- ನಿಜವಾಗಿ ನಾವು ಯಾವಾಗಲೂ ದೇವರೊಡನೆ ಹಾಗು ದೇವರಲ್ಲಿ ಇರಲು ಪ್ರಯತ್ನಿಸಬೇಕೆ ಹೊರತು ಒಂದು ಕ್ಷಣವಾದರೂ ಆತನಿಂದ ದೂರವಿರಬಾರದು. ನಾವು ಈ ಅವಸ್ಥೆಯನ್ನು ಹೊಂದಿದಾಗ ಯಾವಾಗಲೂ ವೈರಾಗ್ಯದ ಸ್ಥಿತಿಯಲ್ಲಿಯೆ ಇರುವೆವು. ಹೀಗೆ ದೇವರೊಂದಿಗಿನ ಆಸಕ್ತಿಯು ಪ್ರಪಂಚದಲ್ಲಿ ಅನಾಸಕ್ತಯನ್ನು ಹುಟ್ಟಿಸುವುದು. ಅದೇ ನಿಜವಾದ ವೈರಾಗ್ಯ.VR I 79
- ವೈರಾಗ್ಯದ ನಿಜವಾದ ಅರ್ಥ ಪ್ರಾಪಂಚಿಕ ವಸ್ತುಗಳ ಬಗ್ಗೆ ಮೋಹವಿಲ್ಲದಿರುವುದೇ ಹೊರತು, ಅವುಗಳನ್ನು ಹೊಂದದಿರುವದಲ್ಲ.SMP 48 way to realisation
- ವೈರಾಗ್ಯ ವೆಂದರೆ, ವಸ್ತುಗಳ ಕ್ಷಣಿಕತೆಯನ್ನು ಮತ್ತು ಪರಿವರ್ತನ ಶೀಲತೆಯನ್ನು ಮನಗಾಣಿಸಿ, ಅಂಥವುಗಳೊಡನೆ ನಿರ್ಲಿಪ್ತತೆಯ ಭಾವವನ್ನುಉಂಟು ಮಾಡುವ ಒಂದು ಆಂತರಿಕ ಮನಃಸ್ಥಿತಿ. ಆತನ ದೃಷ್ಟಿಯು, ಅಪರಿವರ್ತನೀಯ ಶಾಶ್ವತ ಸತ್ಯದ ಮೇಲೆ ಪ್ರತಿಕ್ಷಣವೂ ನೆಟ್ಟಿದ್ದು, ಅವನು ಮೋಹ-ಜಿಗುಪ್ಸೆಗಳ ಭಾವನೆಯಿಂದ ಮುಕ್ತನಿರುತ್ತಾನೆ. ಇದೇ ‘ವೈರಾಗ್ಯ’ ಎಂಬ ಪದದ ನಿಜವಾದ ಅರ್ಥ.SMP 48 way to realisation