(೩೦-೧-೧೯೮೨ ರಂದು, ಬಸಂತ ಉತ್ಸವ ಸಂದರ್ಭದಲ್ಲಿ ನೀಡಿದ ಸಂದೇಶ)
ನಾವೆಲ್ಲರೂ ಮಾನವ ಜೀವನದ ಮುಖ್ಯ ಗುರಿಯೊಂದಿಗೆ, ಬೌದ್ಧಿಕವಾಗಿ, ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಂಬಂಧ ಹೊಂದಿದ ಸೋದರರು. ಅದು, – ಇದು, – ಎಂಬುದೆಲ್ಲ ಈಗ ಅಳಿದುಹೋಗಿದೆ (ಭೇದಭಾವವೆಲ್ಲ ಅಳಿದು ಬಿಟ್ಟಿದೆ.)
ಆ ಸರ್ವೇಶ್ವರನ ಎಲ್ಲಾ ಕಾರ್ಯ ಮತ್ತು ಪರಿಸರದಲ್ಲಿ ಕೇವಲ ಪರಿಶುದ್ಧತೆಯೊಂದೇ ಉಳಿದುಕೊಂಡಿದೆ. ಪರತತ್ವದೊಂದಿಗೆ ಮನುಷ್ಯರ ಭವಿಷ್ಯವನ್ನು ರೂಪಿಸುವ ಸಾಧನ ಅದೊಂದೇ.
***