1. ನಿಜವಾಗಿ ನಾವು ಯಾವಾಗಲೂ ದೇವರೊಡನೆ ಹಾಗು ದೇವರಲ್ಲಿ ಇರಲು ಪ್ರಯತ್ನಿಸಬೇಕೆ ಹೊರತು ಒಂದು ಕ್ಷಣವಾದರೂ ಆತನಿಂದ ದೂರವಿರಬಾರದು. ನಾವು ಈ ಅವಸ್ಥೆಯನ್ನು ಹೊಂದಿದಾಗ ಯಾವಾಗಲೂ ವೈರಾಗ್ಯದ ಸ್ಥಿತಿಯಲ್ಲಿಯೆ ಇರುವೆವು. ಹೀಗೆ ದೇವರೊಂದಿಗಿನ ಆಸಕ್ತಿಯು ಪ್ರಪಂಚದಲ್ಲಿ ಅನಾಸಕ್ತಯನ್ನು ಹುಟ್ಟಿಸುವುದು. ಅದೇ ನಿಜವಾದ ವೈರಾಗ್ಯ.VR I 79
  2. ವೈರಾಗ್ಯದ ನಿಜವಾದ ಅರ್ಥ ಪ್ರಾಪಂಚಿಕ ವಸ್ತುಗಳ ಬಗ್ಗೆ   ಮೋಹವಿಲ್ಲದಿರುವುದೇ  ಹೊರತು, ಅವುಗಳನ್ನು ಹೊಂದದಿರುವದಲ್ಲ.SMP 48 way to realisation
  3. ವೈರಾಗ್ಯ ವೆಂದರೆ, ವಸ್ತುಗಳ ಕ್ಷಣಿಕತೆಯನ್ನು ಮತ್ತು ಪರಿವರ್ತನ  ಶೀಲತೆಯನ್ನು   ಮನಗಾಣಿಸಿ,  ಅಂಥವುಗಳೊಡನೆ  ನಿರ್ಲಿಪ್ತತೆಯ ಭಾವವನ್ನುಉಂಟು ಮಾಡುವ ಒಂದು  ಆಂತರಿಕ ಮನಃಸ್ಥಿತಿ. ಆತನ ದೃಷ್ಟಿಯು, ಅಪರಿವರ್ತನೀಯ ಶಾಶ್ವತ ಸತ್ಯದ ಮೇಲೆ ಪ್ರತಿಕ್ಷಣವೂ ನೆಟ್ಟಿದ್ದು, ಅವನು ಮೋಹ-ಜಿಗುಪ್ಸೆಗಳ ಭಾವನೆಯಿಂದ ಮುಕ್ತನಿರುತ್ತಾನೆ. ಇದೇ ‘ವೈರಾಗ್ಯ’ ಎಂಬ ಪದದ ನಿಜವಾದ ಅರ್ಥ.SMP 48 way to realisation