1.  ಜ್ಞಾನವೇ ಸದ್ಗುಣ ಎನ್ನುತ್ತಾನೆ ಸಾಕ್ರಟಿಸ್ ಹಾಗೂ ಇಚ್ಛಾರಹಿತ ಸ್ಥಿತಿಗೆ ಸಂಬಂಧಿಸಿದೆಯೆಂದು ಆತನು ಹೇಳುತ್ತಾನೆ. ಅವನ ಅಭಿಪ್ರಾಯದಲ್ಲಿ ಶಿಕ್ಷಣದ ಸಾರ ಅದೇ . ಒಂದು ವೇಳೆ ಒಬ್ಬನು ಉನ್ನತ ಶಿಕ್ಷಣದಿಂದ ಆ ಹಂತಕ್ಕೆ ಬರುವುದಾದರೆ, ನನ್ನ ಅಭಿಪ್ರಾಯದಲ್ಲಿ ಶಿಕ್ಷಣದ ಉದ್ದೇಶ ಸಫಲವಾದಂತೆ, ಅದೊಂದು ಆಧ್ಯಾತ್ಮಿಕ ಅವಸ್ಥೆಯಾಗಿದೆ.VR II -198
  2. ನಮ್ಮ ಸಧ್ಯದ ವಿದ್ಯಾಭ್ಯಾಸವು ಪಾಶ್ಚಾತ್ಯ ವಿಚಾರಗಳಿಂದ ವರ್ಣರಂಜಿತವಾಗಿ ಕಾಣುತ್ತಿದ್ದು ಜೀವನಾವಶ್ಯಕತೆಗಳನ್ನು ಹೆಚ್ಚಿಸುತ್ತ ವಿಲಕ್ಷಣ ಹಂತಕ್ಕೆ ಒಯ್ಯುತ್ತದೆ. ತಮ್ಮ ಜೀವನಾವಧಿಯೆಲ್ಲ ಜನರು ಅವುಗಳನ್ನು ಪಡೆಯುವದರಲ್ಲಿಯೆ ತಮ್ಮ ವಿಚಾರ ಹಾಗೂ ಪ್ರಯತ್ನಗಳ ಸಂಪೂರ್ಣ ಶಕ್ತಿಯನ್ನು ತೊಡಗಿಸುತ್ತಿದ್ದಾರೆ. ಅದು ಅವರ ಜೀವನದ ಮುಖ್ಯ ಧ್ಯೇಯವಾಗಿ ಬಿಟ್ಟಿದೆ. ವೈಪರಿತ್ಯ ಹಾಗೂ ಸೋಲುಗಳು ಅವರ ಮೇಲೆ ಅಸಂತೋಷಕರ ಪರಿಣಾಮವನ್ನುಂಟು ಮಾಡಿ ಅವರ ಮನ: ಸ್ಥಿತಿಯನ್ನು ಕೆಡಿಸುತ್ತವೆ. ಸಾಮಾನ್ಯವಾಗಿ ಮನುಷ್ಯನ ಹಟಮಾರಿ ಸ್ವಭಾವವೇ ಸಿಟ್ಟಿನ ನಿಜವಾದ ಕಾರಣವಾಗಿದೆ. ಇದರ ಪರಿಣಾಮದಿಂದ ಪೋಷಿಸಲ್ಪಟ್ಟ ಹಟದ ಸ್ವಭಾವವು ಆತನ ವಿವೇಚನೆಯನ್ನು ಮುಸುಕಿ ಬಿಡುತ್ತದೆ. ಈ ರೀತಿ ಸರಿ ತಪ್ಪುಗಳ ನಡುವಿನ ವ್ಯತ್ಯಾಸ ಹೊರಟು ಹೋಗಿ ಕೇವಲ ತನ್ನ ವಿಚಾರಗಳಿಗೆ ಗಟ್ಟಿಯಾಗಿ ಅಂಟಿಕೊಂಡು ಎರಡನೇಯವರ ವಿಚಾರಗಳಿಗೆ ಆಸ್ಪದವೇ ಇಲ್ಲದಂತಾಗುತ್ತದೆ. ಇದು ನಿಸಂಶಯವಾಗಿ ಆಧ್ಯಾತ್ಮಿಕ ಮಾರ್ಗದಲ್ಲಿ ಒಂದು ಅಡಚಣೆ. ಆಧ್ಯಾತ್ಮಿಕತೆಯ ದಾಆರಿಯ ಮೇಲೆ ಸಾಗುವವನ ಮನಸ್ಸು ಹಾಗೂ ಭಾವಗಳು ಸಾಧ್ಯವಿದ್ದಷ್ಟು ಮಟ್ಟಿಗೆ ಹಗುರಾಗಿರಬೇಕು. ತಾನು ಏನನ್ನು ಶೋಧಿಸುತ್ತಿದ್ದೇನೆ ಎಂಬ ವಿಚಾರದ ಭಾರದಿಂದಲೂ ಮುಕ್ತನಾಗಿರಬೇಕು. ಇದು ದೃಢ ಸಂಕಲ್ಪದ ನಿಜವಾದ ರಹಸ್ಯವೆಂಬುದನ್ನು ಇಂದು ನಿಮಗೆ ಬಹಿರಂಗ ಪಡಿಸುತ್ತಿದ್ದೇನೆ. ಇಂತಹ ಸ್ಥಿತಿಯಲ್ಲಿ , ನಮ್ಮಲ್ಲಿ ನೆಲೆಸಿದ ಯಾವುದೇ ವಿಚಾರವು ತನ್ನ ಕಾರ್ಯವನ್ನು ಮಾಡಿಯೇ ಬಿಡುತ್ತದೆ.VR II-200