲ ಕಡೆಗೂ ಶುದ್ಧತೆಯು ತಾನೇ ತಾನಾಗುವುದು. ಹೀಗೆ ನಾವು, ಪ್ರಕೃತಿಗೂ ಸಹಕಾರಿಗಳಾದಂತಾಗುತ್ತದೆ./p

ಎಲ್ಲೆಡೆಗೂ ಆಧ್ಯಾತ್ಮಿಕ ದಾರಿದ್ರವುಳ್ಳ ಜನರೇ ಕಾಣಸಿಗುತ್ತಾರೆ. ನಾವೆಲ್ಲರೂ ಈ ಕೊರತೆಯನ್ನು ತುಂಬಲು ಪ್ರಯತ್ನಿಸಬೇಕು. ನಮ್ಮೆಲ್ಲ ಶ್ರಮದ ಹೊರತಾಗಿಯೂ, ಹೂವು ಇನ್ನೂ ಮೊಗ್ಗಿನ ಸ್ಥಿತಿಯಲ್ಲಿಯೇ ಉಳಿದಿದೆ. ನಮ್ಮ ಪ್ರಯತ್ನದಲ್ಲಿ ನ್ಯೂನತೆಯಿದೆಯೆಂದು ಇದರರ್ಥವಲ್ಲ ; ಆದರೆ ಜನರು ತಕ್ಕ ರೀತಿಯಲ್ಲಿ ಸಹಕರಿಸುತ್ತಿಲ್ಲ.ಸಾಮರ್ಥ್ಯವೇನೋ ನಮ್ಮಲ್ಲಿದೆ. ಆದರೆ (ಜನರಲ್ಲಿ ) ಅದನ್ನು ಸ್ವಾಗತಿಸುವ ಮನೋಭಾವದ ಅಭಾವವಿದೆ. ಕಾಲಕ್ರಮೇಣ ಅದೂ ಸಹ ಬೆಳೆದು ಬರುವುದು. ನಮ್ಮ ಮಿಷನ್ನಿನ ಧ್ವನಿಯು ಪ್ರತಿಧ್ವನಿಸಿದಾಗ, ಅದು ಎಲ್ಲೆಡೆಗೂ ಮೊಳಗಿ, ಎಂದಾದರೊಂದು ದಿನ ತನ್ನ ಪರಿಣಾಮವನ್ನು ಉಂಟುಮಾಡಿಯೇ ತೀರುತ್ತದೆ. ಆದ್ದರಿಂದ, ನಮ್ಮ ಪ್ರಯತ್ನಗಳೆಂದೂ ವ್ಯರ್ಥವಾಗವವು ಹನಿಗಳು ಸತತವಾಗಿ ಬೀಳುತ್ತ ಹೋದರೆ  ಅದೇ ನದಿಯಾಗುವುದು.

ಮಾನವ ಮಾತ್ರರೆಲ್ಲರ ವಿಯದಲ್ಲಿಯೂ ನಾವು ಸುಹೃದರಾಗಿರಬೇಕು. ಆಗ ಶಕ್ತಿಯು ತಂತಾನೇ ಅವರತ್ತ ಧಾವಿಸುವುದು. ಆಧ್ಯಾತ್ಮಿಕ ಪುನರುಜೀವನಕ್ಕೆ ಇದೇ ಮೊದಲ ಹೆಜ್ಜೆಯೆಂದು ನನ್ನ ಭಾವನೆ. ಈ ತಳಹದಿಯ ಮೇಲೆಯೇ ಆಧ್ಯಾತ್ಮಿಕ ಸೌಧವನ್ನು ಕಟ್ಟಿ ನಿಲ್ಲಿಸಬೇಕಿದೆ. ಮಾನವತೆಯ ಒಳಿತಿಗಾಗಿ ನೀವು ದುಡಿಯಲು ಮನಸ್ಸುಳ್ಳವರಾಗಿದ್ದಾಗ, ಆ ಶಕ್ತಿಯನ್ನು ನೀವು ಸ್ವಾಭಾವಿಕವಾಗಿಯೇ ಪಡೆಯುವಿರಿ. ಜನರು ಯೋಗ್ಯದಾರಿಯನ್ನು ಹಿಡಿಯುವಂತೆ. ಅವರಿಗೆ ಮಾರ್ಗದರ್ಶನ (ಶಿಕ್ಷಣ) ನೀಡುವುದು ನಮ್ಮ ಕರ್ತವ್ಯ. ನೀವು ಮಾನವತೆಗೇನಾದರೂ ಒಳಿತನ್ನು ಮಾಡಿದರೆ ಅದು “ಆಶಾಪೂರ್ತಿ‘ಯೆನ್ನಿಸುವುದಿಲ್ಲ, ಅದು (ಕೇವಲ) ಕರ್ತವ್ಯ. ನನ್ನ ಗುರುಗಳು ನನಗೆ ದಯಪಾಲಿಸಿದ ಹೃದಯವು ಎಷ್ಟು ವಿಶಾಲವಾಗಿದೆಯೆಂದರೆ, ಇಡೀ ಮಾನವಕುಲವನ್ನೇ ಅದರ ತೆಕ್ಕೆಯಲ್ಲಿ ಆವರಿಸುವುದು ನನ್ನ ಬಕೆಯಾಗಿದೆ. ನನ್ನ ಪೂಜ್ಯ ಗುರುಗಳ ಅಭಯಹಸ್ತ ನನ್ನ ಬೆಂಗಾವಲಿಗಿದೆ.

ಪೂಜ್ಯ ಗುರುಮಹಾರಾಜರ ಅನುಗ್ರಹವು ಭೂಮಿಗೆ ಇಳಿದು ಬರಲಿ. ಮತ್ತು, ಸಹಜಮಾರ್ಗವು ಎಲ್ಲರನ್ನೂ ನಿರಾಶೆ ಹಾಗೂ ಬಂಧನಗಳಿಂದ ಬಿಡುಗಡೆಗೊಳಿಸಿ, ಶಾಂತಿ ಹಾಗೂ ವಿಮುಕ್ತಿಯ ಕಡೆಗೆ ಕೊಂಡೊಯ್ಯಲಿ. ಶುಭಮಸ್ತು.

***