1. ನಿಜವಾಗಿಯೂ ʼವೀಲೀನಗೊಳ್ಳುವಿಕೆʼ, ಅನ್ವಯಿಸುವುದು ಅಭ್ಯಾಸಿಯು ಒಂದು ಸ್ಥಿತಿಯನ್ನು ತಲುಪಿ. ಅದರಲ್ಲಿಯೂ ಒಂದು ಬಿಂದುವಿನ ಮೇಲಾಗಲೀ ಅಥವಾ ಒಂದು ಗ್ರಂಥಿಯ ಮೇಲೆ ಸ್ಥಿರವಾಗಿ ನೆಲೆಯೂರಿದಾಗ ಮಾತ್ರ. ಸಾಕಷ್ಟು ಅಭ್ಯಾಸದ ನಂತರ ಯಾವಾಗ ಒಬ್ಬ ಅಭ್ಯಾಸಿಯು ಒಂದು ನಿರ್ದಿಷ್ಟವಾದ ಗ್ರಂಥಿಯಲ್ಲಿ ಪ್ರವೇಶಿಸುವ ಯೋಗ್ಯತೆಯನ್ನು ಪಡೆದುಕೊಳ್ಳುವನೋ ಆಗ ಇದರ ಸಂಪೂರ್ಣ ಅನುಭವವನ್ನು ಹೊಂದಲು ಅಭ್ಯಾಸಿಯು ಆ ಗ್ರಂಥಿಯ ಅಂತರ್ಯದಲ್ಲೆಲ್ಲಾ ಕೆಲ ಸಮಯದವೆರೆಗೆ ಸುತ್ತಾಡುವನು. ಈ ಪ್ರಕ್ರಿಯೆಯಿಂದಾಗಿ ಅಲ್ಲಿರುವ ಸ್ಥಿತಿಯನ್ನು ತನ್ನಲ್ಲಿ ಹೀರಿಕೊಳ್ಳಲು ಪ್ರಾರಂಭಿಸುವನು. ಯಾವಾಗ ಅದು ಆತನಲ್ಲಿ ಸಂಪೂರ್ಣಗೊಳ್ಳುವುದೋ , ಆಗ ಆ ಸ್ಥಿತಿಯಲ್ಲಿ ಆತನ ವಿಲೀನಗೊಳ್ಳುವಿಕೆ ಪ್ರಾರಂಭಗೊಳ್ಳುವುದು ಇದಕ್ಕೆ ಲಯಾವಸ್ಥೆ(merging) ಎನ್ನುವರು ಈಗ ಇಲ್ಲಿಯವರೆಗೆ ಬಂದಿರುವ ʼಸ್ಥಿತಿʼಯ ಅರಿವು ಕೂಡಾ ನಮಗಿರುವುದು. ಎಲ್ಲಿಯವರೆಗೆ ಈ ಅರಿವು ಇರುವುದೋ ಅಲ್ಲಿಯವರೆಗೆ ವಿಲೀನತೆಯು ಸಂಪೂರ್ಣಗೊಂಡಿದೆಯೆಂದು ಹೇಳಲಾಗುವುದಿಲ್ಲ. ಅದಕ್ಕಾಗಿ ಅಲ್ಲಿ ಸ್ಥಿರವಾಗಿ ನೆಲೆಯೂರುವ ಸ್ಥಿತಿಯನ್ನು ತಲುಪುವವರೆಗೆ ನಾವು ಮುಂದುವರಯಬೇಕಾಗುವುದು. ಇದನ್ನೇ- ʼಅದರಂತೆಯೇ ಆಗುವುದು ʼ ಅಥವಾ ʼ ಸಾರೂಪ್ಯತೆʼ ಎಂದು ಕರೆಯುವರು. ಎಲ್ಲಿಯವರೆಗೆ ಸಾರೂಪ್ಯತೆಯು ಅಂತಿಮ ಸ್ಥಿತಿಯಾದ ಸಾಯುಜ್ಯತೆಯ ಸ್ಥಿತಿಯವರೆಗೆ ಬೆಳೆಯುವುದಿಲ್ಲವೋ ಎಲ್ಲಿ ವಿಲೀನಗೊಂಡ ಸ್ಥಿತಿಯ ಪ್ರಭಾವ ಹಾಗೂ ʼಅದರಂತೆಯೇʼ ಆದ ಲಕ್ಷಣಗಳು ಸಂಪೂರ್ಣವಾಗಿ ಅಳಿಸಿ ಹೋಗುವುದಿಲ್ಲವೋ ಅಲ್ಲಿಯವರೆಗೆ ಸಾರೂಪ್ಯತೆಯು ತನ್ನ ಕೊನೆಯ ಸ್ಥರಕ್ಕೆ ತಲುಪಿದಂತೆಯೇ ಅಲ್ಲ. ಗುರುವಿನ (Master ) ಸಹಾಯ ಇದ್ದೇ ಇರುವುದಾದರೂ, ಲಯಾವಸ್ಥೆಯನ್ನು ಹೊಂದುವ ಜವಾಬ್ದಾರಿಯು ಕೇವಲ ಅಭ್ಯಾಸಿಯದೇ ಆಗಿದೆ.
  2. ಉಳಿದೆಲ್ಲ ಅನುಭವಗಳು ಶಾಂತವಾದಾಗ ಅಂತಿಮದ ಅನುಭವ  ಪ್ರಾರಂಭವಾಗುತ್ತದೆ. ಮಾನವನಿಗೆ ಶಕ್ಯವಿದ್ದ ಮಟ್ಟಿಗೆ ಯಾರು ಬ್ರಹ್ಮನಲ್ಲಿ ಲಯಾವಸ್ಥೆಯನ್ನು ಪಡೆದಿರುವರೋ ಅವರು ಒಮ್ಮೊಮ್ಮೆ ಅದರಲ್ಲಿ ಪೂರ್ಣವಾಗಿಯೂ ಮತ್ತೆ ಕೆಲ ಸಮಯ ಅಲ್ಪ ಆಳದಲ್ಲಿಯೂ ಮುಳುಗಿರುತ್ತಾರೆ. ಬ್ರಹ್ಮನಲ್ಲಿ ಸಂಪೂರ್ಣವಾಗಿ ಲಯವನ್ನು ಅಖಂಡವಾಗಿ ಸಾಧಿಸಿದ ಒಬ್ಬನು ಎಲ್ಲ ಕಾರ್ಯಗಳನ್ನು ಮಾಡಬಲ್ಲವನಾದರೂ ಆತನು ಕೇವಲ ಪ್ರತಿಮೆಯಂತೆ ಕಾಣುವನು.
  3. ಉಳಿದೆಲ್ಲ ಅನುಭವಗಳು ಶಾಂತವಾದಾಗ ಅಂತಿಮದ ಅನುಭವ ಪ್ರಾರಂಭವಾಗುತ್ತದೆ. ಮಾನವನಿಗೆ ಶಕ್ಯವಿದ್ದ ಮಟ್ಟಿಗೆ ಯಾರು ಬ್ರಹ್ಮನಲ್ಲಿ ಲಯಾವಸ್ಥೆಯನ್ನು ಪಡೆದಿರುವರೋ ಅವರು ಒಮ್ಮೊಮ್ಮೆ ಅದರಲ್ಲಿ ಪೂರ್ಣವಾಗಿಯೂ ಮತ್ತೆ ಕೆಲ ಸಮಯ ಅಲ್ಪ ಆಳದಲ್ಲಿಯೂ ಮುಳುಗಿರುತ್ತಾರೆ. ಬ್ರಹ್ಮನಲ್ಲಿ ಸಂಪೂರ್ಣವಾಗಿ ಲಯವನ್ನು ಅಖಂಡವಾಗಿ ಸಾಧಿಸಿದ ಒಬ್ಬನು ಎಲ್ಲ ಕಾರ್ಯಗಳನ್ನು ಮಾಡಬಲ್ಲವನಾದರೂ ಆತನು ಕೇವಲ ಪ್ರತಿಮೆಯಂತೆ ಕಾಣುವನು.